ಯಲಗೂರ
ಯಲಗೂರ
ಯಲಗೂರ | |
---|---|
village | |
Population (೨೦೧೨) | |
• Total | ೧೫೦೦ |
ಯಲಗೂರ ಗ್ರಾಮವು ಕರ್ನಾಟಕ ರಾಜ್ಯದ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನಲ್ಲಿದೆ. ಜಿಲ್ಲಾ ಕೇಂದ್ರದಿಂದ ೬೫ ಕಿ.ಮೀ. ಅಂತರದಲ್ಲಿ ರಾಷ್ಟ್ರೀಯ ಹೆದ್ದಾರಿ - ೧೩ರ ಹತ್ತಿರದಲ್ಲಿ ಯಲಗೂರ ಗ್ರಾಮವಿದೆ. ಕೃಷ್ಣಾ ನದಿ ತಟದಲ್ಲಿರುವ ಇಲ್ಲಿ ಪ್ರಸಿದ್ಧ ಆಂಜನೇಯ (ಯಲಗೂರೇಶ) ದೇವಸ್ಥಾನವಿದೆ. ಈ ದೇವಾಲಯಕ್ಕೆ ೩೫೦ ವರ್ಷಗಳ ಇತಿಹಾಸವಿದೆ. ನಾಡಿನ ಜನ ಇಲ್ಲಿಗೆ ಆಗಮಿಸಿ ದರ್ಶನ ಪಡೆಯುತ್ತಾರೆ
ಇತಿಹಾಸ
[ಬದಲಾಯಿಸಿ]ಒಂದೆಡೆ ಸಾಗರದಂತೆ ಹಬ್ಬಿರುವ ಕೃಷ್ಣೇ, ಮತ್ತೊಂದೆಡೆ ಜಗದೊಡೆಯನ ಆವಾಸಸ್ಥಾನದಲ್ಲಿ ಆಸೀನರಾಗಿರುವ ಏಳೂರ ಒಡೆಯ ಈ ಯಲಗೂರ ಹನುಮಂತರಾಯ. ಬಿಜಾಪುರ ಜಿಲ್ಲೆಯ ಈ ಆಳೆತ್ತರದ ಭವ್ಯವಾದ ಸುಂದರ ಹನುಮ ನೆಲೆಸಿರುವ ಯಲಗೂರು ಗ್ರಾಮವು ಮುದ್ದೇಬಿಹಾಳದಿಂದ 21 ಕಿಮಿ ದೂರದಲ್ಲಿದೆ. ಸಮೃದ್ಧವಾದ ಜಲಸಾಗರವನ್ನು ಮುಷ್ಟಿಯಲ್ಲಿ ಹಿಡಿದಿಟ್ಟುಕೊಂಡಿರುವ ಆಲಮಟ್ಟಿಯ ಜಲಾಶಯದಿಂದ ಕೇವಲ ೫ ಕಿಮಿ ದೂರದಲ್ಲಿದೆ.
ಶ್ರೀ ರಾಮನ ಅಣತಿಯಂತೆ ಎಲಗೂರಿನ ಸುತ್ತಮುತ್ತಲ ಏಳು ಹಳ್ಳಿಗಳ ರಕ್ಷಣೆಗಾಗಿ ನಿಂತ ಯಲಗೂರ ಆಂಜನೇಯ ಸುತ್ತಮುತ್ತಲಿನ ಚಂದ್ರಗಿರಿ, ಆರಳದಿನ್ನಿ, ಕಾಶಿನಕುಂಟೆ, ಬೂದಿಹಾಳ, ಮಸೂತಿ, ನಾಗಸಂಪಿಗೆ ಹೀಗೆ ಏಳು ಹಳ್ಳಿಗಳ ಗ್ರಾಮಸ್ಥರ ಕುಲದೈವವೂ ಹೌದು.
ವಿಶಾಲವಾದ ಪ್ರಾಂಗಣದಲ್ಲಿನ ಗರ್ಭಗುಡಿಯಲ್ಲಿ ನೆಲೆಸಿರುವ ಆಳೆತ್ತರದ ಹನುಮನ ದಿವ್ಯ ತೇಜಸ್ಸನ್ನು ಬಣ್ಣಿಸಲು ಶಬ್ದಗಳು ಸಾಲದು. ದೂರದೂರುಗಳಿಂದ ಹನುಮನ ಶ್ರೀರಕ್ಷೆಗಾಗಿ ಅರಸಿ ಬರುವ ಭಕ್ತರಿಗೆ ಅಭಯ ನೀಡುತ್ತಾ ನಿಂತಿರುವ ಈ ಭವ್ಯ ಮೂರ್ತಿ ನಿಜಕ್ಕೂ ಯಲಗೂರನ್ನು ಪರಮ ಪವಿತ್ರ ಕ್ಷೇತ್ರವನ್ನಾಗಿಸಿದೆ. ಸುತ್ತಲಿನ ಗರುಡಗಂಬ, ಶಿವಲಿಂಗ, ಗಣಪತಿ, ಸೂರ್ಯನಾರಾಯಣ, ತುಳಸಿ ಬೃಂದಾವನ ಇದೆಲ್ಲವೂ ಆಸ್ತಿಕರನ್ನೂ ಪರಮಾರ್ಥದೆಡೆಗೆ ಕೊಂಡೊಯುತ್ತದೆ. ಗರ್ಭ ಗುಡಿಯ ಸುತ್ತಣ ಗೋಡೆಯನ್ನು ಆವರಿಸಿರುವ ವರ್ಣರಂಜಿತ ಹನುಮ ಕೀರ್ತಿಯನ್ನು ಬಿಂಬಿಸುವ ಕಲಾಕೃತಿಗಳು, ರಾಮಾಯಣದ ಚಿತ್ರಗಳು ಮೊದಲಾದವುಗಳು ಕಣ್ಮನ ಸೆಳೆಯುತ್ತವೆ.
ಕೃಷ್ಣೆಯ ತಟದಲ್ಲಿರುವ ಈ ಕ್ಷೇತ್ರದ ಯಲಗೂರೇಶನಿಗೆ ನಿತ್ಯ ಪೂಜೆಯಿದ್ದು, ಕಾರ್ತಿಕ ಮಾಸದ ಕಾರ್ತಿಕೋತ್ಸವವು ಬಹಳ ವಿಜೃಂಭಣೆಯಿಂದ ಜರಗುತ್ತದೆ.ಅಲ್ಲದೆ ಚೈತ್ರ ಮಾಸದ ಶ್ರೀ ರಾಮ ನವಮಿ ಉತ್ಸವ, ಹನುಮ ಜಯಂತಿಯನ್ನು ಸಹ ಅತ್ಯಂತ ಭಕ್ತಿ ಬಾವಗಳಿಂದ ಆಚರಿಸಲಾಗುತ್ತದೆ. ಈ ಆಂಜನೇಯ ಸ್ವಾಮೀ ಸನ್ನಿಧಿಯೂ ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುವ ಪುಣ್ಯಕ್ಷೇತ್ರವೆಂಬುದು ಎಲ್ಲರ ನಂಬಿಕೆ.ಶ್ರೀ ಕ್ಷೇತ್ರದ ತಾಯತಗಳನ್ನೂ ಸಕಲ ಪೂಜಾ ವಿಧಾನಗಳೊದಿಗೆ ಧರಿಸಿದ್ದಲ್ಲಿ ಎಲ್ಲ ಸಂಕಷ್ಟಗಳು ನಿವಾರಣೆಯಾಗುತ್ತದೆ ಎಂಬುದು ಅನುಭವಿಗಳ ಮಾತು. ಮಂತ್ರಾಲಯಕ್ಕೆ ಪಾದಯಾತ್ರೆ ಮಾಡುವ ಭಕ್ತರು ಇಲ್ಲಿ ತಪ್ಪದೆ ಒಂದು ರಾತ್ರಿ ಕಳೆದು ಯಲಗೂರೇಶ್ವರನ ದರ್ಶನ ಪಡೆದು ಪೂಜಾ ಪ್ರಸಾದವನ್ನು ಸ್ವೀಕರಿಸಿಯೇ ತಮ್ಮ ಪಾದಯಾತ್ರೆಯನ್ನು ಮುಂದುವರಿಸುವುದು ವಾಡಿಕೆಯಾಗಿದೆ.
ಜಿಲ್ಲಾ ಕೇಂದ್ರ ವಿಜಯಪುರದಿಂದ ೬೫ ಕಿಮಿ ದೂರದಲ್ಲಿರುವ ಈ ಪುಣ್ಯಕ್ಷೇತ್ರವೂ ಆಲಮಟ್ಟಿ ಜಲಾಶಯದಿಂದ ಕೇವಲ ೫ ಕಿಮಿ ದೂರದಲ್ಲಿದ್ದು, ನಿಡಗುಂಡಿಯಿಂದ ೩ ಕಿಮಿ ದೂರದಲ್ಲಿದೆ.
ವಿಜಯಪುರ, ಬಾಗಲಕೋಟೆ, ಬಸವನ ಬಾಗೇವಾಡಿ ಮತ್ತು ಮುದ್ದೇಬಿಹಾಳದಿಂದ ಸಾಕಷ್ಟು ವಾಹನ ಸೌಲಭ್ಯಗಳಿವೆ. ಆಲಮಟ್ಟಿ ಹಾಗೂ ನಿಡಗುಂದಿಯಿಂದ ಆಟೋ ರಿಕ್ಷಾ ಸೌಲಭಗಳು ಲಭ್ಯವಿದೆ.
ಭೌಗೋಳಿಕ
[ಬದಲಾಯಿಸಿ]ಗ್ರಾಮವು ಭೌಗೋಳಿಕವಾಗಿ ೧೬* ೩೨' ೧೦"x ಉತ್ತರ ಅಕ್ಷಾಂಶ ಮತ್ತು ೭೫* ೩೧' ೧೯" ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಹವಾಮಾನ
[ಬದಲಾಯಿಸಿ]- ಬೆಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತಿ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ(ಎಪ್ರೀಲನಲ್ಲಿ) , ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ (ಡಿಸೆಂಬರನಲ್ಲಿ) ಉಷ್ಣತೆ ದಾಖಲಾಗಿದೆ.
- ಬೇಸಿಗೆಕಾಲ - ೩೫°C-೪೨°C ಡಿಗ್ರಿ ಸೆಲ್ಸಿಯಸ್
- ಚಳಿಗಾಲ ಮತ್ತು
- ಮಳೆಗಾಲ - ೧೮°C-೨೮°C ಡಿಗ್ರಿ ಸೆಲ್ಸಿಯಸ್.
- ಮಳೆ - ಪ್ರತಿ ವರ್ಷ ಮಳೆ ೩೦೦ - ೬೦೦ಮಿಮಿ ಗಳಸ್ಟು ಆಗಿರುತ್ತದೆ.
- ಗಾಳಿ -ಗಾಳಿ ವೇಗ ೧೮.೨ ಕಿಮಿ/ಗಂ (ಜೂನ), ೧೯.೬ ಕಿಮಿ/ಗಂ (ಜುಲೈ)ಹಾಗೂ ೧೭.೫ ಕಿಮಿ/ಗಂ (ಅಗಸ್ಟ್) ಇರುತ್ತದೆ.
ಜನಸಂಖ್ಯೆ
[ಬದಲಾಯಿಸಿ]ಗ್ರಾಮದಲ್ಲಿ ಜನಸಂಖ್ಯೆ(2011) ಸುಮಾರು 2073 ಇದೆ. ಅದರಲ್ಲಿ 1045 ಪುರುಷರು ಮತ್ತು 1028 ಮಹಿಳೆಯರು ಇದ್ದಾರೆ.
ಸಾಂಸ್ಕೃತಿಕ
[ಬದಲಾಯಿಸಿ]ಮುಖ್ಯ ಭಾಷೆ ಕನ್ನಡ. ಆದರೆ ವಿವಿಧ ಸಂಸ್ಕೃತಿಗಳ ಪ್ರಭಾವದಿಂದಾಗಿ ಉರ್ದು, ಮರಾಠಿ ಮತ್ತು ಹಿಂದಿ ಮಿಶ್ರಿತ ವಿಶಿಷ್ಠವಾದ ಕನ್ನಡ. ಪ್ರಮುಖ ಆಹಾರ ಧಾನ್ಯ ಜೋಳ. ಜೊತೆಗೆ ಗೋಧಿ, ಅಕ್ಕಿ,ಮೆಕ್ಕೆ ಜೋಳ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ, ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ, ಸೇಂಗಾ ಚಟ್ನಿ, ಎಣ್ಣಿ ಬದನೆಯಕಾಯಿ ಪಲ್ಯ, ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ
[ಬದಲಾಯಿಸಿ]ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ, ನೆಹರು ಅಂಗಿ ಮತ್ತು ರೇಷ್ಮೆ ರುಮಾಲು(ಪಟಕ) ಧರಿಸುತ್ತಾರೆ.ಮಹಿಳೆಯರು ಇಲಕಲ್ಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ
[ಬದಲಾಯಿಸಿ]ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ಭಾಷೆ
[ಬದಲಾಯಿಸಿ]ಗ್ರಾಮದ ಪ್ರಮುಖ ಭಾಷೆ ಕನ್ನಡ. ಇದರೊಂದಿಗೆ ಹಿಂದಿ, ಮರಾಠಿ ಹಾಗೂ ಇಂಗ್ಲೀಷ್ ಭಾಷೆಗಳನ್ನು ಮಾತನಾಡುತ್ತಾರೆ.
ದೇವಾಲಯ
[ಬದಲಾಯಿಸಿ]- ಶ್ರೀ ಹಣಮಂತ (ಯಲಗೂರೇಶ) ದೇವಾಲಯ
- ಶ್ರೀ ಮಹಾಲಕ್ಷ್ಮಿ ದೇವಾಲಯ
- ಶ್ರೀ ದುರ್ಗಾದೇವಿ ದೇವಾಲಯ
- ಶ್ರೀ ಮಲ್ಲಿಕಾರ್ಜುನ ದೇವಾಲಯ
- ಶ್ರೀ ಬಸವೇಶ್ವರ ದೇವಾಲಯ
- ಶ್ರೀ ವೆಂಕಟೇಶ್ವರ ದೇವಾಲಯ
- ಶ್ರೀ ಪಾಂಡುರಂಗ ದೇವಾಲಯ
ಮಸೀದಿ
[ಬದಲಾಯಿಸಿ]ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ನೀರಾವರಿ
[ಬದಲಾಯಿಸಿ]ಗ್ರಾಮದ ಪ್ರತಿಶತ 50 ಭಾಗ ಭೂಮಿ ಕಾಲುವೆ, ತೆರದ ಬಾವಿ, ಕೊಳವೆ ಬಾವಿಯಿಂದ ನೀರಾವರಿ ಇದ್ದು ಪ್ರಮುಖವಾಗಿ ಕಬ್ಬು , ಮೆಕ್ಕೆಜೋಳ, ಜೋಳ, ಉಳ್ಳಾಗಡ್ಡಿ (ಈರುಳ್ಳಿ), ನಿಂಬೆಹಣ್ಣು , ಪಪ್ಪಾಯ, ಅರಿಶಿನ, ನೆಲಕಡಲೆ, ಶೇಂಗಾ(ಕಡಲೆಕಾಯಿ), ಸೂರ್ಯಕಾಂತಿ , ದ್ರಾಕ್ಷಿ , ದಾಳಿಂಬೆ, ಗೋಧಿ ಹಾಗೂ ಇತರೆ ಬೆಳೆಗಳನ್ನು ಬೆಳೆಯುತ್ತಾರೆ.
ಕಾಲುವೆ
[ಬದಲಾಯಿಸಿ]ಕೃಷ್ಣಾ ನದಿಯ ಆಲಮಟ್ಟಿ ಆಣೆಕಟ್ಟುಯಿಂದ ಗ್ರಾಮದಲ್ಲಿ ಸಂಪೂರ್ಣ ಕೃಷಿಗೆ ಸಹಕಾರಿಯಾಗಿದೆ.
ಕೃಷಿ ಮತ್ತು ತೋಟಗಾರಿಕೆ
[ಬದಲಾಯಿಸಿ]ಗ್ರಾಮದ ಪ್ರಮುಖ ಉದ್ಯೋಗವೇ ಕೃಷಿ ಮತ್ತು ತೋಟಗಾರಿಕೆಯಾಗಿದೆ. ಈ ಕ್ಷೇತ್ರದಲ್ಲಿ ಸುಮಾರು ೭೫% ಜನರು ಕೆಲಸ ಮಾಡುತ್ತಾರೆ. ಗ್ರಾಮದಲ್ಲಿ ಕೇವಲ ೧೫% ಭೂಮಿ ಮಾತ್ರ ನೀರಾವರಿ ಹೊಂದಿದೆ. ಉಳಿದ ೮೫% ಭೂಮಿ ಮಳೆಯನ್ನೇ ಅವಲಂಭಿಸಿದೆ.
ಆರ್ಥಿಕತೆ
[ಬದಲಾಯಿಸಿ]ಗ್ರಾಮದಲ್ಲಿ ಆರ್ಥಿಕ ವ್ಯವಸ್ಥೆ ಮಧ್ಯಮ ತರಗತಿಯಲ್ಲಿದೆ.
ಉದ್ಯೋಗ
[ಬದಲಾಯಿಸಿ]ಗ್ರಾಮದಲ್ಲಿ ಫಲವತ್ತಾದ ಭೂಮಿ ಇದುವುದರಿಂದ ೭೦% ಜನಸಂಖ್ಯೆ ಕೃಷಿಯಲ್ಲಿ ನಿರತರಾಗಿದ್ದಾರೆ. ಕೃಷಿಯು ಗ್ರಾಮದ ಪ್ರಮುಖ ಉದ್ಯೋಗವಾಗಿದೆ. ಇದರೊಂದಿಗೆ ಹೈನುಗಾರಿಕೆ, ಕೋಳಿ ಸಾಕಾಣಿಕೆ, ದನಗಳ ಸಾಕಾಣಿಕೆ ಉಪ ಕಸುಬುಗಳಾಗಿವೆ.
ಬೆಳೆ
[ಬದಲಾಯಿಸಿ]ಆಹಾರ ಬೆಳೆಗಳು
ಜೋಳ, ಗೋಧಿ, ಮೆಕ್ಕೆಜೋಳ, ಸಜ್ಜೆ , ಕಡಲೆ, ತೊಗರಿ, ಹೆಸರು ಮತ್ತು ಕಡಲೆ ಇತ್ಯಾದಿ
ವಾಣಿಜ್ಯ ಬೆಳೆಗಳು
ದ್ರಾಕ್ಷಿ, ಕಬ್ಬು, ದಾಳಿಂಬೆ, ನಿಂಬೆ, ಮಾವು, ಬಾಳೆ, ಸೂರ್ಯಕಾಂತಿ, ಅರಿಸಿಣ, ಪಪ್ಪಾಯಿ, ಕಲ್ಲಂಗಡಿ, ಉಳ್ಳಾಗಡ್ಡಿ (ಈರುಳ್ಳಿ) ಮತ್ತು ಶೇಂಗಾ(ಕಡಲೆಕಾಯಿ) ಇತ್ಯಾದಿ.
ತರಕಾರಿ ಬೆಳೆಗಳು
ಬದನೆಕಾಯಿ, ಟೊಮ್ಯಾಟೊ, ಹೀರೇಕಾಯಿ, ನುಗ್ಗೆಕಾಯಿ, ಗೆಣಸು, ಗಜ್ಜರಿ, ಮೆಣಸಿನಕಾಯಿ, ಸೌತೆಕಾಯಿ, ಮೊಲಂಗಿ, ಅವರೆಕಾಯಿ, ಪಡವಲಕಾಯಿ, ಕುಂಬಳಕಾಯಿ, ಮೆಂತೆ ಪಲ್ಲೆ ಮತ್ತು ಕೊತಂಬರಿ ಇತ್ಯಾದಿ.
ಸಸ್ಯ
[ಬದಲಾಯಿಸಿ]ಆಲದ ಮರ, ಬೇವಿನ ಮರ, ಜಾಲಿ ಮರ, ಹೈಬ್ರೀಡ್ ಜಾಲಿ ಮರ, ಮಾವಿನ ಮರ ಮತ್ತು ಅರಳಿ ಮರ ಇತ್ಯಾದಿ.
ಪ್ರಾಣಿ
[ಬದಲಾಯಿಸಿ]ತೋಳ, ನರಿ, ಹಾವು, ಮೊಲ, ನವಿಲು, ಬೆಳ್ಳಕ್ಕಿ, ಗುಬ್ಬಿ, ಕಾಗೆ, ಕೋಗಿಲೆ ಇತ್ಯಾದಿ.
ಹಬ್ಬ
[ಬದಲಾಯಿಸಿ]ಪ್ರತಿವರ್ಷ ಕಾರ ಹುಣ್ಣುಮೆ, ಯುಗಾದಿ, ದಸರಾ, ದೀಪಾವಳಿ, ನಾಗರ ಪಂಚಮಿ, ಉರಸು ಹಾಗೂ ಮೊಹರಮ್ ಹಬ್ಬಗಳನ್ನು ಆಚರಿಸುತ್ತಾರೆ.
ಶಿಕ್ಷಣ
[ಬದಲಾಯಿಸಿ]- ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಯಲಗೂರ
- ಸರಕಾರಿ ಪ್ರೌಢ ಶಾಲೆ, ಯಲಗೂರ
ಸಾಕ್ಷರತೆ
[ಬದಲಾಯಿಸಿ]ಗ್ರಾಮದ ಸಾಕ್ಷರತೆಯ ಪ್ರಮಾಣ ಸುಮಾರು ೬೭%. ಅದರಲ್ಲಿ ೭೫% ಪುರುಷರು ಹಾಗೂ ೫೫% ಮಹಿಳೆಯರು ಸಾಕ್ಷರತೆ ಹೊಂದಿದೆ.
ರಾಜಕೀಯ
[ಬದಲಾಯಿಸಿ]ಗ್ರಾಮವು ವಿಜಯಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುತ್ತದೆ.
ಬ್ಯಾಂಕ್
[ಬದಲಾಯಿಸಿ]- ಸಿಂಡಿಕೇಟ್ ಬ್ಯಾಂಕ್, ಯಲಗೂರ
ಗ್ರಾಮ ಪಂಚಾಯತಿ
[ಬದಲಾಯಿಸಿ]- ಗ್ರಾಮ ಪಂಚಾಯತಿ, ಯಲಗೂರ
ಅಂಚೆ ಕಚೇರಿ
[ಬದಲಾಯಿಸಿ]- ಅಂಚೆ ಕಚೇರಿ, ಯಲಗೂರ
- ಮುಖ್ಯ ಅಂಚೆ ಕಚೇರಿ, ನಿಡಗುಂದಿ - 586213
ನೇಕಾರರ ಸಹಕಾರ ಸಂಘ
[ಬದಲಾಯಿಸಿ]- ನೇಕಾರರ ಸಹಕಾರ ಸಂಘ, ಯಲಗೂರ
ನೀರು ಬಳಕೆದಾರರ ಸಹಕಾರ ಸಂಘ
[ಬದಲಾಯಿಸಿ]- ನೀರು ಬಳಕೆದಾರರ ಸಹಕಾರ ಸಂಘ, ಯಲಗೂರ
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ
[ಬದಲಾಯಿಸಿ]- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಯಲಗೂರ
- Pages with non-numeric formatnum arguments
- Short description with empty Wikidata description
- Pages using infobox settlement with unknown parameters
- Pages using infobox settlement with missing country
- Pages using infobox settlement with no map
- Pages using infobox settlement with no coordinates
- ಮುದ್ದೇಬಿಹಾಳ ತಾಲ್ಲೂಕಿನ ಹಳ್ಳಿಗಳು
- ಬಿಜಾಪುರ ಜಿಲ್ಲೆ