ರಜನಿ ಬಕ್ಷಿ
![](http://upload.wikimedia.org/wikipedia/commons/thumb/6/6a/Rajni_Bakshi.jpg/220px-Rajni_Bakshi.jpg)
ರಜನಿ ಬಕ್ಷಿ ಮುಂಬೈ ಮೂಲದ ಸ್ವತಂತ್ರ ಪತ್ರಕರ್ತೆ ಮತ್ತು ಲೇಖಕಿ. ಅವರು ಸಮಕಾಲೀನ ಭಾರತದಲ್ಲಿ ಸಾಮಾಜಿಕ ಮತ್ತು ರಾಜಕೀಯ ಚಳುವಳಿಗಳ ಬಗ್ಗೆ ಬರೆಯುತ್ತಾರೆ. ರಜನಿ ಅವರು ಅಹಿಂಸೆಯ ಸಾಧ್ಯತೆಗಳನ್ನು ಅನ್ವೇಷಿಸಲು ಆನ್ಲೈನ್ ವೇದಿಕೆಯಾದ ಅಹಿಂಸಾ ಸಂಭಾಷಣೆಗಳ ಸಂಸ್ಥಾಪಕಿ ಮತ್ತು ಮೇಲ್ವಿಚಾರಕರಾಗಿದ್ದಾರೆ. [೧]
ಅವರು ಹಿಂದೆ ಗೇಟ್ವೇ ಹೌಸ್: ಇಂಡಿಯನ್ ಕೌನ್ಸಿಲ್ ಆನ್ ಗ್ಲೋಬಲ್ ರಿಲೇಶನ್ಸ್ನಲ್ಲಿ ಗಾಂಧಿ ಪೀಸ್ ಫೆಲೋ ಆಗಿದ್ದರು. [೨] ಅವರ ಪತ್ರಿಕೋದ್ಯಮವು ಅನೇಕ ಇಂಗ್ಲಿಷ್ ಮತ್ತು ಹಿಂದಿ ಪತ್ರಿಕೆಗಳು ಮತ್ತು ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದೆ. [೩] ಬಕ್ಷಿ ಕಿಂಗ್ಸ್ಟನ್, ಜಮೈಕಾ, ಇಂದ್ರಪ್ರಸ್ಥ ಕಾಲೇಜು (ದೆಹಲಿ), ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ (ವಾಷಿಂಗ್ಟನ್ ಡಿಸಿ) ಮತ್ತು ರಾಜಸ್ಥಾನ ವಿಶ್ವವಿದ್ಯಾಲಯ (ಜೈಪುರ) ದಲ್ಲಿನ ಶಾಲೆಯಲ್ಲಿ ವ್ಯಾಸಂಗ ಮಾಡಿದರು. [೩]
೨೦೦೦ ರಲ್ಲಿ ರಜನಿ ಹೋಮಿ ಭಾಭಾ ಫೆಲೋಶಿಪ್ ಪಡೆದರು. ಅವರ ಪುಸ್ತಕ ಬಜಾರ್ಸ್, ಕನ್ವಎಸೇಷನ್ ಆಂಡ್ ಫ್ರೀಡಮ್ (೨೦೦೯) ಎರಡು ವೊಡಾಫೋನ್ ಕ್ರಾಸ್ವರ್ಡ್ ಪುಸ್ತಕ ಪ್ರಶಸ್ತಿಗಳನ್ನು ಗೆದ್ದಿದೆ, ಒಂದನ್ನು "ನಾನ್ ಫಿಕ್ಷನ್" ವಿಭಾಗದಲ್ಲಿ ಮತ್ತು ಒಂದು "ಪಾಪ್ಯುಲರ್ ಅವಾರ್ಡ್" ವಿಭಾಗದಲ್ಲಿ. [೪] [೫]
ಕೆಲಸಗಳು[ಬದಲಾಯಿಸಿ]
- ದಿ ಲಾಂಗ್ ಹಾಲ್: ದಿ ಬಾಂಬೆ ಟೆಕ್ಸ್ಟೈಲ್ ವರ್ಕರ್ಸ್ ಸ್ಟ್ರೈಕ್ ಆಫ್ ೧೯೮೨-೮೩ (೧೯೮೬; ಗ್ರೇಟ್ ಬಾಂಬೆ ಟೆಕ್ಸ್ಟೈಲ್ ಸ್ಟ್ರೈಕ್ )
- ದ ಡಿಸ್ಪ್ಯೂಟ್ ಓವರ್ ಸ್ವಾಮಿ ವಿವೇಕಾನಂದಾಸ್ ಲೆಗಸೀ (೧೯೯೩; ಸ್ವಾಮಿ ವಿವೇಕಾನಂದ )
- ಬಾಪು ಕುಟಿ: ಜರ್ನೀಸ್ ಇನ್ ರೀಡಿಸ್ಕವರಿ ಆಫ್ ಗಾಂಧಿ (೧೯೯೮)
- ಲೆಟ್ಸ್ ಮೇಕ್ ಇಟ್ ಹ್ಯಾಪನ್: ಆಲ್ಟರ್ನೇಟಿವ್ ಎಕನಾಮಿಕ್ಸ್ (೨೦೦೩)
- ಏನ್ ಎಕನಾಮಿಕ್ಸ್ ಫಾರ್ ವೆಲ್-ಬೀಯಿಂಗ್ (೨೦೦೩)
- ಬಜಾರ್ಗಳು, ಕನ್ವಎಸೇಷನ್ಸ್ ಆಂಡ್ ಫ್ರೀಡಮ್ (೨೦೦೯)
ಟಿಪ್ಪಣಿಗಳು[ಬದಲಾಯಿಸಿ]
- ↑ https://www.youtube.com/channel/UC63Bx1fQYOkCEom93k4T2tg
- ↑ "The science of non-violence". The Hindu. 2013-10-02.
- ↑ ೩.೦ ೩.೧ Bazaars, Conversations and Freedom, official website
- ↑ "Mumbaikar brings home fiction award". The Times of India. 21 August 2010. Archived from the original on 24 March 2012.
- ↑ "Rajni Bakshi wins two Crossword Book Awards". Hindustan Times. 2010-08-21. Archived from the original on 2014-12-16.