ರವೆ ದೋಸೆ
ರವೆ ದೋಸೆ
ರವೆ ಮತ್ತು ಅಕ್ಕಿಯನ್ನು ಉಪಯೋಗಿಸಿ ದೋಸೆಯನ್ನು ಮಾಡುವುದು ಸರ್ವೇ ಸಾಮಾನ್ಯ. ಸಾಕಾಸ್ಟು ವಿಧಾನಗಳಿದ್ದರೂ ಆಟಿ ತಿಂಗಳಿನಲ್ಲಿ ಜೋರಾಗಿ ಮಳೆ ಸುರಿವಾಗ , ಅತೀ ಬೇಗನೆ ಮಾಡುವ ತುಳುನಾಡಿನಲ್ಲಿ ಅತೀ ಜನಪ್ರಿಯ ವಾದ ರವೆ ದೋಸೆ ಮಾಡುವ ವಿಧಾನ ನೊಡೋಣ.
ದೋಸೆ ಮಾಡಲು ಬೇಕಾಗುವ ಪದಾರ್ಥಗಳು
[ಬದಲಾಯಿಸಿ]1½ ಲೋಟ ಅಕ್ಕಿ ಹಿಟ್ಟು ½ ಲೋಟ ರವೆ ¾ ಚಮಚ ಉಪ್ಪು 4 ಲೋಟ ನೀರು 1 ಈರುಳ್ಳಿ 1 ಕ್ಯಾರೆಟ್ 2 ಮೆಣಸಿನಕಾಯಿ ಸ್ವಲ್ಪ ಕೊತ್ತಂಬರಿ ಸೊಪ್ಪು ಸ್ವಲ್ಪ ಕರಿಬೇವಿನ ಎಲೆಗಳು 1 ಚಮಚ ಜೀರಿಗೆ ಎಣ್ಣೆ
ಚಟ್ನಿಮಾಡಲು ಬೇಕಾಗುವ ಪದಾರ್ಥಗಳು
[ಬದಲಾಯಿಸಿ]ಸ್ವಲ್ಪ ತೆಂಗಿನತುರಿ 2 ಚಮಚ ಎಣ್ಣೆ ¼ ಲೋಟ ಕಡಲೆಕಾಯಿ 3 ಒಣಗಿದ ಕೆಂಪು ಮೆಣಸಿನಕಾಯಿ 2 ಬೆಳ್ಳುಳ್ಳಿ ಸಣ್ಣ ತುಂಡು ಹುಣಿಸೇಹಣ್ಣು ½ ಚಮಚ ಉಪ್ಪು ½ ಲೋಟ ನೀರು [೧]
ದೋಸೆ ಮಾಡುವ ಕ್ರಮ
[ಬದಲಾಯಿಸಿ]ಮೊದಲಿಗೆ, 1½ ಲೋಟೆ ಅಕ್ಕಿ ಹಿಟ್ಟು, ½ ಲೋಟೆ ರವೆ ಮತ್ತು ¾ ಚಮಚ ಉಪ್ಪು ಸೇರಿಸಿ. 4 ಲೋಟೆ ನೀರು ಸುರಿಯಿರಿ ಮತ್ತು ಚೆನ್ನಾಗಿ ರುಬ್ಬಿ ಮಿಶ್ರಣ ಮಾಡಿ. ಪುನಃ 1 ಈರುಳ್ಳಿ, 1 ಕ್ಯಾರೆಟ್, 2 ಮೆಣಸಿನಕಾಯಿ, ಸ್ವಲ್ಪ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವಿನ ಎಲೆಗಳು ಮತ್ತು 1 ಚಮಚ ಜೀರಿಗೆಯನ್ನು ಸೇರಿಸಿ ಚೆನ್ನಾಗಿ ರುಬ್ಬಿ ಮಿಶ್ರಣ ಮಾಡಿ ಮತ್ತು ರವೆ ಚೆನ್ನಾಗಿ ನೆನೆಸಲು 20 ನಿಮಿಷಗಳ ಕಾಲ ಹಾಗೆ ಬಿಡಿ. 20 ನಿಮಿಷಗಳ ನಂತರ,ಅಗತ್ಯವಿದ್ದರೆ ನೀರು ಸೇರಿಸಿ. ಕಾವಲಿ ತುಂಬಾ ಬಿಸಿಯಾಗಿರುವಾಗ, ಕಾವಲಿಯ ಮೇಲೆ ಹಿಟ್ಟನ್ನು ಸುರಿಯಿರಿ. 1 ಚಮಚ ತುಪ್ಪ ಹರಡಿ ಮತ್ತು 2 ನಿಮಿಷಗಳ ಕಾಲ ಅಥವಾ ದೋಸೆ ಗರಿಗರಿಯಾಗುವವರೆಗೆ ಕಾಯಾಲು ಬಿಡಿ. ಅಕ್ಕಿ ಹಿಟ್ಟಿನ ದೋಸೆ ತಿನ್ನಲು ಸಿಧ್ಧ.[೧]
ಚಟ್ನಿ ಮಾಡುವ ಕ್ರಮ
[ಬದಲಾಯಿಸಿ]ಮೊದಲಿಗೆ, ಕಾವಲಿಯಲ್ಲಿ 2 ಚಮಚ ಎಣ್ಣೆಯನ್ನು ಬಿಸಿ ಮಾಡಿ ಮತ್ತು ¼ ಲೋಟ ಕಡಲೆಕಾಯಿಯನ್ನು ಕುರುಕಲು ಆಗುವವರೆಗೆ ಹುರಿಯಿರಿ.ಈಗ 3 ಒಣಗಿದ ಕೆಂಪು ಮೆಣಸಿನಕಾಯಿ, 2 ಬೆಳ್ಳುಳ್ಳಿ ಯನ್ನು ಸೇರಿಸಿ. ಮೆಣಸಿನಕಾಯಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ಸಂಪೂರ್ಣವಾಗಿ ತಣ್ಣಗಾಗಿಸಿದ ನಂತರ, ಸ್ವಲ್ಪ ತೆಂಗಿನ ತುರಿಯೊಂದಿಗೆ ಚೆನ್ನಾಗಿ ರುಬ್ಬಿ.ಒಂದು ಸಣ್ಣ ತುಂಡು ಹುಣಿಸೇಹಣ್ಣು, ½ ಚಮಚ ಉಪ್ಪು ಮತ್ತು ½ ಲೋಟ ನೀರನ್ನು ಸೇರಿಸಿ. ಚಟ್ನಿಯನ್ನು ಬಟ್ಟಲಿಗೆ ವರ್ಗಾಯಿಸಿ ಮತ್ತು ಒಗ್ಗರಣೆಯನ್ನು ಹಾಕಿ.[೧]
ಉಲ್ಲೇಖಗಳು
[ಬದಲಾಯಿಸಿ]- ↑ ೧.೦ ೧.೧ ೧.೨ Kitchen, Hebbars (1 December 2021). "ಅಕ್ಕಿ ಹಿಟ್ಟಿನ ದೋಸೆ | rice flour dosa in kannada | ರೈಸ್ ಫ್ಲೋರ್ ದೋಸಾ". Hebbar's Kitchen.