ವಿಷಯಕ್ಕೆ ಹೋಗು

ರಷ್ಯನ್ ಸಾಹಿತ್ಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಗತ್ತಿನ ಸಾಹಿತ್ಯಕ್ಕೆ ಅಪಾರ ಕೊಡುಗೆ [] ನೀಡಿರುವ ರಷ್ಯನ್ ಸಾಹಿತ್ಯವನ್ನು ಜಗತ್ತಿನ ಅತ್ಯಂತ ಪ್ರಭಾವಿ ಮತ್ತು ಅಭಿವೃದ್ಧಿ ಹೊಂದಿದ ಸಾಹಿತ್ಯಗಳ ಪೈಕಿ ಒಂದೆಂದು ಪರಿಗಣಿಸಲಾಗಿದೆ. ರಷ್ಯಾದ ಸಾಹಿತ್ಯ ಇತಿಹಾಸ 10ನೇ ಶತಮಾನದಷ್ಟು ಹಿಂದಕ್ಕೆ ಸರಿಯುತ್ತದೆ. 19ನೇ ಶತಮಾನದಲ್ಲಿ ದೇಶೀಯ ಸಂಪ್ರದಾಯ ಬೆಳಕಿಗೆ ಬಂದಿತ್ತು. ಅಲ್ಲದೆ ಅದು ಸರ್ವಕಾಲೀಕ ಪ್ರಸಿದ್ಧ ಲೇಖಕರನ್ನೂ ಸೃಷ್ಟಿಸಿತು. ಆಧುನಿಕ ರಷ್ಯನ್ ಸಾಹಿತ್ಯದ ಜನಕ ಮತ್ತು ರಷ್ಯನ್ "ಶೇಕ್ಸ್ ಪೀಯರ್" []ಎಂದೇ ಖ್ಯಾತರಾದ ಅಲೆಕ್ಸಾಂಡರ್ ಪುಶ್ಕಿನ್ ಅವರೊಂದಿಗೆ ರಷ್ಯನ್ ಕಾವ್ಯದ ಸುವರ್ಣ ಯುಗ ಆರಂಭವಾಯಿತು. 19ನೇ ಶತಮಾನದ ಆಂಟನ್ ಚೆಕೋವ್, ಮಿಖಾಯಿಲ್ ಲೆರ್ಮೆಂಟೋವ್, ಲಿಯೋ ಟಾಲ್ ಸ್ಟಾಯ್, ನಿಕೊಲಯ್ ಗೊಗ್ಲ್/6}, ಇವಾನ್ ತುರ್ಗೆನೇವ್ ಮತ್ತು ಫ್ಯೋಡೊರ್ ದೊಸ್ತೊಯೋವ್ಸ್ಕಿ ಅವರ ಕಾಲದಲ್ಲೂ ಮುಂದುವರಿಯಿತು. ಇವಾನ್ ಗೊಂಚರೋವ್, ಮಿಖಾಯಿಲ್ ಸಾಲ್ಟಿಕೋವ್, ಅಲೆಕ್ಸೇ ಪಿಸೆಂಸ್ಕಿ, ನಿಕೊಲಾಯ್ ಲೆಸ್ಕೋವ್ ಅವರು ರಷ್ಯನ್ ಗದ್ಯ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ್ದಾರೆ. ಲೇಖಕರ ಪೈಕಿ ಟಾಲ್ ಸ್ಟಾಯ್ ಮತ್ತು ದೊಸ್ಟೊಯ್ ವಿಸ್ಕಿ ಶಿಖರಪ್ರಾಯರು. ಸಾಹಿತ್ಯ ಜಗತ್ತು ಕಂಡ ಸರ್ವಕಾಲೀಕ ಕಾದಂಬರಕಾರರು ಎಂದು ವಿಮರ್ಶಕರು ಇವರನ್ನು ಬಣ್ಣಿಸಿದ್ದಾರೆ.[][]

ಲಿಯೋ ಟಾಲ್ ಸ್ಟಾಯ್ (1828–1910), ಲೇಖಕ

1880ರ ವೇಳೆಗೆ ರಷ್ಯನ್ ಸಾಹಿತ್ಯ ಬದಲಾವಣೆಗಳನ್ನು ಕಾಣಲಾರಂಭಿಸಿತು. ಅದಾಗಲೇ ಪ್ರಸಿದ್ಧ ಕಾದಂಬರಿಕಾರರ ಕಾಲ ಮುಗಿದು ಹೋಗಿತ್ತು, ಮತ್ತು ಸಣ್ಣ ಕಥೆ ಮತ್ತು ಕವಿತೆಗಳೇ ರಷ್ಯನ್ ಸಾಹಿತ್ಯದ ಪ್ರಮುಖ ಪ್ರಕಾರವಾಗಿತ್ತು. ಅಲ್ಲದೆ ಅನೇಕ ದಶಕಗಳ ಕಾಲ ಈ ಪ್ರಕಾರ ರಷ್ಯನ್ ಸಾಹಿತ್ಯ ಜಗತ್ತನ್ನು ಆಳಿತು. ಈ ಕಾಲವನ್ನು ರಷ್ಯನ್ ಕಾವ್ಯದ ರಜತ ಪರ್ವ ಎಂದು ಕರೆಯಲಾಗಿದೆ. ರಷ್ಯನ್ ಸಾಹಿತ್ಯದ ಆರಂಭಿಕ ಹಂತದಲ್ಲಿ ವಾಸ್ತವವಾದವೇ ತುಂಬಿದ್ದರೆ, 1893 ಮತ್ತು 1914ರ ನಡುವೆ ಪ್ರತಿಮೆಗಳ ಮೂಲಕ ಭಾವನೆಗಳನ್ನು ಹೇಳುವ ಪ್ರತಿಮಾಪಂಥ ಆವರಿಸಿಕೊಂಡಿತು.ಆ ಕಾಲದ ಪ್ರಮುಖ ಲೇಖಕರೆಂದರೆ ವಾಲೆರಿ ಬ್ರ್ಯುಸೋವ್, ಆಂಡ್ರೇ ಬೆಲಿ, ವ್ಯಾಚೆಸ್ಲಾವ್ ಇವನೋವ್, ಅಲೆಕ್ಸಾಂಡರ್ ಬ್ಲಾಕ್, ನಿಕೊಲಾಯ್ ಗುಮಿಲೇವ್, ದಿತ್ರಿ ಮೆರೆಜ್ಕೋವಿಸ್ಕಿ, ಫ್ಯೋಡರ್ ಸೊಲೊಗುಬ್, ಅಣ್ಣಾ ಅಖ್ಮಾಟೋವಾ, ಒಸಿವ್ ಮಂಡೇಲ್ ಸ್ತಂ, ಮರಿನಾ ತ್ಸೆಟೆಯ್ವಾ, ಲಿಯೊನಿಡ್ ಆಂಡ್ರೆಯೆವ್, ಇವನ್ ಬುನಿನ್ ಮತ್ತು ಮಾಕ್ಸಿಂ ಗಾರ್ಕಿ.

1917ರ ರಷ್ಯಾ ಕ್ರಾಂತಿ ಮತ್ತು ಆ ನಂತರದ ಶೀತಲ ಸಮರದಿಂದಾಗಿ ರಷ್ಯಾದ ಸಾಂಸ್ಕೃತಿಕ ಜೀವನ ಸಂಪೂರ್ಣ ಅಸ್ತವ್ಯಸ್ತವಾಯಿತು.ಈಗಾಗಲೇ ಪ್ರಸಿದ್ಧಿಗೆ ಬಂದಿರುವ ಲೇಖಕರು ಸೋವಿಯತ್ ಒಕ್ಕೂಟವನ್ನು ಬಿಟ್ಟು ಹೊರ ನಡೆದರೆ, ಕ್ರಾಂತಿಯ ಧೋರಣೆಗಳ ಬಗ್ಗೆ ಅನುಕಂಪವುಳ್ಳ ಹೊಸ ತಲೆಮಾರಿನ ಕೆಲವು ಪ್ರತಿಭಾವಂತ ಲೇಖಕರು ಉಳಿದುಕೊಂಡರು. ಈ ಪೈಕಿ ಕೆಲವು ಉತ್ಸಾಹಿಗಳು, ಹೊಸ ರಾಜ್ಯ ವ್ಯವಸ್ಥೆಗೆ ಅನುಕೂಲವಾಗುವಂತಹ ಹೊಸ ಮತ್ತು ಕಾರ್ಮಿಕ ವರ್ಗದ ಸಂಸ್ಕೃತಿ ಹುಟ್ಟು ಹಾಕುವ ಉದ್ದೇಶದಿಂದ ಲೇಖಕರ ಸಂಸ್ಥೆಗಳಿಗೆ ಸೇರಿಕೊಂಡರು. 1920ರ ಉದ್ದಕ್ಕೂ ಲೇಖಕರು ಸಹನೆಯಿಂದ ಸಾಹಿತ್ಯ ನಿರ್ಮಾಣದಲ್ಲಿ ತೊಡಗಿದ್ದರು. 1930ರಲ್ಲಿ ಜೋಸೆಫ್ ಸ್ಟಾಲಿನ್ ನ ಸಮಾಜವಾದಿ ನಂಬಿಕೆಯ ತಳಹದಿಯಲ್ಲಿ ಸಾಹಿತ್ಯದ ಮೇಲಿದ್ದ ನಿರ್ಬಂಧಗಳು ಮತ್ತಷ್ಟು ಬಿಗಿಗೊಂಡವು.ಆತನ ಮರಣಾನಂತರ ಸೌಹಾರ್ದ ವಾತಾವರಣ ನಿರ್ಮಾಣವಾಯಿತು ಮತ್ತು ನಿಯಮಗಳೂ ಸಡಿಲವಾದವು. 1970 ಮತ್ತು 1980ರ ವೇಳೆಗೆ ಸಮಾಜವಾದಿ ನಂಬಿಕೆಯ ನೀತಿ ನಿಯಮಗಳನ್ನು ನಿರ್ಲಕ್ಷಿಸುವ ಲೇಖಕರ ಸಂಖ್ಯೆ ಹೆಚ್ಚಿತು.ಸೋವಿಯತ್ ಯುಗದಲ್ಲಿದ್ದ ಪ್ರಮುಖ ಲೇಖಕರೆಂದರೆ ಯೆವ್ಗೆನಿ ಝಾಮ್ಯಂಟಿನ್, ಇಸಾಕ್ ಬಾಬೆಲ್ , ಇಲ್ಫ್ ಮತ್ತು ಪೆಟ್ರೋವ್, ಯುರಿ ಒಲೆಶಾ, ವ್ಸಾಡಿಮಿರ್ ನಬೊಕೋವ್, ಮಿಖಾಯಿಲ್ ಬುಲ್ಗಕೊವ್, ಬೋರಿಸ್ ಪಾಸ್ಟರ್ನಾಕ್, ಅಲೆಕ್ಸಾಂಡರ್ ಸೊಲ್ಜೆನಿಟ್ಸಿನ್, ವ್ಲಾಡಿಮಿರ್ ಮಾಯಕೊವಿಸ್ಕಿ, ಮಿಖಾಯಿಲ್ ಶೊಲೊಕೊವ್, ಯೆವ್ಗೆನಿ ಯೆವ್ತುಶೆಂಕೊ ಮತ್ತು ಆಂಡ್ರೇ ವೊಜ್ನೆಸೆಂಸ್ಕಿ.

ಆಕರಗಳು

[ಬದಲಾಯಿಸಿ]
  1. Microsoft Encarta Online Encyclopedia 2007. "Russian Literature". Archived from the original on 2009-08-20. Retrieved 2008-01-07.{{cite web}}: CS1 maint: numeric names: authors list (link)
  2. Kelly, Catriona (2001). Russian Literature: A Very Short Introduction (Very Short Introductions) (Paperback). Oxford Paperbacks. ISBN 0192801449.
  3. "Russian literature; Leo Tolstoy". Encyclopedia Britannica. Retrieved 2008-04-11.
  4. Otto Friedrich. "Freaking-Out with Fyodor". Time Magazine. Archived from the original on 2012-11-03. Retrieved 2008-04-10.


ಹೊರಗಿನ ಕೊಂಡಿಗಳು

[ಬದಲಾಯಿಸಿ]