ವಿಷಯಕ್ಕೆ ಹೋಗು

ರಾಕ್ ಗಾರ್ಡನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮರುಬಳಸಿದ ಪಿಂಗಾಣಿಯಿಂದ ತಯಾರಿಸಿದ ಶಿಲ್ಪಗಳಿಗೆ ಈ ಉದ್ಯಾನವು ಬಹಳ ಪ್ರಸಿದ್ಧವಾಗಿದೆ
ರಾಕ್ ಗಾರ್ಡನ್, ಚಂಡಿಗಢ್‍ನಲ್ಲಿ ಜಲಪಾತ ಮತ್ತು ಮಾರ್ಗ

ರಾಕ್ ಗಾರ್ಡನ್ ಶಿಲಾ ಉತ್ಸಾಹಿಗಳಿಗಾಗಿ ಭಾರತದ ಪಂಜಾಬ್ ಮತ್ತು ಹರ್ಯಾಣಾದ ಚಂಡೀಗಡದಲ್ಲಿರುವ ಒಂದು ಶಿಲ್ಪ ಉದ್ಯಾನವಾಗಿದೆ. 1957 ರಲ್ಲಿ ತಮ್ಮ ಬಿಡುವಿನ ವೇಳೆಯಲ್ಲಿ ಈ ಉದ್ಯಾನವನ್ನು ರಹಸ್ಯವಾಗಿ ಪ್ರಾರಂಭಿಸಿದ ಸರ್ಕಾರಿ ಅಧಿಕಾರಿಯಾಗಿದ್ದ ಸಂಸ್ಥಾಪಕ ನೇಕ್ ಚಂದ್ ಸೈನಿ ಹೆಸರಿನಲ್ಲಿ ಇದನ್ನು ನೇಕ್ ಚಂದ್‍ರ ರಾಕ್ ಗಾರ್ಡನ್ ಎಂದೂ ಇದನ್ನು ಕರೆಯಲಾಗುತ್ತದೆ. ಇಂದು ಇದು ೪೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಇದನ್ನು ಸಂಪೂರ್ಣವಾಗಿ ಕೈಗಾರಿಕಾ, ಗೃಹ ತ್ಯಾಜ್ಯ ಮತ್ತು ಬಿಸಾಡಿದ ವಸ್ತುಗಳಿಂದ ನಿರ್ಮಿಸಲಾಗಿದೆ.[]

ರಾಕ್ ಗಾರ್ಡನ್ ಸುಖ್ನಾ ಸರೋವರದ ಬಳಿ ಇದೆ.[] ಇದು ಮಾನವ ನಿರ್ಮಿತ ಪರಸ್ಪರ ಜೋಡಣೆಗೊಂಡ ಜಲಪಾತಗಳು ಮತ್ತು ಚಿಂದಿ ಹಾಗೂ ಇತರ ಬಗೆಯ ತ್ಯಾಜ್ಯಗಳಿಂದ ( ಬಾಟಲಿಗಳು, ಗ್ಲಾ‍ಸ್‍ಗಳು, ಬಳೆಗಳು, ಹೆಂಚುಗಳು, ಪಿಂಗಾಣಿ ಮಡಿಕೆಗಳು, ಬಚ್ಚಲುಗುಂಡಿಗಳು, ವಿದ್ಯುತ್ ತ್ಯಾಜ್ಯ, ಮುರಿದ ಕೊಳವೆಗಳು ಇತ್ಯಾದಿ) ನಿರ್ಮಿಸಲಾದ ಅನೇಕ ಶಿಲ್ಪಗಳನ್ನು ಒಳಗೊಂಡಿದ್ದು ಇವನ್ನು ಗೋಡೆಗಳುಳ್ಳ ಮಾರ್ಗಗಳಲ್ಲಿ ಇರಿಸಲಾಗಿದೆ.[]

ಛಾಯಾಂಕಣ

[ಬದಲಾಯಿಸಿ]

ಹೆಚ್ಚಿನ ಓದಿಗೆ

[ಬದಲಾಯಿಸಿ]
  • Nek Chand's outsider art: the rock garden of Chandigarh, by Lucienne Peiry, John Maizels, Philippe Lespinasse, Nek Chand. Published by Flammarion, 2006.  .
  • The Collection, the Ruin and the Theatre: Architecture, sculpture and landscape in Nek Chand's Rock Garden, by Soumyen Bandyopadhyay and Iain Jackson. Liverpool University Press, 2007.  ISBN 1-84631-120-9.
  • Sublime Spaces and Visionary Worlds: Built Environments of Vernacular Artists, by Leslie Umberger (author), Erika Doss (contributor), Ruth Kohler (contributor), Lisa Stone (contributor).

ಉಲ್ಲೇಖಗಳು

[ಬದಲಾಯಿಸಿ]
  1. "Night tourism to light up 'rocks'". 2012-07-01. Archived from the original on 2013-01-26. Retrieved 2012-10-30.
  2. "Working wealth out of waste".
  3. "Chandigarh, the City Beautiful: Environmental Profile of a Modern Indian City".


ಹೊರಗಿನ ಕೊಂಡಿಗಳು

[ಬದಲಾಯಿಸಿ]