ರಾಜಕುಮಾರ (ಚಲನಚಿತ್ರ)
ರಾಜಕುಮಾರ | |
---|---|
ಚಿತ್ರ:Raajakumara.jpg | |
ನಿರ್ದೇಶನ | ಸಂತೋಷ್ ಆನಂದ್ ರಾಮ್ |
ನಿರ್ಮಾಪಕ | ವಿಜಯ್ ಕಿರಗಂದೂರ್ |
ಲೇಖಕ | ಸಂತೋಷ್ ಆನಂದರಾಮ್ |
ಚಿತ್ರಕಥೆ | ಸಂತೋಷ್ ಆನಂದರಾಮ್ |
ಪಾತ್ರವರ್ಗ | |
ಸಂಗೀತ | ಹರಿಕೃಷ್ಣ |
ಛಾಯಾಗ್ರಹಣ | ವೆಂಕಟೇಶ್ ಅಂಗುರಾಜ್ |
ಸಂಕಲನ | ಕೆ. ಎಂ. ಪ್ರಕಾಶ್ |
ಸ್ಟುಡಿಯೋ | ಹೊಂಬಾಳೆ ಫಿಲ್ಮ್ಸ್ |
ವಿತರಕರು | ಜಯಣ್ಣ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ೨೪ ಮಾರ್ಚ್ ೨೦೧೭ |
ಅವಧಿ | 148 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಬಾಕ್ಸ್ ಆಫೀಸ್ | ₹75 ಕೋಟಿ[೧] |
ರಾಜಕುಮಾರ (English: The Prince), ಸಂತೋಷ್ ಆನಂದ್ ರಾಮ್ ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ವಿಜಯ್ ಕಿರಗಂದೂರು ಹೊಂಬಾಳೆ ಫಿಲ್ಮ್ಸ್ ಅಡಿಯಲ್ಲಿ ಚಿತ್ರವನ್ನು ನಿರ್ಮಿಸಿದ್ದಾರೆ. ನಾಯಕ- ನಾಯಕಿಯಾಗಿ ಪುನೀತ್ ರಾಜ್‍ಕುಮಾರ್ ಮತ್ತು ಪ್ರಿಯಾ ಆನಂದ್ ನಟಿಸಿದ್ದಾರೆ. ಇನ್ನಿತರ ಪ್ರಮುಖ ಪಾತ್ರಗಳಲ್ಲಿ ಅನಂತ್ ನಾಗ್, ಎಚ್. ಜಿ. ದತ್ತಾತ್ರೇಯ, ಶರತ್ ಕುಮಾರ್, ಚಿಕ್ಕಣ್ಣ, ಅವಿನಾಶ್ ಅಭಿನಯಿಸಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಚಿತ್ರವು 24 ಮಾರ್ಚ್ 2017ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಯಿತು. ವಿಮರ್ಶಕರು ಮತ್ತು ಪ್ರೇಕ್ಷಕರಿಂದ ಧನಾತ್ಮಕ ವಿಮರ್ಶೆಗಳನ್ನು ಪಡೆಯಿತು. [೨] ಚಲನಚಿತ್ರವು ಬಿಡುಗಡೆಯ ಸಮಯದಲ್ಲಿ ಅತಿ ಹೆಚ್ಚು ಗಳಿಕೆಯ ಕನ್ನಡ ಚಲನಚಿತ್ರ ಆಯಿತು .[೩]
ಕಥೆ
[ಬದಲಾಯಿಸಿ]ಸಿದ್ಧಾರ್ಥ್ (ಪುನೀತ್ ರಾಜ್‌ಕುಮಾರ್) ಶ್ರೀಮಂತ ದಂಪತಿಗಳಾದ ಅಶೋಕ್ (ಆರ್. ಶರತ್‌ಕುಮಾರ್) ಮತ್ತು ಸುಜಾತಾ (ವಿಜಯಲಕ್ಷ್ಮಿ ಸಿಂಗ್) ಅವರ ದತ್ತುಪುತ್ರನಾಗಿದ್ದು, ಮೆಲ್ಬೋರ್ನ್‌ನಲ್ಲಿ ತನ್ನ ತಂದೆಯ ವ್ಯಾಪಾರ ನೋಡಿಕೊಳ್ಳುತ್ತಾ ಸಂತೋಷದ ಜೀವನವನ್ನು ನಡೆಸುತ್ತಾನೆ.ಅವನು ಸಾಲ್ಸಾ ಬೋಧಕಿ ನಂದಿನಿ (ಪ್ರಿಯಾ ಆನಂದ್) ಳನ್ನು ಪ್ರೀತಿಸುತ್ತಾನೆ. ವಿಮಾನ ಅಪಘಾತದಲ್ಲಿ ಇಡೀ ಕುಟುಂಬವನ್ನು ಕಳೆದುಕೊಳ್ಳುತ್ತಾನೆ. ಭಾರತಕ್ಕೆ ಮರಳುತ್ತಾನೆ.
ನಂದಿನಿಯ ತಂದೆ ಜಗದೀಶ್ (ಅವಿನಾಶ್) ಮೂಲಕ, ಅಶೋಕ್ ಅವರು ಬಡವರಿಗಾಗಿ ಪರಿಚಯಿಸಿದ ಪೋಲಿಯೋ ಯೋಜನೆಯಿಂದಾಗಿ ಶಿಶುಗಳ ಸಾವಿಗೆ ಅಶೋಕ್ ಅವರನ್ನು ಜನರು ದ್ವೇಷಿಸುತ್ತಿದ್ದರು ಎಂದು ಸಿದ್ಧಾರ್ಥ್ ತಿಳಿಯುತ್ತಾನೆ.ಸಿದ್ಧಾರ್ಥ್ ವೃದ್ಧಾಶ್ರಮದಲ್ಲಿರುವ ವೃದ್ಧರನ್ನು ಅವರ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುತ್ತಾನೆ. ಅವರಲ್ಲಿ ಒಬ್ಬರಾದ ವಿಶ್ವ ಜೋಶಿ (ಅನಂತ್ ನಾಗ್), ಆರೋಗ್ಯ ಸಚಿವ ಜಗನ್ನಾಥ್ ಅವರ ತಂದೆಯಾಗಿರುತ್ತಾರೆ. ತನ್ನ ಮಗ ಜಗನ್ನಾಥ್ ರಚಿಸಿದ ಕುತಂತ್ರದಿಂದ ಪೋಲಿಯೊ ಯೋಜನೆ ನಿಜವಾಗಿಯೂ ನಾಶವಾಯಿತು ಎಂದು ಜೋಶಿ ಹೇಳುತ್ತಾರೆ.ಜೋಶಿಯವರು ಜಗನ್ನಾಥ್ ಮಾಡಿದ ಅಕ್ರಮಗಳನ್ನು ಬಹಿರಂಗಪಡಿಸಲು ಬಯಸಿ ಸರಿಯಾದ ಸಮಯಕ್ಕಾಗಿ ವೃದ್ಧಾಶ್ರಮದಲ್ಲಿ ಅಡಗಿಕೊಂಡಿದ್ದರು. ಸಿದ್ಧಾರ್ಥ್ ಕೂಡ ವಿಶ್ವ ಜೋಶಿಯವರನ್ನು ಬೆಂಬಲಿಸುತ್ತಾನೆ ಮತ್ತು ಟಿವಿ ಸಂದರ್ಶನದಲ್ಲಿ ಜಗನ್ನಾಥ್ ಅವರಿಂದಲೇ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸುವಂತೆ ಮಾಡುತ್ತಾನೆ.
ಜಗನ್ನಾಥ್ ಇವರ ಯೋಜನೆಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಾನೆ, ವೃದ್ಧಾಶ್ರಮವನ್ನು ಪಡೆಯಲು ಪ್ರಯತ್ನಿಸುತ್ತಾನೆ ಮತ್ತು ಅವನ ಸಹಾಯಕರಿಂದ ತನ್ನ ತಂದೆಯ ಮೇಲೆ ಆಕ್ರಮಣ ಮಾಡಿಸುತ್ತಾನೆ. ಆದಾಗ್ಯೂ, ಕೊನೆಯಲ್ಲಿ, ಜಗನ್ನಾಥ್ ಮನಸ್ಸು ಬದಲಾಯಿಸುತ್ತಾನೆ, ತನ್ನ ತಂದೆಯನ್ನು ಉಳಿಸುತ್ತಾನೆ ಮತ್ತು ಶರಣಾಗುತ್ತಾನೆ.
ತಾರಾಗಣ
[ಬದಲಾಯಿಸಿ]- ಪುನೀತ್ ರಾಜ್ಕುಮಾರ್
- ಪ್ರಿಯಾ ಆನಂದ್
- ಪ್ರಕಾಶ್ ರಾಜ್
- ಅನಂತ ನಾಗ್
- ಶರತ್ ಕುಮಾರ್
- ಸಾಧು ಕೋಕಿಲ
- ಚಿಕ್ಕಣ್ಣ
- ಹೊನ್ನವಳ್ಳಿ_ಕೃಷ್ಣ
- ಅಚ್ಯುತ್_ಕುಮಾರ್
- ರಂಗಾಯಣ ರಘು
- ಎಚ್. ಜಿ. ದತ್ತಾತ್ರೇಯ - ಮೊಹಮ್ಮದ್ ರಫಿ
- ಜಗದೀಶ್ ಪಾತ್ರದಲ್ಲಿ ಅವಿನಾಶ್, ನಂದಿನಿ ತಂದೆ
- ಮೂರ್ತಿ ಪಾತ್ರದಲ್ಲಿ ಮನ್ದೀಪ್ ರಾಯ್
- ಫೈನಾನ್ಶಿಯರ್ ಆಗಿ ಡ್ಯಾನಿ ಕುಟ್ಟಪ್ಪ
- ಎಂ.ಪಿ.ವೆಂಕಟರಾವ್
- ಅರುಣಾ ಬಾಲರಾಜ್
- ರಾಕ್ಲೈನ್ ಸುಧಾಕರ್
- ರವಿ ಹೆಗಡೆ
- ಸುಂದರ್ ರಾಮ್
- ಗೌತಮ್ ಕಾರಂತ
- ಬ್ಯಾಂಕ್ ಸುರೇಶ್
- ಮಾಲತಿ ಸುಧಾಕರ್
- ಅಶೋಕ್ ದೇವ್
- ವೀಣಾ ಸುಂದರ್
- ಭ್ರಷ್ಟ ಇನ್ಸ್ಪೆಕ್ಟರ್ ಆಗಿ ವಿಜಯ್ ಕೌಂಡಿನ್ಯಾ
- ತಂಗಂ ಪಾತ್ರದಲ್ಲಿ ಎಂ.ಕೆ.ಮಠ
- ಪತ್ರಿಕಾ ಛಾಯಾಗ್ರಾಹಕರಾಗಿ ವಿಜಯಾನಂದ್
- ಕೆ.ಎಸ್. ಶ್ರೀಧರ್
- "ಅಪ್ಪು ಡ್ಯಾನ್ಸ್" ಹಾಡಿನಲ್ಲಿ ಅತಿಥಿ ಪಾತ್ರದಲ್ಲಿ ಜಾನಿ ಮಾಸ್ಟರ್
ವಿಮರ್ಶೆ
[ಬದಲಾಯಿಸಿ]ರಾಜಕುಮಾರ ಚಿತ್ರ, ಕರ್ನಾಟಕದ ೩೫೦ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡು [೪] ವ್ಯಾಪಕವಾಗಿ ಪ್ರಶಂಸೆ ಪಡೆದು, ೨೦೧೭ರ ಯಶಸ್ವಿ ಚಿತ್ರವಾಯಿತು. ೭೫ ಕೋಟಿ ಹಣ ಗಳಿಸಿ [೫][೬][೭] ಸುದ್ದಿ ಮಾಡಿತು. [೮]
ಉಲ್ಲೇಖಗಳು
[ಬದಲಾಯಿಸಿ]- ↑ https://www.timesnownews.com/amp/entertainment-news/kannada/article/top-8-highest-grossing-kannada-movies-of-all-time/737261
- ↑ Raajakumara (Rajakumara) movie review:A tailor-made entertainer for Puneeth Rajkumar fans. Ibtimes.co.in (24 March 2017). Retrieved on 2017-06-27.
- ↑ "Exclusive: Puneeth's look in Raajakumara — Times of India". The Times of India. Retrieved 2016-11-26.
- ↑ The film is not about Appaji – Bangalore. The Hindu (14 March 2017). Retrieved on 2017-09-29.
- ↑ "Can Shiva Rajkumar-Sudeep starrer 'The Villain' make it to the Rs 100 crore club? - Kannada Sandalwood News".
- ↑ ಉಲ್ಲೇಖ ದೋಷ: Invalid
<ref>
tag; no text was provided for refs namedAS
- ↑ "This man is the highly paid actor in Kannada film industry". Asianet Newsable. 23 May 2017. Archived from the original on 12 June 2018. Retrieved 27 June 2017.
- ↑ Raajakumara movie review: Power star is the saving grace. Deccanchronicle.com. Retrieved on 27 June 2017.