ರಾಜಗಿರಿ ಕೋಟೆ
ಗೋಚರ
ರಾಜಗಿರಿ ಕೋಟೆ | |
---|---|
ತಮಿಳು ನಾಡು ಇದರ ಭಾಗ | |
ವಿಲ್ಲುಪುರಮ್ ಜಿಲ್ಲೆ, ತಮಿಳುನಾಡು, ಭಾರತ | |
ನಿರ್ದೇಶಾಂಕಗಳು | 12°14′24″N 79°23′42″E / 12.24°N 79.395°E |
ಶೈಲಿ | ಕೋಟೆ |
ಸ್ಥಳದ ಮಾಹಿತಿ | |
ಇವರ ಹಿಡಿತದಲ್ಲಿದೆ | ತಮಿಳುನಾಡು ಸರಕಾರ |
ಪರಿಸ್ಥಿತಿ | ಅವಶೇಷಗಳು |
ರಾಜಗಿರಿ ಕೋಟೆಯನ್ನು ಕ್ರಿ.ಶ ೧೨೦೦ ರಲ್ಲಿ ನಿರ್ಮಿಸಲಾಯಿತು. ಇದು ಭಾರತದ ತಮಿಳುನಾಡಿನ ರಾಜಗಿರಿಯಲ್ಲಿದೆ. ರಾಜಗಿರಿ ಅಂದರೆ ಬೆಟ್ಟದ ರಾಜ ಎಂದರ್ಥ . [೧] ಇದು ಜಿಂಗೀ ಮಾರುಕಟ್ಟೆಯಿಂದ ೧ ಕಿ.ಮೀ ದೂರದಲ್ಲಿದೆ. ಇದು ಕೇಸರಿ ಮತ್ತು ಕಪ್ಪು ಬಂಡೆಯಿಂದ ಮಾಡಲ್ಪಟ್ಟಿದೆ. ಪ್ರಸ್ತುತ ಈ ಕೋಟೆಯು ಮ್ಯಾಗಜೀನ್, ಜಿಮ್ನಾಷಿಯಂ, ಅರಮನೆ ಸ್ಥಳ, ಪ್ರೇಕ್ಷಕರ ಭವನ, ಅಶ್ವಶಾಲೆ, ಗಡಿಯಾರ ಗೋಪುರ, ಕಣಜ, ಇಂಡೋ-ಇಸ್ಲಾಮಿಕ್ ಶೈಲಿಯ ಖಜಾನೆ, ಧಾನ್ಯಗಳ ಅಂಗಡಿ ಮನೆ ಮತ್ತು ಆನೆ ತೊಟ್ಟಿಯನ್ನು ಒಳಗೊಂಡಿದೆ. ಇದರ ಪಶ್ಚಿಮ ಪ್ರವೇಶದ್ವಾರದಲ್ಲಿ, ವೇಣು ಗೋಪಾಲಸ್ವಾಮಿ ದೇವಸ್ಥಾನ, ವಿಜಯನಗರ ರಾಜರ ರಂಗನಾಥ ದೇವಸ್ಥಾನ, ಕಲ್ಯಾಣ ಮಂಟಪ, ಸಾದತುಲ್ಲಾ ಖಾನ್ ಅವರ ಮಸೀದಿ (೧೭೧೭-೧೮), ಮಹಬ್ಬತ್ ಖಾನ್ ಅವರ ಮಸೀದಿ ಇದೆ. ನಿರಂತರ ನೀರಿನ ಪೂರೈಕೆಯೊಂದಿಗೆ ಸ್ನಾನದ ತೊಟ್ಟಿಗಳು, ಬೃಹತ್ ಫಿರಂಗಿ, ಚಕ್ರಕುಲಂ-ಕುಂಡ (ಜಲಾಶಯ) ಕೋಟೆಯ ಮೇಲ್ಭಾಗದಲ್ಲಿರುವ ದೇವಾಲಯಕ್ಕೆ ಸೇರಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ South India Handbook By Roma Bradnock