ವಿಷಯಕ್ಕೆ ಹೋಗು

ರಾಧ ಗೋಪಿನಾಥ್ ದೇವಾಲಯ, ಚೌಪಾತಿ, ಮುಂಬಯಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Pfourth.JPG
ಮುಂಬಯಿನ,ರಾಧ ಗೋಪಿನಾಥ್ ಮಂದಿರದ ಪ್ರಮುಖ ದ್ವಾರ
ಚಿತ್ರ:Pfifth.JPG
ರಾಧ ಗೋಪಿನಾಥ್ ಮಂದಿರ್
ಚಿತ್ರ:Pthree.JPG
ರಾಧಾ ಗೋಪಿನಾಥ್ ಮೂರ್ತಿ
ಚಿತ್ರ:Ptwo.JPG
ಭಕ್ತಿ ವೇದಾಂತ ಪ್ರಭುಪಾದ ಸ್ವಾಮೀಜಿಯವರ ಪ್ರತಿಮೆ

ರಾಧಾ ಗೋಪೀನಾಥ್ ಮಂದಿರ ರಾಧಾನಾಥ್ ಸ್ವಾಮಿಯವರಿಂದ ನಿರ್ಮಿಸಲ್ಪಟ್ಟಿತು.[] ರಾಧಾಗೋಪೀನಾಥ್ ಸ್ವಾಮೀಜಿಯವರು, ಸನ್ ೧೯೭೧ ರಲ್ಲಿ ಇಸ್ಕಾನ್ ಸಂಸ್ಥೆಯ ಜೊತೆ ಸಂಪರ್ಕಕ್ಕೆ ಬಂದ ನಂತರ, ಶ್ರೀಲಾ ಪ್ರಭುಪಾದರ ನಿಕಟವಾದರು. ಅವರ ಆದರ್ಶಪ್ರಾಯರಾದ ಶ್ರೀಲಾರವರ ಅಚ್ಚುಮೆಚ್ಚಿನ ಶಿಷ್ಯರಲ್ಲೊಬ್ಬರಾದರು. ಸನ್ ೧೯೭೩ ರಲ್ಲಿ ಪ್ರಭುಪಾದರು ಅವರಿಗೆ ದೀಕ್ಷೆಯನ್ನು ಅನುಗ್ರಹಿಸಿ, ಅವರ ಕಾರ್ಯಗಳಲ್ಲಿ ಭಾಗವಹಿಸಿ ಸಹಾಯಮಾಡಲು ಅನುಮತಿ ನೀಡಿದರು. ೧೯೮೬ ರಲ್ಲಿ ರಾಧಾನಾಥ್ ಸ್ವಾಮಿಯವರು ಮುಂಬಯಿಗೆ ಬಂದು ವಾಸ್ತವ್ಯಮಾಡಲು ಆರಂಭಿಸಿದರು. ಹೀಗೆ ರಾಧಾಗೋಪೀನಾಥ್ ಮಂದಿರ ನಿರ್ಮಾಣ ಕಾರ್ಯ ಪ್ರಾರಂಭವಾಯಿತು. ಸನ್ ೨೦೧೧ ರಲ್ಲಿ ಈ ಪ್ರಶಾಂತ ಭವ್ಯ ದೇವಸ್ಥಾನ, ಭಕ್ತವೃಂದಕ್ಕೆ ಮಾರ್ಗದರ್ಶನಮಾಡುತ್ತಾ, ಶ್ರೀಲಾ ಪ್ರಭುಪಾದರ ಆದರ್ಶಗಳನ್ನು ಈಡೇರಿಸುವಲ್ಲಿ ಸಧೃಢ ಹೆಜ್ಜೆಗಳನ್ನು ಇಡುತ್ತಾ ಮುಂದುವರೆದಿದೆ. ಮುಂಬಯಿನಗರದಲ್ಲಿ ಹರೆ ರಾಮ ಹರೆ ಕೃಷ್ಣ ಸಂಪ್ರದಾಯದ ಸ್ವಾಮಿತ್ವದಲ್ಲಿ ನಿರ್ಮಿತವಾದ ಇನ್ನೊಂದು ದೇವಾಲಯ, ರಾಧ ಗೋಪಿನಾಥ್ ದೇವಾಲಯ. ಇದೇ ಸಂಸ್ಥೆ ತನ್ನ ಪಂಥದ ಪ್ರಥಮ ದೇವಸ್ಥಾನವನ್ನು ಮುಂಬಯಿನಗರದ ಉಪನಗರ ಜುಹುವಿನಲ್ಲಿ ನಿರ್ಮಿಸಿತ್ತು.

ಅಮೃತ ಶಿಲೆಯಲ್ಲಿ ನಿರ್ಮಿಸಿರುವ ಭವ್ಯ ಮಂದಿರ

[ಬದಲಾಯಿಸಿ]

ಈ ದೇವಾಲಯದ ಹೊರಭಾಗದ ವಾಸ್ತುಶಿಲ್ಪ ಭಿನ್ನವಾಗಿದ್ದರೂ, ದೇವಾಲಯದ ಒಳಭಾಗದಲ್ಲಿನ ವಿನ್ಯಾಸ ಹೆಚ್ಚುಕಡಿಮೆ ಜುಹು ದೇವಸ್ಥಾನದ ಮಾದರಿಯಲ್ಲೇ ಇದೆ. 'ರಾಧ ಗೋಪಿನಾಥ್ ಸನ್ನಿಧಿ', ಮೊದಲ ಮಹಡಿಯ ಮೇಲಿದ್ದು ಹತ್ತಲು ಸಹಾಯಕವಾಗುವಂತೆ ಮೆಟ್ಟಿಲುಗಳಿವೆ. ವಯಸ್ಸಾದವರಿಗೆ, ಮತ್ತು ಮೆಟ್ಟಿಲು ಹತ್ತಲು ಅಶಕ್ತರಿಗೆ ಸಹಾಯಕವಾಗುವಂತೆ ಒಂದು ಲಿಫ್ಟ್ ಸಹಿತ ಉಪಲಬ್ಧವಿದೆ.

ಸ್ವಾಮೀಜಿಯವರ ಪ್ರವಚನಗಳು

[ಬದಲಾಯಿಸಿ]

ಈ ದೇವಾಲಯವನ್ನು ತಲುಪಲು

[ಬದಲಾಯಿಸಿ]

ದಕ್ಷಿಣ ಮುಂಬಯಿನ ಬಾಬುಲ್‍ನಾಥ್ ಮಂದಿರ್, ಚೌಪಾತಿ, ಭಾರತೀಯ ವಿದ್ಯಾಭವನ್, ಮಣಿಭವನ್, ಮೊದಲಾದ ಅತ್ಯಂತ ಸುಪ್ರಸಿದ್ಧ ಸ್ಥಳಗಳು, ಈ ದೇವಾಲಯದ ಆಸು-ಪಾಸುಗಳಲ್ಲೇ ಇವೆ. ಮಾಹಿತಿ ಸುಲಭವಾಗಿ ದೊರಕುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. "'ರಾಧಾ ಗೋಪಿನಾಥ್ ಮಂದಿರದ ವೆಬ್ಸೈಟ್'". Archived from the original on 2012-08-05. Retrieved 2012-08-07.