ವಿಷಯಕ್ಕೆ ಹೋಗು

ರಾಬ್ರಿ ದೇವಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಬ್ರಿ ದೇವಿ ಯಾದವ್
ಅಧಿಕಾರದ ಅವಧಿ
13 Apr 2022 – 09 Aug 2022
ಪೂರ್ವಾಧಿಕಾರಿ ಅವರೇ
ಉತ್ತರಾಧಿಕಾರಿ ಸಾಮ್ರಾಟ ಚೌಧರಿ
ಪೂರ್ವಾಧಿಕಾರಿ ಸುಶೀಲ್ ಕುಮಾರ್
ಉತ್ತರಾಧಿಕಾರಿ ಅವರೇ
ಪ್ರಸಕ್ತ
ಅಧಿಕಾರ ಪ್ರಾರಂಭ
೨೦ ನವೆಂಬರ್ ೨೦೦೫
ಪೂರ್ವಾಧಿಕಾರಿ ಉಪೇಂದ್ರ ಕುಶಾವಹ
ಉತ್ತರಾಧಿಕಾರಿ ಅಬ್ದುಲ್ ಬರಿ ಸಿದ್ದಿಕು
ಅಧಿಕಾರದ ಅವಧಿ
11 Mar 2000 – 06 Mar 2005
ಪೂರ್ವಾಧಿಕಾರಿ ನಿತಿಶ್ ಕುಮಾರ್ ಯಾದವ್
ಉತ್ತರಾಧಿಕಾರಿ ಪ್ರೆಸಿಡೆಂಟ್ಸ್ ರೂಲ್
ಪೂರ್ವಾಧಿಕಾರಿ ಪ್ರೆಸಿಡೆಂಟ್ಸ್ ರೂಲ್
ಉತ್ತರಾಧಿಕಾರಿ ನಿತಿಶ್ ಕುಮಾರ್ ಯಾದವ್

ಜನನ (1955-01-01) ೧ ಜನವರಿ ೧೯೫೫ (ವಯಸ್ಸು ೬೯)
ಸಲಾರ್ ಕಲಾನ್ ಗ್ರಾಮ, ಗೋಪಾಲ್ಗಂಜ್, ಬಿಹಾರ, ಭಾರತ
ರಾಜಕೀಯ ಪಕ್ಷ ರಾಷ್ಟ್ರಿಯ ಜನತಾ ದಳ
ಜೀವನಸಂಗಾತಿ

ಲಾಲು ಪ್ರಸಾದ (ವಿವಾಹ:1973)

ರಾಬ್ರಿ ದೇವಿ ಯಾದವ್ (ಜನನ ೧ ಜನವರಿ ೧೯೫೫) ಒಬ್ಬ ಭಾರತೀಯ ರಾಜಕಾರಣಿಯಾಗಿದ್ದು, ಅವರು ಈ ಹಿಂದೆ ಬಿಹಾರದ ಮುಖ್ಯಮಂತ್ರಿಯಾಗಿ ೩ ವರ್ಷ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮತ್ತು ಏಕೈಕ ಮಹಿಳೆ ಇವರು. ಅವರು ಬಿಹಾರ ವಿಧಾನ ಪರಿಷತ್ತಿನ ಸದಸ್ಯೆ (ಎಂ‌ಎಲ್‌ಸಿ). ಅವರು ಹಿಂದೆ ಬಿಹಾರ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಸೇವೆ ಸಲ್ಲಿಸಿದ್ದರು.

ರಾಬ್ರಿ ಅವರು ಭಾರತೀಯ ರಾಜಕಾರಣಿ ಲಾಲು ಪ್ರಸಾದ್ ಯಾದವ್ ಅವರನ್ನು ವಿವಾಹವಾದರು. ಇವರು ಬಿಹಾರದ ಮಾಜಿ ಮುಖ್ಯಮಂತ್ರಿ (೧೯೯೦-೧೯೯೭) ಮತ್ತು ಭಾರತದ ಮಾಜಿ ರೈಲ್ವೆ ಸಚಿವ (೨೦೦೪-೨೦೦೯) ಮತ್ತು ಪ್ರಸ್ತುತ ಬಿಹಾರದ ಉಪ ಮುಖ್ಯಮಂತ್ರಿ ಮತ್ತು ಮಾಜಿ ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್ ಅವರ ತಾಯಿ.

ಆರಂಭಿಕ ಜೀವನ

[ಬದಲಾಯಿಸಿ]

ರಾಬ್ರಿ ದೇವಿಯವರು ೧ ಜನವರಿ ೧೯೫೫ ರಂದು ಬಿಹಾರದ ಗೋಪಾಲ್ಗಂಜ್ ಜಿಲ್ಲೆಯ ಮಿರ್ಗಂಜ್ ಬಳಿಯ ಸಲಾರ್ ಕಲಾನ್ ಗ್ರಾಮದಲ್ಲಿ ಜನಿಸಿದರು. ಅವರ ಪೋಷಕರು ಶಿವಪ್ರಸಾದ್ ಚೌಧರಿ ಮತ್ತು ಮಹರ್ಜಿಯಾ ದೇವಿ. ಅವರ ಕುಟುಂಬದ ಸಂಪ್ರದಾಯದಂತೆ ಅವರಿಗೆ ಭಾರತೀಯ ಸಿಹಿತಿಂಡಿಯ ಹೆಸರಿಡಲಾಗಿದೆ. ಅವರ ೩ ಸಹೋದರಿಯರಿಗೆ ಜಲೇಬಿ, ರಸಗುಲ್ಲಾ ಮತ್ತು ಪಾನ್ ಎಂದು ಹೆಸರಿಡಲಾಗಿದೆ.

ಪ್ರಭುನಾಥ್ ಯಾದವ್, ಸುಭಾಷ್ ಪ್ರಸಾದ್ ಯಾದವ್ ಮತ್ತು ಸಾಧು ಯಾದವ್ ರಾಬ್ರಿ ಅವರ ಮೂವರು ಸಹೋದರರು.

ರಾಜಕೀಯ ವೃತ್ತಿಜೀವನ

[ಬದಲಾಯಿಸಿ]

ಮೇವು ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ಆರೋಪಗಳಲ್ಲಿ ಅವರ ಪತಿ ಲಾಲು ಪ್ರಸಾದ್ ಯಾದವ್ ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿದ ನಂತರ ರಾಬ್ರಿ ದೇವಿ ಜುಲೈ ೨೫, ೧೯೯೭ ರಂದು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾದರು. ಅವರು ೨೦೦೫ ರವರೆಗೆ ರಾಜ್ಯವನ್ನು ಆಳಿದರು.

ಬಿಹಾರ ಸಿಎಂ ರಾಬ್ರಿ ದೇವಿ ಅವರು ರಾಷ್ಟ್ರೀಯ ಪರಿಹಾರ ನಿಧಿಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರೂ.೧೦ ಕೋಟಿ ಚೆಕ್ ನೀಡಿದರು

ದೇವಿ ರಾಘೋಪುರ ಕ್ಷೇತ್ರದಿಂದ ಬಿಹಾರ ವಿಧಾನಸಭೆಗೆ ಮೂರು ಬಾರಿ ಆಯ್ಕೆಯಾದರು. ೨ ರ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ, ರಾಬ್ರಿ ದೇವಿ ಅವರು ಎರಡು ಸ್ಥಾನಗಳಿಂದ ಸ್ಪರ್ಧಿಸಿದರು: ರಾಘೋಪುರ್ ಮತ್ತು ಸೋನ್‌ಪುರ್ ವಿಧಾನಸಭಾ ಸ್ಥಾನಗಳು. ಆದರೆ ರಾಷ್ಟ್ರೀಯ ಜನತಾ ದಳವು ಸೋಲನ್ನು ಎದುರಿಸಿದ ಚುನಾವಣೆಯಲ್ಲಿ ಸೋತರು, ಕೇವಲ ೨೨ ಸ್ಥಾನಗಳನ್ನು ಗೆದ್ದರು. [] []

ರಾಬ್ರಿ ದೇವಿಯವರು ಬಿಹಾರದ ಮುಖ್ಯಮಂತ್ರಿಯಾಗಿ ನೇಮಕಗೊಂಡರು ಹಾಗೂ ಇದು ಭಾರತೀಯ ರಾಜಕೀಯ ಇತಿಹಾಸದಲ್ಲಿ ಅತ್ಯಂತ ಅನಿರೀಕ್ಷಿತ ಮತ್ತು ವಿಚಿತ್ರವಾದ ನಿರ್ಧಾರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.[] ಅವರು ಸಾಂಪ್ರದಾಯಿಕ ಗೃಹಿಣಿಯಾಗಿದ್ದರು ಮತ್ತು ರಾಜಕೀಯದಲ್ಲಿ ಯಾವುದೇ ಆಸಕ್ತಿ ಅಥವಾ ಯಾವುದೇ ಪೂರ್ವ ಅನುಭವವನ್ನು ಹೊಂದಿರಲಿಲ್ಲ. [] ಅವರ ಅನಕ್ಷರತೆ [] [] ಮತ್ತು ಅನನುಭವದ ಕಾರಣದಿಂದ ಅವರು ತೀವ್ರ ವಿಡಂಬನಾತ್ಮಕ ಟೀಕೆ ಮತ್ತು ತೀವ್ರ ವಿರೋಧಕ್ಕೆ ಒಳಗಾದರು. []

ವೈಯಕ್ತಿಕ ಜೀವನ ಮತ್ತು ಕುಟುಂಬ

[ಬದಲಾಯಿಸಿ]

ರಾಬ್ರಿ ದೇವಿ ಅವರು ಜೂನ್ ೧, ೧೯೭೩ ರಂದು ಲಾಲು ಪ್ರಸಾದ್ ಯಾದವ್ ಅವರನ್ನು ೧೭ನೇ ವಯಸ್ಸಿನಲ್ಲಿ ವಿವಾಹವಾದರು ಮತ್ತು ಅವರು ೨ ಗಂಡು ಮತ್ತು ೭ ಹೆಣ್ಣು ಮಕ್ಕಳನ್ನು ಪಡೆದರು. [] [] [೧೦] [೧೧] [೧೨] [೧೩] ಅವರ ಕಿರಿಯ ಪುತ್ರ ತೇಜಸ್ವಿ ಯಾದವ್ ಬಿಹಾರದ ಪ್ರಸ್ತುತ ಮತ್ತು ೫ ನೇ ಉಪ ಮುಖ್ಯಮಂತ್ರಿಯಾಗಿದ್ದಾರೆ .

  • ಹಿರಿಯ ಮಗ: ತೇಜ್ ಪ್ರತಾಪ್ ಯಾದವ್
  • ಕಿರಿಯ ಮಗ: ತೇಜಸ್ವಿ ಯಾದವ್
  • ಹಿರಿಯ ಮಗಳು: ಮಿಸಾ ಭಾರತಿ
  • ೨ನೇ ಮಗಳು: ರೋಹಿಣಿ ಆಚಾರ್ಯ ಯಾದವ್
  • ೩ನೇ ಮಗಳು: ಚಂದಾ ಯಾದವ್
  • ೪ ನೇ ಮಗಳು: ರಾಗಿಣಿ ಯಾದವ್ - ಸಮಾಜವಾದಿ ಪಕ್ಷದ ನಾಯಕ ರಾಹುಲ್ ಯಾದವ್ ಅವರನ್ನು ವಿವಾಹವಾದರು [೧೪]
  • ೫ ನೇ ಮಗಳು: ಹೇಮಾ ಯಾದವ್
  • ೬ ನೇ ಮಗಳು: ಅನುಷ್ಕಾ ಯಾದವ್ (ಧನ್ನು) - ಚಿರಂಜೀವ್ ರಾವ್ ಅವರನ್ನು ವಿವಾಹವಾದರು
  • ಕಿರಿಯ ಮಗಳು: ರಾಜ್ ಲಕ್ಷ್ಮಿ ಯಾದವ್ - ತೇಜ್ ಪ್ರತಾಪ್ ಸಿಂಗ್ ಯಾದವ್ ಅವರನ್ನು ವಿವಾಹವಾದರು

ಗಮನಿಸಿ: ರಾಹುಲ್ ಯಾದವ್ ಸಮಾಜವಾದಿ ಪಕ್ಷದ ಮಾಜಿ (ಎಮ್.ಎಲ್.ಸಿ) ಜಿತೇಂದ್ರ ಯಾದವ್ ಅವರ ಮಗ. ಜಿತೇಂದ್ರ ಅವರು ಮಾಜಿ ಸಂಸದ ಡಿಪಿ ಯಾದವ್ ಅವರ ಸೋದರಳಿಯ.

ಸ್ಥಾನಗಳು

[ಬದಲಾಯಿಸಿ]

ರಾಬ್ರಿ ದೇವಿ ಯಾದವ್ ಅವರು ೩ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.

ಸಂ. ಇಂದ ಗೆ ಸ್ಥಾನ ಪಕ್ಷ
೧. ೨೦೦೦ ೨೦೦೫ *ರಾಘೋಪುರದಿಂದ ಶಾಸಕ (೧ನೇ ಅವಧಿ) (ಉಪಚುನಾವಣೆ)
* ಬಿಹಾರ ಸರ್ಕಾರದಲ್ಲಿ ಮುಖ್ಯಮಂತ್ರಿ (೩ನೇ ಅವಧಿ).
ಆರ್‌ಜೆ‌ಡಿ
೨. ಫೆಬ್ರವರಿ ೨೦೦೫ ಅಕ್ಟೋಬರ್ ೨೦೦೫ ರಾಘೋಪುರದಿಂದ ಶಾಸಕ (೨ನೇ ಅವಧಿ). ಆರ್‌ಜೆ‌ಡಿ
೩. ೨೦೦೫ ೨೦೧೦ * ರಾಘೋಪುರದಿಂದ ಶಾಸಕ (೩ನೇ ಅವಧಿ).

* ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ
ಆರ್‌ಜೆ‌ಡಿ
೪. ೨೦೧೨ ೨೦೧೮ ಬಿಹಾರ ವಿಧಾನ ಪರಿಷತ್ತಿನಲ್ಲಿ ಎಂ‌ಎಲ್‌ಸಿ (೨ನೇ ಅವಧಿ). ಆರ್‌ಜೆ‌ಡಿ
೫. ೨೦೧೮ ಪ್ರಸ್ತುತ ಬಿಹಾರ ವಿಧಾನ ಪರಿಷತ್ತಿನಲ್ಲಿ ಎಂ‌ಎಲ್‌ಸಿ (೩ನೇ ಅವಧಿ). ಆರ್‌ಜೆ‌ಡಿ

ಉಲ್ಲೇಖಗಳು

[ಬದಲಾಯಿಸಿ]
  1. "RJD Mobbed: Rabri Devi Loses Both Her Seats". Archived from the original on 12 June 2018. Retrieved 10 June 2018.
  2. "Rabri loses in both seats". The Hindu. 24 November 2010.
  3. Mishra, Dipak (2017-02-17). "Proxy rule lessons from Bihar". The Telegraph. Archived from the original on 27 March 2017. Retrieved 2017-03-27.
  4. Ahmed, Farz (1997-08-11). "Dragged from the kitchen to Bihar Assembly, Rabri Devi learns politics fast : Cover Story - India Today". India Today. Archived from the original on 27 March 2017. Retrieved 2017-01-31.
  5. "rediff.com: The Rediff Interview/ Rabri Devi". Rediff.com. Archived from the original on 14 November 2005. Retrieved 2016-03-25.
  6. "Profile: Laloo to the Prasad Yadav". BBC. 2006-12-18. Archived from the original on 22 February 2007. Retrieved 2016-03-25.
  7. "rediff.com: The Rediff Interview/ Rabri Devi". Rediff.com. Archived from the original on 24 August 2005. Retrieved 2016-03-25.
  8. "Lalu paid off a debt to his wife handsomely". DNA. 19 November 2013.
  9. Thakurta, Paranjoy Guha (8 May 2004). "The durability of Laloo Prasad Yadav". Business Line. Archived from the original on 8 October 2012. Retrieved 24 February 2012.
  10. "Sons in Bihar cabinet, daughters wed to Mulayam kin - sprawling Lalu family tree spans party lines". The Print. 24 August 2022.
  11. "Rabri Devi". Hindustan Times. 7 February 2005. Archived from the original on 30 September 2007.
  12. "Rabri vividly recalls how she had boarded a steamer at Pahleja Ghat in Sonepur (Chapra) to reach the Patna residence soon after her marriage on March 18, 1974 when curfew had been imposed all over the district". Archived from the original on 24 December 2017. Retrieved 12 September 2016.
  13. Thakur, Sankarshan (27 March 2014). "A sibling swing at succession". The Telegraph. Archived from the original on 14 June 2014. Retrieved 2015-01-30.
  14. "Lalu's Swiss-educated son-in-law hops on Samajwadi cycle, chants growth mantra". Hindustan Times. 7 February 2017.