ವಿಷಯಕ್ಕೆ ಹೋಗು

ರಿಷಿ ಧವನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ರಿಷಿ ಧವನ್, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಬಲಗೈ ವೇಗದ ಬೌಲರ್ ಹಾಗು ಬಲಗೈ ಕೆಳ ಕ್ರಮಾಂಕದ ಬ್ಯಾಟ್ಸಮಾನ್. ರಣಜಿ ಟ್ರೋಫೀ‌‌ಯಲ್ಲಿ ಹಿಮಾಚಲ ಪ್ರದೇಶ ತಂಡಕ್ಕೆ ಆಡುತ್ತಾರೆ. ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕೊನೆಯ ಬಾರಿ ಕಿಂಗ್ಸ್ ೧೧ ಪಂಜಾಬ್ ತಂಡದ ಪರ ಆಡಿದ್ದಾರೆ.[]

ಆರಂಭಿಕ ಜೀವನ

[ಬದಲಾಯಿಸಿ]

ರಿಷಿ ಧವನ್ ಫೆಬ್ರವರಿ ೧೯, ೧೯೯೦ ರಂದು ಹಿಮಾಚಲ ಪ್ರದೇಶದ ಮಂಡಿ ನಗರದಲ್ಲಿ ಜನಿಸಿದರು. ತಮ್ಮ ೧೯ನೇ ವಯಸ್ಸಿನಲ್ಲಿ ಇವರು ಪ್ರಥಮ ದರ್ಜೆ ಕ್ರಿಕೆಟ್‍ಗೆ ಪಾದಾರ್ಪಣೆ ಮಾಡಿದರು. ಲಿಮಿಟೆಡ್ ಓವರ್ಸ್ ಕ್ರಿಕೆಟ್‍ಗೆ ಇವರನ್ನು ಬಹುತೇಕ ತಂಡಗಳು ಆರಿಸುತ್ತಾರೆ. ಇವರು ಬೌಲಿಂಗ್ ಆಲರೌಂಡರ್‌ ಆಗಿ ಪ್ರಸಿದ್ದರು.[][]

ವೃತ್ತಿ ಜೀವನ

[ಬದಲಾಯಿಸಿ]

ಐಪಿಎಲ್ ಕ್ರಿಕೆಟ್

[ಬದಲಾಯಿಸಿ]

ಏಪ್ರಿಲ್ ೦೯, ೨೦೧೩ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್ ವಿರುದ್ಧ ನಡೆದ ೧೦ನೇ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದಿಂದ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಪಾದಾರ್ಪಣೆ ಮಾಡಿದರು.[]

ಅಂತರರಾಷ್ಟ್ರೀಯ ಕ್ರಿಕೆಟ್

[ಬದಲಾಯಿಸಿ]

ಜನವರಿ ೧೭, ೨೦೧೬ರಂದು ಆಸ್ಟ್ರೇಲಿಯದಲ್ಲಿ ಅತೀಥೆಯರ ವಿರುದ್ದ ನಡೆದ ಮೂರನೆ ಏಕದಿನ ಪಂದ್ಯದ ಮೂಲಕ ರಿಷಿ ಧವನ್ ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪಾದಾರ್ಪನೆ ಮಾಡಿದರು. ನಂತರ ಜೂನ ೧೮, ೨೦೧೬ರಲ್ಲಿ ಹರಾರೆಯಲ್ಲಿ ಜಿಂಬಾಬ್ವೆ ವಿರುದ್ಧ ನಡೆದ ಮೊದಲ ಟಿ-೨೦ ಕ್ರಿಕೆಟ್ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಟಿ-೨೦ ಕ್ರಿಕೆಟ್ಗೆ ಪಾದಾರ್ಪನೆ ಮಾಡಿದರು.[][]

ಪಂದ್ಯಗಳು

[ಬದಲಾಯಿಸಿ]
  • ಏಕದಿನ ಕ್ರಿಕೆಟ್ : ೦೩ ಪಂದ್ಯಗಳು.[]
  • ಟಿ-೨೦ ಕ್ರಿಕೆಟ್ : ೦೧ ಪಂದ್ಯಗಳು.
  • ಐಪಿಎಲ್ ಕ್ರಿಕೆಟ್ : ೨೬ ಪಂದ್ಯಗಳು.


ವಿಕೇಟ್‍ಗಳು

[ಬದಲಾಯಿಸಿ]
  • ಏಕದಿನ ಪಂದ್ಯಗಳಲ್ಲಿ  : ೦೧[]
  • ಟಿ-೨೦ ಪಂದ್ಯಗಳಲ್ಲಿ  : ೦೧
  • ಐಪಿಎಲ್ ಪಂದ್ಯಗಳಲ್ಲಿ  : ೧೮

ಉಲ್ಲೇಖಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2017-03-10. Retrieved 2018-09-21.
  2. https://cricbuzz.com/profiles/6327/jaydev-unadkat
  3. https://timesofindia.indiatimes.com/topic/Rishi-Dhawan
  4. https://www.cricbuzz.com/live-cricket-scorecard/11874/mumbai-indians-vs-delhi-daredevils-10th-match-indian-premier-league-2013
  5. https://www.cricbuzz.com/live-cricket-scorecard/16610/zimbabwe-vs-india-1st-t20i-india-tour-of-zimbabwe-2016
  6. https://www.cricbuzz.com/live-cricket-scorecard/14879/australia-vs-india-3rd-odi-india-tour-of-australia-2016
  7. http://www.espncricinfo.com/india/content/player/290727.html
  8. https://www.news18.com/cricketnext/profile/rishi-dhawan/4610.html