ವಿಷಯಕ್ಕೆ ಹೋಗು

ರುಂಬಾ (ನೃತ್ಯ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರುಂಬಾ ಕೊಲಂಬಿಯಾ, ಆಫ್ರೋ-ಕ್ಯುಬನ್ ರುಂಬಾಗಳಲ್ಲಿ ಒಂದು

ರುಂಬಾ ಎಂಬುದು ನೃತ್ಯಕ್ಕೆ ಸಂಬಂಧಿಸಿದ ಪದವಾಗಿದ್ದು, ಎರಡು ವಿಭಿನ್ನ ಅರ್ಥಗಳನ್ನು ನೀಡುತ್ತದೆ.

ಮೊದಲಿಗೆ, ಇದು ಆಫ್ರಿಕನ್ ಶೈಲಿಯ ಕ್ಯೂಬನ್ ಪ್ರದರ್ಶನವೆಂಬ ಅರ್ಥವನ್ನು ನೀಡುತ್ತದೆ, ಇದು ಮೂಲತಃ ಆಫ್ರೋ-ಕ್ಯೂಬನ್ ಸಂಗೀತದ ರುಂಬಾ ಪ್ರಕಾರಕ್ಕೆ ಸಂಬಂಧಿಸಿದೆ. ಈ ರುಂಬಾದಲ್ಲಿ ಹಲವಾರು ಶೈಲಿಗಳಿವೆ, ಇದರಲ್ಲಿ ಅತ್ಯಂತ ಸಾಮಾನ್ಯವಾದುದೆಂದರೆ ಗುವಗುವಾಂಕೋ.[]

ಎರಡನೆಯದಾಗಿ, ಇದು ಬಾಲ್ ರೂಂ ನೃತ್ಯಗಳಲ್ಲಿ ಒಂದಕ್ಕೆ ಸೂಚಿತವಾಗುತ್ತದೆ ಇದು ಸಾಮಾಜಿಕ ನೃತ್ಯ ಪ್ರದರ್ಶನಗಳು ಹಾಗು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜರುಗುತ್ತದೆ. ಈ ನಿಟ್ಟಿನಲ್ಲಿ, ರುಂಬಾ ಐದು ಸ್ಪರ್ಧಾತ್ಮಕ ಅಂತಾರಾಷ್ಟ್ರೀಯ ಲ್ಯಾಟಿನ್ ನೃತ್ಯಗಳಲ್ಲಿ ಬಹಳ ನಿಧಾನಗತಿಯನ್ನು ಹೊಂದಿದೆ: ಪಾಸೋ ದೊಬ್ಲೆ, ಸಾಂಬಾ, ಚ-ಚ-ಚ ಹಾಗು ಜಿವೆ ಪ್ರಕಾರಗಳು ಇತರ ಶೈಲಿಗಳಾಗಿವೆ. ಈ ಬಾಲ್ ರೂಂ ರುಂಬಾವನ್ನು ಕ್ಯೂಬಾನಲ್ಲಿ ಬೊಲೇರೋ-ಸನ್ ಎಂದು ಕರೆಯಲ್ಪಡುವ ಲಯಬದ್ಧತೆಗೂ ಸಹ ನರ್ತನ ಮಾಡಲಾಗುತ್ತದೆ; ಅಂತಾರಾಷ್ಟ್ರೀಯ ಶೈಲಿಯು ದಂಗೆಗೆ ಮುಂಚಿನ ಅವಧಿಯಲ್ಲಿ ಕ್ಯೂಬಾದ ನೃತ್ಯ ಶಾಲೆಗಳಿಂದ ತನ್ನ ಹುಟ್ಟನ್ನು ಪಡೆದಿದೆ.[]

ರುಂಬಾ ತಾಳಗತಿ[].

ಕ್ಯೂಬನ್ ರುಂಬಾ

[ಬದಲಾಯಿಸಿ]

ಆಫ್ರೋ-ಕ್ಯೂಬನ್ ರುಂಬಾ, ಬಾಲ್ ರೂಂ ರುಂಬಾಕ್ಕಿಂತ ಲಯ ಹಾಗು ನೃತ್ಯ ಎರಡರಿಂದಲೂ ಸಂಪೂರ್ಣವಾಗಿ ಭಿನ್ನವಾಗಿದೆ. ಗುವಗುವಾಂಕೋ ವಿಭಾಗವನ್ನು ನೋಡಿ.

ಕ್ಯೂಬಾದ ಆಚೆಗಿನ ರುಂಬಾ

[ಬದಲಾಯಿಸಿ]

ಬಾಲ್ ರೂಂ ರುಂಬಾ ತನ್ನ ಚಲನೆಗಳು ಹಾಗು ಸಂಗೀತವನ್ನು ಸನ್ ನಿಂದ ಪಡೆದುಕೊಂಡಿದೆ, ಇದೆ ರೀತಿ ಸಾಲ್ಸಾಾ ಹಾಗು ಮಾಂಬೋ ಪ್ರಕಾರಗಳೂ ಸಹ. ಕ್ಯೂಬನ್ ಸಂಗೀತವನ್ನು ಪೀನಟ್ ವೆಂಡರ್ ಮೊದಲ ಬಾರಿಗೆ ಧ್ವನಿಮುದ್ರಣ ಮಾಡಿತು, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯಶಸ್ಸನ್ನು ಗಳಿಸಿತು:[] ಇದನ್ನು ರುಂಬಾ ಎಂದು ಹೆಸರು ಪಟ್ಟಿಯ ಮೇಲೆ ತಪ್ಪಾಗಿ ವಿವರಿಸಲಾಗಿತ್ತು, ಬಹುಶಃ ಸನ್ ಎಂಬ ಪದವು ಇಂಗ್ಲಿಷ್ ಭಾಷೆಯಲ್ಲಿ ಅರ್ಥವಾಗಲಿಕ್ಕಿಲ್ಲ ಎಂಬುದು ಇದರ ಕಾರಣವಾಗಿರಬಹುದು. ಈ ಹೆಸರು ಪಟ್ಟಿಯನ್ನು ಅಂಟಿಸಲಾಯಿತು, ಹಾಗು ರುಂಬಾ ಬಗೆಗಿನ ಗೀಳು ೧೯೩೦ರ ದಶಕದುದ್ದಕ್ಕೂ ಬೆಳವಣಿಗೆಯಾಯಿತು. ಈ ಮಾದರಿಯ ರುಂಬಾವನ್ನು ಅಮೆರಿಕ ಹಾಗು ಯುರೋಪ್ ನಲ್ಲಿ ೧೯೩೦ರಲ್ಲಿ ನೃತ್ಯ ಮಂದಿರದಲ್ಲಿ ಪರಿಚಯಿಸಲಾಯಿತು, ಹಾಗು ಇದು ಬದಾಯಿಸಬಹುದಾದ ಗತಿಯಿಂದ ವಿಶಿಷ್ಟವಾಗಿತ್ತು, ಕೆಲವೊಂದು ಬಾರಿ ಆಧುನಿಕ ಬಾಲ್ ರೂ ರುಂಬಾಕ್ಕಿಂತ ಸುಮಾರು ಎರಡು ಪಟ್ಟು ವೇಗವಾಗಿರುತ್ತದೆ.

ಬಾಲ್ ರೂಂ ರುಂಬಾ

[ಬದಲಾಯಿಸಿ]

ಆಧುನಿಕ ಅಂತಾರಾಷ್ಟ್ರೀಯ ಶೈಲಿಯ ರುಂಬಾ ನೃತ್ಯವು ನೃತ್ಯ ಗುರು ಮೊನ್ಸಿಯೇರ್ ಪಿಯೇರ್ರೆ (ಪಿಯೇರ್ರೆ ಜುರ್ಚರ್-ಮಾರ್ಗೊಲ್ಲೇ) ಅವರು ನಡೆಸಿದ ಅಧ್ಯಯನಗಳಿಂದ ಹುಟ್ಟಿಕೊಂಡಿದೆ, ಇವರು ಡೋರಿಸ್ ಲಾವೆಲ್ಲೆಯವರೊಂದಿಗೆ ಜಂಟಿಯಾಗಿ ಅಧ್ಯಯನ ನಡೆಸಿದರು.[][] ಅಂದು ಲಂಡನ್ ನವರಾಗಿದ್ದ ಪಿಯೇರ್ರೆ, ಕ್ಯೂಬಾಕ್ಕೆ ೧೯೪೭, ೧೯೫೧ ಹಾಗು ೧೯೫೩ರಲ್ಲಿ ಭೇಟಿ ನೀಡಿ ಆ ಸಮಯದಲ್ಲಿ ಕ್ಯೂಬನ್ನರು ಹೇಗೆ ಹಾಗು ಯಾವುದಕ್ಕೆ ನರ್ತಿಸುತ್ತಿದ್ದರು ಎಂಬುದನ್ನು ತಿಳಿಯಲು ಬರುತ್ತಾರೆ.[]

ಅಂತಾರಾಷ್ಟ್ರೀಯ ಬಾಲ್ ರೂಂ ರುಂಬಾ, ಪ್ರತಿ ನಿಮಿಷಕ್ಕೆ ಸುಮಾರು ೧೨೦ ಬಡಿತಗಳನ್ನು ಹೊಂದಿದ್ದ ಒಂದು ನಿಧಾನ ಗತಿಯ ನೃತ್ಯವಾಗಿದ್ದು, ಬೊಲೆರೋ-ಸನ್ ಎಂದು ಕ್ಯೂಬನ್ ಹಿರಿ ತಲೆಗಳು ಕರೆಯುತ್ತಿದ್ದ ಇದು ಸಂಗೀತ ಹಾಗು ನೃತ್ಯ ಎರಡಕ್ಕೂ ಹೊಂದಾಣಿಕೆಯಾಗುತ್ತದೆ. ಈ ಹೆಸರೇ ಏಕೆ ಎಂಬ ಪ್ರಶ್ನೆಗೆ ಸುಲಭದಲ್ಲಿ ಉತ್ತರ ದೊರೆಯುತ್ತದೆ, ಸೂಚಿಸಲು ಹಾಗು ಮಾರಾಟಗಾರಿಕೆ ಮಾಡಲು ರುಂಬಾ ಎಂಬ ಹೆಸರು ಸುಲಭವಾಗಿದೆ, ಆದಾಗ್ಯೂ ಅಷ್ಟೇನೂ ಕರಾರುವಾಕ್ಕಾಗಿಲ್ಲ; ನಂತರದಲ್ಲಿ ಇದೆ ರೀತಿಯಾದ ಕಾರಣವು ಸಾಲ್ಸಾ ಎಂಬ ಪದದ ಬಳಕೆಗೆ ಎಡೆ ಮಾಡಿಕೊಟ್ಟಿರಬಹುದು, ಇದು ಕ್ಯೂಬನ್ ಮೂಲದ ಅತ್ಯಂತ ಜನಪ್ರಿಯ ಸಂಗೀತಕ್ಕೆ ಬಳಸಲಾಗುವ ಒಟ್ಟಾರೆ ಪದ.

ಕ್ಯೂಬಾನಲ್ಲಿರುವ ಎಲ್ಲ ಸಾಮಾಜಿಕ ನೃತ್ಯಗಳು, ನಿಂತ ಕಾಲಿನ ಮೇಲೆ ಸೊಂಟವನ್ನು ತೂಗಾಡಿಸುವುದನ್ನು ಒಳಗೊಂಡಿದೆ, ಆದಾಗ್ಯೂ ಈ ಚಲನೆಯು ವೇಗವಾಗಿ ನರ್ತಿಸುವ ಸಾಲ್ಸಾನಲ್ಲಿ ವಿರಳವಾಗಿ ಕಂಡುಬರುತ್ತದೆ, ಇದನ್ನು ನಿಧಾನಗತಿಯ ಬಾಲ್ ರೂಂ ರುಂಬಾನಲ್ಲಿ ಹೆಚ್ಚು ಕಾಣಬಹುದು.[] ಸಾಧಾರಣವಾಗಿ, ಹೆಜ್ಜೆಗಳನ್ನು ಸಂಕ್ಷಿಪ್ತವಾಗಿ ಹಾಕಲಾಗುತ್ತದೆ ಹಾಗು ನೃತ್ಯವನ್ನು ಸಾಧಾರಣವಾಗಿ ಯಾವುದೇ ಏಳು ಹಾಗು ಬೀಳುಗಳಿಲ್ಲದೆ ಮಾಡಲಾಗುತ್ತದೆ. ಈ ಶೈಲಿಯು ಯಥಾರ್ಥವಾಗಿರುತ್ತದೆ, ಇದೆ ರೀತಿ ಹಲವಾರು ಭಂಗಿಗಳಲ್ಲಿರುವ ಕೈಗಳ ಮುಕ್ತ ಬಳಕೆಯನ್ನೂ ಸಹ ಮಾಡಲಾಗುತ್ತದೆ. ಮೂಲ ಚಲನೆಗಳು[], ಹವಾನಾದಲ್ಲಿ ದಂಗೆಗೆ ಮೊದಲಿನ ಅವಧಿಯಲ್ಲಿ ಗಮನಿಸಲಾದಂತಹ ನೃತ್ಯದ ಚಲನೆಗಳಿಗೆ ಹುಟ್ಟಿಕೊಂಡಿವೆ, ಹಾಗು ಅಲ್ಲಿಂದೀಚೆಗೆ ತನ್ನದೇ ಆದ ಚಲನೆಗಳನ್ನು ಅಭಿವೃದ್ಧಿಪಡಿಸಿಕೊಂಡಿದೆ. ಸ್ಪರ್ಧಾತ್ಮಕ ಚಲನೆಗಳು ಬಹಳ ಸಂಕೀರ್ಣವಾಗಿರುತ್ತದೆ, ಹಾಗು ಇಲ್ಲಿ ಸ್ಪರ್ಧೆಯ ನೃತ್ಯಗಳು ಸಾಮಾಜಿಕ ನೃತ್ಯದಿಂದ ಪ್ರತ್ಯೇಕಗೊಳ್ಳುತ್ತವೆ. ವಿವರಣೆಗಳನ್ನು ನೃತ್ಯ ತರಬೇತಿ ಸಂಸ್ಥೆಗಳ ವಿಷಯ ಸಂಗ್ರಹ ಹಾಗು ಗುಣಮಟ್ಟದ ಪಾಠಗಳಿಂದ ಪಡೆದುಕೊಳ್ಳಬಹುದು.[೧೦][೧೧][೧೨]

ಬಾಕ್ಸ್ ಮಾದರಿ ಚಲನೆ

[ಬದಲಾಯಿಸಿ]
ರುಂಬಾ ಬಾಕ್ಸ್ ಚಲನೆ

ಇದರಲ್ಲಿ ಒಂದು ಭಿನ್ನರೂಪವೂ ಸಹ ಇದೆ, ಕೆಲವೊಂದು ಬಾರಿ ಇದನ್ನು U.S.A.ನಲ್ಲಿ ನರ್ತಿಸಲಾಗುತ್ತದೆ, ಜೊತೆಗೆ ಬಾಕ್ಸ್-ಮಾದರಿಯ ಮೂಲ ಚಲಗಳನ್ನು ಒಳಗೊಂಡಿರುತ್ತದೆ. ಈ ರೂಪಾಂತರವನ್ನು ಸಾಧಾರಣವಾಗಿ ಸ್ಪರ್ಧೆಗಳಲ್ಲಿ ಅಂತಾರಾಷ್ಟ್ರೀಯ ಶೈಲಿಯಿಂದ ದುರಾಕ್ರಮಣ ಮಾಡಲಾಗುತ್ತದೆ, ಆದರೆ ಇದಕ್ಕೆ ಸಾಮಾಜಿಕ ಕೂಟಗಳಲ್ಲಿ ಹೆಜ್ಜೆ ಹಾಕಬಹುದು.

ಉಲ್ಲೇಖಗಳು‌‌

[ಬದಲಾಯಿಸಿ]
  1. ಒರೋವಿಯೋ, ಹೆಲಿಯೋ ೨೦೦೪. ಕ್ಯೂಬನ್ ಮ್ಯೂಸಿ ಫ್ರಮ್ ಏ ಟು ಝೆಡ್ . ಡ್ಯೂಕ್, ಡರ್ಹ್ಯಾಮ್ NC. ಪುಟ೧೯೧
  2. ಲಾವೆಲ್ಲೆ, ಡೋರಿಸ್ ೧೯೮೩. ಲ್ಯಾಟಿನ್ & ಅಮೆರಿಕನ್ ಡ್ಯಾನ್ಸಸ್ . ೩ನೇ ಆವೃತ್ತಿ, ಬ್ಲ್ಯಾಕ್, ಲಂಡನ್.
  3. ಬ್ಲಾಟ್ಟೆರ್, ಆಲ್ಫ್ರೆಡ್ (2007). ರೀವಿಸಿಟಿಂಗ್ ಮ್ಯೂಸಿಕ್ ಥಿಯರಿ: ಏ ಗೈಡ್ ಟು ದಿ ಪ್ರಾಕ್ಟಿಸ್, ಪುಟ.28. ISBN 0-415-97440-2.
  4. ಗಿರೋ, ರಡಮೇಸ್ ೨೦೦೭. Diccionario enciclopédico de la música en Cuba . ಲ ಹಬಾನ, ಸಂಪುಟ l ೪, ಪುಟ೧೪೭
  5. ಇಂಪೀರಿಯಲ್ ಸೊಸೈಟಿ ಆಫ್ ಟೀಚರ್ಸ್ ಆಫ್ ಡ್ಯಾನ್ಸಿಂಗ್ ೨೦೦೪. ೧೦೦ ಇಯರ್ಸ್ ಆಫ್ ಡ್ಯಾನ್ಸ್: ಏ ಹಿಸ್ಟರಿ ಆಫ್ ISTD ಏಕ್ಸಾಮಿನೆಶನ್ಸ್ ಬೋರ್ಡ್ . ಲಂಡನ್, ಪುಟ೬೨
  6. ಜ್ಯೂಲಿ ಮ್ಯಾಕ್ಮೇನ್ ರ ಗ್ಲಾಮರ್ ಅಡಿಕ್ಷನ್ , ಪಿಯೇರ್ರೆ ಮಾರ್ಗೊಲ್ಲೇಯವರ ವೃತ್ತಿಪರ ಹೆಸರು ಮಾನ್ಸಿಯೇರ್ ಪಿಯರ್ರೆ ; ಇವರು ಹಾಗು ಇವರ ಸಂಗಾತಿಯನ್ನು ಸಾಮಾನ್ಯವಾಗಿ "ಮಾನ್ಸಿಯೇರ್ ಪಿಯೇರ್ರೆ ಹಾಗು ಡೋರಿಸ್ ಲಾವೆಲ್ಲೆ" ಎಂದು ಸೂಚಿಸಲಾಗುತ್ತಿತ್ತು, ಈ ರೀತಿಯಾಗಿ ಕೆಲವು ಲೇಖಕರು ಪಿಯೇರ್ರೆ ಅವರ ಕಡೆ ಹೆಸರು ಲಾವೆಲ್ಲೆ ಎಂದು ತಪ್ಪಾಗಿ ಗ್ರಹಿಸಲಾಗುತ್ತಿತ್ತು ಎಂದು ಗಮನಿಸುತ್ತಾರೆ.
  7. ಲಾವೆಲ್ಲೆ, ಡೋರಿಸ್ ೧೯೮೩. ಲ್ಯಾಟಿನ್ & ಅಮೆರಿಕನ್ ಡ್ಯಾನ್ಸಸ್ . ೩ನೇ ಆವೃತ್ತಿ, ಬ್ಲಾಕ್, ಲಂಡನ್. ಪರಿಚಯವು ಪಿಯೇರ್ರೆಯವರ ಕ್ಯೂಬಾ ಭೇಟಿಯನ್ನು ಹೇಳುತ್ತದೆ, ಆದರೆ ನಿಖರವಾದ ದಿನಾಂಕಗಳನ್ನು ಒದಗಿಸುವುದಿಲ್ಲ.
  8. ಲೈರ್ಡ್, ವಾಲ್ಟರ್ ೨೦೦೩. ದಿ ಲೈರ್ಡ್ ಟೆಕ್ನೀಕ್ ಆಫ್ ಲ್ಯಾಟಿನ್ ಡ್ಯಾನ್ಸಿಂಗ್ . ಇಂಟರ್ನ್ಯಾಷನಲ್ ಡ್ಯಾನ್ಸ್ ಪಬ್ಲಿಕೇಷನ್ಸ್ ಲೀ. ಪುಟ ೯ರಲ್ಲಿ ಈ ರೀತಿ ನೀಡಲಾಗಿದೆ (ಹೆಜ್ಜೆಯನ್ನು ಪಕ್ಕಕ್ಕೆ ಹಾಕಿದ ನಂತರ) "ಈ ಕಾಲಿಗೆ ಸಂಪೂರ್ಣ ತೂಕವನ್ನು ವರ್ಗಾಯಿಸುವುದು, ಇದು ವಸ್ತಿಕುಹರವು ಬದಿಗೆ ಚಲಿಸಲು ಸಹಾಯ ಮಾಡುತ್ತದೆ ಹಾಗು ಮತ್ತೆ ಹಿಂದಕ್ಕೆ ತೆಗೆದುಕೊಳ್ಳಬೇಕಾಗುತ್ತದೆ ಈ ರೀತಿಯಾಗಿ ತೂಕವು ನಿಂತಿರುವ ಕಾಲಿನ ಪಾದದ ಸಮೀಪಕ್ಕೆ ಇರುವ ಅನುಭವವಾಗುತ್ತದೆ. ಆಸರೆಗಿರುವ ಕಾಲಿನ ಮಂಡಿಯು ಹಿಂದಕ್ಕೆ ಸುತ್ತಿಕೊಳ್ಳುತ್ತದೆ.;' ಈ ವಿವರಣೆಯು ಪ್ರಾಸಂಗಿಕವಾಗಿ ದೆಹಲ ಚಲನವಲನಗಳನ್ನು ಅಕ್ಷರಗಳಲ್ಲಿ ವಿವರಿಸುವ ಕಷ್ಟವನ್ನು ಸ್ಪಷ್ಟಪಡಿಸುತ್ತದೆ.
  9. ನೃತ್ಯ ತರಬೇತಿ ಸಂಸ್ಥೆಗಳು ನೃತ್ಯದಲ್ಲಿ ಗಳಿಸಿದ ಕಂಚು ಹಾಗು ಬೆಳ್ಳಿ ಪದಕಗಳು. (ವಿದ್ಯಕೀಯ ಪರೀಕ್ಷೆಗಳು (ನೃತ್ಯ))
  10. ಲಾವೆಲ್ಲೆ, ಡೋರಿಸ್ ೧೯೮೩. ಲ್ಯಾಟಿನ್ & ಅಮೆರಿಕನ್ ನೃತ್ಯಗಳು . ೩ನೇ ಆವೃತ್ತಿ, ಬ್ಲಾಕ್, ಲಂಡನ್.
  11. ಲೈರ್ಡ್, ವಾಲ್ಟರ್ ೨೦೦೩. ದಿ ಲೈರ್ಡ್ ಟೆಕ್ನೀಕ್ ಆಫ್ ಲ್ಯಾಟಿನ್ ಡ್ಯಾನ್ಸಿಂಗ್ . ಇಂಟರ್ನ್ಯಾಷನಲ್ ಡ್ಯಾನ್ಸ್ ಪಬ್ಲಿಕೇಷನ್ಸ್ ಲಿ.
  12. ಮ್ಯಾಕ್ ಮೈನ್ಸ್, ಜುಲಿಯೆಟ್ E. ೨೦೦೬. ಗ್ಲಾಮರ್ ಅಡಿಕ್ಷನ್: ಇನ್ಸೈಡ್ ದಿ ಅಮೆರಿಕನ್ ಬಾಲ್ ರೂಂ ಡ್ಯಾನ್ಸ್ ಇಂಡಸ್ಟ್ರಿ .


ಬಾಹ್ಯ ಕೊಂಡಿಗಳು‌‌

[ಬದಲಾಯಿಸಿ]