ವಿಷಯಕ್ಕೆ ಹೋಗು

ರೋಗಾಣು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪೋಷಕ ಜೀವಿಯೊಂದರೊಳಗೆ ಹೊಕ್ಕಿ ಅದರಲ್ಲಿ ರೋಗವನ್ನು ಉಂಟುಮಾಡುವ ಜೀವಿಗಳನ್ನು 'ರೋಗಾಣುಗಳು ಎಂದು ಕರೆಯಬಹುದು. ಪ್ರಾಣಿ ಅಥವಾ ಗಿಡವರ್ಗದ ಪೋಷಕ ಜೀವಿಗಳನ್ನು ಹೊಕ್ಕುವ ರೋಗಾಣುಗಳು ಅಧ್ಯಯನಕ್ಕೆ ಪ್ರಮುಖವಾದವಾದರೂ, ಏಕಾಣುಜೀವಿಗಳಲ್ಲೂ ರೋಗಾಣುಗಳು ಉಂಟಾಗುತ್ತವೆ.

ರೋಗಾಣು ಪ್ರಕಾರಗಳು

[ಬದಲಾಯಿಸಿ]

ಕೆಳಗಿನ ಪಟ್ಟಿಯಲ್ಲಿ ವಿವಿಧ ರೀತಿಯ ರೋಗಾಣುಗಳು, ಅವುಗಳ ರಚನ ವೈಶಿಷ್ಟ್ಯಗಳು ಮತ್ತು ಪೋಷಕ ಜೀವಿಯ ಮೇಲಿನ ಕೆಲವು ಪರಿಣಾಮಗಳನ್ನು ನಮೂದಿಸಲಾಗಿದೆ.

ರೋಗಾಣು ಉದಾಹರಣೆಗಳು ಮುಖ್ಯ ಪರಿಣಾಮಗಳು
ಬ್ಯಾಕ್ಟೀರಿಯ ಎಸ್ಚರೀಶಿಯ ಕೋಲಿ honeymoon cystitis or urinary tract infection (UTI), peritonitis, foodborne illness
ಮೈಕೊಬ್ಯಾಕ್ಟೀರಿಯಮ್ ಟ್ಯುಬರ್ಕ್ಯುಲೊಸಿಸ್ ಕ್ಷಯರೋಗ
Bacillus anthracis anthrax
ಸಾಲ್ಮೊನೆಲ್ಲ foodborne illness
Staphylococcus aureus toxic shock syndrome
Streptococcus pneumoniae pneumonia
Streptococcus pyogenes strep throat
ಹೆಲಿಕೊಬ್ಯಾಕ್ಟರ್ ಪೈಲೊರಿ ಹೊಟ್ಟೆ ಹುಣ್ಣು
Francisella tularensis tularemia
ವೈರಾಣು ಹೆಪಟೈಟಿಸ್ ವೈರಾಣುಗಳು (ಎ, ಬಿ, ಸಿ, ಡಿ, ಮತ್ತು ಇ) ಯಕೃತ್ತಿನ ರೋಗಗಳು
Influenza virus flu
Herpes simplex virus herpes
Molluscum contagiosum rash
ಹೆಚ್‍ಐವಿ ಏಡ್ಸ್
Protozoa Cryptosporidium cryptosporidiosis
Giardia lamblia giardiasis
ಪ್ಲಾಸ್ಮೋಡಿಯಮ್ ಮಲೇರಿಯ
Trypanosoma cruzi chagas disease
ಅಣಬೆ Pneumocystis jiroveci opportunistic pneumonia
Tinea ringworm
Candida candidiasis
Parasites Roundworm
Scabies
Tapeworm
Flatworm
Proteins Prions BSE, vCJD

ನಿರೋಧಕ ಶಕ್ತಿ ಬೆಳೆಸಿಕೊಂಡ ರಕ್ಕಸ ರೋಗಾಣುಗಳು

[ಬದಲಾಯಿಸಿ]
  • ರೋಗಾಣುಗಳು ಕಾಲಾಂತರದಲ್ಲಿ ನಿರೋಧಕಶಕ್ತಿಯನ್ನು ಬೆಳೆಸಿಕೊಂಡು ಬಂದಿವೆ. ಸಾಮಾನ್ಯವಾಗಿ ವಂಶವಾಹಿಯಲ್ಲಾಗುವ ಬದಲಾವಣೆಗಳಿಂದ ಇದು ಸಂಭವಿಸುತ್ತದೆ. ಆದರೆ, ಈಗಿನ ತುರ್ತುಸ್ಥಿತಿಗೆ ಮುಖ್ಯ ಕಾರಣವೆಂದರೆ, ಪ್ರತಿರೋಧಕಗಳ ದುರ್ಬಳಕೆ ಮತ್ತು ಅತಿಯಾದ ಬಳಕೆ ಹೆಚ್ಚಾಗಿದೆ ಎನ್ನುತ್ತಾರೆ ವಿಜ್ಞಾನಿಗಳು.
  • ಈ ಪ್ರವೃತ್ತಿ ಕೇವಲ ಮಾನವರಲ್ಲಿ ಮಾತ್ರ ಅಲ್ಲ, ಪ್ರಾಣಿಗಳು, ಸಸ್ಯಗಳಲ್ಲಿಯೂ ಈ ಪ್ರವೃತ್ತಿ ತ್ವರಿತಗೊಂಡಿದೆ. ಸಣ್ಣ ಪುಟ್ಟ ಕೆಮ್ಮು, ನೆಗಡಿ, ಶೀತ, ತಲೆನೋವಿಗೂ ಆ್ಯಂಟಿ ಬಯಾಟಿಕ್ಸ್‌ ತೆಗೆದುಕೊಳ್ಳುವುದು, ಪ್ರಾಣಿಗಳು ಅತಿ ಬೇಗನೆ ಬೆಳೆಯುವಂತೆ ಮಾಡಲು, ಸಸ್ಯಗಳು ಹೆಚ್ಚು ಇಳುವರಿ ನೀಡಲೆಂದು ಪೂರಕ ಪೋಷಕಾಂಶಗಳು, ಔಷಧಗಳನ್ನು ನೀಡುವುದರಿಂದ ಈ ಸಮಸ್ಯೆ ಸೃಷ್ಟಿಯಾಗಿದೆ.
  • ಅರವತ್ತು–ಎಪ್ಪತ್ತು ವರ್ಷಗಳ ಹಿಂದೆ ವೈರಸ್‌ನಂತಹ ಸೂಕ್ಷ್ಮಜೀವಿಗಳು ರೋಗ ತರಲು ಕಾರಣವಾಗುತ್ತವೆ ಎನ್ನುವುದನ್ನು ಜನರು ನಂಬಿಕೊಂಡಿದ್ದರು. ಆ ಸಂದರ್ಭದಲ್ಲಿ ವೈರಸ್‌ಗಳು ಹೇಗಿರುತ್ತವೆ ಎಂಬುದೂ ಜನರಿಗೆ ಗೊತ್ತಿರಲಿಲ್ಲ. ವೈರಸ್‌ಗಳ ಬಗ್ಗೆ ವಿಜ್ಞಾನ ಕ್ಷೇತ್ರದಲ್ಲಿ ಜನರ ಭಾವನೆಗಳೂ ಬದಲಾಗುತ್ತಲೇ ಬಂದಿವೆ. ಮೊದಲಿಗೆ ವಿಷದ ವಸ್ತು ಎಂದೂ, ಬಳಿಕ ಅವು ಜೀವರೂಪಗಳೆಂದು ಭಾವಿಸಿದ್ದರು. ಬಳಿಕ ಜೀವರಸಾಯನಿಕ ಎಂಬ ತೀರ್ಮಾನಕ್ಕೆ ಬಂದರು.
  • ಈಗ ಅವುಗಳನ್ನು ಜೀವ–ನಿರ್ಜೀವಿಗಳ ನಡುವಿನ ಮಧ್ಯಂತರ ರೂಪವೆಂದು ಪರಿಗಣಿಸಲಾಗಿದೆ. ಅವು ತಮ್ಮಷ್ಷಕ್ಕೆ ತಾವು ಪುನರುತ್ಪಾದನೆಗೊಳ್ಳುವ ಸಾಮರ್ಥ್ಯ ಪಡೆಯದಿದ್ದರೂ ಜೀವಕೋಶಗಳೊಳಗೆ ಸೇರಿದಾಗ ಪುನರುತ್ಪಾದನೆಗೊಳ್ಳುವ ಸ್ಥಿತಿಯನ್ನು ತಲುಪುತ್ತವೆ. ಅತಿಥೇಯ ಜೀವಿಯ ಸ್ವಭಾವವನ್ನು ಗಣನೀಯವಾಗಿ ಬದಲಿಸುತ್ತದೆ. ವಿಶ್ವವಿಖ್ಯಾತ ರೋಗಾಣು ನಿರೋಧಕ ವಿಜ್ಞಾನಿ, ಕೇಂಬ್ರಿಜ್‌ ವಿ.ವಿ. ಉಪಕುಲಪತಿ, ಸರ್‌ ಲೆಜೇಕ್‌ ಬಾರ್ಸಿವಿಜ್‌ ಸಂದರ್ಶನದಲ್ಲಿ ಹೇಳದ ಮಾತು.[]

ಉಲ್ಲೇಖ

[ಬದಲಾಯಿಸಿ]
  1. "ನಿರೋಧಕ ಶಕ್ತಿ ಬೆಳೆಸಿಕೊಂಡ ರಕ್ಕಸ ರೋಗಾಣುಗಳು". Archived from the original on 2016-10-01. Retrieved 2016-10-01.


"https://kn.wikipedia.org/w/index.php?title=ರೋಗಾಣು&oldid=1252401" ಇಂದ ಪಡೆಯಲ್ಪಟ್ಟಿದೆ