ವಿಷಯಕ್ಕೆ ಹೋಗು

ರೋಮೈನ್ ರೊಲ್ಯಾಂಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರೋಮೈನ್ ರೊಲ್ಯಾಂಡ್
ಜನನ(೧೮೬೬-೦೧-೨೯)೨೯ ಜನವರಿ ೧೮೬೬
Clamecy, Nièvre
ಮರಣ30 December 1944(1944-12-30) (aged 78)
Vézelay
ವೃತ್ತಿDramatist, essayist, Art historian, novelist
ರಾಷ್ಟ್ರೀಯತೆಫ್ರೆಂಚ್
ಕಾಲ1902–1944
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1915
ಬಾಳ ಸಂಗಾತಿMaria Pavlovna Kudachova

ರೋಮೈನ್ ರೊಲ್ಯಾಂಡ್ (29 ಜನವರಿ 1866 – 30 ಡಿಸೆಂಬರ್ 1944) ಫ್ರಾನ್ಸ್ನಾಟಕಕಾರ,ಕಲಾ ಚರಿತ್ರಕಾರ,ಕಾದಂಬರಿಕಾರ,ಪ್ರಬಂಧಕಾರ. ಇದರಿಗೆ ೧೯೧೫ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ದೊರೆತಿದೆ.ಪ್ರಶಸ್ತಿ ಘೋಷಣೆಯಲ್ಲಿ ರೋಲ್ಯಾಂಡ್‍ರವರ 'ಸಾಹಿತ್ಯದಲ್ಲಿ ಕಂಡು ಬರುವ ಉದಾತ್ತ ಆದರ್ಶವಾದ,ಸತ್ಯದ ಬಗೆಗಿನ ಪ್ರೀತಿ ಹಾಗೂ ಅನುಕಂಪದೊಂದಿಗೆ ವಿವಿಧ ಜನರನ್ನು ಅವರ ಸಾಹಿತ್ಯದಲ್ಲಿ ಚಿತ್ರಿಸಿದ ಪರಿಯನ್ನು' ಗುರುತಿಸಲಾಗಿದೆ.[]

ಬಾಲ್ಯ ಮತ್ತು ಜೀವನ

[ಬದಲಾಯಿಸಿ]

ರೋಲ್ಯಾಂಡ್ ಕ್ಲೆಮೆನ್ಸಿ ಎಂಬಲ್ಲಿ ಜನಿಸಿದರು. ಇವರ ಹಿರಿಯರಲ್ಲಿ ನಗರವಾಸಿ ಶ್ರೀಮಂತರು ಮತ್ತು ಹಳ್ಳಿಯಲ್ಲಿ ವಾಸಿಸುವ ರೈತರು ಸೇರಿದ್ದಾರೆ.ಇದರ ಬಗ್ಗೆ ಅವರೇ ತಮ್ಮ ಪುಸ್ತಕ ವಾಯೇಜ್ ಇಂಟೆರಿಯೂರ್ (೧೯೪೨)ರಲ್ಲಿ ಬರೆದುಕೊಂಡಂತೆ ಅವರೊಬ್ಬ ಪ್ರಾಚೀನ ವರ್ಗದ ಪ್ರತಿನಿಧಿ.ಚೋಲಾಸ್ ಬ್ರುಗ್ನೋನ್ (೧೯೧೯)ಎಂಬ ಕೃತಿಯಲ್ಲಿ ಈ ಹಿರಿಯರನ್ನು ಚಿತ್ರಿಸಿದ್ದಾರೆ. ಫ್ರಾನ್ಸಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗೆ ೧೮೮೬ರಲ್ಲಿ ಪ್ರವೇಶ ಪಡೆದ ಬಳಿಕ,ಪ್ರಾರಂಭದಲ್ಲಿ ತತ್ವಶಾಸ್ತ್ರ ಕಲಿಯಲು ಪ್ರಾರಂಭಿಸಿದರು. ಅವರ ಸ್ವಾತಂತ್ರ್ಯ ಪ್ರಜ್ಞೆ ಅವರನ್ನು ಯೂವುದೋ ಒಂದು ಆದರ್ಶಕ್ಕೆ ಕಟ್ಟು ಬೀಳದಂತೆ ತಡೆದುದರಿಂದ ಅವರು ತತ್ವಶಾಸ್ತ್ರದ ಅಧ್ಯಯನವನ್ನು ಅರ್ಧಕ್ಕೆ ನಿಲ್ಲಿಸುವಂತೆ ಮಾಡಿತು. ೧೮೮೯ರಲ್ಲಿ ಅವರು ಇತಿಹಾಸದಲ್ಲಿ ಪದವಿ ಪಡೆದ ನಂತರ ಎರಡು ವರ್ಷ ರೋಮ್ನಲ್ಲಿ ಕಳೆದರು. ಇಲ್ಲಿ ಅವರು ಪ್ರಸಿದ್ಧರಾದ ನಿಟ್ಜೆ ಮತ್ತು ವ್ಯಾಗ್ನರ್ ರವರ ಗೆಳೆಯ ಮಾಲ್ವಿದ ವಾನ್ ಮೈಸೆನ್‍ಬಗ್ ರವರೊಂದಿಗೆ ಮುಖಾಮುಖಿಯಾದರು. ಇದು ಮತ್ತು ಇಟಾಲಿಯನ್ ಮೇರುಕೃತಿಗಳ ಅಧ್ಯಯನ ಇವರ ಯೋಚನೆ ಮತ್ತು ಚಿಂತನೆಗಳ ಬೆಳವಣಿಗೆಯಲ್ಲಿ ನಿರ್ಣಾಯಕವಾಯಿತು.೧೮೯೫ರಲ್ಲಿ ಫ್ರಾನ್ಸಿಗೆ ಮರಳಿದ ಬಳಿಕ ಇವರು ದಿ ಒರಿಜಿನ್ ಆಫ್ ಮಾಡರ್ನ್ ಲಿರಿಕ್ ಥಿಯೇಟರ್ ಮತ್ತು ಎ ಹಿಸ್ಟರಿ ಆಫ್ ಒಪೇರ ಇನ್ ಯುರೋಪ್ ಬಿಫೋರ್ ಲಲ್ಲಿ ಅಂಡ್ ಸ್ಕಾರ್ಲೆಟ್ಟಿ ಎಂಬ ಪ್ರೌಢ ಪ್ರಬಂಧಗಳನ್ನು ಮಂಡಿಸಿ ಡಾಕ್ಟರೇಟ್ ಪದವಿಯನ್ನು ಪಡೆದರು.ಮುಂದಿನ ಎರಡು ದಶಕಗಳಲ್ಲಿ ಇವರು ಪ್ಯಾರಿಸ್ಸಿನ ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ಬೋಧಕರಾಗಿ ದುಡಿದರು.೧೯೦೨ ರಿಂದ ೧೯೧೧ರ ವರೆಗೆ ಎಕೊಲೆ ಡೆಸ್ ಹೌಟ್ಸ್ ಎಟ್ಯೂಡೆಸ್ ಸೊಶಿಯಾಲೆಸ್ ಎಂಬ ಸಂಗೀತ ಶಾಲೆಯ ನಿರ್ದೇಶಕರಾಗಿದ್ದರು.೧೯೦೩ರಲ್ಲಿ ಇವರನ್ನು ಸೊರ್ಬೊನ್ನೆಯ ಮ್ಯೂಸಿಕ್ ಹಿಸ್ಟರಿಯ ಪ್ರಥಮ ಮುಖ್ಯಸ್ಥರಾಗಿ ಆಯ್ಕೆಯಾದರು.[]

ಬರವಣಿಗೆ ಮತ್ತು ಪ್ರಭಾವ

[ಬದಲಾಯಿಸಿ]

ಇವರ ಪ್ರಥಮ ಪುಸ್ತಕ ೧೯೦೨ರಲ್ಲಿ ಪ್ರಕಟವಾಯಿತು.ಇವರು "ಜನರ ರಂಗಭೂಮಿ"ಯ ಪ್ರತಿಪಾದಕ.ಇದರ ಪ್ರಜಾಪ್ರಭುತ್ವೀಕರಣದಲ್ಲಿ ಇವರ ಕೊಡುಗೆ ಗಮನಾರ್ಹವಾದುದು. ಮಾನವತಾವಾದಿಯಾಗಿ ಇವರು ಭಾರತದ ತತ್ವಜ್ಞಾನದ ತೆಕ್ಕೆಗೆ ಬಿದ್ದರು. ರವೀಂದ್ರನಾಥ ಟಾಗೋರ್ ಮತ್ತು ಮಹಾತ್ಮ ಗಾಂಧಿಯವರಿಂದ ಹಾಗೂ ಸ್ವಾಮಿ ವಿವೇಕಾನಂದರ ವೇದಾಂತ ತತ್ವಜ್ಞಾನದ ಪುಸ್ತಕಗಳಿಂದ ತುಂಬಾ ಪ್ರಭಾವಿತರಾದರು.[] ಇವರು ಮೂಲತಃ ಬರವಣಿಗೆಗಾರರು.ಬರವಣಿಗೆ ಅವರ ಜೀವನಕ್ಕೆ ಸಾಕಾಗುವಷ್ಟು ಸಂಪಾದನೆಯನ್ನು ತಂದು ಕೊಡಲು ಪ್ರಾರಂಭಿಸಿದಾಗ ತಮ್ಮ ವಿಶ್ವವಿದ್ಯಾಲಯದ ಭೋಧಕ ವೃತ್ತಿಯನ್ನು ೧೯೧೨ರಲ್ಲಿ ಬಿಟ್ಟರು.ಜೀವನಪೂರ್ತಿ ಶಾಂತಿಪ್ರಿಯರಾಗಿದ್ದ ಇವರು ಪ್ರಥಮ ಮಹಾಯುದ್ಧವನ್ನು ವಿರೋಧಿಸಿದವರಲ್ಲಿ ಒಬ್ಬರು.೧೯೨೪ರಲ್ಲಿ ಮಹಾತ್ಮ ಗಾಂಧಿ ಬಗ್ಗೆ ಇವರು ಬರೆದ ಪುಸ್ತಕ ಗಾಂಧಿಯ ಖ್ಯಾತಿಯನ್ನು ಜಗತ್ತಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರವಹಿಸಿತು. ಗಾಂಧೀಜಿಯನ್ನು ಇವರು ೧೯೩೧ರಲ್ಲಿ ಸ್ವಿಟ್ಜರ್ಲ್ಯಾಂಡ್‍ನಲ್ಲಿ ಭೇಟಿಯಾದರು.

೧೯೨೮ರಲ್ಲಿ ರೋಲ್ಯಾಂಡ್ ಮತ್ತು ಹಂಗೇರಿಯ ವಿದ್ವಾಂಸ,ತತ್ವಜ್ಞಾನಿ ಎಡ್ಮಂಡ್ ಬೋರ್ಡೆಕ್ಸ್ ಸ್ಜೆಕೆಲಿಯ ಜತೆ ಅಂತರರಾಷ್ಟ್ರೀಯ ಬೈಯೋಜಿನಿಕ್ ಸೊಸೈಟಿಯನ್ನು ಸ್ಥಾಪಿಸಿದರು.ಇದರ ಮೂಲ ಉದ್ದೇಶ ಮನಸ್ಸು,ಶರೀರ ಮತ್ತು ಅತ್ಮದ ಏಕೀಕರಣದ ಬಗೆಗಿನ ಅವರ ಚಿಂತನೆಗಳ ವಿಸ್ತರಣೆ ಮತ್ತು ಪ್ರಚಾರ ಮಾಡುವುದಾಗಿತ್ತು. ೧೯೩೨ರಲ್ಲಿ ಯುದ್ಧ ಮತ್ತು ಫ್ಯಾಸಿಸಂ ವಿರುದ್ಧ ಮೂಜೆನ್‍ಬರ್ಗ್ ಸ್ಥಾಪನೆ ಮಾಡಿದ ಸಮಿತಿಯ ಮೊದಲ ಸದಸ್ಯರಲ್ಲಿ ಒಬ್ಬನಾಗಿದ್ದರು.[]

ಬರವಣಿಗೆಗೆ ತಮ್ಮ ಪೂರ್ಣ ಗಮನ ನೀಡಲು ರೋಲ್ಯಾಂಡ್ ಜಿನೀವಾದ ವಿಲ್ಲಿನ್ಯೂವೆಗೆ ಸ್ಥಳಾಂತರಗೊಂಡರು.೧೯೩೫ರಲ್ಲಿ ಮ್ಯಾಕ್ಸಿಂ ಗಾರ್ಕಿಯವರ ಆಹ್ವಾನದ ಮೇರೆಗೆ ಇವರು ಮಾಸ್ಕೋಗೆ ಭೇಟಿನೀಡಿದರು. ಈ ಭೇಟಿಯ ಸಮಯದಲ್ಲಿ ಜೋಸೆಫ್ ಸ್ಟಾಲಿನ್‍ನವರ ಭೇಟಿಯಾಯಿತು. ರೋಲ್ಯಾಂಡ್ ಸೋವಿಯತ್ ರಷಿಯಾದಲ್ಲಿ ಫ್ರಾನ್ಸ್‍ನ ಕಲಾವಿದರ ಅನಧಿಕೃತ ರಾಜಭಾರಿಯಾಗಿ ಸೇವೆ ಸಲ್ಲಿಸಿದರು. ಆದರೂ ಶಾಂತಿಪ್ರಿಯ ವ್ಯಕ್ತಿಯಾಗಿ ಸ್ವಾಲಿನ್‍ರವರ ದಬ್ಬಾಳಿಕೆ ಧೋರಣೆಯ ಬಗ್ಗೆ ಅವರಿಗೆ ಅಸಮಾಧಾನವಿತ್ತು. ಸ್ಟಾಲಿನ್ ತತ್ವ ವಿರೋಧಿ ಬರಹಗಾರ ವಿಕ್ಟರ್ ಸೆರ್ಗೆಯ ಬಂಧನ ಹಾಗೂ ನಿಕೊಲಾಯಿ ಬುಕಾರಿನ್ ರವರ ಕ್ಷಮೆಯ ವಿಷಯದಲ್ಲಿ ಸ್ಟಾಲಿನ್‍ನೊಂದಿಗೆ ಪತ್ರವ್ಯವಹಾರ ಮಾಡಿ ಚರ್ಚಿಸಲು,ಪ್ರಭಾವ ಬೀರಲು ಯತ್ನಿಸಿದರು.

ಅವಿಶ್ರಾಂತ ಬರಹಗಾರರಾಗಿದ್ದ ರೋಲ್ಯಾಂಡ್ ೧೯೪೦ರಲ್ಲಿ ತಮ್ಮ ಆತ್ಮ ಚರಿತ್ರಯನ್ನು ಬರೆದರು.ಖ್ಯಾತ ಸಂಗೀತಜ್ಞ ಲುಡ್ವಿಗ್ ವಾನ್ ಬೆಥೋವನ್ ಸಂಗೀತ ಬಗ್ಗೆ ಸಂಶೋಧನಾತ್ಮಕ ಬರವಣಿಗೆಯನ್ನು ಮುಗಿಸಿದ ಇವರು,ಧರ್ಮ ಮತ್ತು ಸಮಾಜವಾದವನ್ನು ತಮ್ಮ ನೆನಪುಗಳ ಮೂಲಕ ಪರೀಕ್ಷಿಸುವ ತಮ್ಮ ಪುಸ್ತಕ ಪೇಗೆ (೧೯೪೪)ನ್ನು ಬರೆದರು. ೧೯೪೪ರ ಡಿಸೆಂಬರ್ ೩೦ ರಂದು ಇವರು ನಿಧನಹೊಂದಿದರು.

ಉಲ್ಲೇಖಗಳು

[ಬದಲಾಯಿಸಿ]
  1. Liukkonen, Petri. "Romain Rolland". Books and Writers (kirjasto.sci.fi). Finland: Kuusankoski Public Library. Archived from the original on 10 February 2015. {{cite web}}: Italic or bold markup not allowed in: |website= (help); Unknown parameter |dead-url= ignored (help)
  2. Robert Henderson. "Romain Rolland", Grove Music Online, ed. L. Macy (accessed January 13 2014), grovemusic.com (subscription access).
  3. "ಆರ್ಕೈವ್ ನಕಲು". Archived from the original on 2008-09-04. Retrieved 2015-08-19.
  4. Ceplair, Larry (1987). Under the Shadow of War: Fascism, Anti-Fascism, and Marxists, 1918–1939. Columbia University Press. p. 80. ISBN 978-0-231-06532-0. Retrieved 6 March 2015.


ಬಾಹ್ಯ ಸಂಪರ್ಕಗಳು

[ಬದಲಾಯಿಸಿ]