ವಿಷಯಕ್ಕೆ ಹೋಗು

ಲಕ್ಕುಂಡಿ ಉತ್ಸವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗದಗ ಜಿಲ್ಲೆಯ ಸಾಂಸ್ಕೃತಿಕ ಲಕ್ಕುಂಡಿ ಉತ್ಸವ ಪ್ರತಿ ವರ್ಷ್ ಜನೆವರಿ ಅಥವಾ ಫೆಬ್ರವರಿಯಲ್ಲಿ ಜರುಗುತ್ತದೆ. ಇದು ಲಕ್ಕುಂಡಿಯ ಐತಿಹಾಸಿಕ ಹಾಗೂ ಶಿಲ್ಪಕಲೆ ಪ್ರೇಕ್ಷಣೀಯ ಸ್ಥಳದ ಗಥ ವೈಭವ ಮೆರೆಯತ್ತದೆ.

ಲಕ್ಕುಂಡಿ ದೇವಾಲಯಗಳ ತವರು. ಲಕ್ಕುಂಡಿ ಉತ್ಸವ ಲಕ್ಕುಂಡಿ ಗ್ರಾಮದಲ್ಲಿ ನಡೆಯುತ್ತದೆ. ವೇದಿಕೆಗಳಲ್ಲಿ ಸಂಗೀತ ನೃತ್ಯಸೇರಿದಂತೆ ವಿವಿಧ ಕಲಾ ಪ್ರಾಕಾರಗಳ ಕಾರ್ಯಕ್ರಮಗಳು ನಡೆಯುತ್ತವೆ.

ವೇದಿಕೆಯ ಕಾರ್ಯಕ್ರಮಗಳು:

ಸಂಗೀತ, ನೃತ್ಯ, ನಾಟಕ, ಜಾನಪದಕಲೆ, ಶಿಲ್ಪಕಲೆ, ತೈಲಚಿತ್ರ, ವಿಚಾರ ಸಂಕಿರಣ, ಕವಿಗೋಷ್ಟಿ,ಚಲನಚಿತ್ರ, ಸಾಕ್ಷ್ಯಚಿತ್ರ, ಹಾಸ್ಯ, ಮಕ್ಕಳ ಕಾರ್ಯಕ್ರಮ, ಸೇರಿದಂತೆ ವಿವಿಧ ಕಲಾ ಕಾರ್ಯಕ್ರಮಗಳು ನಡೆಯುತ್ತವೆ.

ಕಲಾವಿದರಿಗೆ ವೇದಿಕೆ:

ಸ್ಥಳೀಯ ಕಲಾವಿದರೂ ಸ್ಭೆರಿದಂತೆ ರಾಷ್ಟ್ರ- ಅಂತರರಾಷ್ಟ್ರೀಯ ಖ್ಯಾತಿಯ ಹೆಸರಾಂತ ಕಲಾವಿದರನ್ನು ಈ ಕಾರ್ಯಕ್ರಮಗಳಿಗೆ ಆಹ್ವಾನಿಸಲಾಗುತ್ತದೆ.


ತಲುಪುವದು: ಗದಗ ಜಿಲ್ಲೆಯ ಬೆಟಗೇರಿಯಿಂದ 11 ಕಿಮೀ ದೂರದಲ್ಲಿರುವ ಪ್ರಾಚೀನ ಪುಣ್ಯಕ್ಷೇತ್ರ ಲಕ್ಕುಂಡಿ.


ದೇವಾಲಯಗಳು:

ಕಾಶಿವಿಶ್ವೇಶ್ವರ ದೇವಾಲಯ, ಮಲ್ಲಿಕಾರ್ಜುನ ದೇವಾಲಯ, ಸೋಮೇಶ್ವರ ದೇವಾಲಯ, ನನ್ನೇಶ್ವರ ದೇವಾಲಯ, ಕುಂಬಾರೇಶ್ವರ ದೇವಾಲಯ, ವಿರೂಪಾಕ್ಷೇಶ್ವರ ದೇವಾಲಯ, ಸೂರ್ಯದೇವಾಲಯ ದೇವಾಲಯ, ನೀಲಕಂಠೇಶ್ವರ ದೇವಾಲಯ, ವೀರಭದ್ರ ದೇವಾಲಯ, ಚಂದ್ರಮೌಳೇಶ್ವರ ದೇವಾಲಯ, ಮಾಣಿಕೇಶ್ವರ ದೇವಾಲಯ ಇನ್ನೂ ಹಲವು ಕಲಾತ್ಮಕ ದೇವಾಲಯಗಳಿವೆ,

ಕರ್ನಾಟಕದ ಉತ್ಸವಗಳು: ಹಂಪಿ ಉತ್ಸವ, ಕದಂಬೋತ್ಸವ , ಧಾರವಾಡ ಉತ್ಸವ