ಲಕ್ಷ್ಮಿ ಮಿತ್ತಲ್
Lakshmi Mittal | |
---|---|
Born | |
Citizenship | India |
Alma mater | St. Xavier's College, Calcutta[೧] |
Occupation | Chairman & CEO of ArcelorMittal |
Children | Vanishaa Mittal Aditya Mittal |
ಲಕ್ಷ್ಮಿನಾರಾಯಣ್ (ಲಕ್ಷ್ಮಿನಿವಾಸ್) ಮಿತ್ತಲ್ (ರಾಜಸ್ಥಾನೀ: लक्ष्मी मित्तल; (ಜನನ: 15 ಜೂನ್ 1950)[೩] ಭಾರತೀಯ ಮೂಲದವರು steel tycoon ಹಾಗೂ ವಿಶ್ವದ ಅತಿದೊಡ್ಡ ಉಕ್ಕು ತಯಾರಿಕೆಯ ಉದ್ದಿಮೆಯಾದ ಅರ್ಸೆಲರ್‌ಮಿತ್ತಲ್‌ನ ಅಧ್ಯಕ್ಷ ಹಾಗೂ ಕಾರ್ಯಕಾರಿ ಮುಖ್ಯಾಧಿಕಾರಿ (ಸಿಇಒ).[೨]
ಅಧಿಕೃತ ಪ್ರಕಟಣೆಯಂತೆ 2010ರ ಜುಲೈ ತಿಂಗಳಲ್ಲಿ, ಲಕ್ಷ್ಮಿ ಮಿತ್ತಲ್ ಯುರೋಪ್‌ನಲ್ಲಿ ಅತಿ ಶ್ರೀಮಂತ ವ್ಯಕ್ತಿ ಹಾಗೂ ವಿಶ್ವದಲ್ಲಿ ಐದನೆಯ ಅತಿ ಶ್ರೀಮಂತ ವ್ಯಕ್ತಿ ಎನಿಸಿದ್ದಾರೆ.ಈ ಬಗ್ಗೆ 2010ರ ಜುಲೈ ತಿಂಗಳಲ್ಲಿ ಅಧಿಕೃತ ಮಾಹಿತಿ ಹೊರಬಿದ್ದಿದೆ.ಇವರ ವೈಯಕ್ತಿಕ ಸಂಪತ್ತು 28.7 ಶತಕೋಟಿ ಅಮೆರಿಕನ್ ಡಾಲರ್‌ಗಳು ಆಗಿದೆ. (19.3 ಶತಕೋಟಿ ಬ್ರಿಟಿಷ್ ಪೌಂಡ್‌ಗಳು).[೨] ಫೈನಾನ್ಷಿಯಲ್ ಟೈಮ್ಸ್ ಪತ್ರಿಕೆಯು 2006ರಲ್ಲಿ ಲಕ್ಷ್ಮಿ ಮಿತ್ತಲ್‌ಗೆ ವರ್ಷದ ವ್ಯಕ್ತಿ ಪ್ರಶಸ್ತಿ ನೀಡಿ ಗೌರವಿಸಿತು. ಟೈಮ್ ಪತ್ರಿಕೆಯ,2007ರ ಮೇ ತಿಂಗಳಿನ ಸಂಚಿಕೆಯಲ್ಲಿ 100 ಅತಿ ಪ್ರಭಾವಿ ವ್ಯಕ್ತಿಗಳಲ್ಲಿ ಲಕ್ಷ್ಮಿ ಮಿತ್ತಲ್ ಸಹ ಒಬ್ಬರು ಎಂದು ಪರಿಗಣಿಸಿತು.
ಲಕ್ಷ್ಮಿ ಮಿತ್ತಲ್ ಅವರು ಭಾರತೀಯ ಪ್ರಧಾನಿ ನೇತೃತ್ವದ ಸಾಗರೋತ್ತರ ಭಾರತೀಯರ ಅನಿವಾಸಿ ಭಾರತೀಯ ಜಾಗತಿಕ ಸಲಹಾ ಪರಿಷತ್ ಸದಸ್ಯರಾಗಿದ್ದಾರೆ.[೪] ಗೋಲ್ಡ್ಮನ್ ಸ್ಯಾಚ್ಸ್, ಇಎಡಿಎಸ್ ಹಾಗೂ ಐಸಿಐಸಿಐ ಬ್ಯಾಂಕ್[೫] ಸಂಸ್ಥೆಗಳಲ್ಲಿ ನಿರ್ದೇಶಕ ಹಾಗೂ ವಿಶ್ವ ಉಕ್ಕು ಸಂಘದ ಹಾಲಿ ಉಪಾಧ್ಯಕ್ಷರಾಗಿದ್ದಾರೆ. ಕಝಕ್‌ಸ್ತಾನದಲ್ಲಿರುವ ವಿದೇಶಿ ಹೂಡಿಕೆ ಪರಿಷತ್, ದಕ್ಷಿಣ ಆಫ್ರಿಕಾದಲ್ಲಿರುವ ಅಂತರರಾಷ್ಟ್ರೀಯ ಹೂಡಿಕೆ ಪರಿಷತ್, ವಿಶ್ವ ಆರ್ಥಿಕ ವೇದಿಕೆಯ ಅಂತರರಾಷ್ಟ್ರೀಯ ವಾಣಿಜ್ಯ ಪರಿಷತ್ ಹಾಗೂ ಅಂತರರಾಷ್ಟ್ರೀಯ ಕಬ್ಬಿಣ ಮತ್ತು ಉಕ್ಕು ಸಂಸ್ಥೆಯ ಕಾರ್ಯಕಾರಿ ಸಮಿತಿಗಳಲ್ಲಿ ಮಿತ್ತಲ್ ಸದಸ್ಯರಾಗಿದ್ದಾರೆ.[೬] ಕೆಲ್ಲೊಗ್ ವ್ಯವಸ್ಥಾಪನಾ ಶಿಕ್ಷಣ ಸಂಸ್ಥೆಯ ಸಲಹಾ ಮಂಡಳಿಯಲ್ಲಿ ಅವರು ಸದಸ್ಯರಾಗಿದ್ದಾರೆ. ಅಲ್ಲದೆ, ಕೋಲ್ಕತ್ತಾದ ಸೇಂಟ್ ಕ್ಸೇವಿಯರ್ಸ್ ಕಾಲೇಜ್ ಹಳೆಯ ವಿದ್ಯಾರ್ಥಿಗಳ ಸಂಘದ ಲಂಡನ್ ವಿಭಾಗದ ಸದಸ್ಯರಾಗಿದ್ದಾರೆ.
ಇಡೀ ವಿಶ್ವದ 6.8 ಶತಕೋಟಿಯಷ್ಟು ಜನಸಂಖ್ಯೆಯಲ್ಲಿ, 68 ಜನ ಅತಿ ಶಕ್ತಿಶಾಲಿ ವ್ಯಕ್ತಿಗಳ ಪಟ್ಟಿಯಲ್ಲಿ ಮಿತ್ತಲ್ 44ನೆಯ ಸ್ಥಾನದಲ್ಲಿದ್ದಾರೆ. ವಿಶ್ವದಲ್ಲಿ ತಯಾರಾಗುವ ಪ್ರತಿ ಐದು ಕಾರ್‌ಗಳಲ್ಲಿ ಒಂದು, ಲಕ್ಷ್ಮಿ ಮಿತ್ತಲ್ ಸ್ವಾಮ್ಯದ ಸಂಸ್ಥೆ ತಯಾರಿಸುವ ಉಕ್ಕಿನಿಂದ ತಯಾರಿಸಲಾಗುತ್ತಿದೆ. ಅವರ ಪುತ್ರಿ ವನೀಶಾ ಮಿತ್ತಲ್‌ರ ವಿವಾಹವು ವಿಶ್ವದ ದಾಖಲಿತ ಇತಿಹಾಸದಲ್ಲೇ ಅತಿ ಅದ್ದೂರಿಯಾದ ವಿವಾಹ ಸಮಾರಂಭವಾಗಿತ್ತು.[೭][೮]
ಆರಂಭಿಕ ಜೀವನ
[ಬದಲಾಯಿಸಿ]ಭಾರತ ದೇಶದ ರಾಜಸ್ಥಾನ ರಾಜ್ಯದಲ್ಲಿರುವ ಚೂರೂ ಜಿಲ್ಲೆಯ ಸದುಲ್ಪುರ್ ಗ್ರಾಮದಲ್ಲಿ ಬೆಳೆದರು. ಲಕ್ಷ್ಮಿ ನಿವಾಸ್ ಮಿತ್ತಲ್ ರಾಜಸ್ಥಾನದ ಮಾರ್ವಾಡಿ ಉದ್ಯಮಿಗಳ ಕುಟುಂಬದಲ್ಲಿ ಜನಿಸಿದರು. ಅವರದ್ದು ಶ್ರೀಮಂತ ಭಾರತೀಯ ಉಕ್ಕು ಉದ್ದಿಮೆದಾರರ ಕುಟುಂಬ - ಅವರ ತಂದೆ ಮೋಹನ್ ಲಾಲ್ ಮಿತ್ತಲ್ ನಿಪ್ಪನ್ ಡೆನ್ರೊ ಇಸ್ಪಾಟ್ ಉದ್ದಿಮೆ ನಡೆಸುತ್ತಿದ್ದರು. ಭಾರತದಲ್ಲಿ 1990ರ ದಶಕದ ತನಕ, ಕುಟುಂಬದ ಮುಖ್ಯ ಆಸ್ತಿಪಾಸ್ತಿಗಳೆಂದರೆ ನಾಗಪುರದಲ್ಲಿರುವ ಉಕ್ಕಿನ ಹಾಳೆ ತಯಾರಿಸಲು ಬಳಸಲಾಗುವ ಶೀತಲ-ಅಚ್ಚು ಗಿರಣಿ ಹಾಗೂ ಪುಣೆಯಲ್ಲಿರುವ ಮಿಶ್ರಿತ ಲೋಹ ಉಕ್ಕು ತಯಾರಿಕಾ ಉದ್ದಿಮೆಗಳಿದ್ದವು. ಇಂದು, ಮುಂಬಯಿಯ ಸನಿಹವಿರುವ ವಿಶಾಲ ಏಕೀಕೃತ ಉಕ್ಕು ತಯಾರಿಕಾ ಘಟಕ ಸೇರಿದಂತೆ, ಕುಟುಂಬದ ವಹಿವಾಟನ್ನು ಲಕ್ಷ್ಮಿನಿವಾಸ್‌ರ ಸಹೋದರರಾದ ಪ್ರಮೋದ್ ಮತ್ತು ವಿನೋದ್ ನಡೆಸುತ್ತಿದ್ದ್ದಾರೆ. ಆದರೆ ಲಕ್ಷ್ಮಿನಿವಾಸ್ ಈ ಉದ್ದಿಮೆಗಳೊಂದಿಗೆ ಯಾವುದೇ ಸಂಬಂಧ ಹೊಂದಿಲ್ಲ.[೯]
ಭಾರತದಲ್ಲಿರುವ ತಮ್ಮ ಕುಟುಂಬದ ಉಕ್ಕು ತಯಾರಿಕೆಯ ಕೈಗಾರಿಕೆಯಲ್ಲಿ ಕೆಲಸ ಮಾಡುವುದರೊಂದಿಗೆ ಮಿತ್ತಲ್ ತಮ್ಮ ವೃತ್ತಿ ಆರಂಭಿಸಿದರು. ಆಗ 1976ರಲ್ಲಿ, ತಮ್ಮ ಕುಟುಂಬವು ತನ್ನದೇ ಆದ ಉಕ್ಕಿನ ಉದ್ದಿಮೆ ಸ್ಥಾಪಿಸಿದಾಗ, ಅವರು ಅದರ ಅಂತರರಾಷ್ಟ್ರೀಯ ಅಂಗಸಂಸ್ಥೆಯ ವಿಭಾಗವನ್ನು ಸ್ಥಾಪಿಸ ಹೊರಟರು. ಇಂಡೊನೇಷ್ಯಾದಲ್ಲಿ ಪಾಳುಬಿದ್ದ ಒಂದು ಉಕ್ಕು ತಯಾರಿಕಾ ಘಟಕವೊಂದನ್ನು ಖರೀದಿಸುವ ಮೂಲಕ ಅಂತರರಾಷ್ಟ್ರೀಯ ಈ ವಿಭಾಗ ಆರಂಭವಾಯಿತು. ಕೆಲ ಕಾಲದ ನಂತರ, ಸ್ಥಿತಿವಂತ ಹಣಕಾಸು ವಹಿವಾಟುದಾರರ ಪುತ್ರಿ ಉಷಾರನ್ನು ಲಕ್ಷ್ಮಿನಿವಾಸ್ ವಿವಾಹವಾದರು. ತಮ್ಮ ತಂದೆ, ತಾಯಿ ಮತ್ತು ಸಹೋದರರೊಂದಿಗಿನ ತೀವ್ರ ಭಿನ್ನಾಭಿಪ್ರಾಯಗಳ ಪರಿಣಾಮವಾಗಿ, ತಮ್ಮದೇ ಆದ ಎಲ್‌ಎನ್‌ಎಂ ಗ್ರೂಪ್ ವಾಣಿಜ್ಯ ಉದ್ದಿಮೆಯನ್ನು 1976ರಲ್ಲಿ ಸ್ಥಾಪಿಸಿದರು. ಅಂದಿನಿಂದಲೂ ಈ ಉದ್ದಿಮೆ ವ್ಯಾಪಕವಾಗಿ ಬೆಳೆಯಲು ಲಕ್ಷ್ಮಿನಿವಾಸ್ ಕಾರಣರಾಗಿದ್ದಾರೆ. ಮಿತ್ತಲ್ ಸ್ಟೀಲ್ ಇಂದು ಜಾಗತಿಕ ಮಟ್ಟದಲ್ಲಿ ಉಕ್ಕು ತಯಾರಿಕಾ ಉದ್ದಿಮೆಯಾಗಿದೆ. ಹದಿನಾಲ್ಕು ದೇಶಗಳಲ್ಲಿ ಕಾರ್ಯಾಲಯಗಳು ಮತ್ತು ತಯಾರಿಕಾ ಘಟಕಗಳಿವೆ.
ಲಕ್ಷ್ಮಿನಿವಾಸ್ ಮಿತ್ತಲ್ ಏಕೀಕೃತ ಸಣ್ಣ-ಪ್ರಮಾಣದ ಉಕ್ಕು ತಯಾರಿಕಾ ಘಟಕಗಳ ಅಭಿವೃದ್ಧಿ, ಹಾಗೂ, ಉಕ್ಕು ತಯಾರಿಕೆಯ ಬದಲಿಕೆಗೆ ನೇರ ಸಂಕುಚಿತ ಕಬ್ಬಿಣ (ಡಿಆರ್‌ಐ) ಎಂಬ ತುಣುಕು ಬದಲಿ ವ್ಯವಸ್ಥೆಯ ಬಳಕೆಯ ಪ್ರವರ್ತಕರಾದರು. ಹೀಗೆ ಜಾಗತಿಕ ಉಕ್ಕು ಕೈಗಾರಿಕೆಯ ಏಕೀಕರಣ ಪ್ರಕ್ರಿಯೆ ಆರಂಭಿಸಿದರು. ಮಿತ್ತಲ್ ಸ್ಟೀಲ್ ವಿಶ್ವದಲ್ಲೇ ಅತಿದೊಡ್ಡ ಉಕ್ಕು ತಯಾರಿಕಾ ಉದ್ದಿಮೆಯಾಗಿದೆ. ಆಗ 2004ರಲ್ಲಿ ಇದು 42.1 ದಶಲಕ್ಷ ಟನ್‌ಗಳಷ್ಟು ಉಕ್ಕನ್ನು ತಯಾರಿಸಿ ಸಾಗಿಸಿ, 22 ಶತಕೋಟಿ ಅಮೆರಿಕನ್ ಡಾಲರ್‌ಗಳಿಗಿಂತಲೂ ಹೆಚ್ಚು ಲಾಭಾಂಶ ಗಳಿಸಿತ್ತು.
ಲಕ್ಷ್ಮಿನಿವಾಸ್ ಮಿತ್ತಲ್‌ರಿಗೆ 1996ರಲ್ಲಿ ನ್ಯೂಸ್ಟೀಲ್‌ನಿಂದ 'ವರ್ಷದ ಉಕ್ಕು ತಯಾರಕ'; 1998ರಲ್ಲಿ ಅತ್ಯುತ್ತಮ ವ್ಯಾಪಾರಿ ದೃಷ್ಟಿಕೋನ, ವ್ಯಾಪಾರಿ ಮನೋಭಾವ, ನಾಯಕತ್ವ ಹಾಗೂ ಜಾಗತಿ ಉಕ್ಕು ಅಭಿವೃದ್ಧಿ ಕ್ಷೇತ್ರದಲ್ಲಿ ಸಂಪಾದಿಸಿದ ಯಶಸ್ಸನ್ನು ಗಮನಿಸಿದ ಮೆಟಲ್ ಮಾರ್ಕೆಟ್ ಅಂಡ್ ಪೇಯ್ನ್‌ವೆಬರ್ಸ್ ವರ್ಲ್ಡ್ ಸ್ಟೀಲ್ ಡೈನಾಮಿಕ್ಸ್‌ನಿಂದ 'ವಿಲ್ಲಿ ಕೋರ್ಫ್ ಸ್ಟೀಲ್ ವಿಷನ್ ಪ್ರಶಸ್ತಿ'; ಹಾಗೂ 2004ರಲ್ಲಿ ಫಾರ್ಚೂನ್ ಪತ್ರಿಕೆಯಿಂದ '2004ರ ವರ್ಷದ ಯುರೋಪಿನ ಉದ್ದಿಮೆದಾರ' ಪ್ರಶಸ್ತಿಗಳು ಲಭಿಸಿವೆ. ಮಿತ್ತಲ್,2002ರಲ್ಲಿ ಅಂದಿನ ಬ್ರಿಟಿಷ್ ಪ್ರಧಾನಿ ಟೋನಿಬ್ಲೇರ್‌ರೊಂದಿಗಿನ ರಾಜಕೀಯ ವಿವಾದದಲ್ಲಿ ಶಾಮೀಲಾಗಿದ್ದರು. ಟೋನಿಬ್ಲೇರ್‌ರ ಲೇಬರ್ ಪಾರ್ಟಿಗೆ ಅವರು ದೇಣಿಗೆ ನೀಡಿದ್ದ ಪರಿಣಾಮವಾಗಿ, ಮಿತ್ತಲ್ ಪರ ವಾಣಿಜ್ಯ ವ್ಯಹಹಾರ ಕೊಡಿಸಲು ಬ್ಲೇರ್ ಮಧ್ಯಪ್ರವೇಶಿಸಿದ್ದರು. ಅವರು ಲೇಬರ್ ಪಾರ್ಟಿಗೆ ಎರಡು ದಶಲಕ್ಷ ಪೌಂಡ್‌ಗಳಷ್ಟು ದೇಣಿಗೆ ನೀಡಿದರು ಎಂದು ಆನಂತರ ಪ್ರಕಟಿಸಲಾಯಿತು. ತಮ್ಮ ಹುಟ್ಟೂರಿನಲ್ಲೂ ಸಹ ಧಾರ್ಮಿಕ,ದಾನ ನೀಡುವ ಕಾರ್ಯಚಟುವಟಿಕೆಗಳಲ್ಲಿನ ಸಹಾಯಾರ್ಥ ಚಟುವಟಿಕೆಗಳಲ್ಲಿಯೂ ಅವರು ಸಕ್ರಿಯರಾಗಿದ್ದಾರೆ.
ಕುಟುಂಬ
[ಬದಲಾಯಿಸಿ]ಲಕ್ಷ್ಮಿನಿವಾಸ್ ಮಿತ್ತಲ್‌ರ ತಂದೆ ಮೋಹನ್‌ಲಾಲ್ ಮಿತ್ತಲ್ ರಿಗೆ ಪ್ರಮೋದ್ ಮಿತ್ತಲ್ ಎಂಬ ಸಹೋದರರಿದ್ದಾರೆ. ಆದಿತ್ಯ ಮಿತ್ತಲ್ ಅರ್ಸೆಲರ್‌ಮಿತ್ತಲ್ ಉದ್ದಿಮೆಯಲ್ಲಿ ಪ್ರಮುಖ ಹಣಕಾಸು ಅಧಿಕಾರಿಯಾಗಿ (ಸಿಎಫ್‌ಒ) ಆಗಿದ್ದಾರೆ. ವನೀಷಾ ಮಿತ್ತಲ್ ಲಕ್ಷ್ಮಿನಿವಾಸ್‌ರ ಪುತ್ರಿ.
ಲಂಡನ್ 2012 ಒಲಿಂಪಿಕ್ಸ್ ಕ್ರೀಡಾಕೂಟ ಮತ್ತು ಪ್ಯಾರಾಲಿಂಪಿಕ್ ಕ್ರೀಡಾಕೂಟಗಳು
[ಬದಲಾಯಿಸಿ]ಅಧ್ಯಕ್ಷ (ಮುಖ್ಯಸ್ಥ ಮತ್ತು ಸಿಇಒ) ಲಕ್ಷ್ಮಿನಿವಾಸ್ ಮಿತ್ತಲ್ ನೇತೃತ್ವದಲ್ಲಿನ ಅರ್ಸೆಲರ್‌ಮಿತ್ತಲ್, 19.1 ದಶಲಕ್ಷ ಪೌಂಡ್ ಮೌಲ್ಯದ ಯೋಜನೆಯಲ್ಲಿ ಸುಮಾರು 16 ದಶಲಕ್ಷ ಪೌಂಡ್‌ಗಳಷ್ಟು ಧನಸಹಾಯ ಮಾಡಲಿದೆ. ಉಳಿದ 3.1 ದಶಲಕ್ಷ ಪೌಂಡ್‌ಗಳಷ್ಟು ನೆರವನ್ನು ಲಂಡನ್ ಅಭಿವೃದ್ಧಿ ನಿಯೋಗವು ಸಂಗ್ರಹಿಸಿ ಹೂಡಲಿದೆ. ಆದ್ದರಿಂದ, ಇದು ಗಮನಾರ್ಹ ಸಾಂಸ್ಕೃತಿ ಹೂಡಿಕೆ ಅಷ್ಟೇ ಅಲ್ಲ, ಇದು ಯಾವುದೇ ಒಲಿಂಪಿಕ್ ಕ್ರೀಡಾಕೂಟವೊಂದಕ್ಕೆ ಅತಿದೊಡ್ಡ, ಅವಿಸ್ಮರಣೀಯ ಕಾರ್ಯವೇ ಆಗಿದೆ. ಜೊತೆಗೆ, ಪೂರ್ವ ಲಂಡನ್ ಪ್ರದೇಶದ ಸುದೀರ್ಘ ಯೋಜನೆಗಳ ಅನುಷ್ಟಾನ ಮತ್ತು ಪುನರಾಭಿವೃದ್ಧಿಗಾಗಿ ಗಮನಾರ್ಹ ಹಣಕಾಸು ನೆರವನ್ನೂ ನೀಡಲಿದೆ.[೧೦]
ವಿಶ್ವದಲ್ಲಿ ಅತಿ ದೊಡ್ಡ ವಿನ್ಯಾಸ ನಿಯೋಗವಾಗಿರುವ ಅರ್ಸೆಲರ್‌ಮಿತ್ತಲ್ ಆರ್ಬಿಟ್ ಅತ್ಯಾಧುನಿಕ ತಂತ್ರವೈಜ್ಞಾನಿಕ ಮತ್ತು ವಾಸ್ತುಶೈಲಿಯ ತಂತ್ರಗಳನ್ನು ಬಳಸಿ ಯೋಜನೆಯಲ್ಲಿ ತೊಡಗಲಿದೆ. ಅರ್ಸೆಲರ್‌ಮಿತ್ತಲ್ ಒದಗಿಸಿದ ಉಕ್ಕಿನಿಂದ ನಿರ್ಮಿಸಲಾದ ಈ ನಿರ್ಮಾಣವು, ನಾಳಾಕಾರದ ಉಕ್ಕಿನ ಸತತ ಆವರ್ತಿಸುವ ಜಾಲಕ ಹೊಂದಿದೆ. ಈ ನಿರ್ಮಾಣದಲ್ಲಿರುವ ವಿಶೇಷ ವೇದಿಕೆಯಲ್ಲಿ ನಿಂತು, ಇಡೀ ಒಲಿಂಪಿಕ್ ಪಾರ್ಕ್ ಹಾಗೂ ಲಂಡನ್ ನಗರದ ಬಾನರೇಖೆಜ್ಕ್ಜ್ಕ್ಜ್ಕೀಉಜ್ಝುಇಹ್ಯುಯ್ಯನ್ನು ನೋಡಬಹುದಾಗಿದೆ.[೧೦]
ವ್ಯಕ್ತಿತ್ವ ಮತ್ತು ವೃದ್ಧಿಸುತ್ತಿರುವ ಸಂಪತ್ತು
[ಬದಲಾಯಿಸಿ]ಫೋರ್ಬ್ಸ್ ಪತ್ರಿಕೆಯ ಪ್ರಕಾರ 2010ರಲ್ಲಿ, ಲಕ್ಷ್ಮಿನಿವಾಸ್ ಮಿತ್ತಲ್ ವಿಶ್ವದ ಐದನೆಯ ಅತಿಶ್ರೀಮಂತ ವ್ಯಕ್ತಿ ಎಂದು ಪ್ರಕಟಿಸಿತು. ಅವರಲ್ಲಿ 28.7 ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ವೈಯಕ್ತಿಕ ಸಂಪತ್ತಿದೆ. 2009ಕ್ಕೆ ಹೋಲಿಸಿದರೆ, ಅವರ ಸಂಪತ್ತು ಸುಮಾರು ಒಂಬತ್ತು ಶತಕೋಟಿ ಅಮೆರಿಕನ್ ಡಾಲರ್‌ಗಳಷ್ಟು ವೃದ್ಧಿಸಿದೆ. ಇದರಿಂದಾಗಿ ಫೋರ್ಬ್ಸ್ ಶ್ರೇಯಾಂಕದಲ್ಲಿ ಮೂರು ಸ್ಥಾನಗಿಟ್ಟಿದ್ದಾರೆ.[೨]
ಫೋರ್ಬ್ಸ್ ಪತ್ರಿಕೆಯು,2009ರಲ್ಲಿ, 19.3 ಶತಕೋಟಿ ಅಮೆರಿಕನ್ ಡಾಲರ್ ವೈಯಕ್ತಿಕ ಸಂಪತ್ತು ಹೊಂದಿದ್ದ ಲಕ್ಷ್ಮಿನಿವಾಸ್ ಮಿತ್ತಲ್ ವಿಶ್ವದಲ್ಲಿ ಎಂಟನೆಯ ಅತಿ ಶ್ರೀಮಂತ ವ್ಯಕ್ತಿ ಎಂದು ಪ್ರಕಟಿಸಿತ್ತು.[೨]
ಫೋರ್ಬ್ಸ್ ಪತ್ರಿಕೆ ಯ ಪ್ರಕಾರ,2008ರಲ್ಲಿ ಮಿತ್ತಲ್ ವಿಶ್ವದಲ್ಲಿ ನಾಲ್ಕನೆಯ ಅತಿ ಶ್ರೀಮಂತ ವ್ಯಕ್ತಿ ಹಾಗೂ ಏಷ್ಯಾದಲ್ಲೇ ಅತಿ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದರು. ಅತಿ ಶ್ರೀಮಂತ ವ್ಯಕ್ತಿಗಳ ಪಟ್ಟಿಯ 2004ರ ಆವೃತ್ತಿಯಲ್ಲಿ ಮಿತ್ತಲ್ 61ನೆಯ ಸ್ಥಾನ ಹಾಗೂ 2003ರ ಆವೃತ್ತಿಯಲ್ಲಿ ಅವರು 62ನೆಯ ಸ್ಥಾನದಲ್ಲಿದ್ದರು. ವಿಶ್ವದ ಅತಿದೊಡ್ಡ ಉಕ್ಕಿನ ಉದ್ದಿಮೆ ಅರ್ಸೆಲರ್‌ಮಿತ್ತಲ್‌ನಲ್ಲಿ ಮಿತ್ತಲ್ ಕುಟುಂಬವು ತನ್ನ ನಿಯಂತ್ರಣದ ಬಹುಪಾಲು ಹೊಂದಿದೆ.[೧೧]
ಸಹಾಯಾರ್ಥ ಕಾರ್ಯಗಳು
[ಬದಲಾಯಿಸಿ]ಭಾರತವು ಸಿಡ್ನಿಯಲ್ಲಿ ನಡೆದ 2000 ಬೇಸಿಗೆ ಒಲಿಂಪಿಕ್ಸ್ ನಲ್ಲಿ ಕೇವಲ ಒಂದು ಪದಕ (ಕಂಚು), ಅಥೆನ್ಸ್ 2004 ಬೇಸಿಗೆ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿಯೂ ಸಹ ಒಂದೇ ಒಂದು ಪದಕ (ರಜತ) ಗಳಿಸಿದ್ದನ್ನು ಲಕ್ಷ್ಮಿನಿವಾಸ್ ಗಮನಿಸಿದರು. ಅವರು 9 ದಶಲಕ್ಷ ಅಮೆರಿಕನ್ ಡಾಲರ್ ಮೌಲ್ಯದ ಮಿತ್ತಲ್ ಚಾಂಪಿಯನ್ಸ್ ಟ್ರಸ್ಟ್ ಎಂಬ ಕ್ರೀಡಾ ಕೇಂದ್ರವನ್ನು ಸ್ಥಾಪಿಸಲು ನಿರ್ಧರಿಸಿದರು. ಇದರ ಮೂಲಕ, ವಿಶ್ವದಲ್ಲಿ ಅಗ್ರಸ್ಥಾನ ಗಳಿಸಬಲ್ಲ ಹತ್ತು ಜನ ಭಾರತೀಯ ಅಥ್ಲೀಟ್ ಪಟುಗಳಿಗೆ ತರಬೇತಿ ನೀಡುವ ಯೋಜನೆ ಹಾಕಿದರು.[೧೨] ಮಿತ್ತಲ್, ಅಭಿನವ್ ಭಿಂದ್ರಾರಿಗೆ 2008ರಲ್ಲಿ 1.5 ಕೋಟಿ ರೂಪಾಯಿಗಳ (15 ದಶಲಕ್ಷ ರೂಪಾಯಿಗಳು) ಬಹುಮಾನ ನೀಡಿ ಗೌರವಿಸಿದರು. ಆಭಿನವ್, 2008 ಬೀಜಿಂಗ್ ಒಲಿಂಪಿಕ್ಸ್ ಕ್ರೀಡಾಕೂಟದ ಷೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ ಸ್ವರ್ಣ ಪದಕ ಗಳಿಸಿಕೊಟ್ಟಿದ್ದಕ್ಕಾಗಿ ಮಿತ್ತಲ್ ಅವರಿಗೆ ಬಹುಮಾನ ನೀಡಿದ್ದರು.
ಬಿಬಿಸಿ ವಾಹಿನಿಯಲ್ಲಿ ಪ್ರಸಾರಗೊಂಡ ದಿ ಅಪ್ರೆಂಟೀಸ್ ಎಂಬ ಖ್ಯಾತನಾಮರ ವಿಶೇಷ ಕಾರ್ಯಕ್ರಮದ ಮೂಲಕ ಸಂಗ್ರಹಿಸಿದ ಸುಮಾರು 1 ದಶಲಕ್ಷ ಪೌಂಡ್‌ಗಳನ್ನು ಕಾಮಿಕ್ ರಿಲೀಫ್ 2007 ಗಾಗಿ ಹೊಂದಿಸಿದರು.
ಸುರಕ್ಷಿತ, ಬಹುಬಾಳಿಕೆ ಬರುವ ಉಕ್ಕು ತಯಾರಿಸಲು, ಅರ್ಸೆಲರ್‌ಮಿತ್ತಲ್ ಉದ್ದಿಮೆಯು ಬಹಳ ಸಕ್ರಿಯವಾದ ಸಿಎಸ್‌ಆರ್ (ಗ್ರಾಹಕ ಸೇವಾ ಸಂಬಂಧ) ವ್ಯವಸ್ಥೆಯನ್ನು ಹೊಂದಿದೆ. ಈ ಉದ್ದಿಮೆಯು ಅರ್ಸೆಲರ್‌ಮಿತ್ತಲ್ ಪ್ರತಿಷ್ಠಾನವನ್ನು ನಿರ್ವಹಿಸುತ್ತದೆ. ಅರ್ಸೆಲರ್‌ಮಿತ್ತಲ್ ಉದ್ದಿಮೆ ಹೊಂದಿರುವ ದೇಶಗಳಲ್ಲಿ ಅರ್ಸೆಲರ್‌ಮಿತ್ತಲ್ ಸಂಸ್ಥಾನವು ಹಲವು ವಿವಿಧ ಸಮುದಾಯ ಸೇವಾ ಯೋಜನೆಗಳಿಗೆ ಬೆಂಬಲ ನೀಡುತ್ತದೆ.
ಟೀಕೆಗಳು ಮತ್ತು ಆರೋಪಗಳು
[ಬದಲಾಯಿಸಿ]ಬಿಎಚ್‌ಎಸ್
[ಬದಲಾಯಿಸಿ]ಪೊಲೆಂಡ್ ದೇಶದಲ್ಲಿನ ಅತಿದೊಡ್ಡ ಉಕ್ಕಿನ ಉದ್ದಿಮೆ ಪಿಎಚ್ಎಸ್ ಸ್ಟೀಲ್ ಗ್ರೂಪ್‌ನ್ನು ಖಾಸಗೀಕರಣ ಮಾಡುವಂತೆ ಪೊಲೆಂಡ್ ಅಧಿಕಾರಿಗಳನ್ನು ಮನವೊಲಿಸಲು, ಲಕ್ಷ್ಮಿನಿವಾಸ್ ಮಿತ್ತಲ್ ಮರೆಕ್ ಡೊಕ್ನಲ್ ಸಲಹಾ ಸಂಸ್ಥೆಯ ಸೇವೆಗಳನ್ನು ಬಳಸಿಕೊಳ್ಳುವಲ್ಲಿ ಯಶಸ್ವಿಯಾದರು. ಬೇರೆ ಯಾವುದೋ ಒಂದು ವಿವಾದದಲ್ಲಿ, ರಷ್ಯನ್ ಮಧ್ಯವರ್ತಿಗಳ ಪರವಾಗಿ ಪೊಲೆಂಡ್ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇಲೆ ಮರೆಕ್‌ರನ್ನು ಬಂಧಿಸಲಾಯಿತು.[೧೩]
ಪಿಎಚ್‌ಎಸ್‌ನ್ನು 2004ರಲ್ಲಿ ಅರ್ಸೆಲರ್‌ಮಿತ್ತಲ್‌ಗೆ ಮಾರಾಟವಾದುದರ ಬಗ್ಗೆ ಪುನಃ ಪರಿಶೀಲಿಸಿ ಮಾತುಕತೆ ನಡೆಸುವ ಇಂಗಿತವಿದೆ ಎಂದು ಪೊಲಿಷ್ ಸರ್ಕಾರ 2007ರಲ್ಲಿ ಹೇಳಿಕೆ ನೀಡಿತ್ತು.[೧೪]
ಕಾರ್ಮಿಕರನ್ನು ಗುಲಾಮರಂತೆ ನಡೆಸಿಕೊಂಡ ಆರೋಪಗಳು
[ಬದಲಾಯಿಸಿ]ಕೆಲಸದ ವೇಳೆ ತಮ್ಮ ಗಣಿಗಳಲ್ಲಿ ಹಲವಾರು ಸಾವುನೋವುಗಳು ಸಂಭವಿಸಿದ ನಂತರ, ಮಿತ್ತಲ್ ಸಂಸ್ಥೆಯ ನೌಕರರು ಅವರ ವಿರುದ್ಧ 'ಗುಲಾಮ-ಶ್ರಮ' ಪದ್ಧತಿ ಅನುಸರಿಸಲಾಗುತ್ತದೆ ಎಂದು ಆರೋಪಿಸುತ್ತಾರೆ.[೧೫] ಕಜಕಸ್ತಾನದಲ್ಲಿರುವ ಗಣಿಗಳಲ್ಲಿ ಸರಿಯಾಗಿ ಕಾರ್ಯನಿರ್ವಹಿಸದ ಅನಿಲ ಶೋಧಕಗಳಿಂದಾಗಿ, 2004ರ ಡಿಸೆಂಬರ್ ತಿಂಗಳಲ್ಲಿ ಸ್ಫೋಟಗಳು ಸಂಭವಿಸಿ,23 ಮಂದಿ ಗಣಿ ಕಾರ್ಮಿಕರು ಮೃತರಾಗಿದ್ದರು.
ಮಿತ್ತಲ್ ವ್ಯವಹಾರ: 'ಪ್ರಭಾವಕ್ಕಾಗಿ ಹಣ'
[ಬದಲಾಯಿಸಿ]ಅಂದಿನ ಯುನೈಟೆಡ್ ಕಿಂಗ್ಡಮ್ ಪ್ರಧಾನಿ ಟೋನಿ ಬ್ಲೇಯ್ರ್ ಮತ್ತು ಮಿತ್ತಲ್ ನಡುವಿನ ಸಂಬಂಧವನ್ನು (ದಿ ಮಿತ್ತಲ್ ಅಫೇರ್) ಪ್ಲೇಯ್ಡ್ ಸಂಸದ ಆಡಮ್ ಪ್ರೈಸ್, 2002ರಲ್ಲಿ ಬಹಿರಂಗ ಮಾಡಿದಾಗ ದೊಡ್ಡ ವಿವಾದವುಂಟಾಯಿತು. ಇದನ್ನು 'ಗಾರ್ಬೇಜ್‌ಗೇಟ್' ಅಥವಾ ಪ್ರಭಾವಕ್ಕಾಗಿ ಹಣ (Cash for Influence) ಎಂದೂ ಇದು ಕುಖ್ಯಾತವಾಯಿತು.[೧೬][೧೭][೧೮] ಮಿತ್ತಲ್‌ರ ಎಲ್‌ಎನ್‌ಎಂ ಉಕ್ಕು ಉದ್ದಿಮೆಯು ಡಚ್ ಆಂಟಿಲ್ಸ್‌ನಲ್ಲಿ ನೋಂದಾಯಿಸಲಾಗಿದ್ದು, ತನ್ನ 100,000ಕ್ಕೂ ಹೆಚ್ಚು ಸಿಬ್ಬಂದಿ ಪೈಕಿ, ಯುನೈಟೆಡ್ ಕಿಂಗ್ಡಮ್‌ನಲ್ಲಿ 1%ಕ್ಕಿಂತಲೂ ಕಡಿಮೆಯಿತ್ತು. ರೊಮಾನಿಯಾ ದೇಶದ ಸರ್ಕಾರೀ ಸ್ವಾಮ್ಯದಲ್ಲಿರುವ ಉಕ್ಕು ಉದ್ದಿಮೆಗಳನ್ನು ಖರೀದಿಸಲು ಮಿತ್ತಲ್ ಟೋನಿ ಬ್ಲೇಯ್ರ್‌ರ ಸಹಯೋಗ ಕೋರಿದ್ದ ವಿಚಾರ ಬಯಲಾಯಿತು.[೧೮] ಬ್ಲೇಯ್ರ್ ರೊಮಾನಿಯಾ ಸರ್ಕಾರಕ್ಕೆ ಬರೆದ ಪತ್ರದಲ್ಲಿ, 'ಆ ಉಕ್ಕು ಸಂಸ್ಥೆಯನ್ನು ಖಾಸಗೀಕರಿಸಿ, ಮಿತ್ತಲ್‌ಗೆ ಮಾರಿದಲ್ಲಿ, ರೊಮಾನಿಯಾ ಯುರೋಪಿಯನ್ ಒಕ್ಕೂಟ ಸೇರುವ ಹಾದಿ ಸುಗಮ' ಎಂದಿತ್ತು. ಈ ಪತ್ರದ ಪ್ರತಿಯನ್ನು ಪ್ರೈಸ್ 'ಅದ್ಹೇಗೋ' ಪಡೆಯುವಲ್ಲಿ ಯಶಸ್ವಿಯಾದರು.[೧೬]
ಬ್ಲೇಯ್ರ್ ಸಹಿ ಹಾಕುವ ತುಸು ಮುಂಚೆ, ಮಿತ್ತಲ್ ಒಬ್ಬ 'ಆಪ್ತ ಸ್ನೇಹಿತ' ಎಂಬ ಒಂದು ಪಂಕ್ತಿಯನ್ನು ತೆಗೆಯಲಾಯಿತು.[೧೮]
ಕ್ವೀನ್ಸ್ ಪಾರ್ಕ್ ರೇಂಜರ್ಸ್
[ಬದಲಾಯಿಸಿ]ಇತ್ತೀಚೆಗೆ, ಬಾರ್ಕ್ಲೇಸ್ ಪ್ರೀಮಿಯರ್ಷಿಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಆಡುತ್ತಿದ್ದ ವಿಗ್ಯಾನ್ ಮತ್ತು ಎವರ್ಟನ್ ತಂಡಗಳನ್ನು ಖರೀದಿಸಿ, ನಂತರ ಮಾರಲು ಮಿತ್ತಲ್ ಪ್ರಮುಖ ಪೈಪೋಟಿದಾರರಾಗಿದ್ದರು. ಆದರೆ, ಮಿತ್ತಲ್ ಪರಿವಾರವು ಫ್ಲಾವಿಯೊ ಬ್ರಯಾಟೋರ್ ಮತ್ತು ಮಿತ್ತಲ್‌ರ ಸ್ನೇಹಿತ ಬರ್ನೀ ಎಕ್ಲೆಸ್ಟೋನ್‌ರೊಂದಿಗೆ ಸೇರಿ, ಒಟ್ಟಿಗೆ ಕ್ವೀನ್ಸ್ ಪಾರ್ಕ್ ರೇಂಜರ್ಸ್ ಫುಟ್ಬಾಲ್ ಕ್ಲಬ್‌ನಲ್ಲಿ 20%ರಷ್ಟು ಪಾಲು ಕೊಂಡರೆಂದು 2007ರ ಡಿಸೆಂಬರ್ 20ರಂದು ಘೋಷಿಸಲಾಯಿತು.[೧೯] ಹೂಡಿಕೆಯ ಅಂಗವಾಗಿ, ಮಿತ್ತಲ್‌ರ ಅಳಿಯ ಅಮಿತ್ ಭಾಟಿಯಾ ತಂಡದ ನಿರ್ದೇಶಕ ಮಂಡಳಿಯ ಸದಸ್ಯರಾದರು. ದುಸ್ಥಿತಿಯಲ್ಲಿರುವ ಈ ತಂಡದಲ್ಲಿ ಒಟ್ಟಾರೆ ಹೂಡಿಕೆಯಿಂದಾಗಿ, ಇಂಗ್ಲಿಷ್ ಫುಟ್ಬಾಲ್ ಕ್ಷೇತ್ರದಲ್ಲಿ ಹೂಡುತ್ತಿರುವ ಹಲವು ಶ್ರೀಮಂತ ವ್ಯಕ್ತಿಗಳ ಪಟ್ಟಿಗೆ ಮಿತ್ತಲ್ ಸಹ ಸೇರಿ, ರೊಮನ್ ಅಬ್ರಾಮೊವಿಚ್‌ರಂತಹ ಗಣ್ಯರನ್ನು ಅನುಸರಿಸುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದವು.[೨೦]
ಫ್ಲೇವಿಯೊ ಬ್ರಯಟೊರ್, 2010ರ ಫೆಬ್ರವರಿ 19ರಂದು ಕ್ಯೂಪಿಆರ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ತಂಡದಲ್ಲಿನ ತಮ್ಮ ಪಾಲುಗಳೆಲ್ಲವನ್ನೂ ಮಿತ್ತಲ್‌ಗೆ ಮಾರಿದರು. ಇದರಿಂದಾಗಿ ಮಿತ್ತಲ್ ಏಕೈಕ ಅತಿಹೆಚ್ಚು ಪಾಲು ಹೊಂದಿರುವವರಾದರು.[೨೧]
ಪರಿಸರಕ್ಕೆ ಹಾನಿ
[ಬದಲಾಯಿಸಿ]ಐರ್ಲೆಂಡ್‌ನ ಬಂದರು ನಗರ ಕೋರ್ಕ್‌ನಲ್ಲಿರುವ ಐರಿಷ್ ಉಕ್ಕು ತಯಾರಿಕಾ ಘಟಕವನ್ನು ಮಿತ್ತಲ್ ಸರ್ಕಾರದಿಂದ ಔಪಚಾರಿಕವಾಗಿ ಒಂದು ಪೌಂಡ್ ಹಣ ನೀಡಿ ಕೊಂಡರು. ಮೂರು ವರ್ಷಗಳ ನಂತರ, ಅಂದರೆ 2001ರಲ್ಲಿ ಅದನ್ನು ಮುಚ್ಚಲಾಯಿತು. ಆಗ 400 ಮಂದಿ ಸಿಬ್ಬಂದಿ ಬೀದಿಪಾಲಾದರು. ಆ ಉದ್ದಿಮೆಯಿದ್ದ ಸ್ಥಳದಿಂದಾಗಿ ಪರಿಸರೀಯ ವಿಚಾರಗಳಿಂದಾಗಿ ಬಹಳಷ್ಟು ಟೀಕೆಗಳು ಕೇಳಿಬಂದವು. ಕೋರ್ಕ್ ಬಂದರನ್ನು ಶುಚಿಗೊಳಿಸಲು ಪರಿಹಾರ ಧನ ನೀಡುವಂತೆ ಮಾಡಲು, ಸರ್ಕಾರವು ಉಚ್ಚನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿ, ವಿಫಲವಾಯಿತು. ಶುಚಿಗೊಳಿಸುವ ವೆಚ್ಚ ಸುಮಾರು 70 ದಶಲಕ್ಷ ಯುರೋಗಳು ಎಂದು ಅಂದಾಜು ಮಾಡಲಾಗಿತ್ತು.[೨೨]
ವೈಯಕ್ತಿಕ ಜೀವನ
[ಬದಲಾಯಿಸಿ]ಮಿತ್ತಲ್ ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿ ವಾಸವಾಗಿದ್ದಾರೆ. ಮಿತ್ತಲ್ 18-19 ಕೆನ್ಸಿಂಗ್ಟನ್ ಪ್ಯಾಲೆಸ್ ಗಾರ್ಡನ್ಸ್ ಸ್ವತ್ತನ್ನು 2004ರಲ್ಲಿ ಫಾರ್ಮುಲಾ ಒನ್ ಒಡೆಯ ಬರ್ನೀ ಎಕ್ಲೆಸ್ಟೋನ್‌ರಿಂದ 57 ದಶಲಕ್ಷ ಪೌಂಡ್ (128 ದಶಲಕ್ಷ ಅಮೆರಿಕನ್ ಡಾಲರ್) ಬೆಲೆಗೆ ಕೊಂಡರು. ಇದು ಆ ಕಾಲದಲ್ಲಿ ಅತಿ ದುಬಾರಿ ಮನೆಯಾಗಿತ್ತು.[೨೩] ಲಂಡನ್‌ನ ಕೆನ್ಸಿಂಗ್ಟನ್‌ನಲ್ಲಿರುವ ಮಿತ್ತಲ್ ಮನೆಯು, ತಾಜ್ ಮಹಲ್‌ಗೆ ಒದಗಿಸುತ್ತಿದ್ದ ಕಲ್ಲುಗಣಿಯಿಂದ ತರಿಸಲಾದ ಹಾಲುಗಲ್ಲುಗಳಿಂದ ಸುಸಜ್ಜಿತವಾಗಿದೆ. ತಮ್ಮಲ್ಲಿರುವ ಅತಿಯಾದ ಸಂಪತ್ತಿನ ಪ್ರದರ್ಶನತೋರುವವರನ್ನು 'ತಾಜ್ ಮಿತ್ತಲ್' ಎಂದು ಉಲ್ಲೇಖಿಸಲಾಗಿದೆ.[೨೪] ಇವರ ವಿಶಾಲ ಮನೆಯಲ್ಲಿ 12 ವಿಶ್ರಾಂತಿ ಕೋಣೆಗಳು, ಒಂದು ಒಳಾಂಗಣ ಈಜುಕೊಳ, ತುರ್ಕೀ ಶೈಲಿಯ ಸ್ನಾನಗೃಹಗಳು ಮತ್ತು 20 ಕಾರ್‌ಗಳು ನಿಲ್ಲಿಸಬಹುದಾದ ನಿಲುಗಡೆ ಸ್ಥಳವಿದೆ.[೨೫]
ಹಣಕಾಸು ವ್ಯವಸ್ಥಾಪಕ ನೋಮ್ ಗಾಟ್ಸ್‌ಮನ್ ಮುಂಚೆ ತಮ್ಮ ಸ್ವಾಮ್ಯದಲ್ಲಿದ್ದ, ಕೆನ್ಸಿಂಗ್ಟನ್ ಗಾರ್ಡನ್ಸ್‌ನಲ್ಲಿರುವ ನಂ. 6 ಪ್ಯಾಲೆಸ್ ಗ್ರೀನ್ಸ್ ಸ್ವತ್ತನ್ನು ಮಿತ್ತಲ್ ತಮ್ಮ ಪುತ್ರ ಆದಿತ್ಯ ಮಿತ್ತಲ್‌ಗಾಗಿ 117 ದಶಲಕ್ಷ ಪೌಂಡ್ ಬೆಲೆಗೆ ಕೊಂಡರು. ಆದಿತ್ಯ ಮಿತ್ತಲ್, ಜರ್ಮನ್ ಮೂಲದ ಐಷಾರಾಮಿ ಉಡುಪು ವಿನ್ಯಾಸಕ ಉದ್ದಿಮೆ ಎಸ್ಕಾಡಾ ಸಂಸ್ಥೆಯ ಒಡತಿ ಹಾಗೂ ಆಡಳಿತ ಮಂಡಳಿಯಲ್ಲಿ ನಿರ್ದೇಶಕಿ ಮೇಘಾ ಮಿತ್ತಲ್‌ರೊಂದಿಗೆ ವಿವಾಹವಾಗಿದ್ದಾರೆ.
ಮುಂಚೆ ಫಿಲಿಪಿನೊ ದೂತಾವಾಸ ಕೇಂದ್ರವಾಗಿದ್ದ ಕೆನ್ಸಿಂಗ್ಟನ್ ಗಾರ್ಡನ್ಸ್‌ನಲ್ಲಿರುವ ನಂ. 9ಅ ಪ್ಯಾಲೇಸ್ ಗ್ರೀನ್ಸ್ ಸ್ವತ್ತನ್ನು 2008ರಲ್ಲಿ ತಮ್ಮ ಪುತ್ರಿ ವನೀಷಾ ಮಿತ್ತಲ್-ಭಾಟಿಯಾಗಾಗಿ 70 ದಶಲಕ್ಷ ಪೌಂಡ್ ಬೆಲೆಗೆ ಕೊಂಡರು. ವನೀಷಾ, ಉದ್ಯಮಿ ಹಾಗೂ ಲೋಕೋಪಕಾರಿ ಅಮಿತ್ ಭಾಟಿಯಾ ಅವರನ್ನು ವಿವಾಹವಾಗಿದ್ದಾರೆ.
ಕೆನ್ಸಿಂಗ್ಟನ್ ಪ್ಯಾಲೇಸ್ ಗಾರ್ಡನ್ಸ್‌ನಲ್ಲಿ 'ಬಿಲಿಯನೇಯರ್ಸ್ ರೋ'ದಲ್ಲಿರುವ, ಒಟ್ಟು 500 ದಶಲಕ್ಷ ಪೌಂಡ್ ಮೌಲ್ಯದ ಮೂರು ಅತ್ಯುತ್ಕೃಷ್ಠ ಸ್ವತ್ತುಗಳಿಗೆ ಮಿತ್ತಲ್ ಒಡೆಯರಾಗಿದ್ದಾರೆ. [೨೬]
46B, ದಿ ಬಿಷಪ್ಸ್ ಅವೆನ್ಯೂದಲ್ಲಿರುವ ಸಮ್ಮರ್ ಪ್ಯಾಲೇಸ್ ಎಂಬ ಮನೆಗೂ ಸಹ ಮಿತ್ತಲ್ ಒಡೆಯರು. ಇದು 40 ದಶಲಕ್ಷ ಪೌಂಡ್‌ಗಳ ಬೆಲೆಗಾಗಿ ಮಾರಾಟಕ್ಕಿದೆಯೆಂದು ವರದಿಯಾಗಿದೆ.
ಭಾರತದ ರಾಜಧಾನಿ ಹೊಸದೆಹಲಿಯಲ್ಲಿರುವ ಔರಂಗಝೇಬ್ ರಸ್ತೆಯಲ್ಲಿ ನಿವೇಶನ 22ರಲ್ಲಿರುವ ವಸಾಹತು ಕಾಲದ ಬಂಗಲೆಯೊಂದನ್ನು 2005ರಲ್ಲಿ ಕೊಂಡು, ಅದನ್ನು ಮನೆಯನ್ನಾಗಿ ಪುನರ್ನಿರ್ಮಿಸಿದರು. ಈ ರಸ್ತೆಯು ಬಹಳ ಉತ್ಕೃಷ್ಠ, ಏಕೆಂದರೆ ಇಲ್ಲಿ ಹಲವು ದೂತಾವಾಸಗಳು ಹಾಗೂ ಲಕ್ಷಾಧಿಪತಿಗಳ ನಿವಾಸಗಳಿವೆ.
ಗೌರವಗಳು ಮತ್ತು ಪ್ರಶಸ್ತಿಗಳು
[ಬದಲಾಯಿಸಿ]- 2010: ಕಝಕ್‌ಸ್ತಾನ್ ಗಣರಾಜ್ಯದ ಅಭಿವೃದ್ಧಿಗಾಗಿ ಮಿತ್ತಲ್‌ರ ಕೊಡುಗೆಯನ್ನು ಪ್ರಶಂಸಿಸಿ, ಅವರಿಗೆ ಆ ದೇಶದ ಅತ್ಯುನ್ನತ 'ಡೊಸ್ಟಿಕ್' 1 ಪುರಸ್ಕಾರ ನೀಡಲಾಯಿತು.
- 2008 : ಜೂನ್ ತಿಂಗಳಲ್ಲಿ ಗೋಲ್ಡ್‌ಮನ್ ಸ್ಯಾಚ್ಸ್ ನಿರ್ದೇಶಕರಾಗಿ ಮಿತ್ತಲ್ ನೇಮಕ.
- 2007: ಮಿತ್ತಲ್‌ರಿಗೆ ಭಾರತದ ರಾಷ್ಟ್ರಪತಿಯಿಂದ ರಾಷ್ಟ್ರದ ಎರಡನೆಯ ಅತ್ಯುನ್ನತ ನಾಗರಿಕ ಪ್ರಶಸ್ತಿ 'ಪದ್ಮಭೂಷಣ' ಪ್ರದಾನ.[೨೭]
- 2007: ಮಿತ್ತಲ್‌ರಿಗೆ ಡ್ವೈಟ್ ಡಿ. ಐಸೆನ್ಹೋವರ್ ಗ್ಲೋಬಲ್ ಲೀಡರ್ಷಿಪ್ ಪ್ರಶಸ್ತಿ, ಸ್ಪೇನ್ ದೇಶದ ಗ್ರ್ಯಾಂಡ್ ಕ್ರಾಸ್ ಆಫ್ ಸಿವಿಲ್ ಮೆರಿಟ್, ಹಾಗೂ ಕಿಂಗ್ಸ್ ಕಾಲೇಜ್ ಫೆಲೋಷಿಪ್ ಪ್ರದಾನ.[೨೭]
- 2006: ಟೈಮ್ ಪತ್ರಿಕೆಯಿಂದ 'ವರ್ಷದ ಅಂತರರಾಷ್ಟ್ರೀಯ ವಾರ್ತಾ-ವಿಷಯಕ ವ್ಯಕ್ತಿ' ಹಾಗೂ ಫೈನಾನ್ಷಿಯಲ್ ಟೈಮ್ಸ್ ನಿಂದ ಪರ್ಸನ್ ಆಫ್ ದಿ ಇಯರ್' ಪ್ರಶಸ್ತಿ ಪುರಸ್ಕೃತ.
- 2004: ಫಾರ್ಚೂನ್ ಪತ್ರಿಕೆಯಿಂದ 'ವರ್ಷದ ಯುರೋಪಿಯನ್ ಉದ್ಯಮಿ' ಪ್ರಶಸ್ತಿ ಪುರಸ್ಕೃತ
- 1998: ವಿಲ್ಲಿ ಕೊರ್ಫ್ ಸ್ಟೀಲ್ ವಿಷನ್ ಅವಾರ್ಡ್ - ಅಮೆರಿಕನ್ ಮೆಟಲ್ ಮಾರ್ಕೆಟ್ ಮತ್ತು ಪೇಯ್ನ್‌ವೆಬರ್ ವರ್ಲ್ಡ್ ಸ್ಟೀಲ್ ಸ್ಟ್ಯಾಟಿಕ್ಸ್
- 1996: ವರ್ಷದ ಉಕ್ಕು ತಯಾರಕ - ನ್ಯೂ ಸ್ಟೀಲ್
ಗ್ರಂಥಸೂಚಿ
[ಬದಲಾಯಿಸಿ]- ಟಿಮ್ ಬೊಕೆ ಮತ್ತು ಬೈರೊನ್ ಔಸೆ - ಕೋಲ್ಡ್ ಸ್ಟೀಲ್ (ಲಿಟ್ಲ್, ಬ್ರೌನ್, 2008).
- ಯೋಗೇಶ್ ಛಾಬ್ರಿಯಾ - ಇನ್ವೆಸ್ಟ್ ದಿ ಹ್ಯಾಪಿಯೊನೆಯರ್ ವೇ (ಸಿಎನ್‌ಬಿಸಿ - ನೆಟ್ವರ್ಕ್18, 2008).
- ನವಲ್‌ಪ್ರೀತ್ ರಂಗಿ-ಸಾಕ್ಷ್ಯಚಿತ್ರ (ದಿ ಮ್ಯಾನ್ ವಿತ್ ಅ ಮಿಷನ್, 2010).
ಇವನ್ನೂ ನೋಡಿ
[ಬದಲಾಯಿಸಿ]- ಅರ್ಸೆಲರ್‌ಮಿತ್ತಲ್
- ಮಾರ್ವಾಡಿಗಳು
- B4U
- ರಾಜಸ್ಥಾನ
ಉಲ್ಲೇಖಗಳು
[ಬದಲಾಯಿಸಿ]- ↑ "Chairman of the Board of Directors and CEO". Arcelormittal.com. 15 ಜೂನ್ 1950. Archived from the original on 22 ಆಗಸ್ಟ್ 2011. Retrieved 7 ಸೆಪ್ಟೆಂಬರ್ 2010.
- ↑ ೨.೦ ೨.೧ ೨.೨ ೨.೩ ೨.೪ Forbes topic page on Lakshmi Mittal Forbes.com. Retrieved April 2010.
- ↑ "Lakshmi N. Mittal / Chairman of the Board of Directors and CEO". Arcelor Mittal. Archived from the original on 22 ಆಗಸ್ಟ್ 2011. Retrieved 7 ಅಕ್ಟೋಬರ್ 2010.
- ↑ "Full page fax print" (PDF). Archived from the original (PDF) on 11 ಮೇ 2011. Retrieved 28 ಅಕ್ಟೋಬರ್ 2010.
- ↑ ಐಎಚ್‌ಟಿ (2008)ಮಿತ್ತಲ್ ಜಾಯಿನ್ಸ್ ಗೋಲ್ಡ್‌ಮನ್ ಸಾಚ್ಸ್ ಬೋರ್ಡ್. 2008ರ ನವೆಂಬರ್ 10ರಂದು ಮರುಪಡೆಯಲಾಯಿತು.
- ↑ ಇಎಡಿಎಸ್ ಎನ್‌ವಿ (2009)ಇಎಡಿಎಸ್ ಎನ್.ವಿ.. 2009ರ ಜೂನ್ 30ರಂದು ಮರುಸಂಪಾದಿಸಲಾಗಿದೆ.
- ↑ ಪ್ರಭಾವಶಾಲಿ ವ್ಯಕ್ತಿಗಳ ಪಟ್ಟಿ
- ↑ ಫೋರ್ಬ್ಸ್ ಇನ್ ಪಿಕ್ಚರ್ಸ್: ದಿ 20 ಮೋಸ್ಟ್ ಇಂಟ್ರಿಗ್ವಿಂಗ್ ಬಿಲಿಯನೆಯರ್ ಹೇಯ್ರೆಸಸ್
- ↑ "Search leadership, business and management news and news analysis from MT and Management Today magazine". Managementtoday.co.uk. 3 ಸೆಪ್ಟೆಂಬರ್ 2010. Retrieved 7 ಸೆಪ್ಟೆಂಬರ್ 2010.
- ↑ ೧೦.೦ ೧೦.೧ ಅರ್ಸೆಲರ್‌ಮಿತ್ತಲ್ (2010)ಅರ್ಸೆಲರ್‌ಮಿತ್ತಲ್ Archived 2 December 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.. 2010ರ ಏಪ್ರಿಲ್ 3ರಂದು ಮರುಪಡೆಯಲಾಯಿತು.
- ↑ "Mittal announces bid for rival Arcelor". London: The Guardian. 27 ಜನವರಿ 2006.
- ↑ ಡಿಎನ್‌ಎ - ಸ್ಪೋರ್ಟ್ - ಮಿತ್ತಲ್ಸ್ ಒಲಿಂಪಿಕ್ ಡ್ರೀಮ್ ಇಸ್ ವರ್ತ್ ರುಪೀಸ್ 40 ಕರೋಡ್ - ಡೇಯ್ಲಿ ನ್ಯೂಸ್ & ಅನಲಿಸಿಸ್
- ↑ ಹೌ ಟೈಕೂನ್ ವೆಂಟ್ ಫ್ರಮ್ ಪೊಲೊ ಲಾನ್ಸ್ ಟು ಪೊಲಿಷ್ ಜೈಲ್ ದಿ ಟೈಮ್ಸ್, 27 ನವೆಂಬರ್ 2004.
- ↑ "Poland wants to renegotiate terms of PHS sale to Arcelor Mittal". Abcmoney.co.uk. Archived from the original on 30 ಸೆಪ್ಟೆಂಬರ್ 2011. Retrieved 7 ಸೆಪ್ಟೆಂಬರ್ 2010.
- ↑ "ಯುಕೆಸ್ ರಿಚಸ್ಟ್ ಮನ್ ಇನ್ ಸ್ಲೇವ್ ಲೇಬರ್ ರೊ". Archived from the original on 6 ಸೆಪ್ಟೆಂಬರ್ 2011. Retrieved 21 ಜನವರಿ 2011.
- ↑ ೧೬.೦ ೧೬.೧ ಪ್ಲೇಯ್ಡ್ ರಿವೀಲ್ಸ್ ಲೇಬರ್ ಸ್ಟೀಲ್ ಕ್ಯಾಷ್ ಲಿಂಕ್. ಸೋಮವಾರ 11 ಫೆಬ್ರವರಿ 2002, ಆಯ್ದದ್ದು 11 ಜನವರಿ 2007
- ↑ ಲಕ್ಷ್ಮಿ ಮಿತ್ತಲ್, ಉಕ್ಕು ಗಿರಣಿ ದಶಲಕ್ಷಾಧಿಪತಿ, ಗುರುವಾರ 14 ಫೆಬ್ರವರಿ 2002, ಆಯ್ದದ್ದು 11 ಜನವರಿ 2007
- ↑ ೧೮.೦ ೧೮.೧ ೧೮.೨ ಪ್ರಶ್ನೋತ್ತರ: 'ಗಾರ್ಬೇಜ್‌ಗೇಟ್' ಗುರುವಾರ, 14 ಫೆಬ್ರವರಿ 2002 ಆಯ್ದದ್ದು 11 ಜನವರಿ 2007
- ↑ "QPR secure huge investment boost". BBC. London. 20 ಡಿಸೆಂಬರ್ 2007. Retrieved 20 ಡಿಸೆಂಬರ್ 2007.
- ↑ ಲಕ್ಷ್ಮಿನಿವಾಸ್ ಮಿತ್ತಲ್ ಪುಷಸ್ ಕ್ಯೂಪಿಆರ್ ಅಪ್ ದಿ ರಿಚ್ ಲಿಸ್ಟ್ Archived 24 June 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. ಲೇಖಕರು ಕೆವಿನ್ ಗಾರ್ಸೈಡ್, ಡೇಯ್ಲಿ ಟೆಲಿಗ್ರ್ಯಾಫ್, 21 ಡಿಸೆಂಬರ್ 2007
- ↑ "Briatore resigns as QPR chairman". Reuters. 19 ಫೆಬ್ರವರಿ 2010. Archived from the original on 30 ಅಕ್ಟೋಬರ್ 2020. Retrieved 20 ಫೆಬ್ರವರಿ 2010.
- ↑ O'Connor, Lisa (8 ಆಗಸ್ಟ್ 2004). "STEEL PLANT MESS BILL HAS DOUBLED | Sunday Mirror Newspaper | Find Articles at BNET". Findarticles.com. Retrieved 7 ಸೆಪ್ಟೆಂಬರ್ 2010.
- ↑ "$128M Spend for London House". MSNBC. 12 ಏಪ್ರಿಲ್ 2004. Archived from the original on 27 ಅಕ್ಟೋಬರ್ 2006. Retrieved 21 ಜನವರಿ 2011.
- ↑ ಟೇಕೋವರ್ ವೀಕ್: ಬಿಲಿಯನೇಯ್ರ್ಸ್ ರೋ (ರಾಬ್) - ಗೂಗಲ್ ಸೈಟ್‌ಸೀಯಿಂಗ್
- ↑ "Photo Gallery: Homes Of The Billionaires". Forbes.com. 22 ಮೇ 2002. Archived from the original on 16 ಜುಲೈ 2012. Retrieved 7 ಸೆಪ್ಟೆಂಬರ್ 2010.
- ↑ ದಿ ಮಿತ್ತಲ್ ಮೊನೊಪೊಲಿ: ಬ್ರಿಟನ್ಸ್ ರಿಚೆಸ್ಟ್ ಮ್ಯಾನ್ ಬಯ್ಸ್ ಪ್ರಾಪರ್ಟಿ
- ↑ ೨೭.೦ ೨೭.೧ http://www.eads.com/1024/en/corporate_governance/Board_of_Directors/members/Mittal.html ಇಎಡಿಎಸ್ ಎನ್.ವಿ.
ಹೊರಗಿನ ಕೊಂಡಿಗಳು
[ಬದಲಾಯಿಸಿ]- ಅರ್ಸೆಲರ್‌ಮಿತ್ತಲ್ ಅಂತರಜಾಲತಾಣ
- ಅರ್ಸೆಲರ್‌ಮಿತ್ತಲ್ ಅಂತರಜಾಲ ದೂರದರ್ಶನ Archived 12 January 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಅರ್ಸೆಲರ್ ಸಂಸ್ಥೆಯನ್ನು ಕೊಂಡುಕೊಳ್ಳುವ ಯತ್ನದ ಹಿನ್ನೆಲೆಯಲ್ಲಿ ಮಿತ್ತಲ್ ಕುರಿತು ಲೇಖನ Archived 30 August 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. - ಟೈಮ್ ಪತ್ರಿಕೆ
- ಲಕ್ಷ್ಮಿನಿವಾಸ್ ಮಿತ್ತಲ್ ಮುಖ್ಯ ಭಾಷಣ: ಪೆನ್ಸಿಲ್ವಾನಿಯಾ ವಿಶ್ವವಿದ್ಯಾನಿಲಯದ ವ್ಹಾರ್ಟನ್ ಸ್ಕೂಲ್ - ಎಂಬಿಎ '13ನೆಯ ಸಮಾರಂಭ' ಆರಂಭ Archived 2 September 2009[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಲಕ್ಷ್ಮಿ ಮಿತ್ತಲ್ ಟು ಬಯ್ ಬ್ರಿಟನ್ಸ್ ಮೋಸ್ಟ್ ಎಕ್ಸ್ಪೆನ್ಸಿವ್ ಹೌಸ್ Archived 25 June 2008[Date mismatch] ವೇಬ್ಯಾಕ್ ಮೆಷಿನ್ ನಲ್ಲಿ. - ದಿ ಗಾರ್ಡಿಯನ್
- ಮಿತ್ತಲ್ ಕುರಿತು ಲೇಖನ - ಟೈಮ್ಸ್ ಆನ್ಲೈನ್
- ಮಿತ್ತಲ್ಗೇಟ್ ಹಗರಣ ಕುರಿತು ಪ್ರಶ್ನೋತ್ತರಗಳು - ಬಿಬಿಸಿ ನ್ಯೂಸ್
- ಬಿಬಿಸಿ - ""ಗ್ಲಿಂಪ್ಸಿಂಗ್ ಎ ಫೇರಿಟೇಲ್ ವೆಡಿಂಗ್"" - ಬಿಬಿಸಿ ನ್ಯೂಸ್
- ಕೋಲ್ಡ್ ಸ್ಟೀಲ್
- ಮಿತ್ತಲ್ ಈವಿಲ್ Archived 2 February 2011[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- ಮಿತ್ತಲ್ ಸ್ಟೀಲ್ ಕ್ಲೀವ್ಲೆಂಡ್ ವರ್ಕ್ಸ್ Archived 20 December 2012[Date mismatch] at Archive.is
- ಮಿತ್ತಲ್ ಕುಟುಂಬ ಎಸ್ಕಾಡಾ ಸಂಸ್ಥೆ ಕೊಂಡ ಕುರಿತು ಲೇಖನ - ಬ್ಲೂಮ್ಬರ್ಗ್
- ಲಕ್ಷ್ಮಿನಿವಾಸ್ ಮಿತ್ತಲ್ ಬಗ್ಗೆ ಫೋರ್ಬ್ಸ್ ವಿಷಯಪುಟ Archived 31 December 2010[Date mismatch] ವೇಬ್ಯಾಕ್ ಮೆಷಿನ್ ನಲ್ಲಿ.
- Pages using the JsonConfig extension
- Webarchive template warnings
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- Pages using infobox person with unknown parameters
- Articles with hCards
- Articles containing Rajasthani-language text
- Articles with hatnote templates targeting a nonexistent page
- Webarchive template archiveis links
- Use dmy dates from September 2010
- Persondata templates without short description parameter
- ೧೯೫೦ ಜನನ
- ಜೀವಿತ ಜನರು
- ಆರ್ಸೆಲರ್ ಮಿತ್ತಲ್
- ಉಕ್ಕಿನ ಉದ್ದಿಮೆಯಲ್ಲಿ ವ್ಯಕ್ತಿಗಳು
- ಭಾರತೀಯ ಮೂಲದ ಉದ್ದಿಮೆದಾರರು
- ಲಂಡನ್‌ನ ಕಿಂಗ್ಸ್ ಕಾಲೇಜ್ನ ಸದಸ್ಯರು (ಫೆಲೊಸ್)
- ಭಾರತೀಯ ಶತಕೋಟ್ಯಾಧಿಪತಿಗಳು
- ಭಾರತೀಯ ಉದ್ಯಮಿಗಳು
- ಗ್ರೇಟ್ ಬ್ರಿಟನ್ ಮತ್ತು ಉತ್ತರ ಐರ್ಲೆಂಡ್ನಲ್ಲಿರುವ ಭಾರತೀಯ ವಲಸಿಗರು.
- ಭಾರತೀಯ ಹಿಂದೂಗಳು
- ಯುನೈಟೆಡ್ ಕಿಂಗ್ಡಮ್ಗೆ ಹೋದ ಭಾರತದ ವಲಸೆಗಾರರು
- ಭಾರತೀಯ ಸಸ್ಯಾಹಾರಿಗಳು
- ಲೇಬರ್ ಪಾರ್ಟಿ (ಯುನೈಟೆಡ್ ಕಿಂಗ್ಡಮ್) ಸದಸ್ಯರು
- ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು
- ಯುನೈಟೆಡ್ ಕಿಂಗ್ಡಮ್ನಲ್ಲಿನ ರಾಜಕೀಯ ಹಗರಣಗಳು
- ಚೂರೂ ಜಿಲ್ಲೆಯ ಜನರು
- ಕೋಲ್ಕತ್ತಾ ನಗರದ ಸೇಂಟ್ ಕ್ಸೇವಿಯರ್ ಕಾಲೇಜಿನ ಹಳೆಯ ವಿದ್ಯಾರ್ಥಿಗಳು
- ಭಾರತೀಯ ಸಮಾಜ ಕಲ್ಯಾಣ ಮತ್ತು ವ್ಯವಸಾಯ ವ್ಯವಸ್ಥಾಪನಾ ಸಂಸ್ಥೆಯ ಹಳೆಯ ವಿದ್ಯಾರ್ಥಿಗಳು
- ಕೋಲ್ಕತ್ತಾ ವಿಶ್ವವಿದ್ಯಾನಿಲಯದ ಹಳೆಯ ವಿದ್ಯಾರ್ಥಿಗಳು
- ರಾಜಸ್ಥಾನ ಮೂಲದ ಜನರು
- ಉದ್ಯಮಿಗಳು