ಲಾಂದ್ರ
ಗೋಚರ


ವಿದ್ಯುತ್ ದೀಪವಿಲ್ಲದ ನಾಗರೀಕ ಸಮಾಜದಲ್ಲಿ ಬೆಳಕಿಗೆಂದು ಮಾನವ ಆವಿಷ್ಕರಿಸಿದ ಸಾಧನವೇ ಲಾಂದ್ರ.
ಸೀಮೆ ಎಣ್ಣೆಯ ಬತ್ತಿಯಲ್ಲಿ ರಾತ್ರಿಯಿಡೀ ಉರಿದು ಬೆಳಕು ಹೊಮ್ಮಿಸುತ್ತಿದ್ದ ಲಾಂದ್ರವನ್ನು ಲಾಟೀನು, ಕಂದೀಲು ಮುಂತಾದ ಹೆಸರಿನಿಂದಲೂ ಗುರ್ತಿಸಲಾಗುತ್ತದೆ.
ಲಾಂದ್ರ ಪದವು ಅನೇಕ ಪ್ರಕಾರದ ಒಯ್ಯಬಲ್ಲ ದೀಪ ವ್ಯವಸ್ಥೆಯನ್ನು ವಿವರಿಸಲು ಬಳಸಲಾಗುತ್ತದೆ, ಆದರೆ ಲಾಂದ್ರಗಳು ಒಂದು ದೀಪ ಮೂಲಕ್ಕೆ (ಉದಾ. ಮೇಣದ ಬತ್ತಿ) ಒಯ್ಯಲು ಮತ್ತು ನೇತುಹಾಕಲು ಸುಲಭವಾಗಿಸಲು ರಕ್ಷಣಾತ್ಮಕ ಆವರಣವಾಗಿ ಹುಟ್ಟಿಕೊಂಡವು. ಅರಕ್ಷಿತವಾದ ಮೇಣದ ಬತ್ತಿಗಳು ಗಾಳಿಯ ರಭಸದಿಂದ ಆರುವ ಸಾಧ್ಯತೆ ಹೆಚ್ಚು ಹಾಗಾಗಿ ಲಾಂದ್ರಗಳನ್ನು ಬಳಸಲಾಯಿತು, ಇದರಿಂದ ಅವನ್ನು ಸಾಗುವೆಗಳು ಮತ್ತು ಪಾವಟಿಗೆಗಳ ಪಕ್ಕದಲ್ಲಿ ತೂಗುಹಾಕುವುದು ಸಾಧ್ಯವಾಯಿತು.