ಲಿಂಗಾಯತ ಪಂಚಮಸಾಲಿ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂದ್ರಪ್ರದೇಶದ ಕೆಲ ಭಾಗದಲ್ಲಿ ಸೇರಿ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಉಳ್ಳ ವ್ಯವಸಾಯ ಆಧಾರಿತ ಬಲಿಷ್ಠ ಪಂಗಡ ಲಿಂಗಾಯತ ಪಂಚಮಸಾಲಿ ಪಂಗಡ.
ಪಂಚಮಸಾಲಿ ಸಮಾಜದ ಜಗದ್ಗುರುಗಳು : ಶ್ರೀ ಬಸವ ಜಯ ಮೃತ್ಯುಂಜಯ ಮಾಹಾಸ್ವಾಮಿಗಳು, ಕೂಡಲಸಂಗಮ ಮಾಹಾಪೀಠ.
ಒಕ್ಕಲತನವೊಂದೇ(ಕೃಷಿ) ಇವರ ಮೂಲ ಕಸುಬು, ತುಂಬಾ ಸರಳ ಮತ್ತು ಸ್ವಾಭಿಮಾನಿಗಳು ಈ ಜನರು. ಲಿಂಗಾಯತ ಪಂಚಮಸಾಲಿ ಜನಾಂಗವನ್ನ ಪಂಚಪೀಠ ಮತ್ತು ಮಲೆನಾಡಿನ ಲಿಂಗಾಯತ ಗೌಡರು ಎಂದು ಕೂಡ ಕರೆಯುತ್ತಾರೆ.
ಮಖಾರಿ ತನ್ನ ೫ ನೇ ಮಗನಾದ ಮಿಂಡಗುದ್ದಲಿ ಗೌಡಗೆ ಕೃಷಿ ಕಾಯಕ ಹಚ್ಚಿದನು. ಅವನದೇ ಪಂಚಮಸಾಲು ಅಥವಾ ಪಂಚಮಸಾಲಿ. ಅರ್ಥ: ಸಾಲು=ಸಂಪ್ರದಾಯ, ಸೆಟ್ಟಿ=ವೃತ್ತಿ.ಮಿಂಡಗುದ್ದಲಿಸೆಟ್ಟಿಯ ನಿಜರೂಪ 'ಮೇಂಡೆಗುದ್ದಲಿಸೆಟ್ಟಿ. ಮೇಂಡೆ ಎಂದರೆ ಮೇಟಿ. ಗುದ್ದಲಿ, ಮೇಟಿಗಳೇ ಇಂದಿಗೂ ಪಂಚಮಸಾಲಿಗಳ ಮುಖ್ಯ ಉಪಕರಣಗಳು.
ಪಂಚಸೆಟ್ಟಿಗಳ ಕಥೆ ವೃತ್ತಿಯ ಆಧಾರದ ಮೇಲೆ ಪ್ರಾಚೀನ ಸಮಾಜ ಕವಲಾಗಿದ್ದು ಸೂಚಿಸುತ್ತದೆ. ಇದರಲ್ಲಿ ಐದನೇ ಗುಂಪಿನವರಾದ ಪಂಚಮಸಾಲಿಗಳು ಕೃಷಿಕರಾಗಿದ್ದರಿಂದ ದೊಡ್ಡ ಸಂಖ್ಯೆಯಲ್ಲಿ ಬೆಳೆದರು. ಶಾಸನಗಳಲ್ಲಿ ಕಾಣುವ 'ಪಂಚಮಠ' 'ಪಂಚವಣಿಜ' ಮಠಗಳು ಪಂಚಸೆಟ್ಟಿಗಳಿಗೆ ಸೇರಿದ್ದವು. ನಂತರ ಬಂದ ಪಂಚಾಚಾರ್ಯರರು ಇವುಗಳನ್ನು ವಶಪಡಿಸಿಕೊಂಡು ಪಂಚವಣ್ಣಿಗೆ ಮಠಗಳೆಂದು ಕರೆದರು. (ಮಾರ್ಗ ೪ ರಿಂದ ಆಯ್ದ ಕೆಲವು ಭಾಗಗಳು)
- ಖ್ಯಾತ ಇತಿಹಾಸಕಾರರಾದ ಶಂಭಾ ಜೋಶಿಯವರು ಹೇಳಿದಂತೆ " 'ಚಳಕ' ಅಂದರೆ ಕೃಷಿ ಸಲಕರಣೆ ಸಲಿಕೆ ಎಂದು, ಇದನ್ನು ಆಗಿನ ಕೃಷಿಕರು ಕೃಷಿ ಕಾಯಕದಲ್ಲಿ ಇದನ್ನು ಬಳಸುತ್ತಿದ್ದರು," ಅಂದರೆ ಕರ್ನಾಟಕ ರಾಜ್ಯದ ಉತ್ತರದ ಭಾಗದಲ್ಲಿ(ಚಾಲುಕ್ಯ ಸಾಮ್ರಾಜ್ಯದ ಬಹುತೇಕ ಎಲ್ಲ) ಆಗಿನ ಕಾಲದಲ್ಲಿ ಕೃಷಿಯನ್ನ ನಡೆಶಿಕೊಂಡು ಬರುತ್ತಿರುವವರು ಇಂದಿನ ಪಂಚಮಸಾಲಿ ಜನಾಂಗವೇ!, ಜೊತೆಗೆ ಚಾಲುಕ್ಯರ ಸಿಕ್ಕ ಕೆಲ ಶಾಸನಗಳಲ್ಲಿ ಪಂಚರಾಜ್ಯಾಧೀಶ್ವರರು ಮತ್ತು ಪಂಚಾಶಲರು ಎಂದು ಕಂಡು ಬಂದಿದೆ ಹೀಗಾಗಿ ಇಂದಿನ ಪಂಚಮಸಾಲಿ ವಂಶಜರೇ ಅಂದಿನ ಬೃಹತ್ ಚಾಲುಕ್ಯ ಸಾಮ್ರಾಜ್ಯದ ಉದಕರು ಆಗಿದ್ದರು ಎಂಬುದು ಬಲವಾದ ವಾದ.
ಬಸವಣ್ಣ : ವಿಶ್ವ ಪ್ರಸಿದ್ಧ ಸಮಾಜ ಸುಧಾರಕ ಬಸವಣ್ಣ ಹುಟ್ಟುಹಾಕಿದ ಲಿಂಗಾಯತ ಧರ್ಮದ ಮೊದಲ ಅನುಯಾಯಿಗಳು ಪಂಚಮಸಾಲಿಗಳೇ! ಇದು ಅನೇಕ ವಚನ ಮತ್ತು ಜಾನಪದ, ಲಾವಣಿ ಪದ್ಯಗಳಲ್ಲಿ ಕಂಡು ಬರುತ್ತದೆ. ಮತ್ತು ಬಸವಣ್ಣನ ಪಂಚಾಚಾರದ ಪಾಲಕರು ಇವರು, ಅದೆ ಮುಂದೆ ಪಂಚಮಸಲಿ ಎಂದು ಆಗಿರಬಹುದು ಎಂದು ಕೆಲವರು ಹೇಳುತ್ತಾರೆ.
ವಿಜಯನಗರದ ಸಂಗಮ ವಂಶ : ಪಂಚಮಸಾಲಿ ಸಮಾಜದ ಇತಿಹಾಸ ವಿಜಯನಗರದ ಜೊತೆಗೂ ಬೆಸೆದುಕೊಂಡಿದೆ, ಸಂಗಮ ವಂಶದ ಪ್ರಸಿದ್ಧ ದೊರೆ ಪ್ರೌಢದೇವರಾಯ ಇದೆ ಕುಲದವನು ಎಂದು ಕೆಲ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ.
ಕೆಳದಿ ಸಾಮ್ರಾಜ್ಯ : ಪ್ರಸಿದ್ಧ ರಾಜ ಮನೆತನದಲೊಂದು ಕೆಳದಿ ಸಂಸ್ಥಾನವು ಲಿಂಗಾಯತ ಪಂಚಮಸಾಲಿ ಜನಾಂಗದ್ದೆ. ಕೆಳದಿ ಚೆನ್ನಮ್ಮ ಈ ಸಮಾಜದ ಪ್ರಸಿದ್ಧ ರಾಣಿ, ಛತ್ರಪತಿ ಶಿವಾಜಿ ಮಗನಿಗೆ ಆಶ್ರಯ ನೀಡಿ, ಔರಂಗಜೇಭನ ಸೈನ್ಯವನ್ನ ಸೋಲಿಸಿದ ಖ್ಯಾತಿ ಇವಳದ್ದು.
ಬೆಳವಡಿ ಸಂಸ್ಥಾನ : ಬೆಳವಡಿ ಅರಸೊತ್ತಿಗೆ ಕೂಡ ಲಿಂಗಾಯತ ಪಂಚಮಸಾಲಿಯವರದ್ದೆ, ಶಿವಾಜಿಯನ್ನ ಸೊಲಿಸಿದ್ದು ಇದೇ ಸಂಸ್ಥಾನದ ರಾಣಿ ಬೆಳವಡಿ ಮಲ್ಲಮ್ಮ.
ಕಿತ್ತೂರ ಸಂಸ್ಥಾನ : 16-18 ನೇ ಶತಮಾನದಲ್ಲಿ ಸ್ವಾಭಿಮಾನಿ ಸ್ವತಂತ್ರ ಸಂಸ್ಥಾನ ಕಿತ್ತೂರ ಸಂಸ್ಥಾನ, ಈ ಮನೆತನದ ಹೆಮ್ಮೆ ಮತ್ತು ಸಮಾಜದ ಹೆಮ್ಮೆ ಕಿತ್ತೂರ ರಾಣಿ ಚೆನ್ನಮ್ಮ, ಭಾರತದ ಮೊದಲ ಸ್ವಾತಂತ್ರ್ಯ ಕಹಳೆ ಓದಿದವಳು ಕಿತ್ತೂರ ಚೆನ್ನಮ್ಮ, ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಗೆದ್ದು ಕೀರ್ತಿ ಪಡೆದ ವೀರ ಮಹಿಳೆ.
ರಾಜಕೀಯದಲ್ಲಿ ಹೆಸರು ಮಾಡಿದವರು
೧- ಬಸವನಗೌಡ ಪಾಟೀಲ್ ಯತ್ನಾಳ್-ವಿಜಯಪುರ
೨ಮುರುಗೇಶ್ ನಿರಾಣಿ-ಬೀಳಗಿ
೩-ಸಿ ಸಿ ಪಾಟೀಲ್- ಗದಗ್
೪-ಸಿದ್ದು ಸವದಿ-ತೇರದಾಳ
೫- ಲಕ್ಷ್ಮೀ ಹೆಬ್ಬಾಳ್ಕರ್
೬-ವಿನಯ್ ಕುಲಕರ್ಣಿ
ಸಂಪ್ರದಾಯ ಮತ್ತು ಧಾರ್ಮಿಕತೆ
[ಬದಲಾಯಿಸಿ]ವಿವೈಧ ಜಾತಿ ಮತ ಪಂಥಗಳಲ್ಲಿ ಹರಿದು ಹಂಚಿ ಹೋದ ಪಂಚಮಸಾಲಿ ಜನಾಂಗ ಪ್ರಾರಂಭದಲ್ಲಿ ಪ್ರಕ್ರುತಿಯ ಒಡನಾಟದಲ್ಲಿ ವಿಶ್ವಮತಾವಲಂಬಿಗಳಾಗಿದ್ದರು.