ಲಿನಿನ್ (ನಾರಿನ ಬಟ್ಟೆ)
ಲಿನಿನ್ ಎಂಬುದು ಲಿನಮ್ ಉಸಿಟಟಿಸ್ಸಿಯಂ ಎಂಬ ಲಿನಮ್ ಕುಲದ ಸಸ್ಯ ದ ನಾರುಗಳಿಂದ ತಯಾರಾದ ನೇಯ್ದ ಬಟ್ಟೆಯಾಗಿದೆ. ಲಿನಿನ್ ತಯಾರಿಕೆಗೆ ಅಧಿಕ-ಶ್ರಮದ ಅಗತ್ಯವಿರುತ್ತದೆ, ಆದರೆ ಅದನ್ನು ಉಡುಪುಗಳನ್ನಾಗಿ ಸಿದ್ಧಪಡಿಸಿದಾಗ, ಇದು ಬೇಸಿಗೆ ಕಾಲದಲ್ಲಿ ತನ್ನ ಅಸಾಧಾರಣವಾದ ತಂಪು ಹಾಗು ತಾಜಾತನದಿಂದ ಉಪಯುಕ್ತತೆಯನ್ನು ಪಡೆಯುತ್ತದೆ.
ಲಿನಿನ್-ನಾರಿನಿಂದ ನೇಯ್ದ ಬಟ್ಟೆಗಳಲ್ಲದೆ, ಹತ್ತಿ, ಸೆಣಬಿನ ನಾರುಹಾಗು ನಾರಿನ ಸಸ್ಯಗಳಲ್ಲದೆ ಇತರ ಮಾದರಿಗಳಿಂದ ತಯಾರಾದ ಬಟ್ಟೆಗಳನ್ನು ಸಹ ಸಡಿಲವಾಗಿ "ಲಿನಿನ್" ಎಂದೇ ಕರೆಯಲಾಗುತ್ತದೆ. ಅಂತಹ ಬಟ್ಟೆಗಳು ಲಿನಿನ್ ಅಲ್ಲದೆ ಸಾಧಾರಣವಾಗಿ ತಮ್ಮದೇ ಆದ ನಿರ್ದಿಷ್ಟ ಹೆಸರನ್ನು ಹೊಂದಿರುತ್ತವೆ, ಲಿನಿನ್-ಮಾದರಿಯಲ್ಲಿ ನೇಯಲಾದ ಉತ್ಕೃಷ್ಟ ಮಟ್ಟದ ಹತ್ತಿಯ ನೂಲುಹುರಿಯನ್ನು ಮಡಪೋಲಂ ಎಂದು ಕರೆಯಲಾಗುತ್ತದೆ.
ಲಿನಿನ್ ಗಳೆಂಬ ಸಾಮೂಹಿಕ ಪದವನ್ನು ಇಂದಿಗೂ ಸಾಮಾನ್ಯವಾಗಿ ನೇಯ್ದ ಬಟ್ಟೆಗಳ ವರ್ಗಕ್ಕೆ ಹಾಗು ಹೆಣೆಯಲಾದ ಹಾಸಿಗೆ, ನೆಲಹಾಸು, ಮೇಜು ಹಾಗು ಅಡುಗೆ ಮನೆಯಲ್ಲಿ ಉಪಯೋಗಿಸಲಾಗುವ ನೇಯ್ದ ಬಟ್ಟೆಗಳಿಗೂ ಸಹ ಹೇಳಲಾಗುತ್ತದೆ. ಲಿನಿನ್ ಎಂಬ ಪದವನ್ನು ಇಂದಿಗೂ ಸಹ ಬಳಸಲಾಗುತ್ತದೆ ಏಕೆಂದರೆ ಸಾಂಪ್ರದಾಯಿಕವಾಗಿ, ಲಿನಿನ್ ಅನ್ನು ಹಲವು ವಸ್ತ್ರಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಹಿಂದಿನ ಕಾಲದಲ್ಲಿ, "ಲಿನಿನ್ ಗಳೆಂಬ" ಪದವನ್ನು ಹಗುರ ತೂಕದ ಒಳಉಡುಪುಗಳಾದ ಉದಾಹರಣೆಗೆ ಷರ್ಟ್ ಗಳು, ಹೆಂಗಸರ ಒಳ ಉಡುಪುಗಳು, ರವಿಕೆಗಳು, ಲ್ಯಾಂಷರಿ (ಮಹಿಳೆಯರ ರಾತ್ರಿ ಉಡುಪುಗಳು) (ಈ ಪದವು ಲಿನಿನ್ ಪದಕ್ಕೆ ಸಮನಾಗಿದೆ), ಅಲ್ಲದೇ ಬೇರ್ಪಡಿಸಬಹುದಾದ ಶರ್ಟಿನ ಕತ್ತುಪಟ್ಟಿ ಹಾಗು ಮುಂಗೈ ಪಟ್ಟಿಗಳನ್ನು ಹಿಂದಿನಿಂದಲೂ ಬಹುತೇಕ ಲಿನಿನ್ ನಿಂದ ಏಕಮಾತ್ರವಾಗಿ ತಯಾರಿಸಲಾಗುತ್ತಿತ್ತು.
ಲಿನಿನ್ ಬಟ್ಟೆಗಳು ಪ್ರಪಂಚದ ಅತ್ಯಂತ ಹಳೆಯ ನೇಯ್ಗೆ ಬಟ್ಟೆಗಳೆಂದು ಹೇಳಲಾಗುತ್ತದೆ: ಅವುಗಳ ಇತಿಹಾಸವನ್ನು ಸಾವಿರಾರು ವರ್ಷ ಹಿಂದಿನದೆಂದು ಗುರುತಿಸಬಹುದಾಗಿದೆ. ಒಣ ಹುಲ್ಲಿನ ತುಂಡುಗಳು, ಬೀಜಗಳು, ನಾರುಗಳು, ನೂಲುಹುರಿಗಳು, ಹಾಗು ವಸ್ತ್ರಗಳ ವಿವಿಧ ಮಾದರಿಗಳು ಸುಮಾರು ೮೦೦೦ BCಯಷ್ಟು ಹಿಂದೆ ಸ್ವಿಸ್ಸ್ ಸರೋವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಕಂಡು ಬಂದಿತ್ತು. ಬಣ್ಣ ಹಾಕಿದ ಲಿನಮ್ ಕುಲದನಾರುಗಳು ಜಾರ್ಜಿಯಾದ ಇತಿಹಾಸಪೂರ್ವದ ಒಂದು ಗುಹೆಯಲ್ಲಿ ಪತ್ತೆಯಾಗಿತ್ತು. ಇದು ಕಾಡಿನಲ್ಲಿ ಬಿಡುವ ಲಿನಮ್ ಕುಲದ ಸಸ್ಯಗಳಿಂದ ತಯಾರಾದ ನೇಯ್ದ ಲಿನಿನ್ ಬಟ್ಟೆಗಳ ಅಸ್ತಿತ್ವವು ೩೬,೦೦೦ BPಯಷ್ಟು ಮುಂಚಿತವಾಗಿ ಕಂಡುಬಂದಿತ್ತು.[೧][೨]
ಲಿನಿನ್ ಅನ್ನು ಕೆಲವೊಂದು ಬಾರಿ ಪ್ರಾಚೀನ ಈಜಿಪ್ಟ್‌ನಲ್ಲಿ ಕರೆನ್ಸಿ ನೋಟುಗಳನ್ನಾಗಿ ಬಳಸಲಾಗುತ್ತಿತ್ತು. ಇಜಿಪ್ಷಿಯನ್ ರಕ್ಷಿತ ಶವಗಳನ್ನು ಲಿನಿನ್ ನಲ್ಲಿ ಸುತ್ತಲಾಗುತ್ತಿತ್ತು ಏಕೆಂದರೆ ಇದನ್ನು ಮೆರಗು ಹಾಗು ಶುದ್ದತೆಯ ಸಂಕೇತವೆಂದು ಪರಿಗಣಿಸುವುದರ ಜೊತೆಗೆ ಶ್ರೀಮಂತಿಕೆಯ ಪ್ರದರ್ಶನವಾಗಿರುತ್ತಿತ್ತು. ಕೈಯಿಂದ ಹೆಣೆಯಲಾದ ನೂಲುಹುರಿಗಳಿಂದ ಸಿದ್ದವಾದ ಈ ಕೆಲವೊಂದು ನೇಯ್ದ ಬಟ್ಟೆಗಳು, ಅಂದಿನ ಕಾಲಕ್ಕೆ ಬಹಳ ಉತ್ಕೃಷ್ಟವಾಗಿದ್ದವು, ಆದರೆ ಇಂಡಿಯನ್ ಲಿನಿನ್ ಗೆ ಹೋಲಿಸಿದರೆ ಬಹಳ ಒರಟಾಗಿರುತ್ತಿತ್ತು.[೩]
ಇಂದು ಲಿನಿನ್ ಸಾಧಾರಣವಾಗಿ ಒಂದು ದುಬಾರಿ ನೇಯ್ದ ಬಟ್ಟೆ ಎನಿಸಿಕೊಳ್ಳುತ್ತದೆ, ಜೊತೆಗೆ ತುಲನಾತ್ಮಕವಾಗಿ ಸಣ್ಣ ಪ್ರಮಾಣದಲ್ಲಿ ತಯಾರಿಸಲಾಗುತ್ತದೆ. ಹತ್ತಿ ಹಾಗು ಇತರ ನೈಸರ್ಗಿಕ ನಾರುಗಳಿಗೆ ಹೋಲಿಸಿದರೆ ಇದು ಒಂದು ಉದ್ದವಾದ "ಎಳೆಯನ್ನು" ಹೊಂದಿದೆ.[೪]
ಲಿನಿನ್ ನಿಂದ ಹಲವು ಉತ್ಪನ್ನಗಳು ತಯಾರಾಗುತ್ತವೆ: ಏಪ್ರನ್, ಕೈಚೀಲಗಳು, ಟವಲ್ ಗಳು (ಈಜುಡುಗೆ, ಸ್ನಾನದ ಬಟ್ಟೆಗಳು, ಬೀಚ್ ತೊಡುಗೆಗಳು, ದೇಹ ಹಾಗು ಕೈಯೊರಸುವ ಟವಲ್ ಗಳು), ಕರವಸ್ತ್ರಗಳು, ಹಾಸು ಹೊದಿಕೆಗಳು ಹಾಗು ದಿಂಬು ಚೀಲಗಳು, ಲಿನಿನ್ ನಿಂದ ತಯಾರಾದ ಮೇಜು ಹಾಸುಗಳು, ಓಡುಗರ ಉಡುಪುಗಳು, ಕುರ್ಚಿಯ ಹೊದಿಕೆ, ಪುರಷರು ಹಾಗು ಮಹಿಳೆಯರ ಉಡುಪುಗಳು.
ಲಿನಮ್ ವರ್ಗಕ್ಕೆ ಸೇರಿದ ನಾರು
[ಬದಲಾಯಿಸಿ]ವಿವರಣೆ
[ಬದಲಾಯಿಸಿ]ಲಿನಮ್ ಒಂದು ಮೆದುವಾದ ನಾರಿನ ತೊಗಟೆಯಾಗಿದೆ.
ಲಿನಮ್ ಕುಲದ ನಾರುಗಳು ಉದ್ದದಲ್ಲಿ ಸುಮಾರು ೨೫ ರಿಂದ ೧೫೦ ಸೆಂಟಿಮೀಟರ್ ವರೆಗೂ ವ್ಯತ್ಯಾಸವನ್ನು ಹೊಂದಿರುತ್ತವೆ. (೧೮ ರಿಂದ ೫೫ ಇಂಚುಗಳು) ಹಾಗು ವ್ಯಾಸದಲ್ಲಿ ಸರಾಸರಿ ೧೨-೧೬ ಮೈಕ್ರೋಮೀಟರ್ಗಳನ್ನು ಹೊಂದಿರುತ್ತದೆ. ಇದರಲ್ಲಿ ಎರಡು ವಿಧಗಳಿವೆ: ಸಣ್ಣದಾದ ತುಂಡು ನಾರುಗಳು ಒರಟಾದ ಬಟ್ಟೆಗಳ ತಯಾರಿಕೆಯಲ್ಲಿ ಬಳಸಲ್ಪಟ್ಟರೆ ಉದ್ದವಾದ ನಾರುಗಳನ್ನು ಉತ್ಕೃಷ್ಟವಾದ ಬಟ್ಟೆ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಲಿನಮ್ ಕುಲದ ನಾರುಗಳನ್ನು ಸಾಧಾರಣವಾಗಿ ಅವುಗಳ "ಗೆಣ್ಣುಗಳಿಂದ" ಗುರುತಿಸಬಹುದಾಗಿದೆ. ಇದು ಬಟ್ಟೆಯ ನಮ್ಯತೆ ಹಾಗು ನೇಯ್ಗೆಯ ವಿನ್ಯಾಸವನ್ನು ಅಧಿಕಗೊಳಿಸುತ್ತದೆ.
ಲಿನಿನ್ ನಾರಿನ ಛೇದಮುಖವು ಅಸಮರೂಪದ ಬಹುಕೋನೀಯ ವಿಧಗಳಿಂದ ರಚನೆಯಾಗಿರುತ್ತದೆ, ಇದು ಬಟ್ಟೆಯ ಒರಟು ರಚನೆಗೆ ಸಹಾಯಕವಾಗಿದೆ.[೫]
ಜಾತಿಲಕ್ಷಣ
[ಬದಲಾಯಿಸಿ]ಅಧಿಕ ಚೂಷಕ ಗುಣವನ್ನು ಹಾಗು ಶಾಖದ ಸುವಾಹಕವಾದ ಲಿನಿನ್ ಬಟ್ಟೆಯು ಮುಟ್ಟಿದರೆ ತಂಪಿನ ಅನುಭವ ನೀಡುತ್ತದೆ. ಲಿನಿನ್ ತರಕಾರಿ ನಾರುಗಳಲ್ಲೇ ಅತ್ಯಂತ ಬಲವಾಗಿರುವುದರ ಜೊತೆಗೆ, ಹತ್ತಿಯ ಸಾಮರ್ಥ್ಯಕ್ಕಿಂದ ೨ ರಿಂದ ೩ ಪಟ್ಟು ಅಧಿಕ ಬಲ ಹೊಂದಿದೆ. ಇದು ಬಹಳ ಮೃದುವಾಗಿದ್ದು, ತಯಾರಾದ ಬಟ್ಟೆಯನ್ನು ನಾರು ಬಟ್ಟೆಯನ್ನಾಗಿ ಮಾಡುತ್ತದೆ, ಜೊತೆಗೆ ಇದು ಒಗೆದಾಗ ಮತ್ತಷ್ಟು ಮೃದುಗೊಳ್ಳುತ್ತದೆ. ಆದಾಗ್ಯೂ, ಒಂದೇ ಜಾಗದಲ್ಲಿ ನಿರಂತರವಾಗಿ ಮಡಿಕೆ ಮಾಡಿ ಇರಿಸಿದರೆ, ಅದರ ಮೊನಚಾದ ಪದರಗಳಿಂದ ಲಿನಿನ್ ದಾರಗಳು ಕಿತ್ತು ಹೋಗುವ ಸಂಭವವಿರುತ್ತದೆ. ಇದರಿಂದಾದ ಹಾನಿಯು ಕತ್ತು ಪಟ್ಟಿಗಳು, ಹೆಮ್ಮಿಕೆಯಲ್ಲಿ(ಅಂಚು ಮಡಿಸಿ ಹೊಲೆಯಲಾದ ಭಾಗ), ಹಾಗು ಇಸ್ತ್ರಿ ಮಾಡುವಾಗ ಇಸ್ತ್ರಿ ಪೆಟ್ಟಿಗೆ ತಗಲುವ ಭಾಗದಲ್ಲಿ ಕಂಡು ಬರುತ್ತದೆ. ಲಿನಿನ್ ಕಳಪೆ ಸ್ಥಿತಿಸ್ಥಾಪಕತ್ವ ಗುಣವನ್ನು ಹೊಂದಿರುವುದರ ಜೊತೆಗೆ ತಕ್ಷಣವೇ ತನ್ನ ಸ್ವಸ್ಥಿತಿಗೆ ಮರಳುವುದಿಲ್ಲ, ಇದರಿಂದಾಗಿ ಇದು ಸುಲಭವಾಗಿ ಸುಕ್ಕು ಬೀಳುತ್ತದೆ ಎಂಬುದನ್ನು ವಿವರಿಸಬಹುದಾಗಿದೆ.
ಲಿನಿನ್ ಬಟ್ಟೆಗಳು ಅಧಿಕ ನೈಸರ್ಗಿಕ ಹೊಳಪನ್ನು ಹೊಂದಿರುತ್ತವೆ; ಅವುಗಳ ನೈಸರ್ಗಿಕ ಬಣ್ಣಗಳು ದಂತ ವರ್ಣ, ಕೋರ ಬಟ್ಟೆಯ ಬಣ್ಣ, ಕಂದು ಬಣ್ಣ, ಅಥವಾ ಬೂದು ಬಣ್ಣಗಳ ಛಾಯೆಗಳಲ್ಲಿರುತ್ತವೆ. ಶುದ್ಧವಾದ ಬಿಳಿ ಲಿನಿನ್ ಬಟ್ಟೆಯನ್ನು ಅಧಿಕ ರಾಸಾಯನಿಕ ಪ್ರಕ್ರಿಯೆಯಿಂದ ರಚಿಸಲಾಗುತ್ತದೆ. ಲಿನಿನ್ ವಿಶಿಷ್ಟವಾಗಿ ಗರಿಮುರಿಯಾದ ಲಕ್ಷಣದೊಂದಿಗೆ ದಪ್ಪ ಹಾಗು ತೆಳುವಾದ ರಚನೆಯನ್ನು ಹೊಂದಿರುತ್ತದೆ, ಆದರೆ ಇದು ಬಿಗಿಯಾಗಿ ಹಾಗು ಒರಟಾಗಿರುವುದರ ಜೊತೆಗೆ ಮೃದುವಾಗಿ ನುಣುಪಾಗಿರುತ್ತದೆ. ಸರಿಯಾದ ವಿಧಾನದಲ್ಲಿ ತಯಾರಿಸಿದಾಗ, ಲಿನಿನ್ ಬಟ್ಟೆಗಳು ನೀರನ್ನು ಹೀರಿಕೊಳ್ಳುವ ಸಾಮರ್ಥ್ಯದ ಜೊತೆಗೆ ನೀರನ್ನು ಶೀಘ್ರದಲ್ಲೇ ಕಳೆದುಕೊಳ್ಳುತ್ತವೆ. ಆರ್ದ್ರತೆಯ ಅನುಭವವನ್ನು ನೀಡದೆ ಬಟ್ಟೆಯು ೨೦%ನಷ್ಟು ತೇವವನ್ನು ಒಳಗೊಂಡಿರಬಹುದು.[ಸಾಕ್ಷ್ಯಾಧಾರ ಬೇಕಾಗಿದೆ]
ಕಲ್ಮಶಗಳಿಂದ ಮುಕ್ತಗೊಳಿಸಿದರೆ, ಲಿನಿನ್ ಅಧಿಕವಾಗಿ ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದರ ಜೊತೆಗೆ ಚರ್ಮದಿಂದ ಬೆವರನ್ನು ಬಹಳ ಬೇಗನೆ ತೆಗೆದು ಹಾಕುತ್ತದೆ. ಲಿನಿನ್ ಗರಿಮುರಿಯಾದ ಬಟ್ಟೆಯಾಗಿರುವ ಕಾರಣದಿಂದಾಗಿ ಇದು ಚರ್ಮಕ್ಕೆ ಅಂಟಿಕೊಳ್ಳುವು ಬಹಳ ಕಡಿಮೆ; ಇದು ಉಬ್ಬಿಕೊಂಡಾಗ, ಇದು ಒಣಗಿದಂತೆ ಕಂಡುಬಂದರೂ ಬಹಳ ತಂಪಾದ ಅನುಭವವನ್ನು ನೀಡುತ್ತದೆ. ಈ ರೀತಿಯಾಗಿ ಚರ್ಮವು ಸತತವಾಗಿ ಒಂದು ತಂಪಾದ ಮೇಲ್ಮೈಯ ಸ್ಪರ್ಶಕ್ಕೆ ಒಳಗಾಗುತ್ತದೆ. ಇದು ಬಹಳ ಕಾಲ ಬಾಳಿಕೆ ಬರುವ, ಬಲವಾದ ಬಟ್ಟೆಯಾಗಿದೆ, ಜೊತೆಗೆ ಶುಷ್ಕತೆಗಿಂತ ಬಹಳ ಆರ್ದ್ರವಾಗಿರುವ ವಸ್ತ್ರಗಳ ಕೆಲವೇ ಕೆಲವು ಜಾತಿಯಲ್ಲಿ ಒಂದೆನಿಸಿದೆ. ನಾರುಗಳು ಹಿಗ್ಗುವುದಿಲ್ಲ ಜೊತೆಗೆ ಉಜ್ಜುಗಾಯಗಳಿಂದ ಉಂಟಾಗುವ ಹಾನಿಗೆ ನಿರೋಧಕವಾಗಿರುತ್ತದೆ. ಆದಾಗ್ಯೂ, ಲಿನಿನ್ ನಾರುಗಳು ಕಡಿಮೆ ಸ್ಥಿತಿಸ್ಥಾಪಕತ್ವ ಗುಣ ಹೊಂದಿರುವ ಕಾರಣದಿಂದಾಗಿ, ಬಟ್ಟೆಯನ್ನು ಮಡಿಸಿದಾಗ ಹಾಗು ಪದೇ ಪದೇ ಒಂದೇ ಜಾಗದಲ್ಲಿ ಇಸ್ತ್ರಿ ಮಾಡಿದಾಗ ಅದು ಅಂತಿಮವಾಗಿ ಹರಿದು ಹೋಗುತ್ತದೆ.
ಬೂಜು, ಬೆವರು, ಹಾಗು ರಾಸಾಯನಿಕ ಪ್ರಕ್ರಿಯೆಯ ಮೂಲಕ ಬಣ್ಣ ಹಾಕುವುದರಿಂದಲೂ ಸಹ ಬಟ್ಟೆಗೆ ಹಾನಿ ಉಂಟಾಗಬಹುದು, ಆದರೆ ಇದು ಬಟ್ಟೆಯ ನುಸಿಗಳು ಹಾಗು ಜೀರುಂಡೆಗಳಿಗೆ ನಿರೋಧಕವಾಗಿದೆ. ತುಲನಾತ್ಮಕವಾಗಿ ಲಿನಿನ್ ವಸ್ತ್ರಗಳನ್ನು ಸುಲಭವಾಗಿ ಸಂರಕ್ಷಿಸಬಹುದು, ಏಕೆಂದರೆ ಇದು ಕೊಳೆ ಹಾಗು ಕಲೆಗಳನ್ನು ನಿರೋಧಿಸುತ್ತದೆ, ಇದು ಯಾವುದೇ ತರಹದ ಜಾಳುತನವಾಗಲಿ ಅಥವಾ ಔಷಧೀಯ ಗುಣವನ್ನು ಹೊಂದಿರುವುದಿಲ್ಲ, ಜೊತೆಗೆ ಇದನ್ನು ಡ್ರೈಕ್ಲೀನ್(ನೀರನ್ನು ಬಳಸದೆ ಸ್ಪಿರಿಟ್ ಮೊದಲಾದವುಗಳಿಂದ ಬಟ್ಟೆಗಳನ್ನು ಶುದ್ಧಗೊಳಿಸುವುದು), ಬಟ್ಟೆ ಒಗೆಯುವ ಯಂತ್ರದಲ್ಲಾಗಲಿ ಅಥವಾ ಹಬೆ ಯಂತ್ರದಲ್ಲಾಗಲಿ ಒಗೆಯಬಹುದಾಗಿದೆ. ಇದು ಅಧಿಕ ತಾಪಮಾನವನ್ನು ತಡೆದುಕೊಳ್ಳುತ್ತದೆ, ಜೊತೆಗೆ ಇದು ಆರಂಭದಲ್ಲಿ ಕೇವಲ ಮದ್ಯಮ ಮಟ್ಟದ ಕುಗ್ಗುವಿಕೆಯನ್ನು ಒಳಗೊಂಡಿರುತ್ತದೆ.[೫]
ಲಿನಿನ್ ಅನ್ನು ಬಟ್ಟೆ ಒಣಗಿಸುವ ಉರುಳು ಯಂತ್ರದಲ್ಲಿ ಬಹಳ ಒಣಗಿಸಬಾರದು: ಇದು ಆರ್ದ್ರವಾಗಿದ್ದರೆ ಇಸ್ತ್ರಿ ಮಾಡಲು ಸುಲಭವಾಗಿರುತ್ತದೆ. ಲಿನಿನ್ ಸುಲಭವಾಗಿ ಸುಕ್ಕುಗಟ್ಟುತ್ತದೆ, ಜೊತೆಗೆ ಹೀಗಾಗಿ ಕೆಲವು ಉತ್ತಮ ರಚನೆಯುಳ್ಳ ಲಿನಿನ್ ಬಟ್ಟೆಗಳಿಗೆ ಸಾಮಾನ್ಯವಾಗಿ ಪರಿಪೂರ್ಣ ಮೃದುತ್ವ ಉಳಿಸಿಕೊಳ್ಳುವ ಸಲುವಾಗಿ ಇಸ್ತ್ರಿ ಮಾಡುವ ಅಗತ್ಯವಿರುತ್ತದೆ. ಆದಾಗ್ಯೂ, ಸುಕ್ಕುಗಟ್ಟುವ ಲಕ್ಷಣವು ಸಾಮಾನ್ಯವಾಗಿ ಬಟ್ಟೆಯ ನಿರ್ದಿಷ್ಟ "ಗುಣ"ದಿಂದಾಗಿ ಎಂದು ಪರಿಗಣಿಸಲಾಗುತ್ತದೆ, ಜೊತೆಗೆ ಬಹುತೇಕ ಆಧುನಿಕ ಲಿನಿನ್ ಬಟ್ಟೆಗಳನ್ನು ಒಂದು ಒಳ್ಳೆಯ ಹ್ಯಾಂಗರ್ ಗೆ ತೂಗು ಹಾಕಿ ಗಾಳಿಗೆ ಒಣಗಲು ಬಿಡಬಹುದಾಗಿದೆ ಜೊತೆಗೆ ಇದನ್ನು ಇಸ್ತ್ರಿಯ ಅಗತ್ಯವಿಲ್ಲದೆ ಹಾಗೆ ಧರಿಸಬಹುದಾಗಿದೆ.
ಸಮಕಾಲೀನ ಲಿನಿನ್ ನೂಲು ಹುರಿಗಳ ಜೊತೆಗೆ ಸಾಮಾನ್ಯವಾಗಿ ಸಹಯೋಗ ಹೊಂದಿರುವ ಒಂದು ವಿಶಿಷ್ಟತೆ ಎಂದರೆ "ಸಿಕ್ಕು ಸಿಕ್ಕಾದ ನೂಲಿನಿಂದ ನೇಯ್ದ ಬಟ್ಟೆ", ಅಥವಾ ಸಣ್ಣ ಗಂಟುಗಳು ಬಟ್ಟೆಯ ಉದ್ದಕ್ಕೂ ಸಾಕಷ್ಟು ಕಂಡುಬರುತ್ತದೆ. ಆದಾಗ್ಯೂ, ಈ ಗಂಟುಗಳು ವಾಸ್ತವವಾಗಿ ಕಡಿಮೆ ಗುಣಮಟ್ಟದ ನಾರುಗಳ ದೋಷದಿಂದ ಉಂಟಾಗುತ್ತದೆ. ಉತ್ಕೃಷ್ಟ ದರ್ಜೆಯ ಲಿನಿನ್ ಸ್ಥಿರವಾದ ವ್ಯಾಸವಿರುವ ದಾರಗಳನ್ನು ಹೊಂದಿರುವುದರ ಜೊತೆಗೆ, ಯಾವುದೇ ಗಂಟುಗಳನ್ನು ಹೊಂದಿರುವುದಿಲ್ಲ.
ಅಳತೆಗೋಲು
[ಬದಲಾಯಿಸಿ]ಭಾರಿ ಲಿನಿನ್ ನೂಲುಹುರಿಯ ಪ್ರಮಾಣಕ ಮಾಪನವನ್ನು ಲೀ (ನೂಲಿನ ಅಳತೆ) ಎಂದು ಕರೆಯಲಾಗುತ್ತದೆ, ಇದು ೩೦೦ರಿಂದ ಭಾಗಿಸಲ್ಪಟ್ಟ ಒಂದು ಪೌಂಡ್ ಲಿನಿನ್ ನಲ್ಲಿರುವ ಗಜಗಳ ಸಂಖ್ಯೆಯಾಗಿದೆ. ಉದಾಹರಣೆಗೆ ಒಂದು ಗಜವು ಒಂದು ಲೀ ಗಾತ್ರವನ್ನು ಹೊಂದಿದ್ದರೆ ಇದು ಪ್ರತಿ ಪೌಂಡ್ ಗೆ ೩೦೦ ಗಜಗಳೆಂದು ಪರಿಗಣಿಸಲಾಗುತ್ತದೆ. ಕರವಸ್ತ್ರ ಮುಂತಾದವುಗಳಲ್ಲಿ ಬಳಸದಾದ ಉತ್ಕೃಷ್ಟ ನೂಲುಗಳು ೪೦ ಲೀ ಆಗಿರಬಹುದು, ಜೊತೆಗೆ ಪ್ರತಿ ಪೌಂಡ್ ಗೆ ೪೦x೩೦೦ = ೧೨,೦೦೦ ಗಜಗಳನ್ನು ಒದಗಿಸುತ್ತದೆ. ಇದು ಒಂದು ನಿರ್ದಿಷ್ಟ ಉದ್ದವೆನಿಸಿದೆ, ಈ ರೀತಿಯಾಗಿ ಲಿನಿನ್ ನ ಉತ್ಕೃಷ್ಟತೆಯ ಪರೋಕ್ಷ ಮಾಪನವೆಂದರೆ ಪ್ರತಿ ಏಕಮಾನದ ಗುಂಪಿಗೆ ಉದ್ದದ ಏಕಮಾನಗಳ ಸಂಖ್ಯೆ. ಇದರ ಚಿಹ್ನೆಯೆಂದರೆ NeL.( ೩)
ಯುರೋಪಿನಲ್ಲಿ ಸಾಮಾನ್ಯವಾಗಿ ಬಳಕೆಯಾಗುವ ಮೆಟ್ರಿಕ್ ವ್ಯವಸ್ಥೆಯೆಂದರೆ, Nm. ಇದು ಪ್ರತಿ ಕಿಲೋಗ್ರಾಂಗೆ ೧,೦೦೦ ಮೀಟರ್ ಉದ್ಧದ ಸಂಖ್ಯೆ.
ಚೀನಾದಲ್ಲಿ, ಇಂಗ್ಲಿಷ್ ಕಾಟನ್ ವ್ಯವಸ್ಥೆಯ ಏಕಮಾನ, NeC, ಸಾಮಾನ್ಯವಾಗಿದೆ. ಇದು ಒಂದು ಪೌಂಡ್ ನಲ್ಲಿರುವ ೮೪೦ ಗಜಗಳ ಸಂಖ್ಯೆ.
ಉತ್ಪಾದನಾ ವಿಧಾನ
[ಬದಲಾಯಿಸಿ]ತಯಾರಾದ ಲಿನಿನ್ ನ ಗುಣಮಟ್ಟವು ಸಾಮಾನ್ಯವಾಗಿ ಬೆಳವಣಿಗೆಯ ಪರಿಸ್ಥಿತಿಗಳು ಹಾಗು ಕಟಾವಿನ ತಂತ್ರಜ್ಞಾನಗಳನ್ನು ಅವಲಂಬಿಸಿದೆ. ಸುದೀರ್ಘಾವಧಿಗೆ ಬಾಳಿಕೆ ಬರುವ ನಾರುಗಳನ್ನು ಉತ್ಪಾದಿಸಲು, ನಾರನ್ನು ಸಂಪೂರ್ಣ ಸಸ್ಯವನ್ನು ಕೈಯಿಂದ ಕೀಳಲಾಗುತ್ತದೆ ಅಥವಾ ಕಾಂಡವನ್ನು ಬೇರಿಗೆ ತೀರ ಸಮೀಪದಲ್ಲಿ ಕತ್ತರಿಸಲಾಗುತ್ತದೆ. ಕಟಾವಿನ ನಂತರ, ಬೀಜಗಳನ್ನು "ರಿಪ್ಲಿಂಗ್" (ಹಣಿಗೆಯಿಂದ ಬೀಜಗಳನ್ನು ತೆಗೆದು ಹಾಕುವ ವಿಧಾನ) ಎಂಬ ಒಂದು ಯಾಂತ್ರಿಕ ಪ್ರಕ್ರಿಯೆ ಅಥವಾ ವಿನೋಯಿಂಗ್(ಆರಿಸುವುದು/ಹೆಕ್ಕುವುದು) ಮೂಲಕ ತೆಗೆದುಹಾಕಲಾಗುತ್ತದೆ.
ನಾರುಗಳನ್ನು ನಂತರ ಕಾಂಡದಿಂದ ಬಿಡಿಸಿಕೊಳ್ಳಲಾಗುತ್ತದೆ. ಈ ವಿಧಾನದಲ್ಲಿ ನೆನಸಿ ಮೃದುಗೊಳಿಸುವ ಮೂಲಕ ನಡೆಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಪೆಕ್ಟಿನ್ ಅನ್ನು ಕೊಳೆಸಲು ಬಳಸಲಾಗುವ ಬ್ಯಾಕ್ಟೀರಿಯ, ನಾರುಗಳನ್ನು ಒಟ್ಟಾಗಿ ಬಂಧಿಸುತ್ತದೆ. ನೆನಸಿ ಮೃದುಗೊಳಿಸುವ ನೈಸರ್ಗಿಕ ವಿಧಾನವನ್ನು ತೊಟ್ಟಿಗಳು ಹಾಗು ಕೊಳಗಳಲ್ಲಿ ನಡೆಸಲಾಗುತ್ತದೆ, ಅಥವಾ ನೇರವಾಗಿ ಹೊಲದಲ್ಲಿ ನಡೆಸಲಾಗುತ್ತದೆ. ನೆನಸಿ ಮೃದುಗೊಳಿಸುವ ರಾಸಾಯನಿಕ ವಿಧಾನಗಳು ಸಹ ಇವೆ; ಈ ಪ್ರಕ್ರಿಯೆಯು ಬಹಳ ವೇಗವಾಗಿದ್ದರೂ ಪರಿಸರಕ್ಕೆ ಹೆಚ್ಚು ಹಾನಿಯನ್ನು ಉಂಟುಮಾಡುವುದರ ಜೊತೆಗೆ ಸ್ವತಃ ನಾರುಗಳಿಗೂ ಸಹ ಹಾನಿಯಾಗುತ್ತದೆ.
ನೆನಸಿ ಮೃದುಗೊಳಿಸಿದ ಪ್ರಕ್ರಿಯೆಯ ನಂತರ, ಕಾಂಡಗಳಿಂದ ನಾರನ್ನು ಬಿಡಿಸಿಕೊಳ್ಳಬಹುದಾಗಿದೆ, ಇದು ಆಗಸ್ಟ್ ನಿಂದ ಡಿಸೆಂಬರ್ ನಡುವಿನ ಅವಧಿಯಲ್ಲಿ ನಡೆಯುತ್ತದೆ. ಎರಡು ಲೋಹದ ರೋಲರುಗಳ ನಡುವೆ ಕಾಂಡದ ಮರದ ಭಾಗವನ್ನು ಜಜ್ಜುವುದರ ಮೂಲಕ ನಾರನ್ನು ಬಿಡಿಸಿಕೊಳ್ಳುವ ಪ್ರಕ್ರಿಯೆಯು ನಡೆಯುತ್ತದೆ, ಈ ರೀತಿಯಾಗಿ ಕಾಂಡದ ಭಾಗಗಳನ್ನು ಪ್ರತ್ಯೇಕಿಸಬಹುದಾಗಿದೆ. ನಾರುಗಳನ್ನು ತೆಗೆಯಲಾಗುತ್ತದೆ ಜೊತೆಗೆ ಇತರ ಭಾಗಗಳಾದ ನಾರಗಸೆಯ ಬೀಜ, ಚೈವ್, ಹಾಗು ತುಂಡು ನಾರುಗಳು ಇತರ ಉಪಯೋಗಗಳಿಗೆ ಬರುತ್ತದೆ. ನಂತರ ನಾರುಗಳ ಸಿಕ್ಕನ್ನು ಬಿಡಿಸಲಾಗುತ್ತದೆ: ನಾರಿನ ಸಣ್ಣ ತುಂಡುಗಳನ್ನು ಸಿಕ್ಕನ್ನು ಬಿಡಿಸುವ ಹಣಿಗೆಯಿಂದ ಹೆಕ್ಕಿ ತೆಗೆದು ಪ್ರತ್ಯೇಕಿಸಲಾಗುತ್ತದೆ, ಇದರಿಂದ ಕೇವಲ ಉದ್ದವಾದ, ಮೃದು ನಾರುಗಳು ಹೊರಬರುತ್ತವೆ.
ನಾರುಗಳನ್ನು ಪ್ರತ್ಯೇಕಿಸಿ ಸಂಸ್ಕರಿಸಿದ ನಂತರ, ಅವುಗಳನ್ನು ನೂಲುಹುರಿಗಳನ್ನಾಗಿ ಎಳೆ ತೆಗೆಯಲಾಗುತ್ತದೆ ಜೊತೆಗೆ ಲಿನಿನ್ ಉಡುಪುಗಳಾಗಿ ನೇಯಲಾಗುತ್ತದೆ ಅಥವಾ ಹೆಣೆಯಲಾಗುತ್ತದೆ. ಈ ಉಡುಪುಗಳಿಗೆ ರಾಸಾಯನಿಕ ಪ್ರಕ್ರಿಯೆಯ ಮೂಲಕ (ಬ್ಲೀಚಿಂಗ್ ಪೌಡರ್ )ಬಿಳಿದುಕಾರಿಯಾಗಿ, ಬಣ್ಣ ನೀಡಿ, ಅಥವಾ ಹಲವು ಸಂಸ್ಕರಣೆಗಳ ಅಥವಾ ಲೇಪನಗಳಿಂದ ಸಿದ್ಧಪಡಿಸಬಹುದಾಗಿದೆ.[೫]
ಒಂದು ಪರ್ಯಾಯ ಉತ್ಪಾದನಾ ವಿಧಾನವನ್ನು "ಕಾಟನೈಜಿಂಗ್" ಎಂದು ಕರೆಯಲಾಗುತ್ತದೆ, ಈ ಪ್ರಕ್ರಿಯೆಯು ಬಹಳ ವೇಗವಾಗಿದ್ದು ಇದಕ್ಕೆ ಕಡಿಮೆ ಸಾಧನಗಳ ಅವಶ್ಯಕತೆಯಿರುತ್ತದೆ. ಲಿನಮ್ ಕುಲದ ಸಸ್ಯದ ಕಾಂಡಗಳನ್ನು ಸಾಂಪ್ರದಾಯಿಕ ಹತ್ತಿಯ ಯಂತ್ರೋಪಕರಣಗಳನ್ನು ಬಳಸಿಕೊಂಡು ಸಂಸ್ಕರಿಸಲಾಗುತ್ತದೆ; ಆದಾಗ್ಯೂ ತಯಾರಾದ ನಾರುಗಳು ಸಾಮಾನ್ಯವಾಗಿ ವಿಶಿಷ್ಟ ಲಿನಿನ್ ರೂಪವನ್ನು ಕಳೆದುಕೊಳ್ಳುತ್ತವೆ.
ಇವನ್ನೂ ನೋಡಿ: ಕೈಯಿಂದ ಸಂಸ್ಕರಿಸಲಾಗುವ ನಾರುಗಳು
ಉತ್ಪಾದಕರು
[ಬದಲಾಯಿಸಿ]ಲಿನಮ್ ಕುಲದ ಸಸ್ಯಗಳನ್ನು ವಿಶ್ವದ ಹಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ, ಆದರೆ ಅಗ್ರ ಗುಣಮಟ್ಟದ ಲಿನಮ್ ಕುಲದ ಸಸ್ಯಗಳನ್ನು ಪ್ರಾಥಮಿಕವಾಗಿ ಪಶ್ಚಿಮ ಯುರೋಪ್ ನಲ್ಲಿ ಬೆಳೆಯಲಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಭಾರಿ ಪ್ರಮಾಣದಲ್ಲಿ ಲಿನಿನ್ ಅನ್ನು ಪೂರ್ವ ಯುರೋಪ್ ಹಾಗು ಚೈನಾದಲ್ಲಿ ಉತ್ಪಾದಿಸಲಾಗುತ್ತದಾದರೂ, ಉತ್ಕೃಷ್ಟ ಮಟ್ಟದ ವಸ್ತ್ರಗಳನ್ನು ಸ್ಥಾಪಿತ ಉತ್ಪಾದಕರಾದ ಐರ್ಲ್ಯಾಂಡ್, ಇಟಲಿ ಹಾಗು ಬೆಲ್ಜಿಯಮ್ ದೇಶದಲ್ಲಿ ತಯಾರಾಗುತ್ತದೆ. ಅಲ್ಲದೆ ಪೋಲಂಡ್, ಆಸ್ಟ್ರಿಯ, ಬೆಲ್ಜಿಯಮ್, ಫ್ರಾನ್ಸ್, ಜರ್ಮನಿ, ಡೆನ್ಮಾರ್ಕ್, ಲಿಥುವಾನಿಯ, ಲಾಟವಿಯ, ದಿ ನೆದರ್ಲ್ಯಾಂಡ್ಸ್, ಇಟಲಿ, ಸ್ಪೇನ್, ಸ್ವಿಟ್ಜರ್ಲ್ಯಾಂಡ್, ಬ್ರಿಟನ್ ಹಾಗು ಭಾರತದ ಕೆಲವು ಭಾಗಗಳಲ್ಲಿ ಬೆಳೆಯಲಾಗುತ್ತದೆ. ಉತ್ಕೃಷ್ಟ ದರ್ಜೆಯ ಲಿನಿನ್ ಉಡುಪುಗಳನ್ನು ಗೃಹಪಯೋಗಿ ಮಾರುಕಟ್ಟೆಗಾಗಿ ಇದೀಗ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ತಯಾರಿಸಲಾಗುತ್ತದೆ.
ಉಪಯೋಗಗಳು
[ಬದಲಾಯಿಸಿ]ಕಳೆದ ೩೦ ವರ್ಷಗಳಿಗೂ ಅಧಿಕವಾಗಿ ಲಿನಿನ್ ನ ಬಳಕೆಯಲ್ಲಿ ನಾಟಕೀಯವಾಗಿ ಬದಲಾವಣೆ ಕಂಡಿತು. ಇಸವಿ ೧೯೯೦ರಲ್ಲಿ ಸರಿಸುಮಾರು ೭೦%ನಷ್ಟು ಲಿನಿನ್ ನ ಉತ್ಪಾದನೆಯನ್ನು ವಸ್ತ್ರೋದ್ಯಮಕ್ಕಾಗಿ ಬಳಕೆಯಾಗುತ್ತಿತ್ತು.ಆದರೆ ಇದಕ್ಕೆ ವಿರುದ್ಧವಾಗಿ ೧೯೭೦ರ ಉತ್ಪಾದನೆಯಲ್ಲಿ ಕೇವಲ ೫%ನಷ್ಟು ಮಾತ್ರ ಉಡುಪು ತಯಾರಿಕೆಯಲ್ಲಿ ಬಳಸಲ್ಪಟ್ಟಿತ್ತು.
ಲಿನಿನ್ ಮಲಗುವ ಹಾಗು ಸ್ನಾನದ ಉಡುಪುಗಳ ತಯಾರಿಕೆಯಲ್ಲಿ ಬಳಸಲ್ಪಡುತ್ತದೆ (ಮೇಜಿನ ಮೇಲೆ ಹಾಕುವ ಬಟ್ಟೆಗಳು, ಪಾತ್ರೆ ಒರೆಸುವ ಬಟ್ಟೆಗಳು, ಬೆಡ್ ಶೀಟ್ ಗಳು,ಮುಂತಾದವು), ಗೃಹ ಹಾಗು ವ್ಯಾಪಾರಕ್ಕೆ ಸಜ್ಜುಗೊಂಡ ವಸ್ತುಗಳು (ಗೋಡೆಕಾಗದ/ಗೋಡೆಹೊದಿಕೆಗಳು, ಗೃಹಬಳಕೆ, ಕಿಟಕಿ ಪರದೆಗಳು, ಮುಂತಾದವು), ಉಡುಪುಗಳು(ಸೂಟ್ ಗಳು, ಉಡುಗೆಗಳು, ಲಂಗಗಳು, ಷರ್ಟ್ ಗಳು ಮುಂತಾದವು), ಕೈಗಾರಿಕಾ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತದೆ (ಹಾಸಿಗೆ, ರಟ್ಟುಬಟ್ಟೆ, ದಾರಗಳು, ಮುಂತಾದವು).[೪] ಇದನ್ನು ಒಂದೊಮ್ಮೆ ಮಾಕಸಿನ್-ಮಾದರಿಯ ಪಾದರಕ್ಷೆಗಳ ಮೇಲ್ಬಾಗವನ್ನು ಕೈಯಲ್ಲಿ ಹೊಲೆಯಲು ಆಯ್ಕೆ ಮಾಡಿಕೊಂಡಂತಹ ನೂಲುಹುರಿಯಾಗಿತ್ತು (ಲೋಫರ್ಸ್(ಚಪ್ಪಟೆಯಾದ ಹಿಮ್ಮಡಿಯ ಪಾದರಕ್ಷೆ), ಆದರೆ ಇದರ ಸ್ಥಾನವನ್ನು ಸಂಶ್ಲೇಷಕ ವಸ್ತುಗಳು ಆಕ್ರಮಿಸಿಕೊಂಡಿವೆ.
ಲಿನಿನ್ ಬಟ್ಟೆಯ ಒಂದು ಕರವಸ್ತ್ರವನ್ನು, ಇಸ್ತ್ರಿ ಮಾಡಿ ಅದರ ಅಂಚುಗಳನ್ನು ಕಾಣುವಂತೆ ಪ್ರದರ್ಶಿಸಲ್ಪಟ್ಟರೆ, ಸುಮಾರು ೨೦ನೇ ಶತಮಾನದ ಮೊದಲ ಭಾಗದಲ್ಲಿ ಅದು ಒಬ್ಬ ವ್ಯಕ್ತಿಯ ಅಚ್ಚುಕಟ್ಟಾದ ಉಡುಗೆ ತೊಡುಗೆಯ ಮಾನದಂಡವಾಗಿತ್ತು.
ಪ್ರಸಕ್ತದಲ್ಲಿ ಸಂಶೋಧಕರು ಹತ್ತಿ/ನಾರುಗಳನ್ನು ಸಂಯೋಜಿಸಿ ಹೊಸ ನೂಲು ಹುರಿಯನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಶಾಖ ಹಾಗು ಆರ್ದ್ರ ವಾತಾವರಣದಲ್ಲಿ ಡೆನಿಮ್ ಉಡುಪಿನ ಅನುಭವವನ್ನು ಅಧಿಕಗೊಳಿಸುತ್ತದೆ.[೬]
ಲಿನಿನ್ ಬಟ್ಟೆಗಳನ್ನು ತೈಲವರ್ಣ ಚಿತ್ರಗಳ ರಚನೆಯಲ್ಲಿ ಅವುಗಳನ್ನು ಸಾಂಪ್ರದಾಯಿಕವಾಗಿ ಸಂರಕ್ಷಿಸುತ್ತವೆಂದು ಆಯ್ಕೆ ಮಾಡಿಕೊಳ್ಳಲಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಹತ್ತಿಯನ್ನು ಲಿನಿನ್ ನ ಬದಲಿಗೆ ಜನಪ್ರಿಯವಾಗಿ ಬಳಸಲಾಗುತ್ತದೆ, ಇದು ಅಲ್ಲಿ ಬಹಳ ದುಬಾರಿಯಾಗಿದೆ, ಇದರ ಬಳಕೆ ಕೇವಲ ವೃತ್ತಿಪರ ತೈಲವರ್ಣ ಚಿತ್ರಕಾರರಿಗಷ್ಟೇ ಸೀಮಿತವಾಗಿದೆ. ಆದಾಗ್ಯೂ ಯುರೋಪ್ ನಲ್ಲಿ, ಲಿನಿನ್ ಸಾಮಾನ್ಯವಾಗಿ ಕಲಾಕೃತಿಗಳ ಅಂಗಡಿಗಳಲ್ಲಿ ದೊರೆಯುವ ಏಕೈಕ ಬಟ್ಟೆಯ ವಸ್ತುವಾಗಿದೆ. ಲಿನಿನ್ ಅನ್ನು ಹತ್ತಿಯ ಬದಲಿಗೆ ಅದರ ಬಲ, ದೀರ್ಘ ಬಾಳಿಕೆ ಹಾಗು ದಾಖಲೆಗಳ ಸಮಗ್ರತೆಗೆ ಹೆಚ್ಚು ಆಯ್ಕೆ ಮಾಡಿಕೊಳ್ಳಲಾಗುತ್ತದೆ.
ಲಿನಿನ್ ನನ್ನು ವ್ಯಾಪಕವಾಗಿ ಕುಶಲಕರ್ಮಿ ಬ್ರೆಡ್ಡು ತಯಾರಿಕೆಯಲ್ಲಿಯೂ ವ್ಯಾಪಾರಿಗಳೂ ಸಹ ಬಳಸುತ್ತಾರೆ. ಕೂಚ್ ಎಂದು ಕರೆಯಲ್ಪಡುವ ನಾರಿನ ಬಟ್ಟೆಯಲ್ಲಿ ಬ್ರೆಡ್ಡಿಗೆ ಅಂತಿಮ ರೂಪ ನೀಡುವಾಗ ನಾದಿದ ಹಿಟ್ಟನ್ನು, ಬೇಯಿಸುವ ಮುಂಚೆ ಅದರಲ್ಲಿ ಇಡಲಾಗುತ್ತದೆ. ಕೂಚ್ ಅಧಿಕ ಪ್ರಮಾಣದ ಹಿಟ್ಟಿನೊಂದಿಗೆ ಕೂಡಿರುತ್ತದೆ, ಇದನ್ನು ಬಟ್ಟೆಯ ಸಣ್ಣ ತೂತುಗಳಿಗೆ ಉಜ್ಜಲಾಗುತ್ತದೆ. ನಂತರ ಆಕಾರ ಪಡೆದ ಹಿಟ್ಟನ್ನು ಕೂಚ್ ನಲ್ಲಿ ಇರಿಸಲಾಗುತ್ತದೆ. ಹಿಟ್ಟಿನಿಂದ ತುಂಬಿದ ಕೂಚ್ ಹಿಟ್ಟನ್ನು ಹಿಡಿದುಕೊಳ್ಳುವ ಒಂದು ಅಂಟಿಕೊಳ್ಳದ ಮೇಲ್ಮೈಯನ್ನು ಹೊಂದಿರುತ್ತದೆ. ಕೂಚ್ ನಲ್ಲಿ ಹಿಟ್ಟು ಹರಡದಂತೆ ಅಲ್ಲಿ ಉಬ್ಬುಗಳನ್ನು ರೂಪಿಸಲಾಗುತ್ತದೆ. ಇದು ಈ ರೀತಿಯಾಗಿ ಕಂಡುಬರುತ್ತದೆ /\o/\o/\o/\o/\ "o" ಎಂಬುದು ಹಿಟ್ಟು ಹಾಗು /\/\/\/\ ಮಡಿಸಿದ ಕೂಚ್ ಆಗಿದೆ.
ಹಿಂದಿನ ಕಾಲದಲ್ಲಿ ಲಿನಿನ್ ನನ್ನು ಪುಸ್ತಕಗಳಿಗೂ ಸಹ ಬಳಸಲಾಗುತ್ತಿತ್ತು. (ಈಗ ಅಸ್ತಿತ್ವದಲ್ಲಿರುವ ಏಕೈಕ ಉದಾಹರಣೆಯೆಂದರೆ ಲಿಬೇರ್ ಲಿಂಟೆಯುಸ್) ಇದರ ಸಾಮರ್ಥ್ಯದಿಂದಾಗಿ, ಮಧ್ಯ ಯುಗಗಳಲ್ಲಿ ಲಿನಿನ್ ನನ್ನು ಗುರಾಣಿಗಳು ಹಾಗು ಗಂಬೆಸನ್ ಗಳಲ್ಲಿ ಬಳಕೆ ಮಾಡಲಾಗುತ್ತಿತ್ತು.(ಇತರ ಉಪಯೋಗಗಳಲ್ಲಿ ಇದನ್ನು ಹೆದೆಗಳ ತಯಾರಿಕೆಗೆ ಬಳಸಲಾಗುತ್ತಿತ್ತು). ಇದನ್ನು ಸಾಂಪ್ರದಾಯಿಕ ಪೂರ್ವಾಚರಗಳು ಹಾಗು ಗ್ರೀಸ್ ನ ವಿದ್ವಾಂಸರು ಬಳಸುತ್ತಿದ್ದ ಬಹು ಉಪಯೋಗಿ ಹಾಪ್ಲೈಟ್ ವಕ್ಷಗವಚಗಳಿಗೆ ಸಮನಾಗಿದೆ. ತೇವವಾದರೂ ಅದರ ಬಲದ ಕಾರಣದಿಂದಾಗಿ, ಐರಿಶ್ ಲಿನಿನ್ ಪಾಕೆಟ್ ಬಿಲ್ಲಿಯರ್ಡ್ಸ್/ಬಿಲ್ಲಿಯರ್ಡ್ ಕೋಲುಗಳನ್ನು ಸುತ್ತಲೂ ಬಳಸಲಾಗುತ್ತದೆ, ಏಕೆಂದರೆ ಕೈಯಲ್ಲಿ ಉಂಟಾಗುವ ಬೆವರನ್ನು ಹೀರಿಕೊಳ್ಳುತ್ತದೆ. ಲಿನಿನ್ ನಿಂದ ತಯಾರಾದ ಕಾಗದವು ಬಹಳ ಬಲವಾಗಿ ಹಾಗು ಗರಿಗರಿಯಾಗಿರುತ್ತದೆ, ಇದೆ ಕಾರಣದಿಂದಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಹಾಗು ಇತರ ರಾಷ್ಟ್ರಗಳು ೨೫% ಲಿನಿನ್ ಹಾಗು ೭೫% ಹತ್ತಿಯಿಂದ ಮಾಡಲಾದ ಕಾಗದದಿಂದ ತಮ್ಮ ಕರೆನ್ಸಿ ನೋಟುಗಳನ್ನು ಮುದ್ರಿಸುತ್ತಾರೆ.
ಇತಿಹಾಸ
[ಬದಲಾಯಿಸಿ]Expression error: Unexpected < operator.
ಪ್ರಾಚೀನ ಕಾಲದಲ್ಲಿ ಇಜಿಪ್ಷಿಯನ್ನರು ಲಿನಿನ್ ಅನ್ನು ಮಮ್ಮೀಕರಣಕ್ಕೆ(ಮೃತದೇಹದ ಸಂರಕ್ಷಣೆ) ಬಳಸುತ್ತಿದ್ದರು.
ಇಜಿಪ್ಷಿಯನ್ನರು ಲಿನಿನ್ ಬಟ್ಟೆಯನ್ನು ಶವಸಂಸ್ಕಾರದಲ್ಲಿ ಶವದ ಮೇಲೆ ಹೊದಿಸಲು ಬಳಸುತ್ತಿದ್ದರು. ಅಲ್ಲದೆ, ಪುರೋಹಿತರು ಕೇವಲ ಲಿನಿನ್ ಬಟ್ಟೆಗಳನ್ನೇ ಧರಿಸುತ್ತಿದ್ದರು ಜೊತೆಗೆ ಕೇವಲ ಲಿನಿನ್ ಬಟ್ಟೆಯನ್ನು ಧರಿಸಿದ್ದರೆ ಮಾತ್ರ ಆರಾಧಕರನ್ನು ಪೂಜಾಮಂದಿರಕ್ಕೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿತ್ತು. ಲಿನಿನ್ ಬಟ್ಟೆಯನ್ನು ಮೇಜಿನ ಮೇಲೆ ಹಾಸುವ ಹೊದಿಕೆಗಳಾಗಿ, ಹಾಸಿಗೆಯ ಮೇಲೆ ಹಾಸುವ ಹೊದಿಕೆಗಳಾಗಿ ಹಾಗು ಉಡುಪುಗಳಾಗಿ ಶತಮಾನಗಳಿಂದಲೂ ಬಳಕೆಯಲ್ಲಿದೆ. ದಾರದ ತಯಾರಿಕೆಗೆ ಹೆಚ್ಚಿನ ಅವಧಿಯು ಬೇಕಾಗಿರುವ ಕಾರಣದಿಂದಾಗಿ ಲಿನಿನ್ ನ ತಯಾರಿಕೆಯಲ್ಲಿ ಪ್ರತ್ಯೇಕತೆಯು ಉಂಟಾಗುತ್ತದೆ (ಸ್ವತಃ ನಾರನ್ನು ಬೆಳೆಯಬೇಕಾದರೆ ಹೆಚ್ಚಿನ ಜಾಗರೂಕತೆಯು ಅವಶ್ಯಕವಾಗಿರುತ್ತದೆ). ನಾರಿನ ದಾರವು ಹಿಗ್ಗು-ಹುರಿಯಾಗಿಲ್ಲದ ಕಾರಣದಿಂದಾಗಿ ದಾರಗಳು ತುಂಡಾಗದಂತೆ ನೂಲುವುದು ಬಹಳ ಕಷ್ಟಕರವಾಗಿರುತ್ತದೆ. ಹೀಗಾಗಿ ಹತ್ತಿಯ ತಯಾರಿಕೆಗಿಂತಲೂ ಇದರ ತಯಾರಿಕೆಯು ಬಹಳ ದುಬಾರಿಯಾಗಿದೆ.
ಲಿವಿಂಗ್ ಲಿನಿನ್ ಯೋಜನೆಯನ್ನು ೧೯೯೫ರಲ್ಲಿ ಐರಿಶ್ ಲಿನಿನ್ ಉದ್ಯಮದ ಬಗೆಗಿನ ಒಂದು ಮೌಖಿಕ ದಾಖಲೆಯಾಗಿ ರೂಪಿಸಲಾಯಿತು. ಈ ದಾಖಲೆಯು ಇಂದಿಗೂ ಅಲ್ಸ್ಟರ್ ನ ಕಾರ್ಖಾನೆಯಲ್ಲಿ ಹಿಂದೆ ಕೆಲಸ ಮಾಡುತ್ತಿದ್ದ ಜನರಲ್ಲಿ ದೊರೆಯುತ್ತದೆ. ಐರ್ಲ್ಯಾಂಡ್ ನಲ್ಲಿ ಲಿನಿನ್ ಬಗ್ಗೆ ಒಂದು ದೀರ್ಘವಾದ ಇತಿಹಾಸವೇ ಇದೆ.
ಜಾರ್ಜಿಯಾದ ಗುಹೆಯಲ್ಲಿ ಬಣ್ಣ ಹಚ್ಚಿದ ಲಿನಮ್ ಕುಲದ ನಾರುಗಳು ಸುಮಾರು ೩೬,೦೦೦ BPಯಲ್ಲಿ ಪತ್ತೆಯಾದವು. ಜನರು ಕಾಡಿನಲ್ಲಿ ದೊರಕುತ್ತಿದ್ದ ಲಿನಿನ್-ಮಾದರಿಯ ಬಟ್ಟೆಗಳನ್ನು ಬಹಳ ಹಿಂದಿನ ಕಾಲದಿಂದಲೂ ಬಳಸುತ್ತಿದ್ದರೆಂಬುದನ್ನು ಇದು ಸೂಚಿಸುತ್ತದೆ.[೭][೮] ಲಿನಿನ್ ನ ಬಳಕೆಯು ಇಸ್ರೇಲ್ ಜನರಿಗೆ ಕೇವಲ ಪುರೋಹಿತ ವರ್ಗದ ಪೋಷಾಕಾಗಿರಲಿಲ್ಲ. ಕ್ರಿಸ್ತನ ಹುಟ್ಟಿನ ನಂತರ ನೂರು ವರ್ಷಗಳ ಕಾಲ ಬದುಕಿದ್ದ ಪ್ಲುಟಾರ್ಚ್, ಲಿನಿನ್ ನ ಶುದ್ಧತೆಯ ಕಾರಣದಿಂದಾಗಿ ಇಸಿಸ್ ನ ಪುರೋಹಿತರೂ ಸಹ ಇದನ್ನು ಧರಿಸುತ್ತಿದ್ದರೆಂದು ಬರೆಯುತ್ತಾರೆ.
ಡಿಸೆಂಬರ್ ೨೦೦೬ರಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನದ ಜನರಲ್ ಅಸೆಂಬ್ಲಿಯು ಲಿನಿನ್ ಹಾಗು ಇತರ ನೈಸರ್ಗಿಕ ನಾರುಗಳ ಸಂಕ್ಷಿಪ್ತ ವಿವರಣೆ ನೀಡಲು ೨೦೦೯ನೇ ಇಸವಿಯನ್ನು ಅಂತಾರಾಷ್ಟ್ರೀಯ ನೈಸರ್ಗಿಕ ನಾರುಗಳ ವರ್ಷವೆಂದು ಘೋಷಿಸಿತು.
ಪುರಾತನ ಯುಗ
[ಬದಲಾಯಿಸಿ]ಕ್ರಿಸ್ತಪೂರ್ವ ೧೨೧೩ರಲ್ಲಿ ನಿಧನನಾದ ಫ್ಹೇರೋ ರಮ್ಸೆಸ್ IIನ ಸಮಾಧಿಯನ್ನು ೧೮೮೧ರಲ್ಲಿ ಪತ್ತೆ ಹಚ್ಚಲಾಯಿತು, ಲಿನಿನ್ ನಿಂದ ಸುತ್ತಲಾದ ಅವನ ದೇಹವು ಸುಮಾರು ೩೦೦೦ ವರ್ಷಗಳ ನಂತರವೂ ಸಂಪೂರ್ಣ ಸುರಕ್ಷಿತವಾಗಿತ್ತು
ಬೆಲ್ಫಾಸ್ಟ್ ನ ಗ್ರಂಥಾಲಯದಲ್ಲಿ ಸಂರಕ್ಷಿಸಲಾದ "ಕಬೂಲಿ" ಎಂಬ ಮೃತ ದೇಹವಿದೆ, ಅಮ್ಮಾನ್ ಎಂಬ ಪುರೋಹಿತನ ಮಗಳಾದ ಈಕೆ ಸುಮಾರು ೨,೫೦೦ ವರ್ಷಗಳ ಹಿಂದೆ ಮೃತಪಟ್ಟಿದ್ದಳು. ಈ ಮೃತದೇಹದ ಮೇಲಿರುವ ಲಿನಿನ್ ಬಟ್ಟೆಯು ಸಂಪೂರ್ಣವಾದ ಸುರಕ್ಷಿತ ಸ್ಥಿತಿಯಲ್ಲಿದೆ. ಟುಟನ್ಕಾಮೆನ್ ನ ಸಮಾಧಿಯನ್ನು ತೆರೆದಾಗ, ಲಿನಿನ್ ಪರದೆಗಳು ಹಾನಿಯಾಗಿಲ್ಲದಿರುವುದು ಕಂಡುಬಂದಿತು.
ಆರಂಭದ ಲಿನಿನ್ ಉದ್ಯಮ
[ಬದಲಾಯಿಸಿ]ಪುರಾತನ ದಿನಗಳಲ್ಲಿ,[when?] ಬಹುತೇಕ ಎಲ್ಲ ರಾಷ್ಟ್ರಗಳಲ್ಲೂ, ಪ್ರತಿ ಕುಟುಂಬವೂ ಲಿನಮ್ ಕುಲದ ಸಸ್ಯಗಳನ್ನು ಬೆಳೆಯುತ್ತಿತ್ತು. ಜೊತೆಗೆ ತಮ್ಮ ಬಳಕೆಗಾಗಿ ಲಿನಿನ್ ನನ್ನು ನೇಯುತ್ತಿದ್ದವು, ಆದರೆ ೪,೦೦೦ ವರ್ಷಗಳ ಹಿಂದೆ ಈಜಿಪ್ಟ್ ನಲ್ಲಿ ಲಿನಿನ್ ಕೈಗಾರಿಕೆಯು ಸ್ಥಾಪನೆಯಾಗಿದ್ದು ದಾಖಲೆಯಾಗಿದೆ. ಲಿನಿನ್ ಕೈಗಾರಿಕೆಯ ಬಗ್ಗೆ ದಾಖಾಲಾದ ಪ್ರಾಚೀನ ಸಂಗ್ರಹವು ಪೈಲೋಸ್, ಗ್ರೀಸ್ ನ ಫಲಕಗಳಾದ ಲೀನಿಯರ್ Bನಿಂದ ಒದಗಿದೆ. ಇದರಲ್ಲಿ ಲಿನಿನ್ ನನ್ನು ಒಂದು ಭಾವಲಿಪಿಯಾಗಿ ವರ್ಣಿಸಲಾಗಿದೆ ಜೊತೆಗೆ ಇದನ್ನು "ಲಿ-ನೋ" ಎಂದು ಬರೆಯಲಾಗಿದೆ. (ಗ್ರೀಕ್ ನಲ್ಲಿ λίνον, ಲಿನೋನ್ ), ಹಾಗು ಮಹಿಳಾ ಲಿನಿನ್ ಕೆಲಸಗಾರರನ್ನು "ಲಿ-ನೇ-ಯಾ" ಎಂದು ಸೂಚಿಸಲಾಗುತ್ತಿತ್ತು (λίνεια, ಲಿನೆಯಾ ).[೯][೧೦]
ಫ್ಹಿನಿಶ್ ದೇಶದವರು, ತಮ್ಮ ವ್ಯಾಪಾರಿ ಹಡಗುಪಡೆಯೊಂದಿಗೆ, ಮೆಡಿಟರೇನಿಯನ್ ಜನರ ಜೊತೆಗೆ ವ್ಯಾಪಾರ-ವಹಿವಾಟಿಗಾಗಿ ಕಾರ್ನ್ವಾಲ್ ನ ತವರ ಬಳಿದ ಕಬ್ಬಿಣದ ಗಣಿಗಳ ಅಭಿವೃದ್ದಿಯ ಜೊತೆಗೆ ಹೊಸ ಮಾರ್ಗಗಳನ್ನು ತೆರವುಗೊಳಿಸಿದರು. ನಾರುಗಳನ್ನು ಬೆಳೆಯುವುದನ್ನು ಹಾಗು ಲಿನಿನ್ ನ ತಯಾರಿಕೆಯನ್ನು CEಗೆ ಮುಂಚೆ ಐರ್ಲ್ಯಾಂಡ್ ಗೆ ಪರಿಚಯಿಸಿದರು. ಆದರೆ ಆಂತರಿಕ ವಿರೋಧಗಳು ಎರಿನ್ ನ ಅಂದಿನ ದಿನಗಳಲ್ಲೂ ಪ್ರಬಲವಾಗಿದ್ದವು. ಇದು ಒಂದು ವ್ಯವಸ್ಥಿತ ಕೈಗಾರಿಕೆಯ ಸ್ಥಾಪನೆಯ ವಿರುದ್ಧ ಪ್ರತಿಭಟಿಸಿತು, ಜೊತೆಗೆ ಹನ್ನೆರಡನೆ ಶತಮಾನದವರೆಗೂ ವ್ಯವಸ್ಥಿತವಾದ ನಾರಿನ ಉತ್ಪಾದನೆಯ ಒಂದು ಖಚಿತ ಪ್ರಯತ್ನದ ಬಗ್ಗೆ ಯಾವುದೇ ದಾಖಲೆಗಳಿಲ್ಲ.
A.D. ೧೬೮೫ರಲ್ಲಿ ಎಡಿಕ್ಟ್ ಆಫ್ ನಾನ್ಟೆಸ್ ರದ್ದುಗೊಂಡಾಗ ರಾಷ್ಟ್ರ ಬಿಟ್ಟು ಓಡಿ ಹೋದ ಹಲವು ಹುಗುಯೇನಾಟ್ಸ್ ಗಳು ಬ್ರಿಟಿಶ್ ಐಲ್ಸ್ ನಲ್ಲಿ ನೆಲೆಗೊಂಡರು, ಜೊತೆಗೆ ಇವರಲ್ಲಿ ಓಡಿಬಂದ ಲೂಯಿಸ್ ಕ್ರೊಮ್ಮೆಲಿನ್ ನೇಕಾರನಾಗಿ ಹುಟ್ಟಿ ಬೆಳೆದು ಉತ್ಕೃಷ್ಟ ಲಿನಿನ್ ನೇಕಾರನಾಗಿ, ಕ್ಯಾಮ್ಬ್ರೈ ಪಟ್ಟಣದಲ್ಲಿ ಜನಪ್ರಿಯನಾದ. ಈತ ಅಲ್ಸ್ಟರ್ ಗೆ ಓಡಿಹೋಗುವುದರ ಜೊತೆಗೆ ಅಂತಿಮವಾಗಿ ಬೆಲ್ಫಾಸ್ಟ್ ನಿಂದ ಸುಮಾರು ಹತ್ತು ಮೈಲಿ ದೂರವಿರುವ ಲಿಸ್ಬರ್ನ್ ನ ಸಣ್ಣ ಪಟ್ಟಣದಲ್ಲಿ ನೆಲೆಗೊಂಡ. ಇತಿಹಾಸದುದ್ದಕ್ಕೂ ಬೆಲ್ಫಾಸ್ಟ್ ನ್ನು ಬಹುಶಃ ಅತ್ಯಂತ ಪ್ರಸಿದ್ಧ ಲಿನಿನ್ ತಯಾರಿಕಾ ಕೇಂದ್ರವಾಗಿದೆ, ವಿಕ್ಟೋರಿಯನ್ ಶಕೆಯಲ್ಲಿ ಪ್ರಪಂಚದ ಬಹುತೇಕ ಲಿನಿನ್ ನನ್ನು ನಗರದಲ್ಲಿ ಬೆಳೆಯಲಾಯಿತು. ಇದರಿಂದಾಗಿ ನಗರಕ್ಕೆ ಲಿನಿನೋಪೋಲಿಸ್ ಎಂಬ ಹೆಸರು ದೊರೆಯಿತು.
ಯುದ್ಧಾನಂತರದಲ್ಲಿ, ಕ್ಯಾಮ್ಬ್ರೈ ಅತ್ಯಂತ ಉಗ್ರ ಕದನದ ಕೇಂದ್ರವೆಂದು ಪ್ರಸಿದ್ಧವಾಯಿತು. "ಕ್ಯಾಮ್ಬ್ರಿಕ್" ಎಂಬ ಪದವು ಈ ಪಟ್ಟಣದಿಂದ ಹುಟ್ಟಿಕೊಂಡಿದೆ.
ಆದಾಗ್ಯೂ, ಲಿನಿನ್ ಕೈಗಾರಿಕೆಯು ಅಲ್ಸ್ಟರ್ ನಲ್ಲಿ ಈ ಮೊದಲೇ ಸ್ಥಾಪನೆಯಾಗಿತ್ತು, ಲೂಯಿಸ್ ಕ್ರೊಮ್ಮೆಲಿನ್ ನೇಯ್ಗೆಯ ಸುಧಾರಣೆಗೆ ಇರುವ ಅವಕಾಶವನ್ನು ಪತ್ತೆಮಾಡಿದ, ಹಾಗು ಅವನ ಪ್ರಯತ್ನವು ಎಷ್ಟು ಯಶಸ್ವಿಯಾಯಿತೆಂದರೆ ಲಿಸ್ಬರ್ನ್ ಹಾಗು ಸುತ್ತಮುತ್ತಲ ಪ್ರದೇಶಗಳಿಗಷ್ಟೇ ಸೀಮಿತ ಪಡಿಸದೇ ವ್ಯಾಪಕ ಶ್ರೇಣಿಯಲ್ಲಿ ಕೈಗಾರಿಕೆಯನ್ನು ಅಭಿವೃದ್ದಿಪಡಿಸಲು ಸರ್ಕಾರ ಅವನನ್ನು ನೇಮಕ ಮಾಡಿತು. ಅವನ ಉತ್ತಮ ಕೆಲಸದ ನೇರ ಪರಿಣಾಮವಾಗಿ ೧೭೧೧ರಲ್ಲಿ ಐರ್ಲ್ಯಾಂಡ್ ನ ಲಿನಿನ್ ತಯಾರಕರ ಆಡಳಿತ ಸಮಿತಿ ಸ್ಥಾಪನೆ ಹಾಗು ಅದನ್ನು ಕಾನೂನುಬದ್ಧಗೊಳಿಸಲಾಯಿತು.
ಧರ್ಮ
[ಬದಲಾಯಿಸಿ]ಯಹೂದಿ ಧರ್ಮದಲ್ಲಿ, ಬಟ್ಟೆ ತಯಾರಿಕೆಗೆ ಸಂಬಂಧಿಸಿದಂತೆ ನೇಯ್ಗೆಯಲ್ಲಿ ಒಟ್ಟಾಗಿ ಹೆಣೆಯಬಹುದಾದ ಲಿನಿನ್ ಹಾಗು ಉಣ್ಣೆಯ ಮಿಶ್ರಣವನ್ನು ನೇಯ್ಗೆಯಲ್ಲಿ ಬಳಸುವುದು ಏಕೈಕ ಕಾನೂನಾಗಿದೆ. ಈ ಮಿಶ್ರಣವನ್ನು ಶಾಟ್ನೆಜ್ ಎಂದು ಕರೆಯಲಾಗುತ್ತದೆ ಹಾಗು ಇದನ್ನು ಸ್ಪಷ್ಟವಾಗಿ Deuteronomy 22:11ರಲ್ಲಿ ಸೀಮಿತಗೊಳಿಸಲಾಗಿದೆ "ನೀನು, ಉಣ್ಣೆ ಹಾಗು ಲಿನಿನ್ ಒಟ್ಟಾರೆಯಾಗಿ ಮಿಶ್ರಣ ಮಾಡಿದ ಬಟ್ಟೆಯನ್ನು ಧರಿಸಬಾರದು" ಜೊತೆಗೆ Leviticus 19:19, "'...ಅಲ್ಲದೆ ನೀನು ಎರಡು ವಸ್ತುಗಳಿಂದ ಒಟ್ಟಾರೆ ಮಿಶ್ರಣವಾದ ಬಟ್ಟೆಯು ಹಠಾತ್ ಆಗಿ ಕಂಡು ಬರಬಹುದು.'" ಇದಕ್ಕೆ ಸ್ವತಃ ತೋರುವಿಕೆಯಲ್ಲಿ ಯಾವುದೇ ವಿವರಣೆಯಿಲ್ಲ ಜೊತೆಗೆ ಇದನ್ನು ಚುಕಿಂ ಎಂಬ ಒಂದು ಕಾನೂನು ಮಾದರಿಯಡಿಯಲ್ಲಿ ವರ್ಗೀಕರಿಸಲಾಗಿದೆ, ಇದು ಮನುಷ್ಯನ ಗ್ರಹಣಾ ಸಾಮರ್ಥ್ಯವನ್ನೂ ಮೀರಿದ ಕಾನೂನಾಗಿದೆ.[೧೧] ಈ ವಸ್ತ್ರ ಧಾರಣೆಗೆ ನಿಷೇಧವನ್ನು ಹೇರಲು ಕಾರಣವೆಂದರೆ, ಪುರೋಹಿತರ ಅಧಿಕೃತ ಉಡುಗೆಯಾದ ಇದನ್ನು ಲೌಕಿಕರು ಧರಿಸದಂತೆ ಮಾಡುವುದೆಂದು ಜೋಸೆಫಸ್ ಸೂಚಿಸುತ್ತಾರೆ.[೧೨] ಆದರೆ ಇಂತಹ ಮಿಶ್ರಣ ಹೊಂದಿದ ವಸ್ತ್ರಗಳನ್ನು ಯಾವುದೇ ಧರ್ಮಕ್ಕೆ ಸೇರದ ಪುರೋಹಿತರು ಧರಿಸುತ್ತಿದ್ದರೆಂಬ ಕಾರಣದಿಂದಾಗಿ ನಿಷೇಧಿಸಲಾಯಿತೆಂದು ಮೈಮೊನೈಡ್ಸ್ ಪರಿಗಣಿಸುತ್ತಾರೆ.[೧೩] ಸಾಧಾರಣವಾಗಿ ಭಿನ್ನ ಜಾತಿಯವರು ಇಂತಹ ಮಿಶ್ರಿತ ಬಟ್ಟೆಯನ್ನು ಧರಿಸುತ್ತಿದ್ದರೆಂಬ ಕಾರಣದಿಂದಾಗಿ ದೇವರು ಅವರನ್ನು ನಿಷೇಧಿಸಿದರೆಂದು ಇತರರು ವಿವರಿಸುತ್ತಾರೆ, ಒಂದು ನಿಜವಾದ ಮಾರ್ಗದಲ್ಲಿ ಸಮಂಜಸವಾಗಿ ಹೇಳುವುದಾದರೆ ಇದು ದೇವರಿನ ವಿನ್ಯಾಸವಲ್ಲ, ಇದು ಎರಡು ವಿವಿಧ ಜಾತಿಯ ಪ್ರಾಣಿಗಳನ್ನು ಹಿಂಸಿಸಿ ಒಟ್ಟಾರೆ ಧರಿಸುವುದಕ್ಕೆ ಇದು ಪ್ರಾಣಿ ಹಾಗು ಸಸ್ಯದ ನಾರುಗಳ ಮಿಶ್ರಣವು ಸದೃಶವಾಗಿದೆ ಎಂದು ಹೇಳಲಾಗುತ್ತದೆ. ಹಾಗು ಇಂತಹ ಆದೇಶಗಳು ಕಾರ್ಯತಃ ಹಾಗು ಗೂಢ ಅರ್ಥದ ಉದ್ದೇಶ ಎರಡರಲ್ಲೂ ..., ಬಹುಶಃ ಇಲ್ಲಿ ಪುರೋಹಿತರ ವಸ್ತ್ರಗಳನ್ನು ಧರಿಸುವುದನ್ನು ತಡೆಗಟ್ಟುವುದು ಬಿಸಿಲಿನ ವಾತಾವರಣದಲ್ಲಿ ಅನನುಕೂಲತೆಯನ್ನು ಉಂಟುಮಾಡುತ್ತದೆ (ಅಥವಾ ತೀವ್ರತರವಾದ ಬೆವರು).[೧೪] ಲಿನಿನ್ ಬಗ್ಗೆ ಬೈಬಲ್ ನ ಪ್ರಾವರ್ಬ್ಸ್ ೩೧ರಲ್ಲೂ ಉಲ್ಲೇಖವಿದೆ, ಇದರಲ್ಲಿ ಒಬ್ಬ ಕುಲೀನ ಪತ್ನಿಯನ್ನು ವಿವರಿಸುವ ಚಿಕ್ಕ ಭಾಗವಿದೆ. ಪ್ರಾವರ್ಬ್ ೩೧:೨೨ರಲ್ಲಿ, "ಆಕೆ ತನ್ನ ಹಾಸಿಗೆ ಮೇಲೆ ಹಾಸುವ ಹೊದಿಕೆಗಳನ್ನು ತಯಾರಿಸುತ್ತಾಳೆ, ಆಕೆ ಉತ್ಕೃಷ್ಟವಾದ ನೇರಳೆ ಬಣ್ಣದ ಲಿನಿನ್ ಬಟ್ಟೆಯನ್ನು ಧರಿಸಿರುತ್ತಾಳೆ."
ವ್ಯುತ್ಪತ್ತಿ ಶಾಸ್ತ್ರ
[ಬದಲಾಯಿಸಿ]ಲಿನಿನ್ ಎಂಬ ಪದವು ಲಿನಂ ಕುಲದ ಸಸ್ಯ ಎಂಬ ಅರ್ಥವನ್ನು ನೀಡುವ ಲ್ಯಾಟಿನ್‌ಪದ ಲಿನಮ್ ನಿಂದ ವ್ಯುತ್ಪತ್ತಿಯನ್ನು ಪಡೆದಿದೆ, ಜೊತೆಗೆ ಇದು ಹಿಂದಿನ ಗ್ರೀಕ್‌ಭಾಷೆಯಲ್ಲಿ ಲಿನೋನ್ ಎಂಬ ಹೆಸರನ್ನು ಪಡೆದಿತ್ತು. ಈ ಪದದ ಇತಿಹಾಸವು ಇತರ ಹಲವು ಪದಗಳ ಹುಟ್ಟಿಗೆ ಕಾರಣವಾಗಿದೆ:
- ಲೈನ್, ಇದು ಲಿನಿನ್ ದಾರದ ಬಳಕೆಯಿಂದ ಹುಟ್ಟಿಕೊಂಡ ಪದ, ಈ ಪದವನ್ನು ಒಂದು ನೇರವಾದ ಗೆರೆಯನ್ನು ನಿರೂಪಿಸಲು ಬಳಸಲಾಗುತ್ತದೆ;
- ಲಿನಿಮೆಂಟ್,ಎಂಬ ಪದವು ನಾರಿನ ಬೀಜಗಳನ್ನು ನುಣುಪಾಗಿ ಪುಡಿ ಮಾಡಿ, ಸ್ನಾಯುಗಳ ನೋವನ್ನು ಶಮನಗೊಳಿಸಲು ಚರ್ಮದ ಮೇಲೆ ತೆಳುವಾಗಿ ಲೇಪನ ಮಾಡಲಾಗುತ್ತದೆ
- ಲೈನಿಂಗ್, ಲಿನಿನ್ ನನ್ನು ಸಾಮಾನ್ಯವಾಗಿ ಉಣ್ಣೆ ಹಾಗು ಚರ್ಮದ ವಸ್ತ್ರಗಳಿಗೆ ಒಳಭಾಗದ ಪದರವಾಗಿ ಬಳಸಲಾಗುತ್ತಿತ್ತು
- ಲ್ಯಾಂಷರಿ ಎಂಬ ಪದವು ಫ್ರೆಂಚ್ ಭಾಷೆಯಿಂದ ಹುಟ್ಟಿಕೊಂಡಿದೆ. ಇದು ಮೂಲತಃ ಲಿನಿನ್ ನಿಂದ ತಯಾರಾದ ಒಳ ಉಡುಪುಗಳಿಗೆ ಸೂಚಿತವಾಗಿದೆ
- ಲಿನ್ಸೀಡ್ ಆಯಿಲ್ (ನಾರಗಸೆ ಎಣ್ಣೆ), ನಾರಿನಬೀಜಗಳಿಂದ ತಯಾರಾದ ಒಂದು ಬಗೆಯ ಎಣ್ಣೆ
- ಲಿನೋಲಿಯಂ, ನಾರಗಸೆ ಎಣ್ಣೆ ಹಾಗು ಇತರ ಸಾಮಗ್ರಿಗಳಿಂದ ತಯಾರಿಸಲಾದ ಒಂದು ನೆಲದ ಹಾಸು ಬಟ್ಟೆ
ಇದಲ್ಲದೆ, ಇಂಗ್ಲೀಷ್ ನ ಫ್ಲ್ಯಾಕ್ಸನ್-ಹೇರ್ಡ್ ಎಂಬ ಪದವು (ನಯಮಾಡಿದ ಅಗಸೆನಾರಿನ ಬಣ್ಣದ ಮಾಸಲು ಹಳದಿಮಿಶ್ರಿತ ಕಂದುಬಣ್ಣ) ಬಹಳ ತೆಳುವಾದ, ಉಜ್ವಲ ಹೊಂಬಣ್ಣಕ್ಕೆ ಸೂಚಿತವಾಗಿದೆ. ಇದು ಕಚ್ಚಾ ಲಿನಮ್ ನಾರಿನ ಬಣ್ಣಕ್ಕೆ ಹೋಲಿಕೆಯಾಗುತ್ತದೆ.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Ars.usda.gov
- ಲಿವಿಂಗ್ ಲಿನಿನ್ ಆರ್ಕೈವ್ - ಕಳೆದ ೨೦ನೇ ಶತಮಾನದಲ್ಲಿ ಐರಿಶ್ ಲಿನಿನ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಜನರ ಮೌಖಿಕ ದಾಖಲಾತಿ.
- ಲಿನಮ್ ಕುಲದ ನಾರಿನಿಂದ ಲಿನಿನ್ ನ ತಯಾರಿಕೆ
- ಐರಿಶ್ ಲಿನಿನ್ ನ ಇತಿಹಾಸ Archived 2007-07-03 ವೇಬ್ಯಾಕ್ ಮೆಷಿನ್ ನಲ್ಲಿ.
- ಐರಿಶ್ ಲಿನಿನ್ - ಐರ್ಲ್ಯಾಂಡ್ ನ ವಸ್ತ್ರ
ಪರಾಮರ್ಶನಗಳು
[ಬದಲಾಯಿಸಿ]- ↑ [3] ^ ಬಾಲ್ಟರ್ M. (೨೦೦೯). ಕ್ಲೋತ್ಸ್ ಮೇಕ್ ದ (ಹ್ಯೂ) ಮ್ಯಾನ್. ಸೈನ್ಸ್,೩೨೫(೫೯೪೬):೧೩೨೯.[0]
- ↑ [5] ^ ಕ್ವಾವಡ್ಜೆ E, ಬಾರ್-ಯೋಸೆಫ್ O, ಬೆಲ್ಫರ್-ಕೋಹೆನ್ A, ಬೊಯರೆಟ್ಟೊ E, ಜ್ಯಾಕೆಲಿ NZ, ಮತ್ಸ್ಕೆವಿಚ್ Z, ಮೆಶ್ವೆಲಿಅನಿ T.(೨೦೦೯).೩೦,೦೦೦-ವರ್ಷ-ಹಳೆಯದಾದ ಕಾಡಿನಲ್ಲಿ ಬೆಳೆಯುವ ಲಿನಮ್ ಕುಲದ ನಾರುಗಳು. ಸೈನ್ಸ್, ೩೨೫(೫೯೪೬):೧೩೫೯. [4] ಸಪೋರ್ಟಿಂಗ್ ಆನ್ಲೈನ್ ಮೆಟೀರಿಯಲ್
- ↑ ದಿ ನ್ಯಾಚುರಲ್ ಹಿಸ್ಟರಿ ಆಫ್ ದಿ ಬೈಬಲ್ , ಥದ್ದೇಯುಸ್ ಮಸೋನ್ ಹ್ಯಾರಿಸ್ ಪುಟ ೧೩೫
- ↑ ೪.೦ ೪.೧ ಟೆಕ್ಸ್ಟೈಲ್ಸ್, ಒಂಬತ್ತನೇ ಆವೃತ್ತಿ ಸಾರಾ J. ಕಡೋಲ್ಪ್ಹ್ ಹಾಗು ಅನ್ನಾ L. ಲ್ಯಾಂಗ್ ಫೋರ್ಡ್ ರಿಂದ. ಅಪ್ಪರ್ ಸ್ಯಾಡಲ್ ರಿವರ್, NJ: ಪ್ರೆನ್ಟಿಸ್ ಹಾಲ್
- ↑ ೫.೦ ೫.೧ ೫.೨ ಕ್ಲ್ಯಾಸಿಫಿಕೆಷನ್ಸ್ & ಅನಾಲಿಸಿಸ್ ಆಫ್ ಟೆಕ್ಸ್ಟೈಲ್ಸ್: ಏ ಹ್ಯಾಂಡ್ ಬುಕ್ ಬೈ ಕರೆನ್ L.ಲಬ್ಯಾಟ್ Ph.D. ಹಾಗು ಕ್ಯಾರೊಲ್ ಜ. ಸಲುಸ್ಸೋ,Ph.A. ಯೂನಿವರ್ಸಿಟಿ ಆಫ್ ಮಿನ್ನೇಸೋಟ, ೨೦೦೩
- ↑ "ಫ್ಲ್ಯಾಕ್ಸ್ ಫೈಬರ್ ಆಫರ್ಸ್ ಕಾಟನ್ ಕೂಲ್ ಕಂಫರ್ಟ್", ಅಗ್ರಿಕಲ್ಚರಲ್ ರಿಸರ್ಚ್ ಮ್ಯಾಜಜಿನ್ ನವೆಂಬರ್ ೨೦೦೫ರ ಸಂಚಿಕೆ
- ↑ [3] ^ ಬಾಲ್ಟರ್ M. (೨೦೦೯). ಕ್ಲೋತ್ಸ್ ಮೇಕ್ ದ (ಹ್ಯೂ) ಮ್ಯಾನ್. ಸೈನ್ಸ್,೩೨೫(೫೯೪೬):೧೩೨೯.[2]
- ↑ [5] ^ ಕ್ವಾವಡ್ಜೆ E, ಬಾರ್-ಯೋಸೆಫ್ O, ಬೆಲ್ಫರ್-ಕೋಹೆನ್ A, ಬೊಯರೆಟ್ಟೊ E,ಜ್ಯಾಕೆಲಿ N, ಮ್ಯಾಟ್ಸ್‌ಕೆವಿಚ್ Z, ಮೆಶ್ವೆಲಿಯಾನಿ T. (೨೦೦೯).೩೦,೦೦೦-ವರ್ಷ-ಹಳೆಯದಾದ-ಕಾಡಿನಲ್ಲಿ ಬೆಳೆಯುವ ಲಿನಮ್ ಕುಲದ ನಾರುಗಳು. ಸೈನ್ಸ್, ೩೨೫(೫೯೪೬):೧೩೫೯. [15]ಸಪೋರ್ಟಿಂಗ್ ಆನ್ಲೈನ್ ಮೆಟೀರಿಯಲ್
- ↑ "ಫ್ಲ್ಯಾಕ್ಸ್ ಅಂಡ್ ಲಿನಿನ್ ಟೆಕ್ಸ್ಟೈಲ್ಸ್ ಇನ್ ದಿ ಮೈಸೆನಯಿಯನ್ ಪಲೇಷಲ್ ಇಕಾನಮಿ". Archived from the original on 2008-04-11. Retrieved 2010-08-12.
- ↑ Links.jstor.org
- ↑ ದಿ ಜ್ಯೂಯಿಶ್ ಪ್ರಿಮರ್, ಶ್ಮುಎಲ್ ಹಿಮೆಲ್ ಸ್ಟೇಯಿನ್ ರಿಂದ. ನ್ಯೂಯಾರ್ಕ್, ನಿ: ಫ್ಯಾಕ್ಟ್ಸ್ ಆನ್ ಫೈಲ್, ೧೯೯೦.
- ↑ ಎಟ್ಜ್ ಹಯಿಂ ಪುಟ.೧೧೧೮
- ↑ ಗೈಡ್ ಟು ದಿ ಪರ್ಪ್ಲೆಕ್ಸ್ಡ್ ೩:೩೭
- ↑ ಜಾಮಿಸನ್, ಫೌಸೆಟ್, ಬ್ರೌನ್ ಕಾಮೆಂಟರಿ, Lv.೧೯:೧೯