ವಿಷಯಕ್ಕೆ ಹೋಗು

ಲೇ'ಸ್ (ಚಿಪ್ಸ್)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೇ'ಸ್ ಎಂಬುದು ವಿವಿಧ ರುಚಿಯ ಆಲೂಗಡ್ಡೆ ಚಿಪ್ಸ್ ಬ್ರಾಂಡ್ ಆಗಿದ್ದು, ಇದನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸ್ಥಾಪಿಸಲಾಗಿತ್ತು. 1965 ರಿಂದ ಪೆಪ್ಸಿಕೋದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿರುವ ಫ್ರಿಟೊ-ಲೇ ಕಂಪನಿಯಿಂದ "ಲೇ" ಮತ್ತು ಫ್ರಿಟೋಸ್ ಎರಡೂ ಬ್ರಾಂಡ್‌ಗಳನ್ನು ಮಾರಾಟ ಮಾಡುವುದರಿಂದ, ಈ ಬ್ರ್ಯಾಂಡ್ ಅನ್ನು ಫ್ರಿಟೊ-ಲೇ ಎಂದೂ ಕರೆಯಲಾಗುತ್ತದೆ. ಫ್ರಿಟೊ-ಲೇ ಪ್ರಾಥಮಿಕವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ "ಲೇಯ್ಸ್" ಎಂಬ ಬ್ರಾಂಡ್ ಹೆಸರನ್ನು ಬಳಸುತ್ತದೆ ಮತ್ತು ಇನ್ನಿತರ ಕೆಲ ದೇಶಗಳಲ್ಲಿ ಇತರ ಹೆಸರುಗಳನ್ನು ಬಳಸುತ್ತದೆ. ಉದಾಹರಣೆಗೆ ಯುಕೆ ಮತ್ತು ಐರ್ಲೆಂಡ್‌ನಲ್ಲಿ ವಾಕರ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ಸ್ಮಿತ್ಸ್ .

ಇತಿಹಾಸ[ಬದಲಾಯಿಸಿ]

1932 ರಲ್ಲಿ, ಮಾರಾಟಗಾರ ಹರ್ಮನ್ ಲೇ ನ್ಯಾಶ್ವಿಲ್ಲೆ, ಟೆನ್ನೆಸ್ಸಿಯಲ್ಲಿ ಲಘು ಆಹಾರ ತಯಾರಿಸುವ ಉದ್ಯಮವನ್ನು ತೆರೆದರು. [೧] 1938 ರಲ್ಲಿ, ಅವರು ಅಟ್ಲಾಂಟಾ, ಜಾರ್ಜಿಯಾ ಮೂಲದ ಆಲೂಗಡ್ಡೆ ಚಿಪ್ಸ್ ತಯಾರಿಸುವ "ಬ್ಯಾರೆಟ್ ಫುಡ್ ಕಂಪನಿ" ಅನ್ನು ಖರೀದಿಸಿದರು, ಅದನ್ನು "ಎಚ್ ಡಬ್ಲೂ ಲೇ ಲಿಂಗೋ ಆಂಡ್ ಕಂಪನಿ" ಎಂದು ಮರುನಾಮಕರಣ ಮಾಡಿದರು. ಲೇ ಅವರು ದಕ್ಷಿಣ ಯುನೈಟೆಡ್ ಸ್ಟೇಟ್ಸ್ ಅನ್ನು ದಾಟಿ, ತಮ್ಮ ಕಾರಿನ ಟ್ರಂಕ್‌ ಮೂಲಕ ಉತ್ಪನ್ನಗಳನ್ನು ಮಾರಾಟ ಮಾಡಿದರು.

ಈ ಉದ‍್ಯಮವು 1944 ರಲ್ಲಿ ತನ್ನ ಹೆಸರನ್ನು "ಲೇಸ್ ಲೇ ಲಿಂಗೋ ಕಂಪನಿ" ಎಂದು ಬದಲಿಸಿಕೊಂಡು ದೂರದರ್ಶನ ಜಾಹೀರಾತುಗಳನ್ನು ಖರೀದಿಸಿದ ಮೊದಲ ಲಘು ಆಹಾರ ತಯಾರಕ ಎನಿಸಿಕೊಂಡಿತು. ಇದರ ಪ್ರಸಿದ್ಧ ವಕ್ತಾರರಾಗಿ ಬರ್ಟ್ ಲಾಹ್ರ್ ಅವರನ್ನು ಬಳಸಿಕೊಂಡರು. [೨]

1961 ರಲ್ಲಿ, ಚಾರ್ಲ್ಸ್ ಇ. ಡೂಲಿನ್ ಸ್ಥಾಪಿಸಿದ ಫ್ರಿಟೊ ಕಂಪನಿಯು ಲೇ'ಸ್‌ನೊಂದಿಗೆ ವಿಲೀನಗೊಂಡು "ಫ್ರಿಟೊ-ಲೇ" ಆಯಿತು. ವಾರ್ಷಿಕವಾಗಿ $127 ಮಿಲಿಯನ್‌ಗಿಂತಲೂ ಹೆಚ್ಚಿನ ಸಂಯೋಜಿತ ಮಾರಾಟದೊಂದಿಗೆ ಲಘು ಆಹಾರದ ಕ್ಷೇತ್ರದಲ್ಲಿ "ದೈತ್ಯ"ವಾಗಿ ರೂಪುಗೊಂಡಿತು. ಇದು ಆ ಕಾಲದಲ್ಲಿ ಗಳಿಸಿದ ಅತ್ಯಧಿಕ ಮಾರಾಟ ಆದಾಯವಾಗಿತ್ತು. ಸ್ವಲ್ಪ ಸಮಯದ ನಂತರ, ಲೇ ತನ್ನ ಈ ಅತ್ಯಂತ ಪ್ರಸಿದ್ಧ ಘೋಷಣೆಯನ್ನು ಪರಿಚಯಿಸಿತು: "ನೀವು ಕೇವಲ ಒಂದನ್ನು ತಿನ್ನಲು ಸಾಧ್ಯವೇ ಇಲ್ಲ"("betcha can't eat just one"). ಚಿಪ್‌ಗಳ ಮಾರಾಟವು ಅಂತರಾಷ್ಟ್ರೀಯವಾಗಿ ಬೆಳೆಯಿತು. ಮಾರ್ಕೆಟಿಂಗ್‌ಗೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಸಹಾಯ ಮಾಡಿದರು. ಫ್ರಿಟೊ-ಲೇ ವಾರ್ಷಿಕ ಆದಾಯವು 1965 ರ ವೇಳೆಗೆ $180 ಮಿಲಿಯನ್ ಮೀರಿತು. ಕಂಪನಿಯು 8,000 ಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು 46 ಉತ್ಪಾದನಾ ಘಟಕಗಳನ್ನು ಹೊಂದಿತ್ತು. [೩]

1965 ರಲ್ಲಿ ಫ್ರಿಟೊ-ಲೇ, ಪೆಪ್ಸಿ-ಕೋಲಾ ಕಂಪನಿಯೊಂದಿಗೆ ವಿಲೀನಗೊಂಡು ಪೆಪ್ಸಿಕೋ ಆಯಿತು. 1991 ರಲ್ಲಿ, ಕಂಪನಿಯು ತಮ್ಮ ಚಿಪ್‌ನ ಹೊಸ ಸೂತ್ರೀಕರಣವನ್ನು ಪರಿಚಯಿಸಿತು. ಇದು ಗರಿಗರಿಯಾಗಿತ್ತು ಮತ್ತು ಹೆಚ್ಚು ತಾಜಾ ಆಗಿತ್ತು. ಸ್ವಲ್ಪ ಸಮಯದ ನಂತರ, ಕಂಪನಿಯು "ವೇವಿ ಲೇ" ಉತ್ಪನ್ನಗಳನ್ನು ಕಿರಾಣಿಗಳಲ್ಲಿ ಪರಿಚಯಿಸಿತು. 1990 ರ ದಶಕದ ಮಧ್ಯದಿಂದ ಕೊನೆಯವರೆಗೆ, ಲೇ'ಸ್ ಕಡಿಮೆ-ಕ್ಯಾಲೋರಿ ಉಳ್ಳ ಬೇಯಿಸಿದ ಚಿಪ್ಸ್ ಪರಿಚಯಿಸಿತು ಮತ್ತು ಕೊಬ್ಬಿಗೆ ಪರ್ಯಯವಾಗಿ ಒಲೆಸ್ಟ್ರಾವನ್ನು ಒಳಗೊಂಡಿರುವ ಕೊಬ್ಬು-ಮುಕ್ತ ವಿಧವನ್ನು ( ಲೇಸ್ "ವಾವ್" ಚಿಪ್ಸ್ ) ಪರಿಚಯಿಸಿತು.[೪]

2000ದ ದಶಕದಲ್ಲಿ, ಕಂಪನಿಯು "ಕೆಟಲ್‌-ಕುಕ್ಡ್" ವಿಧಗಳನ್ನು ಪರಿಚಯಿಸಿತು, ಜೊತೆಗೆ ಹೆಚ್ಚು ಸಂಸ್ಕರಿಸಿದ ವಿಧಗಳನ್ನು ( ಲೇಸ್ ಸ್ಟ್ಯಾಕ್ಸ್ ) ಪರಿಚಯಿಸಿತು.

2012 ರಲ್ಲಿ, ಫ್ರಿಟೊ-ಲೇ ಉತ್ಪನ್ನಗಳು ಯುನೈಟೆಡ್ ಸ್ಟೇಟ್ಸ್ ಲಘು-ಆಹಾರ(ಖಾರ) ಮಾರುಕಟ್ಟೆಯ 59% ಭಾಗವಾಗಿವೆ. [೫]

ಏಪ್ರಿಲ್ 2019 ರಲ್ಲಿ, ಪೆಪ್ಸಿಕೋದ ಭಾರತೀಯ ಅಂಗಸಂಸ್ಥೆಯು ಭಾರತದ ಗುಜರಾತ್‌ನಲ್ಲಿ ಹಕ್ಕುಸ್ವಾಮ್ಯ ಉಲ್ಲಂಘನೆಗಾಗಿ ನಾಲ್ಕು ರೈತರ ಮೇಲೆ ಮೊಕದ್ದಮೆ ಹೂಡಿತು. [೬] [೭] ಎರಡು ವರ್ಷಗಳ ನಂತರ, ಸಸ್ಯ ಪ್ರಭೇದಗಳ ಸಂರಕ್ಷಣೆ ಮತ್ತು ರೈತರ ಹಕ್ಕುಗಳ ಕಾಯಿದೆ, 2001 ರ ಅಡಿಯಲ್ಲಿ ರೈತರ ಪರವಾಗಿ ತೀರ್ಪು ನೀಡಲಾಯಿತು. [೮]

ಅಂತರರಾಷ್ಟ್ರೀಯ ಬ್ರ್ಯಾಂಡಿಂಗ್[ಬದಲಾಯಿಸಿ]

ಫ್ರಿಟೊ-ಲೇ ಸಾಮಾನ್ಯವಾಗಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ "ಲೇಸ್" ಎಂಬ ಬ್ರ್ಯಾಂಡ್ ಹೆಸರನ್ನು ಬಳಸುತ್ತದೆ ಮತ್ತು ವಾಕರ್ಸ್ (ಯುಕೆ ಮತ್ತು ಐರ್ಲೆಂಡ್‌ನಲ್ಲಿ) ಸೇರಿದಂತೆ ಇತರ ಕೆಲವು ದೇಶಗಳಲ್ಲಿ ಇತರ ಬ್ರಾಂಡ್ ಹೆಸರುಗಳನ್ನು ಬಳಸುತ್ತದೆ; ಸ್ಮಿತ್ (ಆಸ್ಟ್ರೇಲಿಯಾ); ಚಿಪ್ಸಿ (ಈಜಿಪ್ಟ್ [೯] ಮತ್ತು ಪಶ್ಚಿಮ ಬಾಲ್ಕನ್ಸ್ [೧೦] ); ಟಪುಚಿಪ್ಸ್ (ಇಸ್ರೇಲ್); [೧೧] ಮಾರ್ಗರಿಟಾ (ಕೊಲಂಬಿಯಾ); ಮತ್ತು ಸಬ್ರಿತಾಸ್ (ಮೆಕ್ಸಿಕೋ).

ಪೌಷ್ಟಿಕಾಂಶದ ಮಾಹಿತಿ[ಬದಲಾಯಿಸಿ]

ಹೆಚ್ಚಿನ ಲಘು ಆಹಾರಗಳಂತೆ, ಲೇಸ್ ಬ್ರ್ಯಾಂಡ್‌ಗಳು ಎಲ್ಲಾ ವಿಧಗಳಲ್ಲಿ ಕೆಲವೇ ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿರುತ್ತವೆ. ಪ್ರತಿ ಸರ್ವಿಂಗ್‌ನಲ್ಲಿ ದೈನಂದಿನ ಅವಶ್ಯಕತೆಯ ಹತ್ತು ಪ್ರತಿಶತದಷ್ಟು ಇರುವ ವಿಟಮಿನ್ ಸಿ ಅತ್ಯಧಿಕವೆನ್ನಬಹುದು. ಉಪ್ಪಿನ ಅಂಶವು ವಿಶೇಷವಾಗಿ ಅಧಿಕವಾಗಿದೆ. ಒಂದು ಸರ್ವಿಂಗ್‌ನಲ್ಲಿ 380 ಮಿ.ಗ್ರಾಂ. ಸೋಡಿಯಂ ಇರುತ್ತದೆ.[ ಉಲ್ಲೇಖದ ಅಗತ್ಯವಿದೆ ]

ಒಂದು ಔನ್ಸ್ (28 ಗ್ರಾಂ) ಸಾಮಾನ್ಯ ಲೇ'ಸ್ ಆಲೂಗೆಡ್ಡೆ ಚಿಪ್ಸ್ ಸರ್ವಿಂಗ್‌ 160 ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹತ್ತು ಗ್ರಾಂ ಕೊಬ್ಬನ್ನು ಹೊಂದಿರುತ್ತದೆ, ಒಂದು ಗ್ರಾಂ ಸ್ಯಾಚುರೇಟೆಡ್ ಕೊಬ್ಬನ್ನು ಹೊಂದಿರುತ್ತದೆ. ಕೆಟಲ್-ಕುಕ್ಡ್ ಬ್ರ್ಯಾಂಡ್‌ಗಳು ಏಳರಿಂದ ಎಂಟು ಗ್ರಾಂ ಕೊಬ್ಬು,ಒಂದು ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಮತ್ತು 140 ಕ್ಯಾಲೋರಿಗಳನ್ನು ಹೊಂದಿರುತ್ತವೆ. "ಲೇಸ್ ನ್ಯಾಚುರಲ್" ಒಂಬತ್ತು ಗ್ರಾಂ ಕೊಬ್ಬು, ಎರಡು ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಮತ್ತು 150 ಕ್ಯಾಲೋರಿಗಳನ್ನು ಹೊಂದಿದೆ. ಸ್ಟ್ಯಾಕ್ಸ್ ಚಿಪ್ಸ್ ಸಾಮಾನ್ಯವಾಗಿ ಹತ್ತು ಗ್ರಾಂ ಕೊಬ್ಬು , 2.5 ಗ್ರಾಂ ಸ್ಯಾಚುರೇಟೆಡ್ ಕೊಬ್ಬು ಮತ್ತು ಪ್ರತಿ ಸರ್ವಿಂಗ್‌ನಲ್ಲಿ 160 ಕ್ಯಾಲೋರಿಗಳನ್ನು ಹೊಂದಿರುತ್ತದೆ. ಕೆಲವು ಸಂಯೋಜನೆಗಳಲ್ಲಿ ಅರ್ಧ-ಗ್ರಾಂ ಕಡಿಮೆ ಸ್ಯಾಚುರೇಟೆಡ್ ಕೊಬ್ಬನ್ನು ಹೊರತುಪಡಿಸಿ, ವೇವಿ ಲೇಗಳು ಸಾಮಾನ್ಯ ಬ್ರ್ಯಾಂಡನ್ನೇ ಹೋಲುತ್ತವೆ. ಈಗ ವಿವಿಧ ಬ್ರಾಂಡ್‌ಗಳು ಯಾವುದೇ ಟ್ರಾನ್ಸ್ ಕೊಬ್ಬನ್ನು ಹೊಂದಿರುವುದಿಲ್ಲ.[ ಉಲ್ಲೇಖದ ಅಗತ್ಯವಿದೆ ]

ಲೇ'ಸ್ ಬಾರ್‌ಬಿಕ್ಯು ಚಿಪ್ಸ್‌ನ 50 ಗ್ರಾಂ ಸರ್ವಿಂಗ್‌ 270 ಕ್ಯಾಲೊರಿಗಳನ್ನು ಮತ್ತು 17 ಗ್ರಾಂ ಕೊಬ್ಬನ್ನು ಹೊಂದಿರುತ್ತದೆ. ಇದು 270ಮಿಗ್ರಾಂ ಸೋಡಿಯಂ ಅನ್ನೂ ಒಳಗೊಂಡಿದೆ ಮತ್ತು ವಿಟಮಿನ್ ಸಿ ಯ ದೈನಂದಿನ ಅವಶ್ಯಕ ಡೋಸ್‌ನ 15% ಅನ್ನು ಹೊಂದಿದೆ.

ಉಲ್ಲೇಖಗಳು[ಬದಲಾಯಿಸಿ]

  1. Thomas, Jr., Robert McG. (7 December 1982). "HERMAN W. LAY, 73, IS DEAD; SUCCESS TIED TO POTATO CHIPS". The New York Times. Retrieved 10 October 2018.
  2. News Desk: My Father, the Potato Chip. The New Yorker (2011-05). Retrieved on 2012-03-29.
  3. "Frito-Lay Company". Encyclopedia.com. Retrieved 2022-04-20.
  4. "Frito Takes to Gridiron, Calls 'Rollout' for Wavy Lays". Brandweek. New York: Adweek. 1994-01-03. p. 5. ಟೆಂಪ್ಲೇಟು:ProQuest.
  5. How It All Began. Frito-Lay. Retrieved on 2012-03-29.
  6. Rishi Iyengar (25 April 2019). "PepsiCo is suing farmers in India for growing the potatoes it uses in Lays chips". CNN. Retrieved 2019-04-26.
  7. Jebaraj, Priscilla (2019-04-25). "Potato farmers cry foul as PepsiCo sues them". The Hindu (in Indian English). ISSN 0971-751X. Retrieved 2019-04-26.
  8. Jebaraj, Priscilla (3 December 2021). "PepsiCo loses rights to special Lays variety potato in India". The Hindu. Retrieved 2021-12-04.
  9. "Chipsy Egypt". www.facebook.com. Retrieved 2019-08-13.
  10. "Chipsy West Balkans". pepsico.rs/en/brands-you-love/local-brands. Archived from the original on 2023-01-30. Retrieved 2023-01-30.
  11. "Tapuchips Israel". strauss-group.com/brand/tapuchips. Retrieved 2023-01-30.