ವಿಷಯಕ್ಕೆ ಹೋಗು

ಲೇಖಕ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಓರ್ವ ಲೇಖಕ ನನ್ನು (ಕೆಲವೊಮ್ಮೆ, ಓರ್ವ ಮಹಿಳಾ ಲೇಖಕರಿಗೆ ಉಲ್ಲೇಖಿಸುವಾಗ, ಲೇಖಕಿ ಯನ್ನು[]) "ಏನೋ ಒಂದು ಸಂಗತಿಯನ್ನು ಸೃಷ್ಟಿಸುವ ಅಥವಾ ಅದಕ್ಕೆ ಅಸ್ತಿತ್ವವನ್ನು ಕೊಡುವ ವ್ಯಕ್ತಿಯಾಗಿ" ವ್ಯಾಪಕವಾಗಿ ವ್ಯಾಖ್ಯಾನಿಸಲಾಗುತ್ತದೆ ಮತ್ತು ಹೀಗೆ ಸೃಷ್ಟಿಸಲ್ಪಟ್ಟಿದ್ದಕ್ಕೆ ಸಂಬಂಧಿಸಿದ ಹೊಣೆಗಾರಿಕೆಯನ್ನು ಆ ಕರ್ತೃತ್ವ ಅಥವಾ ಬರಹಗಾರಿಕೆಯು ನಿರ್ಣಯಿಸುತ್ತದೆ. ಪರಿಮಿತವಾಗಿ ವ್ಯಾಖ್ಯಾನಿಸಲಾಗುವ ಪ್ರಕಾರ, ಓರ್ವ ಲೇಖಕನು ಬರಹ ರೂಪದ ಯಾವುದೇ ಕೃತಿಯ ಪ್ರವರ್ತಕನಾಗಿರುತ್ತಾನೆ.

ಬರಹ ರೂಪದ ಅಥವಾ ವಿಧಿಪೂರ್ವಕವಾಗಿ ನಕಲು ಮಾಡಲಾದ ಕೃತಿಯೊಂದರ ಲೇಖಕ

[ಬದಲಾಯಿಸಿ]

ವಿಧ್ಯುಕ್ತ ಪ್ರಾಮುಖ್ಯತೆ

[ಬದಲಾಯಿಸಿ]

ಕೃತಿಸ್ವಾಮ್ಯದ ಕಾನೂನಿನಲ್ಲಿ, ಯಾವುದು ಕರ್ತೃತ್ವ ಎಂಬುದಾಗಿ ಕರೆಸಿಕೊಳ್ಳುತ್ತದೆ ಎಂಬ ಬಗ್ಗೆ ಅಲ್ಪವೇ ಎನ್ನಬಹುದಾದ ಹೊಂದಿಕೊಳ್ಳುವಿಕೆಯು ಅವಶ್ಯವಾಗಿ ಕಂಡುಬರುತ್ತದೆ. ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕೃತಿಸ್ವಾಮ್ಯ ಕಚೇರಿಯು ವ್ಯಾಖ್ಯಾನಿಸುವ ಪ್ರಕಾರ, "ಕೃತಿಸ್ವಾಮ್ಯ ಎಂಬುದು 'ಕರ್ತೃತ್ವದ ಮೂಲಕೃತಿಗಳ' ಲೇಖಕರಿಗೆ ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಕಾನೂನುಗಳ (U.S. ಸಂಹಿತೆಯ 17ನೇ ಶೀರ್ಷಿಕೆ) ವತಿಯಿಂದ ಒದಗಿಸಲ್ಪಟ್ಟಿರುವ ಸಂರಕ್ಷಣೆಯ ಒಂದು ಸ್ವರೂಪವಾಗಿದೆ".[] ಯಾವುದೇ "ಸಾಹಿತ್ಯಿಕ, ನಾಟಕದ, ಸಂಗೀತದ, ಕಲಾತ್ಮಕ, [ಅಥವಾ] ಇತರ ಕೆಲವೊಂದು ಬೌದ್ಧಿಕ ಕೃತಿಗಳಿಗೆ" ಸಂಬಂಧಿಸಿದಂತೆ "ಲೇಖಕ" ಎಂಬ ನಾಮಧೇಯ ಅಥವಾ ಅಧಿಕಾರಸೂಚಕ ನಾಮ ಹೊಂದಿರುವುದು, ಈ ವ್ಯಕ್ತಿಗೆ ಹಕ್ಕುಗಳನ್ನು ನೀಡುತ್ತದೆ; ಈತ ಕೃತಿಸ್ವಾಮ್ಯದ ಮಾಲೀಕನಾಗಿರುತ್ತಾನೆ ಹಾಗೂ ಅದು ಅವರ ಕೃತಿಯನ್ನು ರೂಪಿಸುವ ಅಥವಾ ವಿತರಿಸುವುದಕ್ಕೆ ಸಂಬಂಧಿಸಿದಂತೆ ಅನುಮತಿಸುವ ಅಥವಾ ಪ್ರಮಾಣೀಕರಿಸುವ ಏಕಮಾತ್ರ ಹಕ್ಕು ಆಗಿರುತ್ತದೆ. ಕೃತಿಸ್ವಾಮ್ಯದ ಅಡಿಯಲ್ಲಿ ಹಿಡಿದಿಡಲ್ಪಟ್ಟಿರುವ ಬೌದ್ಧಿಕ ಸ್ವತ್ತನ್ನು ಬಳಸಲು ಬಯಸುತ್ತಿರುವ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು, ಈ ಕೃತಿಯನ್ನು ಬಳಸುವುದಕ್ಕೆ ಸಂಬಂಧಿಸಿದಂತೆ ಕೃತಿಸ್ವಾಮ್ಯ ಹೊಂದಿರುವವರಿಂದ ಅನುಮತಿಯನ್ನು ಪಡೆದುಕೊಳ್ಳುವುದು ಅಗತ್ಯವಾಗಿರುತ್ತದೆ, ಮತ್ತು ಕೃತಿಸ್ವಾಮ್ಯ ಪಡೆದ ಸಾಮಗ್ರಿಯನ್ನು ಬಳಸುವುದಕ್ಕಾಗಿ ಹಣ ಪಾವತಿಸುವಂತೆ ಇಂಥ ವ್ಯಕ್ತಿ ಅಥವಾ ಸಂಸ್ಥೆಯನ್ನು ಅನೇಕವೇಳೆ ಕೇಳಲಾಗುತ್ತದೆ. ಒಂದು ನಿಶ್ಚಿತ ಪ್ರಮಾಣದ ಸಮಯದ ನಂತರ, ಬೌದ್ಧಿಕ ಕೃತಿಯ ಮೇಲಿನ ಕೃತಿಸ್ವಾಮ್ಯದ ಅವಧಿಯು ಮುಗಿಯುತ್ತದೆ ಮತ್ತು ಅದು ಸಾರ್ವಜನಿಕ ಕ್ಷೇತ್ರವನ್ನು ಪ್ರವೇಶಿಸುತ್ತದೆ; ಅಲ್ಲಿ ಅದು ಯಾವುದೇ ಮಿತಿಯಿಲ್ಲದೆ ಬಳಸಲ್ಪಡಬಹುದಾಗಿರುತ್ತದೆ. ಕೃತಿಸ್ವಾಮ್ಯ ಕಾನೂನಿನ ಉಪಕ್ರಮವಾದಾಗಿನಿಂದ ಅದು ಅನೇಕ ಸಂದರ್ಭಗಳಲ್ಲಿ ತಿದ್ದುಪಡಿ ಮಾಡಲ್ಪಟ್ಟಿದೆ; ಕೃತಿಸ್ವಾಮ್ಯ ಹೊಂದಿರುವವರಿಂದ ಏಕಮಾತ್ರವಾಗಿ ನಿಯಂತ್ರಿಸಲ್ಪಟ್ಟಿರುವ ಕೃತಿಯ ಈ ನಿಶ್ಚಿತ ಅವಧಿಯ ಉದ್ದವನ್ನು ವಿಸ್ತರಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಆದಾಗ್ಯೂ, ಕೃತಿಸ್ವಾಮ್ಯ ಎಂಬುದು ಕೇವಲ ಓರ್ವನು ತನ್ನ ಕೃತಿಯ ಸ್ವಾಮ್ಯವನ್ನು ಹೊಂದಿದ್ದಾನೆ ಎಂಬುದರ ಕುರಿತಾದ ವಿಧ್ಯುಕ್ತ ಪುನರಾಶ್ವಾಸನೆಯಾಗಿದೆ. ತಾಂತ್ರಿಕವಾಗಿ ಹೇಳುವುದಾದರೆ, ಓರ್ವರು ತಾವು ಕೃತಿಯನ್ನು ಸೃಷ್ಟಿಸಿದಾಗಿನಿಂದ ಅದರ ಸ್ವಾಮ್ಯವನ್ನು ಹೊಂದಿರುತ್ತಾರೆ. ಓರ್ವ ವ್ಯಕ್ತಿಯ ಮರಣಾನಂತರ ಕೃತಿಸ್ವಾಮ್ಯವನ್ನು ಮತ್ತೊಬ್ಬರಿಗೆ ವರ್ಗಾಯಿಸಲು ಸಾಧ್ಯವಿದೆ ಎಂಬ ಅಂಶದಲ್ಲಿ ಕರ್ತೃತ್ವದ ಒಂದು ಕುತೂಹಲಕರ ಮಗ್ಗುಲು ಹೊರಹೊಮ್ಮುತ್ತದೆ. ಕೃತಿಸ್ವಾಮ್ಯವನ್ನು ಉತ್ತರಾಧಿಕಾರದಿಂದ ಪಡೆಯುವ ವ್ಯಕ್ತಿಯು ಲೇಖಕನಾಗಿರುವುದಿಲ್ಲವಾದರೂ, ಅದೇ ಬಗೆಯ ವಿಧ್ಯುಕ್ತ ಪ್ರಯೋಜನಗಳನ್ನು ಅವನು ಅನುಭವಿಸುತ್ತಾನೆ.

ಕೃತಿಸ್ವಾಮ್ಯ ಕಾನೂನಿನ ಅನ್ವಯಕ್ಕೆ ಸಂಬಂಧಿಸಿದಂತೆ ಪ್ರಶ್ನೆಗಳು ಏಳುತ್ತವೆ. ಉದಾಹರಣೆಗೆ, ಅಭಿಮಾನಿಗಳ ಕಲ್ಪಿತ ಕಥನದ ಸಂಕೀರ್ಣ ವಿವಾದಾಂಶಕ್ಕೆ ಇದು ಹೇಗೆ ಅನ್ವಯಿಸುತ್ತದೆ? ಒಂದು ವೇಳೆ, ಅಧಿಕೃತವಾದ ರೂಪಿಸುವಿಕೆಗೆ ಸಂಬಂಧಿಸಿದಂತೆ ಹೊಣೆಗಾರನಾಗಿರುವ ಮಾಧ್ಯಮ-ಸಂಸ್ಥೆಯು ಅಭಿಮಾನಿಗಳಿಂದ ಬರುವ ಸಾಮಗ್ರಿಗೆ ಅವಕಾಶ ಕೊಡುವುದೇ ಆದಲ್ಲಿ, ನಟರಿಂದ, ಸಂಗೀತ, ಮತ್ತು ಇತರ ಪರಿಗಣನೆಗಳಿಂದ ವಿಧ್ಯುಕ್ತ ನಿರ್ಬಂಧಗಳು ಬರುವುದಕ್ಕೆ ಮುಂಚಿನ ಮಿತಿ ಏನು? ಅದೇ ರೀತಿಯಲ್ಲಿ, ಪುಸ್ತಕಗಳಿಗೆ ಸಂಬಂಧಿಸಿದಂತೆ ಅಭಿಮಾನಿಗಳಿಂದ-ಸೃಷ್ಟಿಯಾದ ಕಥೆಗಳಿಗೆ ಕೃತಿಸ್ವಾಮ್ಯವು ಹೇಗೆ ಅನ್ವಯಿಸುತ್ತದೆ? ಅಭಿಮಾನಿಗಳ ಕಲ್ಪಿತ ಕಥನವನ್ನು ನಿಯಂತ್ರಿಸುವಲ್ಲಿ ಅಥವಾ ನಿಲ್ಲಿಸುವಲ್ಲಿ ಮೂಲ ಲೇಖಕರು ಮತ್ತು ಪ್ರಕಾಶಕರು ಹೊಂದಿರುವ ಅಧಿಕಾರವೇನು?

ಸಾಹಿತ್ಯಿಕ ಪ್ರಾಮುಖ್ಯತೆ

[ಬದಲಾಯಿಸಿ]

ಸಾಹಿತ್ಯಿಕ ಸಿದ್ಧಾಂತದಲ್ಲಿ, ಒಂದು ವಿಧ್ಯುಕ್ತ ಸನ್ನಿವೇಶದಲ್ಲಿ ಯಾವೆಲ್ಲಾ ಅಂಶಗಳು ಕರ್ತೃತ್ವ ಎಂಬುದನ್ನು ರೂಪಿಸುತ್ತವೋ, ಅದರಾಚೆಗೆ "ಲೇಖಕ" ಎಂಬ ಶಬ್ದದಲ್ಲಿ ವಿಮರ್ಶಕರು ತೊಡಕುಗಳನ್ನು ಕಾಣುತ್ತಾರೆ. ನವ್ಯೋತ್ತರ ಸಾಹಿತ್ಯದ ಮೇಲ್ಪಂಕ್ತಿಯಲ್ಲಿ, ರೋಲ್ಯಾಂಡ್‌ ಬಾರ್ಥೆಸ್‌ ಮತ್ತು ಮೈಕೆಲ್‌ ಫೌಕೌಲ್ಟ್‌‌‌‌ರಂಥ ವಿಮರ್ಶಕರು, ಕರ್ತೃತ್ವದ ಪಾತ್ರ ಮತ್ತು ಸುಸಂಬದ್ಧತೆಯನ್ನು ಪಠ್ಯವೊಂದರ ಅರ್ಥ ಅಥವಾ ಅರ್ಥವಿವರಣೆಗೆ ಸಂಬಂಧಿಸಿದಂತೆ ಅವಲೋಕಿಸಿದ್ದಾರೆ.

ಪಠ್ಯವೊಂದನ್ನು ಯಾವುದೇ ಏಕೈಕ ಲೇಖಕನಿಗೆ ಸೇರಿದ್ದಾಗಿರಲು ಸಾಧ್ಯ ಎಂಬ ಪರಿಕಲ್ಪನೆಯನ್ನು ಬಾರ್ಥೆಸ್‌ ನಿರಾಕರಿಸುತ್ತಾನೆ. "ಡೆತ್‌ ಆಫ್‌ ದಿ ಆಥರ್‌" (1968) ಎಂಬ ತನ್ನ ಪ್ರೌಢಪ್ರಬಂಧದಲ್ಲಿ ಅವನು ಈ ಕುರಿತು ಉಲ್ಲೇಖಿಸುತ್ತಾ, "ಮಾತನಾಡುವುದು ಭಾಷೆಯೇ ಹೊರತು, ಲೇಖಕನಲ್ಲ" ಎಂದು ಅವನು ಅಭಿಪ್ರಾಯಪಡುತ್ತಾನೆ.[] ಬಾರ್ಥೆಸ್ ಅಭಿಪ್ರಾಯದಲ್ಲಿ, ಸ್ವತಃ ಪಠ್ಯವೊಂದರ ಪದಗಳು ಮತ್ತು ಭಾಷೆಯಷ್ಟೇ ಅರ್ಥವನ್ನು ನಿರ್ಣಯಿಸುತ್ತವೆ ಮತ್ತು ಹೊರಗೆಡಹುತ್ತವೆಯೇ ಹೊರತು, ಅದರ ರೂಪುಗೊಳ್ಳುವಿಕೆಗೆ ಸಂಬಂಧಿಸಿದಂತೆ ವಿಧ್ಯುಕ್ತ ಹೊಣೆಗಾರಿಕೆಯನ್ನು ಹೊಂದಿರುವ ಯಾರೋ ಒಬ್ಬ ವ್ಯಕ್ತಿಯಲ್ಲ. ಬರಹ ರೂಪದ ಪಠ್ಯದ ಪ್ರತಿಯೊಂದು ಸಾಲೂ, ಸಂಪ್ರದಾಯಗಳ ಬಾಹುಳ್ಯವೊಂದರ ಪೈಕಿ ಯಾವುದಕ್ಕಾದರೂ ಸೇರಿದ ಉಲ್ಲೇಖಗಳ ಒಂದು ಪ್ರತಿಬಿಂಬವಷ್ಟೇ ಆಗಿರುತ್ತದೆ, ಅಥವಾ ಬಾರ್ಥೆಸ್‌ ಹೇಳುವ ರೀತಿಯಲ್ಲಿ, "ಪಠ್ಯ ಎಂಬುದು ಉಲ್ಲೇಖನಗಳ ಒಂದು ಪರಂಪರೆಯಾಗಿದ್ದು, ಸಂಸ್ಕೃತಿಯ ಲೆಕ್ಕವಿಲ್ಲದಷ್ಟು ಕೇಂದ್ರಗಳಿಂದ ಅವು ಸೆಳೆಯಲ್ಪಟ್ಟಿರುತ್ತವೆ"; ಇದು ಎಂದಿಗೂ ಮೂಲವಾಗಿರುವುದಿಲ್ಲ.[] ಇದರೊಂದಿಗೆ, ಲೇಖಕನ ದೃಷ್ಟಿಕೋನವು ಪಠ್ಯದಿಂದ ತೆಗೆದುಹಾಕಲ್ಪಡುತ್ತದೆ, ಮತ್ತು ಓರ್ವ ಲೇಖಕನ ಧ್ವನಿ, ಒಂದು ಅಂತಿಮ ಮತ್ತು ಸಾರ್ವತ್ರಿಕ ಅರ್ಥ ಇವುಗಳ ಪರಿಕಲ್ಪನೆಯಿಂದ ಹಿಂದೆ ವಿಧಿಸಲ್ಪಟ್ಟಿದ್ದ ಮಿತಿಗಳು ನಾಶಗೊಳಿಸಲ್ಪಡುತ್ತವೆ. ಕೃತಿಯೊಂದರ ವಿವರಣೆ ಮತ್ತು ಅರ್ಥವನ್ನು ಅದನ್ನು ರೂಪಿಸಿದವನಲ್ಲಿ ಹುಡುಕುವ ಅಗತ್ಯವಿರುವುದಿಲ್ಲ; ಎಲ್ಲ ಸಮಯಗಳಲ್ಲೂ ಇದು ಅಂತ್ಯದಲ್ಲಿತ್ತೇನೋ ಎಂಬಂತೆ, ಕಲ್ಪಿತ ಕಥನದ ಹೆಚ್ಚೂಕಡಿಮೆ ಪಾರದರ್ಶಕ ಸಾಂಕೇತಿಕ ನಿರೂಪಣೆಯ ಮೂಲಕ, ಏಕೈಕ ವ್ಯಕ್ತಿಯೊಬ್ಬನ ಧ್ವನಿಯ ಮೂಲಕ, ಲೇಖಕನು ನಮ್ಮಲ್ಲಿ 'ವಿಶ್ವಾಸಕ್ಕೆ ತೆಗೆದುಕೊಳ್ಳುವ' ಧ್ವನಿಯ ಮೂಲಕ ಕಂಡುಕೊಳ್ಳುವ ಅಗತ್ಯವಿರುವುದಿಲ್ಲ".[] ಪಠ್ಯವೊಂದರ ಅರ್ಥವಿವರಿಸುವಾಗ, ಲೇಖಕನೊಬ್ಬನ ಚೈತನ್ಯ, ಸಂಸ್ಕೃತಿ, ಅಂಧಾಭಿಮಾನವನ್ನು ಉಪೇಕ್ಷಿಸಬಹುದಾಗಿದೆ, ಏಕೆಂದರೆ ಭಾಷೆಯ ಎಲ್ಲಾ ಸಂಪ್ರದಾಯಗಳನ್ನು ಒಳಗೊಂಡಿರುವ ಪದಗಳು ಸ್ವತಃ ವಿವರಿಸಬಲ್ಲಷ್ಟು ಸಮೃದ್ಧವಾಗಿರುತ್ತವೆ. ಲೇಖಕನೊಬ್ಬನ ಪ್ರಸಿದ್ಧಿಗೆ ಆಕರ್ಷಣೀಯವಾಗಿರದ ರೀತಿಯಲ್ಲಿ ಬರಹ ರೂಪದ ಕೃತಿಯೊಂದರಲ್ಲಿನ ಅರ್ಥಗಳನ್ನು ಹೊರಗೆಡಹುವುದು, ಅವರ ಅಭಿರುಚಿಗಳು, ಭಾವೋದ್ರೇಕಗಳು, ದುರ್ಬುದ್ಧಿಗಳನ್ನು ಹೊರಹೊಮ್ಮಿಸುವುದು ಇವೆಲ್ಲವೂ ಬಾರ್ಥೆಸ್ ಪ್ರಕಾರ, ಮಾತನಾಡುವುದಕ್ಕೆ ಭಾಷೆಗೆ ಅವಕಾಶ ಕಲ್ಪಿಸುವುದಾಗಬೇಕೇ ವಿನಃ ಲೇಖಕನಿಗಲ್ಲ.

ಮೈಕೆಲ್‌ ಫೌಕೌಲ್ಟ್‌ ಎಂಬಾತ "ವಾಟ್‌ ಈಸ್‌ ಆನ್‌ ಆಥರ್‌?" (1969) ಎಂಬ ತನ್ನ ಪ್ರೌಢಪ್ರಬಂಧದಲ್ಲಿ ಈ ಕುರಿತು ವಾದಿಸುತ್ತಾ, ಎಲ್ಲಾ ಲೇಖಕರೂ ಬರಹಗಾರರಾಗಿದ್ದಾರೆ, ಆದರೆ ಎಲ್ಲಾ ಬರಹಗಾರರು ಲೇಖಕರಲ್ಲ ಎನ್ನುತ್ತಾನೆ. "ಒಂದು ಖಾಸಗಿ ಪತ್ರವು ಓರ್ವ ಸಹಿದಾರನನ್ನು ಹೊಂದಿರಬಹುದೇ ಹೊರತು, ಓರ್ವ ಲೇಖಕನನ್ನಲ್ಲ" ಎಂದು ಅವನು ಅಭಿಪ್ರಾಯಪಡುತ್ತಾನೆ.[] ಯಾವುದೇ ಬರಹ ರೂಪದ ಕೃತಿಯ ಮೇಲೆ ಓದುಗನೊಬ್ಬನು ಲೇಖಕನ ನಾಮಧೇಯವನ್ನು ನೀಡಬೇಕೆಂದರೆ, ಪಠ್ಯದ ಕುರಿತಾದ ಕೆಲವೊಂದು ಮಾನದಂಡಗಳನ್ನು ಅವನು ಆರೋಪಿಸಬೇಕಾಗುತ್ತದೆ; ಫೌಕೌಲ್ಟ್ ಪ್ರಕಾರ ಈ ಮಾನದಂಡಗಳು "ಲೇಖಕನ ಚಟುವಟಿಕೆ"ಯ ಪರಿಕಲ್ಪನೆಯ ಜೊತೆಗೆ ಕಾರ್ಯನಿರ್ವಹಿಸುತ್ತಿರುತ್ತವೆ.[] ಓರ್ವ ಲೇಖಕನು ಕೇವಲ ಬರಹ ರೂಪದ ಕೃತಿಯೊಂದರ ಒಂದು ಚಟುವಟಿಕೆಯಾಗಿ, ಅದರ ರಚನೆಯ ಒಂದು ಭಾಗವಾಗಿ ಅಸ್ತಿತ್ವವನ್ನು ಕಂಡುಕೊಳ್ಳುತ್ತಾನೆಯೇ ಹೊರತು, ಅವಶ್ಯವಾಗಿ ವಿವರಣಾತ್ಮಕ ಪ್ರಕ್ರಿಯೆಯ ಭಾಗವಾಗಿ ಅಲ್ಲ. "ಒಂದು ಸಮಾಜ ಮತ್ತು ಸಂಸ್ಕೃತಿಯ ವ್ಯಾಪ್ತಿಯೊಳಗಿನ ಮಾತುಕತೆಯ ಸ್ಥಾನಮಾನವನ್ನು ಲೇಖಕನ ಹೆಸರು ಸೂಚಿಸುತ್ತದೆ"; ಮತ್ತು ಒಂದೊಮ್ಮೆ ಇದು ಪಠ್ಯವೊಂದರ ಅರ್ಥವಿವರಣೆಗೆ ಸಂಬಂಧಿಸಿದ ಒಂದು ಆಧಾರವಾಗಿ ಬಳಸಲ್ಪಟ್ಟಿತ್ತು. ಈ ಪರಿಪಾಠವು ನಿರ್ದಿಷ್ಟವಾಗಿ ಸುಸಂಬದ್ಧ ಅಥವಾ ಕ್ರಮಬದ್ಧವಾಗಿರದ ಒಂದು ಪ್ರಯತ್ನ ಅಥವಾ ಸಾಹಸ ಎಂಬುದಾಗಿ ಬಾರ್ಥೆಸ್‌ ವಾದಿಸುತ್ತಾನೆ.[]

ಫೌಕೌಲ್ಟ್‌ನ ನಿಲುವಿನ ಮೇಲೆ ತನ್ನ ಅಭಿಪ್ರಾಯಗಳನ್ನು ಅಲೆಕ್ಸಾಂಡರ್‌ ನೆಹಮಾಸ್‌ ವಿಸ್ತರಿಸುತ್ತಾ, "ನಾವು ವ್ಯಾಖ್ಯಾನಿಸುವಂತೆ ನಿರ್ದಿಷ್ಟ ಪಠ್ಯವೊಂದನ್ನು ರೂಪಿಸಿದವನು ಎಂಬುದಾಗಿ ಅರ್ಥೈಸಿಕೊಳ್ಳಲ್ಪಟ್ಟಿರುವ ಯಾವುದೇ ಒಬ್ಬ ಲೇಖಕನು, ಅವಶ್ಯವಾಗಿ ಸದರಿ ಪಠ್ಯವನ್ನು ಬರಹ ರೂಪಕ್ಕೆ ಇಳಿಸಿದವನಾಗಿರಬೇಕು ಎಂದೇನೂ ಇಲ್ಲ" ಎಂದು ಫೌಕೌಲ್ಟ್‌ ಸೂಚಿಸುತ್ತಾನೆ ಎಂಬುದಾಗಿ ಹೇಳುತ್ತಾನೆ.[] ಬರಹ ರೂಪದ ಕೃತಿಯೊಂದನ್ನು ರೂಪಿಸುವ ಮತ್ತು ಬರಹ ರೂಪದ ಕೃತಿಯೊಂದರಲ್ಲಿನ ಅರ್ಥವಿವರಣೆ ಅಥವಾ ಅರ್ಥವನ್ನು ರೂಪಿಸುವುದರ ನಡುವಿನ ಈ ವ್ಯತ್ಯಾಸದಲ್ಲಿಯೇ ಬಾರ್ಥೆಸ್‌ ಮತ್ತು ಫೌಕೌಲ್ಟ್‌ ಆಸಕ್ತಿ ತಳೆಯುತ್ತಾರೆ. ಅರ್ಥವಿವರಣೆಯ ಸಂದರ್ಭದಲ್ಲಿ ಲೇಖಕನ ಹೆಸರನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವುದರಿಂದ ಆಗುವ ಅಪಾಯಗಳ ಕುರಿತಾಗಿ ಫೌಕೌಲ್ಟ್‌ ಎಚ್ಚರಿಸುತ್ತಾನೆ; ಏಕೆಂದರೆ, ಒಂದು ಅರ್ಥವಿವರಣೆಯೊಂದನ್ನು ನಿಭಾಯಿಸುವಲ್ಲಿ ಓರ್ವನು ಬಳಸಿಕೊಳ್ಳುವ ಮೌಲ್ಯ ಮತ್ತು ಅರ್ಥದ ಮೇಲೆ ಅದು ಪ್ರಭಾವ ಬೀರುವ ಸಾಧ್ಯತೆಯಿರುತ್ತದೆ.

ಸಾಹಿತ್ಯಿಕ ವಿಮರ್ಶಕರಾದ ಬಾರ್ಥೆಸ್‌ ಮತ್ತು ಫೌಕೌಲ್ಟ್‌ ಸೂಚಿಸುವ ಪ್ರಕಾರ, ಬರಹ ರೂಪದ ಕೃತಿಯೊಂದರ ಅರ್ಥವಿವರಿಸುವಾಗ, ಮೇಲೆ ಬಾಗಿರುವ ಧ್ವನಿಯೊಂದರ ಎಣಿಕೆಯನ್ನು ಅಥವಾ ಅದಕ್ಕೆ ಸಂಬಂಧಿಸಿದ ನೋಟವನ್ನು ಓದುಗರಾದವರು ನೆಚ್ಚಿಕೊಳ್ಳಬಾರದು; ಏಕೆಂದರೆ ಬರಹಗಾರನು ಹೊಂದಿರುವ "ಲೇಖಕ" ಎಂಬ ಪಟ್ಟ ಅಥವಾ ನಾಮಧೇಯದೊಂದಿಗೆ ತೊಡಕುಗಳು ಅಂತರ್ಗತವಾಗಿರುತ್ತವೆ. ಗ್ರಂಥಕರ್ತನಿಗೆ ಸಂಬಂಧಿಸಿದ ಒಂದು ಧ್ವನಿಯೊಂದಿಗೆ, ಅಂತರ್ಗತವಾಗಿ ಅರ್ಥಪೂರ್ಣವಾಗಿರುವ ಪದಗಳು ಮತ್ತು ಭಾಷೆಯ ವಿಷಯದ ಸಂಬಂಧ ಕಲ್ಪಿಸುವಾಗ, ಅರ್ಥವಿವರಣೆಗಳು ಅನುಭವಿಸುವ ಅಪಾಯಗಳ ಕುರಿತಾಗಿ ಅವರು ಎಚ್ಚರಿಸುತ್ತಾರೆ. ಅದರ ಬದಲಿಗೆ, "ಲೇಖಕ"ನ ರೀತಿಯ ಭಾಷೆಯ ಪರಿಭಾಷೆಯಲ್ಲಿ ಪಠ್ಯವೊಂದು ವಿವರಿಸಲ್ಪಡುವುದಕ್ಕೆ ಓದುಗರು ಅವಕಾಶ ನೀಡಬೇಕು.

ಲೇಖಕ ಮತ್ತು ಪ್ರಕಾಶಕರ ನಡುವಿನ ಸಂಬಂಧ

[ಬದಲಾಯಿಸಿ]

ಕೃತಿಯೊಂದರ ಪ್ರಕಾಶಕನು ಒಂದು ಸಗಟು ಮಾರಾಟ ಅಥವಾ ಒಂದು ನಿರ್ದಿಷ್ಟ ಬೆಲೆಯ ಮೇಲೆ ಲೆಕ್ಕಾಚಾರ ಮಾಡಲಾದ ಒಂದು ವೈಯಕ್ತಿಕ ಲಾಭವನ್ನು ಪಡೆದುಕೊಳ್ಳಬಹುದು ಮತ್ತು/ಅಥವಾ ಮಾರಾಟವಾದ ಪ್ರತಿ ಪುಸ್ತಕದ ಮೇಲೆ ಒಂದು ನಿಶ್ಚಿತ ಮೊತ್ತವನ್ನು ಪಡೆದುಕೊಳ್ಳಬಹುದು. ಒಂದು ನಿಶ್ಚಿತ ಪ್ರಮಾಣದಲ್ಲಿ ಪ್ರತಿಗಳು ಮಾರಾಟವಾದ ನಂತರವಷ್ಟೇ ಇದನ್ನು ಪಾವತಿಸಲು ಸಮ್ಮತಿಸುವ ಮೂಲಕ, ಈ ಬಗೆಯ ವ್ಯವಸ್ಥೆಯು ಹೊಂದಿರುವ ಅಪಾಯವನ್ನು ಪ್ರಕಾಶಕರು ಕೆಲವೊಮ್ಮೆ ತಗ್ಗಿಸಿದ್ದಾರೆ. ಕೆನಡಾದಲ್ಲಿ 1890ರ ದಶಕದ ಸಂದರ್ಭದಲ್ಲಿ ಈ ಪರಿಪಾಠವು ಕಂಡುಬಂದಿತಾದರೂ, 1920ರ ದಶಕದವರೆಗೂ ಅದು ಸಾಧಾರಣ ವಿಷಯವಾಗಿರಲಿಲ್ಲ.

  • ನಿಯೋಜಿತ ಅಥವಾ ದಳ್ಳಾಳಿ ರುಸುಮು ಪಡೆವ ವ್ಯವಸ್ಥೆ: ಪ್ರಕಟಣೆಯ ವ್ಯವಸ್ಥೆಗಳನ್ನು ಪ್ರಕಾಶಕರು ಮಾಡಿದರೆ, ಎಲ್ಲಾ ವೆಚ್ಚಗಳನ್ನು ಲೇಖಕರು ಭರಿಸುತ್ತಿದ್ದುದು ಇದರ ವಿಶಿಷ್ಟತೆಯಾಗಿತ್ತು (ಇಂದು ಲೇಖಕರು ತಮ್ಮದೇ ಪ್ರಕಟಣೆಗಳಿಗೆ ಪಾವತಿಸುತ್ತಿರುವ ಪರಿಪಾಠವನ್ನು ನಿರರ್ಥಕ ಪ್ರಕಟಣಾ ಕಾರ್ಯ ಎಂದು ಅನೇಕವೇಳೆ ಕರೆಯಲಾಗುತ್ತದೆ, ಮತ್ತು ಇದು ಹಿಂದಿನ ಕಾಲದ ನಿದರ್ಶನಗಳಲ್ಲಿ ಒಂದು ಸಾಮಾನ್ಯ ಮತ್ತು ಸ್ವೀಕೃತ ಪರಿಪಾಠವಾಗಿತ್ತಾದರೂ, ಇದನ್ನು ಅನೇಕ ಪ್ರಕಾಶಕರು ಅಸಡ್ಡೆಯಿಂದ ನೋಡುತ್ತಾರೆ). ಪುಸ್ತಕವೊಂದರ ಪ್ರತಿಯೊಂದು ಪ್ರತಿಯ ಮಾರಾಟದ ಮೇಲೂ ಪ್ರಕಾಶಕರು ಒಂದು ವೈಯಕ್ತಿಕ ಲಾಭವನ್ನು ಪಡೆದುಕೊಳ್ಳುತ್ತಾರೆ, ಮತ್ತು ಸಂಪಾದನೆಯಾದ ಹಣದ ಉಳಿದ ಭಾಗವನ್ನು ಲೇಖಕನು ಪಡೆದುಕೊಳ್ಳುತ್ತಾನೆ.

ಲೇಖಕ ಮತ್ತು ಸಂಪಾದಕರ ನಡುವಿನ ಸಂಬಂಧ

[ಬದಲಾಯಿಸಿ]

ಲೇಖಕ ಮತ್ತು ಸಂಪಾದಕರ ನಡುವಿನ ಸಂಬಂಧವು ಅನೇಕ ವೇಳೆ ಪ್ರಕಟಣಾ ಕಂಪನಿಯೆಡೆಗಿನ ಲೇಖಕನ ಏಕೈಕ ಸಂಬಂಧವೆನಿಸಿಕೊಳ್ಳುತ್ತದೆ, ಮತ್ತು ಇದು ಬಿಕ್ಕಟ್ಟಿನ ತಾಣವಾಗಿ ಅನೇಕ ಬಾರಿ ನಿರೂಪಿಸಲ್ಪಟ್ಟಿದೆ. ಲೇಖಕನು ತನ್ನ ವಾಚಕವರ್ಗವನ್ನು ತಲುಪಬೇಕೆಂದರೆ, ಕೃತಿಯು ಸಾಮಾನ್ಯವಾಗಿ ಸಂಪಾದಕರ ಗಮನವನ್ನು ಆಕರ್ಷಿಸುವುದು ಅಗತ್ಯವಾಗಿರುತ್ತದೆ. ಲೇಖಕನು ಅವಶ್ಯಕತೆಯ ಏಕಮಾತ್ರನಾದ ಅರ್ಥ-ರೂಪಿಸುವವನಾಗಿರುತ್ತಾನೆ ಎಂಬ ಪರಿಕಲ್ಪನೆಯು ಬದಲಾಗುತ್ತದೆ; ಒಂದು ಸಾಮಾಜಿಕ ವರ್ತನೆಯಾಗಿ ಬರಹಗಾರಿಕೆಯಲ್ಲಿ ವಾಚಕವರ್ಗವನ್ನು ತೊಡಗಿಸುವ ದೃಷ್ಟಿಯಿಂದ, ಸಂಪಾದಕ ಮತ್ತು ಪ್ರಕಾಶಕರ ಪ್ರಭಾವಗಳನ್ನು ಸೇರಿಸಿಕೊಳ್ಳುವುದು ಇದರ ಹಿಂದೆ ಅಡಗಿರುತ್ತದೆ.

ಪಿಯರೆ ಬೌರ್ಡಿಯು ಎಂಬಾತನ “ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌” ಎಂಬ ಪ್ರೌಢಪ್ರಬಂಧವು ಪ್ರಕಟಣಾ ಉದ್ಯಮವನ್ನು "ಸಾಹಿತ್ಯಿಕವಾದ ಅಥವಾ ಕಲಾತ್ಮಕವಾದ ನಿಲುವನ್ನು-ತಳೆಯುವುದರ ಒಂದು ಅವಕಾಶವಾಗಿ" ಚಿತ್ರಿಸುತ್ತದೆ; ಹಾಗೂ ಇದನ್ನು "ಹೋರಾಟಗಳ ಕ್ಷೇತ್ರ" ಎಂಬುದಾಗಿಯೂ ಅದು ಕರೆದಿದೆ; ಸದರಿ ಕ್ಷೇತ್ರದಲ್ಲಿರುವ ನಾನಾಬಗೆಯ ನಿಲುವುಗಳಲ್ಲಿ ಅಂತರ್ಗತವಾಗಿರುವ ಬಿಕ್ಕಟ್ಟು ಮತ್ತು ಚಲನೆಯಿಂದ ಈ ಹೋರಾಟಗಳ ಕ್ಷೇತ್ರವು ವ್ಯಾಖ್ಯಾನಿಸಲ್ಪಟ್ಟಿದೆ.[] ಬೌರ್ಡಿಯು ಈ ಕುರಿತಾಗಿ ಸಮರ್ಥಿಸುತ್ತಾ, "ನಿಲುವನ್ನು-ತಳೆಯುವುದರ ಕ್ಷೇತ್ರವು ಸುಸಂಬದ್ಧತೆ-ಬಯಸುವ ಆಶಯ ಅಥವಾ ಉದ್ದೇಶಿತ ಒಮ್ಮತಾಭಿಪ್ರಾಯದ ಒಂದು ಉತ್ಪನ್ನವಾಗಿಲ್ಲ; ಇದರರ್ಥ, ನಿಲುವು-ತಳೆಯುವಿಕೆಗಳಿಂದ ನಿರೂಪಿಸಲ್ಪಟ್ಟ ಉದ್ಯಮವೊಂದು ಸಾಮರಸ್ಯ ಮತ್ತು ತಟಸ್ಥ ನೀತಿಯ ಪೈಕಿ ಒಂದಾಗಿರುವುದಿಲ್ಲ" ಎಂದು ಅಭಿಪ್ರಾಯಪಡುತ್ತಾನೆ.[] ಬರಹಗಾರನಿಗೆ ಸಂಬಂಧಿಸಿದಂತೆ ನಿರ್ದಿಷ್ಟವಾಗಿ ಹೇಳುವುದಾದರೆ, ಆತನ ಕೃತಿಯಲ್ಲಿನ ಅವನ ಕರ್ತೃತ್ವ ಅಥವಾ ಬರಹಗಾರಿಕೆಯು ಅವನ ಗುರುತಿನ ಕಾರ್ಯಭಾಗವನ್ನು ರೂಪಿಸುತ್ತದೆ, ಮತ್ತು ಆ ಗುರುತಿನ ಮೇಲಿನ ಅಧಿಕಾರದ ಸಮಾಲೋಚನೆಯ ಕುರಿತಾಗಿ ವೈಯಕ್ತಿಕವಾಗಿ ಅಲ್ಲಿ ಸಾಕಷ್ಟು ಅಪಾಯವಿರುತ್ತದೆ. ಆದಾಗ್ಯೂ, "ಬರಹಗಾರನ ಪ್ರಬಲ ವ್ಯಾಖ್ಯಾನವನ್ನು ವಿಧಿಸುವ ಅಧಿಕಾರವನ್ನು ಸಂಪಾದಕನು ಹೊಂದಿರುತ್ತಾನೆ ಮತ್ತು ಈ ಕಾರಣದಿಂದಾಗಿ ಬರಹಗಾರನನ್ನು ವ್ಯಾಖ್ಯಾನಿಸುವುದಕ್ಕೆ ಸಂಬಂಧಿಸಿದ ಹೋರಾಟದಲ್ಲಿ ಭಾಗವಹಿಸಲು ಅರ್ಹಗೊಳಿಸಲ್ಪಟ್ಟ ಸಮುದಾಯದ ಎಲ್ಲೆ ಗುರುತಿಸುವ ಅಧಿಕಾರವನ್ನೂ ಅವನು ಹೊಂದಿರುತ್ತಾನೆ”.[] ಆದ್ದರಿಂದ, “ಸಾಂಸ್ಕೃತಿಕ ಬಂಡವಾಳ”ದಲ್ಲಿ ಒಳ್ಳೆಯ ಹೂಡಿಕೆಯೊಂದನ್ನು ಗುರುತಿಸುವುದಕ್ಕಾಗಿ ಪ್ರಕಾಶಕರು “ಸಾಂಸ್ಕೃತಿಕ ಹೂಡಿಕೆದಾರರಾಗಿ” ಸಂಪಾದಕನ ನಿಲುವಿನ ಮೇಲೆ ನೆಚ್ಚಿಕೊಂಡಿರುತ್ತಾರೆ; ಇದು ಎಲ್ಲಾ ಸ್ಥಾನಗಳಲ್ಲಿಯೂ ಆರ್ಥಿಕ ಬಂಡವಾಳವನ್ನು ನೀಡುವಷ್ಟರ ಮಟ್ಟಿಗೆ ಬೆಳೆಯುವುದಕ್ಕೆ ಕಾರಣವಾಗುತ್ತದೆ.[]

ಜೇಮ್ಸ್‌ ಕ್ಯೂರನ್‌ನ ಅಧ್ಯಯನಗಳ ಅನುಸಾರ, ಬ್ರಿಟನ್‌ನಲ್ಲಿ ಸಂಪಾದಕರ ವಲಯದ ನಡುವಿನ ಹಂಚಿಕೊಂಡ ಮೌಲ್ಯಗಳ ವ್ಯವಸ್ಥೆಯು ಲೇಖಕರ ಸಮುದಾಯದಲ್ಲಿ ಒತ್ತಡವೊಂದನ್ನು ಸೃಷ್ಟಿಸಿ, ಸಂಪಾದಕರ ನಿರೀಕ್ಷೆಗಳಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಲೇಖಕರು ಬರೆಯುವಂತೆ ಮಾಡಿತು; ಓದುಗ-ವಾಚಕವರ್ಗದ ಮೇಲಿನ ಗಮನವನ್ನು ಇದು ತೆಗೆದುಹಾಕಿತು ಮತ್ತು ಲೇಖಕರು ಹಾಗೂ ಸಂಪಾದಕರ ನಡುವಿನ ಸಂಬಂಧದ ಮೇಲೆ ಇದು ಒಂದು ಹೊರೆಯನ್ನು ಇರಿಸಿತು; ಅಷ್ಟೇ ಅಲ್ಲ, ಬರಹಗಾರಿಕೆಯು ಒಂದು ಸಾಮಾಜಿಕ ವರ್ತನೆಯ ರೂಪ ತಳೆಯುವಂತೆ ಅದು ನಿರ್ಬಂಧಿಸಿತು. ಸಂಪಾದಕರು ಕೈಗೊಳ್ಳುವ ಪುಸ್ತಕ ವಿಮರ್ಶೆಯೂ ಸಹ ವಾಚಕವೃಂದದ ಸ್ವೀಕೃತಿಗಿಂತ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆಯುವಂತಾಯಿತು.[೧೦]

ಲೇಖಕರು ಮತ್ತು ಸಂಪಾದಕರ ನಡುವಿನ ಒಳ್ಳೆಯ ಸಂಬಂಧಗಳು, ಬರಹಗಾರಿಕೆಯನ್ನು ಒಂದು ಸಾಮಾಜಿಕ ವರ್ತನೆಯಾಗಿ ಭಾವಿಸಿರುವುದರ ಒಂದು ಅರಿವಿನ ಉತ್ಪನ್ನವಾಗಿ ಬಹುತೇಕವಾಗಿ ಕಂಡುಬರುತ್ತವೆ; ಅಷ್ಟೇ ಅಲ್ಲ, ಪಠ್ಯದ ಮೇಲಿನ ಅಧಿಕಾರವು ಉದ್ಯಮದಲ್ಲಿನ ಎಲ್ಲಾ ನಿಲುವುಗಳ ಮಧ್ಯದಲ್ಲಿ ಸಂಧಾನದ ಮೂಲಕ ತೀರ್ಮಾನಿಸಲಾಗುವಂಥ ಸಮತೋಲನವೊಂದನ್ನು ಸೃಷ್ಟಿಸುವ ಒಂದು ಪ್ರಯತ್ನವಾಗಿ ಅವು ಕಂಡುಬರುತ್ತವೆ; ಹೀಗೆ ಮಾಡುವುದರಿಂದ ಅರ್ಥ-ರೂಪಿಸುವವರಿಂದ ವಾಚಕವೃಂದಕ್ಕೆ ಅರ್ಥವು ಪರಿಣಾಮಕಾರಿಯಾಗಿ ಸಾಗಿಸಲ್ಪಡುತ್ತದೆ.

ಪ್ರತಿಫಲ

[ಬದಲಾಯಿಸಿ]

ಓರ್ವ ಲೇಖಕನಿಗೆ ಸಂಬಂಧಿಸಿದಂತಿರುವ ಒಂದು ಪ್ರಮಾಣಕ ಒಡಂಬಡಿಕೆಯು, ಒಂದು ಮುಂಗಡ ಮತ್ತು ರಾಯಧನಗಳ ಸ್ವರೂಪದಲ್ಲಿ ಪಾವತಿಸುವಿಕೆಗಾಗಿರುವ ಮುನ್ನೇರ್ಪಾಡನ್ನು ಒಳಗೊಂಡಿರುತ್ತದೆ. ಒಂದು ಮುಂಗಡವು ಹಣದ ಒಂದು ದೊಡ್ಡ ಮೊತ್ತವಾಗಿದ್ದು, ಪ್ರಕಟಣೆಯ ಮುಂಗಡವಾಗಿ ಅದನ್ನು ಪಾವತಿಸಲಾಗುತ್ತದೆ. ರಾಯಧನಗಳು ಪಾವತಿಸಲ್ಪಡುವುದಕ್ಕೆ ಮುಂಚಿತವಾಗಿ ಒಂದು ಮುಂಗಡವನ್ನು ಪಡೆಯುವುದು ಅಗತ್ಯವಾಗಿರುತ್ತದೆ. ಮತ್ತು ಎರಡು ದೊಡ್ಡ ಮೊತ್ತಗಳಲ್ಲಿರುವ ಹಣದ ಸ್ವರೂಪದಲ್ಲಿ ಮುಂಗಡವನ್ನು ಪಾವತಿಸಬಹುದಾಗಿರುತ್ತದೆ: ಒಡಂಬಡಿಕೆಗೆ ಸಹಿ ಹಾಕಿದ ನಂತರದ ಮೊದಲ ಪಾವತಿ, ಹಾಗೂ ಸಂಪೂರ್ಣಗೊಂಡ ಹಸ್ತಪ್ರತಿಯ ವಿತರಣೆಯ ನಂತರದ ಅಥವಾ ಪ್ರಕಟಣೆಯ ನಂತರದ ಎರಡನೇ ಪಾವತಿ.

ಉದಾಹರಣೆಗೆ, ಮಾರಾಟವಾದ ಪ್ರತಿ ಪುಸ್ತಕದ ಚಿಲ್ಲರೆ ಮಾರಾಟ ಬೆಲೆಯ 10%ನಷ್ಟು ಮೊತ್ತವನ್ನು ಲೇಖಕರು ಪಡೆಯಬೇಕು ಎಂಬ ಅಂಶವನ್ನು ಲೇಖಕರ ಒಡಂಬಡಿಕೆಯೊಂದು ನಿರ್ದಿಷ್ಟವಾಗಿ ಹೇಳಬಹುದು. ಪಾವತಿಸಬೇಕಾದ ರಾಯಧನಗಳ ಒಂದು ಪ್ರಮಾಣದ ಕುರಿತಾಗಿ ಕೆಲವೊಂದು ಒಡಂಬಡಿಕೆಗಳು ನಿರ್ದಿಷ್ಟವಾಗಿ ಹೇಳುತ್ತವೆ (ಉದಾಹರಣೆಗೆ, ಮೊದಲ 10,000 ಪ್ರತಿಗಳ 10%ನಷ್ಟು ಪ್ರಮಾಣದಲ್ಲಿ ರಾಯಧನಗಳು ಆರಂಭವಾಗುವ, ಆದರೆ ಆಮೇಲೆ ಉನ್ನತವಾದ ಮಾರಾಟ ಹೊಸಿಲುಗಳಲ್ಲಿ ಒಂದು ಉನ್ನತವಾದ ವೈಯಕ್ತಿಕ ಲಾಭಕ್ಕೆ ಹೆಚ್ಚಳವಾಗುವಂಥ ನಿದರ್ಶನಗಳಲ್ಲಿ ಇದು ವ್ಯಕ್ತವಾಗುತ್ತದೆ).

ಮುಂದಿನ ಯಾವುದೇ ರಾಯಧನಗಳು ಪಾವತಿಸಲ್ಪಡುವುದಕ್ಕೆ ಮುಂಚಿತವಾಗಿ ಓರ್ವ ಲೇಖಕನ ಪುಸ್ತಕಗಳು ತಮ್ಮ ಮುಂಗಡವನ್ನು ಪಡೆದುಕೊಂಡು ಬಿಡಬೇಕಾಗುತ್ತದೆ. ಉದಾಹರಣೆಗೆ, ಒಂದು ವೇಳೆ ಓರ್ವ ಲೇಖಕನಿಗೆ 2000.00 $ಗಳಷ್ಟು ಮೊತ್ತದ ಒಂದು ಮಿತವಾದ ಮುಂಗಡವು ಪಾವತಿಸಲ್ಪಟ್ಟರೆ, ಮತ್ತು ಅವರ ರಾಯಧನದ ಪ್ರಮಾಣವು 20.00 $ನಷ್ಟು ಮುಖಬೆಲೆಯನ್ನು ಹೊಂದಿರುವ ಪುಸ್ತಕವೊಂದರ 10%ನಷ್ಟಿದ್ದರೆ, ಅಂದರೆ ಪ್ರತಿ ಪುಸ್ತಕಕ್ಕೆ 2.00 $ನಷ್ಟಿದ್ದರೆ, ಆಗ ಮುಂದಿನ ಯಾವುದೇ ಪಾವತಿಯು ಆಗುವುದಕ್ಕೆ ಮುಂಚಿತವಾಗಿ ಪುಸ್ತಕವು 1000 ಪ್ರತಿಗಳಷ್ಟು ಮಾರಾಟವಾಗಬೇಕಿರುತ್ತದೆ. ಪ್ರತಿಫಲಗಳಿಗೆ ಪ್ರತಿಯಾಗಿ ಗಳಿಸಿದ ರಾಯಧನಗಳ ಒಂದು ವೈಯಕ್ತಿಕ ಲಾಭ ಅಥವಾ ಶೇಕಡಾವಾರು ಪ್ರಮಾಣವನ್ನು ಪಾವತಿಸುವುದನ್ನು ಪ್ರಕಾಶಕರು ವಿಶಿಷ್ಟವಾದ ರೀತಿಯಲ್ಲಿ ತಡೆಹಿಡಿಯುತ್ತಾರೆ.

ಕೆಲವೊಂದು ದೇಶಗಳಲ್ಲಿ, ಸರ್ಕಾರ ಯೋಜನೆಯೊಂದರಿಂದಲೂ ಲೇಖಕರು ಆದಾಯವನ್ನು ಗಳಿಸುತ್ತಾರೆ; ಆಸ್ಟ್ರೇಲಿಯಾದಲ್ಲಿರುವ ELR (ಎಜುಕೇಷನಲ್‌ ಲೆಂಡಿಂಗ್‌ ರೈಟ್‌, ಅಂದರೆ ಶೈಕ್ಷಣಿಕ ಸಾಲನೀಡಿಕೆಯ ಹಕ್ಕು) ಮತ್ತು PLR (ಪಬ್ಲಿಕ್‌ ಲೆಂಡಿಂಗ್‌ ರೈಟ್‌, ಅಂದರೆ ಸಾರ್ವಜನಿಕ ಸಾಲನೀಡಿಕೆಯ ಹಕ್ಕು) ಯೋಜನೆಗಳು ಇದಕ್ಕೆ ಉದಾಹರಣೆಗಳಾಗಿವೆ. ಈ ಯೋಜನೆಗಳ ಅಡಿಯಲ್ಲಿ, ಶೈಕ್ಷಣಿಕ ಮತ್ತು/ಅಥವಾ ಸಾರ್ವಜನಿಕ ಗ್ರಂಥಾಲಯಗಳಲ್ಲಿರುವ ಲೇಖಕರ ಪುಸ್ತಕಗಳ ಪ್ರತಿಗಳ ಸಂಖ್ಯೆಗೆ ಸಂಬಂಧಿಸಿದಂತೆ, ಲೇಖಕರಿಗೆ ಶುಲ್ಕವೊಂದನ್ನು ಪಾವತಿಸಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಅನೇಕ ಲೇಖಕರು ಪುಸ್ತಕದ ಮಾರಾಟದಲ್ಲಿನ ತಮ್ಮ ಆದಾಯದ ಕೊರತೆಗಳನ್ನು ನೀಗಿಸಲು ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ; ಸಾರ್ವಜನಿಕ ಸಭೆಗಳಲ್ಲಿ ಮಾತನಾಡುವ ಗೊತ್ತುಪಾಡುಗಳು, ಶಾಲಾ ಭೇಟಿಗಳು, ತರಬೇತಿಯ ಅವಧಿಗಳು, ಅನುದಾನಗಳು, ಮತ್ತು ಬೋಧನಾ ಸ್ಥಾನಗಳಲ್ಲಿ ತೊಡಗಿಸಿಕೊಳ್ಳುವುದು ಅಂಥ ಕೆಲವು ಮಾರ್ಗಗಳಾಗಿವೆ.

ಭೂತಬರಹಗಾರರು, ತಾಂತ್ರಿಕ ಬರಹಗಾರರು, ಮತ್ತು ಪಠ್ಯಪುಸ್ತಕಗಳ ಬರಹಗಾರರಿಗೆ ಒಂದು ವಿಭಿನ್ನ ಮಾರ್ಗದಲ್ಲಿ ವಿಶಿಷ್ಟವಾಗಿ ಪಾವತಿಸಲಾಗುತ್ತದೆ: ಪುಸ್ತಕದ ಮಾರಾಟಗಳ ಮೇಲಿನ ಒಂದು ವೈಯಕ್ತಿಕ ಲಾಭ ಅಥವಾ ಶೇಕಡಾವಾರು ಪ್ರಮಾಣಕ್ಕೆ ಬದಲಿಗೆ, ಒಂದು ನಿಗದಿತ ಶುಲ್ಕ ಅಥವಾ ಪ್ರತಿ ಪದಕ್ಕೆ ಇಂತಿಷ್ಟು ದರ ಎಂಬ ಸ್ವರೂಪದಲ್ಲಿ ಸಾಮಾನ್ಯವಾಗಿ ಇಂಥವರಿಗೆ ಪಾವತಿಸಲಾಗುತ್ತದೆ.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಕಾದಂಬರಿಕಾರ
  • ಬರಹಗಾರ
  • ಲೇಖಕರ ಪಟ್ಟಿಗಳು
  • ಕವಿಗಳ ಪಟ್ಟಿಗಳು
  • ಕಾದಂಬರಿಕಾರರ ಪಟ್ಟಿ
  • ವೃತ್ತಿಪರ ಬರಹಗಾರಿಕೆ
  • ಶೈಕ್ಷಣಿಕ ಬರಹಗಾರಿಕೆ
  • ಭೂತಬರಹಗಾರ
  • ಅಗ್ರಗಣ್ಯ ಲೇಖಕ

ಉಲ್ಲೇಖಗಳು

[ಬದಲಾಯಿಸಿ]
  1. "authoress - definition at Dictionary.com". Reference.com. Retrieved 6 October 2010.
  2. Copyright Office Basics, U.S. Copyright Office, July 2006, archived from the original on 2008-03-28, retrieved 2011-03-18 {{citation}}: Unknown parameter |ffffewfRFWEF accessdate= ignored (help)
  3. ೩.೦ ೩.೧ ೩.೨ Barthes, Roland (1968), "The Death of the Author", Image, Music, Text (published 1997), ISBN 0006861350
  4. ೪.೦ ೪.೧ ೪.೨ Foucault, Michel (1969), "What is an Author?", in Harari, Josué V. (ed.), Textual Strategies: Perspectives in Post-Structuralist Criticism, Ithaca, NY: Cornell University Press (published 1979)
  5. Nehamas, Alexander (November 1986), "What An Author Is", The Journal of Philosophy, 83 (11), Eighty-Third Annual Meeting American Philosophical Association, Eastern Division: 685–691
  6. ಬೌರ್ಡಿಯು, ಪಿಯರೆ. “ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌, ಆರ್‌: ದಿ ಇಕನಾಮಿಕ್‌ ವರ್ಲ್ಡ್‌ ರಿವರ್ಸ್‌ಡ್‌.” ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌: ಎಸ್ಸೇಸ್‌ ಆನ್‌ ಆರ್ಟ್‌ ಅಂಡ್‌ ಲಿಟರೇಚರ್‌. ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 1993, 30.
  7. ಬೌರ್ಡಿಯು, ಪಿಯರೆ. “ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌, ಆರ್‌: ದಿ ಇಕನಾಮಿಕ್‌ ವರ್ಲ್ಡ್‌ ರಿವರ್ಸ್ಡ್‌.” ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌: ಎಸ್ಸೇಸ್‌ ಆನ್‌ ಆರ್ಟ್‌ ಅಂಡ್‌ ಲಿಟರೇಚರ್‌. ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 1993, 34
  8. ಬೌರ್ಡಿಯು, ಪಿಯರೆ. "ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌, ಆರ್‌: ದಿ ಇಕನಾಮಿಕ್‌ ವರ್ಲ್ಡ್‌ ರಿವರ್ಸ್ಡ್‌.” ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌: ಎಸ್ಸೇಸ್‌ ಆನ್‌ ಆರ್ಟ್‌ ಅಂಡ್‌ ಲಿಟರೇಚರ್‌‌. ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 1993, 42
  9. ಬೌರ್ಡಿಯು, ಪಿಯರೆ. "ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌, ಆರ್‌: ದಿ ಇಕನಾಮಿಕ್‌ ವರ್ಲ್ಡ್‌ ರಿವರ್ಸ್ಡ್‌.” ದಿ ಫೀಲ್ಡ್‌ ಆಫ್‌ ಕಲ್ಚರಲ್‌ ಪ್ರೊಡಕ್ಷನ್‌: ಎಸ್ಸೇಸ್‌ ಆನ್‌ ಆರ್ಟ್‌ ಅಂಡ್‌ ಲಿಟರೇಚರ್‌‌. ನ್ಯೂಯಾರ್ಕ್‌: ಕೊಲಂಬಿಯಾ ಯೂನಿವರ್ಸಿಟಿ ಪ್ರೆಸ್‌, 1993, 68
  10. ಕ್ಯೂರನ್‌, ಜೇಮ್ಸ್‌. “ಲಿಟರರಿ ಎಡಿಟರ್ಸ್‌, ಸೋಷಿಯಲ್‌ ನೆಟ್‌ವರ್ಕ್ಸ್‌ ಅಂಡ್‌ ಕಲ್ಚರಲ್‌ ಟ್ರೆಡಿಷನ್‌.” ಮೀಡಿಯಾ ಆರ್ಗನೈಸೇಷನ್ಸ್‌ ಇನ್‌ ಸೊಸೈಟಿ. ಜೇಮ್ಸ್‌ ಕ್ಯೂರನ್‌, ಸಂಪಾದಿತ. ಲಂಡನ್‌: ಆರ್ನಾಲ್ಡ್‌, 2000, 230


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ‌‌ಹಿಕ್ಸ್, H. L. ಮಾರ್ಟೆ ಡಿ'ಆಥರ್‌: ಆನ್‌ ಅಟಾಪ್ಸಿ . ಫಿಲಡೆಲ್ಫಿಯಾ : ಟೆಂಪಲ್‌ ಯೂನಿವರ್ಸಿಟಿ ಪ್ರೆಸ್‌, 1990.
  • ‌ವೆಸ್ಟ್‌ಫಾಲ್, ಜೋಸೆಫ್‌. ದಿ ಕಿಯರ್ಕೆಗಾರ್ಡಿಯನ್‌ ಆಥರ್‌: ಆಥರ್‌ಷಿಪ್‌ ಅಂಡ್‌ ಪರ್ಫಾರ್ಮೆನ್ಸ್‌ ಇನ್‌ ಕಿಯರ್ಕೆಗಾರ್ಡ್‌'ಸ್‌ ಲಿಟರರಿ ಅಂಡ್‌ ಡ್ರಾಮಾಟಿಕ್‌ ಕ್ರಿಟಿಸಿಸಂ . ಬರ್ಲಿನ್‌: ವಾಲ್ಟರ್‌ ಡೆ ಗ್ರೂಯ್ಟರ್‌ ಪ್ರೆಸ್‌, 2007.

ಬಾಹ್ಯ ಕೊಂಡಿಗಳು‌

[ಬದಲಾಯಿಸಿ]

ಟೆಂಪ್ಲೇಟು:Book Publishing Process

"https://kn.wikipedia.org/w/index.php?title=ಲೇಖಕ&oldid=1058118" ಇಂದ ಪಡೆಯಲ್ಪಟ್ಟಿದೆ