ವಿಷಯಕ್ಕೆ ಹೋಗು

ಲೋಚೊ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೋಚೊ
ಲೋಚೊ - ಈರುಳ್ಳಿ, ಚಟ್ನಿಯೊಂದಿಗೆ ಬಡಿಸಲಾಗಿದೆ, ಸೇವ್‍ನೊಂದಿಗೆ ಅಲಂಕರಿಸಲಾಗಿದೆ, ಸೂರತ್‍ನಲ್ಲಿ - ಭಾರತ
ಮೂಲ
ಮೂಲ ಸ್ಥಳಸೂರತ್, ಭಾರತ
ವಿವರಗಳು
ನಮೂನೆಲಘು ಆಹಾರ
ಮುಖ್ಯ ಘಟಕಾಂಶ(ಗಳು)ಕಡಲೆ ಹಿಟ್ಟು, ಕಡಲೆ ಬೇಳೆ

ಲೋಚೊ ಮೂಲತಃ ಸೂರತ್‍ನದ್ದಾದ ಆವಿಯಲ್ಲಿ ಬೇಯಿಸಿದ ಒಂದು ಗುಜರಾತಿ ಫ಼ರ್ಸಾಣ್ (ಲಘು ಆಹಾರ/ಪಕ್ಕ ಖಾದ್ಯ). ಇದನ್ನು ಕಡಲೆ ಹಿಟ್ಟಿನಿಂದ ತಯಾರಿಸಲಾಗುತ್ತದೆ. ಇದರ ಸಡಿಲವಾದ ಸಾಂದ್ರತೆ ಮತ್ತು ಅಸಮ ಆಕಾರದಂತಹ ಹಿಟ್ಟಿನ ಉಂಡೆಗಳಿಂದ ಈ ಖಾದ್ಯಕ್ಕೆ ಈ ಹೆಸರು ಬಂದಿದೆ. ಸ್ವಲ್ಪಮಟ್ಟಿಗೆ ಇದು ಖಮನ್‍ಗೆ ಸಂಬಂಧಿಸಿದೆ. ಆದರೆ ಖಮನ್‍ನಂತೆ ಇದನ್ನು ಸಮ ಆಕಾರದ ಕತ್ತರಿಸಿದ ತುಂಡುಗಳಾಗಿ ಬಡಿಸಲಾಗುವುದಿಲ್ಲ. ಹಲವುವೇಳೆ ಇದರ ಮೇಲೆ ಎಣ್ಣೆ ಸಿಂಪಡಿಸಲಾಗುತ್ತದೆ ಮತ್ತು ಬೆಣ್ಣೆ, ಸೇವ್, ಸಂಬಾರ ಪದಾರ್ಥಗಳು, ಕೊತ್ತಂಬರಿ, ಈರುಳ್ಳಿ ಇತ್ಯಾದಿಗಳಿಂದ ಅಲಂಕರಿಸಲಾಗುತ್ತದೆ.[][]

ಲೋಚೊವನ್ನು ಸೂರತ್ ನಗರದಲ್ಲಿ ವ್ಯಾಪಕವಾಗಿ ತಿನ್ನಲಾಗುತ್ತದೆ. ಈ ಫ಼ರ್ಸಾಣ್ ಸೂರ್ತಿ ಲೋಚೊ ಎಂದು ಜನಪ್ರಿಯವಾಗಿದೆ. ಇದು ನವಸಾರಿ ಮತ್ತು ದಕ್ಷಿಣ ಗುಜರಾತ್‍ನಲ್ಲಿನ ಇತರ ಪ್ರದೇಶಗಳಲ್ಲಿ ಕೂಡ ಬಹಳ ಜನಪ್ರಿಯವಾಗಿದೆ. ಈ ಪ್ರದೇಶಗಳಲ್ಲಿ ಇದು ಹೆಚ್ಚು ಸಾಮಾನ್ಯವಾಗಿ ಸೇವ್ ಖಮನಿ ಎಂದು ಪರಿಚಿತವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]


"https://kn.wikipedia.org/w/index.php?title=ಲೋಚೊ&oldid=849676" ಇಂದ ಪಡೆಯಲ್ಪಟ್ಟಿದೆ