ವಿಷಯಕ್ಕೆ ಹೋಗು

ವಂದನಾ ಶಿವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಂದನಾ ಶಿವ
Born
ವಂದನಾ ಶಿವ

೫ ನವೆಂಬರ್೧೯೫೨
ಡೆಹ್ರಾಡೂನ್, ಭಾರತ, ಉತ್ತರ ಪ್ರದೇಶ(ಈಗಿನ ಉತ್ತರಖಂಡ್
Nationalityಭಾರತೀಯರು
Alma materಪಂಜಾಬ್ ವಿಶ್ವವಿದ್ಯಾಲಯ, ಚಂಡಿಗರ್, ಗೈಲ್ವೆ ವಿಶ್ವವಿದ್ಯಾಲಯ, ವೆಸ್ಟ್ರನ್ ಒಂಟಾರಿಯೋ ವಿಶ್ವವಿದ್ಯಾಲಯ
Occupation(s)ತತ್ವಜ್ಞಾನಿ, ಪರಿಸರವಾದಿ, ಲೇಖಕ, ವೃತ್ತಿಪರ ಸ್ಪೀಕರ್, ಸಾಮಾಜಿಕ ಕಾರ್ಯಕರ್ತ
Awardsರೈಟ್ ಲೈವ್ಲಿಹುಡ್‌ ಪ್ರಶಸ್ತಿ (1993),ಸಿಡ್ನಿ ಪೀಸ್ ಪ್ರಶಸ್ತಿ ೨೦೧೦, ಫೋಕೂಕ ಏಷ್ಯನ ಸಂಸ್ಕೃತಿ ಪ್ರಶಸ್ತಿ (2012)
</ref>
Websitewww.navdanya.org
Video-Statement (2014)

ವಂದನಾ ಶಿವ ಭಾರತೀಯ ವಿದ್ವಾಂಸೆ, ಪರಿಸರ ಕಾರ್ಯಕರ್ತೆ, ಆಹಾರ ಸಾರ್ವತ್ರಿಕರಣದ ವಕೀಲೇ, ಪರಿಸರ ಸ್ತ್ರೀವಾದಿ ಮತ್ತು ಜಾಗತೀಕರಣ ವಿರೋಧಿ ಲೇಖಕಿ[]. ಇಂಟರ್ನ್ಯಾಷ್ನಲ್ ಫೋರಮ್ ಆನ್ ಗ್ಲೋಬಲೈಸೇಷನ್‌ನ ನೇತೃತ್ವ ಹಾಗೂ ಮಂಡಳಿಯ ಸದಸ್ಯತ್ವವನ್ನು ವಹಿಸಿಕೊಂಡಿದ್ದರು. ವೈಜ್ಞಾನಿಕ ಸಮಿತಿಯ ಫಂಡಸಿಯನ್ ಐಡಿಯಾಸ್‌ನಲ್ಲಿ ಮತ್ತು ಅಂತರಾಷ್ಟ್ರೀಯ ಸಂಸ್ಠೆಯಲ್ಲಿ ಭಾಗವಹಿಸಿದ್ದರು. ೧೯೯೩ ರಲ್ಲಿ ರೈಟ್ ಲೈವ್ಲಿಹುಡ್‌ ಪ್ರಶಸ್ತಿಯನ್ನು ಸ್ವೀಕರಿಸಿದ್ದರು. ಇವರು ೨೦ಕ್ಕೂ ಹೆಚ್ಚು ಪುಸ್ತಕ ರಚಿಸಿದ್ದಾರೆ.[] GMO ವಿರೋಧಿ ಆಂದೋಲನಕ್ಕೆ ಸಂಬಂಧಿಸಿದ ತನ್ನ ಕ್ರಿಯಾಶೀಲತೆಗಾಗಿ ಇವರನ್ನು "ಧಾನ್ಯದ ಗಾಂಧಿ" ಎಂದು ಕರೆಯಲಾಗುತ್ತದೆ.[]

ಜೀವನ ಮತ್ತು ವಿದ್ಯಾಭ್ಯಾಸ

[ಬದಲಾಯಿಸಿ]

೫ ನವೆಂಬರ್ ೧೯೫೨ ರಂದು ಡೆಹ್ರಾಡೂನ್ ನಲ್ಲಿ ಜನಿಸಿದ ವಂದನಾರ ತಂದೆ ಅರಣ್ಯ ಸಂರಕ್ಷಣಧಿಕಾರಿಯಾಗಿ, ತಾಯಿ ಪ್ರಕೃತಿಯನ್ನು ಪ್ರೀತಿಸುವ ರೈತಳಾಗಿ ಕೆಲಸವನ್ನು ಮಾಡುತ್ತಿದ್ದರು.ವಂದನಾ ಸೆಂಟ್ ಮೇರಿ ಶಾಲೆ, ಜೀಸಸ್ ಮತ್ತು ಮೇರಿ ಕಾನ್ವೆಂಟ್ನಲ್ಲಿ ವಿದ್ಯಾಭ್ಯಾಸವನ್ನು ಮಾಡಿದಳು. ಚಂಡೀಘರ್‌ನಲ್ಲಿರುವ ಪಂಜಾಬ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಅಧ್ಯಾಯನ ಮಾಡಿ ೧೯೭೨ರಲ್ಲಿ ವಿಜ್ಞಾನ ಸ್ನಾತಕ ಮತ್ತು ೧೯೭೪ರಲ್ಲಿ ವಿಜ್ಞಾನದ ಮಾಸ್ಟರ್ ಪದವಿಯನ್ನು ಪಡೆದಿದ್ದಾಳೆ. ೧೯೭೭ ರಲ್ಲಿ ಗೈಲ್ವೆ ವಿಶ್ವವಿದ್ಯಾಲದಲ್ಲಿ ವಿಜ್ಞಾನದ ತತ್ವಶಾಸ್ತ್ರದಲ್ಲಿ ಎಂ.ಎ. ಪದವಿಯನ್ನು ಪಡೆಯಲು ಕೆನಡಕ್ಕೆ ಹೋಗುವ ಮೊದಲು ಭಾಭಾ ಅಣು ಸಂಶೋಧನಾ ಕೇಂದ್ರದಲ್ಲಿ ಬೆಳಕಿನ ಆವರ್ತಕದಲ್ಲಿ ಹಾಗುವ ಬದಲಾವಣೆಗಳು ಎನ್ನುವ ಪ್ರಬಂಧದ ಬಗ್ಗೆ ಸಂಕ್ಷಿಪ್ತವಾಗಿ ಕೆಲಸ ಮಾಡಿದರು. ೧೯೭೮ರಲ್ಲಿ ವೆಸ್ಟ್ರನ್ ಒಂಟಾರಿಯೋ ಎಂಬ ವಿಶ್ವವಿದ್ಯಾಲಯದಲ್ಲ್ಲಿ ಭೌತಶಾಸ್ತ್ರದ ತತ್ವಶಾಸ್ತ್ರದಲ್ಲಿ ಪಿ.ಎಚ್.ಡಿ ಪದವಿಯನ್ನು ಪಡೆದು, ಹಿಡನ್ ಅಸ್ಠಿರ ಹಾಗೂ ಕ್ವಾಂಟಮ್ ಸಿದ್ದಾಂತದ ಬಡಾವಣೆ ಎಂಬ ಪ್ರಬಂಧದಲ್ಲಿ ಬೆಲ್ಸ್ ಪ್ರಮೇಯದ ನಿಯಮಗಳ ಹೊರಗೆ ಇರುವ ಗಣಿತ ಮತ್ತು ತತ್ವಶಾಸ್ತ್ರದ ಗುಪ್ತ ಅಸ್ಠಿರ ಸಿದ್ದಾಂತದ ಪರಿಣಾಮಗಳನ್ನು ಚರ್ಚಿಸುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಮತ್ತು ಪರಿಸರದ ನೀತಿಯ ಬಗ್ಗೆ ಅಂತರ-ಸಂಶೋಧನೆ ಮಾಡಲು ಬೆಂಗಳೂರಿನಲ್ಲಿರುವ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೆಂಜ್ಮೆಂಟ್‌ಗೆ ಹೋದರು.

ವೃತ್ತಿ

[ಬದಲಾಯಿಸಿ]

ಕೃಷಿ ಮತ್ತು ಆಹಾರ ಕ್ಷೇತ್ರದ ಪ್ರಗತಿಯ ಬಗ್ಗೆ ಇವರು ಅನೇಕ ಲೇಖನಗಳನ್ನು ಬರೆದಿದ್ದಾರೆ. ಭೌದ್ಧಿಕ ಆಸ್ತಿಯ ಹಕ್ಕು(ಇಂಟೆಲ್ಕೆಟುಯಲ್ ಪ್ರಾಪರ್ಟಿ ರೈಟ್ಸ್), ಜೀವ ವೈವಿದ್ಯ(ಬಯೋಡೈವರ್‌ಸಿಟಿ), ಜೈವಿಕ ತಂತ್ರಜ್ಞಾನ(ಬಯೋಎಥಿಕ್ಸ್), ಜೆನಿಟಿಕ್ ಇಂಜಿನಿಯರಿಂಗ್, ಇವುಗಳ ಬಗ್ಗೆ ಕಾರ್ಯಕರ್ತ ಶಿಬಿರಗಳ ಮೂಲಕ ಹೋರಾಟವನ್ನು ಮಾಡಿದ್ದಾರೆ. ಅಗಾಂಶ ಕಸಿ ಆಧಾರಿತ ಕೃಷಿ ಅಭಿವೃದ್ಧಿ ವಿರುದ್ಧ ಹೋರಾಡಿದ ಇವರು ಆಪ್ರಿಕಾ, ಏಷ್ಯಾ, ಲ್ಯಾಟಿನ್, ಅಮೆರಿಕ, ಐರ್ಲೆಂಡ್, ಮತ್ತು ಆಸ್ಟ್ರಿಯಾದ ಹಸಿರು ಚಳವಳಿಯ ಜನಸಾಮನ್ಯ ಸಂಸ್ಥೆಗಳು ಇದಕ್ಕೆ ಸಹಕಾರ ನೀಡುವಂತೆ ಮಾಡಿದರು.

ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರಕ್ಕಾಗಿ ೧೯೮೨ರಲ್ಲಿ ರಿಸರ್ಚ್‌ ಫೌಂಡೇಶನ್‌ನನ್ನು ಸ್ಥಾಪಿಸಿದಳು. ರಾಷ್ಟ್ರೀಯ ಚಳುವಳಿಯ ವೈವಿಧ್ಯತೆ ಮತ್ತು ಜೀವಂತ ಸಂಪನ್ಮೂಲಗಳ ಸಮಗ್ರತೆ, ವಿಶೇಷವಾಗಿ ಸ್ಥಳೀಯ ಬೀಜ ಸಾವಯುವ ಕೃಷಿ ಮತ್ತು ನ್ಯಾಯೋಚಿತ ವ್ಯವಹಾರದ ಬೆಂಬಲ ರಕ್ಷಿಸಲು ೧೯೯೧ರಲ್ಲಿ ನವದನ್ಯ[] ಪ್ರಾರಂಭವಾಹಿತು.ಪರಿಸರಸ್ನೇಹಿ ಜೀವನಕ್ರಮವನ್ನು ಪ್ರೋತ್ಸಾಹಿಸಲು ೨೦೦೪ರಲ್ಲಿ ಫೋಮೇಕರ್ ಕಾಲೇಜ್(ಯು.ಕೆ) ಸಹಯೋಗದೊಂದಿಗೆ ಬೀಜ ವಿದ್ಯಾಪೀಠ ಅಂತರಾಷ್ಹ್ಟ್ರೀಯ ಕಾಲೇಜನ್ನು ಡೂನ್ ಕಣಿವೆಯಲ್ಲಿ ಆರಂಭಿಸಿದರು. ಭೌದ್ಧಿಕ ಆಸ್ತಿ ಮತ್ತು ಜೀವ ವೈವಿಧ್ಯವಿರುವ ಪ್ರದೇಶದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಪರಿಸರಕ್ಕೆ ಇರುವ ರಿಸರ್ಚ್ ಫೌಂಡೇಶನ್‌ ಹತ್ತಿರ ವಂದಾನ ಶಿವ ಮತ್ತು ಅವರ ತಂಡದವರು ಬಯೋಪ್ರಸಿಯ ಬೇವು, ಬಾಸುಮತಿ ಮತ್ತು ಗೋಧಿಗೆ ವಿಶ್ವಮಾನ್ಯತೆ ಮತ್ತು ಬೌದ್ದಿಕ ಹಕ್ಕುಸ್ವಾಮ್ಯ(IPR) ದೊರಕಿಸಲು ಪ್ರಯತ್ನಿಸಿದರು.

ವಂದನಾ ಶಿವಳ ಮೊದಲ ಪುಸ್ತಕ ಅಲೈವ್(೧೯೮೮) . "ಭಾರತದಲ್ಲಿ ಅನೇಕ ರೈತರು ಮಹಿಳೆಯರು" ಎಂದು ಮಹಿಳೆಯರ ಮತ್ತು ಕೃಷಿಯ ಮೇಲೆ ಎಫ್.ಎ.ಒ ಗೆ ಒಂದು ವರದಿಯನ್ನು ಬರೆದಳು.ಕಠ್ಮಂಡುವಿನಲ್ಲಿರುವ ಮೌಂಟೇನ್ ಅಭಿವೃದ್ಧಿ ಅಂತಾರಾಷ್ಟ್ರೀಯ ಕೇಂದ್ರದಲ್ಲಿ ಲಿಂಗ ಘಟಕವನ್ನು ಸ್ಥಾಪಿಸಿದಳು. ಮಹಿಳೆಯರ ಪರಿಸರ ಮತ್ತು ಅಭಿವೃದ್ಧಿ ಮಂಡಳಿಯಲ್ಲಿ ಸದಸ್ಯ ಸಂಸ್ಥಾಪಕಳಾಗಿದ್ದಳು. ಮತ್ತು ಇದೆ ರೀತಿ ಭಾರತ ಮತ್ತು ವಿದೇಶಿ ಸರ್ಕಾರಗಳಿಗೆ,ಇಂಟರ್‌ನ್ಯಾಷ್‌ನಲ್ ಫೋರಮ್ ಆಫ್ ಗ್ಲೋಬಲೈಸೇಷನ್, ಮಹಿಳೆಯರ ಪರಿಸರ ಮತ್ತು ಅಭಿವೃದ್ಧಿ ಸಂಸ್ಥೆ, ಥರ್ಡ್ ವರ್ಲ್ಡ್ ನೆಟ್ವರ್ಕ್ ಸೇರಿದಂತೆ ಮುಂತಾದ ಸರ್ಕಾರೇತರ ಸಂಸ್ಥೆಗಳಲ್ಲಿ ಸಹಕಾರಳಾಗಿ ಸೇವೆಯನ್ನು ಸಲ್ಲಿಸಿದ್ದಾರೆ ವಿಶ್ವ ವಾಣಿಜ್ಯ ಒಕ್ಕೂಟ(WTO) ವಿರುದ್ಧ ಇಂಡಿಯನ್ ಪೀಪಲ್ ದಂಡೆಯಾತ್ರೆಯ ಸ್ಟೀಲಿಂಗ್ ಕಮಿಟ್ಯ ಸದಸ್ಯಳಾಗಿ, ವರ್ಲ್ಡ್ ಫ್ಯೋಚರ್ ಕೌಂಸಿಲ್‍ನಲ್ಲಿ ಶಾಸಕಳಾಗಿದ್ದರು. ಭಾರತ ಸರ್ಕಾರದ ಸಮಿತಿಗಳಲ್ಲಿ ಜೈವಿಕ ಕೃಷಿ ಬಗ್ಗೆ ಕಾರ್ಯ ನಿರ್ವಹಿಸುತ್ತಿದ್ದಾಅಳೆ. ೨೦೦೭ರಲ್ಲಿ ಸ್ಟಾಕ್ ಎಕ್ಸೀಂಜ್ ಆಫ್ ವಿಷನ್ಸ್ ಯೋಜನೆಯಲ್ಲಿ ಭಾಗವಹಿಸುತ್ತಿದ್ದರು. ವಂದಾನ ಶಿವ ತಮ್ಮ ಜೀವನವನ್ನು ರಕ್ಷಣಾ ಜೀವವೈವಿಧ್ಯ ಮತ್ತು ಸ್ಥಳೀಯ ಜ್ಞಾನ ಸಂಬಂಧಿ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು . ಕೃಷಿಯಲ್ಲಿ ಜೀವವೈವಿಧ್ಯ ಉತ್ತೇಜಿಸಲು ಮತ್ತು ಉತ್ಪಾದಕತೆ, ಪೋಷಣೆ, ರೈತನ ಆದಾಯ ಮತ್ತು ಹವಾಮಾನ ಸ್ಥಿತಿಸ್ಥಾಪಕತ್ವವನ್ನು ಹೆಚ್ಛಿಸಲು ಬಹಳ ಕಷ್ಟಪಟ್ಟರು. ೨೦೦೩ರಲ್ಲಿ ಈ ಕೆಲಸಕ್ಕೆ ಟೈಮ್ ಮ್ಯಾಹಜೀನ‌ರವರು "ಪರಿಸರದ ಹೀರೋ" ಎನ್ನುವ ಮಾನ್ಯತೆಯನ್ನು ನೀಡಿದರು. ಪಂಜಾಬ್ನಲ್ಲಿ ಹಿಂಸೆ ಮತ್ತು ಯೂನಿಯನ್ ಕಾರ್ಬೆಡ್ ಕೀಟನಾಶಕ ಉತ್ಪಾದನಾ ಸಸ್ಯದಿಂದ ಅನಿಲ ಸೋರಿಕೆ ಆದ ನಂತರ ೧೯೮೪ರಲ್ಲಿ ಕೃಷಿಯ ಕೆಲಸವನ್ನು ಆರಂಭಿಸಿರು.

ಅವಳ ಓದು ಯು.ಎನ್‌ ವಿಶ್ವವಿದ್ಯಾಲಯಕ್ಕೆ "ದಿ ವಯೋಲೆನ್ಸ್ ಆಫ್ ದಿ ಗ್ರೀನ್‌ ರೆವಲ್ಯೋಷನ್ ಎಂಬ ಪುಸ್ತಕ ಪ್ರಕಟನೆ ಮಾಡಲು ಕಾರಣವಾಯಿತು. ಡೇವಿಡ್ ಬರ್ಸ್‌ವಿಯನ್ ರವರೊಂದಿಗೆ ಸಂದರ್ಶನ ನಡೆಸುತ್ತಿದ್ದಾಗ ಇವರು ಹಸಿರು ಕ್ರಾಂತಿ ಕೃಷಿಯಿಂದ ಬಡ್ತಿಯಾಗಿದ್ದ ರಸಾಯನಿಕ ಪ್ಯಾಕೇಜ್ ಬೀಜಗಳಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡಿದೆ. ಋಣಾತ್ಮಕ ಜನರ ಆರೋಗ್ಯವನ್ನು ಮತ್ತು ಪರಿಸರವನ್ನು ನಾಶಮಾಡುತ್ತಿದೆ ಎಂದು ವಾದಿಸಿದರು. ಇಂದು ವಿಶ್ವದಾದ್ಯಾಂತ ೧೪೦೦ ಕೀಟ ನಾಶಕಗಳು ನಮ್ಮ ಆಹಾರ ವ್ಯವಸ್ಥೆಯಲ್ಲಿ ಪ್ರವೇಶ ಮಾಡುತ್ತದೆ. ಕೇವಲ ೧.೧% ಕೀಟನಾಶಕಗಳು ಗುರಿ ಕೀಟದಂತೆ ವರ್ಥಿಸುತ್ತದೆ. ಹೆಚ್ಚುತ್ತಿರುವ ಮೂತ್ರಪಿಂಡ ವೈಪಲ್ಯದ ಕ್ಯಾನ್ಸ್‌ರ್ ಮತ್ತು ರಸಗೊಬ್ಬರ ಬಳಕೆಯ ವ್ಯಾಪ್ತಿಯಿಂದ ಹೃದ್ರೋಗದಿಂದ ಜನರು ಸಾಯುತ್ತಿದ್ದಾರೆ ಎಂದು ಅವಳು ಮತ್ತು ಅವಳ ತಂಗಿ ಮೀರ ಶಿವಾ ವಾದಮಾಡುತ್ತಿದ್ದರು. ಶಿವ ಕೆಲಸದಲ್ಲ್ಲಿ ಕೇಂದ್ರ ಬೀಜ ಸ್ವಾತಂತ್ರ್ಯದ ಕಲ್ಪನೆ, ಅಥವಾ ಬೀಜಗಳ ಸಾಂಘ್ಹಿಕ ಪೇಟೆಂಟ್‌ನನ್ನು ತಿರಸ್ಕರಿಸಿದರು. ಟ್ರೇದ್ ರಿಲೆಟೆಡ್ ಇನ್‌ಟಲೆಕ್‌ಟುಯಲ್ ಪ್ರಾಪರ್ಟಿ ರೈಟ್ಸ್ ರವರ ಒಪ್ಪಂದದ ಪ್ರಕಾರ ಪೇಟೆಂಟ್ಸ್‌ನ ವ್ಯಾಪ್ತಿಯು ನಮ್ಮೆ ಜೀವನದಲ್ಲಿ ಒಳಗೊಳ್ಳುವಂತೆ ಮಾಡಬೇಕೆಂದು ೧೯೯೪ರಲ್ಲಿ ವಿಶ್ವ ವಾಣಿಜ್ಯ ಒಕ್ಕೂಟದ ಅನುಶಾಸನದ ವಿರುದ್ಧ ಪ್ರಚಾರ ಮಾಡಿದ್ದರು.

ಗೋಲ್ಡ್‌ನ್ ರೈಸ್

[ಬದಲಾಯಿಸಿ]

ವಂದನಾ ಶಿವ್ ಗೋಲ್ಡ್‌ನ್ ರೈಸ್‌ನನ್ನು ವಿರೋಧಿಸುತ್ತಾರೆ. ಇದು ವಿಟಮಿನ್ 'ಎ' ಪೂರ್ವಾಗಾಮಿಯಾದ ಬೀಟಾ ಕೆರೋಟಿನ್‌ ಸೃಷ್ಟಿಸಲು ಮಾಡಿರುವ ಒಂದು ತಳಿ ಅಕ್ಕಿ.ದಿನನಿತ್ಯದಬಳಕೆಯ ಅಕ್ಕಿಯಲ್ಲಿ ವಿಟಮಿನ್ 'ಎ' ಕೊರತೆ ಇರುವುದರಿಂದ ಎಷ್ಟೋ ಮಿಲಿಯನ್ ಮಕ್ಕಳ ಆರೋಗ್ಯ ಕೆಡುತ್ತಿದ್ದು. ಕುರುಡುತನವೂ ಹೆಚ್ಚುತ್ತಿದೆ. ಆದರೆ ಗೋಲ್ಡನ್ ರೈಸಿನಿಂದ ಎಷ್ಟೋ ಜನ ಪ್ರಾಣ ಕಳೆದುಕೊಂಡ ಕಾರಣ ಇದಕ್ಕೆ ಅವಳ ವಿರೋಧವಿದೆ. ಬೇರೆ ವಿಧದ ಅಕ್ಕಿಗಳಿಗಿಂತ ಇದರ ಬೆಲೆ ಕಡಿಮೆ.ಗೋಲ್ಡ್‌ನ್ ರೈಸ್‌‌ಗಿಂತಲು ಗೋಲ್ಡ್‌ನ್ ರೈಸ್‌ ಹೋಕ್ಸ್ ಹಾನಿಕಾರಿ.

ಹಲವಾರು ಸಾಕ್ಷ್ಯಾಚಿತ್ರಗಳಲ್ಲಿ ಅವಕಾಶ ದೊರಕಿದೆ, ಫ್ರೀಡಮ್ ಅಹೆದ್, ಒನ್ ವಾಟರ್, ದಿ ಕಾರ್ಪೋರೇಶನ್, ಮುಂತಾದ ಚಿತ್ರಗಳಲ್ಲಿ ಭಾಗವಹಿಸಿದ್ದಾಳೆ.

"೨ ವರ್ಷಕ್ಕೆ ೨ ರಿಂದ ೩ ಮಿಲಿಯನ್ ರಷ್ಟು ಮಕ್ಕಳು ಕುರುಡರಾಗುತ್ತಾರೆ ಮತ್ತು ೧ ಮಿಲಿಯನ್‌ ರಷ್ಟು ಜನ ವಿಟಮಿನ್ ಎ ಕೊರತೆಯಿಂದಾಗಿ ಸಾಯುತ್ತಿದ್ದಾರೆ ಇದು ನಮಗೆ ಬೇಕೆ?" ಎಂದು ಕನ್ಸ್‌ರ್ಲೇಟಿವ್ ಗ್ರೂಪ್ ಆಫ್ ಇಂಟರ್‌ನ್ಯಾಷ್‌ನಲ್ ಅಗ್ರಿಕಲ್‌ಚರ್ ರಿಸರ್ಚ್‌ನಲ್ಲಿ ನಿರ್ದೇಶಕರಾದ ಇಸ್ಮಾಯಿಲ್ ಸರ್‌ಗೀಡಿನ್ ರವರು ಅಮೆರಿಕದ ಅಸೋಸಿಯೇಶನ್ ಸಭೆಯಲ್ಲಿ ಪ್ರಶ್ನೆಯನ್ನು ಹಾಕುತ್ತಾರೆ.

ಸಾಕ್ಷ್ಯ ಚಿತ್ರಗಳು

[ಬದಲಾಯಿಸಿ]

ಹಲವಾರು ಸಾಕ್ಷ್ಯಾಚಿತ್ರಗಳಲ್ಲಿ, ಸಿನಿಮಾಗಳಲ್ಲಿ ನಟಿಸುವ ಅವಕಾಶ ಇವರಿಗೆ ದೊರಕಿದೆ, ಫ್ರೀಡಂಮ್ ಅಹೆದ್, ಒನ್‌ ವಾಟರ್, ದಿ ಕಾರ್ಪೋರೇಶನ್, ಮುಂತಾದ ಚಿತ್ರಗಳಲ್ಲಿ ಭಾಗವಹಿಸಿದ್ದಾಳೆ.


ಗಂಗಾ ನೀರಿನ ಸಮಸ್ಯೆಯ ಮೇಲೆ ಸಾಕ್ಷ್ಯಚಿತ್ರಗಳನ್ನು ಮಾಡಿದ್ದಾರೆ. ಅದು ಗಂಗಾ ಫ್ರಮ್ ದಿ ವಾಟರ್ ವಾರ್ಸ್, ಫ್ಲೋ ಫಾರ್ ಲವ್ ಆಫ್ ವಾಟರ್.

ಹೊರಗಿನ ಕೊಂಡಿಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "ವಂದನಾ ಶಿವ". Archived from the original on 2012-10-28. Retrieved 2016-03-13.
  2. "ವಂದನಾ ಶಿವ ಪುಸ್ತಕಗಳು". Retrieved 24 February 2011.
  3. Travel, B. B. C. "ನಾವು ತಿನ್ನುವ ಆಹಾರವು ಏಕೆ ಮುಖ್ಯವಾಗಿದೆ ಎಂಬುದರ ಕುರಿತು ವಂದನಾ ಶಿವ ಜೊತೆ ಚರ್ಚೆ". www.bbc.com (in ಇಂಗ್ಲಿಷ್). Retrieved 2021-03-31.
  4. "ನವದನ್ಯ".


[] [] []

  1. https://twitter.com/drvandanashiva?ref_src=twsrc%5Egoogle%7Ctwcamp%5Eserp%7Ctwgr%5Eauthor
  2. https://www.britannica.com/biography/Vandana-Shiva
  3. http://vandanashivamovie.com/