ವಜುಭಾಯಿ ರುದಭಾಯಿ ವಾಲ
ಗೋಚರ
ಈ ಲೇಖನ ಯಾವುದೇ ವಿಕಿಪೀಡಿಯ ಲೇಖನಕ್ಕೆ ಕೊಂಡಿಗಳನ್ನು (Interwiki links) ಹೊಂದಿಲ್ಲ. (ಡಿಸೆಂಬರ್ ೨೦೧೫) |
ವಜುಭಾಯಿ ರುದಭಾಯಿ ವಾಲಾ ಗುಜರಾತಿನ ಹಿರಿಯ ರಾಜಕಾರಣಿ. ಗುಜರಾತ್ ರಾಜ್ಯದಲ್ಲಿ ಶಾಸಕ, ಮಂತ್ರಿ, ಸಭಾಪತಿಯಾಗಿ ಸೇವೆ ಸಲ್ಲಿಸಿದ ವಜುಭಾಯಿ ಸೆಪ್ಟೆಂಬರ್ ೨೦೧೪ರಲ್ಲಿ ಕರ್ನಾಟಕದ ರಾಜ್ಯಪಾಲರಾಗಿ ನೇಮಕಗೊಂಡರು.[೧]
೨೩ ಜನವರಿ ೧೯೩೮ರಲ್ಲಿ ಜನಿಸಿದ ವಜುಭಾಯಿ, ಬಾಲ್ಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸದಸ್ಯರಾದರು. ೧೯೭೧ರಲ್ಲಿ ಜನಸಂಘ ಸೇರಿದ ವಜುಭಾಯಿ ರಾಜ್ ಕೋಟ್ ನಗರದ ಮೇಯರ್ ಆಗಿ ಆಯ್ಕೆಯಾದರು. ವಿಧಾನಸಭೆ ಚುನಾವಣೆಯಲ್ಲಿ ರಾಜ್ ಕೋಟ್ ಕ್ಷೇತ್ರದಿಂದ ಆಯ್ಕೆಯಾದ ವಜುಭಾಯಿ, ಕೇಶುಭಾಯಿ ಪಟೇಲ್ ಸಚಿವ ಸಂಪುಟದಲ್ಲಿ ಮಂತ್ರಿಯಾದರು.
- ೧೯೯೮ರಿಂದ ೨೦೧೨ರವರೆಗೆ ಕೇಶುಭಾಯಿ ಪಟೇಲ್ ಮತ್ತು ನರೇಂದ್ರ ಮೋದಿ ಸಚಿವ ಸಂಪುಟದಲ್ಲಿ ಹಣಕಾಸು, ಕಾರ್ಮಿಕ ಖಾತೆಗಳನ್ನು ನಿರ್ವಹಿಸಿದರು.[೨]
- ೧೮ ಬಾರಿ ಗುಜರಾತ್ ರಾಜ್ಯ ಬಜೆಟ್ ಮಂಡಿಸಿದ ವಜುಭಾಯಿ, ೨೦೧೨ರ ನಡೆದ ಚುನಾವಣೆ ಗೆದ್ದು, ವಿಧಾನಸಭೆಯ ಸ್ಪೀಕರ್ ಆಗಿ ಕಾರ್ಯ ನಿರ್ವಹಿಸಿದರು.
- ಮೇಯರ್, ರಾಜ್ ಕೋಟ್
- ಶಾಸಕ, ರಾಜ್ ಕೋಟ್ ಪಶ್ಚಿಮ [೧೯೯೮-೨೦೧೨]
- ಸಂಪುಟ ಸಚಿವ, ಗುಜರಾತ್ ಹಣಕಾಸು, ಕಾರ್ಮಿಕ ಖಾತೆ [೧೯೯೮-೨೦೧೨]
- ಸಭಾಪತಿ, ಗುಜರಾತ್ ವಿಧಾನಸಭೆ [೨೦೧೨-೨೦೧೪]
- ರಾಜ್ಯಪಾಲ, ಕರ್ನಾಟಕ [೨೦೧೪- ಜುಲೈ ೨೦೨೧]
ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2014-09-10. Retrieved 2014-12-30.
- ↑ http://business-standard.com/india/news/vaju-vala-unanimously-elected-new-speakergujarat-assembly/203738/on
ಉಲ್ಲೇಖಗಳು
[ಬದಲಾಯಿಸಿ]