ವಜ್ಜಿ
ವಜ್ಜಿ ಅಥವಾ ವೃಜ್ಜಿ ಲಿಚ್ಛವಿಗಳನ್ನು ಒಳಗೊಂಡ ಒಂದು ಒಕ್ಕೂಟವಾಗಿತ್ತು ಮತ್ತು ಪ್ರಾಚೀನ ಭಾರತದ ಪ್ರಧಾನ ಮಹಾಜನಪದಗಳಲ್ಲಿ ಒಂದಾಗಿತ್ತು. ಇವರು ಆಳುತ್ತಿದ್ದ ಪ್ರದೇಶ ಉತ್ತರ ಬಿಹಾರದಲ್ಲಿನ ಮಿಥಿಲಾ ಪ್ರದೇಶವನ್ನು ರೂಪಿಸುತ್ತದೆ ಮತ್ತು ವೈಶಾಲಿ ಇವರ ರಾಜಧಾನಿಯಾಗಿತ್ತು.[೧]
ಬೌದ್ಧ ಪಠ್ಯ ಅಂಗುತ್ತರ ನಿಕಾಯ ಮತ್ತು ಜೈನ ಪಠ್ಯ ಭಗವತಿ ಸೂತ್ರ ಎರಡೂ ವಜ್ಜಿಯನ್ನು ತಮ್ಮ ಹದಿನಾರು ಮಹಾಜನಪದಗಳ ಪಟ್ಟಿಗಳಲ್ಲಿ ಸೇರಿಸಿದ್ದವು. ಈ ಮಹಾಜನಪದದ ಹೆಸರು ಅದರ ಆಳುತ್ತಿದ್ದ ವಂಶಗಳಲ್ಲಿ ಒಂದಾದ ವೃಜಿಗಳಿಂದ ವ್ಯುತ್ಪನ್ನವಾಯಿತು. ವಜ್ಜಿ ರಾಜ್ಯವು ಗಣರಾಜ್ಯವಾಗಿತ್ತು ಎಂದು ಸೂಚಿಸಲಾಗಿದೆ. ಈ ವಂಶವನ್ನು ಪಾಣಿನಿ, ಚಾಣಕ್ಯ ಮತ್ತು ಕ್ಸುವಾನ್‍ಜ಼ಾಂಗ್ ಉಲ್ಲೇಖಿಸಿದ್ದಾರೆ.
ವಜ್ಜಿಯ ಪ್ರಾಂತ್ಯ ಬಿಹಾರದಲ್ಲಿ ಗಂಗಾ ನದಿಯ ಉತ್ತರಕ್ಕೆ ಸ್ಥಿತವಾಗಿತ್ತು ಮತ್ತು ಮಾಧೇಶ್ ಪ್ರದೇಶದವರೆಗೆ ವಿಸ್ತರಿಸಿತ್ತು. ಪಶ್ಚಿಮದಲ್ಲಿ, ಬಹುಶಃ ಗಂಡಕಿ ನದಿ ವಜ್ಜಿ ಮತ್ತು ಮಲ್ಲ ಮಹಾಜನಪದಗಳ ನಡುವೆ ಗಡಿರೇಖೆಯಾಗಿತ್ತು ಮತ್ತು ಸಂಭಾವ್ಯವಾಗಿ ಇದನ್ನು ಕೋಸಲ ಮಹಾಜನಪದದಿಂದಲೂ ಪ್ರತ್ಯೇಕಿಸಿತ್ತು. ಪೂರ್ವದಲ್ಲಿ, ಇದರ ಪ್ರಾಂತ್ಯ ಪ್ರಾಯಶಃ ಕೋಸಿ ಮತ್ತು ಮಹಾನಂದಾ ನದಿಗಳ ದಂಡೆಗಳ ಉದ್ದಕ್ಕೂ ಇದ್ದ ಕಾಡುಗಳವರೆಗೆ ವಿಸ್ತರಿಸಿತ್ತು. ವೈಶಾಲಿ ಈ ಮಹಾಜನಪದದ ರಾಜಧಾನಿಯಾಗಿತ್ತು. ಇತರ ಪ್ರಮುಖ ಪಟ್ಟಣಗಳು ಮತ್ತು ಗ್ರಾಮಗಳೆಂದರೆ ಕುಂದಾಪುರ ಅಥವಾ ಕುಂದಗ್ರಾಮ, ಭೋಗನಗರ ಮತ್ತು ಹತ್ಥಿಗಾಮ.
ವಜ್ಜಿ ಎಂಟು ಕುಲಗಳ ಒಕ್ಕೂಟವಾಗಿತ್ತು. ಇದರಲ್ಲಿ ವಜ್ಜಿಗಳು, ಲಿಚ್ಛವಿಗಳು ಮತ್ತು ವಿದೇಹರು ಅತ್ಯಂತ ಪ್ರಮುಖವಾಗಿದ್ದರು. ಮನುದೇವ ಲಿಚ್ಛವಿಯ ಒಬ್ಬ ಪ್ರಸಿದ್ಧ ರಾಜನಾಗಿದ್ದನು. ಇವನು ವೈಶಾಲಿಯಲ್ಲಿ ಆಮ್ರಪಾಲಿಯ ನಾಟ್ಯವನ್ನು ನೋಡಿ ಅವಳನ್ನು ಬಯಸಿದನು. ಇತರ ನಾಲ್ಕು ಕುಲಗಳ ಗುರುತುಗಳು ಖಚಿತವಾಗಿಲ್ಲ. ಆದರೆ ಸೂತ್ರಕೃತಾಂಗದ ಒಂದು ವಾಕ್ಯವೃಂದದಲ್ಲಿ, ಉಗ್ರರು, ಭೋಗರು, ಕೌರವರು ಮತ್ತು ಐಕ್ಷ್ವಾಕರನ್ನು ಜ್ಞಾತ್ರಿಗಳು ಮತ್ತು ಲಿಚ್ಛವಿಯರೊಂದಿಗೆ ಒಬ್ಬನೇ ಅರಸನ ಪ್ರಜೆಗಳಾಗಿ ಮತ್ತು ಒಂದೇ ಸಭೆಯ ಸದಸ್ಯರಾಗಿ ಸಂಬಂಧಿಸಲಾಗಿದೆ.
ವಜ್ಜಿ ಸಂಘವೆಂದು ಪರಿಚಿತವಾಗಿದ್ದ ವಜ್ಜಿ ಹಲವು ಜನಪದಗಳು, ಗ್ರಾಮಗಳು ಮತ್ತು ಗೋಷ್ಠಗಳನ್ನು ಒಳಗೊಂಡಿತ್ತು. ವಜ್ಜಿ ಗಣ ಪರಿಷತ್ತಿಗೆ ಪ್ರತಿನಿಧಿಗಳಾಗಿ ಪ್ರತಿ ಖಂಡದಿಂದ (ಜಿಲ್ಲೆ) ಶ್ರೇಷ್ಠ ಜನರನ್ನು ಆಯ್ಕೆ ಮಾಡಲಾಗುತ್ತಿತ್ತು. ಈ ಪ್ರತಿನಿಧಿಗಳನ್ನು ಗಣ ಮುಖ್ಯರೆಂದು ಕರೆಯಲಾಗುತ್ತಿತ್ತು. ಪರಿಷತ್ತಿನ ಅಧ್ಯಕ್ಷನನ್ನು ಗಣಪ್ರಮುಖನೆಂದು ಹೆಸರಿಸಲಾಗುತ್ತಿತ್ತು ಆದರೆ ಹಲವುವೇಳೆ ಅವನನ್ನು ರಾಜನೆಂದು ಸಂಬೋಧಿಸಲಾಗುತ್ತಿತ್ತು, ಆದರೆ ಅವನ ಸ್ಥಾನ ವಂಶೀಯವೂ ಆಗಿರಲಿಲ್ಲ ಅಥವಾ ಆನುವಂಶಿಕವೂ ಆಗಿರಲಿಲ್ಲ. ಇತರ ಕಾರ್ಯನಿರ್ವಾಹಕರೆಂದರೆ ಮಹಾಬಲಾಧ್ರಿಕೃತ (ಆಂತರಿಕ ಭದ್ರತೆಯ ಮಂತ್ರಿ), ಬಿನಿಶ್ಚಯಮಾತ್ಯ (ಮುಖ್ಯ ನ್ಯಾಯಾಧೀಶ), ದಂಡಾಧಿಕೃತ (ಇತರ ನ್ಯಾಯಾಧೀಶರು) ಇತ್ಯಾದಿ.
ಉಲ್ಲೇಖಗಳು
[ಬದಲಾಯಿಸಿ]