ವಿಷಯಕ್ಕೆ ಹೋಗು

ವರದಾ ನದಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ಸಾಗರ ತಾಲೂಕಿನ ವರದಾಮೂಲದಲ್ಲಿರುವ ವರದಾನದಿಯ ಮೂಲಸ್ಥಾನ

ವರದಾ ನದಿ[] ಯು ಮಧ್ಯ ಕರ್ನಾಟಕದ ಒಂದು ನದಿಯಾಗಿದೆ. ಶಿವಮೊಗ್ಗ ಜಿಲ್ಲೆಯ ವರದಮೂಲದಲ್ಲಿ[] ಉಗಮಿಸುವ ಈ ನದಿಯು ಕರ್ನಾಟಕದ ಹಾವೇರಿ ಹಾಗೂ ಬಳ್ಳಾರಿ ಜಿಲ್ಲೆಗಳ ಮುಖಾಂತರ ಹರಿದು ಹೋಗುತ್ತಾ, ಗಲಗನಾಥ [] ಸಮೀಪದಲ್ಲಿ ತುಂಗಭದ್ರಾ ನದಿಯನ್ನು ಸೇರುತ್ತದೆ.ವರದಮೂಲ ವನ್ನು ತೀರ್ಥ ಗ್ರಾಮ ಎಂದೂ ಸಹ ಕರೆಯಲಾಗುತ್ತದೆ. ಇದು ತನ್ನ ಹಾದಿಯ ಉದ್ದಕ್ಕೂ ಕನ್ನಡಿಗರ ಯೋಗಕ್ಷೇಮ ಕಾಪಾಡುತ್ತಿದೆ.ಬೇಸಿಗೆಯಲ್ಲಿ ನೀರಾವರಿ ಮತ್ತು ಗೃಹಬಳಕೆ ಉದ್ದೇಶಗಳಿಗೆ ನೀರು ಒದಗಿಸುವ ಸಲುವಾಗಿ ಈ ನದಿಯ ಬಳಿ ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ.ಈ ನದಿಯ ಯಾವುದೇ ಪ್ರಮುಖ ನೀರಾವರಿ ಯೋಜನೆಗಳು ಇಲ್ಲ ಆದರೂ ಸರ್ಕಾರ ಪ್ರಾರಂಭಿಸಲು ಯೋಚಿಸುತ್ತಿದೆ.ಇಲ್ಲಿನ ಜನರಿಗೆ ಇದು ದೈವಿಕ ಅಂಶವುಳ್ಳ ನದಿಯಾಗಿದೆ.


"https://kn.wikipedia.org/w/index.php?title=ವರದಾ_ನದಿ&oldid=788168" ಇಂದ ಪಡೆಯಲ್ಪಟ್ಟಿದೆ