ವಿಷಯಕ್ಕೆ ಹೋಗು

ವರ್ಟೀಸೆಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವರ್ಟೀಸೆಲ
ವರ್ಟಿಸೆಲಾ ಕಾನ್ವಾಲಾರಿಯಾ
Scientific classification e
ಕ್ಷೇತ್ರ: Eukaryota
ಏಕಮೂಲ ವರ್ಗ: ಡಯಾಫೊರೆಟಿಕೀಸ್
ಏಕಮೂಲ ವರ್ಗ: ಎಸ್ಎಆರ್
ಏಕಮೂಲ ವರ್ಗ: ಆಲ್ವಿಯೊಲೇಟಾ
ವಿಭಾಗ: ಸೀಲಿಯೊಫ಼ೋರಾ
ವರ್ಗ: ಒಲಿಗೊಹೈಮೆನೋಫ಼ೋರೀ
ಗಣ: ಸೆಸಿಲಿಡಾ
ಕುಟುಂಬ: ವರ್ಟಿಸೆಲಿಡೀ
ಕುಲ: ವರ್ಟೀಸೆಲ
L. (1767)

ವರ್ಟೀಸೆಲ ಸಿಹಿನೀರಿನಲ್ಲಿ ವಾಸಿಸುವ ಗಂಟೆ ಆಕಾರದ ಸೂಕ್ಷ್ಮ ಜೀವಿ.[][] ಏಕಕೋಶ ಜೀವಿಗಳಾದ ಪ್ರೊಟೊಜೊವಾದ ಸಿಲಿಯೇಟಾ ವರ್ಗಕ್ಕೆ ಸೇರುತ್ತದೆ. ಜೈವಿಕ ಸಮೃದ್ಧಿಯಿಂದ ಕೂಡಿದ ಸಿಹಿನೀರಿನಲ್ಲಿ ವಾಸ. ಇದು ಗಂಟೆಯಂತಿದ್ದು ಬುಡದಲ್ಲಿರುವ ನೀಳ ಕಾಂಡದ ಮೂಲಕ ನೀರಿನ ಗಿಡಗಂಟಿಗಳಿಗೆ ಅಂಟಿಕೊಂಡಿರುತ್ತದೆ. ಸ್ತಬ್ಧನೀರಿನಲ್ಲಿ ಇದು ತನ್ನ ಗಂಟೆಯ ಅಂಚಿನ ಸುತ್ತಲೂ ಇರುವ ಶಿಲಿಕಾಂಗಗಳಿಂದ ಅತಿ ಪುಟ್ಟ ಸುಳಿಗಳನ್ನು ನಿರಂತರವಾಗಿ ಸೃಷ್ಟಿಸುತ್ತದೆ. ಹಾಗಾಗಿ ಇದಕ್ಕೆ ವರ್ಟೀಸೆಲ ಎಂಬ ಹೆಸರು ಬಂದಿದೆ.[] ಆಗಾಗ ಇದರ ಕಾಂಡವನ್ನು ಜಗ್ಗಿದಂತಾಗಿ ಅದು ಬಳ್ಳಿ ಆಕಾರ ತಳೆಯುತ್ತದೆ. ಅದೇ ಕಾಲಕ್ಕೆ ಗಂಟೆ ಸಂಕೋಚನಗೊಂಡು ಮುಷ್ಟಿಯಂತಾಗಿ ಬುಡಕ್ಕೆ ಸೆಳೆದುಕೊಳ್ಳುತ್ತದೆ. ಸ್ವಲ್ಪ ವೇಳೆಯ ಬಳಿಕ ಕಾಂಡ ಹಿಗ್ಗಿ ನೀಳವಾಗಿ, ಗಂಟೆ ವ್ಯಾಕೋಚನಗೊಂಡು ವರ್ಟೀಸೆಲ ಪುನಃ ನೀರಿನಲ್ಲಿ ಸುಳಿಗಳನ್ನು ಸೃಷ್ಟಿಸಲು ಆರಂಭಿಸುತ್ತದೆ.

ಒಂದೇ ಕೋಶದಿಂದಾದ ವರ್ಟೀಸೆಲ ಮೇಲ್ನೋಟಕ್ಕೆ ಸರಳವಾಗಿ ಕಂಡರೂ ಇದರ ರಚನೆ ಸಂಕೀರ್ಣವಾಗಿದೆ. ಇದರ ಪುಟ್ಟ ದೇಹವನ್ನು ಪೆಲಿಕಲ್ ಎಂಬ ಜೀವಂತ ಪೊರೆ ಬಿಗಿಯಾಗಿ ಆವರಿಸಿರುತ್ತದೆ. ಇದರ ಕೆಳಗೆ ದೃಢತೆ ನೀಡಲು ಅಡ್ಡಪಟ್ಟಿಗಳಿರುತ್ತವೆ. ವಿಶಾಲವಾಗಿರುವ ಗಂಟೆಯ ಬಾಯಿಯನ್ನು ತೆಳು ಬಿಲ್ಲೆಯಂತಿರುವ ಒಂದು ಪೊರೆ ಮುಚ್ಚಿದೆ. ಇದಕ್ಕೆ ಪೆರಿಸ್ಟೋಮ್ ಎಂದು ಹೆಸರು. ಇದರ ಅಂಚಿನಲ್ಲಿ ಮೂರು ಸುರುಳಿಗಳಲ್ಲಿ ಸಮಾಂತರವಾಗಿ ವ್ಯವಸ್ಥೆಯಾಗಿರುವ ಶಿಲಿಕಾಂಗಗಳಿವೆ. ಇವುಗಳಲ್ಲಿ, ಅಂಚಿನಲ್ಲಿರುವ ಒಂದು ಸುರುಳಿ ‘ಶೆಲ್ಫ್‌ನಂತೆ’ ಬಾಹ್ಯಕ್ಕೆ ಬಾಗಿಕೊಂಡಿದ್ದರೆ, ಉಳಿದೆರಡು ಸುರುಳಿಗಳು ಇದರಿಂದ ಬೇರ್ಪಟ್ಟಿದ್ದು ಒಳ ಪರಿಧಿಯಲ್ಲಿ ನಿಕಟವಾಗಿ ವ್ಯವಸ್ಥೆಗೊಂಡಿರುತ್ತವೆ. ಪೆರಿಸ್ಟೋಮಿನ ಒಂದು ತುದಿಯಲ್ಲಿ ಇವುಗಳ ನಡುವೆ ಅಂತರ ಹೆಚ್ಚಿದ್ದು ಇಲ್ಲಿ ವೆಸ್ಟ್‌ಬ್ಯೂಲ್ ಎಂಬ ರಂಧ್ರವಿದೆ. ಇದು ಶಂಕುವಿನಾಕಾರದ ಪೆರಿಸ್ಟೋಮಿನ ನಳಿಕೆಗೆ ಮುಂದುವರಿಯುತ್ತದೆ. ನಳಿಕೆಯ ಬುಡದಲ್ಲಿ ಕೋಶದ ಬಾಯಿ ಕಾಣುತ್ತದೆ. ವರ್ಟೀಸೆಲ ಸೃಷ್ಟಿಸುವ ನೀರಿನ ಸುಳಿಗಳು ಇಲ್ಲಿಗೆ ಆಹಾರದ ಕಣಗಳನ್ನೂ ಸಾಗಿಸುತ್ತವೆ.

ಉಲ್ಲೇಖಗಳು

[ಬದಲಾಯಿಸಿ]
  1. France, Danielle; Tejada, Jonathan; Matsudaira, Paul (February 2017). "Direct measurement of Vorticella contraction force by micropipette deflection". FEBS Letters. 591 (4): 581–589. doi:10.1002/1873-3468.12577. ISSN 1873-3468. PMID 28130786.
  2. https://eol.org/pages/62021
  3. Britannica, The Editors of Encyclopaedia. "Vorticella". Encyclopedia Britannica, 19 Sep. 2018, https://www.britannica.com/science/Vorticella. Accessed 14 December 2023.


ಹೆಚ್ಚಿನ ಓದಿಗೆ

[ಬದಲಾಯಿಸಿ]
  • https://microbewiki.kenyon.edu/index.php/Vorticella
  • http://www.micrographia.com/specbiol/protis/cili/peri0100.htm
  • (1885, January 22). “The ''Vorticella''”.  ''and Stream; A Journal of Outdoor Life, Travel, Nature Study, Shooting, Fishing, Yachting''. '''23'''(26): 503
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: