ವಿಷಯಕ್ಕೆ ಹೋಗು

ವಸ್ತುಪ್ರದರ್ಶನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಭಿತ್ತಿಪತ್ರ ಪ್ರದರ್ಶನ, ೨೦೧೫

ಅತ್ಯಂತ ಸಾಮಾನ್ಯ ಅರ್ಥದಲ್ಲಿ, ವಸ್ತುಪ್ರದರ್ಶನವು ಆಯ್ದ ವಸ್ತುಗಳ ಕ್ರಮಗೊಳಿಸಿದ ಪ್ರಸ್ತುತಿ ಮತ್ತು ಪ್ರದರ್ಶನ. ಆಚರಣೆಯಲ್ಲಿ, ವಸ್ತುಪ್ರದರ್ಶನಗಳು ಸಾಮಾನ್ಯವಾಗಿ ವಸ್ತುಸಂಗ್ರಹಾಲಯ, ಕಲಾಸೌಧ, ಉದ್ಯಾನ, ಗ್ರಂಥಾಲಯ, ಪ್ರದರ್ಶನ ಗೋಡೆ, ಅಥವಾ ವಿಶ್ವ ಜಾತ್ರೆಗಳಂತಹ ಒಂದು ಸಾಂಸ್ಕೃತಿಕ ಅಥವಾ ಶೈಕ್ಷಣಿಕ ಆವರಣದಲ್ಲಿ ಏರ್ಪಾಟಾಗುತ್ತವೆ. ವಸ್ತುಪ್ರದರ್ಶನಗಳು ಪ್ರಧಾನ ವಸ್ತುಸಂಗ್ರಹಾಲಯಗಳು ಹಾಗೂ ಹೆಚ್ಚು ಚಿಕ್ಕ ಚಿತ್ರಶಾಲೆಗಳು ಎರಡೂ ಕಡೆಗಳಲ್ಲಿನ ಕಲೆ, ವಿವರಣಾತ್ಮಕ ವಸ್ತುಪ್ರದರ್ಶನಗಳು, ಪ್ರಕೃತಿ ಚರಿತ್ರೆ ವಸ್ತುಸಂಗ್ರಹಾಲಯಗಳು ಹಾಗೂ ಇತಿಹಾಸ ವಸ್ತುಸಂಗ್ರಹಾಲಯಗಳು, ಮತ್ತು ಹೆಚ್ಚು ವಾಣಿಜ್ಯ ಕೇಂದ್ರೀಕೃತ ವಸ್ತುಪ್ರದರ್ಶನಗಳು ಹಾಗೂ ವ್ಯಾಪಾರ ಜಾತ್ರೆಗಳಂತಹ ಪ್ರಕಾರಗಳು ಕೂಡ ಸೇರಿದಂತೆ ಅನೇಕ ವಸ್ತುಗಳನ್ನು ಒಳಗೊಳ್ಳಬಹುದು.

ಸಾಮಾನ್ಯ ಬಳಕೆಯಲ್ಲಿ, "ವಸ್ತುಪ್ರದರ್ಶನ"ಗಳನ್ನು ತಾತ್ಕಾಲಿಕ ಎಂದು ಪರಿಗಣಿಸಲಾಗುತ್ತದೆ ಮತ್ತು ಅವುಗಳನ್ನು ಸಾಮಾನ್ಯವಾಗಿ ನಿರ್ದಿಷ್ಟ ದಿನಾಂಕಗಳಂದು ತೆರೆದು ಮುಚ್ಚುವಂತೆ ನಿಗದಿಪಡಿಸಲಾಗಿರುತ್ತದೆ. ಅನೇಕ ವಸ್ತುಪ್ರದರ್ಶನಗಳನ್ನು ಕೇವಲ ಒಂದು ಸ್ಥಳದಲ್ಲಿ ತೋರಿಸಲಾಗುತ್ತದೆಯಾದರೂ, ಕೆಲವು ವಸ್ತುಪ್ರದರ್ಶನಗಳನ್ನು ಅನೇಕ ಸ್ಥಳಗಳಲ್ಲಿ ತೋರಿಸಲಾಗುತ್ತದೆ ಹಾಗೂ ಇವು ಸಂಚಾರಿ ಪ್ರದರ್ಶನಗಳು ಎಂದು ಕರೆಯಲ್ಪಡುತ್ತವೆ, ಮತ್ತು ಕೆಲವು ಆನ್‍ಲೈನ್ ಪ್ರದರ್ಶನಗಳಾಗಿರುತ್ತವೆ.

ಬಾಹ್ಯ ಕೊಂಡಿಗಳು

[ಬದಲಾಯಿಸಿ]