ವಿಷಯಕ್ಕೆ ಹೋಗು

ವಾಗ್ಮಿ ಸತೀಶ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಾಗ್ಮಿ ಸತೀಶ್
ವಾಗ್ಮಿ ಸತೀಶ್
Occupationಕವಿ

ಕವಿಯಾಗಿ, ಲೇಖಕರಾಗಿ, ಪದಬಂಧ ರಚನೆಕಾರರಾಗಿ, ಕಥೆಗಾರರಾಗಿ, ನಾಟಕಕಾರರಾಗಿ, ವಾಗ್ಮಿಯಾಗಿ, ನಟ-ನಿರ್ದೇಶಕರಾಗಿ, ದೂರದರ್ಶನ ವಾಹಿನಿಗಳಲ್ಲಿ ಕಾರ್ಯಕ್ರಮ ನಿರೂಪಕರಾಗಿ, ಆಕಾಶವಾಣಿ ದೂರದರ್ಶನದಲ್ಲಿ ವಾರ್ತಾ ವಾಚಕರಾಗಿ, ವಕೀಲರಾಗಿ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಸತೀಶ್ ಮೂಲತಃ ಪತ್ರಕರ್ತರು.

ಕನ್ನಡನಾಡಿನ ಜನಪ್ರಿಯ ದಿನ ಪತ್ರಿಕೆ ‘ಕನ್ನಡಪ್ರಭ’ದಲ್ಲಿ ಹನ್ನೆರಡು ವರ್ಷ ಕಾಲ ಸೇವೆ ಸಲ್ಲಿಸಿದ ಸತೀಶ್,ಆನಂತರ ಕನ್ನಡದ ಮೊಟ್ಟ ಮೊದಲ ಪೋರ್ಟಲ್ ಕನ್ನಡ.ಇಂಡಿಯಾಇನ್‌ಫೋ.ಕಾಂನಲ್ಲಿ ಮುಖ್ಯ ಉಪಸಂಪಾದಕರಾಗಿ ದುಡಿದರು.ಮುದ್ರಣ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮ ಹಾಗೂ ಅಂತರಜಾಲ ಮಾಧ್ಯಮದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸಿರುವ ಸತೀಶ್ ಬೆಂಗಳೂರು ಆಕಾಶವಾಣಿ,ದೂರದರ್ಶನ ಸುದ್ದಿ ವಿಭಾಗದಲ್ಲಿ ಕ್ಯಾಷುಯಲ್ ಎಡಿಟರ್(ಸಾಂದರ್ಭಿಕ ಸಂಪಾದಕ) ಆಗಿ,ಕನ್ನಡರತ್ನ.ಕಾಂ ಹಾಗೂ ಮಾಸಿಕದ ಗೌರವ ಪ್ರಧಾನ ಸಂಪಾದಕರಾಗಿಯೂ ಸೇವೆ ಸಲ್ಲಿಸಿದ್ದಾರೆ. ವಕೀಲರಾಗಿಯೂ ಕೆಲ ಕಾಲ ವೃತ್ತಿ ನಡೆಸಿದ ಸತೀಶ್ ಪತ್ರಿಕೋದ್ಯಮದ ತುಡಿತದಿಂದ ಹೊರಬರಲಾಗದೆ ಹೈದ್ರಾಬಾದ್ ಕರ್ನಾಟಕ ಪ್ರದೇಶದಿಂದ ಪ್ರಕಟವಾಗುವ ರಾಯಚೂರಿನ ‘ಸುದ್ದಿ ಮೂಲ’ ದಿನಪತ್ರಿಕೆಯ ಬೆಂಗಳೂರು ವಿಶೇಷ ವರದಿಗಾರರಾಗಿ,ಸುವರ್ಣ ಟೈಮ್ಸ್ ಆಫ್ ಕರ್ನಾಟಕ ಪತ್ರಿಕೆಯ ವರದಿಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಕಲೆ,ಸಾಹಿತ್ಯ,ಚಲನಚಿತ್ರ,ಕ್ರೀಡೆ,ವಾಣಿಜ್ಯ,ವಿಜ್ಞಾನ,ವ್ಯಕ್ತಿತ್ವ ವಿಕಾಸ... ಹೀಗೆ ವಿವಿಧ ವಿಭಾಗಗಳಲ್ಲಿ ಸತೀಶ್ ಬರೆದಿರುವ ನೂರಾರು ಲೇಖನಗಳು ಪ್ರಕಟವಾಗಿವೆ.

1. http://www.kannadaratna.com Archived 2011-12-11 ವೇಬ್ಯಾಕ್ ಮೆಷಿನ್ ನಲ್ಲಿ.