ವಿಷಯಕ್ಕೆ ಹೋಗು

ವಿಕಿಪೀಡಿಯ:ವಿಕಿಪೀಡಿಯ ಸಾಧಕರು/ಹರೀಶ ಎಂ.ಜಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹರೀಶ ಎಂ.ಜಿ

[ಬದಲಾಯಿಸಿ]

ಹರೀಶ ಎಂ.ಜಿ ಇವರು ಹಲವು ವರ್ಷಗಳಿಂದ ವಿಕಿಪೀಡಿಯ ಸಂಪಾದಕರಾಗಿ ಹಾಗೂ ನಿರ್ವಾಹಕರಲ್ಲೊಬ್ಬರಾಗಿ ನಿರ್ವಹಣೆ, ಗುಣಮಟ್ಟ ಮತ್ತು ತಾಂತ್ರಿಕತೆಗೆ ಸಂಬಂಧಿಸಿದ ಕೆಲಸಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಬಹಳ ವರ್ಷಗಳಿಂದ ಕನ್ನಡ ವಿಕಿಪೀಡಿಯ, ವಿಕಿಸೋರ್ಸ್, ವಿಕಿಕೋಟ್ಸ್ ಗೆ ಸಂಬಂಧಿಸಿದ ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಲವಾರು ಉಪಯುಕ್ತ ಮತ್ತು ಅತೀ ಅಗತ್ಯದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಇವರು ಕನ್ನಡ ವಿಕಿಪೀಡಿಯದ ನಿರ್ವಾಹಕರಲ್ಲೊಬ್ಬರಾಗಿದ್ದಾರೆ. ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ವಿಕಿಪೀಡಿಯದ ತರಬೇತಿ ನಡೆಸಿ ಕೊಟ್ಟಿದ್ದಾರೆ. ಕನ್ನಡ ಭಾಷೆಯ ಬಗ್ಗೆ ಉತ್ತಮ ಒಲವನ್ನು ಹೊಂದಿರುವ ವ್ಯಕ್ತಿಯಾಗಿದ್ದಾರೆ.

ವೈಯಕ್ತಿಕ

[ಬದಲಾಯಿಸಿ]

ಅವರ ಊರು ಸಾಗರ ಸಮೀಪದ ಮಂಚಾಲೆ. ಇವರು ಪ್ರಸ್ತುತ ಬೆಂಗಳೂರಿನಲ್ಲಿರುವ ಟಾಟಾ ಎಲಕ್ಸಿ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಇನ್ನಷ್ಟು

[ಬದಲಾಯಿಸಿ]