ವಿಷಯಕ್ಕೆ ಹೋಗು

ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೫

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಮುಂದಿನ ಸಂಚಿಕೆ

[ಬದಲಾಯಿಸಿ]

ರಾಮಾಯಣ ಆಗಬಹುದು, ನಿಮ್ಮ ಆಯ್ಕೆ, ಅಭಿಪ್ರಾಯಗಳನ್ನು ಸೇರಿಸಿ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೧:೪೨, ೨೧ ಆಗಸ್ಟ್ ೨೦೦೬ (UTC)

ರಾಮಾಯಣ ಲೇಖನಕ್ಕೆ ನನ್ನ ಸಹಮತಿಯಿದೆ. ಹಾಗೆಯೇ, ವಿಶೇಷ ಬರಹ ಎಷ್ಟು ದಿನ ಮುಖ್ಯಪುಟದಲ್ಲಿರಬೇಕು ಎಂಬುದು ಕೂಡ ಚರ್ಚೆಯಾಗಬೇಕಿದೆ. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡ ಲೇಖನ ಆಗಸ್ಟ್ ತಿಂಗಳ ಕೊನೆಯವರೆಗೆ ಇರಬೇಕಿತ್ತು ಎಂಬುದು ನನ್ನ ಅಭಿಪ್ರಾಯ. - ಮನ|Mana Talk - Contribs ೧೭:೪೦, ೨೧ ಆಗಸ್ಟ್ ೨೦೦೬ (UTC)

ಕರಿಮೆಣಸು ಲೇಖನವನ್ನು ತೆಗೆದು, ರಾಮಾಯಣ ಲೇಖನವನ್ನು ವಿಶೇಷ ಬರಹವನ್ನಾಗಿ ಹಾಕೋಣವೆ? ಯಾರಿಗಾದರೂ ವಿರೋಧವಿದ್ದರೆ ದಯವಿಟ್ಟು ತಿಳಿಸಿ. - ಮನ|Mana Talk - Contribs ೧೭:೧೩, ೨೬ September ೨೦೦೬ (UTC)


ಮುಖಪುಟದಲ್ಲಿನ ವಿಶೇಷ ಲೇಖನ ಸಂದರ್ಭಕ್ಕನುಸಾರವಾಗಿದ್ದರೆ ಒಳಿತೆಂದು ನನಗನಿಸುತ್ತದೆ. ಉದಾ: ಈಗ ಕರಿಮೆಣಸು ತೆಗೆದು ಮಹಾತ್ಮ ಗಾಂಧಿ ಲೇಖನವನ್ನು ಹಾಕಬಹುದು. ಅದಾದ ನಂತರ ದೀಪಾವಳಿ, ತದನಂತರ ಕನ್ನಡ ಅಥವಾ ಕರ್ನಾಟಕ ಹೀಗೆ ಔಚಿತ್ಯವಾಗಿ ವಿಶೇಷ ಲೇಖನವನ್ನು ಹಾಕಿದರೆ ಮುಖಪುಟಕ್ಕೆ ತಾಜಾತನ ಬರುತ್ತದೆ. Ksj dr ೨೩:೩೩, ೨೭ September ೨೦೦೬ (UTC)

ಮಹಾತ್ಮ ಗಾಂಧಿ ಒಳ್ಳೆಯ ಸಲಹೆ. ಇನ್ನು ಮುಂದೆ ನಾವು ೧೫ ದಿನಗಳಿಗೊಮ್ಮೆಯಾದರೂ ವಿಶೇಷ ಲೇಖನ ಬದಲಾಯಿಸಬೇಕೆಂದು ನನ್ನ ಅಭಿಪ್ರಾಯ. ಕಟ್ಟುನಿಟ್ಟಾಗಿ ೧ನೇ ತಾರೀಖು ಮತ್ತು ೧೫ನೇ ತಾರೀಖು ಬದಲಾವಣೆ ಮಾಡುಬಹುದು. ಹಾಗಾಗಿ ಈ ೧ನೇ ತಾರೀಖಿಗೆ ಮಹಾತ್ಮ ಗಾಂಧಿ ಮತ್ತು ೧೫ನೇ ತಾರೀಖಿಗೆ ರಾಮಾಯಣ ಮಾಡೋಣವೆ? ಶುಶ್ರುತ \ಮಾತು \ಕತೆ ೨೩:೫೧, ೨೭ September ೨೦೦೬ (UTC)
ಉತ್ತಮವಾದ ಸಲಹೆ. ಆದರೆ ಮಹಾತ್ಮ ಗಾಂಧಿ ಲೇಖನವನ್ನಾಗಲೇ ವಿಶೇಷ ಸಂಚಿಕೆಯನ್ನಾಗಿ ಮಾಡಲಾಗಿದೆ. ವಿಶೇಷ ಲೇಖನಗಳು ಆರ್ಕೈವಿನಲ್ಲಿ ಸಂಚಿಕೆ-೧೬ ಗಮನಿಸಿ. - ಮನ|Mana Talk - Contribs
ಕ್ಷಮಿಸಿ. ಗಮನಿಸಲಿಲ್ಲ. ಗಾಂಧೀಜಿಯವರಿಗೆ ಸಂಭಂದಿಸಿದ ಬೇರೆ ಯಾವುದಾದರು ಲೇಖನವನ್ನು ಇನ್ನು ಮೂರು ದಿನದೊಳಗೆ ತಯಾರು ಮಾಡಬಹುದೆ? ಆಗದಿದ್ದಲ್ಲಿ ರಾಮಾಯಣವನ್ನು ಉಪಯೋಗಿಸೋಣ. ಉದಾ: ಉಪ್ಪಿನ ಸತ್ಯಾಗ್ರಹ, ಅಸ್ಪೃಷ್ಯತೆ, ಚರಕ? ಶುಶ್ರುತ \ಮಾತು \ಕತೆ ೦೭:೫೭, ೨೮ September ೨೦೦೬ (UTC)
ನಾನು "ಸತ್ಯದೊಂದಿಗೆ ನನ್ನ ಪ್ರಯೋಗಗಳು" ಪುಸ್ತಕದ ಬಗ್ಗೆ ಒಂದು ಲೇಖನ ಮಾಡಬಲ್ಲೆ, ಶುಕ್ರವಾರದ ಒಳಗೆ ಇದು ಸಾಧ್ಯವಾದರೆ ಇದನ್ನೇ ವಿಶೇಷ ಪುಟವನ್ನಾಗಿ ಮಾಡಬಹುದೇ? Ksj dr ೧೭:೩೫, ೨೮ September ೨೦೦೬ (UTC)

ವಚನ ನೀಡಿದಂತೆ ಸತ್ಯದೊಂದಿಗೆ ನನ್ನ ಪ್ರಯೋಗಗಳು ಲೇಖನವನ್ನು ಸಿದ್ಧಪಡಿಸಿದ್ದೇನೆ. ಈ ಲೇಖನವನ್ನು ಮೊದಲು proof read ಮಾಡಿ, ನಂತರ edit ಮಾಡಿ ವಿಶೇಷ ಪುಟವಾಗಿ ಹಾಕಬಹುದು. Ksj dr ೨೩:೪೦, ೨೮ September ೨೦೦೬ (UTC)

Awesome translation work on the article!! However, I have one reservation. The content of the article is not encyclopedic. Though it is a thoughful and good analysis of the book, it is still an analysis (and reflects opinion) and not a collection of facts. So I am unsure if it is Main Page material. ಶುಶ್ರುತ \ಮಾತು \ಕತೆ ೦೧:೪೭, ೨೯ September ೨೦೦೬ (UTC)
I agree. ಉಪ್ಪಿನ ಸತ್ಯಾಗ್ರಹ ಒಂದು ಒಳ್ಳೇ ಲೇಖನವಾಗಬಹುದು. ಈ ವಾರಾಂತ್ಯ ನಾನು ವ್ಯಸ್ತನಾಗಿರುವುದರ ಕಾರಣ ಯಾರಾದರೂ ಈ ಲೇಖನವನ್ನು ಬರೆದರೆ ಅಥವಾ en:Salt Satyagraha ಪುಟದಿಂದ ಅನುವಾದ ಮಾಡಿದರೆ ಉತ್ತಮ. Ksj dr ೧೩:೪೬, ೨೯ September ೨೦೦೬ (UTC)
ನಾನು ಪ್ರಾರಂಭಿಸುವೆ. ಆದರೆ ಅದರ ಮೇಲೆ ಎಷ್ಟು ಕೆಲಸ ಆಗುತ್ತದೆಂದು ಗೊತ್ತಿಲ್ಲ. ಇದನ್ನು ವಾರದ ಸಹಯೋಗ ಮಾಡಿದರೆ ಹೇಗೆ? ಶುಶ್ರುತ \ಮಾತು \ಕತೆ ೦೪:೫೪, ೩೦ September ೨೦೦೬ (UTC)

ಉಪ್ಪಿನ ಸತ್ಯಾಗ್ರಹ ಅನುವಾದ ಮುಗಿದಿದೆ. ಅಂತಃ high quality ಲೇಖನವೇನಲ್ಲ. ಆದರೆ ಸಾಂಧರ್ಬಿಕವಾಗಿದೆ. ನಮ್ಮಲ್ಲೆಲ್ಲಾ ಅತ್ಯಂತ experienced ಆಗಿರುವ ಮನ ರವರು ಇದರ ಬಗ್ಗೆ ನಿರ್ಧಾರ ಮಾಡಿ ಮುಖ್ಯ ಪುಟದ ಲೇಖನವನ್ನು ಆಯ್ಕೆ ಮಾಡಬೇಕೆಂದು ನನ್ನ ಅಭಿಪ್ರಾಯ. ಶುಶ್ರುತ \ಮಾತು \ಕತೆ ೦೪:೫೧, ೧ October ೨೦೦೬ (UTC)

ಶುಶ್ರುತರೆ, ಧನ್ಯವಾದಗಳು. ಆದರೆ, ವಿಶೇಷ ಲೇಖನದ ಆಯ್ಕೆ ಒಬ್ಬರ ನಿರ್ಧಾರಕ್ಕೆ ಬಿಡಲಾಗದು. ಎಂದಿನಂತೆ, ಎಲ್ಲಾ ಸದಸ್ಯರು ಸರ್ವಾನುಮತದಿಂದ ಆಯ್ಕೆಮಾಡುವ ಲೇಖನವನ್ನು ವಿಶೇಷ ಲೇಖನವನ್ನಾಗಿ ಮುಖ್ಯಪುಟಕ್ಕೆ ಹಾಕೋಣ.
ಈಗ ವಿಶೇಷ ಲೇಖನಕ್ಕೆ ಪ್ರಸ್ತಾವನೆಯಾಗಿರುವ ಲೇಖನಗಳು ಮೂರು. ರಾಮಾಯಣ, ಸತ್ಯದೊಂದಿಗೆ ನನ್ನ ಪ್ರಯೋಗಗಳು ಮತ್ತು ಉಪ್ಪಿನ ಸತ್ಯಾಗ್ರಹ.
ಗಾಂಧಿ ಜಯಂತಿಯ ಹೊಸ್ತಿಲಿನಲ್ಲಿರುವ ಈ ಸಂದರ್ಭದಲ್ಲಿ ಗಾಂಧೀಜಿಗೆ ಸಂಬಂಧಿಸಿದ ಲೇಖನವನ್ನು ವಿಶೇಷ ಲೇಖನವನ್ನಾಗಿ ಮಾಡಬೇಕೆಂದು ಕೇಳಿಬಂದ ಸಲಹೆಗೆ ಒಮ್ಮತದ ಸಹಮತಿ ಈಗಾಗಲೆ ಮೂಡಿಬಂದಿದೆ. ಹಾಗಾಗಿ, ರಾಮಾಯಣ ಲೇಖನವನ್ನು ಮುಂದಿನ ಸಂಚಿಕೆಗೆ ಪರಿಗಣಿಸಬಹುದು.
ಇನ್ನುಳಿದ ಎರಡು ಲೇಖನಗಳಲ್ಲಿ ಉಪ್ಪಿನ ಸತ್ಯಾಗ್ರಹ ಲೇಖನವು ಹೆಚ್ಚು ಮಾಹಿತಿಭರಿತವಾಗಿದ್ದು, ಮಹತ್ವಪೂರ್ಣದ್ದು ಎಂಬುದು ನನ್ನ ಅಭಿಪ್ರಾಯ. ಬೇರೆ ಸದಸ್ಯರ ವಿರೋಧವಿಲ್ಲದಿದ್ದಲ್ಲಿ, ಇದನ್ನು ವಿಶೇಷ ಲೇಖನವನ್ನಾಗಿ ಮಾಡೋಣ. ವಿರೋಧವಿದ್ದಲ್ಲಿ, ಸಕಾರಣಗಳೊಂದಿಗೆ ಪ್ರಸ್ತಾಪಿಸಿ. ಚರ್ಚಿಸಿ ನಂತರ ನಿರ್ಧರಿಸೋಣ. - ಮನ|Mana Talk - Contribs ೦೬:೦೫, ೧ October ೨೦೦೬ (UTC)
ಎಲ್ಲಿಗೆ ಬಂತು ಸಂಗಯ್ಯ ಎಂದರೆ... ಗಾಂಧಿ ಜಯಂತಿಯು ಬಂದಾಯಿತು. ಇನ್ನೂ ಏತಕ್ಕೆ ಕಾಯುತ್ತಿದ್ದೇವೆ? ಮೊದಲು ಕರಿಮೆಣಸನ್ನು ತೆಗೆದು ಗಾಂಧೀಜಿಗೆ ಸಂಬಂಧಪಟ್ಟ ಲೇಖನ ಹಾಕಿರಿ.ರಾಮಾಯಣ ಬೇಕಾದಲ್ಲಿ ಈ ವಾರಾಂತ್ಯದಲ್ಲಿ ಹಾಕಬಹುದು, ೧೦ ದಿನಗಳ ನಂತರ ದೀಪಾವಳಿಯನ್ನು ಹಾಕಬಹುದು. ಕರಾರುವಾಕ್ಕಾಗಿ ೧೫ ದಿನಗಳ ಮಿತಿ ಹಾಕದೇ, flexible ಆಗಿ ಸಂದರ್ಭಾನುಸಾರವಾಗಿ ಹಾಕೋಣ. ಎಲ್ಲ ಸದಸ್ಯರ ಸಹಮತ ಬೇಕೆಂದರೆ ಮುಂದಿನ ೨-೩ ತಿಂಗಳುಗಳ ವಿಶೇಷ ಲೇಖನಗಳನ್ನು ಈಗಲೇ ಸದಸ್ಯರೆದುರಿಗೆ ತಂದು ನಿರ್ಧರಿಸೋಣ. ಕೊನೆ ನಿಮಿಷದ ವ್ಯವಧಾನಗಳು ಬೇಡ. Ksj dr ೧೪:೨೭, ೨ October ೨೦೦೬ (UTC)
ಈ ಪ್ರಶ್ನೆಗೆ ಉತ್ತರ ಸಹಾಯ:ಸಂಪಾದನೆ FAQ ಪುಟದಲ್ಲಿ ದಾಖಲಿಸಲಾಗಿದೆ. ದಯವಿಟ್ಟು ನೋಡಿರಿ. - ಮನ|Mana Talk - Contribs ೧೯:೪೨, ೨ October ೨೦೦೬ (UTC)

ಹೊಸ ಸಂಚಿಕೆ

[ಬದಲಾಯಿಸಿ]

ಭಾರತದ ಸಂವಿಧಾನ ಅನುವಾದ ಮುಗಿದಿರುವುದರಿಂದ ಅದನ್ನು ಮುಂದಿನ ವಿಸೇಷ ಬರಹ ಮಾಡಬಹುದೆ? ಶುಶ್ರುತ \ಮಾತು \ಕತೆ ೧೮:೦೮, ೨೩ September ೨೦೦೬ (UTC)

ರಾಮಾಯಣ ಲೇಖನವು ಮುಂದಿನ ವಿಶೇಷ ಸಂಚಿಕೆಯಾಗಬೇಕೆಂದು ಈಗಾಗಲೇ ಪ್ರಸ್ತಾವನೆಯಾಗಿದೆ, ಮತ್ತು ಅದಕ್ಕೆ ಸಹಮತಿ ಕೂಡ ದೊರಕಿದೆ.
ಭಾರತದ ಸಂವಿಧಾನ ಲೇಖನವನ್ನು ಜನವರಿ ತಿಂಗಳಲ್ಲಿ ವಿಶೇಷ ಸಂಚಿಕೆ ಮಾಡಿದರೆ ಸಮಯೋಚಿತವಾಗಬಹುದು(ಗಣರಾಜ್ಯೋತ್ಸವಕ್ಕೆ) ಎಂದು ನನ್ನ ಅಭಿಪ್ರಾಯ. - ಮನ|Mana Talk - Contribs ೧೮:೫೦, ೨೩ September ೨೦೦೬ (UTC)

OK. ನನಗೆ ತಿಳಿದಿರಲ್ಲಿಲ್ಲ. ಶುಶ್ರುತ \ಮಾತು \ಕತೆ ೦೪:೪೭, ೨೪ September ೨೦೦೬ (UTC)