ವಿಘಟನೆ
ಈ ಪುಟ ಅಥವಾ ವಿಭಾಗವು ಅಪೂರ್ಣವಾಗಿದೆ. |
ವಿಘಟನೆ ಅಥವಾ ಬಹುಕೋಶ ಜೀವಿಗಳಲ್ಲಿ ಅಬೀಜ ವಿಘಟನೆ ಅಥವಾ ನಿರ್ಲಿಂಗ ರೀತಿಯಲ್ಲಿ ಸಂತಾನೋತ್ಪತ್ತಿ ಮಾಡುವ ಅಬೀಜ ಜೀವಿ ಅಥವಾ ಅಬೀಜತೆಯೆಂದರೆ ಒಂದು ಜೀವಿಯು ವಿಭಜಿಸಿ ಎರಡು ಬಾಗಗಳಾವುದಾಗಿದೆ.
ಈ ಪ್ರತಿಯೊಂದು ಭಾಗವು ಬೆಳೆದು ಪ್ರಬುದ್ಧವಾಗಿ ಬೆಳೆಯುತ್ತದೆ ಹಾಗೂ ಮೂಲ ಜೀವಿಯಂತೆ ಪೂರ್ಣ ಪ್ರಮಾಣದಲ್ಲಿ ಬೆಳೆದು ಸ್ವತಂತ್ರ ಜೀವಿಯಾಗುವುದಾಗಿದೆ.
ವಿಭಜನೆಯು ಉದ್ದೇಶಪೂರ್ವಕ ಅಥವಾ ಉದ್ದೇಶಪೂರ್ವಕವಲ್ಲದಾಗಿರಬಹುದು- ಇದು ಮಾನವ ನಿರ್ಮಿತ ಅಥವಾ ನೈಸರ್ಗಿಕವಾಗಿ ಉಂಟಾದ ಹಾನಿಯಿಂದ ಅಥವಾ ಪರಭಕ್ಷಕಗಳಿಂದಾಗಬಹುದು.ಈ ರೀತಿಯ ಜೀವಿಯು ವಿಶೇಷವಾದ ಅಂಗಗಳನ್ನು ಬೆಳೆಸಿಕೊಳ್ಳಬಹುದು ಅಥವಾ ದೇಹದ ಒಂದು ಬಾಗವನ್ನು ಹೊಚಾಚಬಹುದು ಅಥವಾ ಒಮ್ಮೆಲೆ ಒಡೆಯುವದಾಗಿದೆ. ಈ ವಿಭಜನೆಯು ಜೀವಿಯ ಯಾವುದೇ ಪೂವ ತಯಾರಿ ಇಲ್ಲದೇ ಉಂಟಾಗಿದ್ದರೆ,ಸಂತಾನೋತ್ಪತ್ತಿಯ ಒಂದು ಕಾರ್ಯವಾಗಿ ಎರಡು ಭಾಗಗಳು ಮತ್ತೆ ಪೂರ್ಣ ಜೀವಿಯನ್ನು ಉಂಟುಮಾಡಬಲ್ಲ ಸಾಮರ್ಥ್ಯ ಪಡೆದಿರುತ್ತವೆ. ವಿಘಟನೆಯನ್ನು ತುಣಿಕಾಗುವಿಕೆ ಎಂತಲೂ ಕರೆಯಬಹುದುದಾಗಿದೆ.ಈ ರೀತಿಯ ಸಂತಾನೋತ್ಪತ್ತಿಯನ್ನು ಹಲವಾರು ಜೀವಿಗಳಾದ ಸೈನೋ ಬ್ಯಾಕ್ಟೀರಿಯಾ,ಮೌಲ್ದ್ಸ, ಲೈಚೆನ್ಸ ಮುಂತಾದ ಸಸ್ಯಗಳಲ್ಲಿ ಮತ್ತು ಪ್ರಾಣಿಗಳಾದ ಸ್ಪಂಜು ಜೀವಿಗಳು ಚಪ್ಪಟೆ ಜೀವಿಗಳು, ಕೆಲವು ವಲಯವಂತಗಳಲ್ಲಿ ಹಾಗೂ ಸಮುದ್ರ ನಕ್ಷತ್ರಗಳಂತಹ ಜೀವಿಗಳಲ್ಲಿ ಕಂಡುಬರುತ್ತದೆ.
ಹಲವಾರು ಜೀವಿಗಳಲ್ಲಿ ವಿಘಟನೆ
[ಬದಲಾಯಿಸಿ]ಶಿಲೀಂದ್ರ ಸಾಮ್ರಾಜ್ಯದ ಜೀವಿಗಳಾದ ಮೌಲ್ಡ್ಸ,ಯೀಸ್ಟ ಹಾಗೂ ನಾಯಿಕೊಡೆಗಳಲ್ಲಿ 'ಹೈಪೆ' ಎಂಬ ಸಣ್ಣದಾದ ತಂತುವಿನಾಕಾರದಿಂದ ಸಂತಾನೋತ್ಪತ್ತಿ ಮಾಡುತ್ತದೆ.ಈ ಹೈಪೆ ಎಂಬ ರಚನೆಯು ಬೇರೆ ಜೀವಿಯಿಂದ ಆಹಾರ ಮತ್ತು ಖನಿಜಾಂಶಗಳನ್ನು ಪಡೆದುಕೊಂಡು ಬೆಳೆಯುತ್ತದೆ ಹಾಗೂ ಸಂತಾನೋತ್ಪತ್ತಿ ನಡೆಸುತ್ತದೆ.ಹೈಪೆಯು ವಿಭಜಿಸಿ ಎರಡು ತುಂಡುಗಳಾಗಿ ಹೊಸ ಜೀವಿಯಾಗಿ ಬೆಳವಣಿಗೆಯಾಗುತ್ತದೆ.
ಬಹಳಷ್ಟು ಲೈಚೆನ್ಸಗಳು ವಿಶೇಷವಾದ ರಚನೆಗಳನ್ನು ಹೊರಹೊಮ್ಮಿಸಿ ಅವುಗಳ ಸರಳವಾಗಿ ತುಂಡರಿಸಿಕೊಂಡು ಮತ್ತೆ ಪಸರಿಸುತ್ತವೆ.ಇಂತಹ ರಚನೆಗಳು ಎರಡು ರೀತಿಯಾಗಿರುತ್ತವೆ, ಒಂದು ಮೈಕ್ರೋಬಯೊಂಟನ ಹೈಪೆ ಮತ್ತು ಇನಸಿಡಿಯಾ ಹಾಗೂ ಸೋರೋಡಿಯಾಗಳೆಂಬ ಶಿಲೀಂದ್ರಗಳು.ಲೈಚೆನ್ಸಗಳು ಪೂರ್ಣವಾಗಿ ಒಣಗಿದ ನಂತರ ಥ್ಯಾಲಸ್ ನ ಬಹಳಷ್ಟು ಬಾಗವು ತನ್ನಷ್ಟಕ್ಕೆ ತಾನೆ ಅಥವಾ ಯಾಂತ್ರಿಕವಾಗಿ ತೊಂದರೆಗೊಳಪಟ್ಟು ಬೇರ್ಪಡುತ್ತದೆ.
ಸಸ್ಯಗಳು
[ಬದಲಾಯಿಸಿ]ಸಸ್ಯಗಳಲ್ಲಿ ನಡೆಯುವ ಅಲಿಂಗ ರೀತಿಯ ಸಂತನೋತ್ಪತ್ತಿಯ ಒಂದು ಸಾಮಾನ್ಯ ರೀತಿಯೇ ವಿಘಟನೆಯಾಗಿದೆ.ಹಲವಾರು ಮರಗಳು, ಗಿಡಮರಗಳು, ಕಟ್ಟಿಗೆ ಉಂಟು ಮಾಡದ ವಾರ್ಷಿಕ ಸಸ್ಯಗಳು ಮತ್ತು ವಸಹಾತುಶಾಹಿಗಳಾದ ಜರೀಗಿಡಗಳು ತಮ್ಮ ಹೊಸ ಬೇರುಗಳಿಂದ ಉಂಟಾಗುವ ಬೇರು ಕಾಂಡ ಮತ್ತು ಬಳ್ಳಿಗಳು ಉಂಟಾಗುವಿಕೆಯಲ್ಲಿಯೂ ನಡೆಯುತ್ತದೆ.ಇದು ವಸಹಾತುಶಾಹಿಯ ವಿಸ್ತೀರ್ಣವನ್ನು ಹೆಚ್ಚಿಸುತ್ತದೆ.ಈ ರೀತಿ ವಸಹಾತುಶಾಯಿಂದ ಹೊಸ ಬೇರುಗಳನ್ನು ಪಡೆದುಕೊಂಡ ಸಸ್ಯದಲ್ಲಿ ವಿಘಟನೆಯು ಜರುಗುತ್ತದೆ.