ವಿಜಯಲಕ್ಷ್ಮೀ ರವೀಂದ್ರನಾಥ್
ವಿಜಯಲಕ್ಷ್ಮೀ ರವೀಂದ್ರನಾಥ್ | |
---|---|
![]() | |
ಜನನ | ೧೮ ಅಕ್ಟೋಬರ್ ೧೯೫೩ ಚೆನ್ನೈ, ಭಾರತ |
ವಾಸಸ್ಥಳ | |
ರಾಷ್ಟ್ರೀಯತೆ | ಭಾರತೀಯ |
ಕಾರ್ಯಕ್ಷೇತ್ರ | ನ್ಯೂರೊಸೈನ್ಸ್ |
ಸಂಸ್ಥೆಗಳು | ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್ |
ಅಭ್ಯಸಿಸಿದ ವಿದ್ಯಾಪೀಠ | ಆಂಧ್ರ ವಿಶ್ವವಿದ್ಯಾನಿಲಯ, ಮೈಸೂರು ವಿಶ್ವವಿದ್ಯಾನಿಲಯ |
ಡಾಕ್ಟರೇಟ್ ಸಲಹೆಗಾರರು | ಚಂದ್ರಶೇಖರ ಎನ್ |
ಪ್ರಸಿದ್ಧಿಗೆ ಕಾರಣ | ನರವಿಜ್ಞಾನ ಸಂಶೋಧನೆ ಮತ್ತು ಭಾರತದಲ್ಲಿ ಪ್ರಮುಖ ನರವಿಜ್ಞಾನ ಸಂಶೋಧನಾ ಕೇಂದ್ರಗಳನ್ನು ಸ್ಥಾಲಿಸುವುದಕ್ಕೆ ಪ್ರೋತ್ಸಾಹ |
ಗಮನಾರ್ಹ ಪ್ರಶಸ್ತಿಗಳು | ಶಾಂತಿ ಸ್ವರೂಪ್ ಭಟ್ನನಗರ್ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ |
ವಿಜಯಲಕ್ಷ್ಮೀ ರವೀಂದ್ರನಾಥ್(೧೮ ಅಕ್ಟೋಬರ್ ೧೯೫೩) ರವರೊಬ್ಬ ಭಾರತೀಯ ನರವಿಜ್ಞಾನಿ. ಅವರು ಪ್ರಸ್ತುತವಾಗಿ ಸೆಂಟರ್ ಫಾರ್ ನ್ಯೂರೊಸೈನ್ಸ್ [೧][೨], ಭಾರತೀಯ ವಿಜ್ಞಾನ ಸಂಸ್ಥೆ, ಬೆಂಗಳೂರಿನಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಗುರ್ಗಾಂವ್ ಮತ್ತು ೨೦೦೦ ರಿಂದ ೨೦೦೯ ರವರೆಗೆ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿನ ಸೆಂಟರ್ ಫಾರ್ ನ್ಯೂರೊ ಸೈನ್ಸ್ ನ ಸಂಸ್ಥಾಪಕ ಅಧ್ಯಕ್ಷರಾಗಿದ್ದರು. ಇವರ ಸಾಧನೆಯನ್ನು ಗುರುತಿಸಿ ಭಾರತದ ಅತ್ಯುನ್ನತ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಯನ್ನು ನೀಡಿ ಸನ್ಮಾನಿಸಲಾಯಿತು. ಅವರು ಮೆದುಳಿನ ಅಸ್ವಸ್ಥತೆಗಳು ಮತ್ತು ಮೆದುಳಿನಲ್ಲಿನ ಡ್ರಗ್ ಮೆಟಬೋಲಿಸಮ್ ನ ಕ್ಷೇತ್ರದಲ್ಲಿ ಸಂಶೋಧನೆಯನ್ನು ಮಾಡಿದ್ದಾರೆ.
ಜನನ
[ಬದಲಾಯಿಸಿ]ವಿಜಯಲಕ್ಷ್ಮೀ ರವೀಂದ್ರನಾಥ್ ರವರು ೧೮ ಅಕ್ಟೋಬರ್ ೧೯೫೩ ರಂದು ಚೆನ್ನೈ ನಲ್ಲಿ ಜನಿಸಿದರು.[೩]
ಜೀವನ
[ಬದಲಾಯಿಸಿ]ವಿಜಯಲಕ್ಷ್ಮೀ ರ ವರ ತಂದೆ - ಕೃಷ್ಣನ್ ರಮನ್, ತಾಯಿ - ಶಶಿಕಲಾ ರಮನ್. ಅವರು ಡಾ.ಬಿ.ರವೀಂದ್ರನಾಥ್ ರವರನ್ನು ವಿವಾಹವಾದರು.[೩]
ಶಿಕ್ಷಣ
[ಬದಲಾಯಿಸಿ]- ಆಂಧ್ರ ಯುನಿವರ್ಸಿಟಿಯಿಂದ ಬಿ.ಎಸ್ಸಿ. ಮತ್ತು ಎಮ್.ಎಸ್ಸಿ. ಪದವಿ.[೪]
- ಮೈಸೂರು ವಿಶ್ವವಿದ್ಯಾನಿಲಯದಿಂದ ಪಿ.ಎಚ್.ಡಿ. ಪದವಿ(ಬಯೋಕೆಮಿಸ್ಟ್ರಿ) - ೧೯೮೧.
ವೃತ್ತಿಜೀವನ
[ಬದಲಾಯಿಸಿ]ವಿಜಯಲಕ್ಷ್ಮೀ ಯವರು ಪದವಿ ಪಡೆದ ನಂತರ ನ್ಯಾಷನಲ್ ಕ್ಯಾನ್ಸರ್ ಇನ್ಸ್ಟಿಟ್ಯೂಟ್, ಯುಎಸ್ಎ ನಲ್ಲಿ ಪೋಸ್ಟ್ ಡಾಕ್ಟೋರಲ್ ಫೇಲೋ ಆಗಿ ಕೆಲಸ ಮಾಡಿದರು. ನಂತರ ಅವರು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೊಸೈನ್ಸಸ್, ಬೆಂಗಳೂರಿಗೆ ಸೇರಿಕೊಂಡರು. ೧೯೯೯ ರಲ್ಲಿ ಅವರು ಭಾರತದ ಸರಕಾರದ ಜೈವಿಕ ತಂತ್ರಜ್ಞಾನ ವಿಭಾಗದ (ಡಿಬಿಟಿ), ನ್ಯಾಷನಲ್ ಬ್ರೈನ್ ರಿಸರ್ಚ್ ಸೆಂಟರ್ ಅನ್ನು ಸ್ಥಾಪಿಸಲು ಸಹಾಯ ಮಾಡಿದರು.
ಮನ್ನಣೆಗಳು
[ಬದಲಾಯಿಸಿ]ವಿಜಯಲಕ್ಷ್ಮೀ ಯವರು ಈ ಕೆಳಗಿನ ಭಾರತೀಯ ಅಕಾಡೆಮಿಯಲ್ಲಿ ಚುನಾಯಿತರಾಗಿದ್ದರು.
- ಇಂಡಿಯನ್ ಅಕಾಡೆಮಿ ಆಫ್ ಸೈನ್ಸಸ್.
- ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್.
- ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿ.
- ನ್ಯಾಷನಲ್ ಅಕಾಡೆಮಿ ಆಫ್ ನ್ಯಾಚುರಲ್ ಸೈನ್ಸಸ್.
- ಇಂಡಿಯನ್ ಅಕಾಡೆಮಿ ಆಫ್ ನ್ಯೂರೊಸೈನ್ಸ್.
ಪ್ರಶಸ್ತಿಗಳು
[ಬದಲಾಯಿಸಿ]- ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೧೯೯೬.[೫]
- ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿ ಯಿಂದ ಕೆ.ಪಿ.ಭಾರ್ಗವ ಮೆಡಲ್.[೬]
- ವಿಜ್ಞಾನ ಮತ್ತು ತಂತ್ರಜ್ಞಾನಕ್ಕಾಗಿ ಓಂ ಪ್ರಕಾಶ್ ಭಸಿನ್ ಪ್ರಶಸ್ತಿ - ೨೦೦೧.[೭]
- ಜೆ.ಸಿ.ಬೋಸ್ ಫೆಲೋಶಿಪ್ - ೨೦೦೬.[೮]
- ಭಾರತೀಯ ರಾಷ್ಟ್ರೀಯ ವಿಜ್ಙಾನ ಅಕಾಡೆಮಿಯಿಂದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೧೭.[೯]
- ಪದ್ಮಶ್ರೀ ಪ್ರಶಸ್ತಿ - ೨೦೧೦.[೧೦]
- ಪ್ರೊ.ಕೆ.ಪಿ.ಭಾರ್ಗವ ಸ್ಮರಣಾರ್ಥಕ ಪದಕ - ೨೦೦೦.[೧೧]
ಸಂಶೋಧನಾ ಕ್ಷೇತ್ರಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2019-04-05. Retrieved 2019-03-30.
- ↑ "ಆರ್ಕೈವ್ ನಕಲು". Archived from the original on 2019-04-05. Retrieved 2019-03-30.
- ↑ ೩.೦ ೩.೧ https://prabook.com/web/vijayalakshmi.ravindranath/304447
- ↑ https://www.pressreader.com/
- ↑ Shanti_Swarup_Bhatnagar_Awardees
- ↑ "ಆರ್ಕೈವ್ ನಕಲು". Archived from the original on 2019-03-30. Retrieved 2019-03-30.
- ↑ https://www.revolvy.com/page/Vijayalakshmi-Ravindranath
- ↑ https://www.iisc.ac.in/research/accolades/j-c-bose-fellowship-awardees/
- ↑ "ಆರ್ಕೈವ್ ನಕಲು". Archived from the original on 2019-03-30. Retrieved 2019-03-30.
- ↑ Deccan Herald UPDATED: JAN 25 2010, 22:48PM IST
- ↑ "ಆರ್ಕೈವ್ ನಕಲು". Archived from the original on 2019-03-30. Retrieved 2019-03-30.
- ↑ brain disorders
- ↑ http://bio.iisc.ac.in/?q=faculty/vijayalakshmi-ravindranath