ವಿಜಯ್ ಭಾರದ್ವಾಜ್
ಗೋಚರ
ಮೂಲ: [೧], 4 February 2006 |
ರಾಘವೇಂದ್ರರಾವ್ ವಿಜಯ್ ಭಾರದ್ವಾಜ್ (ಜನನ: ಆಗಸ್ಟ್ ೧೫, ೧೯೭೫, ಬೆಂಗಳೂರು, ಕರ್ನಾಟಕ) ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ. ಇವರು ಬಲಗೈ ಬ್ಯಾಟ್ಸ್ಮನ್ ಮತ್ತು ಬಲಗೈ ಸ್ಪಿನ್ ಬೌಲರ್. ವಿಜಯ್ ಸೆಪ್ಟೆಂಬರ್ ೨೬, ೧೯೯೯ ರಂದು ಮೊದಲ ಅಂತರರಾಷ್ಟ್ರೀಯ ಏಕ ದಿನ ಪಂದ್ಯವನ್ನು ನೈರೋಬಿಯಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಆಡಿದರು. ೧೯೯೦ರ ದಶಕದಲ್ಲಿ ಕರ್ನಾಟಕ ಕ್ರಿಕೆಟ್ ತಂಡವು ಮೂರು ಭಾರಿ ರಣಜಿ ಟ್ರೋಫಿ ಗೆಲ್ಲುವುದರಲ್ಲಿ, ವಿಜಯ್ ಪ್ರಮುಖ ಪಾತ್ರ ವಹಿಸಿದ್ದರು. ಇವರು ತಮ್ಮ ಮೊದಲ ಅಂತರರಾಷ್ಟ್ರೀಯ ಏಕ ದಿನ ಸರಣಿಯಲ್ಲೇ 'ಪಂದ್ಯ ಪುರುಷೋತ್ತಮ' ಪ್ರಶಸ್ತಿಯನ್ನು ಗಳಿಸಿದ್ದು, ವಿಜಯ್ ಕ್ರಿಕೆಟ್ ಜೀವನದ ಒಂದು ಪ್ರಮುಖ ಸಾಧನೆ.
ಈ ಲೇಖನದಿಂದ ಬೇರೆ ಯಾವುದೇ ಲೇಖನಕ್ಕೆ ಬಾಹ್ಯ ಸಂಪರ್ಕ ಹೊಂದಿಲ್ಲ. |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |