ವಿಟ್ಟೋರಿಯಾ ಸೆರೆಟ್ಟಿ
ವಿಟ್ಟೋರಿಯಾ ಸೆರೆಟ್ಟಿ | |
---|---|
Born | ವಿಟ್ಟೋರಿಯಾ ಸೆರೆಟ್ಟಿ ೭ ಜೂನ್ ೧೯೯೮ |
Occupation | ಮಾಡೆಲ್ |
Spouse |
Matteo Milleri (ವಿವಾಹ:2020) - div. |
Modeling information | |
Height | 5 ft 10 in (178 cm) |
Hair color | ಕಂದು[೨][೩] |
Eye color | ಹಸಿರು |
Agency |
ಮಾದರಿ ನಿರ್ವಹಣೆ (ಹ್ಯಾಂಬರ್ಗ್)
|
ವಿಟ್ಟೋರಿಯಾ ಸೆರೆಟ್ಟಿ (ಜನನ ೭ ಜೂನ್ ೧೯೯೮) ಇವರು ಇಟಲಿಯ ಸೂಪರ್ ಮಾಡೆಲ್.[೫] ಸೆರೆಟ್ಟಿರವರನ್ನು ೨೦೧೨ ರಲ್ಲಿ, ಎಲೈಟ್ ಮಾಡೆಲ್ ಲುಕ್ ಮಾದರಿಯ ಸ್ಪರ್ಧೆಯ[೬][೭] ಮೂಲಕ ಗುರುತಿಸಲಾಯಿತು ಹಾಗೂ ಮಾಡೆಲ್ಸ್.ಕಾಮ್ ಸೆರೆಟ್ಟಿರವರನ್ನು "ನ್ಯೂ ಸೂಪರ್ಸ್" ಗಳಲ್ಲಿ ಒಬ್ಬರೆಂದು ಪರಿಗಣಿಸಿದೆ.[೮] ಬಹುಮುಖತೆ ಮತ್ತು ಗಮನಾರ್ಹ ಲಕ್ಷಣಗಳಿಗೆ ಹೆಸರುವಾಸಿಯಾದ ಸೆರೆಟ್ಟಿಯವರು ಈ ಪೀಳಿಗೆಯ ಅತ್ಯಂತ ಮೆಚ್ಚುಗೆ ಪಡೆದ ಮತ್ತು ಪ್ರಸಿದ್ಧ ಸೂಪರ್ ಮಾಡೆಲ್‌ಗಳಲ್ಲಿ ಒಬ್ಬರಾಗುವಲ್ಲಿ ಯಶಸ್ವಿಯಾಗಿದ್ದಾರೆ.[೯] ೨೦೧೪ ರ ಹೊತ್ತಿಗೆ, ಸೆರೆಟ್ಟಿಯವರು ೪೦೦ ಫ್ಯಾಷನ್ ಶೋಗಳನ್ನು ನಡೆಸಿದ್ದಾರೆ ಮತ್ತು ಅಂತರರಾಷ್ಟ್ರೀಯ ವೋಗ್‌ನ ಮುಖಪುಟವನ್ನು ೨೩ ಬಾರಿ ಅಲಂಕರಿಸಿದ್ದಾರೆ.[೧೦]
ಆರಂಭಿಕ ಜೀವನ
[ಬದಲಾಯಿಸಿ]ಸೆರೆಟ್ಟಿಯವರು ೧೯೯೮ ರಲ್ಲಿ, ಇಟಲಿಯ ಬ್ರೆಸಿಯಾದಲ್ಲಿ ಫ್ಲೋರಿಂಗ್ ಕಂಪನಿಯ ಮಾಲೀಕರಾದ ಗೈಸೆಪ್ಪೆ ಸೆರೆಟ್ಟಿ ಮತ್ತು ಅವರ ಗೃಹಿಣಿಯಾದ ಫ್ರಾನ್ಸೆಸ್ಕಾ (ನೀ ಲಝಾರಿ) ಅವರ ಮಗಳಾಗಿ ಜನಿಸಿದರು.[೧೧][೧೨][೧೩] ಅವರು ೧೪ ವರ್ಷದವರಾಗಿದ್ದಾಗ, ಇಟಲಿಯಲ್ಲಿ ನಡೆದ ಎಲೈಟ್ ಮಾಡೆಲ್ ಲುಕ್ ಸ್ಪರ್ಧೆಗೆ ಪ್ರವೇಶಿಸಿದರು. ಅಲ್ಲಿ ಅವರು ಅಂತಿಮ ಸ್ಪರ್ಧಿಯಾಗಿ ಆಯ್ಕೆಯಾದರು.[೧೪]
ವೃತ್ತಿಜೀವನ
[ಬದಲಾಯಿಸಿ]ಆರಂಭಿಕ ೨೦೧೨–೨೦೧೭
[ಬದಲಾಯಿಸಿ]ಸೆರೆಟ್ಟಿಯವರು ತಮ್ಮ ೧೪ ನೇ ವಯಸ್ಸಿನಲ್ಲಿ ಮಾಡೆಲಿಂಗ್ ವೃತ್ತಿಜೀವನವನ್ನು ಪ್ರಾರಂಭಿಸಿದರು ಮತ್ತು ಎಲೈಟ್ ಮಾಡೆಲ್ ಲುಕ್ ಇಟಲಿಯಲ್ಲಿನ ಅಂತಿಮ ಸ್ಪರ್ಧಿಗಳಲ್ಲಿ ಸ್ಥಾನ ಪಡೆದರು. ಡಿಸೈನರ್ ಕ್ರಿಸ್ಟಿನಾ ಟಿಗಾಗಿ ಸೆರೆಟ್ಟಿಯವರು ಇಟಲಿಯ ಮಿಲನ್ ನಗರದಲ್ಲಿ ರನ್ ವೇಗೆ ಪಾದಾರ್ಪಣೆ ಮಾಡಿದರು.
೨೦೧೪ ರಲ್ಲಿ, ಸೆರೆಟ್ಟಿಯವರನ್ನು ೨೦೧೫ ಮತ್ತು ೨೦೧೬ ರಲ್ಲಿ ಶರತ್ಕಾಲ/ಚಳಿಗಾಲ ಮತ್ತು ಸೌಂದರ್ಯ ಅಭಿಯಾನಗಳ ಸಲುವಾಗಿ ಡೊಲ್ಸ್ ಮತ್ತು ಗಬ್ಬಾನಾರವರು ಆಯ್ಕೆ ಮಾಡಿದರು.[೧೫] ೨೦೧೫ ರಲ್ಲಿ, ಸೆರೆಟ್ಟಿಯವರನ್ನು ಜಾರ್ಜಿಯೊ ಅರ್ಮಾನಿ ಅವರು ಶರತ್ಕಾಲ/ಚಳಿಗಾಲದ ಅಭಿಯಾನದ ಸಲುವಾಗಿ ಆಯ್ಕೆ ಮಾಡಲಾಯಿತು ಮತ್ತು ಸೆಪ್ಟೆಂಬರ್ ೨೦೧೫ ರಲ್ಲಿ, ಮಾಡೆಲ್ಸ್.ಕಾಮ್ ನ ವೇಳೆಗೆ ಟಾಪ್ ೫೦ರ ಮಾದರಿಗಳಲ್ಲಿ ಸೆರಟ್ಟಿಯವರು ಪಾದಾರ್ಪಣೆ ಮಾಡಿದರು.[೧೬]
ಅದೇ ವರ್ಷದಲ್ಲಿ ಸೆರೆಟ್ಟಿಯವರನ್ನು ಅಲೆಕ್ಸಾಂಡರ್ ಮೆಕ್ ಕ್ವೀನ್ ಅವರ ಶರತ್ಕಾಲ/ಚಳಿಗಾಲದ ೨೦೧೭ರ ಅಭಿಯಾನದ ಸಲುವಾಗಿ ಆಯ್ಕೆ ಮಾಡಲಾಯಿತು ಮತ್ತು ಫೆಂಡಿಯವರ ಶರತ್ಕಾಲ/ಚಳಿಗಾಲದ ೨೦೧೭ರ ಅಭಿಯಾನದಲ್ಲಿ ಜಿಗಿ ಹ್ಯಾಡಿಡ್ ಮತ್ತು ಬೆಲ್ಲಾ ಹ್ಯಾಡಿಡ್ ಅವರೊಂದಿಗೆ ಜೊತೆಯಾಗಿ ಇದ್ದರು.[೧೭]
ಜುಲೈ ೨೦೧೬ ರಲ್ಲಿ, ಸೆರೆಟ್ಟಿಯವರು ಸ್ಟೀವ್ ಮೀಸೆಲ್‌ರವರು ರಚಿಸಿದ ವೋಗ್ ಇಟಾಲಿಯಾ ಎಂಬ ಮುಖಪುಟದಲ್ಲಿ ಕಾಣಿಸಿಕೊಂಡರು ಮತ್ತು ಸ್ಟೀವನ್ ಮೀಸೆಲ್ ಅವರೊಂದಿಗೆ ಪ್ರಾಡಾ ಅಭಿಯಾನವನ್ನು ಚಿತ್ರೀಕರಿಸಿದರು.[೧೮] ಸೆರೆಟ್ಟಿಯವರು ಗಿವೆಂಚಿ ಅಭಿಯಾನದ ಭಾಗವಾಗಿದ್ದರು. ೨೦೧೭ ರಲ್ಲಿ, ಅವರು ಮಾಡೆಲ್ಸ್.ಕಾಮ್‌ನಲ್ಲಿ ಓದುಗರ ಆಯ್ಕೆಗಾಗಿ ವರ್ಷದ ರೂಪದರ್ಶಿಯಾಗಿದ್ದರು.
೨೦೧೭ ರ ಫೆಬ್ರವರಿಯಲ್ಲಿ, ಸೆರೆಟ್ಟಿಯವರು ವೋಗ್ ಜಪಾನ್, ಮಾರ್ಚ್‌ನಲ್ಲಿ ವೋಗ್ ಯುಎಸ್ಎ ಮತ್ತು ಮೇ ತಿಂಗಳಲ್ಲಿ ಫ್ರೆಂಚ್ ವೋಗ್‌ನಲ್ಲಿ ಕಾಣಿಸಿಕೊಂಡರು..[೧೯]
೨೦೧೮ ರ-ಪ್ರಸ್ತುತ ಪ್ರಾಮುಖ್ಯತೆಯ ಏರಿಕೆ
[ಬದಲಾಯಿಸಿ]ಸೆರೆಟ್ಟಿಯವರು ಪ್ರಗತಿಯ ನಂತರ ತಮ್ಮ ಉದ್ಯಮದಲ್ಲಿ ಮಗ್ನರಾದರು. ಡೊಲ್ಸ್ ಮತ್ತು ಗಬ್ಬಾನಾ ಅವರನ್ನು ಸೌಂದರ್ಯ ರೇಖೆಗಾಗಿ ಬಯಸಿದ್ದರು, ಕಾರ್ಲ್ ಲಾಗರ್ಫೆಲ್ಡ್‌ರವರು ತಮ್ಮ ಬಹುಮುಖತೆಗಾಗಿ ಅವರನ್ನು ಆರಾಧಿಸಿದರು ಹಾಗೂ ಫೆಂಡಿ ಮತ್ತು ಶನೆಲ್ ಪ್ರದರ್ಶನಗಳಿಗೆ ಅರನ್ನು ಆಯ್ಕೆ ಮಾಡಿದರು.[೨೦]
ಸೆರೆಟ್ಟಿಯವರು ಬಹುಮುಖ ಪ್ರತಿಭೆಗೆ ಹೆಸರುವಾಸಿಯಾಗಿದ್ದಾರೆ, ಸಾಮನ್ಯ ಹೆಣ್ಣಿನಿಂದ ರಾಜಕುಮಾರಿಯವರೆಗೆ, ಟಾಂಬಾಯ್‌ನಿಂದ ಅತ್ಯಾಧುನಿಕ ಮಹಿಳೆಯವರೆಗೆ, ಹೊಳೆಯುವ ಮತ್ತು ಕೆಂಪು ಲಿಪ್‍ಸ್ಟಿಕ್ ಧರಿಸಿದ ವಧುವಿನಿಂದ ಕಣ್ಣುಗಳ ಸುತ್ತಲೂ ಕಪ್ಪು ಬೀಥರ್‌ಗಳನ್ನು ಹಚ್ಚಿಕೊಳ್ಳುವ ಮಹಿಳೆಯಾಗಿ ತಮ್ಮ ನೋಟವನ್ನು ಬದಲಾಯಿಸಿಕೊಳ್ಳುತ್ತಾರೆ.[೨೧]
೨೦೧೮ ರಲ್ಲಿ, ಸೆರೆಟ್ಟಿಯವರು ಬ್ರಿಟಿಷ್ ವೋಗ್ ಮತ್ತು ಬಿಗ್ ೪ ಅನ್ನು ಪಡೆದರು. ೨೦೧೮ ರಲ್ಲಿ, ಅವರು ಟಿಫಾನಿ & ಕೋ ಅಭಿಯಾನ, ಪ್ರೊಯೆಂಜಾ ಸ್ಚೌಲರ್, ಅರಿಜೋನಾ ಸುಗಂಧ ಅಭಿಯಾನ ಮತ್ತು ಇತರ ಅನೇಕ ಅಭಿಯಾನಗಳ ಭಾಗವಾಗಿದ್ದರು.[೨೨]
ಸೆರೆಟ್ಟಿಯವರ ಅತ್ಯಂತ ಗಮನಾರ್ಹ ಸಾಧನೆಗಳಲ್ಲಿ ಒಂದಾದ ೨೦೧೮ ರಲ್ಲಿ, ನಡೆದ ಚಾನೆಲ್ಸ್‌ನವರ ಕೊಕೊ ನೀಜ್ ಅಭಿಯಾನಗಳಲ್ಲಿ ಒಂದಾಗಿ ಆಯ್ಕೆ ಮಾಡಲಾಯಿತು.[೨೩] ಹಾಗೂ ಸೆರೆಟ್ಟಿಯವರು ೨೦೧೯ ರಲ್ಲಿ, ಮೆಟಿಯರ್ಸ್ ಡಿ ಆರ್ಟ್ ಪ್ರದರ್ಶನಕ್ಕಾಗಿ ಮುಂದೆ ನಡೆದರು.
ಸೆರೆಟ್ಟಿಯವರು ಜನಿಸಿದ ವರ್ಷದಿಂದ ಕಳೆದ ಹದಿನೆಂಟು ವರ್ಷಗಳಲ್ಲಿ, ಕೇವಲ ೨ ಇಟಾಲಿಯನ್ನರಿಗೆ ವಿಶ್ವದ ಅತ್ಯಂತ ಪ್ರಭಾವಶಾಲಿ ಫ್ಯಾಷನ್ ಪ್ರಕಟಣೆಗಳಲ್ಲಿ ಒಂದಾದ ನಟಿ ಇಸಾಬೆಲ್ಲಾ ರೊಸೆಲ್ಲಿನಿ ಮತ್ತು ಸೂಪರ್ ಮಾಡೆಲ್ ಮರಿಯಾಕಾರ್ಲಾ ಬಾಸ್ಕೊನೊ ಅವರ ಮುಖಪುಟವನ್ನು ನೀಡಿ ಗೌರವಿಸಲಾಯಿತು.[೨೪][೨೫]
೨೦೧೩ ರ, ಹೊತ್ತಿಗೆ ಸೆರೆಟ್ಟಿಯವರು ಚಾನೆಲ್ಸ್‌ನವರ ಬ್ಯೂಟಿ ಹಾಲಿಡೇ ಕ್ಯಾಂಪೇನ್‌ನ ನಾಯಕರಾಗಿದ್ದರು.[೨೬]
ವೋಗ್, ವೋಗ್ ಇಟಾಲಿಯಾ, ವೋಗ್ ಪ್ಯಾರಿಸ್, ವೋಗ್ ಜಪಾನ್, ವೋಗ್ ಜರ್ಮನಿ, ವೋಗ್ ಸ್ಪೇನ್, ಬ್ರಿಟಿಷ್ ವೋಗ್, ವೋಗ್ ಕೊರಿಯಾ, ವೋಗ್ ಚೀನಾ, ಹಾರ್ಪರ್ಸ್ ಬಜಾರ್, ಎಲ್ಲೆ,[೨೭] ಗ್ಲಾಮರ್, ಗ್ರಾಜಿಯಾ, ಐಒ ಡೊನ್ನಾ ಮತ್ತು ಹೆಚ್ಚಿನವುಗಳ ಮುಖಪುಟದಲ್ಲಿ ಸೆರೆಟ್ಟಿಯವರು ಕಾಣಿಸಿಕೊಂಡಿದ್ದಾರೆ. ನಿಯತಕಾಲಿಕದ ೧೨೫ ನೇ ವಾರ್ಷಿಕೋತ್ಸವವನ್ನು ಆಚರಿಸಿದ ವೋಗ್‌ನ ಮಾರ್ಚ್ ೨೦೧೭ ರ ಸಂಚಿಕೆಯ ಮುಖಪುಟದಲ್ಲಿದ್ದ ಏಳು ರೂಪದರ್ಶಿಗಳಲ್ಲಿ ಸೆರೆಟ್ಟಿಯವರು ಒಬ್ಬರಾಗಿದ್ದರು. ವೋಗ್ ಇಟಾಲಿಯಾ ಪ್ರಕಾರ, "ವಿಟ್ಟೋರಿಯಾ ಸೆರೆಟ್ಟಿಯವರು ೨೦೧೮ ರಲ್ಲಿ, ತಮ್ಮ ವೆಬ್ಸೈಟ್‌ನಲ್ಲಿ ಹೆಚ್ಚು ಹುಡುಕಲ್ಪಟ್ಟ ರೂಪದರ್ಶಿಯಾಗಿದ್ದಾರೆ" ಎಂಬುದಾಗಿದೆ.
೨೦೨೪ ರಲ್ಲಿ, ಅವರು ಪುಸ್ಸಿ ಮಹಿಳೆಯ ಹೊಸ ಮುಖವಾಗುತ್ತಾರೆ.
ವೈಯಕ್ತಿಕ ಜೀವನ
[ಬದಲಾಯಿಸಿ]ಸೆರೆಟ್ಟಿಯವರು ವೋಗ್ ಪ್ಯಾರಿಸ್‌ಗೆ ನೀಡಿದ ಸಂದರ್ಶನದಲ್ಲಿ, ರೂಪದರ್ಶಿಯಾಗಿ ವೃತ್ತಿಜೀವನವನ್ನು ಪ್ರಾರಂಭಿಸದಿದ್ದರೆ ನಟನೆ ಅಥವಾ ಮನೋವಿಜ್ಞಾನವನ್ನು ಅಧ್ಯಯನ ಮಾಡುತ್ತಿದ್ದರು ಎಂದು ಉಲ್ಲೇಖಿಸಿದ್ದಾರೆ.[೨೮]
ಅವರು ೧ ಜೂನ್ ೨೦೨೦ ರಂದು, ಸ್ಪೇನ್‌ನ ಇಬಿಜಾದಲ್ಲಿ ಇಟಾಲಿಯನ್ ಡಿಜೆ ಮ್ಯಾಟಿಯೊ ಮಿಲ್ಲರ್ ಅವರನ್ನು ವಿವಾಹವಾದರು ಮತ್ತು ಅವರು ಜೂನ್ ೨೦೨೩ ರಲ್ಲಿ ವಿಚ್ಛೇದನ ಪಡೆದರು.[೨೯]
ಉಲ್ಲೇಖಗಳು
[ಬದಲಾಯಿಸಿ]- ↑ "Vittoria Ceretti si è sposata? Ecco chi è il suo nuovo amore". June 2, 2020.
- ↑ "The Society Management – New York City – Vittoria Ceretti Portfolio". www.thesocietymanagement.com. Retrieved April 20, 2017.
- ↑ "Elite London - Vittoria Ceretti". Elite London (in ಇಂಗ್ಲಿಷ್). Retrieved April 20, 2017.
- ↑ "Vittoria Ceretti - Model". MODELS.com.
- ↑ "Vittoria Ceretti Is the Ultimate Supermodel". ELLE (in ಅಮೆರಿಕನ್ ಇಂಗ್ಲಿಷ್). 2024-02-22. Retrieved 2024-03-26.
- ↑ VOGUEGRAPHY (2017-01-27). "Vittoria Ceretti". VOGUEGRAPHY (in ಇಂಗ್ಲಿಷ್). Retrieved 2023-12-27.
- ↑ https://models.com/models/vittoria-ceretti/year/shows
- ↑ Look, Elite Model. "Model To Know: Vittoria Ceretti". Elite Model Look (in ಇಂಗ್ಲಿಷ್). Retrieved 2023-05-20.
- ↑ [೧]
- ↑ Enthusiast, The Fashion (2023-05-05). "The Fashion Enthusiast: Fashion Around the World". thefashionenthusiast.uk (in ಇಂಗ್ಲಿಷ್). Retrieved 2023-12-27.
- ↑ https://www.repubblica.it/moda-e-beauty/2019/11/22/news/vittoria_ceretti_top_model_da_esportazione-342231653/
- ↑ Kim, Monica (September 20, 2016). "This Italian Model's Jaw-Dropping Beauty Is Taking Fashion Month By Storm". Vogue (in ಇಂಗ್ಲಿಷ್). Retrieved April 20, 2017.
- ↑ Pantano, Italo (September 26, 2016). "Q&A with Vittoria Ceretti". Vogue Italia. Retrieved April 20, 2017.
- ↑ "Top Model più influenti del pianeta: c'è anche una ragazza bresciana" [Top influential models of the planet: there is also a Brescia girl]. Brescia Today (in ಇಟಾಲಿಯನ್). February 15, 2017. Retrieved April 20, 2017.
- ↑ "Dolce&Gabbana anteprima video Make Up". Vogue Italia (in ಇಟಾಲಿಯನ್). 2015-04-26. Retrieved 2023-12-27.
- ↑ Vasta, Serena (2015-08-24). "La campagna eterea e misteriosa di Giorgio Armani per l'autunno inverno 2015-2016". Fashionblog (in ಇಟಾಲಿಯನ್). Retrieved 2023-12-27.
- ↑ Iorgi, Caterina Di (2017-01-06). "Fendi campagna pubblicitaria primavera estate 2017: protagoniste Gigi Hadid e Bella Hadid". Fashionblog (in ಇಟಾಲಿಯನ್). Retrieved 2023-12-27.
- ↑ Eglon, Mark (2016-07-08). "Steven Meisel and Vittoria Ceretti Deliver the Glamor on Vogue Italia's July Cover (Forum Buzz)". theFashionSpot (in ಅಮೆರಿಕನ್ ಇಂಗ್ಲಿಷ್). Retrieved 2023-12-27.
- ↑ "The evolution of Vittoria Ceretti". nss magazine (in ಇಂಗ್ಲಿಷ್). Retrieved 2023-12-27.
- ↑ "Meet the 9 gals behind British Vogue's new diverse cover making waves in the industry". www.dailyedge.ie. Retrieved 2023-12-27.
- ↑ https://models.com/work/chanel-beauty-chanel-beauty-holiday-2023-campaign
- ↑ "Q&A with Vittoria Ceretti". Vogue.it (in ಇಂಗ್ಲಿಷ್). 2016-09-26. Retrieved 2023-12-27.
- ↑ "Model To Know: Vittoria Ceretti - Elite Model Look". Elite Model Look (in ಇಂಗ್ಲಿಷ್). Retrieved April 20, 2017.
- ↑ Jensen, Erin (February 8, 2017). "'Vogue' highlights diverse models on its March cover for 125-year anniversary". USA TODAY (in ಇಂಗ್ಲಿಷ್). Retrieved April 20, 2017.
- ↑ Singer, Maya (February 8, 2017). "How Models Like Ashley Graham and Gigi Hadid Are Democratizing Fashion". Vogue (in ಇಂಗ್ಲಿಷ್). Retrieved April 20, 2017.
- ↑ "2018 diviso 20". Vogue Italia. Retrieved February 7, 2019.
- ↑ "Pucci continues its transformation with Vittoria Ceretti as muse". Luxus Plus. Retrieved 16 April 2024.
- ↑ Simon, Jade (March 1, 2017). "Five things to know about new face Vittoria Ceretti". Vogue Paris (in ಇಂಗ್ಲಿಷ್). Retrieved April 20, 2017.
- ↑ "Meet Vittoria Ceretti Husband: Is It True That The Pair Is Divorcing?". Eduvast. 7 September 2023.