ವಿಷಯಕ್ಕೆ ಹೋಗು

ವಿಲ್ಲಿಯಮ್ ಒ'ಬ್ರಿಯೆನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲ್ಲಿಯಮ್ ಒ'ಬ್ರಿಯೆನ್
William O'Brien in 1917

Member of Parliament
ಮತಕ್ಷೇತ್ರ Mallow (1883–1885)
South Tyrone (1885–1886)
North East Cork (1887–1892)
Cork City (1892–1895)
Cork City (1900–1909)
North East Cork (1910–1910)
Cork City (1910–1918)
ವೈಯಕ್ತಿಕ ಮಾಹಿತಿ
ಜನನ (೧೮೫೨-೧೦-೦೨)೨ ಅಕ್ಟೋಬರ್ ೧೮೫೨
Mallow, County Cork, Ireland
ಮರಣ 25 February 1928(1928-02-25) (aged 75)
London, England
ರಾಜಕೀಯ ಪಕ್ಷ

ವಿಲ್ಲಿಯಮ್ ಒ'ಬ್ರಿಯೆನ್ (2 ಒಕ್ಟೋಬರ್ 1852 – 25 ಫೆಬ್ರವರಿ 1928) ಐರ್ಲೆಂಡಿನ ಪ್ರಖ್ಯಾತ ಸ್ವಾತಂತ್ರ್ಯ ಹೋರಾಟಗಾರ, ಪತ್ರಿಕೋದ್ಯಮಿ, ಸಂಯುಕ್ತ ಐರಿಷ್ ಲೀಗಿನ ಸ್ಥಾಪಕ.

ಬಾಲ್ಯ ಮತ್ತು ಉದ್ಯೋಗ[ಬದಲಾಯಿಸಿ]

ಕೌರ್ಕ್ ಕೌಂಟಿಯಲ್ಲಿನ ಮಾಲೋ ಎಂಬಲ್ಲಿ ಜನಿಸಿದ. ಕಾರ್ಕಿನಲ್ಲಿ ಉನ್ನತ ಶಿಕ್ಷಣ ಪಡೆದು 1869ರಲ್ಲಿ ಪತ್ರಿಕೋದ್ಯಮವನ್ನವಲಂಬಿಸಿದ. ಯುನೈಟೆಡ್ ಐರ್ಲೆಂಡ್ ಪತ್ರಿಕೆಯ ಸಂಪಾದಕನಾದದ್ದು 1881ರಲ್ಲಿ. ಕೆಲವೇ ತಿಂಗಳುಗಳಲ್ಲಿ ಆ ಪತ್ರಿಕೆಯನ್ನು ಸರ್ಕಾರ ನಿಷೇಧಿಸಿತು. ಒಬ್ರಿಯೆನನಿಗೆ ಜೈಲುವಾಸ ಲಭ್ಯವಾಯಿತು. ಗುತ್ತಿಗೆ ನಿಷೇಧ ಪ್ರಣಾಳಿಕೆಯನ್ನು ಈತ ಹೊರಡಿಸಿದ್ದು ಆಗಲೇ. ಅನಂತರ 1883ರ ಚುನಾವಣೆಯಲ್ಲಿ ಮಾಲೋ ಕ್ಷೇತ್ರದಿಂದ ಪಾರ್ಲಿಮೆಂಟಿಗೆ ಆಯ್ಕೆ ಹೊಂದಿ, 1895ರ ವರೆಗೂ ಅದರ ಸದಸ್ಯನಾಗಿದ್ದ.

ಸಾಧನೆ[ಬದಲಾಯಿಸಿ]

ಬಡರೈತರ ಉಳಿವಿಗಾಗಿ ಜಮೀನುದಾರರ ವಿರುದ್ಧ ಹೋರಾಟ ನಡೆಸಿ, ಸಮನ್ವಯ ಮತ್ತು ಸಹಿಷ್ಣುತೆಯ ತತ್ತ್ವವನ್ನು ಜನತೆಯ ಮುಂದಿಟ್ಟು, ಎಲ್ಲವೂ ಐರ್ಲೆಂಡಿಗಾಗಿ ಎಂಬ ಸಂಘವನ್ನು (ಆಲ್ ಫಾರ್ ಐರ್ಲೆಂಡ್ ಯೂನಿಯನ್) ಸ್ಥಾಪಿಸಿದ. 1910ರಲ್ಲಿ ಕಾರ್ಕ್ ಕೌಂಟಿಯಿಂದ ಪಾರ್ಲಿಮೆಂಟಿಗೆ ಮತ್ತೆ ಚುನಾಯಿತನಾದರೂ ಆ ವೇಳೆಗೆ ಐರ್ಲೆಂಡಿನ ತರುಣ ಪೀಳಿಗೆಗೆ ಸೌಮ್ಯ ಮಾರ್ಗದಲ್ಲಿ ನಂಬಿಕೆ ಕಡಿಮೆಯಾಗಿತ್ತು. ಒಬ್ರಿಯೆನನ ಹಿಂಬಾಲಕರ ಸಂಖ್ಯೆ ಕಡಿಮೆಯಾಯಿತು. ಒಂದನೆಯ ಮಹಾಯುದ್ಧದಲ್ಲಿ ಐರ್ಲೆಂಡೂ ಭಾಗವಹಿಸಬೇಕೆಂದು ವಾದಿಸಿದ ಈತ ಆ ಯುದ್ಧಾನಂತರ ಸಾರ್ವಜನಿಕ ಜೀವನದಿಂದ ನಿವೃತ್ತನಾದ. ಈತ 1928 ಫೆಬ್ರವರಿ 25ರಲ್ಲಿ, ಲಂಡನ್ನಿನಲ್ಲಿ ನಿಧನಹೊಂದಿದನು.

ಮುಖ್ಯ ಬರವಣಿಗೆಗಳು[ಬದಲಾಯಿಸಿ]

  • ಕ್ರಿಸ್ಮಸ್ ಆನ್ ದಿ ಗಾಲ್ಟೀಸ್ (1878) ಬ್ಯಾಲಿಬೆಗ್ ವಿಲೇಜ್ ಐರಿಶ್ ಕ್ರಿಸ್ಮಸ್
  • ವೆನ್ ವಿ ವೇರ್ ಬಾಯ್ಸ್ (1890)
  • ಐರಿಶ್ ಐಡಿಯಾಸ್ (1893) ಐರಿಶ್ ಐಡಿಯಾಸ್ (1893)
  • ಎ ಕ್ವೀನ್ ಆಫ್ ಮೆನ್, ಗ್ರೇಸ್ ಒ'ಮ್ಯಾಲಿ (1898)
  • ರಿಕಲೆಕ್ಷನ್ಸ್ (1905)
  • ಅನ್ ಆಲಿವ್ ಬ್ರಾಂಚ್ ಇನ್ ಐರ್ಲೆಂಡ್ ಅಂದ್ ಇಟ್ಸ್ ಹಿಸ್ಟರಿ. ಲಂಡನ್: ಮ್ಯಾಕ್ಮಿಲನ್. 1910.
  • ಐರಿಶ್ ಕಾಸ್ ಮತ್ತು "ದಿ ಐರಿಶ್ ಕನ್ವೆನ್ಷನ್" . ಡಬ್ಲಿನ್: ಮೌನ್ಸೆಲ್ & ಕಂಪನಿ, ಲಿಮಿಟೆಡ್. 1917.
  • ಎ ಡೌನ್‍ಫಾಲ್ ಆಫ್ ಪಾರ್ಲಿಮೆಂಟೇರಿನಿಸಂ (1918)
  • ಇವನಿಂಗ್ ಮೆಮೊರಿಸ್ (1920)
  • ದಿ ರೆಸ್ಪಾನ್ಸಿಬಿಲಿಟಿ ಆಫ್ ಪಾರ್ಟಿಷನ್ (1921)
  • ದಿ ಐರಿಶ್ ರೆವೆಲ್ಯೂಷನ್ ಅಂಡ್ ಹೌ ಇಟ್ ಕೇಮ್ ಅಬೌಟ್ . ಲಂಡನ್: ಅಲೆನ್ & ಅನ್ವಿನ್. 1923.
  • ಎಡ್ಮಂಡ್ ಬರ್ಕ್ ಅಸ್ ಐರಿಶ್‌‍ಮ್ಯಾನ್ (1924)

ಉಲ್ಲೇಖಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: