ವೀರ ಕನ್ನಡಿಗ (ಚಲನಚಿತ್ರ)
ವೀರ ಕನ್ನಡಿಗ | |
---|---|
ನಿರ್ದೇಶನ | ಮೆಹೆರ್ ರಮೇಶ್ |
ನಿರ್ಮಾಪಕ | ಕೆ.ಎಸ್. ರಾಮ ರಾವ್ ಕೆ.ಎ. ವಲ್ಲಭ |
ಲೇಖಕ | ಪುರಿ ಜಗನ್ನಾಥ್ |
ಪಾತ್ರವರ್ಗ | ಪುನೀತ್ ರಾಜ್‌ಕುಮಾರ್ ಅನಿತಾ ಹಾಸನಂದನಿ |
ಸಂಗೀತ | ಚಕ್ರಿ |
ಬಿಡುಗಡೆಯಾಗಿದ್ದು | ೦೧ ಜನವರಿ ೨೦೦೪ |
ದೇಶ | ಭಾರತ |
ಭಾಷೆ | ಕನ್ನಡ |
"ವೀರ ಕನ್ನಡಿಗ" ೨೦೦೪ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರವಾಗಿದೆ. ಮೆಹೆರ್ ರಮೇಶ್ ನಿರ್ದೇಶನದ ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಮತ್ತು ಅನಿತಾ ಹಸನಂದಾನಿ, ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವು "ಆಂದ್ರವಾಲ" ಎಂಬ ಹೆಸರಿನಲ್ಲಿ ಕನ್ನಡದೊಂದಿಗೆ ಏಕಕಾಲದಲ್ಲಿ ಚಿತ್ರೀಕೃತಗೊಂಡಿತು. ಕನ್ನಡದಲ್ಲಿ ಪುನೀತ್ ರಾಜ್‌ಕುಮಾರ್ ಅಭಿನಯಿಸಿದ ಪಾತ್ರವನ್ನು ಜೂನಿಯರ್ ಎನ್ಟಿಆರ್ ತೆಲುಗಿನಲ್ಲಿ ನಿಭಾಯಿಸಿದ್ದಾರೆ."ವೀರ ಕನ್ನಡಿಗ" ಚಲನಚಿತ್ರವು ವಾಣಿಜ್ಯಿಕವಾಗಿ ಯಶಸ್ವಿಯಾಯಿತು.[೧][೨]
ಕಥಾ ಸಾರಾಂಶ
[ಬದಲಾಯಿಸಿ]ಮುಂಬೈ ಕೊಳೆಗೇರಿಯ ನಿವಾಸಿಗಳನ್ನು ಸದಾ ಸುರಕ್ಷಿತವಾಗಿ ಇಡುವ ಧ್ಯೇಯ ಹೊಂದಿರುವ ನಾಯಕ. ಅಲ್ಲಿನ ನಿವಾಸಿಗಳಿಗಾಗಿ ಶ್ರೇಯಕ್ಕಾಗಿ ಸದಾ ಶ್ರಮಿಸುತ್ತ ಇರುತ್ತಾನೆ. ಜೊತೆಗೆ ಆತ ತನ್ನ ತಂದೆಯ ಸಾವಿಗೆ ಕಾರಣರಾದವರನ್ನು ಸೇಡು ತೀರಿಸಿಕೊಳ್ಳುವ ಗುರಿಯನ್ನೂ ಹೊಂದಿದ್ದಾನೆ. ಆ ಗುರಿಯನ್ನು ತಲುಪುದರಲ್ಲಿ ನಾಯಕನು ಅಂತಿಮವಾಗಿ ಯಶಸ್ವಿಯಾಗುವನು.
ಪಾತ್ರವರ್ಗ
[ಬದಲಾಯಿಸಿ]- ಮುನ್ನಾ ಮತ್ತು ಶಂಕರ್ ಆಗಿ ಪುನೀತ್ ರಾಜ್‌ಕುಮಾರ್
- ಚಿತ್ರಾ[೨] ಆಗಿ ಅನಿತಾ ಹಾಸನಂದನಿ
- ಕೌಶಲ್ಯ
- ಲಯಾ
- ಬಡೇ ಮಿಯಾ ಆಗಿ ಸಯಾಜಿ ಶಿಂಧೆ
- ರಿಯಾಜ್ ಖಾನ್
- ಅವಿನಾಶ್
- ಬೆಸೆಂಟ್ ರವಿ
- ಬುಲೆಟ್ ಪ್ರಕಾಶ್
ನಿರ್ಮಾಣ ಮತ್ತು ಬಿಡುಗಡೆ
[ಬದಲಾಯಿಸಿ]ನಿರ್ದೇಶಕ ಪುರಿ ಜಗನ್ನಾಥ್‌ಗೆ ಸಹಾಯಕ ನಿರ್ದೇಶಕರಾಗಿದ್ದ ಮೆಹರ್ ರಮೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಪಾದಾರ್ಪಣೆ ಮಾಡಿದರು.[೩] ವೀರ ಕನ್ನಡಿಗ ಚಲನಚಿತ್ರದ ಚಿತ್ರಿಕರಣವು ೨೨ ಆಗಸ್ಟ್ ೨೦೦೩ರಂದು ಪ್ರಾರಂಭವಾಯಿತು ಮತ್ತು ಡಿಸೆಂಬರ್ ೨೫ ಕ್ಕೆ ಪೂರ್ಣಗೊಂಡಿತು. ಜನವರಿ ೨ ೨೦೦೪ರಂದು ಚಿತ್ರ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡಿತು.[೪] The movie completed 100 days.[೫]
ಹಾಡುಗಳು
[ಬದಲಾಯಿಸಿ]ಈ ಚಿತ್ರದ ಸಂಗೀತ ಸಂಯೋಜನೆಯು ಚಕ್ರಿಯವರದ್ದಾಗಿದೆ.
ಸಂ. | ಹಾಡು | Singer(s) | ಸಮಯ |
---|---|---|---|
1. | "ಅಡ್ಡದಲ್ಲಿ ಕಿಂಗು ನಾನು" | ಶಂಕರ್ ಮಹಾದೇವನ್, ಕೌಸಲ್ಯ | |
2. | "ಜೀವ ಕನ್ನಡ ದೇಹ ಕನ್ನಡ" | ಶಂಕರ್ ಮಹಾದೇವನ್ | |
3. | "ಮಸ್ತು ಹುಡುಗಿಯೆ" | ಚಕ್ರಿ, ಕೌಸಲ್ಯ | |
4. | "ನೈರೆ ನೈರೆ" | ಪುನೀತ್ ರಾಜ್‌ಕುಮಾರ್ | |
5. | "ಸೈ ಸೈ ಮೊನಾಲಿಸಾ" | ರವಿ ವರ್ಮ, ಕೌಸಲ್ಯ | |
6. | "ಸಿಕ್ಕು ಸಿಕ್ಕು ಸುಂದರಿ" | ಚಕ್ರಿ,ಕೌಸಲ್ಯ |
ಉಲ್ಲೇಖಗಳು
[ಬದಲಾಯಿಸಿ]- ↑ "Veera Kannadiga (2004) | Veera Kannadiga Movie | Veera Kannadiga Kannada Movie Cast & Crew, Release Date, Review, Photos, Videos". FilmiBeat (in ಇಂಗ್ಲಿಷ್). Retrieved 2019-03-10.
- ↑ ೨.೦ ೨.೧ "Meticulous planning in Sandalwood amazes Anita Hassanandani". The Times of India (in ಇಂಗ್ಲಿಷ್). Retrieved 2019-03-10.
- ↑ "Meher Ramesh - Telugu Cinema interview - Telugu film director".
- ↑ Prasad, Sujyothi N. (4 January 2004). "Veera Kannadiga - Kannada (Nanda, Nartaki, Balaji)". Deccan Herald. Archived from the original on 29 June 2004. Retrieved 23 November 2021.
- ↑ "ಆರ್ಕೈವ್ ನಕಲು". Archived from the original on 2022-04-09. Retrieved 2022-07-01.