ವಿಷಯಕ್ಕೆ ಹೋಗು

ವೃಶ್ಚಿಕರಾಶಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬರೀ ಕಣ್ಣಿಗೆ ಗೋಚರವಾದಾಗ ವೃಶ್ಚಿಕರಾಶಿ ನಕ್ಷತ್ರಪುಂಜ (ನಕ್ಷತ್ರಪುಂಜ ರೇಖೆಗಳನ್ನು ಬರೆಯಾಲಾಗಿದೆ).

ವೃಶ್ಚಿಕ ರಾಶಿಯು ಸೂರ್ಯ, ಚಂದ್ರ ಮತ್ತು ಗ್ರಹಗಳ ಕಕ್ಷೆಗಳ ಸೀಮಿತವಾಗಿರುವಂತೆ ಭಾಸವಾಗುವ 12 ನಕ್ಷತ್ರಪುಂಜಗಳ (ಇವುಗಳಿಗೆ ರಾಶಿಗಳೆಂದು ಹೆಸರು) ಇಕ್ಕಟ್ಟು ಪಟ್ಟಿಯಲ್ಲಿ ಕಾಣುವ ಮತ್ತು ಹೆಸರಿಗೂ ಆಕಾರಕ್ಕೂ ಸಾಮ್ಯವಿರುವ ನಕ್ಷತ್ರರಾಶಿ (ಸ್ಕಾರ್ಪಿಯಸ್). ಈ ಇಕ್ಕಟ್ಟು ಪಟ್ಟಿಯ ಹೆಸರು ರಾಶಿಚಕ್ರ. ಮೇಷದಿಂದ ತೊಡಗುವ ರಾಶಿಚಕ್ರದಲ್ಲಿ 7 ನೆಯದು ವೃಶ್ಚಿಕ.

ಮುಖ್ಯ ನಕ್ಷತ್ರಗಳು

[ಬದಲಾಯಿಸಿ]

ಇದರ ವಿಶಾಲ ಆಕಾರವನ್ನು ಲೇಪಿಸುವ ಸುಮಾರು 12-13 ನಕ್ಷತ್ರಗಳ ಪೈಕಿ ಎದ್ದು ಕಾಣುವುದು ಜ್ಯೇಷ್ಠಾ (ಅಂಟಾರೆಸ್). ಇದೊಂದು ರಕ್ತದೈತ್ಯ ನಕ್ಷತ್ರ (ರೆಡ್ ಜಯಂಟ್). ಚೇಳಿನ (ವೃಶ್ಚಿಕ) ತಲೆಭಾಗದ (ಅಂದರೆ ಪಶ್ಚಿಮ ಕಡೆಗಿರುವ) ಸುಮಾರು 3 ನಕ್ಷತ್ರಗಳ ಬಾಗು ರೇಖೆಗೆ ಅನೂರಾಧಾ (ಅಕ್ರ್ಯಾಬ್) ಎಂದೂ ಕೊಂಡಿಬಾಲ ಭಾಗದ ಸುಮಾರು 5 ನಕ್ಷತ್ರಗಳಿಗೆ ಒಟ್ಟಾಗಿ ಮೂಲಾ (ಶೌಲಾ) ಎಂದು ಹೆಸರು.

ಜ್ಯೇಷ್ಠಾ ಸೂರ್ಯನಿಂದ 550 ಜ್ಯೋತಿರ್ವರ್ಷ ದೂರದಲ್ಲಿದೆ.[] ಇದೊಂದು ರಕ್ತ ಅತಿದೈತ್ಯ ತಾರೆ. ಸೌರವ್ಯಾಸದ 300 ಮಡಿ ಇದೆ ಇದರ ವ್ಯಾಸ! ಉಜ್ಜ್ವಲತಾಂಕ 0.6-1.6ರ ನಡುವೆ ವ್ಯತ್ಯಯವಾಗುತ್ತದೆ.[] ಇದಕ್ಕೊಂದು ಉಜ್ಜ್ವಲತಾಂಕ 5.5 ಇರುವ ಸಂಗಾತಿ ನಕ್ಷತ್ರವೂ ಇದೆ.[]

ಉಲ್ಲೇಖಗಳು

[ಬದಲಾಯಿಸಿ]
  1. van Leeuwen, F. (November 2007). "Validation of the new Hipparcos reduction". Astronomy and Astrophysics. 474 (2): 653–664. arXiv:0708.1752. Bibcode:2007A&A...474..653V. doi:10.1051/0004-6361:20078357. S2CID 18759600.
  2. Kiss, L. L.; Szabo, G. M.; Bedding, T. R. (2006). "Variability in red supergiant stars: pulsations, long secondary periods and convection noise". Monthly Notices of the Royal Astronomical Society. 372 (4): 1721–1734. arXiv:astro-ph/0608438. Bibcode:2006MNRAS.372.1721K. doi:10.1111/j.1365-2966.2006.10973.x. ISSN 0035-8711. S2CID 5203133.{{cite journal}}: CS1 maint: unflagged free DOI (link)
  3. Hoffleit, D.; Warren, W. H. (1995). "VizieR Online Data Catalog: Bright Star Catalogue, 5th Revised Ed. (Hoffleit+, 1991)". VizieR On-line Data Catalog: V/50. Originally Published in: 1964BS....C......0H. 5050. Bibcode:1995yCat.5050....0H. Vizier database entry CDS. Accessed on line September 07, 2012


ಹೊರಗಿನ ಕೊಂಡಿಗಳು

[ಬದಲಾಯಿಸಿ]
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: