ವಿಷಯಕ್ಕೆ ಹೋಗು

ವೆಬ್‌ಎಂ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
WebM
Filename extension
.webm
Internet media type
video/webm
audio/webm
Developed byGoogle, based on developments of On2, Xiph, and Matroska
Initial release2010-05-19[]
Type of formatMedia container
Container forVP8 (video)
Vorbis (audio)
Extended fromMatroska
Free format?Yes. Three-clause BSD license with royalty-free patent license[]
WebsiteThe WebM Project

ವೆಬ್‌ಎಂ' ಒಂದು ಶ್ರಾವ್ಯ-ದೃಶ್ಯ ಕಾರ್ಯಕ್ರಮ ವ್ಯವಸ್ಥೆಯಾಗಿದ್ದು, ಇದನ್ನು ರಾಯಧನ-ಮುಕ್ತ, ಉನ್ನತ-ಗುಣಮಟ್ಟದ ಮುಕ್ತ ವೀಡಿಯೋ ಕಾಂಪ್ರೆಶ್ಶನ್ ವ್ಯವಸ್ಥೆಯೊಂದನ್ನು ಎಚ್‌ಟಿಎಂಎಲ್‌೫ ವೀಡಿಯೋದೊಂದಿಗೆ ಬಳಸಲು ನೀಡುವುದಕ್ಕಾಗಿ ರೂಪಿಸಲಾಗಿದೆ. ಈ ಪ್ರೊಜೆಕ್ಟ್‌ ಅಭಿವೃದ್ಧಿಪಡಿಸಲು ಗೂಗಲ್ ಪ್ರಾಯೋಜಕತ್ವ ನೀಡಿದೆ.

ಒಂದು ವೆಬ್‌ಎಂ ಫೈಲ್‌ನಲ್ಲಿ ವಿಪಿ೮ ವೀಡಿಯೋ ಮತ್ತು ವೊರ್ಬಿಸ್ ಆಡಿಯೋ ವಾಹಿನಿಗಳಿದ್ದು, ಇದು ಮ್ಯಾಟ್ರೋಸ್ಕಾ ಪ್ರೊಫೈಲ್‌ನ ಮೇಲೆ ಆಧಾರಿತಗೊಂಡಿರುವ ಧಾರಕದಲ್ಲಿ ಇರುತ್ತದೆ.[][][] ಈ ಪ್ರೊಜೆಕ್ಟ್ ವೆಬ್‌ಎಂ ಸಂಬಂಧಿತ ಸಾಫ್ಟ್‌ವೇರನ್ನು BSD ಲೈಸೆನ್ಸ್ ಅಡಿಯಲ್ಲಿ ಬಿಡುಗಡೆ ಮಾಡುತ್ತದೆ ಮತ್ತು ಜಾಗತೀಕವಾಗಿ ಎಲ್ಲಾ ಬಕೆದಾರರಿಗೂ ಇದು ಯಾವುದೇ ಮೀಸಲಾತಿಯಿಲ್ಲದ, ಬೆಲೆಯಿಲ್ಲದ, ರಾಯಧನ-ಮುಕ್ತ ಪೇಟೆಂಟ್ ಲೈಸೆನ್ಸ್ ನೀಡುತ್ತದೆ.

ವೆಬ್‌ಎಂ ವೀಡಿಯೊ

ಮಾರಾಟಗಾರರ ಬೆಂಬಲ

[ಬದಲಾಯಿಸಿ]

ಸಾಫ್ಟ್‌ವೇರ್‌

[ಬದಲಾಯಿಸಿ]

ಮೊಜಿಲ್ಲಾ ಫೈರ್‌ಫಾಕ್ಸ್‌,[][] ಒಪೇರಾ,[][] ಮತ್ತು ಗೂಗಲ್ ಕ್ರೋಮ್‌[೧೦] ಗಳ ಬೆಂಬಲವನ್ನು ೨೦೧೦ ಗೂಗಲ್ ಐ/ಒ ಸಮ್ಮೇಳನದಲ್ಲಿ ಘೋಷಿಸಲಾಯಿತು. ಇಂಟರ್ನೆಟ್ ಎಕ್ಸ್‌ಪ್ಲೋರರ್‌ ೯ ಸಹಾ ವೆಬ್‌ಎಂ ಫೈಲ್‌ಗಳನ್ನು, ಒಂದುವೇಳೆ ವಿಪಿ೮ ಕೊಡೆಕ್ ಅನ್ನು ಸ್ಥಳೀಯವಾಗಿ ಸ್ಥಾಪಿಸಿದಲ್ಲಿ, ಬೆಂಬಲಿಸಲು ಸಾಧ್ಯವಿದೆ.[೧೧] ಡೆಸ್ಕ್‌ಟಾಪ್ ಮೇಲಿರುವ ಸಫಾರಿಯು ಕ್ವಿಕ್‌ಟೈಮ್‌ ನಲ್ಲಿ ಸ್ಥಾಪಿಸಿದ ಯಾವುದೇ ಕೊಡೆಕ್ ಅನ್ನು ಬೆಂಬಲಿಸುತ್ತದೆ,[೧೨] ಮತ್ತು ಆ ಮೂಲಕ ಭವಿಷ್ಯದ ವೆಬ್‌ಎಂ ಪ್ಲೇಬ್ಯಾಕ್ ಅನ್ನು ಪೆರಿಯನ್‌ನಂತಹ ಕ್ವಿಕ್‌ಟೈಮ್‌ ಕೊಡೆಕ್ ಅಂಶಗಳನ್ನು ಬಳಸಿ ಕಾರ್ಯನಿರ್ವಹಿಸುವಂತೆ ಮಾಡುತ್ತದೆ.[೧೩] ಎಪಿಫ್ಯಾನಿ ಸಹಾ ವೆಬ್‌ಎಂ ಅನ್ನು ಜಿಸ್ಟ್ರೀಮರ್ ಮಲ್ಟಿಮೀಡಿಯಾ ಫ್ರೇಂ‌ವರ್ಕ್ ಮೂಲಕ ಬೆಂಬಲಿಸುತ್ತದೆ.[೧೪]

ಅಡೋಬ್‌ಅಡೋಬ್ ಸಿಸ್ಟಮ್ಸ್ ಫ್ಲ್ಯಾಶ್‌ ಪ್ಲೇಯರ್‌ ವಿಪಿ೮ ಅನ್ನು ಬೆಂಬಲಿಸುವಂತೆ ನವೀಕರಿಸಲಾಗುತ್ತದೆ ಎಂದು ಘೋಷಿಸಿತು, ಆದರೆ ಅದು ವೊರ್ಬಿಸ್ ಅಥವಾ ಮ್ಯಾಟ್ರೋಸ್ಕಾ-ಆಧಾರಿತ ವೆಬ್‌ಎಂ ಸಂಗ್ರಾಹಕಗಳಿಗೆ ಬೆಂಬಲವನ್ನು ಘೋಷಿಸಿಲ್ಲ.[][೧೫]

ವಿಎಲ್‌ಸಿ,[೧೬][೧೭] ಮೈರೊ,[೧೮][೧೯] ಮೂವಿಡಾ[೨೦] ಮತ್ತು ವಿನ್ಯಾಂಪ್,[೨೧][೨೨] ಗಳಂತಹ ಮೀಡಿಯಾ ಪ್ಲೇಯರ್‌ಗಳು ಬೆಂಬಲ ಘೋಷಿಸಿವೆ. ವೆಬ್‌ಎಂ ಫೈಲುಗಳನ್ನು ಪ್ಲೇ ಮಾಡಲು ಎಂಪ್ಲೇಯರ್‌ ಸ್ಥಳೀಯ ಬೆಂಬಲವನ್ನು ಹೊಂದಿದೆ.[೨೩] ಲಿಬ್‌ವಿಪಿಎಸ್ ಬೆಂಬಲದೊಂದಿಗೆ ರಚಿಸಿದಾಗ ಎಫ್‌ಎಫ್‌ಎಂಪಿಇಜಿ ಈಗ ವಿಪಿ೮ ವೀಡಿಯೋಗಳನ್ನು ಎನ್‌ಕೋಡ್ ಮತ್ತು ಡಿಕೋಡ್ ಮಾಡಬಲ್ಲುದಾಗಿದೆ. ಅಷ್ಟೇ ಅಲ್ಲದೇ ಮ್ಯುಕ್ಸ್/ಡಿಮ್ಯುಕ್ಸ್ ವೆಬ್‌ಎಂ-ಕಂಪ್ಲೈಂಟ್ ಫೈಲುಗಳನ್ನು ಕೂಡಾ.[೨೪] ಜುಲೈ ೨೩, ೨೦೧೦ ರಂದು ಎಫ್‌ಎಫ್‌ಎಂಪಿಇಜಿ ತಂಡದ ಜೇಸನ್ ಗ್ಯಾರಟ್-ಗ್ಲಾಸರ್, ರೊನಾಲ್ಡ್ ಬುಲ್ಟೀ, ಮತ್ತು ಡೇವಿಡ್ ಕಾನ್ರಾಡ್ ಎಫ್‌ಎಫ್ವಿಪಿ೮ ಡಿಕೋಡರ್ ಅನ್ನು ಘೋಷಿಸಿದರು. ಪರೀಕ್ಷೆಯ ಮೂಲಕ ಅವರು ಎಫ್‌ಎಫ್‌‍ವಿಪಿ೮ ಗೂಗಲ್‌ನ ಲಿಬ್‌ವಿಪಿಎಕ್ಸ್‌ ಡಿಕೋಡರ್‌ಗಿಂತ ಹೆಚ್ಚು ವೇಗದ್ದಾಗಿದೆ ಎಂದು ಹೇಳಿದರು.[೨೫][೨೬] ಮ್ಯಾಟ್ರೋಸ್ಕಾದ ಪ್ರಸಿದ್ಧ ರಚನಾ ಸಾಧನಗಳಾದ ಎಂಕೆವಿಟೂಲ್‌ನಿಕ್ಸ್ ಹೊಸ ರೀತಿಯಲ್ಲಿ ಮಲ್ಟಿಪ್ಲೆಕ್ಸಿಂಗ್‌/ಡಿಮಲ್ಟಿಪ್ಲೆಕ್ಸಿಂಗ್‌ ವೆಬ್‌ಎಂ-ಕಂಪ್ಲೇಂಟ್ ಫೈಲುಗಳಿಗೆ ಬೆಂಬಲವನ್ನು ಸಾಧಿಸಿವೆ.[೨೭] ಹಾಲಿ ಮೀಡಿಯಾ ಸ್ಪ್ಲಿಟ್ಟರ್ ವೆಬ್‌ಎಂ ಮ್ಯುಕ್ಸಿಂಗ್/ಡಿಮ್ಯುಕ್ಸಿಂಗ್‌ಗೆ ಬೆಂಬಲವನ್ನು ಘೋಷಿಸಿದೆ.[೨೭]

ಎಂಪಿಸಿ-ಎಚ್‌ಸಿ ಎಸ್‌ವಿಎನ್‌ ೨೦೭೧ ಹಾಗೂ ನಂತರದ ಬಿಲ್ಡ್‌ಗಳ ನಂತರದಲ್ಲಿ ಈಗ ವೆಬ್‌ಎಂ ಪ್ಲೇಬ್ಯಾಕ್‌ ಅನ್ನು ಎಫ್‌ಎಫ್‌ಎಂಪಿಇಜಿ ಕೋಡ್ ಆಧಾರಿತವಾದ ಆಂತರಿಕ ವಿಪಿ೮ ಡಿಕೋಡರ್‌ನೊಂದಿಗೆ ಬೆಂಬಲಿಸುತ್ತದೆ.[೨೫][೨೮] ಎಂಪಿಸಿ-ಎಚ್‌ಸಿಯ ೧.೪.೨೪೯೯.೦ ಮತ್ತು ನಂತರದ ಆವೃತ್ತಿಗಳ ಇತ್ತೀಚಿನ ಅಧಿಕೃತ ಸ್ಥಿರ ಬಿಡುಗಡೆಗಳು ವೆಬ್‌ಎಂಗೆ ಸಂಪೂರ್ಣ ಡಿಕೋಡಿಂಗ್ ಬೆಂಬಲವನ್ನು ಹೊಂದಿವೆ.[೨೯]

ಅಂಡ್ರಾಯಿಡ್‌ ಆವೃತ್ತಿ ೨.೩ - ಜಿಂಜರ್‌ಬ್ರೆಡ್ ಅಧಿಕೃತವಾಗಿ ವೆಬ್‌ಎಂ-ಸಕ್ರಿಯಗೊಳಿಸಲ್ಪಟ್ಟಿದ್ದು,[೩೦] ಅದನ್ನು ಮೊದಲು ನೆಕ್ಸಸ್ ಎಸ್ ಮೊಬೈಲ್ ಫೋನ್ ಮೂಲಕ ಬಿಡುಗಡೆ ಮಾಡಲಾಯಿತು.

ಹಾರ್ಡ್‌ವೇರ್‌

[ಬದಲಾಯಿಸಿ]

ಎ‌ಎಂಡಿ, ಎಆರ್‌ಎಂ, ಮತ್ತು ಬ್ರಾಡ್‌ಕಾಂ ವೆಬ್‌ಎಂ ಸ್ವರೂಪದ ಹಾರ್ಡ್‌ವೇರ್ ವೇಗೋತ್ಕರ್ಷಕ್ಕೆ ಬೆಂಬಲ ಸೂಚಿಸಿವೆ.[೩೧][೩೨] ಇಂಟೆಲ್ ಸಹಾ ಒಂದು ವೇಳೆ ಈ ಸ್ವರೂಪವು ಪ್ರಸಿದ್ಧಿಗೊಂಡರ್ರೆ ವೆಬ್‌ಎಂಗಾಗಿ ಹಾರ್ಡ್‌ವೇ ಆಧಾರಿತ ವೇಗೋತ್ಕರ್ಷವನ್ನು ತನ್ನ ಆ‍ಯ್ಟಮ್-ಆಧಾರಿತ ಟಿವಿ ಚಿಪ್ಸ್‌ಗಾಗಿ ಬಳಸಲು ಚಿಂತಿಸುತ್ತಿದೆ.[೩೩] ಕ್ವಾಲ್‌ಕಾಮ್‌ ಮತ್ತು ಟೆಕ್ಸಾಸ್ ಇನ್ಸ್‌ಟ್ರುಮೆಂಟ್ಸ್ ಸಹಾ ಬೆಂಬಲವನ್ನು ಘೋಷಿಸಿವೆ[೩೪][೩೫], ಏಕೆಂದರೆ ಟಿಐ ಒಎಂಎಪಿ ಪ್ರೊಸೆಸರ್‌ಗೆ ಸ್ಥಳಿಯ ಬೆಂಬಲವು ದೊರೆತಿದೆ.[೩೬] ಚಿಪ್&ಮೀಡಿಯಾ ಸಂಪೂರ್ಣವಾಗಿ ಹಾರ್ಡ್‌ವೇರ್ ಡಿಕೋಡರ್ ಅನ್ನು ವಿಪಿ೮ ಗಾಗಿ ಘೋಷಿಸಿದ್ದು, ಅದು ಸಂಪೂರ್ಣ ಎಚ್‌ಡಿ ರೆಸೊಲ್ಯೂಶನ್ ವಿಪಿ೮ ಸ್ಟ್ರೀಮ್‌ಗಳನ್ನು ಪ್ರತೀ ಸೆಕೆಂಡಿಗೆ ೬೦ ಫ್ರೇಮುಗಳಂತೆ ಡಿಕೋಡ್ ಮಾಡುವ ಸಾಧ್ಯತೆ ಹೊಂದಿದೆ.[೩೭]

ಎನ್‌ವಿಡಿಯಾ ಸಹಾ ವಿಪಿ೮ ಬಳಕೆಗೆ ತಾವೂ ಬೆಂಬಲವನ್ನು ಸೂಚಿಸುತ್ತೇವೆಂದು ಹೇಳಿದ್ದಾರಾದರೂ ಅವರಿಗೆ ಹಾರ್ಡ್‌ವೇರ್ ಬೆಂಬಲ ನೀಡುವ ಯಾವುದೇ ನಿರ್ಧಿಷ್ಟ ಯೋಜನೆಗಳಿಲ್ಲ.[೩೮]

ಜನವರಿ ೭ ೨೦೧೧ ರಂದು ರಾಕ್‌ಚಿಪ್‌ ೧೦೮೦ಪಿ ವಿಪಿ೮ ಡಿಕೋಡಿಂಗ್‌ನ ಸಂಪೂರ್ಣ ಹಾರ್ಡ್‌ವೇರ್ ಕಾರ್ಯರೂಪಣೆಗಾಗಿ ಜಗತ್ತಿನ ಮೊದಲ ಚಿಪ್‌ ಅನ್ನು ಬಿಡುಗಡೆ ಮಾಡಿತು. ಆರ್‌ಕೆ೨೯ಎಕ್ಸ್‌ಎಕ್ಸ್ ಚಿಪ್‌ನಲ್ಲಿನ ವೀಡಿಯೋ ವೇಗೋತ್ಕರ್ಷವನ್ನು ವೆಬ್‌ಎಂ ಪ್ರೊಜೆಕ್ಟ್‌‍ನ ಜಿ-ಸರಣಿ ೧ ಹಾರ್ಡ್‌ವೇರ್ ಡಿಕೋಡರ್ ಐಪಿ ನಿರ್ವಹಿಸುತ್ತಿದೆ.[೩೯][೩೯]

ಸೇವೆಗಳು

[ಬದಲಾಯಿಸಿ]

ಯೂಟ್ಯೂಬ್ ಈಗ ವೆಬ್‌ಎಂ ವೀಡಿಯೋಗಳನ್ನು ತನ್ನ ಎಚ್‌ಟಿಎಂಎಲ್‌೫ ಪ್ಲೇಯರ್ ಪ್ರಯೋಗದ ಭಾಗವಾಗಿ ನೀಡುತ್ತಿದೆ.[೪೦] ೭೨೦p ಮತ್ತು ಹೆಚ್ಚಿನ ರೆಸೊಲ್ಯೂಶನ್ ಇರುವ ಎಲ್ಲಾ ಅಪ್ಲೋಡ್ ಮಾಡಿದ ವೀಡಿಯೋಗಳೂ ವೆಬ್‌ಎಂ ನಿಂದ ೪೮೦ಪಿ ಮತ್ತು ೭೨೦ಪಿ ನಲ್ಲಿ ಎನ್‌ಕೋಡ್ ಮಾಡಲ್ಪಟ್ಟಿದ್ದು, ಉಳಿದ ರೆಸೊಲ್ಯೂಶನ್‌ಗಳು ಸಧ್ಯದಲ್ಲಿಯೇ ಬರಲಿವೆ.[೪೧][೪೨] ಯೂಟ್ಯೂಬ್‌ ತನ್ನ ಸಂಪೂರ್ಣ ವೀಡಿಯೋ ಪೋರ್ಟ್‌ಫೋಲಿಯೋವನ್ನು ವೆಬ್‌ಎಂ ನಲ್ಲಿ ಎನ್‌ಕೋಡ್ ಮಾಡುವ ನಿರ್ಧಾರ ಹೊಂದಿದೆ.[೪೧][೪೨]

ಸೋರ್‌ಸನ್ ಮೀಡಿಯಾದ ಆನ್‌ಲೈನ್ ಎನ್‌ಕೋಡಿಂಗ್ ಪ್ಲ್ಯಾಟ್‌ಫಾರ್ಮ್ ಈಗ ವಿಪಿ೮ ಮತ್ತು ವೆಬ್‌ಎಂ ಅನ್ನು ಬೆಂಬಲಿಸುತ್ತದೆ.[೪೩]

ಸ್ಕೈಪ್ ತನ್ನ ಸ್ಕೈಪ್ ೫.೦ ಸಾಫ್ಟ್‌‍ವೇರ್‌ಗೆ ವಿಪಿ೮ ಕೊಡೆಕ್ ಅನ್ನು ಬಳಸಿಕೊಂಡಿದೆ.[೪೪]

ಲಾಜಿಟೆಕ್ ತನ್ನ ವೀಡಿಯೋ ಕರೆ ಸೇವೆಯ ಭಾಗವಾಗಿ ವೆಬ್‌ಎಂ ಅನ್ನು ಬಳಸುವ ಯೋಜನೆ ಹೊಂದಿದೆ.[೪೫]

ಪರವಾನಗಿ ಪಡೆಯುವಿಕೆ

[ಬದಲಾಯಿಸಿ]

ಮಧ್ಯ-೨೦೧೦ ರಲ್ಲಿ ಓಪನ್ ಸೋರ್ಸ್ ಇನಿಶಿಯೇಟಿವ್‌ನ ಮಂಡಳಿಯ ಸದಸ್ಯನಾದ ಸೈಮನ್ ಫಿಪ್ಸ್ ಎಂಬಾತ ಮೂಲ ವೆಬ್‌ಎಂ ಪರವಾನಗಿಯು ಒಂದು ಮುಕ್ತ-ಮೂಲ ಪರವಾನಗಿ ಹೌದೇ ಎಂಬ ಕುರಿತು ಅನುಮಾನ ವ್ಯಕ್ತಪಡಿಸಿದ. ಏಕೆಂದರೆ ಇದನ್ನು ಒಎಸ್‌ಐಗೆ ಒಪ್ಪಿಗೆಗಾಗಿ ಸಲ್ಲಿಸಲಾಗಿರಲಿಲ್ಲ.[೪೬] ಅದಕ್ಕೆ ಪ್ರತಿಕ್ರಿಯೆಯಾಗಿ, ವೆಬ್‌ಎಂ ಪ್ರೊಜೆಕ್ಟ್ ಪೇಟೆಂಟ್‌ಅನ್ನು ಕೃತಿಸ್ವಾಮ್ಯದಿಂದ ತೆಗೆದುಹಾಕಿತು, ಮತ್ತು ಆ ಕೋಡ್‌ ಅನ್ನು ಒಂದು ಪ್ರಮಾಣಿತ ಬಿಎಸ್‌ಡಿ ಪರವಾನಗಿ ಮತ್ತು ಪೇಟೆಂಟ್‌ಗಳ ಅಡಿಯಲ್ಲಿ ಒಂದು ಪ್ರತ್ಯೇಕ ಗ್ರ್ಯಾಂಟ್‌ನ ಅಡಿಯಲ್ಲಿ ನೀಡಿತು.[೪೭] ಫ್ರೀ ಸಾಫ್ಟ್‌ವೇರ್ ಡೆಫಿನಿಶನ್ ನಿರ್ವಹಿಸುತ್ತಿರುವ ಫ್ರೀ ಸಾಫ್ಟ್‌ವೇರ್ ಫೌಂಡೇಶನ್ ವೆಬ್‌ಎಂ ಮತ್ತು ವಿಪಿ೮[೪೮] ಗೆ ತನ್ನ ಒಪ್ಪಿಗೆಯನ್ನು ನೀಡಿತು ಮತ್ತು ಈ ಸಾಫ್ಟ್‌ವೇರ್‌ನ ಪರವಾನಗಿಯನ್ನು ಜಿಎನ್‌ಯು ಜನರಲ್ ಪಬ್ಲಿಕ್ ಲೈಸೆನ್ಸ್‌ಗೆ ಹೊಂದಿರಬೇಕು ಎಂದು ಹೇಳಿತು.[೪೯][೫೦]. ಜನವರಿ ೧೯, ೨೦೧೧ ರಂದು ಫ್ರೀ ಸಾಫ್ಟ್‌ವೇರ್ ಫೌಂಡೇಶನ್‌ ವೆಬ್‌ಎಂ ಯೋಜನೆಗೆ ತನ್ನ ಅಧಿಕೃತ ಬೆಂಬಲವನ್ನು ವ್ಯಕ್ತಪಡಿಸಿತು.[೫೧]

ಗೂಗಲ್ ಮತ್ತೆ ತೆಗೆಯಲಾಗದಂತೆ ವಿಪಿ೮ ಮೇಲಿನ ತನ್ನ ಎಲ್ಲಾ ಪೇಟೆಂಟ್‌ಗಳನ್ನು ರಾಯಧನ-ರಹಿತ ಸ್ವರೂಪದಲ್ಲಿ ಬಿಡುಗಡೆಗೊಳಿಸಿತಾದರೂ,[೫೨] H.೨೬೪ ಪೇಟೆಂಟ್ ಪೂಲ್‌ನ ಪರವಾನಗಿದಾರರಾದ ಎಂಪಿಇಜಿ ಎಲ್‌ಎ ವಿಪಿ೮ ಗಾಗಿ ಪೇಟೆಂಟ್ ಪೂಲ್‌ ಅನ್ನು ರಚಿಸಲು ಆಸಕ್ತಿ ತೋರಿಸಿದ್ದಾರೆ.[೫೩][೫೪] H.೨೬೪ ಎನ್‌ಕೋಡರ್ x೨೬೪ ನ ಪ್ರಮುಖ ಅಭಿವರ್ಧಕನಾದ ಜೇಸನ್ ಗ್ಯಾರೆಟ್-ಗ್ಲೇಸರ್ ವಿಪಿ೮ ಮತ್ತು H.೨೬೪ ಗಳ ನಡುವಿನ ಸಾಮ್ಯತೆಯ ಕುರಿತು ತನ್ನ ಕಾಳಜಿ ವ್ಯಕ್ತಪಡಿಸಿದ.[೫೫] ಅದಕ್ಕೆ ಪ್ರತಿಯಾಗಿ, ಇತರೆ ಸಂಶೋಧಕರು ಯಾವುದೇ ಎಂಪಿಇಜಿ ಎಲ್‌ಎ ಪೇಟೆಂಟ್‌ಗಳ ಹೊರತಾಗಿ ಕಾರ್ಯನಿರ್ವಹಿಸಲು ಒಂದು ನಿರ್ಧಿಷ್ಟ ಪ್ರಯತ್ನ ಮಾಡಿದ ಕುರಿತು ಸಾಕ್ಷಿಗಳನ್ನು ನೀಡುತ್ತಾರೆ.[೫೬]

ಇವನ್ನೂ ಗಮನಿಸಿ

[ಬದಲಾಯಿಸಿ]
  • ವೆಬ್‌ಪಿ
  • ಥಿಯೋರಾ
  • H.೨೬೪/MPEG-೪ AVC
  • ಆನ್‌೨ ಟೆಕ್ನಾಲಜೀಸ್, ವಿಪಿ೮ ಯ ಮೂಲ
  • ಕಂಟೇನರ್ ಫಾರ್ಮೆಟ್‌ಗಳ ಹೋಲಿಕೆ
  • ಎಚ್‌ಟಿಎಂಎಲ್‌೫ ವೀಡಿಯೋ ಫಾರ್ಮ್ಯಾಟ್ ಡಿಬೇಟ್

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Patel, Nilay (2010-05-19), Google launches open WebM web video format based on VP8, Engadget
  2. The WebM Project: License
  3. Doig, Jeremy; Jazayeri, Mike (2010-05-19), Introducing WebM, an open web media project, WebM Project, retrieved 2010-05-19
  4. "WebM FAQ". 2010-05-19.
  5. Montgomery, Chris (2010-05-19), Xiph.Org announces support for the WebM open media project, Xiph, retrieved 2010-05-20
  6. Shaver, Mike (2010-05-19), Open Web, Open Video and WebM, Mozilla
  7. Blizzard, Christopher (2010-05-19), Firefox, YouTube and WebM, Mozilla
  8. Lie, Håkon Wium (2010-05-19), Welcome, WebM <video>!, Opera, archived from the original on 2011-03-21, retrieved 2011-02-07
  9. Mills, Chris (2010-05-19), Opera supports the WebM video format, Opera
  10. Bankoski, Jim (2010-05-19), WebM and VP8 land in Chromium, Google
  11. Hachamovitch, Dean (2010-05-19), Another Follow-up on HTML5 Video in IE9, Microsoft
  12. Safari HTML5 Audio and Video Guide, Apple, 2010-05-23, archived from the original on 2010-08-23, retrieved 2011-02-07
  13. Forsythe, Christopher (2010-05-23), perian discussion: WebM Support, Perian
  14. Dickinson, Andrew (2010-06-01), How To Get WebM Support In Epiphany Web Browser, WebUpd8
  15. Rozen, Matt (2010-05-19), Flash Player Will Support VP8, Adobe, archived from the original on 2011-11-08, retrieved 2011-02-07
  16. Kempf, Jean-Baptiste, Welcome to VLC's Webm page!, VideoLAN
  17. Kaba, Martin (2010-05-26), Download VLC Media Player 1.1.0 with WebM Support, Kabatology
  18. Reville, Nicholas (2010-05-21), Miro Video Converter is the first WebM / VP8 converter!, Participatory Culture Foundation, archived from the original on 2010-06-06, retrieved 2011-02-07
  19. Kaba, Martin (2010-05-21), Miro Video Converter 2.0 adds support for open WebM (vp8) video format, Kabatology
  20. Kaba, Martin (2010-05-22), Moovida Media Player now supports WebM (VP8) Video format, Kabatology
  21. Winamp Player Features, Nullsoft, archived from the original on 2013-12-19, retrieved 2011-02-07
  22. Winamp 5.58 Released, 2010-06-29, archived from the original on 2010-10-31, retrieved 2011-02-07
  23. Add webm/VP8 support to native matroska demuxer., 2010-06-05
  24. ffmpeg 0.6 release, ffmpeg.org, 2010-06-15
  25. ೨೫.೦ ೨೫.೧ Diary Of An x264 Developer: Announcing the world’s fastest VP8 decoder, archived from the original on 2010-09-30, retrieved 2011-02-07
  26. PATCH VP8 decoder, FFmpeg-devel, 2010-06-15
  27. ೨೭.೦ ೨೭.೧ webm support in Matroska tools, Matroska.org, 2010-05-20, archived from the original on 2010-12-17, retrieved 2011-02-07
  28. Add : Internal VP8 Decoder, 2010-06-23, archived from the original on 2014-11-17, retrieved 2011-02-07
  29. Release History and Player Update, Media Player Classic Home Cinema, 2010-09-07
  30. Android 2.3 Platform Highlights, Android Developer, 2010-12-06, archived from the original on 2012-01-27, retrieved 2011-02-07
  31. Metz, Cade (2010-05-19), Google open sources $124.6m video codec, The Register
  32. Broadcom Accelerates WebM Video on Mobile Phones, Newswire, 2010-05-19
  33. Shah, Agam (2010-05-27), Intel eyes hardware acceleration for Google's WebM, ComputerWorld, archived from the original on 2011-02-14, retrieved 2011-02-07
  34. Talluri, Raj (2010-05-19), Google's Impact on Web Video, Qualcomm
  35. Meehan, Joseph (2010-05-19), Our OMAP processors embrace WebM and VP8 with open ARMs, Texas Instruments
  36. Demo of WebM Running on TI OMAP 4 Processor, WebM Project, 2010-10-05, retrieved 2010-10-15
  37. Chips&Media delivers latest dual HD video IP core with VP8 hardware decoding capability, Design & Reuse, 2010-11-18
  38. Tamasi, Tony (2010-05-19), Google's Royalty-Free VP8 Codec – A Move Forward, NVIDIA, archived from the original on 2012-04-26, retrieved 2011-02-07
  39. ೩೯.೦ ೩೯.೧ Rockchip and WebM Release RK29xx -- World's First SOC to Support WebM HD Video Playback in Hardware, PRNewsWire, 2011-01-07
  40. YouTube HTML5 Video Player, YouTube
  41. ೪೧.೦ ೪೧.೧ Google I/O 2010 - WebM Open Video Playback in HTML5, Google, 2010-05-28
  42. ೪೨.೦ ೪೨.೧ Google I/O 2010 Keynote Day 1, pt. 3, Google, 2010-05-19
  43. VP8 / WebM is here! Sorenson Users Can Encode With It Now., Sorenson Media, 2010-05-19, archived from the original on 2011-01-14, retrieved 2011-02-07
  44. WebM Video Codec in Skype 5.0 Group Video, Skype / Google, 2010-11-09
  45. Kintz, Eric (2010-05-19), Commitment to Open Standards such as VP8 is Critical to Innovation, Logitech
  46. Phipps, Simon (2010-05-24), WebM: Missing The Assurances Open Source Needs?, ComputerworldUK
  47. DiBona, Chris (2010-06-04), Changes to the WebM Open Source License, WebM
  48. Lee, Matt (2010-05-19), Free Software Foundation statement on WebM and VP8, Free Software Foundation, archived from the original on 2012-08-19, retrieved 2011-02-07
  49. Smith, Brett. "Google's updated WebM license". Free Software Foundation. Archived from the original on 2011-02-14. Retrieved 2010-06-14.
  50. "Various Licenses and Comments about Them - GNU Project - Free Software Foundation (FSF)". Free Software Foundation. Retrieved 2010-06-13.
  51. Smith, Brett. "No double standards: supporting Google's push for WebM". Free Software Foundation. Archived from the original on 2011-02-09. Retrieved 2011-01-19.
  52. Metz, Cade (2010-05-20), Google backs open codec against patent trolls, The Register
  53. Metz, Cade (2010-05-21), Google open video codec may face patent clash, The Register
  54. Fulton, Scott M. (2010-05-21), Patent pool may be in the works for 'free' VP8 codec, Betanews
  55. Walker-Morgan, Dj (2010-05-20), WebM applauded but doubts persist, The H
  56. Daffara, Carlo (2010-05-25), An analysis of WebM and its patent risk, carlodaffara.conecta.it, archived from the original on 2010-05-28, retrieved 2011-02-07


ಬಾಹ್ಯ ಕೊಂಡಿಗಳು

[ಬದಲಾಯಿಸಿ]
"https://kn.wikipedia.org/w/index.php?title=ವೆಬ್‌ಎಂ&oldid=1246743" ಇಂದ ಪಡೆಯಲ್ಪಟ್ಟಿದೆ