ವಿಷಯಕ್ಕೆ ಹೋಗು

ವೆರಿಸೈನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
VeriSign, Inc.,
ಸಂಸ್ಥೆಯ ಪ್ರಕಾರPublic (NASDAQVRSN)
ಸ್ಥಾಪನೆ1995
ಮುಖ್ಯ ಕಾರ್ಯಾಲಯ21355 Ridgetop Circle, Dulles, Virginia, USA (2011)
ಪ್ರಮುಖ ವ್ಯಕ್ತಿ(ಗಳು)CEO: Mark McLaughlin, Chairman: D. James Bidzos
ಉದ್ಯಮInternet, Communications
ಆದಾಯ$1.5 billion USD (2007)[]
ನಿವ್ವಳ ಆದಾಯ$-140 million USD (2007)[]
ಉದ್ಯೋಗಿಗಳು2,225 [೨]
ಜಾಲತಾಣwww.verisign.com

ವೆರಿಸೈನ್, ಇನ್ಕಾ. (NASDAQVRSN) ಒಂದು ಅಮೆರಿಕನ್ ಕಂಪನಿಯಾಗಿದ್ದು ಇದು ಮೌಂಟೇನ್ ವಿವ್,CA ನಲ್ಲಿ ತನ್ನ ಕೇಂದ್ರದ ಮೂಲಸ್ಥಾನ ಹೊಂದಿದೆ.ನೆಟ್ವರ್ಕ್ ಮೂಲಭೂತ ಅಗತ್ಯಗಳ ಕಾರ್ಯಚಟುವಟಿಕೆಯ ವಿಭಿನ್ನ ಕೆಲಸ ನಿರ್ವಹಿಸುತ್ತದೆ. ಇದು ಎರಡು ಇಂಟರ್ ನೆಟ್'ಗಳ ಹದಿಮೂರುರೂಟ್ ನೇಮ್ ಸರ್ವರ್ ಗಳು, ಒಟ್ಟಾರೆ ಉನ್ನತ-ಮಟ್ಟದ ಪರಿಧಿಗಳನ್ನು .com, .net, .cc, .name ಮತ್ತು .tvಇವುಗಳಿಗಾಗಿ ಹೊಂದಿದೆ. ವೆರಿಸೈನ್ ಹಲವಾರು ಭದ್ರತಾ ಸೇವೆಗಳನ್ನೂ ಒದಗಿಸುತ್ತಿದೆ.ಡಿಜಿಟಲ್ ಸರ್ಟಿಫಿಕೇಶನ್ ಗಳು, ಮತ್ತು ಆಡಳಿತಾತ್ಮಕ PKI ಅನ್ನು ಟು-ಫ್ಯಾಕ್ಟರ್ ಅಥೆಂಟಿಕೇಶನ್ ಗಳಿಗೆ ತನ್ನ ಸಂರಕ್ಷಣಾ ಕವಚ ನೀಡುವ ಸೇವೆ ಒದಗಿಸುತ್ತದೆ. ಈ ಎಲ್ಲಾ ಗುಂಪು ಅಥವಾ ಸಮೂಹ ಸೇವೆಗಳನ್ನು ಕಂಪನಿಯು ಒಂದೇ ಲಾಂಛನದಡಿ ತಂದು ಅದನ್ನು 'ಟ್ರಸ್ಟೆಡ್ ಇಂತರ್ ನೆಟ್ ಇನ್ ಫ್ರಾಸ್ಟ್ರಕ್ಚರ್ 'ಸೇವೆಯಡಿ ತನ್ನ ಕಾರ್ಯಚಟುವಟಿಕೆಗಳನ್ನು ನಿರ್ವಹಿಸುತ್ತದೆ.

ಈ ಕಂಪನಿಯ ಹಿಂದಿನ ಶುಲ್ಕ ನೀಡುವ ಕಾರ್ಯನಿರೂಪಿತ ಪೇಮೆಂಟ್ ಸೇವಾ ಅಂಗಸಂಸ್ಥೆಯನ್ನು eBay ಗೆ 2005 ರಲ್ಲಿ ಮಾರಾಟ ಮಾಡಿತು.[]

ವೆರಿಸೈನ್ ನ CFO ಬ್ರೇನ್ ರಾಬಿನ್ಸ್ ಅವರ 2010 ಆಗಷ್ಟ್ ನಲ್ಲಿನ ಪ್ರಕಟನೆ ಪ್ರಕಾರ ಕಂಪನಿಯನ್ನು ನಾರ್ದರ್ನ್ ವರ್ಜಿನಿಯಾದಲ್ಲಿನ ಡಲ್ಲೆಸ್ ಗೆ 2011 ರ ವೇಳೆಗೆ ವರ್ಗಾಯಿಸಲಾಗುತ್ತಿದ್ದು ಯಾಕೆಂದರೆ ಕಂಪನಿಯ 95% ರಷ್ಟು ವಹಿವಾಟು ಈಸ್ಟ್ ಕೋಸ್ಟ್ ಪೂರ್ವ ಕರಾವಳಿ ಹತ್ತಿರವೇ ಇರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ.[]

ಇತಿಹಾಸ

[ಬದಲಾಯಿಸಿ]
ವೆರಿಸೈನ್ ಹೆಡ್ ಕ್ವಾರ್ಟರ್ಸ್ ಇನ್ ಮೌಂಟ್ ವಿವ್

ವೆರಿಸೈನ್ 1995 ರಲ್ಲಿ RSA ಸೆಕ್ಯುರಿಟಿ ಸರ್ಟ್ಫಿಕೇಶನ್ ಸರ್ವಿಸಿಸ್ ವಹಿವಾಟಿನೊಂದಿಗೆ ತನ್ನ ವ್ಯವಹಾರ ಆರಂಭಿಸಿತು. ಹೊಸ ಕಂಪನಿಯು ಗೂಢಲಿಪಿ ಶಾಸ್ತ್ರಕ್ಕಾಗಿ ಹಕ್ಕು ಸ್ವಾಮ್ಯಗಳನ್ನು RSA ನಲ್ಲಿದ್ದುದನ್ನು ಪಡೆದುಕೊಂಡು ಅವಧಿಯ ಮಿತಿಯಲ್ಲಿಯೇ ಸ್ಪರ್ಧೆ ಮಾಡದಿರುವ ಒಪ್ಪಂದವನ್ನು ಮಾಡಿಕೊಂಡಿತು. ಈ ಹೊಸ ಕಂಪನಿಯು ಒಂದು ಸರ್ಟಿಫೈಯ್ಡ್ ಆಥಾರಾಟಿ (CA) ಒಂದು ಪ್ರಮಾಣಿತ ಅಧಿಕೃತ ಸಂಸ್ಥೆಯಾಯಿತು.ಅದರ ಮೂಲ ಉದ್ದೇಶವಾದ "ಇಂಟರ್ ನೆಟ್ ಮತ್ತು ಎಲೆಕ್ಟ್ರಾನಿಕ್ ಕಾಮರ್ಸ್ ಗೆ ಡಿಜಿಟಲ್ ಅಥೆಂಟಿಕೇಶನ ಸೇವೆಗಳ ಮತ್ತು ಉತ್ಪನ್ನಗಳ ನೀಡುವಲ್ಲಿ ಸಫಲವಾಯಿತು. ವೆರಿಸೈನ್ ಇಂದು ಎಲ್ಲಾ ಕಾರ್ಯಚಟುವಟಿಕೆಗಳಲ್ಲಿ ಒಟ್ಟು ಸುಮಾರು 3,000,000 ಸರ್ಟಿಫಿಕೇಟ್ಸ್ ಅಂದರೆ ಮಿಲಿಟರಿ ಸೇವೆಗಳಿಂದ ಹಿಡಿದು ಹಣಕಾಸು ಸೇವೆಗಳು ಮತ್ತು ಕಿರುಕುಳ ವ್ಯಾಪಾರದ ಸೇವೆಗಳಲ್ಲಿ ತನ್ನನ್ನು ಇದಕ್ಕೆ ತೊಡಗಿಸಿಕೊಂಡಿದೆ.ಇದರಿಂದ ಇದನ್ನು ಇಂಟರ್ ನೆಟ್ ವಲಯದಲ್ಲಿ ಎನ್ ಕ್ರಿಪ್ಶನ್ ಮತ್ತು ಅಥೆಂಟಿಕೇಶನ್ ಗಳಿಗಾಗಿ ದೊಡ್ಡ CA ಎಂದು ಪರಿಗಣಿಸಲಾಗಿದೆ.ಬಹಳಷ್ಟು ಗ್ರಾಹಕರು ಆನ್ ಲೈನ್ ವ್ಯವಹಾರ ಮಾಡುವಾಗ ತಮ್ಮ ವೆಬ್ ಬ್ರೌಸರ್ ನಲ್ಲಿ ಇದರ ಚಿನ್ಹೆ ಕಾಣುತ್ತಾರೆ. ವೆರಿಸೈನ್ ತನ್ನ ವೆರಿಸೈನ್ ಸೆಕ್ಯುವರ್ಡ್ ಸೀಲ್ ಗೆ ಹೆಸರಾಗಿದೆ.ವೆಬ್ ಸೈಟ್ ನ ಹೊರಭಾಗಕ್ಕೆ ಕಾಣುವ ಈ ಅಥೆಂಟಿಕೇಶನ್ ಮತ್ತು ಎನ್ ಕ್ರಿಪ್ಶನ್ ಸಾಮಾನ್ಯವಾಗಿ SSLಚಿನ್ಹೆಯ ಜೊತೆಗೆ ಗ್ರಾಹಕರಿಗೆ ತನ್ನ ಗುರುತನ್ನು ಪ್ರದರ್ಶಿಸುತ್ತದೆ.

ನೆಟ್ ಸ್ಕೇಪ್ಡ್ ಸರ್ವರ್ ID ಗಳನ್ನು ಜೂನ್ 1995 ರಲ್ಲಿ ರವಾನಿಸಲಾಯಿತು. (ಭದ್ರತೆಯುಳ್ಳ)ಸೆಕ್ಯುವರ್ ಇಮೇಲ್ ನ್ನು ಜನವರಿ 1996 ರಲ್ಲಿ ಪರಿಚಯಿಸಲಾಯಿತು. ವೆರಿಸೈನ್ ಜಪಾನ್ ನನ್ನು NTT ಯೊಂದಿಗೆ ಫೆಬ್ರವರಿ 1996 ರಲ್ಲಿ ಆರಂಭಿಸಲಾಯಿತು. ಕೋಡ್ ಸೈನಿಂಗ್ ನ್ನು ಮೈಕ್ರೊಸಾಫ್ಟ್ ನೊಂದಿಗೆ ಮಾರ್ಚ್ 1996 ರಲ್ಲಿ ಪರಿಚಯಿಸಲಾಯಿತು. US DOC ತನ್ನ ಗ್ಲೊಬಲ್ (ಗುರುತು)ID ನ್ನು ಪರಿಚಯಿಸಿ ಗೂಢಲಿಪಿಯ ರಹಸ್ಯವನ್ನು ಪ್ರಬಲವಾಗಿ ಕಾಯ್ದುಕೊಳ್ಳಲು ಕ್ರಿಪ್ಟೊಗ್ರಾಫಿಕ್ ಸಾಫ್ಟ್ ವೇರ್ ರಫ್ತನ್ನು ಜೂನ್ 1997 ರಲ್ಲಿಉತ್ತೇಜಿಸಿತು. ಸೆಕ್ಯುವರ್ IT ಸ್ವಾಧೀನತೆಯನ್ನು ಜುಲೈ 1998 ರಲ್ಲಿ ಘೋಷಿಸಲಾಯಿತು. ಆಗ PKI ಸೇವಾ ಆವೃತ್ತಿ, ವೆರಿಸಿಯೊನ್ ಆಡಳಿತವ್ಯವಸ್ಥೆಯನ್ನು 4.0 ಅಕ್ಟೋಬರ್ 1998 ರಲ್ಲಿ ವಹಿಸಿಕೊಂಡಿತು. ಉಚಿತ Y2k ಪರೀಕ್ಷಾ ಕ್ರಮದ ಸರ್ಟ್ಸ್ (ಸಂವಹನ)ಗಳನ್ನು ನವೆಂಬರ್ 1998 ರಲ್ಲಿ ಬಿಡುಗಡೆ ಮಾಡಿತು. ವೈರ್ಲೆಸ್ (ನಿಸ್ತಂತು)PKI ಬಿಡುಗಡೆಯನ್ನು ಡಿಸೆಂಬರ್ 1999 ರಲ್ಲಿ ಘೋಷಿಸಿತು. ಥ್ವಾಟೆ ಸ್ವಾಧೀನತೆಯನ್ನು ಡಿಸೆಂಬರ್ 1999ರಲ್ಲಿ ಘೋಷಿಸಿತು. ಸೈನಿಯೊ ಸ್ವಾಧೀನತೆಯನ್ನು ಫೆಬ್ರವರಿ 2000 ರಲ್ಲಿ ಪ್ರಕಟಿಸಿತು. ನೆಟ್ವರ್ಕ್ ಸಾಲ್ಯುಶನ್ಸ್ ನ್ನು ಜೂನ್ 2000 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. GreatDomains.com ನ್ನು ಅಕ್ಟೋಬರ್ 2000 ರಲ್ಲಿ ಪಡೆದುಕೊಂಡಿತು. ಅದೇ ರೀತಿ eNIC ಕಾರ್ಪೊರೇಶನ್ ಮತ್ತು ದಿ .cc ರಜಿಸ್ಟ್ರಿಯನ್ನು ಕೊಕೊಸ್ ನ(ಕೀಲಿಂಗ್) ಐಲ್ಯಾಂಡ್ಸ್ ಗಾಗಿ ಬ್ರೇನ್ ಕಾರ್ಟ್ ಮೆಲ್ ನಿಂದ ಆಗಷ್ಟ್ 31, 2001 ರಲ್ಲಿ ಸ್ವಾಧೀನತೆ ಪಡೆಯಿತು. ಇಲ್ಲುಮ್ನೆಟ್ ನ್ನು ಡಿಸೆಂಬರ್ 2001 ರಲ್ಲಿ ಪಡೆದುಕೊಂಡಿತು. HO ಸಿಸ್ಟೆಮ್ಸ್ ನ್ನು ಫೆಬ್ರವರಿ 2002 ರಲ್ಲಿ ತೆಗೆದುಕೊಂಡಿತು. ನೆಟ್ವರ್ಕ್ ಸಾಲ್ಯುಶನ್ಸ್ ರಜಿಸ್ಟ್ರಾರ್ ನ್ನು ನವೆಂಬರ್ 2003 ರಲ್ಲಿ ಮಾರಾಟ ಮಾಡಲಾಯಿತು. ಗಾರ್ಡೆಂಟ್ ಸ್ವಾಧೀನತೆಯನ್ನು ಡಿಸೆಂಬರ್ 2003 ರಲ್ಲಿ ಘೋಷಿಸಲಾಯಿತು. ಯುನಿಮೊಬೈಲ್ ನ್ನು ಮಾರ್ಚ್ 2004 ರಲ್ಲಿ ಪಡೆಯಿತು. ಜಂಬಾ! ಜೂನ್ 2004 ರಲ್ಲಿ ಸ್ವಾಧೀನಪಡಿಸಿಕೊಂಡಿತು.

As of 2005[[ವರ್ಗ:Articles containing potentially dated statements from ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".]]ವೆರಿಸೈನ್ ವಾರ್ಷಿಕ ಸುಮಾರು $1 ಬಿಲಿಯನ್ ಗಿಂತಲೂ ಅಧಿಕ ಆದಾಯ; ($1.66 ಬಿಲಿಯನ್ FY 2005 ರ ಹಣಕಾಸು ವರ್ಷದಲ್ಲಿ)ವಿಶ್ವಾದ್ಯಂತ ಒಟ್ಟು 3000 ಕ್ಕಿಂತಲೂ ಅಧಿಕ ನೌಕರರು ಇದಕ್ಕಿದ್ದಾರೆ. ಇದರ ವಹಿವಾಟನ್ನು ಎರಡು ವಿಭಾಗಗಳಲ್ಲಿ ವಿಂಗಡಿಸಬಹುದು,ಒಂದು ಇಂಟರ್ ನೆಟ್ ಸೇವೆಗಳು ವಿಭಾಗ ಮತ್ತು ಸಂಪರ್ಕಗಳ ಸೇವೆಗಳು. ಲೈಟ್ ಸರ್ಫ್ ಸ್ವಾಧೀನವನ್ನು ಜನವರಿ 2005 ರಲ್ಲಿ ಘೋಷಿಸಿತು. R4 ಗ್ಲೊಬಲ್ ಸಾಲ್ಯುಶನ್ಸ್ ನ್ನು ಮೇ 2005 ರಲ್ಲಿ ಪಡೆಯಿತು. ಲೈಟ್ ಬ್ರಿಜ್ ಪ್ರಿಪೇ ಸ್ವಾಧೀನತೆಯನ್ನು ಜೂನ್ 2005 ರಲ್ಲಿ ಪೂರ್ಣಗೊಳಿಸಿತು.ಐ ಡೆಫೆನ್ಸ್ ಸ್ವಾಧೀನವನ್ನು ಜುಲೈ 2005 ರಲ್ಲಿ ಪ್ರಕಟಿಸಿತು. ಮೋರ್ ಒವರ್ ಟೆಕ್ನಾಲಾಜೀಸ್ ಸ್ವಾಧೀನತೆಯನ್ನು ಅಕ್ಟೋಬರ್ 2005 ರಲ್ಲಿ ಘೋಷಿಸಿತು. Weblogs.com ನ್ನು ಅಕ್ಟೋಬರ್ 2005 ರಲ್ಲಿ ಪಡೆದುದ್ದರ ಘೋಷಿಸಿತು. ವೆರಿಸೈನ್ ನ ಪೇಮೆಂಟ್ ಗೇಟ್ ವೇ ಆಸ್ತಿಗಳನ್ನು eBay ಇಬೇ (ಪೇಪಾಲ್) ಅಕ್ಟೋಬರ್ 2005 ರಲ್ಲಿ ಪಡೆದುಕೊಂಡಿದ್ದನ್ನು ಘೋಷಿಸಿತು.[] ಕೊಂಟಿಕಿ ಸ್ವಾಧೀನತೆಯನ್ನು ಮಾರ್ಚ್ 2006 ರಲ್ಲಿ ಪಡೆಯಲಾಯಿತು. ವೆರಿಸೈನ್ ಜಿಯೊಟ್ರಸ್ಟ್ ನ್ನು ಪಡೆಯಲು ಮೇ 2006 ರಲ್ಲಿ ಘೋಷಣೆ ಮಾಡಿತು.[] ಇನ್ ಕೋಡ್ ಸ್ವಾಧೀನತೆಯನ್ನು ನವೆಂಬರ್ 2006 ರಲ್ಲಿ ಪ್ರಕಟಿಸಿತು. ವೆರಿಸೈನ್ ವಿಸ್ತೃತ ಮೌಲ್ಯಾಧಾರ SSL ಪ್ರಮಾಣಪತ್ರಗಳ ನ್ನು ಡಿಸೆಂಬರ್ 2006 ರಲ್ಲಿ ಪರಿಚಯಿಸಿತು. ಸ್ಟ್ರಾಟೊನ್ ಸ್ಕ್ಲೇವೊ ತಮ್ಮ CEO(ಮುಖ್ಯಾಧಿಕಾರಿ) ಮತ್ತು ಮಂಡಳಿ ಸದಸ್ಯತ್ವದಿಂದ ನಿರ್ಗಮಿಸಿದರು.ವಿಲಿಯಮ್ (ಬಿಲ್ ) ರೊಪರ್ ಅವರು ಮೇ 29,2009 ರಲ್ಲಿ ಅಧಿಕಾರ ವಹಿಸಿಕೊಂಡರು.[] ವೆರಿಸೈನ್ ತನ್ನ ಕಮ್ಯುನಿಕೇಶನ್ ಸೇವಾ ಗುಂಪಿನ ವ್ಯವಹಾರಗಳ ವಿಭಾಗದಲ್ಲಿನ ಶೇರುಗಳನ್ನು ಮಾರಾಟ ಮಾಡಿದ್ದನ್ನು ನವೆಂಬರ್ 2007 ರಲ್ಲಿ ಘೋಷಿಸಿತು. ವೆರಿಸೈನ್ ತನ್ನ ಡಿಜಿಟಲ್ ಬ್ಯಾಂಡ್ ಮ್ಯಾನೇಜ್ ಮೆಂಟ್ ಸರ್ವಿಸಿಸ್ ನ್ನುಮೆಲ್ಬೊರ್ನ್ IT ಗೆ US$50m. ಕ್ಕೆ ಮಾರಾಟ ಮಾಡಿತು.[] ಸವನ್ನಾ ಕಚೇರಿಯಲ್ಲಿ ಎಕ್ಸಿಕ್ಯುಟಿವ್ VP ಆಗಿದ್ದ ಲೀ ಹಗ್ಗಿನ್ಸ್ ಅಕ್ಟೋಬರ್ 30,2008 ರಲ್ಲಿ ನಿರ್ಗಮಸಿದರು ವಿಲಿಯಮ್(ಬಿಲ್) ರೊಪರ್ ಕೂಡಾ CEO ಸ್ಥಾನದಿಂದ ಹೊರಹೊರಟರು,ಆಗ ಜಿಮ್ ಬಿಜೊಸ್ ಜುಲೈ 3, 2008 ರಲ್ಲಿ ಇವರ ಜಾಗೆಗೆ ಬಂದರು.[][] ಗ್ಲೊಬಲ್ ನೇಮ್ ರಜಿಸ್ಟ್ರಿಯನ್ನು 2008 ರಲ್ಲಿ ಸ್ವಾಧೀನಪಡಿಸಿಕೊಳ್ಳಲಾಯಿತು. ವೆರಿಸೈನ್ ಜುಲೈ 1,2010 ರಲ್ಲಿ .com ಡಾಮೇನ್ ಗೆ ನೊಂದಣಿ ಶುಲ್ಕ ಪ್ರಕಟಿಸಿತು.ಇದು $6.86 ರಿಂದ $7.34 ಕ್ಕೇರಿತು.ಅದೇ ರೀತಿ .net ನ ನೊಂದಣಿ ಶುಲ್ಕವು $4.23 ರಿಂದ $4.65 ಕ್ಕೆ ಹೆಚ್ಚಿತು.[]

ವಿಭಾಗಗಳು

[ಬದಲಾಯಿಸಿ]

ಇಂಟರ್ ನೆಟ್ ಸರ್ವಿಸಿಸ್ ವಿಭಾಗವು ನೇಮಿಂಗ್ & ಡೈರೆಕ್ಟರಿ ಸರ್ವಿಸಿಸ್ ಇದು ಡೊಮೇನ್ .com ಮತ್ತು .net,ಗಳ ಹೆಸರು ನೊಂದಾಯಿಸಲು ಸಹಾಯವಾಗುತ್ತದೆ.ಇದರ ಜೊತೆಗೆ ಇನ್ನಿತರ DNS-ಸಂಭಂದಿತ ಸೇವೆಗಳು ಮತ್ತು RFID ಸೇವೆಗಳು ಮತ್ತು ಸೆಕ್ಯುರಿಟಿ ಅಥವಾ ಭದ್ರತಾ ಸೇವೆಗಳು ಸೇರಿವೆ. ಇದು ವಿವಿಧ ಸಾಮರ್ಥ್ಯದ ಪರಿಕರದ ವಿಧಾನ ಒಳಗೊಂಡಿದೆ. ಮ್ಯಾನೇಜ್ಡ್ ಸೆಕ್ಯುರಿಟಿ ಸರ್ವಿಸಿಸ್ ಅಂದರೆ (ಫೈಯರ್ ವಾಲ್ಸ್ ,ಅತಿಕ್ರಮಣಗಳ ಪತ್ತೆ ಮತ್ತು ನಿವಾರಣೆ,ಅಗತ್ಯ ಪ್ರಮಾಣದ ರಕ್ಷಣೆ ಇತ್ಯಾದಿ)ಗ್ಲೊಬಲ್ ಸೆಕ್ಯುರಿಟಿ ಕನ್ಸಲ್ಟಿಂಗ್ (ಗಣನೆಗಳು,ವಿನ್ಯಾಸ,ಒಟ್ಟುಗೂಡಿಸುವಿಕೆ,ಪ್ರಮಾಣಿಕರಣ).ಇಮೇಲ್ ಭದ್ರತೆ ಸೆಕ್ಯುರಿಟಿ (ಮಾಹಿತಿ ಕಣ್ಮರೆಯಾಗದಿರುವುದು,ವೈರಸ್ ದಾಳಿ ತಡೆ),ಬಲಿಷ್ಟ ಅಥೆಂಟಿಕೇಶನ್ [ಅಧಿಕೃತಗೊಳಿಸುವ](ಟೊಕನ್ಸ್ ಮತ್ತು ರಿಮೊಟ್ ಅಕ್ಸೆಸ್ ವ್ಯಾಲಿಡೇಶನ್ ),ಅದಲ್ಲದೇ ಮೂಲ ಡಿಜಿಟಲ್ ಸರ್ಟಿಫಿಕೇಟ್ /SSL ವಹಿವಾಟು ಅಲ್ಲದೇ ಇತ್ತೀಚಿನ ವಿಸ್ತೃತ ವ್ಯಾಲಿಡೇಶನ್ (ಸುಭದ್ರ-ಹೈ ಅಸ್ಯುರನ್ಸ್ )SSL ಸರ್ಟಿಫಿಕೇಟ್ಸ್ ಇತ್ಯಾದಿ ವೆರಿಸೈನ್ ಹೇಳುವ ಪ್ರಕಾರ [೧೦] ಅದು 32 ಬಿಲಿಯನ್ ಡೊಮೇನ್ ಸಿಸ್ಟೆಮ್ ಆಗಿರುವ (DNS)ನ್ನು ನಿರ್ವಹಿಸುತ್ತದೆ.ಅದರ ದಿನದ ವಿಚಾರಣಾ ವಹಿವಾಟು ಅಧಿಕಗೊಂಡಿದೆ.ನಾರ್ತ್ ಅಮೆರಿಕಾದ 35% ರಷ್ಟು ಇ-ಕಾಮರ್ಸ್ ಮತ್ತು "ಬಹುಪಾಲು" ಸುರಕ್ಷಿತ ವೆಬ್ ಸೈಟ್ ಗಳಿಗೆ ಗೂಢಲಿಪಿಯ ಭದ್ರತೆ ಒದಗಿಸುತ್ತದೆ. ಮೇ 2010,ರಲ್ಲಿ ವೆರಿಸ್ವೈನ್ ತನ್ನ ಸೆಕ್ಯುರಿಟಿ ಸರ್ವಿಸಿಸ್ ನ್ನು ಸಿಮ್ಯಾಂಟೆಕ್ ಗೆ $1.28 ಬಿಲಿಯನ್ ಗಳಿಗೆ ನಗದಾಗಿ ಮಾರಾಟ ಮಾಡಿತು.

ಶೇರುಪಾಲುದಾರಿಕೆಯ ವಿಭಜನೆ

[ಬದಲಾಯಿಸಿ]

ಕಳೆದ 2007 ರ ನವೆಂಬರ್ 14 ರ ವೆರಿಸೈನ್ ನ ಆನ್ ಲಿಸ್ಟ್ ಡೇ ಸಮಾರಂಭದಲ್ಲಿ ವೆರಿಸನ್ ತನ್ನ ಅಗ್ರ ವಹಿವಾಟಾದ ನೇಮಿಂಗ್ ಸರ್ವಿಸಿಸ್ ನ ಮೇಲೆ ಹೆಚ್ಚು ಗಮನ ಹರಿಸುವುದಾಗಿ ಹೇಳಿತು,ಅದರಂತೆ ಅಐಡೆಂಟಿಟಿ ಪ್ರೊಟೆಕ್ಷನ್ ಸರ್ವಿಸಿಸ್ ನ್ನು ಶೇರು ಪಾಲು ಹಂಚಿಕೆ (ಮಾರಾಟ ಅಥವಾ ಮುಚ್ಚಲು) ಅದು ತಯಾರಾಗಿರುವುದಾಗಿ ಘೋಷಿಸಿತು.[೧೧] ಆಗ ಪ್ರಕಟಿತ ವಿಷಯದ ಪ್ರಕಾರ ಕಂಪನಿಯು ತನ್ನ 12 ರಿಂದ 15 ವಹಿವಾಟು ಘಟಕಗಳನ್ನು[೧೨] ಮಾರಾಟ ಮಾಡುವ ಯೋಚನೆಯಲ್ಲಿದೆ. ಅಲ್ಲದೇ ಅದರ ಒಟ್ಟು 4,500 ನೌಕರರಲ್ಲಿ ಅರ್ಧದಷ್ಟನ್ನು ತೆಗೆದು ಹಾಕುವ ಯೋಚನೆಯಲ್ಲಿದೆ.[೧೩]

ನಂತರ ಮಾರ್ಚ್ 2,2009 ರಲ್ಲಿ ಕಂಪನಿಯು ತನ್ನ ಕಮ್ಯುನಿಕೇಶನ್ಸ್ ಸರ್ವಿಸಿಸ್ ಗ್ರುಪ್ ನ್ನು TNS, Inc.ಗೆ $230M ಕ್ಕೆ ಮಾರಾಟ ಮಾಡುತ್ತಿರುವುದಾಗಿ ಪ್ರಕಟಿಸಿತು.[೧೪]

ಅದಾದ ನಂತರ ಮೇ 19,2010 ರಲ್ಲಿ ಸಿಮ್ಯಾಂಟಿಕ್ ತಾನು ವೆರಿಸೈನ್ ನ ಐಡೆಂಟಿಟಿ ಅಂಡ್ ಅಥೆಂಟಿಕೇಶನ್ ವಹಿವಾಟನ್ನು ಖರೀದಿ ಮಾಡಲು ನಿರ್ಧರಿಸಿತು.ಅದರ ಜೊತೆಗೆ ಸೆಕ್ಯುವರ್ ಸೊಕೆಟ್ಸ್ ಲೇಯರ್(SSL),ಸರ್ಟಿಫಿಕೇಟ್ ಸರ್ವಿಸಿಸ್ ,ಪಬ್ಲಿಕ್ ಕೀ ಇನ್ ಫ್ರಾಟ್ರಕ್ಚಕ್ಚರ್ (PKI),ವೆರಿಸೈನ್ ಟ್ರಸ್ಟ್ ಸರ್ವಿಸಿಸ್ ,ವೆರಿಸೈನ್ ಐಡೆಂಟಿಟಿ ಸರ್ವಿಸಿಸ್ ಅಥೆಂಟಿಸಿಟಿ (VIP)ಸರ್ವಿಸಿಸ್ ಅಲ್ಲದೇ ಜಪಾನ್ ನ ವೆರಿಸೈನ್ ದಲ್ಲಿ ಬಹುಪಾಲು ಶೇರುಗಳನ್ನು ಅದು ನಗದು $1.28 ಬಿಲಿಯನ್ ಗೆ ತೆಗೆದುಕೊಳ್ಳಲು ತೀರ್ಮಾನಿಸಿತು. ಸಿಮೆಂಟೆಕ್ ಮಾರಾಟವು ಅಧಿಕೃತವಾಗಿ ಆಗಸ್ಟ್ 9,2010 ನಲ್ಲಿ ಪೂರ್ಣವಾಯಿತು.

ವಿವಾದಗಳು

[ಬದಲಾಯಿಸಿ]

ನಂತರ ವೆರಿಸೈನ್ 2002 ರಲ್ಲಿ ಡೊಮೇನ್ ಸ್ಲ್ಯಾಮಿಂಗ್ ಗಾಗಿ ಅಂದರೆ ಸ್ಥಳೀಯ ನೆಟ್ವರ್ಕ್ ದ ಸರಿಯಾದ ನಿರ್ವಹಣೆ ಮಾಡದ್ದಕ್ಕೆ ಮೊಕದ್ದಮೆಗೆ ಈಡಾಯಿತು.ಅಲ್ಲಿನ ಸ್ಥಳೀಯ ಡೊಮೇನ್ ಕಾರ್ಯಗಳನ್ನು ಇನ್ನುಳಿದ ನೊಂದಣಿಗಳಿಗೆ ವರ್ಗಾಯಿಸಿತು,ಆಗ ತನ್ನ ಸ್ಥಳೀಯವುಗಳನ್ನು ಕೇವಲ ಹೆಸರು ಪರಿಷ್ಕರಣೆ ಮಾಡುತ್ತಿರುವುದಾಗಿ ನಂಬಿಸಿತು. ಅವುಗಳು ಕಾನೂನುಬಾಹಿರವಲ್ಲದಿದ್ದರೂ ಅವುಗಳ ಕಾರ್ಯಾವಧಿ ಮುಗಿದ ಅಥವಾ ವರ್ಗಾವಣೆಯು ಕೇವಲ ನಿಜವಾದ ಪರಿಷ್ಕರಣೆಯಲ್ಲ ಎಂಬುದನ್ನು ಅದು ತಿಳಿಸಲು ಹೋಗಿದ್ದು ಮಾತ್ರ ಅದರ ಸಲಹೆಗಳ ವಿಧಾನಗಳಿಗೆ ಸ್ಥಗಿತತೆ ತೋರಿಸಿತು.[೧೫]

ವೆರಿಸೈನ್ ತನ್ನ ಕೆಲವು ಕಾರ್ಯಗಳಿಗೆ ಸಾರ್ವಜನಿಕರಿಂದ ಸೂಕ್ಷ್ಮ ಪರಿಶೀಲನೆಗೆ ಒಳಪಟ್ಟಿತು.ಅದರ ICANN (ಇಂಟರ್ನೆಟ್ ಕಾರ್ಪೊರೇಶನ್ ಫಾರ್ ಅಸೈನ್ ನೇಮ್ಸ್ ಅಂಡ್ ನಂಬರ್ಸ)ಮತ್ತು DNS.ನಂತರ ಸೆಪ್ಟೆಂಬರ್ 2003 ರಲ್ಲಿ ವೆರಿಸೈನ್ ಸೈಟ್ ಫೈಂಡರ್ ನ್ನು ಪರಿಚಯಿಸಿತು.ಇದು ವೆಬ್ ಬ್ರೊಸರ್ಸ್ ಗೆ ಅಸಿತ್ವ ಮತ್ತು ಬ್ರೊಸರ್ಸ್ ಗಳ ವೇಗವಾಗಿಸುವ ಅದು ತನ್ನ ಅಸ್ತಿತ್ವದಲ್ಲಿರುವ .com or .net ಡೊಮೇನ್ ಗಳನ್ನು ಹೆಸರನ್ನುಳಿಸಿತು. ICANN ಹೇಳುವಂತೆ ವೆರಿಸೈನ್ ತನ್ನ ಒಪ್ಪಂದಗಳನ್ನು U.S.ಡಿಪಾರ್ಟ್ ಮೆಂಟ್ ಆಫ್ ಕಾಮರ್ಸ್ ನ ಒಪ್ಪಂದಗಳನ್ನು ಮುರಿದಿದೆ ಎಂದು ದೂರಿತು.ಅದರ DNS .com ಮತ್ತು.net, ನ್ನು ಅಗತ್ಯಕ್ಕನುಗುಣವಾಗಿ ಸೇವೆ ನೀಡಿಲ್ಲವೆಂದು ಹೇಳಿತು. ಅದಲ್ಲದೇ ವೆರಿಸೈನ್ ICANN ನನ್ನು ಮುಚ್ಚಿತು. ನಂತರ ವೆರಿಸೈನ್ ICANN ವಿರುದ್ದ ಫೆಬ್ರವರಿ 2004 ರಲ್ಲಿ ಮೊಕದ್ದಮೆ ಹೂಡಿತು.ಅದು ICANN ನೊಂದಿಗೆ ಯಾವ ಸೇವೆ ನೀಡುವುದನ್ನು ಕೈಗೆತ್ತಿಕೊಂಡಿದೆ ಎನ್ನುವುದನ್ನು ತಿಳಿಸಲು ಕೋರಿತು.ಈ ಮನವಿಯನ್ನು ಫೆಡರಲ್ ನಿಂದ ಕ್ಯಾಲಿಫೊರ್ನಿಯಾ ಸ್ಟೇಟ್ ಕೋರ್ಟ್ ಗೆ ಆಗಸ್ಟ್ 2004 ರಲ್ಲಿ ವರ್ಗಾಯಿಸಿತು.[೧೬] ಅದಾದ ಮೇಲೆ 2005ರಲ್ಲಿ ವೆರಿಸೈನ್ ಮತ್ತು ICANN ಒಪ್ಪಂದವೊಂದರ ಘೋಷಿಸಿ ಹೊಸ ನೊಂದಣಿ ಸೇವೆಗಳನ್ನು .com ರಲ್ಲಿ ತರಲು ಕ್ರಮ ಕೈಗೊಂಡಿತು. ಇದರ ಒಪ್ಪಂದದ ದಾಖಲೆಗಳು ಇಲ್ಲಿ ದೊರೆಯುತ್ತವೆ. ಇದರ ಒಪ್ಪಂದಗಳು ದೋಷಪೂರ್ಣವಾಗಿದ್ದರಿಂದ ಎಲ್ಲೆಡೆಯಿಂದ ಟೀಕೆಗಳ ಸುರಿಮಳೆಯಾಯಿತು. ICANN ಕಮೆಂಟ್ಸ್ ಮೇಲಿಂಗ್ ಲಿಸ್ಟ್ ಆರ್ಚಿವ್ ನಲ್ಲಿ ಇದರ ಕೆಲವು ದಾಖಲೆಗಳು ಲಭ್ಯ. ಇನ್ನೂ ಹೆಚ್ಕೆಂದರೆ ವೆರಿಸೈನ್ sex.comವಿಷಯದಲ್ಲಿ ಸಿಲುಕಿ ಒಂಬತ್ತನೆಯ ಸರ್ಕ್ಯುಟ್ ಪ್ರಕಾರ ಅದು ಕಟು ನಿರ್ಧಾರಕ್ಕೆ ಒಳಗಾಗಬೇಕಾಯಿತು.[೧೭]

ಇನ್ನುಳಿದ ಒಪ್ಪಂದಗಳಲ್ಲಿ ವೆರಿಸೈನ್ ICANN ನೊಂದಿಗೆ .org ಮೇಲ್ದರ್ಜೆಯ ಕಾರ್ಯಕ್ರಮಗಳನ್ನು 2003 ರಲ್ಲಿ ಬಿಟ್ಟುಕೊಟ್ಟಿತು..com,ನ ತನ್ನ ಹಕ್ಕುಗಳನ್ನು ಮುಂದುವರೆಸಿತು.ಯಾಕೆಂದರೆ ಇದರಲ್ಲಿ 34 ದಶಲಕ್ಷಕಿಂತ ಹೆಚ್ಚು ನೊಂದಾಯಿತ ಡೊಮೇನ್ ಹೆಸರುಗಳು ಇದ್ದವು. ಆದರೆ .net ನ ಅಸ್ತಿತ್ವದಲ್ಲಿರುವ ಒಪ್ಪಂದಗಳು ಅವಧಿ ಮುಗಿಸಿದವು.ಇದಕ್ಕಾಗಿ ವೆರಿಸೈನ್ ಒಳ್ಗೊಂಡಂತೆ ಐದು ಕಂಪನಿಗಳು ಆಡಳಿತ ಪಡೆಯಲು ಸ್ಪರ್ಧೆಗಿಳಿದವು. ವೆರಿಸೈನ್ ಈ ಪೈಪೊಟಿಯು ದೊಡ್ಡ ಕುಳಗಳಾದ IT ಮತ್ತು ಟೆಲೆಕಾಮ್ ಗಳು ಅದರ ಹಿಂದಿದ್ದವು.ಇದರೊಂದಿಗೆ ಮೈಕ್ರೊಸಾಫ್ಟ್ ,IBM,ಸನ್ ಮೈಕ್ರೊಸಿಸ್ಟೆಮ್ಸ್ ,MCI ಮತ್ತಿತರರು ಈ ಹರಾಜಿನಲ್ಲಿದ್ದವು.ಇಲ್ಲಿ ವೆರಿಸೈನ್ ನ .net ಗಾಗಿ ಪರಿಪೂರ್ಣ ರೆಕಾರ್ಡ್ ಆಪರೇಟಿಂಗ್ ಇತ್ತೆನ್ನಬಹುದು. ಅದು ವೆರಿಸೈನ್ ನ .net DNS ಗಳ ಆಡಳಿತವನ್ನು ಮುಂದುವರೆಸಿತು.ಕಂಪನಿಯ ಹಲವಾರು ಸೇವೆಗಳು ಅದರ "ಬೆನ್ನೆಲುಬಾ"ಗಿದ್ದವನ್ನು ಅದು ತನ್ನ ಸುಪರ್ದಿಯೊಳಗಿಟ್ಟುಕೊಂಡಿತು. ICANN ಜೂನ್ 8,2005 ರಲ್ಲಿ ವೆರಿಸೈನ್ .net ನ್ನು 2011 ರ ವರೆಗೆ ನಡೆಸಬಹುದೆಂದು ಘೋಷಿಸಿತು. ಅಂದರೆ .net ಇದರ ಹರಾಜಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಬಹುದಾಗಿದೆ.

ಏಕಸ್ವಾಮ್ಯದ ಕಾರ್ಯಾಚರಣೆಗಳು

[ಬದಲಾಯಿಸಿ]

ಹಲವಾರು [weasel words]ಜನರು ವೆರಿಸೈನ್ ನ ಕಾರ್ಯಾಚರಣೆ ಬಗ್ಗೆ ಅದರ .com ಮತ್ತು .net ವೆಬ್ ಮೇಲಿನ ಏಕಸ್ವಾಮ್ಯತೆಯನ್ನು ಟೀಕೆ ಮಾಡಿದರು.DNS ನ ಚರ್ಚೆಯ ಸಂದರ್ಭದಲ್ಲಿ 1990 ರಲ್ಲಿನ ಅದರ ಕಾರ್ಯವಿಧಾನಗಳು ವಹಿವಾಟಿನಲ್ಲಿ ಸಮಂಜಸವಾಗಿಲ್ಲ ಎಂದು ಹಲವರು ಅಭಿಪ್ರಾಯಪಟ್ಟರು.ವೆರಿಸೈನ್ ತನ್ನ ಹಿಡಿತದಲ್ಲಿರುವ ನೆಟ್ವರ್ಕ್ ಗಳನ್ನು ಮನಸೋಚ್ಚೆ ಬಳಸುವುದನ್ನು ವೀಕ್ಷಿಸಿ ಅದರ ಏಕೈಕ ನಿಯಂತ್ರಣದ ಬಗ್ಗೆ ತಮ್ಮ ಕಟು ಅಭಿಪ್ರಾಯಗಳನ್ನು ತಿಳಿಸಿದರು. ಆದರೆ ಕೆಲವರು ಖಾಸಗಿ ಕಂಪನಿಗಳು ಸಾಮಾನ್ಯವಾಗಿ ಏಕಸ್ವಾಮ್ಯತೆ ಪ್ರದರ್ಶಿಸುವುದು ಸಾಮಾನ್ಯ ಎಂಬುದನ್ನು ಅರಿಅಯದೇ ಹೋದರು.ಯಾಕೆಂದರ್.com and .net ಗಳ ಒಡೆತನದಲ್ಲಿ ವೆರಿಸೈನ್ ಯಾವಾಗಲೂ ತನ್ನ ಹಿಡಿತ ತೋರುತ್ತಲೇ ಬಂದಿದೆ.ವಿಶ್ವವು 21ನೆಯ ಶತಮಾನದ ಎರಡನೆಯ ದಶಕದಲ್ಲಿ ಕಾಲಿಟ್ಟಿದೆ,ಅದಕ್ಕೆ ಪೂರಕ ಅಭಿವೃದ್ಧಿಯನ್ನೂ ನಿರೀಕ್ಷಿಸುತ್ತದೆ. ಯಾವಾಗಲೂ .com ಮತ್ತು .net ಗಳ ಬಗ್ಗೆ ಕೂಗು ಕೇಳುತ್ತಲೇ ಇದೆ,ಈ ಏಕಸ್ವಾಮ್ಯತೆಯು ನೆಟ್ವರ್ಕ್ ಸಾಲ್ಯುಶನ್ಸ್ ಗೆ ನೀಡಿದ್ದರ ಬಗ್ಗೆ ಎಲ್ಲೆಡೆ ಟೀಕೆಗಳಿವೆ. ವೆರಿಸೈನ್ U.S. ಸರ್ಕಾರದಿಂದ ಈ ಏಕಸ್ವಾಮ್ಯತೆ ಮುಂದುವರೆಸುವಂತೆ ಅನುಮತಿ ಪಡೆದಿದೆಯಾದರೂ ಸಾರ್ವಜನಿಕರ ಸಂಪನ್ಮೂಲವನ್ನೂ ಗಮನಿಸಬೇಕಾಗಿದೆ.

ಇವೆಲ್ಲದರ ಕಾರಣದಿಂದಾಗಿ ವೆರಿಸೈನ್ ತನ್ನ .com ಮತ್ತು.net ಡೊಮೇನ್ ಗಳ ಅಭಿಪ್ರಾಯ ಗಮನಿಸಿ ಡಿಸೆಂಬರ್ 19,2009 ರಲ್ಲಿ ಒಂದು ಪ್ರಕಟನೆ ಹೊರಡಿಸಿ ತಾನು ಜುಲೈ1,2010 ರಲ್ಲಿ ತನ್ನ ಸಗಟು ಬೆಲೆಯನ್ನು .com ಮತ್ತು .net ಗಳಿಗಾಗಿ ನೊಂದಣಿ ಶುಲ್ಕ ಹೆಚ್ಚಳ ಮಾಡುವುದನ್ನು ಸ್ಪಷ್ಟಪಡಿಸಿತು. ಕಟ್ಟಡ ಮೂಲಭೂತ ಸವಲತ್ತುಗಳ ಮತ್ತು ವಹಿವಾಟಿನ ದರಗಳಲ್ಲಿನ ಹೆಚ್ಚಳವೇ ಇದಕ್ಕೆ ಕಾರಣ ಎಂದಿತು. ವಿಮರ್ಶಕರ ಪ್ರಕಾರ ಈ ಬೆಲೆ ಹೆಚ್ಚಳವು ನಿರಂತರ ಬೆಲೆಗಳಲ್ಲಾದ ವ್ಯತ್ಯಾಸ ಮತ್ತು ಅದರ ಆಧುನಿಕ ತಂತ್ರಜ್ಞಾನಗಳ ಬಳಕೆಯನ್ನು ಅಳವಡಿಸುವಂತೆ ಸಲಹೆ ಮಾಡಿದರು.ಅದರ DNS ಮತ್ತು ಡೊಮೇನ್ ಹೆಸರುಗಳ ಬಳಕೆಗೆ ನಿಗದಿತ ಸರಳ ತಂತ್ರಜ್ಞಾನದ ವಿಧಾನದ ಅಗತ್ಯತೆ ಪ್ರತಿಪಾದಿಸಲಾಯಿತು. ಅತ್ಯಾಧುನಿಕ ತಂತ್ರಜ್ಞಾನವು ಸುಲಭ ವೆಚ್ಚಕ್ಕೆ ಹಾದಿ ಮಾಡಿಕೊಡುತ್ತದೆ.ಆದರೆ ವೆರಿಸೈನ್ ನ ಬೆಲೆ ಹೆಚ್ಚಳದ ಪ್ರವೃತ್ತಿಯು ಅದರ ಏಕಸ್ವಾಮ್ಯತೆಯ ಲಕ್ಷಣ ತೋರಿದೆ ಎಂದು ಟೀಕಾಕಾರರ ವಾದವಾಗಿದೆ. ಕಳೆದ 10 ವರ್ಷಗಳಿಂದ ಮೂಲಭೂತ ಸೌಕರ್ಯಗಳ ಬೆಲೆಗಳಲ್ಲಿ ಇಳಿಕೆಯಾದರೂ ವೆರಿಸೈನ್ ತನ್ನ ನೆಟ್ವರ್ಕ್ ಸಾಲ್ಯುಶನ್ಸ್ ನ ಬೆಲೆ ಏರಿಕೆ ಹಿನ್ನಲೆಯಲ್ಲಿ ಲಾಭ ಪಡೆಯುವುದನ್ನು ಅವರು ಟೀಕಿಸಿದ್ದಾರೆ.ಡೊಮೇನ್ ಹೆಸರಿನ ಸಗಟು ಬೆಲೆಗಳಲ್ಲಿನ ಏರಿಕೆ ಹಲವು ವಿಮರ್ಷಕರಲ್ಲಿ ಕೋಪ ತರಿಸಿದೆ.1990 ರಲ್ಲಿ ಮಾರುಕಟ್ಟೆ ಆಧಾರಿತ ಸೇವಾವಲಯದಲ್ಲಿ ಕೊಂಚ ಹೆಚ್ಚಳವಿದ್ದುದು ನಿಜವಾದರೂ ಈ ಏರಿಕೆ ಸರಿಯಲ್ಲ ಎಂಬುದೇ ಅವರ ವಾದ. ನೆಟ್ವರ್ಕ್ ಸಾಲ್ಯುಶನ್ಸ್ ನ್ನು ವೆರಿಸೈನ್ 2000 ರಲ್ಲಿ ಸ್ವಾಧೀನಪಡಿಸಿಕೊಂಡಿತ್ತು.

ಇತ್ತೀಚಿನ ವೆರಿಸೈನ್ ನ ಸಗಟು ದರ ಏರಿಕೆಯು 6.9% ರ ಹೆಚ್ಚಳ ತೋರಿದೆ.ಈ.com ಹೆಸರಿನ ಮತ್ತು .net ನ ಸಗಟು ದರದಲ್ಲಾದ ಏರಿಕೆ ಅದಕ್ಕೆ ಲಾಭವನ್ನು ತಂದಿದೆ. ಇದರ ಈ ಪ್ರವೃತ್ತಿಯು ಸದ್ಯದ 24 ತಿಂಗಳ ಆರ್ಥಿಕ ಬೆಳವಣಿಗೆಯ ಒಂದು ತೀಕ್ಷ್ಣ ನೋಟದ ಮಾದರಿಯಾಗಿದೆ.ಎಲ್ಲಾ ವಿಭಾಗಗಳಲ್ಲಿ ಬೆಲೆ ಇಳಿಕೆ ಸದ್ಯದ ಪ್ರವೃತ್ತಿಯಾಗಿದೆಯನ್ನುವುದನ್ನು ವೆರಿಸೈನ್ ಮರೆತಿದೆ ಎಂದೇ ಹೇಳಲಾಯಿತು.ಭೌತಿಕ ಮತ್ತು ಇನ್ನಿತರ ವಸ್ತುಗಳ ಬೆಲೆಗಳು ಜಾಗತಿಕ ಮಾರುಕಟ್ಟೆಯಲ್ಲೇ ಇಳಿದಿರುವಾಗ ಈ ಬೆಲೆಯೇರುವಿಕೆಯ ಅಗತ್ಯದ ಪ್ರಶ್ನೆ ಏಲುತ್ತದೆ. ವೆರಿಸೈನ್ ಕಳೆದ ದಿನಗಳಲ್ಲಿ ಉತ್ತಮ ಲಾಭ ತೋರಿಸಿದ್ದರೂ ಅದರ ಹಿನ್ನಲೆಯಲ್ಲಿ ಅದು ಈ ಸಗಟು ಏರಿಕೆಗೆ ಹೋಗಿದ್ದು ಸೂಕ್ತವಲ್ಲ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯ.ಅದರ ದೊಡ್ಡ ಪ್ರಮಾಣದ ನಗದು ಕಾಯ್ದಿರುಸುವಿಕ್ ಮತ್ತು $1.28 ಬಿಲಿಯನ್ ಅದರ ವಹಿವಾಟು ಮೇ 2010 ನಲ್ಲಿ ಕಂಡು ಬಂದುದು ಕೂಡ ಇಲ್ಲಿ ಗಮನಿಸಬೇಕಾದ ಅಂಶವಾಗಿದೆ.(ಈ ಹಿಂದಿನ ಲೇಖನ ಗಮನಿಸಿ) ವಿಮರ್ಶಕರ ಪ್ರಕಾರ ಕಂಪನಿಯ ಉತ್ತಮ ಆದಾಯ ಮತ್ತು ವೆರಿಸೈನ್ ತನ್ನ ಏಕಸ್ವಾಮ್ಯದ ಲಾಭ ಪಡೆಯುವುದನ್ನು ಟೀಕಿಸುತ್ತಾರೆ.ಮಾರುಕಟ್ಟೆಯಲ್ಲಿ ಈ ಅನಿರ್ಧಿಷ್ಟ ಕಾರಣವಿಲ್ಲದ ಏರಿಕೆ ಯಾವ ಪರಿಣಾಮ ಬೀರುತ್ತದೆಂಬ ಪ್ರಶ್ನೆ ಅವರದ್ದಾಗಿದೆ.

ಇನ್ನೂ ಕೆಲವು [who?]ವಿಮರ್ಶಕರ ಪ್ರಕಾರ ಅದರಲ್ಲೂ ಈ ಮಾರುಕಟ್ಟೆ ನೀತಿ-ಸೂತ್ರ ನಿರೂಪಕರು ವೆರಿಸೈನ್ ಈ ನಿರ್ಧಾರವನ್ನು ಖಂಡಿಸುತ್ತಾರೆ.ವಿವಾದಾತ್ಮಕ ಬೆಲೆಯೇರಿಕೆಯು ಯಾವಾಗಲೂ ಮಾರುಕಟ್ಟೆಯಲ್ಲಿ ಅನಾರೋಗ್ಯಕರ ಪೈಪೋಟಿಗೆ ಕಾರಣವಾಗುತ್ತದೆ ಎಂದು ಅವರು ವಿಶ್ಲೇಷಿಸುತ್ತಾರೆ.1990 ರಲ್ಲಿ ಕಂಪನಿಯು ನ್ಯಾಯಯುತ ಬೆಲೆಯೇರಿಕೆಗೆ ಪ್ರೇತಿಕ್ರಿಯೆ ಇತ್ತು ಆದರೆ ಈಗ ಇದು ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ನ ಗಮನಕ್ಕೂ ಬಂದಿರಲು ಸಾಕು ಎಂದು ಅವರ ಸ್ಪಷ್ಟ ಅಭಿಪ್ರಾಯವಾಗಿದೆ. ಇನ್ನೂ ಕೆಲವು ವಿಮರ್ಶಕರ ಪ್ರಕಾರ ರಾಷ್ಟ್ರ ಮಟ್ಟದ "ಗಂಭೀರ" ಸೇವಾವಲಯಗಳನ್ನು ವೆರಿಸೈನ್ ತನ್ನ ವಲಯದಲ್ಲಿಟ್ಟುಕೊಂಡು ಈ ತೆರನಾಗಿ ವರ್ತಿಸುವುದನ್ನು ಖಂಡಿಸಲಾಯಿತು.ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ವೆರಿಸೈನ್ ವಹಿವಾಟುಗಳಿಗೆ ತಕ್ಕ ಭದ್ರತೆ ಒದಗಿದುತ್ತದೆ.ಆದರೆ ವಹಿವಾಟು ವಲಯದಲ್ಲಿ ಅದರ ಪೈಪೋಟಿ ಸಾಮರ್ಥ್ಯವು ಇತರರಿಗೆ ಮಾದರಿಯಾಗುವಂತೆ U.S.ಡಿಪಾರ್ಟ್ ಮೆಂಟ್ ಆಫ್ ಜಸ್ಟೀಸ್ ಗಮನಿಸಬೇಕೆಂಬುದು ಈ ತಜ್ಞರ ಸಲಹೆಯಾಗಿದೆ.

DNS ನಿಯಂತ್ರಣ

[ಬದಲಾಯಿಸಿ]
DNS ಇಂಟರ್ ನೆಟ್ ನ ಮೂಲಭೂತ ಸೌಕರ್ಯಗಳಲ್ಲಿ ವೆರಿಸೈನ್ ಗೆ ಮಹತ್ವದ ಸ್ಥಾನವಿದೆ. ವೆರಿಸೈನ್ ಎರಡು ಅಥಾರೇಟಿಟಿವ್ ನೊಂದಣಿ ವಿಭಾಗದಲ್ಲಿ ಮಹತ್ವದೆನ್ನಲಾದ .com ಮತ್ತು .net.ಡೊಮೇನ್ ಗಳನ್ನು ನಿರ್ವಹಿಸುತ್ತದೆ. ಅದು ಉನ್ನತ ಮಟ್ಟದ ಕಂಟ್ರಿ ಕೋಡ್ ಗಳ ನಿರ್ವಹಣೆಯಲ್ಲೂ ತನ್ನ ಡೊಮೇನ್ ಗಳ ಪಾತ್ರಕ್ಕೆ ಮಹತ್ವ ನೀಡಿದೆ. .cc (ಕೊಕೊಸ್ ದ್ವೀಪಗಳು) ಮತ್ತು .tv (ಟುವೆಲು) ಇವುಗಳ ಕಾರ್ಯಾಚರಣೆಯಲ್ಲೂ ತನ್ನ ವೈಶಾಲ್ಯ ಮೆರೆದಿದೆ. ಇಷ್ಟೇ ಅಲ್ಲದೇ ವೆರಿಸೈನ್ .edu, .name, and .jobs ಡೊಮೇನ್ ಗಳಲ್ಲಿ ತನ್ನ ಪ್ರಭಾವ ಮೆರೆದಿದೆ.ತಾಂತ್ರಿಕ ಉಪಗುತ್ತಿಗೆ ಮೂಲಕ ಇವುಗಳ ಮೇಲೂ ತನ್ನ ನೊಂದಣಿ ಕಾರ್ಯಾಚರಣೆಗೆ ತೊಡಗಿದೆ.ಹೀಗೆ ಇತರ ಕಂಪನಿಗಳಿಗಿಂತ ಹೆಚ್ಚು ಪ್ರಭಾವಶಾಲಿ ಕೆಲಸಗಳಿಗೆ ಸ್ಪರ್ಧಾತ್ಮಕವಾಗಿ ಲಾಭ-ರಹಿತ ಉದ್ಯಮಗಳಂತೆ ತೊಡಗಿದೆ.ಇಂತಹ ವಿಶೇಷ ಡೊಮೇನ್ ಗಳು ಅದಕ್ಕೆ ಹೆಸರನ್ನು ತರುವಲ್ಲಿ ಸಫಲವಾಗಿವೆ. ರಜಿಸ್ಟ್ರಿ ಆಪ ರೇಟರ್ಸ್ ಗಳು ಸಾಮಾನ್ಯವಾಗಿ "ಸಗಟು" ಪಾತ್ರವಹಿಸುತ್ತಾರೆ.ಅದರಲ್ಲೂ ಕೆಲವು "ಕಿರುಕಳ" ಡೊಮೇನ್ ನೇಮ್ ರೆಜಿಸ್ಟ್ರಾರ್ ಗಳು .com ಮತ್ತು ಇನ್ನಿತರ ಸ್ಥಳೀಯ ಹೆಸರುಗಳನ್ನು ಗ್ರಾಹಕರಿಗೆ ಮಾರಾಟ ಮಾಡುತ್ತಾರೆ.

ಇಂಟರ್ ನೆಟ್ ನ ರೂಟ್ ಝೋನ್ ಫೈಲ್ ನ್ನು ನಿರ್ವಹಿಸುವ ಏಕೈಕ ಅಕಂಪನಿಯೆಂದರೆ ವೆರಿಸೈನ್ ಅದು ಎಲ್ಲಾ ಬದಲಾವಣೆಗಳನ್ನು ಕಾಲಕಾಲಕ್ಕೆ ಪರಿಷ್ಕರಿಸುತ್ತದೆ. ಅಧಿಕಾರಯುತ ಏಜೆನ್ಸಿಗಳಾದ (ಉದಾಹರಣೆಗೆ ICANN)ಹಲವಾರು ಉನ್ನತ ಮಟ್ಟದ ಡೊಮೇನ್ ಗಳ ಬದಲಾವಣೆಗೆ ಮನವಿ ಮಾಡುತ್ತವೆ.ಅದಕ್ಕಾಗಿ ರೂಟ್ ಝೋನ್ ಫೈಲ್ ನ್ನು US ಡಿಪಾರ್ಟ್ ಮೆಂಟ್ ಆಫ್ ಕಾಮರ್ಸ್ನಿಂದ ಅನುಮತಿ ಪಡೆಯಬೇಕಾಗುತ್ತದೆ. ಒಂದು ವೇಳೆ ವಾಣಿಜ್ಯ ಇಲಾಖೆಯು ಇದನ್ನು ಸಮ್ಮತಿಸಿದರೆ ವೆರಿಸೈನ್ ಬದಲಾಯಿಸಲು ಮುಂದಾಗುತ್ತದೆ. ಈ ಬದಲಾವಣೆಗಳನ್ನು ರೂಟ್ ಝೋನ್ ನ ಮೂಲದಲ್ಲಿ ಎ ರೂಟ್ ಸರ್ವರ್ ಮುಖಾಂತರ ಅಂದರೆ ಈಗ 13 ಸರ್ವರ್ ಗಳು ಒಂದು ಪ್ರತ್ಯೇಕ ವಿತರಣಾ ವಾಹಕದ ಮೂಲಕ ಬದಲಾವಣೆಗೆ ಈಡಾಗುತ್ತವೆ.ಈ ಬದಲಾವಣಾ ಪದ್ದತಿಯನ್ನು ವೆರಿಸೈನ್ ನಿರ್ವಹಿಸುತ್ತದೆ. ವೆರಿಸೈನ್ ಎರಡು ಇಂಟರ್ ನೆಟ್ ನ ರೂಟ್ ನೇಮ್ ಸರ್ವರ್ಸ್ ಎ ಮತ್ತು ಜೆ ಗಳನ್ನು ನಿರ್ವಹಿಸುತ್ತದೆ.ಇನ್ನುಳಿದ 11 ವಿವಿಧ ಸಂಸ್ಥೆಗಳು ಮತ್ತು ಪ್ರಾಧಿಕಾರದ ಮುಖಾಂತರ ನಡೆಸಲ್ಪಡುತ್ತವೆ. ಇದು ಏಕೈಕ ರೂಟ್ ಸರ್ವರ್ ಆಪರೇಟರ್ ಆಗಿದ್ದು ಒಂದಕ್ಕಿಂತ ಅಧಿಕ ಸರ್ವರ್ ಗಳನ್ನು ನಿಯಂತ್ರಿಸುತ್ತದೆ. ಜೆ ರೂಟ್ ಸರ್ವರ್ ಗಳೆಂದರೆ ಅನಿಕಾಸ್ಟೆಡ್ ಅದರ ಆಡಳಿತ ನಿರ್ವಹಣಾಡಿ ಬರುವ ಸೇವಾ ಕಾರ್ಯ ವಿಧಾನಗಳಲ್ಲಿ ನೆಟ್ವರ್ಕ್ ಕೆಲಸ ಮಾಡುತ್ತದೆ.

ವೆರಿಸೈನ್ ನೇಮಿಂಗ್ ಅಂಡ್ ಡಿಕ್ಷನರಿ ವಿಭಾಗವು ಲೌಡೌನ್ ಟೆಕ್ ಸೆಂಟರ್ ನ ಸ್ಟೆರ್ಲಿಂಗ್ VA ನಲ್ಲಿದೆ. ಇಡೀ ಕಟ್ಟಡವನ್ನೇ ಅದು ತನ್ನ ಕಾರ್ಯಗಳಿಗಾಗಿ ಗುತ್ತಿಗೆ ಲೀಸ್ ಪಡೆದು ತನ್ನ ಕಚೇರಿಯೊಂದಿಗೆ ಎರಡು ಮಿರರ್ ಡಾಟಾ ಸೆಂಟರ್ ಗಳ ನಡೆಸುತ್ತದೆ.ಇದರಲ್ಲಿ ವೆರಿಸೈನ್ ನ ರೆಜಿಸ್ಟ್ರಿ ಸರ್ವಿಸಿಸ್ ಮತ್ತು ಅದರ ATLAS ಅಟ್ಲಾಸ್ ಸಿಸ್ಟೆಮ್ ಮತ್ತು ರೂಟ್ ಸರ್ವರ್ ಗಳು ಅಲ್ಲಿ ಕಾರ್ಯ ನಿರ್ವಹಿಸುತ್ತವೆ. ಇವೆರಡೂ ಡಾಟಾ ಸೆಂಟರ್ ಗಳು ಮೂರನೆಯ ಡಾಟಾ ಸಂಟರ್ ಗೆ ಪ್ರತಿಬಂಬದ ಪೂರಕ ಕಾರ್ಯವಿಧಾನಗಳಾಗಿವೆ.ಇದು ಬ್ರೋಡ್ ರನ್ ಟೆಕ್ನಾಲಜಿ ಪಾರ್ಕ್ ಹತ್ತಿರ ಇರುವ ಡುಲ್ಲೆಸ್ ಏರ್ಪೊರ್ಟ್ ನ ಸ್ಥಾನದಲ್ಲಿದೆ. ಇವೆರಡೂ ಸವಲತ್ತುಗಲು ತೀವ್ರ ಭದ್ರತೆ ಮತ್ತು ವಿವಾದಾತ್ಮಕ ಮೂಲಭೂತ ಸವಲತ್ತುಗಳ ಜಾಗೆಯಾಗಿದೆ.ಇದಕ್ಕೆ ಡಿಪಾರ್ಟ್ ಮೆಂಟ್ ಆಫ್ ಹೋಮ್ ಲ್ಯಾಂಡ್ ಸೆಕ್ಯುರಿಟಿ ಸರ್ಕಾರದ ವಿಭಾಗವು ವಿಶೇಷ ರಕ್ಷಣೆ ನೀಡುತ್ತದೆ.[ಸೂಕ್ತ ಉಲ್ಲೇಖನ ಬೇಕು]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ [೧]
  2. ೨.೦ ೨.೧ Gonsalves, Antone (October 10, 2005). "EBay To Buy VeriSign Online Payment Service". InformationWeek. Retrieved 2008-04-25.
  3. ವೆರಿಸೈನ್ ಶಿಫ್ಟ್ಸ್ ಹೆಡ್ ಕ್ವಾರ್ಟೆರ್ಸ್ ಟು ವರ್ಜಿನಿಯಾ
  4. Miller, Rich (2006-05-17). "VeriSign To Buy GeoTrust, Combining Top SSL Providers". Netcraft.com. Retrieved 2007-08-21.
  5. ವೆರಿಸೈನ್ ಬೋರ್ಡ್ ಆಫ್ ಡೈರೆಕ್ಟರ್ಸ್ ಇಲೆಕ್ಟ್ಸ್ ವಿಲಿಯಮ್ ಎ ರೊಪರ್ ,ಜೂ. ಆಸ್ ಚೀಫ್ ಎಕ್ಶಿಕ್ಯುಟಿವ್ ಆಫೀಸರ್ ಅಂಡ್ ಎಡ್ವರ್ಡ್ ಎ ಮ್ಯುಲರ್ ಅಸ್ ಚೇರ್ಮನ್ ಫ್ರಾಮ್ ವೆರಿಸೈನ್ , ಇಂಕಾ
  6. "Melbourne IT buys VeriSign's DBMS". businessspectator.com.au. 2008-04-30. Retrieved 2008-04-30.
  7. ವೆರಿಸೈನ್ ನೇಮ್ಸ್ ಫೌಂಡರ್ ಜಿಮ್ ಬಿಡ್ಜೊಸ್ ಟು ಎಕ್ಸಿಕ್ಯುಟಿವ್ ಚೇರ್ಮನ್ ಪ್ರೆಸಿಡೆಂಟ್ ಅಂಡ್ CEO ಫ್ರಾಮ್ ವೆರಿಸೈನ್, ಇಂಕಾ
  8. ಒರಲ್ ಹಿಸ್ಟ್ರಿ ಇಂಟರ್ ವಿವ್ ಉಯಿತ್ ಜೇಮ್ಸ್ ಬಿಡೊಜಸ್
  9. "VeriSign Price Increase". Archived from the original on 2011-07-28. Retrieved 2021-08-10.
  10. "About VeriSign - [[VeriSign, Inc.]]". Archived from the original on 2008-07-23. Retrieved 2008-10-23. {{cite web}}: URL–wikilink conflict (help)
  11. "VeriSign Refines Strategic Direction to Focus on Internet Infrastructure" (Press release). VeriSign.com. 2007-11-14. Retrieved 2007-11-14.
  12. "VeriSign looking to divest units: report". washingtonpost.com. 2007-11-14. Retrieved 2007-11-14.
  13. "VeriSign to divest slower units, sees staff halved". Reuters. 2007-11-14. Retrieved 2010-05-25.
  14. "VeriSign Sells Communications Services Group". silicontap.com. 2009-03-02. Retrieved 2009-03-02.
  15. TheRegister.co.uk:ನಿವ್ ಡೊಮೇನ್ ಪ್ರಕರಣಕ್ಕಾಗಿ ವೆರಿಸೈನ್ ಗೆ ತರಾಟೆ
  16. "Litigation Documents". ICANN.org. 2007-03-26. Retrieved 2007-08-21.
  17. "Kremen v. Network Solutions, Inc" (PDF). 2003-07-25. Archived from the original (PDF) on 2007-02-03. Retrieved 2007-08-21.


ಬಾಹ್ಯ ಕೊಂಡಿಗಳು

[ಬದಲಾಯಿಸಿ]

ಅಧಿಕೃತ ಜಾಲತಾಣ

[ಬದಲಾಯಿಸಿ]

ನಿವ್ಸ್ ಅಂಡ್ ಫೈನಾನ್ಸಿಯಲ್ ರಿಪೊರ್ಟ್ಸ್

[ಬದಲಾಯಿಸಿ]