ವೇದಿಕೆ
ಗೋಚರ
ವೇದಿಕೆಯು[೧][೨][೩][೪] ಕೋಣೆ ಅಥವಾ ಸಭಾಂಗಣದ ಮುಂಭಾಗದಲ್ಲಿರುವ ಎತ್ತರಿಸಿದ ಮೇಲ್ಮೈ. ಇದು ಒಬ್ಬರು ಅಥವಾ ಹೆಚ್ಚು ಭಾಷಣಕಾರರು ಅಥವಾ ಗೌರವಾನ್ವಿತ ಅತಿಥಿಗಳಿಗಾಗಿ ಇರುತ್ತದೆ.
ಐತಿಹಾಸಿಕವಾಗಿ, ವೇದಿಕೆಯು ಮಧ್ಯಕಾಲೀನ ಸಭಾಂಗಣದ ಕೊನೆಯಲ್ಲಿದ್ದ ನೆಲಹಾಸಿನ ಭಾಗವಾಗಿರುತ್ತಿತ್ತು, ಮತ್ತು ಉಳಿದ ಕೋಣೆಗಿಂತ ಒಂದು ಮೆಟ್ಟಿಲು ಮೇಲೆ ಎತ್ತರಿಸಲಾಗಿರುತ್ತಿತ್ತು. ಇದರ ಮೇಲೆ, ಮನೆ ಅಥವಾ ಸಭೆಯ ಒಡೆಯನು ತನ್ನ ಹಿರಿಯ ಜೊತೆಗಾರರು ಹಾಗೂ ಸ್ನೇಹಿತರೊಂದಿಗೆ ಎತ್ತರದ ಮೇಜಿನ ಮೇಲೆ ಭೋಜನ ಮಾಡುತ್ತಿದ್ದನು, ಮತ್ತು ಇತರ ಅತಿಥಿಗಳು ಕೋಣೆಯ ಕೆಳಗಿನ ಪ್ರದೇಶದಲ್ಲಿ ಇರುತ್ತಿದ್ದರು.
ಸೇನಾ ಕವಾಯತುಗಳಲ್ಲಿ, ವೇದಿಕೆಯು ಎತ್ತರಿಸಲಾಗಿರುವ, ಕೆಲವೊಮ್ಮೆ ಮುಚ್ಚಲ್ಪಟ್ಟಿರುವ ಮೇಲ್ಮೈಯಾಗಿರುತ್ತದೆ. ಇಲ್ಲಿಂದ ಪಡೆಗಳನ್ನು ಪರಿಶೀಲಿಸಲಾಗುತ್ತದೆ, ಭಾಷಣಗಳನ್ನು ಮಾಡಲಾಗುತ್ತದೆ ಮತ್ತು ಸೆಲ್ಯೂಟ್‍ಗಳನ್ನು ಪಡೆಯಲಾಗುತ್ತದೆ. ಇದು ಮೆಟ್ಟಿಲುಗಳು ಹಾಗೂ ಸಿಂಹಾಸನವನ್ನೂ ಹೊಂದಿರಬಹುದು.
ಉಲ್ಲೇಖಗಳು
[ಬದಲಾಯಿಸಿ]- ↑ dais in the Random House Dictionary
- ↑ dais Archived 2019-03-06 ವೇಬ್ಯಾಕ್ ಮೆಷಿನ್ ನಲ್ಲಿ. in Oxford Dictionaries Online
- ↑ dais in the American Heritage Dictionary
- ↑ Merriam-Webster Online - Dais
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]- New International Encyclopedia. 1905. .