ವ್ಲಾಡಿಮಿರ್ ಲೆನಿನ್
ಗೋಚರ
(ವ್ಲಾದಿಮಿರ್ ಲೆನಿನ್ ಇಂದ ಪುನರ್ನಿರ್ದೇಶಿತ)
ವ್ಲಾಡಿಮಿರ್ ಇಲ್ಯಿಚ್ ಲೆನಿನ್ Владимир Ильич Ленин | |
| |
ಸೋವಿಯೆಟ್ ಒಕ್ಕೂಟದ ಅಧ್ಯಕ್ಷ
| |
ಅಧಿಕಾರದ ಅವಧಿ ನೆವೆಂಬರ್ ೮, ೧೯೧೭ – ಜನವರಿ ೨೧, ೧೯೨೪ | |
ಉತ್ತರಾಧಿಕಾರಿ | ಜೋಸೆಫ್ ಸ್ಟಾಲಿನ್ |
---|---|
ಜನನ | ಸಿಂಬಿರ್ಸ್ಕ್, ರಷ್ಯಾದ ಸಾಮ್ರಾಜ್ಯ | ೨೨ ಏಪ್ರಿಲ್ ೧೮೭೦
ಮರಣ | 21 January 1924 ಗೋರ್ಕಿ, ಸೋವಿಯೆಟ್ ಒಕ್ಕೂಟ | (aged 53)
ರಾಜಕೀಯ ಪಕ್ಷ | ಬೋಲ್ಷೆವಿಕ್ ಪಕ್ಷ |
ಜೀವನಸಂಗಾತಿ | ನಡೆಜ್ಡ ಕ್ರುಪ್ಸ್ಕಾಯ |
ವೃತ್ತಿ | ರಾಜಕಾರಣಿ, ವಕೀಲ |
ಧರ್ಮ | ನಾಸ್ತಿಕ |
ಹಸ್ತಾಕ್ಷರ |
ವ್ಲಾಡಿಮಿರ್ ಇಲ್ಯಿಚ್ ಲೆನಿನ್ (Влади́мир Ильи́ч Ле́нин) (ಏಪ್ರಿಲ್ ೨೨, ೧೮೭೦ - ಜನವರಿ ೨೧, ೧೯೨೪) ಇವರು ರಷ್ಯಾ ದೇಶದ ಕ್ರಾಂತಿಕಾರಿಗಳು, ಕಮ್ಯುನಿಸ್ಟ್ ಸಿದ್ಧಾಂತದ ರಾಜಕಾರಣಿ, ಅಕ್ಟೋಬರ್ ಕ್ರಾಂತಿಯ ಮುಖ್ಯ ನಾಯಕ, ಸೋವಿಯೆಟ್ ಒಕ್ಕೂಟದ ಪ್ರಥಮ ಅಧ್ಯಕ್ಷ. ಅವರು ೧೯೧೭ರಿಂದ ರಷ್ಯಾದ ಸೋವಿಯಟ್ ಫ಼ೆಡರೇಟಿವ್ ಸೋಶಿಯಲಿಸ್ಟ್ ರಿಪಬ್ಲಿಕ್‍ನ ಸರ್ಕಾರದ ಮುಖ್ಯಸ್ಥರಾಗಿ, ಮತ್ತು ೧೯೨೨ರಿಂದ ತಮ್ಮ ನಿಧನದವರೆಗೆ ಸೋವಿಯಟ್ ಒಕ್ಕೂಟದ ಸರ್ಕಾರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದರು. ಅವರ ಆಡಳಿತದಡಿಯಲ್ಲಿ, ರಷ್ಯನ್ ಸಾಮ್ರಾಜ್ಯದ ಬದಲಿಗೆ ಸೋವಿಯಟ್ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು; ನೆಲ, ಕೈಗಾರಿಕೆ ಮತ್ತು ವ್ಯಾಪಾರವನ್ನು ಒಳಗೊಂಡಂತೆ ಎಲ್ಲ ಸಂಪತ್ತನ್ನು ರಾಷ್ಟ್ರೀಕರಿಸಲಾಯಿತು.