ವಿಷಯಕ್ಕೆ ಹೋಗು

ಶಕುಂತಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಕುಂತಲ ಇಂದ ಪುನರ್ನಿರ್ದೇಶಿತ)
ಶಕುಂತಲೆ
ಮಹಾಭಾರತ character
Information
ಕುಟುಂಬವಿಶ್ವಾಮಿತ್ರ (father) ಮತ್ತು ಮೇನಕ(mother)
ಗಂಡ/ಹೆಂಡತಿDushyanta
ಮಕ್ಕಳುಭರತ
ರಾಜ ರವಿವರ್ಮ- ಮಹಾಭಾರತ- ಶಕುಂತಲೆಯ ಜನನ
ಶಕುಂತಲೆ, ರಾಜ ರವಿವರ್ಮ ಅವರ ಚಿತ್ರಕಲೆ
ದುಶ್ಯಂತನಿಗೆ ಶಕುಂತಲೆಯ ಪತ್ರ, ರಾಜ ರವಿ ವರ್ಮಾ ಅವರ ಚಿತ್ರಕಲೆ
ಶಕುಂತಲೆಯ ನಿರಾಶೆ ಭಾವ, ರಾಜ ರವಿ ವರ್ಮಾ ಅವರ ಚಿತ್ರಕಲೆ

ಶಕುಂತಲೆ ಮಹಾಭಾರತದಲ್ಲಿ ಬರುವ ಒಂದು ಕಥೆಯ ಪಾತ್ರ. ಶಕುಂತಲೆ ದುಶ್ಯಂತ ಮಹಾರಾಜನ ಪತ್ನಿ ಮತ್ತು ಚಕ್ರವರ್ತಿ ಭರತನ ತಾಯಿ. ಮಹಾಭಾರತದಲ್ಲಿ ಈ ಕಥೆಯ ಉಲ್ಲೇಖವಿದೆ. ಕಾಳಿದಾಸನು ಅಭಿಜ್ಞಾನ ಶಾಕುಂತಲಮ್ ಎಂಬ ನಾಟಕವನ್ನು ಬರೆದಿದ್ದಾನೆ. ಇಲ್ಲಿ ಬರುವ ಶಕುಂತಲೆಯ ಪಾತ್ರವು ಬರಹಗಾರರಿಂದ ನಾಟಕೀಯವಾಗಿ ನಿರೂಪಿಸಲ್ಪಟ್ಟಿದೆ.

ಆರಂಭಿಕ ಕಥೆ

[ಬದಲಾಯಿಸಿ]

ರಿಷಿ ಕಣ್ವ ಮಹರ್ಷಿಗಳಿಗೆ ಶಕುಂತಪಕ್ಷಿಗಳ ಮಧ್ಯೆ ಇರುವ ಪುಟ್ಟ ಮಗುವೊಂದು ಕಾಡಿನಲ್ಲಿ ಸಿಗುತ್ತದೆ. ಕಾಡಿನಲ್ಲಿ ಸಿಕ್ಕಿದ ಮಗುವನ್ನು ಕಣ್ವ ಋಷಿಗಳು ತಮ್ಮ ಆಶ್ರಮಕ್ಕೆ ತಂದು ಬೆಳೆಸುತ್ತಾರೆ. ಶಕುಂತ ಪಕ್ಷಿಗಳ ಮಧ್ಯೆ ದೊರಕಿದ ಕಾರಂ ಮಗುವಿಗೆ ಶಕುಂತಲೆ ಎಂದು ಹೆಸರಿಟ್ಟು ಕರೆಯುತ್ತಾರೆ. ಶಕುಂತ ಅಂದರೆ ಸುರಕ್ಷಿತ ಎಂದು ಆದಿ ಪರ್ವದಲ್ಲಿ ಕಣ್ವ ಮಹರ್ಷಿಗಳು ವಿವರಿಸಿದ್ದಾರೆ.

ಶಕುಂತಲೆಯ ವಿವಾಹ

[ಬದಲಾಯಿಸಿ]

ದುಶ್ಯಂತನು ತನ್ನ ಸೇನೆಯೊಂದಿಗೆ ಕಾಡಿನ ಮೂಲಕ ತನ್ನ ಶಸ್ತ್ರಾಸ್ತ್ರದಿಂದ ಗಾಯಗೊಂಡಂತಹ ಗಂಡು ಜಿಂಕೆಯನ್ನು ಹಿಂಬಾಲಿಸುತ್ತಾ ಪ್ರಯಾಣಿಸುತ್ತಿರುವಾಗ ರಾಜ ಮೊದಲು ಶಕುಂತಲೆಯನ್ನು ಎದುರಾಗುತ್ತಾನೆ. ಕಣ್ವ ಮಹರ್ಷಿಗಳ ಆಶ್ರಮಕ್ಕೆ ಬಂದ ದುಷ್ಯಂತ ಶಕುಂತಲೆಯನ್ನು ಪ್ರೇಮಿಸಿ ಗಾಂಧರ್ವ ವಿವಾಹವಾಗುತ್ತಾನೆ. ಅವನ ಸಾಮ್ರಾಜ್ಯಕ್ಕೆ ಹಿಂದಿರುಗುವ ಮೊದಲು ದುಷ್ಯಂತ ತನ್ನ ವೈಯಕ್ತಿಕ ಉಂಗುರವನ್ನು ಅವಳಿಗೆ ಕೊಟ್ಟು ತನ್ನ ಅರಮನೆಗೆ ಕರೆದುಕೊಂಡು ಹೋಗುವ ಭರವಸೆಯನ್ನು ನೀಡಿರುತ್ತಾನೆ. ಶಕುಂತಲೆ ತನ್ನ ಗಂಡನ ನೆನಪಿನಲ್ಲಿ ಸದಾ ಮಗ್ನಳಾಗಿರುತ್ತಿದ್ದಳು.

ದೂರ್ವಾಸ ಮುನಿಯ ಶಾಪ

[ಬದಲಾಯಿಸಿ]

ಒಂದು ಬಾರಿ ದೂರ್ವಾಸಮುನಿ ಎಂಬ ಪ್ರಬಲ ಋಷಿ, ಆಶ್ರಮಕ್ಕೆ ಬಂದರು ಆದರೆ ದುಶ್ಯಾಂತನ ಆಲೋಚನೆಗಳಲ್ಲಿ ಕಳೆದಹೋಗಿದ್ದ ಶಕುಂತಲೆಗೆ ಅವರಿಗೆ ಸರಿಯಾಗಿ ಸ್ಪಂದಿಸುವಲ್ಲಿ ವಿಫಲವಾದಳು. ಈ ಕಾರಣದಿಂದಾಗಿ ಋಷಿಗಳು ಕೋಪಗೊಂಡು ಅವಳಿಗೆ ನೀನು ಕನಸು ಕಾಣುತ್ತಿದ್ದ ವ್ಯಕ್ತಿಯು ನಿನ್ನನ್ನು ಸಂಪೂರ್ಣವಾಗಿ ಮರೆತುಬಿಡಲಿ ಎಂದು ಹೇಳಿ ಶಾಪವನ್ನು ನೀಡಿ ಕೋಪದಿಂದ ಹೊರಟುಹೋದರು. ಅವಳು ಅವರಲ್ಲಿ ಕ್ಷಮೆಯಾಚಿಸುತ್ತಾಳೆ. ನಂತರ ಮುನಿಗಳ ಕೋಪ ಹೊರಟುಹೋದ ಮೇಲೆ ನಿನ್ನನ್ನು ಮರೆತಿದ್ದ ವ್ಯಕ್ತಿಯು ನಿನಗೆ ನೀಡಲಾದ ವೈಯಕ್ತಿಕ ಸಂಕೇತವಾದ ಉಂಗುರವನ್ನು ತೋರಿಸಿದ್ದಲ್ಲಿ ಅವನು ಎಲ್ಲವನ್ನೂ ನೆನಪಿಸಿಕೊಳ್ಳುತ್ತಾನೆ ಎಂದು ತಾವು ಕೊಟ್ಟ ಶಾಪವನ್ನು ಮಾರ್ಪಡಿಸುತ್ತಾರೆ. []

ಕಳೆದುಹೋದ ಉಂಗುರ

[ಬದಲಾಯಿಸಿ]

ಶಾಕುಂತಲಾ ಗರ್ಭವತಿಯಾದಾಗ ಆಕೆಯನ್ನು ದುಷ್ಯಂತನಲ್ಲಿಗೆ ಕಳುಹಿಸುವ ನಿರ್ಧಾರವನ್ನು ಮಾಡುತ್ತಾರೆ.ಆಸ್ರಮದ ಸಹವರ್ತಿಗಳೊಂದಿಗೆ ರಾಜಧಾನಿಗೆ ತೆರಳುತ್ತಾರೆ. ದಾರಿಯಲ್ಲಿ ಅವರು ದೋಣಿ ಮೂಲಕ ನದಿ ದಾಟಬೇಕಿತ್ತು ಮತ್ತು ನದಿಯ ಆಳವಾದ ನೀಲಿ ನೀರಿನ ಮಾರುದಕ್ಕು, ಶಕುಂತಲಾ ನೀರಿನ ಮೂಲಕ ತನ್ನ ಬೆರಳುಗಳನ್ನು ಓಡಾಡಿಸುತ್ತಿದ್ದಳು. ಆ ಸಮಯದಲ್ಲಿ ಆಕೆಗೆ ದುಷ್ಯಂತನು ಕೊಟ್ಟ ಉಂಗುರವು ನೀರಿನಲ್ಲಿ ಬಿದ್ದು ಬಿಡುತ್ತದೆ.

ಆಸ್ಥಾನದಲ್ಲಿನ ಕಥೆ

[ಬದಲಾಯಿಸಿ]

ಶಕುಂತಲೆ ದುಷ್ಯಂತನ ಆಸ್ಥಾನಕ್ಕೆ ಬಂದಾಗ, ಅವಳ ಪತಿ ತನ್ನನ್ನು ಗುರುತಿಸದೆ ಇರುವುದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಅವಳ ಬಗ್ಗೆ ಏನನ್ನು ನೆನಪಿಸಿಕೊಳ್ಳಲು ಆತನಿಗೆ ಸಾಧ್ಯವಾಗಲಿಲ್ಲ. ಆಕೆಗೆ ಮುನಿಗಳು ಕೊಟ್ಟಂತಹ ಶಾಪದ ನೆನಪಾಯಿತು ಆದರೆ ಆಕೆಯ ಕೈಯಲ್ಲಿ ಅವನು ಕೊಟ್ಟಂತಹ ಉಂಗುರ ಇರಲಿಲ್ಲ. ಆದರೂ ಅವಳು ಉಂಗುರ ಇಲ್ಲದೆಯೇ ನೆನಪಿಸಲು ಪ್ರಯತ್ನಿಸಿದಳು. ಆದರೂ ದುಷ್ಯಂತ ಅವಳನ್ನು ಗುರುತಿಸಲಿಲ್ಲ. ಅವಮಾನಕ್ಕೊಳಗಾದ ಅವಳು ತನ್ನ ಮಗನನ್ನು ಕರೆದುಕೊಂಡು ಅರಣ್ಯಕ್ಕೆ ಮರಳಿ ಕಾಡಿನ ಮಧ್ಯ ಭಾಗದಲ್ಲಿ ಸ್ವತಃ ನೆಲೆಸುತ್ತಾಳೆ.

ಭರತ ಮತ್ತು ಶಕುಂತಲೆ

[ಬದಲಾಯಿಸಿ]

ಶಕುಂತಲೆಯ ಮಗನಾದ ಭರತನು ವಯಸ್ಸಾದಂತೆ ಬೆಳೆಯತೊಡಗಿದನು.ಹುಲಿ ಸಿಂಹಗಳ ಬಾಯಿಗಳನ್ನು ತೆರೆದು ಮತ್ತು ಅದರಲ್ಲಿನ ಹಲ್ಲುಗಳನ್ನು ಎಣಿಸುವುದು ಅವನ ಕ್ರೀಡೆಯಾಗಿತ್ತು. ಈ ಮಧ್ಯೆ ಮೀನುಗಾರನು ಹಿಡಿದ ಒಂದು ಮೀನಿನ ಹೊಟ್ಟೆಯಲ್ಲಿ ರಾಜಮನೆತನದ ಉಂಗುರವನ್ನು ಕಂಡು ದುಷ್ಯಂತನಿಗೆ ಆಶ್ಚರ್ಯವಾಯಿತು. ರಾಜಮನೆತನದ ಮುದ್ರೆಯನ್ನು ಗುರುತಿಸಿದ ಅವನು ಅರಮನೆಗೆ ತೆಗೆದುಕೊಂಡು ಹೋದನು ಆ ಉಂಗುರವನ್ನು ನೋಡಿದ ಮೇಲೆ ದುಷ್ಯಂತೆಗೆ ಶಕುಂತಲೆಯ ನೆನಪಾಗುತ್ತದೆ. ತಕ್ಷಣವೇ ಆಕೆಯನ್ನು ಕಂಡುಕೊಳ್ಳಲು ಹೊರಟನು ಮತ್ತು ಆಕೆಯ ತಂದೆಯ ಆಶ್ರಮಕ್ಕೆ ಬಂದನು, ಅವಳು ಅಲ್ಲಿ ಇಲ್ಲದಿರುವುದನ್ನು ತಿಳಿದು ಹುಡುಕಲು ಮುಂದಾದನು. ಅವನು ತನ್ನ ಹೆಂಡತಿಯನ್ನು ಕಂಡುಕೊಳ್ಳಲು ಅರಣ್ಯದಲ್ಲಿ ಆಳವಾಗಿ ಮುಂದುವರೆದು ಕಾಡಿನಲ್ಲಿನ ಮಧ್ಯ ಭಾಗಕ್ಕೆ ಬಂದು ಒಂದು ಆಶ್ಚರ್ಯಕರ ದೃಶ್ಯವೊಂದನ್ನು ಕಂಡನು. ಚಿಕ್ಕ ಹುಡುಗನೊಬ್ಬ ಸಿಂಹದ ಬಾಯಿಯನ್ನು ತೆರೆದು ಅದರ ಹಲ್ಲುಗಳನ್ನು ಎಣಿಸುತ್ತಿದ್ದನು. ಅದನ್ನು ನೋಡಿ ಈತ ಯಾರೋ ಅರಸನ ಹುಡುಗನೇ ಇರಬೇಕೆಂದುಕೊಂಡ, ಅವನ ಧೈರ್ಯ ಮತ್ತು ಶಕ್ತಿ ನೋಡಿ ಆಶ್ಚರ್ಯಚಕಿತನಾದನು ಮತ್ತು ಹತ್ತಿರ ಬಂದು ಅವನ ಹೆಸರನ್ನು ಕೇಳಿದನು. ಆ ಹುಡುಗನು ನಾನು ದುಷ್ಯಂತನ ಮಗನಾದ ಭರತನೆಂದು ಉತ್ತರಿಸಿದಾಗ ಅವನು ಆಶ್ಚರ್ಯಚಕಿತನಾದನು. ನಂತರ ಆ ಹುಡುಗನು ಅವನನ್ನು ಶಕುಂತಲೆಯ ಹತ್ತಿರ ಕರೆದೊಯ್ದನು. ಶಕುಂತಲೆ ಆತನನ್ನು ನೋಡಿ ತುಂಬಾ ಸೊಂತೋಷಪಟ್ಟಳು ಮತ್ತು ಅವನ ಕುಟುಂಬವು ಪುನಃ ಸೇರಿತು.[]

ಉಲ್ಲೇಖಗಳು

[ಬದಲಾಯಿಸಿ]



"https://kn.wikipedia.org/w/index.php?title=ಶಕುಂತಲೆ&oldid=1252734" ಇಂದ ಪಡೆಯಲ್ಪಟ್ಟಿದೆ