ವಿಷಯಕ್ಕೆ ಹೋಗು

ಶಕುನ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶಕುನ ಎಂದರೆ ಹಲವುವೇಳೆ ಬದಲಾವಣೆಯ ಆಗಮನವನ್ನು ಸೂಚಿಸುವ, ಭವಿಷ್ಯವನ್ನು ನುಡಿಯುತ್ತದೆಂದು ನಂಬಲಾದ ಒಂದು ವಿದ್ಯಮಾನ.[] ಶಕುನಗಳು ತಮ್ಮ ದೇವತೆಗಳಿಂದ ದೈವಿಕ ಸಂದೇಶವನ್ನು ತರುತ್ತವೆ ಎಂದು ಪ್ರಾಚೀನ ಕಾಲದಲ್ಲಿ ಜನರು ನಂಬಿದ್ದರು.[]

ಈ ಶಕುನಗಳಲ್ಲಿ ನೈಸರ್ಗಿಕ ವಿದ್ಯಮಾನಗಳು, ಉದಾಹರಣೆಗೆ ಗ್ರಹಣ, ಪ್ರಾಣಿಗಳು ಮತ್ತು ಮನುಷ್ಯರ ಅಸಹಜ ಜನನಗಳು ಮತ್ತು ಬಲಿಗೆ ಹೊರಟಿರುವ ಬಲಿಯ ಕುರಿಮರಿಯ ವರ್ತನೆ ಸೇರಿವೆ. ಈ ಶಕುನಗಳನ್ನು ವಿವರಿಸಲು ದೈವಜ್ಞರು ಎಂಬ ತಜ್ಞರಿದ್ದರು. ಇವರು ತಮ್ಮ ದೇವತೆಗಳೊಂದಿಗೆ ಸಂಕಟದ ಸಮಯದಲ್ಲಿ ಸಂಪರ್ಕ ಸಾಧಿಸಲು ಒಂದು ಕೃತಕ ವಿಧಾನವನ್ನು ಕೂಡ ಬಳಸುತ್ತಿದ್ದರು, ಉದಾಹರಣೆಗೆ ಕುರಿ ಯಕೃತ್ತಿನ ಜೇಡಿಮಣ್ಣಿನ ಮಾದರಿ. ಇವರು ಯುಗಳ ಉತ್ತರವನ್ನು ನಿರೀಕ್ಷಿಸುತ್ತಿದ್ದರು, ಹೌದು ಅಥವಾ ಇಲ್ಲ ಎಂಬ ಉತ್ತರ, ಅನುಕೂಲಕರವಾದ ಅಥವಾ ಅನುಕೂಲವಲ್ಲದ. ಭವಿಷ್ಯದಲ್ಲಿ ಏನು ಆಗುವುದು ಎಂದು ಊಹಿಸಲು ಮತ್ತು ವಿಪತ್ತನ್ನು ತಪ್ಪಿಸುವ ಸಲುವಾಗಿ ಕ್ರಮ ಕೈಗೊಳ್ಳಲು ಇವರು ಇವನ್ನು ಮಾಡುತ್ತಿದ್ದರು. "ಶಕುನ" ಶಬ್ದವು ಸಾಮಾನ್ಯವಾಗಿ ಬದಲಾವಣೆಯ ಸ್ವರೂಪದ ಉಲ್ಲೇಖವನ್ನು ಹೊಂದಿರುವುದಿಲ್ಲ, ಹಾಗಾಗಿ ಸಂಭಾವ್ಯವಾಗಿ "ಶುಭ" ಅಥವಾ "ಅಶುಭ"ವಾಗಿರಬಹುದಾದರೂ, ಈ ಪದವನ್ನು ಹೆಚ್ಚು ವೇಳೆ ಅಶುಭ ಸೂಚನೆಯ ಅರ್ಥದಲ್ಲಿ ಬಳಸಲಾಗುತ್ತದೆ, ಅಪಶಕುನ ಎಂಬ ಅರ್ಥದಲ್ಲಿ.

ಪ್ರಾಚೀನ ಗ್ರೀಸ್‍ನಲ್ಲಿ, ಶಕುನವನ್ನು ಮಾಂಸಾಹಾರಿ ರಣಹದ್ದಾಗಿ ವ್ಯಾಖ್ಯಾನಿಸಲಾಗಿತ್ತು, ವಿಶೇಷವಾಗಿ ಭವಿಷ್ಯ ಸೂಚಕ ಪಕ್ಷಿಯಾಗಿ. ಪಕ್ಷಿಯ ಕೂಗುಗಳ ಎಚ್ಚರಿಕೆಯ ವೀಕ್ಷಣೆಯಿಂದ ಮತ್ತು ಅದು ಹಾರುವ ರೀತಿ ಅಥವಾ ದಿಕ್ಕಿನಿಂದ, ಶಕುನಿಗರು ಭವಿಷ್ಯವನ್ನು ಮುನ್ನುಡಿಯಲು ಪ್ರಯತ್ನಿಸುತ್ತಿದ್ದರು. ಇವರು ಮಿಂಚು ಅಥವಾ ಗುಡುಗನ್ನು ಕೂಡ ಜ಼್ಯೂಸ್ ಕಳುಹಿಸಿದ ಶಕುನಗಳೆಂದು ನೋಡುತ್ತಿದ್ದರು, ಮತ್ತು ಅವನ್ನು ನೋಡಿದ ಅಥವಾ ಕೇಳಿದ ದಿಕ್ಕನ್ನು ಗಮನಿಸುತ್ತಿದ್ದರು. ಶಕುನಗಳು ದೇವತೆಗಳ ದೈವಿಕ ಇಚ್ಛೆ ಮತ್ತು ತೀರ್ಮಾನಗಳನ್ನು ಪ್ರತಿನಿಧಿಸುತ್ತಿದ್ದವು. ಅವುಗಳ ಸ್ಥಾನವು ಮಾನವ ಪ್ರಯತ್ನಗಳಿಗೆ ವಿರುದ್ಧವಾಗಿತ್ತು. ಆ ಕಾಲದ ಸೂಕ್ಷ್ಮ ಗ್ರಾಹಕರಿಂದ ತಿಳಿಯಲ್ಪಡುವುದು ಅವುಗಳ ಗುರಿಯಾಗಿತ್ತು. ಈ ಗ್ರಾಹಕರು ಮಧ್ಯವರ್ತಿಗಳಾಗಲು, ಅಂದರೆ ದೇವೆತೆಗಳು ಮತ್ತು ಮನುಷ್ಯರ ಪ್ರಪಂಚದ ನಡುವೆ ಮಾಧ್ಯಮಗಳಾಗಲು, ದೈವಿಕ ವರ್ಚಸ್ಸನ್ನು ತರುತ್ತಿದ್ದರು. ಹೋಮರ್‌ನ ಕಾಲದಿಂದಲೂ, ಗ್ರೀಕರು ಈ ಚಿಹ್ನೆಗಳಿಗೆ ವಿಶೇಷ ಗಮನ ಕೊಟ್ಟರು: ಅವರು ಎಡಗಡೆಯಿಂದ ಹದ್ದುಗಳನ್ನು (ಜ಼್ಯೂಸ್‍ನ ಮತ್ತೊಂದು ಸಂಕೇತ) ನೋಡಿದಾಗ ಅದನ್ನು ಅಪಶಕುನವೆಂದು ಪರಿಗಣಿಸಿದರು. ಬಲಗಡೆಗೆ ಕ್ರೌಂಚಪಕ್ಷಿಯ ಕೂಗು ಅಥವಾ ಮಿಂಚು ಸಕಾರಾತ್ಮಕ ಮತ್ತು ಆಶಾದಾಯಕ/ಭರವಸೆಯ ಶಕುನವನ್ನು ಸೂಚಿಸುತ್ತಿತ್ತು. ಗ್ರೀಕ್ ಪ್ರಾಂತ್ಯದಲ್ಲಿ, ಋಷಿಗಳು ಶುಭ ಅಥವಾ ಅಶುಭ ಶಕುನಗಳನ್ನು ಬಲಿಪೀಠವನ್ನು ಸಮೀಪಿಸಲು ಬಲಿಪಶುವಿನ ಇಚ್ಛೆ ಅಥವಾ ಅನಿಚ್ಛೆಯಿಂದ ಮತ್ತು ಹತ್ಯೆಯಾದ ನಂತರ ಅದರ ಕಸರೂಪಿ ಮಾಂಸದ ಸ್ಥಿತಿಯಿಂದ ಕೂಡ ತೀರ್ಮಾನಿಸುತ್ತಿದ್ದರು.

ಉಲ್ಲೇಖಗಳು

[ಬದಲಾಯಿಸಿ]
  1. Princeton. "Omen". Retrieved 8 March 2011.
  2. Beck, David Noel Freedman ed. ; associate ed. Gary A. Herion, David F. Graf, John David Pleins ; managing ed. Astrid B. (2009). The Anchor Yale Bible Dictionary. New Haven: Yale University Press. ISBN 9780300140057.{{cite book}}: CS1 maint: multiple names: authors list (link)


"https://kn.wikipedia.org/w/index.php?title=ಶಕುನ&oldid=847711" ಇಂದ ಪಡೆಯಲ್ಪಟ್ಟಿದೆ