ಶಿಮೊನ್ ಪೆರೆಸ್
ಶಿಮೋನ್ ಪೆರೆಸ್ | |
---|---|
೯ನೇ ಇಸ್ರೇಲ್ ರಾಷ್ಟ್ರಪತಿ
| |
ಅಧಿಕಾರ ಅವಧಿ ನವೆಂಬರ್ ೪,೧೯೯೫ – ಜೂನ್ ೮, ೧೯೯೬ | |
ಪೂರ್ವಾಧಿಕಾರಿ | ಯಿಜ್ತಕ್ ರಬಿನ್ |
ಇಸ್ರೇಲ್ ಪ್ರಧಾನ ಮಂತ್ರಿ
| |
ಪ್ರಧಾನ ಮಂತ್ರಿ | ಬೆಂಜಮಿನ್ ನೇತಾನ್ಯಾಹು |
ವೈಯಕ್ತಿಕ ಮಾಹಿತಿ | |
ರಾಷ್ಟ್ರೀಯತೆ | ಇಸ್ರೇಲ್ |
ರಾಜಕೀಯ ಪಕ್ಷ | ಮಿಪಾಇ, ರಫಿ, ಕಾರ್ಮಿಕ, ಕದಿಮಾ |
ಸಂಗಾತಿ(ಗಳು) | ಸೋನ್ಯ ಗಿಲ್ಮನ್ |
ಧರ್ಮ | ಯಹೂದಿ |
ಶಿಮೋನ್ ಪೆರೆಸ್ ದೀರ್ಘಕಾಲ ಇಸ್ರೇಲ್ ರಾಷ್ಟ್ರದ ರಾಜಕೀಯ ನಾಯಕರಾಗಿದ್ದ ಹಿರಿಯ ರಾಜಕಾರಣಿ. ೨೦೦೭-೧೪ರ ಅವಧಿಯಲ್ಲಿ ಇಸ್ರೇಲಿನ ರಾಷ್ಟ್ರಪತಿಯಾಗಿದ್ದ ಪೆರೆಸ್, ೧೯೯೪ರ ನೊಬೆಲ್ ಶಾಂತಿ ಪುರಸ್ಕಾರ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನದ ಅತಿ ಉಚ್ಛ ಪ್ರಶಸ್ತಿಯಾದ ಅಧ್ಯಕ್ಷೀಯ ಸ್ವಾತಂತ್ರ್ಯ ಮೆಡಲ್ ಅನ್ನು ೨೦೧೨ರಲ್ಲಿ ಪಡೆದರು.
ಜನನ
[ಬದಲಾಯಿಸಿ]ಇಂದಿನ ಪೋಲೆಂಡ್ ನಲ್ಲಿನ ವಿಜ಼್‌ನಿವ್ ಎಂಬಲ್ಲಿ ೧೯೨೩ರ ಆಗಸ್ಟ೨ರಂದು ಯಿಜ಼್‌ತಕ್ ಮತ್ತು ಸಾರ ದಂಪತಿಗಳಿಗೆ ಜನಿಸಿದ ಶಿಮೋನ್, ಬಾಲ್ಯದಿಂದಲೇ ಯಹೂದಿ ಧಾರ್ಮಿಕ ಪದ್ಧತಿಗಳನ್ನು ಅಳವಡಿಸಿಕೊಂಡರು.
ತಮ್ಮ ತಾತ ರಬ್ಬಿ ಜ಼್‌ವಿ ಮೆಲ್ಜ಼್‌ಹೆರ್ ರ ಪ್ರಭಾವದಿಂದ ಯಹೂದಿ ಸಂಪ್ರದಾಯದ ಸದ್ಗುಣಗಳನ್ನು ಜೀವನವಿಡೀ ಪಾಲಿಸಿದರು.
ಬಾಲ್ಯ
[ಬದಲಾಯಿಸಿ]ಫ್ರೆಂಚ್, ಹೀಬ್ರೂ, ಯಿದ್ದಿಷ್, ರಷ್ಯನ್ ಹೀಗೆ ಹಲವು ಭಾಷೆಗಳನ್ನು ಬಾಲ್ಯದಿಂದಲೇ ಅಭ್ಯಾಸ ಮಾಡಿದ ಶಿಮೋನ್, ಮರದಿಮ್ಮಿ ವ್ಯಾಪಾರಿಯಾದ ತಂದೆಯ ಮೆಚ್ಚಿನ ಮಗನಾದರು.[೧]
ಗೆರ್ಶೋನ್ ಎಂಬ ತಮ್ಮ ಹುಟ್ಟಿದ ನಂತರ ೧೯೩೨ರಲ್ಲಿ ಯಿಜ಼್‌ತಕ್ ಅಂದಿನ ಪ್ಯಾಲೆಸ್ಟೇನ್ ನಲ್ಲಿನ ಟೆಲ್ ಅವೀವ್ ಗೆ ವಲಸೆ ಹೋದರು.
೧೯೩೪ರಲ್ಲಿ ಶಿಮೋನ್ ತಮ್ಮ ತಾಯಿ, ತಮ್ಮನೊಂದಿಗೆ ತಂದೆಯನ್ನು ಸೇರಿದರು.
ವಿದ್ಯಾಭ್ಯಾಸ
[ಬದಲಾಯಿಸಿ]ಕಿಬ್ಬುತ್ಜ಼್ ಗೇವಾದಲ್ಲಿ ನೆಲೆಸಿದ್ ಶಿಮೋನ್, ಬೆನ್ ಶೆಮೆನ್ ವ್ಯವಸಾಯ ಶಾಲೆಯಲ್ಲಿ ಪ್ರಾಥಮಿಕ ವ್ಯಾಸಂಗ ಗೈದರು.
೧೯೪೧ರ ಹೊತ್ತಿಗೆ ಕಾರ್ಮಿಕ ಜಯೋನಿಸ್ಟ್ ಚಳುವಳಿಯ ಯುವ ನೇತಾರರಾದ ಶಿಮೋನ್, ೧೯೪೩ರಲ್ಲಿ ಹನೋಅರ್ ಹಓಯೆದ್ ವೆಹಾಲೊಮೆದ್ ಸಂಘಟನೆಯ ಕಾರ್ಯದರ್ಶಿಯಾದರು.
ಮಪಾಯಿ ಪಕ್ಷದಿಂದ ಆಯ್ಕೆಯಾದ ಇಬ್ಬರು ನಾಯಕರಲ್ಲಿ ಶಿಮೋನ್ ಒಬ್ಬರಾದರು.
ತಮ್ಮ ಚುರುಕಾದ ಬುದ್ಧಿಮತ್ತೆ, ಬಹುಭಾಷಾಕಲಿಕೆಯಿಂದ ಮಪಾಯಿ ಪಕ್ಷದ ನಾಯಕ ಡೇವಿಡ್ ಬೆನ್-ಗುರಿಯನ್ ರ ಆಪ್ತ ಬಳಗದಲ್ಲಿ ಸೇರಿದರು.
೧೯೪೪ರ ನೆಗೆವ್ ನಲ್ಲಿ ನಡೆದ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ, ದಂಡಕ್ಕೆ ಗುರಿಯಾದ ಶಿಮೋನ್, ಯುವನೇತಾರರಾಗಿ ಗುರುತಿಸಲ್ಪಟ್ತರು.
೧೯೪೧ರಲ್ಲಿ ಪೋಲೆಂಡ್ ನಲ್ಲಿ ಉಳಿದಿದ್ದ ತಮ್ಮ ಎಲ್ಲಾ ಬಂಧುಗಳನ್ನು ಹೋಲೋಕಾಸ್ಟ್ (ಯಹೂದಿಯರ ಗುಂಪು ಕಗ್ಗೊಲೆ)ಯಲ್ಲಿ ಕಳೆದುಕೊಂಡ ಶಿಮೋನ್, ಯಹೂದಿ ರಾಷ್ಟ್ರವನ್ನು ಕಟ್ಟಲು ದೃಢ ನಿಶ್ಚಯಗೈದರು.[೨]
ವಿವಾಹ
[ಬದಲಾಯಿಸಿ]೧೯೪೫ರಲ್ಲಿ ಸೋನ್ಯ ಗೆಲ್ಮನ್ ರನ್ನು ವರಿಸಿದ ಶಿಮೋನ್, ತdnಅಂತರ ಮೂರು ಮಕ್ಕಳ ತಂದೆಯಾದರು. ೨೦೧೧ರಲ್ಲಿ ಸೋನ್ಯ ತೀರುವವರೆಗೆ, ಅನ್ಯೋನ್ಯತೆಯಿಂದ ಬಾಳಿದ ಸೋನ್ಯ, ಪತಿಯ ಸಾರ್ವಜನಿಕ ಬದುಕಿನ ಪರಿಧಿಯಲ್ಲಿ ಕಾಣಿಸಿಕೊಳ್ಳದೆಯೇ ಬದುಕಿದರು.
ರಾಜಕೀಯ ಬದುಕು
[ಬದಲಾಯಿಸಿ]೧೯೪೬ರಲ್ಲಿ ಮೋಷೆ ಡಯಾನ್ ಮತ್ತು ಶಿಮೋನ್ ಜಯೋನಿಸ್ಟ್ ಕಾಂಗ್ರೆಸ್ ಅಧಿವೇಶನದ ಇಬ್ಬರೇ ಯುವ ಪ್ರತಿನಿಧಿಗಳಾದರು.
೧೯೪೭ರಲ್ಲಿ ಹಗನಾಹ್ ಎಂದು ಶುರುವಾದ ಇಸ್ರೇಲ್ ನ ಸೇನೆಯಲ್ಲಿ ಸೇರಿದ ಶಿಮೋನ್, ಸೇನೆಗೆ ಶಸ್ತ್ರಾಸ್ತ್ರ ಖರೀದಿ ಮತ್ತು ನೇಮಕಾತಿ ದಳದ ಮುಖ್ಯಸ್ಥರಾದರು.
೧೯೪೮ರಲ್ಲಿ ಇಸ್ರೇಲ್ ನೌಕಾದಳದ ಮುಕ್ಯಸ್ಥರಾದರು.
೧೯೫೦ರಲ್ಲಿ ರಕ್ಷಣಾ ಇಲಾಖೆಯ ಪ್ರತಿನಿಧಿಯಾಗಿ ಅಮೇರಿಕಾ ಸಂಯುಕ್ತ ಸಂಸ್ಥಾನಕ್ಕೆ ತೆರಳಿದ ಶಿಮೋನ್, ನ್ಯೂಯಾರ್ಕ್ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರ ಮತ್ತು ತತ್ವಶಾಸ್ತ್ರವನ್ನು , ಹಾರ್ವರ್ಡ್ ವಿಶ್ವವಿದ್ಯಾಲಯದಲ್ಲಿ ಮ್ಯಾನೇಜ್ ಮೆಂಟ್ ನಲ್ಲಿ ಪದವಿಗಳನ್ನು ಪಡೆದರು.
ರಕ್ಷಣಾ ಮಂತ್ರಿ
[ಬದಲಾಯಿಸಿ]೧೯೫೨ರಲ್ಲಿ ಕೇವಲ ೨೯ ವರ್ಷದ ಶಿಮೋನ್, ರಕ್ಷಣಾಇಲಾಖೆಯ ಉಪಮಹಾನಿರ್ದೇಶಕರಾದರು.ಶಸ್ತ್ರಾಸ್ತ್ರ ಖರೀದಿಯಲ್ಲಿನ ಹೊಣೆಗಾರಿಕೆಯಲ್ಲಿ ಚತುರತನ ತೋರಿದ ಶಿಮೋನ್, ಇಸ್ರೇಲ್ ಎಂದು ರಾಷ್ಟ್ರವಾಗಿ ನಿಲ್ಲಲು ಶ್ರಮಪಟ್ತರು.
ಫ್ರಾನ್ಸ್ ದೇಶದ ಜೊತೆ ಉತ್ತಮ ಸಂಬಂಧ ಹೊಂದಲು ಶ್ರಮಿಸಿದ ಶಿಮೋನ್, ತಮ್ಮ ವ್ಯಕ್ತಿತ್ವ ಮತ್ತು ಫ್ರೆಂಚ್ ನುಡಿಮೆಯಿಂದ ಫ್ರೆಂಚರ ಮನಗೆದ್ದರು.
ಡಿಮೊನಾ ಪರಮಾಣು ರಿಯಾಕ್ಟರ್, ಡಸಾಲ್ಟ್ ಸಂಸ್ಥೆಯ ಮಿರೇಜ್ ||| ಯುದ್ಧ ವಿಮಾನದ ಖರೀದಿ ಹೀಗೆ ಹಲವು ಬಗೆಯಲ್ಲಿ ಫ್ರೆಂಚ್ ಸರ್ಕಾರದ ಜೊತೆಗೂಡಿ ಶಿಮೋನ್, ಇಸ್ರೇಲ್-ಫ್ರೆಂಚ್ ಭಾಂಧವ್ಯಕ್ಕೆ ಬೆಸುಗೆ ಹಾಕಿದರು
ಸುಯೆಜ್ ಕಾಲುವೆ ಬಿಕ್ಕಟ್ಟು
[ಬದಲಾಯಿಸಿ]ಇಸ್ರೇಲ್ ಮತ್ತು ಈಜಿಪ್ಟ್ ದೇಶಗಳು ಸುಯೆಜ್ ಕಾಲುವೆಯ ನಿಯಂತ್ರಣಕ್ಕಾಗಿ ಬಹುಕಾಲದಿಂದ ಕಾದಾಅಟ ನಡೆಸುತ್ತಿದ್ದವು.೧೯೫೬ರಲ್ಲಿ ಇಸ್ರೇಲ್ ಮತ್ತು ಈಜಿಪ್ಟ್ ಮಧ್ಯೆ ಸಮರ ನಡೆಯಿತು. ಶಿಮೋನ್ ಬಹು ಜತನದಿಂದ ಇಸ್ರೇಲಿನ ಜೊತೆ ನಿಲ್ಲಲು ಬ್ರಿಟನ್ ಮತ್ತು ಫ್ರಾನ್ಸ್ ರಾಷ್ಟ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡರು. ೧೬ ಕಿ.ಮೀ ನಷ್ಟು ಕಾಲುವೆಯ ಆಕ್ರಮಣ ಮಾಡಿದ ಜಾಗವನ್ನು ಬಿಟ್ಟುಕೊಟ್ಟು, ಶಾಂತಿ ಕಾಪಾಡಲು ಅಮೇರಿಕ ಮತ್ತು ರಷ್ಯಾ ಮಾಡಿದ ರಾಜತಾಂತ್ರಿಕ ಒಪ್ಪಂದದಂತೆ ಇಸ್ರೇಲ್-ಈಜಿಪ್ಟೊಪ್ಪಿಕೊಂಡ ನಂತರ ಬಿಕ್ಕಟ್ಟು ಪರಿಹಾರವಾಯಿತು.
ಅಧಿಕಾರ ಜೀವನ
[ಬದಲಾಯಿಸಿ]೧೯೫೯ರಲ್ಲಿ ಇಸ್ರೇಲ್ ನ ಲೋಕಸಭೆ ನೆಸೆತ್ ಗೆ ಆಯ್ಕೆಯಾದ ಪೆರೆಸ್ ಉಪರಕ್ಷಣ ಸಚಿವರಾದರು.
೧೯೬೫ರಲ್ಲಿ ಡೇವಿಡ್ ಬೆನ್-ಗುರಿಯನ್ ರಫಿ ಪಕ್ಷ ಕಟ್ಟಿದಾಗ, ಅವರ ಜೊತೆನಡೆದ ಶಿಮೋನ್, ಎಡಪಂಥೀಯ ನಿಲುವೆ ತಳೆದರು.
ಚತುರ ಸಂಧಾನಕಾರದಾರ ಶಿಮೋನ್ ಅಮೇರಿಕದ ಅದ್ಯಕ್ಷ ಜಾನ್ ಎಫ಼್ ಕೆನಡಿಯವರಮನವೊಲಿಸಿ ಹಾಕ್ ಯುದ್ಧ ವಿಮಾನಗಳನ್ನು ಇಸ್ರೇಲ್ ವಾಯುಸೇನೆಗೆ ಮಾರಲು ಒಪ್ಪಂದಕ್ಕೆ ಮುಂದಾದರು.
೧೯೭೦ರಲ್ಲಿ ಯಹೂದಿ- ವಲಸೆ ಖಾತೆ, ೧೯೭೦ರಲ್ಲಿಸಂಚಾರ ಮತ್ತ್ತು ಸಂಪರ್ಕ ಖಾತೆ, ೧೯೭೪ರಲ್ಲಿ ವಾರ್ತಾ ಸಚಿವ ಹೀಗೆ, ಶಿಮೋನರ ಸಾಮರ್ಥಕ್ಕೆ ಹಲವು ಹೊಣೆಗಾರಿಕೆಗಳನ್ನು ನೀಡಲಾಯಿತು. ಎಲ್ಲವನ್ನೂ ಜವಾಬ್ದಾರಿಯಿಂದ ನಿಭಾಯಿಸಿದ ಶಿಮೋನ್, ೧೯೭೪ರಲ್ಲ್ಲಿ ಯಿಜ಼್‌ತಕ್ ರಬಿನ್ ರ ಎದುರಾಳಿಯಾಗಿ ಪ್ರಧಾನಿ ಹುದ್ದೆಗೆ ಪೈಪೋಟಿ ನೀಡಿದರು.
೧೦೭೭ರ ಚುನಾವಣೆಯಲ್ಲಿ ಪಕ್ಷದ ಅಧ್ಯಕ್ಷ ಹುದ್ದೆಗೆ ನಿಂತು ಸೋತರು.
ಎಂಟೆಬ್ಬೆ ವಿಮಾನ ಹೈಜಾಕ್ ಬಿಕ್ಕಟ್ಟು
[ಬದಲಾಯಿಸಿ]೨೪೮ ಮಂದಿ ಪ್ರಯಾಣಿಕರಿದ್ದ ಏರ್-ಫ್ರಾನ್ಸ್ ವಿಮಾನವನ್ನು ಪ್ಯಾಲೆಸ್ಟೇನ್ ಉಗ್ರರು ಹೈಜಾಕ್ ಮಾಡಿ ಉಗಾಂಡದ ಎಂಟೆಬ್ಬೆ ವಿಮಾನ ನಿಲುದಾಣದಲ್ಲಿ ನಿಲ್ಲಿಸಿದರು. ೧೦೦ಕ್ಕೂ ಹೆಚ್ಚು ಮಂದಿ ಯಹೂದಿ ಪ್ರಯಾಣಿಕರನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡ ಬಿಕ್ಕಟ್ಟನ್ನು, ವಿಶ್ವದಲ್ಲಿಯೇ ಮೊದಲ ಬಾರಿಗೆ ಸೈನಿಕ ಕಾರ್ಯಾಚರಣೆ ನಡೆಸಿ ಎಲ್ಲಾ ಪ್ರಯಾಣಿಕರನ್ನು ಬಿಡಿಸಿಕೊಂದು ತಂದ ಶ್ರೇಯ ರಕ್ಷಣಾ ಸಚಿವರಾದ ಶಿಮೋನ್ ರಿಗೆ ಸಂದಿತು.
ಸಂಧಾನ, ಬೆದರಿಕೆ, ಸೈನಿಕ ಕಾರ್ಯಾಚರಣೆ, ಹೀಗೆ ಹತ್ತು ಹಲವು ರಾಜತಾಂತ್ರಿಕ ಕಾರ್ಯಗಳು ಕೈಗೂಡಎ ಹೋದಾಗ, ಅನಿವಾರ್ಯವಾಗಿ ಸೈನಿಕ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ತದ್ ನಂತರ ತಿಳಿಸಿದ ಶಿಮೋನ್, ಸೇನಾ ಮುಖ್ಯಸ್ಥ ಮೊರ್ಡೆಚಾ ಗುರ್ ಮತ್ತು ಪ್ರಧಾನಿ ಯಿಜ಼್‌ತಕ್ ರಬಿನ್ ರ ವಿರೋಧದ ನಡುವೆಯೂ ಸಮತಟ್ಟಾಗಿ ಗುಪ್ತ ಕಾರ್ಯಾಚರಣೆಯನ್ನು
ನಡೆಸಿದ್ದರು.
ವಿಶ್ವದ ಎಲ್ಲೇ ಆಗಲಿ, ಇಸ್ರೇಲಿ ನಾಗರೀಕರ ಮೇಲೆ ಹಲ್ಲೆಯಾದಲ್ಲಿ, ಅದು ಇಸ್ರೇಲಿಗೆ ಆದ ಮುಖಭಂಗ ಎಂದೇ ಭಾವಿಸಿ, ಅವರ ರಕ್ಷಣೆಗೆ ಮುಂದಾಗುತ್ತಿದ್ದ ಶಿಮೋನ್, ವಿಮಾನ ಹೈಜಾಕ್ ಅನ್ನು ಬಲು ತೀವ್ರವಾಗಿ ತೆಗೆದುಕೊಂಡರು
ತಮ್ಮ ದೀರ್ಘಕಾಲದ ಮಿತ್ರ, ಮಾಜಿ ರಕ್ಷಣ ಸಚಿವ ಮೋಷೆ ಡಯಾನ್ ರನ್ನು ಖಾಸಗಿ ಔತಣಕೂಟದಿಂದ ಹೊರಗೆಳೆದು, ತಾವು ತಯಾರು ಮಾಡಿದ್ದ ಸೈನಿಕ ಕಾರ್ಯಾಚರಣೆಯ ವಿಮರ್ಶೆ ಮಾಡಿಸಿದರು.
ಒಂದಿನಿತೂ ಸಹ, ಗುಟ್ಟು ರಟ್ಟಾಗದಂತೆ ಕಡೆಯ ನಿಮಿಷದವರೆಗೆ ಯೋಜನೆಗೈದ ಶಿಮೋನ್, ಸೇನಾ ಮುಖ್ಯಸ್ಥ ಗುರ್ ಮತ್ತು ರಬಿನ್ ರ ಒಪ್ಪಿಗೆ ಪಡೆದು, ೨೦೦೦ ಮೈಲಿಗೂ ಹೆಚ್ಚಿನ ದೂರದಲ್ಲಿದ್ದ ವಿಮಾನ ಮತ್ತು ಒತ್ತೆಯಾಳುಗಳನ್ನು ಬಿಡಿಸಿಕೊಂಡು ತಂದರು.
ಪ್ರಧಾನಿ ಹುದ್ದೆ
[ಬದಲಾಯಿಸಿ]ಯಿಜ಼್‌ತಕ್ ರಬಿನ್ ೧೯೭೭ರಲ್ಲಿ ರಾಜೀನಾಮೆಯಿತ್ತು ರಾಜಕೀಯ ಬಿಕ್ಕಟ್ಟು ತೋರಿದಾಗ, ಶಿಮೋನ್ ಹಂಗಾಮಿ ಪ್ರಧಾನಿಯಾದರು.
ಹಠಾತ್ ಚುನಾವಣೆಯಲ್ಲಿ ಲಿಕುದ್ ಪಕ್ಷ ಗೆದ್ದಾಗ ೩ವರ್ಷ ವಿರೋಧ ಪಷದ ನಾಯಕರಾಗಿದ್ದರು.
೧೯೮೦ರಲ್ಲಿ ಮತ್ತೆ ಚುನಾವಣೆ ಸೋತರೂ, ೧೯೮೩ರಲ್ಲಿ ಸಮ್ಮಿಶ್ರ ಸರಕಾರದ ಒಪ್ಪಂದದಂತೆ ೨ ವರ್ಷ ಪ್ರಧಾನಿಯಾದರು.
ಜೋರ್ಡಾನ್ ದೊರೆ ಹುಸೇನ್ ರ ಭೇಟಿಗೆ ಮೊರಕ್ಕೋಗೆ ತೆರಳಿದ್ದು, ಟ್ಯೂನಿಸ್ ನಲ್ಲಿನ ಪ್ಯಾಲೆಸ್ಟೇನ್ ವಿಮೋಚನಾ ಸಂಘಟನೆ(ಪಿ.ಎಲ್. ಓ)ದ ಕೇಂದ್ರ ಕಚೇರಿ ಮೇಲಿನ ದಾಳಿ ಶಿಮೋನ್ ಅಧಿಕಾರದ ಪ್ರಮುಖ ಘಟನೆಗಳು.
೧೯೮೬ರಲ್ಲಿ ಪ್ರಧಾನಿ ಹುದ್ದೆಯನ್ನು ಸಮ್ಮಿಶ್ರ ಸರ್ಕಾರದ್ ಒಪ್ಪಂದದಂತೆ ಯಿಜ಼್‌ತಕ್ ಶಮೀರರಿಗೆ ಬಿಟ್ಟುಕೊಟ್ಟೂ ವಿದೇಶಾಂಗ ಸಚಿವರಾದ ಶಿಮೋನ್, ಪ್ಯಾಲೆಸ್ಟೇನ್ ಶಾಂತಿ ಒಪ್ಪಂದದ ಬಗ್ಗೆ ಅಮೇರಿಕಾದ ಜೊತೆ ಚರ್ಚೆ ನಡೆಸಿದರು. ಆದರೆ ಇಸ್ರೇಲ್ ನೊಳಗೆ ಪ್ಯಾಲೆಸ್ಟೇನ್ ವಿಮೋಚನಾ ಸಂಘಟನೆ ಬಗ್ಗೆ ಇದ್ದ ದ್ವೇಷವನ್ನು ಶಮನಗೊಳಿಸಲು ಯತ್ನಿಸಿದರು.
ಓಸ್ಲೋ ಶಾಂತಿಕರಡು ಒಪ್ಪಂದ
[ಬದಲಾಯಿಸಿ]ಪ್ಯಾಲೆಸ್ಟೇನ್ ವಿಮೋಚನಾ ಸಂಘಟನೆಯ ನಾಯಕ ಯಾಸರ್ ಅರಾಫತ್ ರ ಜೊತೆ ಶಾಂತಿ ಮಾತುಕತೆಯನ್ನು ನಡೆಸಿದ ಶಿಮೋನ್, ೧೯೯೨ರಲ್ಲಿ ಮತ್ತೆ ಯಿಜ಼್‌ತಕ್ ರಬಿನರ ಸರಕಾರದಲ್ಲಿ ವಿದೇಶಾಂಗ ಸಚಿವರಾದರು. ಪ್ಯಾಲೆಸ್ಟೇನ್ ನಾಗರೀಕರನ್ನು ಮಾನವೀಯವಾಗಿ ನಡೆಸಿಕೊಳ್ಳುವುದು, ಸೇನಾ ಚಟುವಟಿವಟಿಕೆಯನ್ನು ನಾಗರೀಕ ಪ್ರದೇಶದಲ್ಲಿ ನಿಯಂಯ್ತಣದಲ್ಲಿ ಇಡವುದು ಇವೇ ಸೇರಿದಂತೆ ಹಲವು ಒಪ್ಪಂದದ ಅಂಶಗಳಿದ್ದ ಓಸ್ಲೋ ಒಪ್ಪಂದದ ರೂವಾರಿಗಳಾಗಿದ್ದಕ್ಕೆ
ಯಾಸರ್ ಅರಾಫತ್, ಇಜ಼್‌ತಕ್ ರಬಿನ್ ಮತ್ತು ಶಿಮೋನ್ ಪೆರೆಸ್ ರಿಗೆ ೧೯೯೪ರ ನೊಬೆಲ್ ಶಾಮ್ತಿ ಪುರಸ್ಕಾರ ನೀಡಿ ಗೌರವಿಸಲಾಯಿತು.[೩] ೧೯೯೪ಲ್ಲಿ ಇಸ್ರೇಲ್-ಜೋರ್ಡನ್ ಶಾಂತಿ ಒಪ್ಪಂದದ ಪ್ರಸ್ತಾವವನ್ನು ಯಶಸ್ವಿಯಾಗಿ ನಿಭಾಯಿಸಿದ ಶಿಮೋನ್, ಜೋರ್ಡಾ ಹುಸೇನ್ ರ ಜೊತೆ ಶಾಂತಿಮಾತುಕತೆಯ ಒಪ್ಪಂದಕ್ಕೆ ಸಹಿ ಹಾಕಿದರು. ೪೬ ವರ್ಷದ ಸುದೀರ್ಘ ಯುದ್ಧಕ್ಕೆ ಮಂಗಳ ಹಾಡಿದ ಈ ಒಪ್ಪಂದದಿಂದ ಮಧ್ಯ-ಪ್ರಾಚ್ಯ ಏಷ್ಯಾದಲ್ಲಿ ಬಹುಮಟ್ಟಿಗೆ ಶಾಂತಿ ನೆಲೆಸಿತು.[೪] ೧೯೯೫ರ ನವೆಂಬರ್ ನಲ್ಲಿ ಪ್ರಧಾನಿಯಾಗಿ ಆಯ್ಕೆಗೊಂಡ ಶಿಮೋನ್, ಅಂತರ್ಜಾಲವನ್ನು ಇಸ್ರೇಲಿನಲ್ಲಿ ಪ್ರಚುರಪಡಿಸಲು ಕ್ರಮಕೈಗೊಂಡರು. ಇಸ್ರೇಲಿನ ಪ್ರಧಾನಮಂತ್ರಿಯ ವೆಬ್ ಸೈಟ್ ಅನ್ನು ಆರಂಭಿಸಿದ ಶಿಮೋನ್, ಅಂತರ್ಜಾಲಬಳಕೆ ಮತ್ತು ಅದರ ಉಪಯೋಗವನ್ನು ಇಸ್ರೇಲಿನೆಲ್ಲೆಡೆ ಹಬ್ಬಿಸಲು ಶ್ರಮಗೈದರು. ೧೯೯೬ರಲ್ಲಿ ಹೆಜ್ಬುಲ್ಲಾ ಉಗ್ರರ ರಾಕೆಟ್ ಉಡಾವಣೆಯ ಉಗ್ರಗಾಮಿ ಚಟುವಟಿಕೆಯಿಂದ ಅಶಾಂತಿ ತಲೆದೋರಿದಾಗ, ೨೦೦ರಲ್ಲಿ ಇಸ್ರೇಲ್ ಅಧ್ಯಕ್ಷ ಚುನಾವಣೆಯಲ್ಲಿ ಸೋತ ಶಿಮೋನ್, ೨೦೦೧ರಲಿ ಮತ್ತೆ ಇಸ್ರೇಲಿನ ವಿದೇಶಾಂಗ ಸಚಿವರಾದರು. ಗಾಜಾ ಪಟ್ಟಿ ಬಿಕ್ಕಟ್ಟು, ಹೈಫಾ ಬಿಕ್ಕಟ್ಟು ಹೀಗೆ ಹಲವು ಸಾಂವಿಧಾನಿಕ ಬಿಕ್ಕಟ್ಟುಗಳನ್ನು ಎದುರಿಸಿದ ಶಿಮೋನ್, ೨೦೦೩ರಲ್ಲಿ ಚುನಾವಣೆಗೆ ಮುನ್ನ ತಮ್ಮ ಪದವಿ ರಾಜೀನಾಮೆಯಿತ್ತರು. ೨೦೦೪ರ ಚುನಾವಣೆಯಲ್ಲಿ ಲಿಕುದ್ ಪಕ್ಷದ ಏರಿಯಲ್ ಶರೋನ್ ಜೊತೆಗೂಡಿ ಸಮಿಶ್ರ ಸರ್ಕಾರವನ್ನು ಅಧಿಕಾರಕ್ಕೆ ತಂದರು ೨೦೦೫ರ ನವೆಂಬರಿನಲ್ಲಿ ಬಹುಕಾಲ ತಾವೇ ಮುನ್ನಡೆಸಿದ ಕಾರ್ಮಿಕ ಪಕ್ಷವನ್ನು ತ್ಯಜಿಸಿ ಏರಿಯಲ್ ಶರೋನ್ ಹೊಸದಾಗಿ ಸ್ಥಾಪಿಸಿದ ಕದಿಮಾ ಪಕ್ಷವನ್ನು ಸೇರುತ್ತಿರುವುದಾಗಿ ಘೋಷಿಸಿದ ಶರೋನ್, ಇ ವಯಸ್ಸಿನ ಕಾರಣದಿಂದ ಯುವನಾಯಕ ಎಹುದ್ ಒಲ್ಮೆರ್ಟ್ ರನ್ನು ಪ್ರಧಾನಿ ಹುದ್ದೆಗೆ ಬೆಂಬಲಿಸಿದರು.
ರಾಷ್ಟ್ರಪತಿ
[ಬದಲಾಯಿಸಿ]ಜೂನ್ ೧೩, ೨೦೦೭ರಲ್ಲಿ ಶಿಮೋನ್ ಇಸ್ರೇಲ್ ರಾಷ್ಟ್ರಪತಿಯಾಗಿ ಆಯ್ಕೆಯಾದರು.೧೯೫೯ರಿಂದ ಇಸ್ರೇಲ್ ಸಂಸತ್ತಿನ ಸದಸ್ಯರಾಗಿದ್ದ ಶಿಮೋನ್, ತಮ್ಮ ೪೭ ವರ್ಷ್ದ ಸುದೀರ್ಘ ರಾಜಕೀಯ ಬದುಕಿಗೆ ವಿದಾಯ ಹೇಳಿದರು. ಜುಲೈ ೧೫, ೨೦೦೭ರಂದು ಅಧ್ಯಕ್ಷ ಪದವಿಯ ಪ್ರಮಾಣ ವಚನ ಸ್ವೀಕರಿದ ಶಿಮೋನ್, ೨೦೧೪ರವರೆಗೆ ೭ ವರ್ಷದ ಪೂರ್ಣ ಅವಧಿಯನ್ನು ಮುಗಿಸಿದರು.[೫]
ನಿಲುವು
[ಬದಲಾಯಿಸಿ]ತಮ್ಮ ಬದುಕಿನ ಉದ್ದಕ್ಕೂ ಸೇನೆ ಮತ್ತು ವಿದೇಶಾಂಗ ಇಲಾಖೆಯಲ್ಲಿ ಕಳೆದ ಶಿಮೋನ್, ತಮ್ಮ ಆದರ್ಶ ಡೇವಿದ್-ಬೆನ್-ಗುರಿಯನ್ ರಂತೆ ಹೊಸ ತಂತ್ರಜ್ಞಾನ ಮತ್ತು ವಿಜ್ಞಾನಕ್ಕೆ ಒತ್ತು ನೀಡಿದರು. ಸ್ಯಯಂ-ಉದ್ಯೋಗಕ್ಕೆ ಒತ್ತು ನೀಡಿದ ಶಿಮೋನ್, ಇಸ್ರೇಲಿನಲ್ಲಿ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ನ್ಯಾನೋತಂತ್ರಜ್ಞಾನ, ಮಿದುಳು-ಸಂಶೋಧನೆ ಹೀಗೆ ಹತ್ತು ಹಲವು ತಂತ್ರಜ್ಞಾನದ ಮಜಲುಗಳಿಗೆ ಇಸ್ರೇಲ್ ತೆರೆದುಕೊಳ್ಳುವಲ್ಲಿ ಶ್ರಮಿಸಿದರು. ರಾಷ್ಟ್ರಪತಿಯಾಗಿದ್ದಾಗ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದ ಶಿಮೋನ್, ಯುಟ್ಯೂಬ್, ಸ್ನಾಪ್-ಚ್ಯಾಟ್ ಹೀಗೆ ಹಲವು ತಾಣಗಳಲ್ಲಿ ಅದರ ಫಲವಾಗಿ ಇಸ್ರೇಲ್ ಇಂದು ಸ್ವಯಂ-ಉದ್ಯೋಗ ಮತ್ತು ತಂತ್ರಜ್ಞಾನದಲ್ಲಿ ಬೃಹತ್ ಶಕ್ತಿಯಾಗಿ ಬೆಳೆದುನಿಂತಿದೆ.
ಕಡೆಯುಸಿರು
[ಬದಲಾಯಿಸಿ]ಸೆಪ್ಟೆಂಬರ್ ೧೩ ೨೦೧೬ರಂದು ತಮ್ಮ ೯೩ನೆಯ ವಯಸ್ಸಿನಲ್ಲಿ ಸ್ಟ್ರೋಕ್ ಗೆ ಈಡಾದ ಶಿಮೋನ್, ಶೆಬಾ ಆಸ್ಪತ್ರಯಲ್ಲಿ ತುರ್ತು ಚಿಕಿತ್ಸೆಗೆ ಒಳಪಟ್ಟ. ೨೮ ಸೆಪ್ಟೆಂಬರ್ ೨೦೧೬ರಂರು ನಿಧನರಾದ ಶಿಮೋನ್, ವಿಶ್ವದೆಲ್ಲೆಡೆಯ ಅಭಿಮಾನಿಗಳನ್ನು ಅಗಲಿದರು.[೬]
ಒಕ್ಕಣಿಕೆ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ http://www.dictionary.com/browse/peres
- ↑ https://www.theatlantic.com/international/archive/2016/09/shimon-peres-the-last-link-to-israels-founding-fathers/499868
- ↑ http://www.israel-times.com/news/2003/08/shimon-peres-1994-nobel-peace-prize-1869[ಶಾಶ್ವತವಾಗಿ ಮಡಿದ ಕೊಂಡಿ]
- ↑ https://www.nytimes.com/learning/general/onthisday/big/1026.html
- ↑ "ಆರ್ಕೈವ್ ನಕಲು". Archived from the original on 2007-09-04. Retrieved 2017-11-04.
- ↑ https://www.washingtonpost.com/video/world/israeli-politician-shimon-peres-dies-at-93/2016/09/27/56c96e58-8529-11e6-b57d-dd49277af02f_video.html