ವಿಷಯಕ್ಕೆ ಹೋಗು

ಶಿವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಶಿವಲಿಂಗ ಇಂದ ಪುನರ್ನಿರ್ದೇಶಿತ)

ಶಿವ (ಮಂಗಳಕರನು) ಹಾಗೂ ಮಹಾದೇವ (ದೇವರುಗಳಿಗೆ ದೇವರು) [][][] ಶಿವನು ಹಿಂದೂ ಧರ್ಮದ ಪ್ರಮುಖ ದೇವರು.[]. ಶಿವನು ತ್ರಿಮೂರ್ತಿಗಳಲ್ಲಿ ಒಬ್ಬನ್ನು, ಇತರರು ಬ್ರಹ್ಮ ಮತ್ತು ವಿಷ್ಣು,[][] ಶೈವ ಸಂಪ್ರದಾಯಲ್ಲಿ ಶಿವನೂ ಸರ್ವೋಚ್ಚನಾಗಿದ್ದಾನೆ, ಈತನು ಜಗತ್ತಿನ ಸೃಷ್ಟಿ, ರಕ್ಷಣೆ, ಮತ್ತು ಪರಿವರ್ತನೆಯ ದೈವ.[] [][][], ಆದಿಶಕ್ತಿ ಕೇಂದ್ರಿತ ಶಕ್ತ ಸಂಪ್ರದಾಯದಲ್ಲಿ ಶಿವನು ದೇವಿಯ ಪತಿ ಮತ್ತು ಸರಿಸಮನನಾಗಿದ್ದಾನೆ.[][], ಸ್ಮಾರ್ತ ಸಂಪ್ರದಾಯದ ಐದು ಪ್ರಮುಖ ದೇವರಲ್ಲಿ ಶಿವನು ಒಬ್ಬನು.[೧೦] ಶಿವನು ಶಾಂತ ಹಾಗೂ ರೌದ್ರ ಸ್ವರೂಪನು, ಶಾಂತ ರೂಪದಲ್ಲಿ ಯೋಗಿಯಾಗಿ ವೈರಾಗ್ಯ ಜೀವನವನ್ನು ಮತ್ತು ಸಂಸಾರಿಯಾಗಿ ಪತ್ನಿ ಪಾರ್ವತಿ ಹಾಗೂ ಮಕ್ಕಳು ಗಣೇಶ, ಕಾರ್ತಿಕೇಯನ ಜೊತೆ ಇರವನು.[], ರೌದ್ರ ರೂಪದಲ್ಲಿ ದುಷ್ಟರನ್ನು ಸಂಹರಿಸುವ ಮಹಾಕಾಲ, ಭೈರವ, ವೀರಭದ್ರ ಹಾಗೂ ಇತರ ರೂಪಗಳನ್ನು ಅವತರಿಸಿದ್ದಾನೆ. ಶಿವನು ಯೋಗ, ಧ್ಯಾನ ಮತ್ತು ಕಲೆಯ ದೇವರಾಗಿ ಆದಿಯೋಗಿ, ನಟರಾಜ ಎಂಬ ರೂಪವನ್ನು ಸಹ ಹೊಂದಿದ್ದಾನೆ.[೧೧] ಶಿವನು ಪ್ರತಿಮಾಶಾಸ್ತ್ರದ ಪ್ರಕಾರ, ಕೊರಳಲ್ಲಿ ಸರ್ಪಗಳ ರಾಜ ವಾಸುಕಿ, ಕೇಶದಲ್ಲಿ ಅರ್ಧಚಂದ್ರ, ಗಂಗೆ, ಮತ್ತು ಹಣೆಯ ಮೇಲೆ ಮೂರನೇ ಕಣ್ಣು, ಕೈಯಲ್ಲಿ ತ್ರಿಶೂಲ ಮತ್ತು ಡಮರುನ್ನು ಹೊಂದಿದ್ದಾನೆ. ಶಿವನನ್ನು ಬಹುತೇಕವಾಗಿ ಲಿಂಗದ ರೂಪದಲ್ಲಿ ಪೂಜಿಸಲಾಗುತ್ತದೆ.[೧೨]

ಶಿವ
ಮಹಾದೇವ
ಸರ್ವೋಚ್ಚ ದೇವರು (ಶೈವ)
  • God of
  • ಸೃಷ್ಟಿ
  • ರಕ್ಷಣೆ
  • ಪರಿವರ್ತನೆ

  • ಕಾಲ
  • ಯೋಗ
  • ನೃತ್ಯ
  • ಧ್ಯಾನ
  • ಕಲೆ
  • ಔಷದಿ
[೧೩]
Member of ತ್ರಿಮೂರ್ತಿ
ಶಿವಲಿಂಗ
ನಿರ್ಗುಣ ರೂಪ
ಪಾರ್ವತಿ ಪರಮೇಶ್ವರ
ಸುಗುಣ ರೂಪ
ಇತರ ಹೆಸರುಗಳು
  • ಶಂಕರ
  • ಭೋಲೆನಾಥ
  • ಮಹೇಶ್ವರ
  • ರುದ್ರ
  • ಮಹಾದೇವ
  • ಮಹಾಕಾಲ
  • ವೀರಭದ್ರ
  • ಸದಾಶಿವ
  • ಭೈರವ
  • ನಟರಾಜ
  • ಪಶುಪತಿ
ಸಂಲಗ್ನತೆ
  • ತ್ರಿಮೂರ್ತಿ
  • ಈಶ್ವರ
  • ಪರಮಾತ್ಮ
ನೆಲೆ
  • ಕೈಲಾಸ ಪರ್ವತ []
ಮಂತ್ರ
  • ಓಂ ಲಿಂಗಾಯ ನಮಃ
  • ಓಂ ನಮಃ ಶಿವಾಯ
ಆಯುಧ
  • ತ್ರಿಶೂಲ
  • ಪಾಶುಪತಸ್ತ್ರ
  • ಪರಶು
  • ಪಿನಾಕ ಬಿಲ್ಲು[೧೨]
ಲಾಂಛನಗಳು
  • ಶಿವಲಿಂಗ
  • [೧೨]
  • ಅರ್ಧ ಚಂದ್ರ
  • ಡಮರು
  • ವಾಸುಕಿ (ನಾಗ)
  • ಮೂರನೇ ಕಣ್ಣು
ದಿನ
  • ಸೋಮವಾರ
  • ತ್ರಯೋದಶಿ
ಸಂಗಾತಿಪಾರ್ವತಿ/ಸತಿ [note ೧]
ಮಕ್ಕಳು
ವಾಹನನಂದಿ[೧೯]
ಗ್ರಂಥಗಳು
ಹಬ್ಬಗಳು

ಶಿವನಿಗೆ ವೇದಪೂರ್ವದ ಇತಿಹಾಸವಿದೆ.[೨೧], ಶಿವನ ಸುಗುಣ ಆಕೃತಿಯು ವಿವಿಧ ಹಳೆಯ ವೈದಿಕವಲ್ಲದ ಮತ್ತು ವೈದಿಕ ದೇವತೆಗಳ ಸಂಯೋಜನೆಯಾಗಿ ಒಂದೇ ಪ್ರಮುಖ ದೇವರಾಗಿ ವಿಕಸನಗೊಂಡಿದೆ.[೨೨][೨೩] ಶಿವ ಸರ್ವ ಹಿಂದೂ ದೇವನಾಗಿ ಪ್ರಮುಖವಾಗಿ ಭಾರತ, ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ , ಇಂಡೋನೇಷಿಯಾ ದೇಶದಲ್ಲಿ ಪೂಜಿಸಲ್ಪಡುತ್ತಾನೆ.[೨೪]

ಶಿವನ ಹೆಸರು

[ಬದಲಾಯಿಸಿ]

ಸಂಸ್ಕೃತ ಭಾಷೆಯಲ್ಲಿ ಶಿವ ಅಂದರೆ "ಶುಭಕರ, ಅನುಕೂಲಕರ, ಸೌಮ್ಯ, ದಯೆ, ಸ್ನೇಹಪರ" ಎಂದರ್ಥ [೨೫] ಜಾನಪದ ಮೂಲಗಳ ಪ್ರಕಾರ ಶಿವ ಎಂಬ ಹೆಸರು ಶಿ "ಇವರಲ್ಲಿ ಎಲ್ಲವೂ ಅಡಗಿದೆ, ವ್ಯಾಪಕತೆ, ಮತ್ತು "ಕೃಪೆಯ ಸಾಕಾರ" ಎಂಬುದಾಗಿದೆ. [೨೫][೨೬]

ಋಗ್ವೇದದ ಕಾಲದಲ್ಲಿ (c. 1700–1100 BCE) "ಶಿವ" ಎಂಬ ಹೆಸರನ್ನು "ರುದ್ರ" ಹೆಸರಿನ ವಿಶೇಷ ಗುಣವಾಚಕವಾಗಿ ಬಳಸಲಾಗುತ್ತಿತ್ತು.[೨೭] ಶಿವ ಎಂಬ ಹೆಸರಿನ ಅರ್ಥವು "ಮುಕ್ತಿ ಅಥವಾ ಅಂತಿಮ ವಿಮೋಚನೆ" ಮತ್ತು "ಶುಭದಾಯಕ" ಎಂದು ಸಹ ಹೇಳಲಾಗುತ್ತದೆ; ಈ ವಿಶೇಷಣವನ್ನು ವೈದಿಕ ಸಾಹಿತ್ಯದಲ್ಲಿ ಅನೇಕ ದೇವತೆಗಳಿಗೆ ಸಂಬೋಧಿಸಲಾಗಿದೆ. [೨೫][೨೮] ಈ ಪದವು ವೈದಿಕ "ರುದ್ರ-ಶಿವ" ದಿಂದ ಮಹಾಕಾವ್ಯಗಳು ಮತ್ತು ಪುರಾಣಗಳಲ್ಲಿ "ಶಿವ" ಎಂಬ ನಾಮಪದಕ್ಕೆ "ಸೃಷ್ಟಿಕರ್ತ, ಪುನರುತ್ಪಾದಕ ಮತ್ತು ದುಷ್ಠವಿನಾಶ" ಎಂಬ ಒಬ್ಬ ಮಂಗಳಕರ ದೇವರ ಹೆಸರಾಗಿ ಬಳಕೆಗೆ ಬಂದಿತು.[೨೫][೨೯]

ಇನ್ನೊಂದು ವಾದದ ಪ್ರಕಾರ ಶಿವ ಎಂಬ ಹೆಸರು ಸಂಸ್ಕೃತದ "ಶರ್ವ್" ಎಂಬ ಪದದಿಂದ ಬಂದಿದೆ ಇದರರ್ಥ "ದುಷ್ಠ ವಿನಾಶಕ" ಎಂಬುದಾಗಿದೆ.[೩೦][೩೧]

ಸಂಸ್ಕೃತದ "ಶೈವ" ಪದವು "ಶಿವ ದೇವರಿಗೆ ಸಂಬಂಧಿಸಿದವರು" ಅಥವಾ "ಶಿವನ ಅನುಯಾಯಿಗಳು" ಎಂಬರ್ಥವನ್ನು ಕೊಡುತ್ತದೆ, ಈ ಪದವು ಹಿಂದೂ ಧರ್ಮದ ಪ್ರಮುಖ ಪಂಥಗಳಲ್ಲಿ ಒಂದಕ್ಕೆ ಮತ್ತು ಆ ಪಂಥದ ಸದಸ್ಯರಿಗೆ ಸಂಸ್ಕೃತದ ಹೆಸರಾಗಿದೆ.[೩೨] ಶೈವ ಸಂಪ್ರದಾಯದ ಕೆಲವು ನಂಬಿಕೆಗಳು ಮತ್ತು ಆಚರಣೆಗಳನ್ನು ನಿರೂಪಿಸಲು ಇದನ್ನು ವಿಶೇಷಣವಾಗಿ ಬಳಸಲಾಗುತ್ತದೆ.[೩೩]

ಕೆಲವು ಲೇಖಕರು ಶಿವನ ಹೆಸರನ್ನು ತಮಿಳು ಪದ "ಶಿವಪ್ಪು" ಅಂದರೆ "ಕೆಂಪು" ನೊಂದಿಗೆ ಸಂಯೋಜಿಸುತ್ತಾರೆ, ಶಿವನು ಸೂರ್ಯನಿಗೆ ಅಥವಾ ಬೆಂಕಿಗೆ ಸಂಬಂಧಿಸಿದ್ದಾನೆ ಎಂಬ ಅಭಿಪ್ರಾಯ ಅವರದ್ದು, ( ತಮಿಳಿನಲ್ಲಿ "ಶಿವನ್" ಅಂದರೆ "ಕೆಂಪು" ) ಮತ್ತು ರುದ್ರನನ್ನು ಋಗ್ವೇದದಲ್ಲಿ "ಬಭ್ರು" (ಕಂದು ಅಥವಾ ಕೆಂಪು) ಎಂದೂ ಸಹ ಕರೆಯಲಾಗುತ್ತದೆ.[೩೪][೩೫]

ವಿಷ್ಣು ಸಹಸ್ರನಾಮದಲ್ಲಿ "ಶಿವ" ಎಂಬ ಹೆಸರನ್ನು "ಶುದ್ಧ" ಮತ್ತು ಪ್ರಕೃತಿಯ ಮೂರು ಗುಣಗಳಾದ "ಸಾತ್ವಿಕ, ರಜಸ್ ಮತ್ತು ತಮಸ್ಸು" ಗಳಿಂದ ಪ್ರಭಾವಿತನಾಗದವನು ಎಂದು ವ್ಯಾಖ್ಯಾನಿಸಿದೆ.[೩೬]

ಶಿವನಿಗೆ ಅತ್ತ್ಯುನ್ನತ ಹೆಸರು ಮಹಾದೇವ (ದೇವರಿಗೆ ದೇವರು), ಮತ್ತು ಪರಮೇಶ್ವರ (ಸರ್ವ್ಚೊಚ್ಚ ದೇವರು).[೩೭][೩೮] [೩೯][೪೦] [೪೧] ಶಿವನನ್ನು ವಿಶ್ವನಾಥ, ಮಂಜುನಾಥ, ಮಹೇಶ್ವರ, ಶಂಕರ, ಶಂಭು, ರುದ್ರ, ಹರ, ನೀಲಕಂಠ, ವೀರಭದ್ರ, ಭೈರವ, ಮಹಾಕಾಲ, ಶುಭಂಕರ ಮುಂತಾದ ಹೆಸರುಗಳಿಂದ ಕರೆಯುತ್ತಾರೆ.[೪೨][೪೩] [೪೪][೪೫][೪೬][೪೭]

ಸಹಸ್ರನಾಮವು ಮಧ್ಯಕಾಲದ ಭಾರತೀಯ ಪಠ್ಯಗಳಾಗಿದ್ದು, ಇದು ದೇವತೆಯ ಅಂಶಗಳು ಮತ್ತು ವಿಶೇಷಣಗಳಿಂದ ಪಡೆದ ಸಾವಿರ ಹೆಸರುಗಳನ್ನು ಪಟ್ಟಿಮಾಡುತ್ತದೆ.[೪೮] ಶಿವನ ಅನೇಕ ಹೆಸರುಗಳನ್ನು ಪಟ್ಟಿಮಾಡುವ ಶಿವ ಸಹಸ್ರನಾಮದ ಕನಿಷ್ಠ ಎಂಟು ವಿಭಿನ್ನ ಆವೃತ್ತಿಗಳಿವೆ.[೪೯] "ಮಹಾಭಾರತದ" ಪುಸ್ತಕ 13ರಲ್ಲಿ "ಅನುಶಾಸನಪರ್ವನ್" ಆವೃತ್ತಿಯು ಅಂತಹ ಒಂದು ಪಟ್ಟಿಯನ್ನು ಒದಗಿಸುತ್ತದೆ.[note ೨] ಶಿವನಿಗೆ "ಮಹನ್ಯಾಸ"ದಲ್ಲಿ ಕಂಡುಬರುವ "ದಶ-ಸಹಸ್ರನಾಮಗಳು" (10,000 ಹೆಸರುಗಳು) ಇವೆ. "ಶ್ರೀ ರುದ್ರಂ ಚಮಕಂ" ಅಥವಾ "ಶತರುದ್ರಿಯ", ಇದು ಶಿವನನ್ನು ಅನೇಕ ಹೆಸರುಗಳಿಂದ ಸ್ತುತಿಸುವ ಭಕ್ತಿ ಸ್ತೋತ್ರವಾಗಿದೆ. [೫೦][೫೧]

ನಿರ್ಗುಣ ನಿರಾಕಾರ ರೂಪ

[ಬದಲಾಯಿಸಿ]

ಶಿವಲಿಂಗ

[ಬದಲಾಯಿಸಿ]

ಶಿವಲಿಂಗ ಅಥವಾ ಲಿಂಗೋದ್ಭವವು ಮಹಾದೇವನ ಸರ್ವೋಚ್ಛ ಮತ್ತು ನಿರ್ಗುಣ ನಿರಾಕಾರ ರೂಪವಾಗಿದೆ ಇದನ್ನು ಜ್ಯೋತಿರ್ಲಿಂಗ, ಬೆಳಕಿನ ಸ್ಥಂಭ, ಪರಮಶಿವ ಎಂದು ಸಹ ಕರೆಯುತ್ತಾರೆ. ಅನೇಕ ಹಿಂದೂ ಪುರಾಣಗಳ ಪ್ರಕಾರ ಮಹಾದೇವನಿಗೆ ಆದಿಯು ಇಲ್ಲ, ಅಂತ್ಯವೂ ಇಲ್ಲ, ಶಿವಲಿಂಗವು ಆರಂಭವಿಲ್ಲದ ಮತ್ತು ಅಂತ್ಯವಿಲ್ಲದ ದೈವಿಕ ಬೆಳಕಿನ ಸ್ಥಂಭವಾಗಿದೆ, ಇದರಿಂದಲೇ ಜಗತ್ತಿನ ಸೃಷ್ಟಿ, ರಕ್ಷಣೆ, ವಿನಾಶ ನಡೆಯುವುದು ಎಂದು ಮಹಾದೇವನ ನಿರ್ಗುಣ ನಿರಾಕಾರ ರೂಪವನ್ನು ವರ್ಣಿಸಲಾಗಿದೆ. ಸಂಸ್ಕೃತ ಭಾಷೆಯ ಲಿಂಗಪುರಾಣ ಮತ್ತು ಕನ್ನಡದ ವಚನಗಳು ಶಿವನ ಅನಂತ ಸ್ವರೂಪವನ್ನು ಸಂಕೇತಿಸುವ ಲಿಂಗದ ಹಿನ್ನೆಲೆ ಮತ್ತು ಪೂಜೆಯ ಮಹತ್ವವನ್ನು ವಿವರಿಸುವ ಪ್ರಮುಖ ಹಿಂದೂ ಗ್ರಂಥಗಳಾಗಿವೆ.[೫೨] [೫೩][೫೪] [೫೫]

Lingodbhava is a Shaiva sectarian icon where Shiva is depicted rising from the Lingam (an infinite fiery pillar) that narrates how Shiva is the foremost of the Trimurti; Brahma on the left and Vishnu on the right are depicted bowing to Shiva in the centre.

ಲಿಂಗಪುರಾಣದ ಪ್ರಕಾರ ಶಿವಲಿಂಗದ ಮೇಲ್ಭಾಗ (ಓವಲ್ ಆಕಾರ) ನಿರಾಕಾರ ಬ್ರಹ್ಮಾಂಡದ ಸಂಕೇತವಾಗಿದೆ (ಚಿಹ್ನೆ), ಮತ್ತು ಕೆಳಭಾಗ ಪೀಠ ಅಥವಾ ಗದ್ದುಗೆಯಾಗಿದೆ.[೫೬] ಇದೇ ರೀತಿಯ ವ್ಯಾಖ್ಯಾನವು ಸ್ಕಂದ ಪುರಾಣದಲ್ಲಿ ಸಹ ಕಂಡುಬರುತ್ತದೆ:"ಅಂತ್ಯವಿಲ್ಲದ ಆಕಾಶವು (ಇಡೀ ಬ್ರಹ್ಮಾಂಡವನ್ನು ಒಳಗೊಂಡಿರುವ ಮಹಾ ಶೂನ್ಯ) ಲಿಂಗವಾಗಿದೆ, ಭೂಮಿಯು ಅದರ ಆಧಾರವಾಗಿದೆ, ಸಮಯದ ಅಂತ್ಯದಲ್ಲಿ ಇಡೀ ಬ್ರಹ್ಮಾಂಡ ಮತ್ತು ಎಲ್ಲಾ ದೇವರುಗಳು ಅಂತಿಮವಾಗಿ ಲಿಂಗದಲ್ಲಿ ವಿಲೀನಗೊಳ್ಳುತ್ತವೆ." ಎಂದು ಉಲ್ಲೇಖಿಸಲಾಗಿದೆ. [೫೭][೫೪]

ಪುರಾಣ

[ಬದಲಾಯಿಸಿ]
Picture depicting the legend

ಲಿಂಗಪುರಾಣ ಮತ್ತು ಶೈವ ಸಿದ್ಧಾಂತಗಳ ಪ್ರಕಾರ, ವಿಷ್ಣು ಮತ್ತು ಬ್ರಹ್ಮನು ಜಗತ್ ಸೃಷ್ಟಿಯ ಆದಿಯಲ್ಲಿ ತಮ್ಮಿಬ್ಬರಲ್ಲೀ ಯಾರು ಶ್ರೇಷ್ಠರು ಎಂದು ವಾದ ವಿವಾದದಲ್ಲಿ ತೊಡಗಿರುವಾಗ ಅವರಿಗೆ ಮಹಾದೇವನು ಬೆಳಕಿನ ಸ್ಥಂಭ/ಜ್ಯೋತಿರ್ಲಿಂಗದ ರೂಪದಲ್ಲಿ ಗೋಚರವಾಗಿ ಇಬ್ಬರಲ್ಲಿ ಯಾರು ಈ ಬೆಳಕಿನ ಆದಿ ಅಥವಾ ಅಂತ್ಯವನ್ನು ತಲುಪುತ್ತಿರ ಅವರೇ ಶ್ರೇಷ್ಠರು ಎಂದು ಸವಾಲು ಆಕುತ್ತಾನೆ, ಬ್ರಹ್ಮನು ಹಂಸ ರೂಪತಾಳಿ ಮೇಲ್ಭಾಗಕ್ಕೆ ಹೊರಟರೆ ವಿಷ್ಣು ವರಾಹ ರೂಪ ತಾಳಿ ಕೆಳಭಾಗಕ್ಕೆ ತೆರಳುತ್ತಾನೆ, ಸಾವಿರಾರು ವರ್ಷಗಳ ಕಾಲ ಸಂಚರಿಸಿದರು ಇಬ್ಬರಿಗೂ ಕೊನೆ ಸಿಗದೆ ಇದ್ದಾಗ ದಾರಿಯಲ್ಲಿ ಬ್ರಹ್ಮನಿಗೆ ಕೇತಕಿ ಹೂವು ಸಿಗುತ್ತದೆ ಬ್ರಹ್ಮನು ತಾನು ಶಿಖರವನ್ನು ತಲುಪಿದ್ದೆನೆ ಎಂದು ಸಾಕ್ಷಿ ಹೇಳಲು ಕೇತಕಿ ಹೂವಿಗೆ ಸೂಚಿಸಿ ಹಿಂತಿರಿಗುತ್ತಾನೆ, ವಿಷ್ಣು ಕೊನೆ ಸಿಗದೆ ನಿರಾಶನಾಗಿ ಹಿಂತಿರುಗುತ್ತಾನೆ, ಮರಳಿ ಮೊದಲಿದ್ದ ಜಾಗಕ್ಕೆ ತಲುಪಿದಾಗ ಬ್ರಹ್ಮನು ತಾನು ಮೇಲ್ಭಾಗದ ಶಿಖರ ತಲುಪಿದ್ದೆನೆ ಇದಕ್ಕೆ ಕೇತಕಿ ಹೂವೆ ಸಾಕ್ಷಿ ಎನ್ನುತ್ತಾನೆ, ವಿಷ್ಣು ತನ್ನ ಪರಾಜಯವನ್ನು ಸ್ವೀಕರಿಸುತ್ತಾನೆ, ಶಿವನೂ ತನ್ನ ನಿರಾಕಾರ ರೂಪದಿಂದ ಸುಗುಣ ರೂಪಕ್ಕೆ ಅವತರಿಸಿ, ಬ್ರಹ್ಮನು ಸುಳ್ಳು ಹೇಳಿರುವುದಾಗಿ ಅವನಿಗೆ ಮತ್ತು ಕೇತಕಿ ಹೂವಿಗೆ ಪೂಜೆಗೆ ಅನರ್ಹರು ಎಂದು ಶಾಪ ನೀಡುತ್ತಾನೆ ಮತ್ತು ವಿಷ್ಣುವಿನ ಪ್ರಾಮಾಣಿಕತೆಗೆ ತನ್ನ ಸರಿಸಮಾನ ಸ್ಥಾನದ ವರ ನೀಡುತ್ತಾನೆ. ಅವರಿಬ್ಬರಿಗೂ ತಮ್ಮ ಜನ್ಮವು ಈ ಜ್ಯೋತಿರ್ಲಿಂಗದಿಂದಲೇ ಆಗಿದ್ದು ಎಂದು ವಿವರಿಸಿ. ಅವರಿಬ್ಬರಿಗೂ ಜಗತ್ತಿನ ಸೃಷ್ಟಿಯ ಮತ್ತು ಪಾಲನೆಯ ಜ್ಞಾನವನ್ನು ನೀಡುತ್ತಾನೆ.[೫೮][೫೯]

ಸುಗುಣ ರೂಪ

[ಬದಲಾಯಿಸಿ]

ಆದಿಯೋಗಿ

[ಬದಲಾಯಿಸಿ]
ಆದಿಯೋಗಿ- ಇದು ಇಶಾ ಯೋಗ ಕೇಂದ್ರದಲ್ಲಿ ಧ್ಯಾನಲಿಂಗವನ್ನು ಹೊಂದಿದ ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ಪಶ್ಚಿಮ ಘಟ್ಟದ ಒಂದು ಶ್ರೇಣಿಯ ವೆಲ್ಲಿಯಂಗಿರಿ ಪರ್ವತಗಳ ತಪ್ಪಲಿನಲ್ಲಿ ಇದೆ. ಪ್ರತಿಮೆಯ ಎತ್ತರ, 112 ಅಡಿ (ಶೂನ್ಯವಾದಿ- ಜಗ್ಗಿ ವಾಸುದೇವ್ ಸ್ಥಾಪಿಸಿದ್ದಾರೆ)ಇಲ್ಲಿನ ವಿಶೇಷವೆಂದರೆ ಜಾತಿ ಬೇದ ಅಸ್ಪೃಶ್ಯತೆ ಆಚರಣೆ ಮಾಡುವವರು ಇಲ್ಲಿಗೆ ಬಂದರೆ ಅವರ ಸಂತತಿಯೆ ಸರ್ವನಾಶವಾಗುತದೆ

ಜ್ಯೋತಿರ್ಲಿಂಗಗಳು

[ಬದಲಾಯಿಸಿ]
ಸೌರಾಷ್ಟ್ರೇ ಸೋಮನಾಥಂ ಚ ಶ್ರೀಶೈಲೇ ಮಲ್ಲಿಕಾರ್ಜುನಂ।

ಉಜ್ಜಯಿನ್ಯಾಂ ಮಹಾಕಾಲಮೋಂಕಾರಮಮಲೇಶ್ವರಂ॥
ವೈದ್ಯನಾಥಂ ಚಿತಾಭೂಮೌ ಡಾಕಿನ್ಯಾಂ ಭೀಮಶಂಕರಂ।
ಸೇತುಬಂಧೇ ತು ರಾಮೇಶಂ ನಾಗೇಶಂ ದಾರುಕಾವನೇ॥
ವಾರಾಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ।
ಹಿಮಾಲಯೇ ತು ಕೇದಾರಂ ಘುಶ್ಮೇಶಂ ಚ ಶಿವಾಲಯೇ॥
ಸಪ್ತಜನ್ಮಕೃತಂ ಪಾಪಂ ಸ್ಮರಣೇನ ವಿನಶ್ಯತಿ॥
ಏತೇಷಾಂ ದರ್ಶನಾದೇವ ಪಾತಕಂ ನೈವ ತಿಷ್ಠತಿ।

ಕರ್ಮಕ್ಷಯೋ ಭವೇತ್ತಸ್ಯ ಯಸ್ಯ ತುಷ್ಟೋ ಮಹೇಶ್ವರಾಃ॥: [೬೦]

ಸೋಮನಾಥವನ್ನು ಸಾಂಪ್ರದಾಯಿಕವಾಗಿ ಮೊದಲ ಯಾತ್ರಾ ಸ್ಥಳವೆಂದು ಪರಿಗಣಿಸಲಾಗಿದೆ: ದ್ವಾದಶ ಜ್ಯೋತಿರ್ಲಿಂಗ ತೀರ್ಥಯಾತ್ರೆಯು ಸೋಮನಾಥ ದೇವಾಲಯದಿಂದ ಪ್ರಾರಂಭವಾಗುತ್ತದೆ. ಹದಿನಾರು ಬಾರಿ ನಾಶವಾಗಿ ಪುನರ್ನಿರ್ಮಿಸಿದ ಈ ದೇವಾಲಯವು ಭಾರತದಾದ್ಯಂತ ಗೌರವಾನ್ವಿತವಾಗಿದೆ ಮತ್ತು ಪೌರಾಣಿಕ ಹಿನ್ನೆಲೆ, ಸಂಪ್ರದಾಯ ಮತ್ತು ಇತಿಹಾಸದಿಂದ ಸಮೃದ್ಧವಾಗಿದೆ. ಇದು ಪಶ್ಚಿಮ ಭಾರತದ ಗುಜರಾತ್ ರಾಜ್ಯದ ಸೌರಾಷ್ಟ್ರ ಪ್ರದೇಶದ ವೆರಾವಲ್‌ನಲ್ಲಿರುವ ಪ್ರಭಾಸ್ ಪಟಾನ್‌ನಲ್ಲಿದೆ.[೬೧]

ಶ್ರೀಶೈಲ ಮಲ್ಲಿಕಾರ್ಜುನ ಜ್ಯೋತಿರ್ಲಿಂಗವೂ ಆಂದ್ರಪ್ರದೇಶದ ರಾಯಲ್ ಸಿಮಾದ ನಂದ್ಯಾಲ ಜಿಲ್ಲೆಯ ಪರ್ವತದ ಮೇಲಿದೆ. ಈ ದೇವಾಲಯವು ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಿಂದ ಶ್ರೀಮಂತವಾಗಿರುವ ಪುರಾತನ ದೇವಾಲಯಗಳಲ್ಲಿ ಒಂದಾಗಿದೆ. ಇದು ಆದಿಶಕ್ತಿಯ ಶಕ್ತಿಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಪವಿತ್ರ ಸ್ಥಳವಾಗಿದೆ. ಆದಿಶಂಕರರು ತಮ್ಮ ಶಿವಾನಂದ ಲಹರಿಯನ್ನು ಇಲ್ಲಿ ರಚಿಸಿದ್ದಾರೆ.[೬೨]

ಮಧ್ಯಪ್ರದೇಶದ ಉಜ್ಜಯಿನಿ ಮಹಾಕಾಳೇಶ್ವರ ದೇವಾಲಯದ ಗರ್ಭಗೃಹದ ಚಾವಣಿಯ (ಶಿವಲಿಂಗವಿರುವ ಸ್ಥಳದಲ್ಲಿ) ತಲೆಕೆಳಗಾಗಿ ಶ್ರೀ ರುದ್ರ ಯಂತ್ರವನ್ನು ಹೊಂದಿರುವ ಮತ್ತು ದಕ್ಷಿಣಕ್ಕೆ ಎದುರಾಗಿರುವ ಏಕೈಕ ಜ್ಯೋತಿರ್ಲಿಂಗ ದೇವಾಲಯವಾಗಿದೆ. ಇದು ಆದಿಶಕ್ತಿಯ ಶಕ್ತಿ ಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಪವಿತ್ರ ಸ್ಥಳವಾಗಿದೆ.[೬೩]

ಓಂಕಾರೇಶ್ವರ ಜ್ಯೋತಿರ್ಲಿಂಗ ದೇವಾಲಯವು ಮಧ್ಯಪ್ರದೇಶದ ಖಂಡ್ವ ಜಿಲ್ಲೆಯಲ್ಲಿರುವ ನರ್ಮದಾ ನದಿಯ ದಡದಲ್ಲಿದೆ. ಇಲ್ಲಿ ಶಿವನ ಎರಡು ಮುಖ್ಯ ದೇವಾಲಯಗಳಿವೆ, ಒಂದು ಓಂಕಾರೇಶ್ವರಕ್ಕೆ ("ಓಂಕಾರದ ಭಗವಂತ) ದ್ವೀಪದಲ್ಲಿದೆ ಮತ್ತು ಇನ್ನೊಂದು ಅಮಲೇಶ್ವರ (ಅಮರ ಭಗವಂತ) ಇದು ಮುಖ್ಯ ಭೂಭಾಗದಲ್ಲಿ ನರ್ಮದಾ ನದಿಯ ದಕ್ಷಿಣ ದಂಡೆಯಲ್ಲಿದೆ.[೬೪]

ಉತ್ತರಾಖಂಡದಲ್ಲಿರುವ ಕೇದಾರನಾಥವು ಒಂದು ಪುರಾತನ ದೇಗುಲ, ಶಿವನ ಶಾಶ್ವತ ವಾಸಸ್ಥಾನವಾದ ಕೈಲಾಸಪರ್ವತದ ಉತ್ತರದ ದಿಕ್ಕಿನ ಮತ್ತು ಹತ್ತಿರದ ಜ್ಯೋತಿರ್ಲಿಂಗವೆಂದು ಪೂಜಿಸಲ್ಪಟ್ಟಿದೆ, ಇದು ಪೌರಾಣಿಕ ಮತ್ತು ಸಂಪ್ರದಾಯಗಳಿಂದ ಸಮೃದ್ಧವಾದ ದೇಗುಲ, ಕೇದಾರನಾಥ ಹಿಂದೂ ಧರ್ಮದ ಚಾರ್ ಧಾಮ್ ತಿರ್ಥಯಾತ್ರೆಯ ಒಂದು ಭಾಗ, ಹಿಮದಿಂದ ಆವೃತವಾಗಿರುವ ಕೇದಾರನಾಥ ದೇವಾಲಯವು ವರ್ಷಕ್ಕೆ ಆರು ತಿಂಗಳು ಮಾತ್ರ ಪ್ರವೇಶಕ್ಕೆ ಮುಕ್ತವಾಗಿರುತ್ತದೆ.[೬೫]

ಭೀಮಾಶಂಕರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿರುವ ಸಹ್ಯಾದ್ರಿ ಪರ್ವತ ಶ್ರೇಣಿಯ ಮೇಲಿರುವ ಭೀಮಾನದಿಯ ಉಗಮ ಸ್ಥಳದಲ್ಲಿದೆ. ಭೀಮಾಶಂಕರ ದೇವಾಲಯವು ನಾಗರ ವಾಸ್ತುಶೈಲಿಯಲ್ಲಿ ನಿರ್ಮಿಸಲಾಗಿದೆ.[೬೬]

ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಯೋತಿರ್ಲಿಂಗವೂ ಹಿಂದೂ ದೇವಾಲಯಗಳಲ್ಲಿ ಅತ್ಯಂತ ಪವಿತ್ರವಾಗಿದೆ, ಜ್ಯೋತಿರ್ಲಿಂಗವನ್ನು ವಿಶ್ವನಾಥ ಅಥವಾ ವಿಶ್ವೇಶ್ವರ ಎಂಬ ಹೆಸರಿನಿಂದ ಕರೆಯಲಾಗುತ್ತದೆ, ಅಂದರೆ ಬ್ರಹ್ಮಾಂಡದ ಒಡೆಯ ಎಂದರ್ಥ.[೬೭] ಕಾಶಿ (ವಾರಣಾಸಿ) ಯು 3500 ವರ್ಷಗಳ ದಾಖಲಿತ ಇತಿಹಾಸವನ್ನು ಹೊಂದಿದೆ ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ನಗರವೆಂದು ಪರಿಗಣಿಸಲಾಗಿದೆ. ಈ ದೇವಾಲಯವು ಪವಿತ್ರ ಗಂಗಾ ನದಿಯ ಪಶ್ಚಿಮ ದಡದಲ್ಲಿದೆ. ಇದು ಶಕ್ತಿ ಪೀಠ ಮತ್ತು ಜ್ಯೋತಿರ್ಲಿಂಗವು ಒಟ್ಟಿಗೆ ಇರುವ ಸ್ಥಳವಾಗಿದೆ.[೬೮]

ತ್ರ್ಯಂಬಕೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ನಾಶಿಕ್ ಜಿಲ್ಲೆಯಲ್ಲಿರುವ ಬ್ರಹ್ಮಗಿರಿ ಪರ್ವತದ ಗೋದಾವರಿ ನದಿಯ ಉಗಮ ಸ್ಥಳದಲ್ಲಿದೆ. ಜ್ಯೋತಿರ್ಲಿಂಗವು ಬ್ರಹ್ಮ, ವಿಷ್ಣು ಮತ್ತು ಶಿವನ ಮೂರು ಮುಖಗಳನ್ನು ಹೊಂದಿದೆ.[೬೯]

ನಾಗೇಶ್ವರ

[ಬದಲಾಯಿಸಿ]

ನಾಗೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರ ರಾಜ್ಯದ ಹಿಂಗೋಲಿ ಜಿಲ್ಲೆಯಲ್ಲಿಯರುವ ಔಂಧ ನಾಗನಾಥ್ ಪಟ್ಟಣದಲ್ಲಿ, ದೇವಾಲಯದ ಜೊತೆಗೆ ಸುಂದರವಾದ ಉದ್ಯಾನ ಮತ್ತು ಮೀಸಲು ಅರಣ್ಯ ಪ್ರದೇಶವನ್ನು ಒಳಗೊಂಡಿರುವ ಪ್ರಸಿದ್ಧ ಯಾತ್ರಾ ಪ್ರವಾಸಿ ಸ್ಥಳವಾಗಿದೆ.[೭೦][೭೧]

ಪಾರ್ಲಿ ವೈದ್ಯನಾಥ ಅಥವಾ ದಿಯೋಘರ್ ಭೈದ್ಯನಾಥ

[ಬದಲಾಯಿಸಿ]
Parli Vaidyanath Temple
Deoghar Baidyanath

ಮಹಾರಾಷ್ಟ್ರದ ಪಾರ್ಲಿ ವೈದ್ಯನಾಥ್[೭೨] ಮತ್ತು ಝಾರ್ಖಂಡದ ದಿಯೋಘರ್ ಭೈದ್ಯನಾಥ[೭೩] ಎರಡು ಜ್ಯೋತಿರ್ಲಿಂಗ ಎಂದು ಪ್ರಸಿದ್ಧವಾಗಿದೆ ಆದರೆ ಇವರೇಡರಲ್ಲಿ ಯಾವುದು ನಿಜವಾದ ಜ್ಯೋತಿರ್ಲಿಂಗ ಎಂಬುದು ವಿವಾದಿತ ವಿಷಯವಾಗಿದೆ. ಜನವರಿ 2018 ರಲ್ಲಿ ಎಲ್ಲಾ ಹನ್ನೆರಡು ಜ್ಯೋತಿರ್ಲಿಂಗಗಳ ಅರ್ಚಕರ ಮೂರು ದಿನಗಳ ಸಭೆಯನ್ನು ಮಧ್ಯಪ್ರದೇಶ ಸರ್ಕಾರವು ಮತ್ತು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯದ ಆಡಳಿತ ಸಮಿತಿಯು ಜಂಟಿಯಾಗಿ ಆಯೋಜಿಸಿ, ಪುರಾಣಗಳಲ್ಲಿ ಉಲ್ಲೇಖವಾಗಿರುವ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಪಾರ್ಲಿಯಲ್ಲಿರುವ ವೈದ್ಯನಾಥ ದೇವಾಲಯವೆಂದು ಘೋಷಿಸಿದೆ ಆದರೆ ಭಾರತ ಸರ್ಕಾರ ಇದಕ್ಕೆ ಇನ್ನೂ ಯಾವುದೇ ಸ್ಪಷ್ಟೀಕರಣ ನೀಡಿಲ್ಲ.[೭೪]

ರಾಮೇಶ್ವರಂ ಜ್ಯೋತಿರ್ಲಿಂಗವೂ ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯಲ್ಲಿದೆ, ತಮಿಳಿನ ಪ್ರಸಿದ್ಧ ಶಿವ ಸಂತರುಗಳಾದ ನಾಯನಾರರು ಈ ಜ್ಯೋತಿರ್ಲಿಂಗವನ್ನು ತಮ್ಮ ಗೀತೆಗಳಲ್ಲಿ ಹಾಡಿ ಹೊಗಳಿದ್ದಾರೆ. ಈ ದೇವಾಲಯದಲ್ಲಿರುವ ಲಿಂಗವನ್ನು ರಾಮನು ಸ್ಥಾಪಿಸಿದ್ದು ಎಂದು ಹಿಂದೂ ಪುರಾಣಗಳಲ್ಲಿ ಉಲ್ಲೇಖಿಸಲಾಗದೆ. ದೇಗುಲವು ಭಾರತದ ಎಲ್ಲಾ ಹಿಂದೂ ದೇವಾಲಯಗಳಲ್ಲಿ ಅತಿ ಉದ್ದದ ಕಾರಿಡಾರ್ ಅನ್ನು ಹೊಂದಿದೆ ಮತ್ತು ತಮಿಳ್ ವಾಸ್ತುಶಿಲ್ಪದಿಂದ ನಿರ್ಮಿಸಲಾಗಿದೆ.[೭೫]

ಗೃಷ್ಣೇಶ್ವರ ಜ್ಯೋತಿರ್ಲಿಂಗವೂ ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯ ಎಲ್ಲೋರಾ ಗುಹೆಯಿಂದ 1 ಕಿಲೋಮೀಟರ್ ದೂರದಲ್ಲಿದೆ. ಗೃಷ್ಣೇಶ್ವರ ಜ್ಯೋತಿರ್ಲಿಂಗ ದೇಗುಲವು 44,000 ಚದರ ಅಡಿ ಪ್ರದೇಶದಲ್ಲಿ ಕಪ್ಪು ಕಲ್ಲಿನಿಂದ ನಿರ್ಮಿಸಲ್ಪಟಟ್ಟಿದ್ದು ಶಿಲ್ಪಕಲೆಗಳಿಂದ ಸಮೃದ್ಧವಾಗಿದೆ.[೭೬]

ಕರ್ನಾಟಕದ ಶಿವಾಲಯಗಳು

[ಬದಲಾಯಿಸಿ]

ಕೋಟಿಲಿಂಗೇಶ್ವರವೂ ಕೋಲಾರ ಜಿಲ್ಲೆಬಂಗಾರಪೇಟೆ ತಾಲೂಕಿನ ಕಮ್ಮಸಂದ್ರ ಗ್ರಾಮದಲ್ಲಿದೆ. ದೇಗುಲವೂ 15 ಎಕರೆ ವಿಸ್ತೀರ್ಣದ ಜಾಗದಲ್ಲಿ 108 ಅಡಿಯ ಶಿವಲಿಂಗ , 35 ಅಡಿಯ ನಂದಿ ಮತ್ತು ಸುತ್ತಲೂ ವಿವಿಧ ಅಳತೆಯ 90 ಲಕ್ಷಕ್ಕೂ ಹೆಚ್ಚಿನ ಶಿವಲಿಂಗಗಳನ್ನು ಒಳಗೊಂಡಿದೆ. ಕೋಟಿಲಿಂಗೇಶ್ವರ ದೇಗುಲದ ಕುರಿತು ನಿರ್ಮಿಸಲಾದ ಕನ್ನಡದ ಶ್ರೀ ಮಂಜುನಾಥ ಚಲನಚಿತ್ರ 2001ರಲ್ಲಿ ಬಿಡುಗಡೆಯಾಗಿದೆ.[೭೭][೭೮] [೭೯][೮೦]

ಮುರ್ಡೇಶ್ವರವು ಉತ್ತರ ಕನ್ನಡ ಜಿಲ್ಲೆಯಲ್ಲಿದೆ, ದೇಗುಲವೂ ಸಮುದ್ರ ತೀರದಲ್ಲಿದ್ದು 237.5 ಅಡಿಯ ಭವ್ಯ ರಾಜಗೋಪುರ ಮತ್ತು 123 ಅಡಿಯ ಜಗತ್ತಿನಲ್ಲಿಯೇ ಎರಡನೇ ಅತೀ ಎತ್ತರದ ಶಿವನ ವಿಗ್ರಹವನ್ನು ಹೊಂದಿರುವ ಪ್ರಸಿದ್ಧ ಪ್ರವಾಸಿ ತಾಣವಾಗಿದೆ.[೮೧][೮೨]

ಸಹಸ್ರ ಲಿಂಗವು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ತಾಲೂಕಿನಲ್ಲಿದೆ, ಇದು ಸಾವಿರಾರು ಶಿವಲಿಂಗಗಳು ಶಾಲ್ಮಲ ನದಿಯಲ್ಲಿರುವ ಪವಿತ್ರ ಸ್ಥಳ.[೮೩]

ಧರ್ಮಸ್ಥಳ ಮಂಜುನಾಥ ದೇಗುಲವು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಇಲ್ಲಿ ವಾರ್ಷಿಕವಾಗಿ ಲಕ್ಷ ದೀಪೋತ್ಸವವೂ ಜೊತೆಗೆ, ಸಾಹಿತ್ಯ ಹಾಗು ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಲಾಗುತ್ತದೆ.[೮೪]

ಗೊಡಚಿ ವೀರಭದ್ರೇಶ್ವರ ದೇಗುಲವು ಬೆಳಗಾವಿ ಜಿಲ್ಲೆರಾಮದುರ್ಗ ತಾಲೂಕಿನಲ್ಲಿದೆ. ಇಲ್ಲಿ ಶಿವನೂ ವೀರಭದ್ರನ ರೂಪದಲ್ಲಿ ಮತ್ತು ಆದಿಶಕ್ತಿಯು ಭದ್ರಕಾಳಿ ರೂಪದಲ್ಲಿ ದಂಪತಿ ಸಮೇತರಾಗಿ ನೆಲೆಸಿದ್ದಾರೆ. ಇಲ್ಲಿ ನಡೆಯುವ ವಾರ್ಷಿಕ ಜಾತ್ರೆಯು ಅತ್ಯಂತ ಪ್ರಸಿದ್ಧಿ ಪಡೆದಿದೆ, ಈ ದೇಗುಲವು ಲಿಂಗಾಯತರ ಪವಿತ್ರ ಪುಣ್ಯ ಕ್ಷೇತ್ರಗಳಲ್ಲಿ ಒಂದಾಗಿದೆ.[೮೫][೮೬] [೮೭]

ನಂಜನಗೂಡು ನಂಜುಂಡೇಶ್ವರ ದೇಗುಲವು ಕರ್ನಾಟಕದ ಅತಿ ದೊಡ್ಡ ದೇವಾಲಯವಾಗಿದೆ, ಇದು ಮೈಸೂರು ಜಿಲ್ಲೆಯಲ್ಲಿರುವ ಕಾವೇರಿ ನದಿಯ ಉಪನದಿಗಳಲ್ಲಿ ಒಂದಾದ ಕಪಿಲಾ ನದಿಯ ಬಲ ತೀರದಲ್ಲಿದೆ. ದೇಗುಲವನ್ನು ದ್ರಾವಿಡ ಶೈಲಿಯಲ್ಲಿ ನಿರ್ಮಿಸಲಾಗಿದೆ. [೮೮]

ಹೆಚ್ಚಿನ ಓದಿಗೆ

[ಬದಲಾಯಿಸಿ]
  • ಶಿವ ಎಂದರೆ ಯಾರು? ಮನುಷ್ಯನೇ? ದೇವರೇ? ಅಥವಾ ಕಟ್ಟುಕಥೆಯೆ? - ಸದ್ಗುರು ಜಗ್ಗಿ ವಾಸುದೇವ್‌ [೧]

ಟಿಪ್ಪಣಿಗಳು

[ಬದಲಾಯಿಸಿ]


  1. Sati, the first wife of Shiva, was reborn as Parvati after she immolated herself. According to Shaivism, Parvati has various appearances like Durga and Kali with the supreme aspect of Adi Shakti which are also associated with Shiva. All these goddesses are the same Atma (Self) in different bodies.[೧೪]
  2. This is the source for the version presented in Chidbhavananda, who refers to it being from the Mahabharata but does not explicitly clarify which of the two Mahabharata versions he is using. See Chidbhavananda 1997, p. 5.


ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ Sharma 2000, p. 65.
  2. ೨.೦ ೨.೧ Issitt & Main 2014, pp. 147, 168.
  3. ೩.೦ ೩.೧ Flood 1996, p. 151.
  4. "Shiva In Mythology: Let's Reimagine The Lord". Archived from the original on 30 October 2022. Retrieved 30 October 2022.
  5. ೫.೦ ೫.೧ ೫.೨ Zimmer 1972, pp. 124–126.
  6. Gonda 1969.
  7. Flood 1996, pp. 17, 153; Sivaraman 1973, p. 131.
  8. Kinsley 1988, pp. 50, 103–104.
  9. Pintchman 2015, pp. 113, 119, 144, 171.
  10. Flood 1996, pp. 17, 153.
  11. Shiva Samhita, e.g. Mallinson 2007; Varenne 1976, p. 82; Marchand 2007 for Jnana Yoga.
  12. ೧೨.೦ ೧೨.೧ ೧೨.೨ Fuller 2004, p. 58.
  13. "Hinduism". Encyclopedia of World Religions. Encyclopaedia Britannica, Inc. 2008. pp. 445–448. ISBN 978-1593394912.
  14. Kinsley 1998, p. 35.
  15. Cush, Robinson & York 2008, p. 78.
  16. Williams 1981, p. 62.
  17. Mani, Vettam (1975). Puranic Encyclopaedia: a Comprehensive Dictionary with Special Reference to the Epic and Puranic Literature. Motilal Banarsidass Publishers. ISBN 978-0-8426-0822-0.
  18. Nair, Roshni (2015-09-13). "Beyond Ganesh: The other children of Shiva-Parvati". DNA India (in ಇಂಗ್ಲಿಷ್). Retrieved 2020-11-19.
  19. Javid 2008, pp. 20–21.
  20. Dalal 2010, pp. 137, 186.
  21. Sadasivan 2000, p. 148; Sircar 1998, pp. 3 with footnote 2, 102–105.
  22. Flood 1996, p. 152.
  23. Flood 1996, pp. 148–149; Keay 2000, p. xxvii; Granoff 2003, pp. 95–114; Nath 2001, p. 31.
  24. Keay 2000, p. xxvii; Flood 1996, p. 17.
  25. ೨೫.೦ ೨೫.೧ ೨೫.೨ ೨೫.೩ Monier Monier-Williams (1899), Sanskrit to English Dictionary with Etymology Archived 27 February 2017 ವೇಬ್ಯಾಕ್ ಮೆಷಿನ್ ನಲ್ಲಿ., Oxford University Press, pp. 1074–1076
  26. Prentiss 2000, p. 199.
  27. For use of the term śiva as an epithet for other Vedic deities, see: Chakravarti 1986, p. 28.
  28. Chakravarti 1986, pp. 21–22.
  29. Chakravarti 1986, pp. 1, 7, 21–23.
  30. For root śarv- see: Apte 1965, p. 910.
  31. Sharma 1996, p. 306.
  32. Ahmed, 8 n & Apte 1965, p. 927.
  33. For the definition "Śaivism refers to the traditions which follow the teachings of Śiva (śivaśāna) and which focus on the deity Śiva... " see: Flood 1996, p. 149
  34. van Lysebeth, Andre (2002). Tantra: Cult of the Feminine. Weiser Books. p. 213. ISBN 978-0877288459.
  35. Tyagi, Ishvar Chandra (1982). Shaivism in Ancient India: From the Earliest Times to C.A.D. 300. Meenakshi Prakashan. p. 81.
  36. Sri Vishnu Sahasranama 1986, pp. 47, 122; Chinmayananda 2002, p. 24.
  37. Kramrisch 1994a, p. 476.
  38. For appearance of the name महादेव in the Shiva Sahasranama see: Sharma 1996, p. 297
  39. Kramrisch 1994a, p. 477.
  40. For appearance of the name in the Shiva Sahasranama see: Sharma 1996, p. 299
  41. For Parameśhvara as "Supreme Lord" see: Kramrisch 1981, p. 479.
  42. Powell 2016, p. 27.
  43. Berreman 1963, p. 385.
  44. For translation see: Dutt 1905, Chapter 17 of Volume 13.
  45. For translation see: Ganguli 2004, Chapter 17 of Volume 13.
  46. Chidbhavananda 1997, Siva Sahasranama Stotram.
  47. Lochtefeld 2002, p. 247.
  48. Sir Monier Monier-Williams, sahasranAman, A Sanskrit-English Dictionary: Etymologically and Philologically Arranged with Special Reference to Cognate Indo-European Languages, Oxford University Press (Reprinted: Motilal Banarsidass), ISBN 978-8120831056
  49. Sharma 1996, pp. viii–ix
  50. For an overview of the Śatarudriya see: Kramrisch 1981, pp. 71–74.
  51. For complete Sanskrit text, translations, and commentary see: Sivaramamurti 1976.
  52. Blurton, T. R. (1992). "Stone statue of Shiva as Lingodbhava". Extract from Hindu art (London, The British Museum Press). British Museum site. Retrieved 2 July 2010.
  53. Harding, Elizabeth U. (1998). "God, the Father". Kali: The Black Goddess of Dakshineswar. Motilal Banarsidass. pp. 156–157. ISBN 978-81-208-1450-9.
  54. ೫೪.೦ ೫೪.೧ Vivekananda, Swami. "The Paris congress of the history of religions". The Complete Works of Swami Vivekananda. Vol. 4.
  55. Chaturvedi (2004). Shiv Purana (2006 ed.). Diamond Pocket Books. p. 11. ISBN 978-81-7182-721-3.
  56. Sivananda, Swami (1996). "Worship of Siva Linga". Lord Siva and His Worship. The Divine Life Trust Society.
  57. "Reading the Vedic Literature in Sanskrit". is1.mum.edu. Archived from the original on 3 March 2016. Retrieved 2 June 2017.
  58. Pattanaik, Devdutt (2017). Devlok, volume 2. Random House Publishers India Pvt. Limited. p. 126. ISBN 9789386495150.
  59. "Tiruvannamali Historical moments". Tiruvannamalai Municipality. 2011. Archived from the original on 29 October 2013. Retrieved 6 September 2012.
  60. "Dwadasa Jyotirlinga Stotram". Vaidika Vignanam (in ಸಂಸ್ಕೃತ). n.d.
  61. Shree Somnath Jyotirlinga Temple, Tourism Corporation of Gujarat Limited – a State Government company, Government of Gujarat (2021)
  62. "Temple Tourism". Nandyal District administration.
  63. "Shree Mahakaleshwar Temple". Ujjain district administration.
  64. "Omkareshwar Mandhata". Khandwa District administration.
  65. "Kedaranath Rudraprayag district". Rudraprayag District.
  66. "Bhimashankar Temple". Pune District.
  67. "Shree Kashi Vishwanath Temple". Varanasi District administration.
  68. "About Kashi". Varanasi District administration.
  69. "Trimbakeshwar Temple". Nashik District Administration.
  70. "hingoli district aundha-nagnath". hingoli.nic.in.
  71. "aundha nagnath temple". Maharashtra Tourism.
  72. "Beed district Parli Vaidyanath Temple". Beed district administration.
  73. "deoghar baidyanath-temple". deoghar.nic.in/.
  74. "Removal of Deoghar Jyotirlinga from List". Times of India.
  75. "Rameshwaram". Ramanathapuram district administration.
  76. "Aurangabad tourism". aurangabad.gov.in.
  77. Duttagupta, Samonway (7 March 2016). "4 of the most amazing Shiva temples in India other than Amarnath and Kedarnath". India Today. Retrieved 25 February 2017.
  78. Choudhury, Nupur. "Kotilingeshwara Temple - A Day Trip from Bengaluru". tripclap.com. tripclap. Retrieved 1 February 2021.
  79. "Kotilingeshwara Temple Kolar - Lord Shiva Temple". 3 February 2022.
  80. "Kotilingeshwar Temple". Kolar district administration.
  81. "Murudeshwar Temple". Mahashivratri.org.
  82. "ಮುರ್ಡೇಶ್ವರ". Uttara Kannada district administration.
  83. A brief introduction to Sahasralinga is provided by the Local Municipal Corporation "Tourism | ಶಿರಸಿ ನಗರಸಭೆ". Archived from the original on 2015-12-16. Retrieved 2015-07-30.
  84. "ಧರ್ಮಸ್ಥಳ". Dakshina Kannada district administration.
  85. "Godachi Shree Veerabhadreshwara Kshetra". Udayavani. 15 December 2018.
  86. Belagavi Gazette (PDF) (in ಇಂಗ್ಲಿಷ್). gazetter.karnataka.gov.in. 1987. pp. 30–31. Archived from the original (PDF) on 2023-08-17. Retrieved 2023-08-29.
  87. "Godachi Bhadrakali Veerabhadreshwara". Karnataka.com. 8 June 2011.
  88. "sri nanjundeswara temple". Mysuru District administration.


  • Chinmayananda, Swami (2002). Vishnusahasranama (in ಇಂಗ್ಲಿಷ್). Central Chinmaya Mission Trust. ISBN 978-8175972452.
  • Dutt, Manmatha Nath (1905). A Prose English Translation of the Mahabharata: (translated Literally from the Original Sanskrit Text). Anushasana Parva, Volume 13. Calcutta: Dass, Elysium Press.
  • Ganguli, Kisari Mohan (2004). Mahabharata of Krishna-Dwaipayana Vyasa. Munshirm Manoharlal Pub Pvt Ltd. ISBN 8121505933.
  • Śrī Viṣṇu sahasranāma : with text, transliteration, translation and commentary of Śrī Śaṅkarācārya. Madras: Sri Ramakrishna Math. 1986. ISBN 978-8171204205.