ಶಿವಾಜಿ ನಗರ, ಬೆಂಗಳೂರು
ಶಿವಾಜಿ ನಗರ,ಬೆಂಗಳೂರು | |
---|---|
ಉಪನಗರ | |
ದೇಶ | ಭಾರತ |
ರಾಜ್ಯ | ಕರ್ನಾಟಕ |
ಮಹಾನಗರ | ಬೆಂಗಲೂರು |
Government | |
• Body | BBMP |
ಭಾಷೆಗಳು | |
• ಅಧಿಕೃತ | ಕನ್ನಡ |
• Spoken | Kannada, Tamil, Urdu, English, Telugu, Marathi |
Time zone | UTC+5:30 (IST) |
Postal Index Number | 560051 |
Lok Sabha Constituency | Bangalore Central |
Vidhan Sabha Constituency | Shivajinagar |
Original Planning Agency | Bangalore Civil & Military Station Municipality |
ಶಿವಾಜಿ ನಗರ ಬೆಂಗಳೂರಿನ ಉತ್ತರ ಪೂರ್ವ ದಿಕ್ಕಿನಲ್ಲಿರುವ ಬಸ್-ನಿಲ್ದಾಣಕ್ಕೆ(BMTC)ಸಮೀಪವಾಗಿದೆ. ಒಳ್ಳೆಯ ವ್ಯಾಪಾರ ಸ್ಥಳ. 'ಮಹಾತ್ಮಾ ಗಾಂಧಿ ರಸ್ತೆ'ಗೆ ಹತ್ತಿರ. 'ಕಂಟೋನ್ಮೆಂಟ್ ರೈಲ್ವೆ ನಿಲ್ದಾಣ'ಕ್ಕೂ ಸಹಿತ. ಶಿವಾಜಿನಗರದ ಹತ್ತಿರ ಹಲವಾರು 'ಸರ್ಕಾರಿ ಆಫೀಸ್' ಗಳಿವೆ. ಶಿವಾಜಿನಗರಕ್ಕೆ ಕೆಲವು ಹಿರಿಯರು, 'ಲಷ್ಕರ್' (ದಂಡು) ಎಂದು, ಕರೆಯುತ್ತಾರೆ. ಈ ಪ್ರದೇಶವನ್ನು "ಬೈದವಾಡಿ".[೧] ಎಂದು ಕರೆಯುತ್ತಿದ್ದರು. ಶಿವಾಜಿನಗರದಲ್ಲಿ, ಮೊಘಲರ ಕಾಲದ, ಸುಮಾರು ೩೦೦ ವರ್ಷಗಳಷ್ಟು ಪುರಾತನ ಮಸೀದಿಗಳಿವೆ. ಉದಾಹರಣೆಗೆ,'ಲಾಲ್ ಮಸ್ಜಿದ್', 'ಮಸ್ಜಿದ್-ಎ-ಬೇದ್', 'ಮಸ್ಜಿದ್-ಎ-ಲಬ್ಬೀನ್' ಗಳು, 'ಕಮರ್ಶಿಯಲ್ ರಸ್ತೆ'ಗೆ ತಗುಲಿದಂತೆ ಇವೆ. 'ಹಝರತ್ ಶ ಸುಲ್ತಾನ್ ಗುಂಬಜ್', ಬಸ್ ನಿಲ್ದಾಣದ ಹಿಂದೆ, 'ತಾಬ್ಲಿಗ್ ಕಾರ್ಯ ಚಟುವಟಿಕೆಗಳ ಕೇಂದ್ರ'ವಾಗಿದೆ.
'ತಾಬ್ಲಿಗ್'ಚಟುವಟಿಕೆಗಳು
[ಬದಲಾಯಿಸಿ]'ತಾಬ್ಲಿಗ್' ನಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಅನುಸಾರವಾಗಿ ರಾಜ್ಯದಲ್ಲಿ ಆಗುಹೋಗುಗಳು, ಆಗುತ್ತವೆ. ಶಿವಾಜಿನಗರದಲ್ಲಿ ಒಂದು ಅತ್ಯುತ್ತಮ ಮಾರ್ಕೆಟ್ ಇದೆ. ಅದೇ ರಸಲ್ ಮಾರ್ಕೆಟ್.ಇದನ್ನು ೧೯೨೭ ಕಂಟೋನ್ಮೆಂಟ್ ನ ಬ್ರಿಟಿಷ್ ಸೈನಿಕರಿಗೆ ಬೇಕಾದ ವಸ್ತುಗಳನ್ನು ಸರಬರಾಜುಮಾಡುವ ದಿಶೆಯಿಂದ ಸ್ಥಾಪಿಸಲಾಗಿತ್ತು. ಈಗಲೂ ಅದು ಚಾಲ್ತಿಯಲ್ಲಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಮುಸಲ್ಮಾನರು ಇರುವ ಸ್ಥಳವಾಗಿದೆ. 'ಪಾಶ್ ಶಾಪಿಂಗ್' ಸ್ಥಳ. ಹಲವಾರು ರೆಸ್ಟಾರೆಂಟ್ ಗಳಲ್ಲಿ ಕಬಾಬ್ ಒಂದು ಪ್ರಮುಖ ವ್ಯಂಜನವಾಗಿದೆ.
ಸೇಂಟ್ ಮೇರಿಯಮ್ಮನವರ ಜಾತ್ರೆ
[ಬದಲಾಯಿಸಿ]ಶಿವಾಜಿನಗರದಲ್ಲಿ ಅತಿ ಹಳೆಯ ಹಾಗೂ ಸುಪ್ರಸಿದ್ಧ, 'ಸೇಂಟ್ ಮೇರಿಯವರ ಬೆಸಿಲಿಕ' ಇದೆ. ಶಿವಾಜಿನಗರದಲ್ಲಿ ಪ್ರತಿವರ್ಷವೂ 'ಸೇಂಟ್ ಮೇರಿಯವರ ವಾರ್ಷಿಕ ಮೇಲ, ಸೆಪ್ಟೆಂಬರ್, ೮ ರಿಂದ ೯ ದಿನ, ಜರುಗುವುದು. ಸೆಪ್ಟೆಂಬರ್ ೮ ರಂದು ಮುಗಿಯುತ್ತದೆ. ಮೇರಿಯವರ ವಿಗ್ರಹದ, ರಥೋತ್ಸವದೊಂದಿಗೆ, ಅದು ಮುಕ್ತಾಯವಾಗುತ್ತದೆ. ಸಾವಿರಾರು 'ಕ್ರೈಸ್ತ ಮತಾವಲಂಬಿಗಳು' ಕಾವಿಬಣ್ಣದ ಉಡುಪನ್ನು ಧರಿಸಿ, ಉತ್ಸವದಲ್ಲಿ ಭಾಗವಹಿಸಿ, 'ಮೇರಿಯಮ್ಮನವರ,ದರ್ಶನ' ಪಡೆಯುತ್ತಾರೆ.
ಉಲ್ಲೇಖಗಳು
[ಬದಲಾಯಿಸಿ]