ವಿಷಯಕ್ಕೆ ಹೋಗು

ಶಿಶು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಗತಾನೆ ಜನಿಸಿದ ಶಿಶು, ಕೆಲವೇ ಸೆಕೆಂಡುಗಳ ನಂತರ

ಶಿಶು ಹಸುಳೆ ಶಬ್ದದ ಹೆಚ್ಚು ಔಪಚಾರಿಕ ಅಥವಾ ವಿಶೇಷೀಕೃತ ಸಮಾನಾರ್ಥಕ ಪದ, ಮತ್ತು ಮಾನವರ ಅಥವಾ ಇತರ ಪ್ರಾಣಿಗಳ ಬಹಳ ಎಳೆ ಸಂತತಿಯನ್ನು ಸೂಚಿಸುತ್ತದೆ.

ಆಡುಮಾತಿನಲ್ಲಿ, ನವಜಾತ ಎಂದರೆ ಹುಟ್ಟಿ ಕೆಲವೇ ಗಂಟೆಗಳು, ದಿನಗಳು, ಅಥವಾ ಒಂದು ತಿಂಗಳವರೆಗೆ ಆಗಿರುವ ಶಿಶು. ವೈದ್ಯಕೀಯ ವೈದ್ಯಕೀಯ ಸಂದರ್ಭಗಳಲ್ಲಿ, ನವಜಾತ ಪದ ಜನನದ ನಂತರದ ಮೊದಲ ೨೮ ದಿನಗಳೊಳಗಿನ ಶಿಶುವನ್ನು ಸೂಚಿಸುತ್ತದೆ; ಈ ಪದ ಅಕಾಲಿಕ, ಪೂರ್ಣಾವಧಿಯ ಶಿಶುಗಳಿಗೆ ಅನ್ವಯಿಸುತ್ತದೆ; ಜನನಕ್ಕೆ ಮೊದಲು, ಭ್ರೂಣ ಪದವನ್ನು ಬಳಸಲಾಗುತ್ತದೆ. ಶಿಶು ಪದವನ್ನು ಸಾಮಾನ್ಯವಾಗಿ ಒಂದು ತಿಂಗಳು ಮತ್ತು ಒಂದು ವರ್ಷ ವಯಸ್ಸಿನ ನಡುವಿನ ಎಳೆ ಮಕ್ಕಳಿಗೆ ಅನ್ವಯಿಸಲಾಗುತ್ತದೆ; ಆದರೆ, ವ್ಯಾಖ್ಯಾನಗಳು ಬದಲಾಗಬಹುದು ಮತ್ತು ಎರಡು ವರ್ಷ ವಯಸ್ಸು ವರೆಗಿನ ಮಕ್ಕಳನ್ನು ಒಳಗೊಳ್ಳಬಹುದು. ಒಂದು ಮಗು ನಡೆಯುವುದನ್ನು ಕಲಿತಾಗ, "ದಟ್ಟಗಾಲಿಡುವ ಮಗು" ಎಂಬ ಪದವನ್ನು ಬಳಸಬಹುದು.

ಶಿಶುಗಳು ಮೂಲಭೂತ ಸಹಜ ಸಂವಹನದ ಒಂದು ರೂಪವಾಗಿ ಅಳುತ್ತವೆ.[] ಅಳುತ್ತಿರುವ ಶಿಶುವು ಹಸಿವು, ಅಸೌಖ್ಯ, ಅತಿ ಉತ್ತೇಜನ, ಬೇಸರ, ಏನಾದರೂ ಬೇಕಾಗಿರುವುದು, ಅಥವಾ ಒಂಟಿತನದಂತಹ ವಿವಿಧ ಅನಿಸಿಕೆಗಳನ್ನು ವ್ಯಕ್ತಪಡಿಸಲು ಪ್ರಯತ್ನಿಸುತ್ತಿರಬಹುದು.

ಎಲ್ಲ ಪ್ರಮುಖ ಶಿಶು ಆರೋಗ್ಯ ಸಂಸ್ಥೆಗಳು ಸ್ತನಪಾನವನ್ನು ಆಹಾರ ನೀಡಿಕೆಯ ಅತ್ಯುತ್ತಮ ವಿಧಾನವೆಂದು ಶಿಫಾರಸು ಮಾಡುತ್ತವೆ. ಸ್ತನಪಾನ ಸಾಧ್ಯವಿಲ್ಲದಿದ್ದರೆ ಅಥವಾ ಬಯಸದಿದ್ದರೆ, ಬಾಟಲಿಯಿಂದ ಸ್ತನದ ಹಾಲು ಅಥವಾ ಶಿಶು ಸೂತ್ರವನ್ನು ಕುಡಿಸಲಾಗುತ್ತದೆ. ಶಿಶುಗಳು ಹೀರುವ ಪ್ರತಿವರ್ತನದೊಂದಿಗೆ ಹುಟ್ಟುತ್ತವೆ, ಇದರಿಂದ ಅವು ಸ್ತನಗಳ ತೊಟ್ಟುಗಳಿಂದ ಅಥವಾ ಬಾಟಲಿಯ ತೊಟ್ಟಿನಿಂದ ಹಾಲನ್ನು ಹೊರತೆಗೆಯಬಲ್ಲವು. ಕೆಲವೊಮ್ಮೆ ಶಿಶುವಿಗೆ ಆಹಾರ ನೀಡಲು ದಾದಿಯನ್ನು ನೇಮಕ ಮಾಡಲಾಗುತ್ತದೆ, ಆದರೆ ಇದು ವಿರಳವಾಗಿದೆ, ವಿಶೇಷವಾಗಿ ಅಭಿವೃದ್ಧಿಹೊಂದಿದ ದೇಶಗಳಲ್ಲಿ.

ಮುಂಚಿನ ವಯಸ್ಸಿನಲ್ಲಿ ಸಾಕಷ್ಟಿರುವ ಆಹಾರ ಸೇವನೆ ಶಿಶುವಿನ ಬೆಳವಣಿಗೆಗೆ ಮುಖ್ಯವಾಗಿದೆ. ಜನನದಿಂದ ನಾಲ್ಕು ತಿಂಗಳವರೆಗೆ, ಶಿಶುಗಳು ಸ್ತನದ ಹಾಲನ್ನು ಅಥವಾ ಮಾರ್ಪಡಿಸದ ಹಾಲಿನ ಬದಲಿಯನ್ನು ಸೇವಿಸಬೇಕು. ಶಿಶುವಿನ ಆಹಾರ ಪಕ್ವವಾದಂತೆ, ಬೆರಳಾಹಾರಗಳನ್ನು, ಜೊತೆಗೆ ಹಣ್ಣು, ತರಕಾರಿಗಳು ಮತ್ತು ಸಣ್ಣ ಪ್ರಮಾಣದಲ್ಲಿ ಮಾಂಸವನ್ನು ಪರಿಚಯಿಸಬಹುದು.

ಉಲ್ಲೇಖಗಳು

[ಬದಲಾಯಿಸಿ]
  1. Chicot, Dr Rebecca (2015-12-03). The Calm and Happy Toddler: Gentle Solutions to Tantrums, Night Waking, Potty Training and More (in ಇಂಗ್ಲಿಷ್). Random House. ISBN 9781473527591.


"https://kn.wikipedia.org/w/index.php?title=ಶಿಶು&oldid=1240149" ಇಂದ ಪಡೆಯಲ್ಪಟ್ಟಿದೆ