ಶ್ರೀಗೌರಿ (ಕನ್ನಡ ಧಾರಾವಾಹಿ)
ಶ್ರೀಗೌರಿ ಪ್ರಸ್ತುತ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಈ ಕಾರ್ಯಕ್ರಮವು 29 ಜನವರಿ 2024ರಿಂದ ಆರಂಭವಾದ ಈ ಧಾರಾವಾಹಿಯು ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8:30ಕ್ಕೆ ಪ್ರಸಾರವಾಗುತ್ತಿತ್ತು[೧] [೨] . ಧಾರಾವಾಹಿ ತನ್ನ ಕೊನೆಯ ಸಂಚಿಕೆಯನ್ನು 22 ಡಿಸೆಂಬರ್ 2024 ರಂದು ಪ್ರಸಾರ ಮಾಡಿತು [೩] . ಕಾರ್ತಿಕ್ ಅತ್ತಾವರ, ಸುನೀಲ್ ಪುರಾಣಿಕ್ ಮತ್ತು ಅಮೂಲ್ಯ ಗೌಡ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದರು.
ಶ್ರೀಗೌರಿ (ಕನ್ನಡ ಧಾರಾವಾಹಿ) | |
---|---|
ದೇಶ | ಭಾರತ |
ಭಾಷೆ(ಗಳು) | ಕನ್ನಡ |
ಒಟ್ಟು ಸರಣಿಗಳು | 1 |
ಒಟ್ಟು ಸಂಚಿಕೆಗಳು | 248 |
ನಿರ್ಮಾಣ | |
ಸ್ಥಳ(ಗಳು) | ಕರ್ನಾಟಕ |
ಸಮಯ | 20 - 22 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ರಾಪಿಡ್ ಲೈವ್ ಎಂಟರ್‌ಟೈನ್‌ಮೆಂಟ್ |
ಪ್ರಸಾರಣೆ | |
ಮೂಲ ವಾಹಿನಿ | ಕಲರ್ಸ್ ಕನ್ನಡ |
ಮೂಲ ಪ್ರಸಾರಣಾ ಸಮಯ | 29 ಜನವರಿ 2024 – 22 ಡಿಸೆಂಬರ್ 2024 |
ಕಾಲಕ್ರಮ | |
ನಂತರ | ನೂರು ಜನ್ಮಕೂ |
ಕಥಾ ಹಂದರ
[ಬದಲಾಯಿಸಿ]ಕರಾವಳಿ ತೀರದ ಊರೊಂದರಲ್ಲಿ ನಡೆಯುವ ಕಥೆ ಇದಾಗಿದೆ. ಎರಡು ವಿಭಿನ್ನ ಜಗತ್ತುಗಳಿಂದ ಬರುವ ಅಪ್ಪು ಮಧ್ಯಮ ವರ್ಗದ ಹುಡುಗನಾಗಿದ್ದಾನೆ. ಮತ್ತು ಶ್ರೀಗೌರಿ ಶ್ರೀಮಂತರ ಮನೆಗೆ ಸೇರಿದವಳಾಗಿರುತ್ತಾಳೆ. ಇಬ್ಬರ ಭೇಟಿಯ ನಂತರ ಇಲ್ಲಿನ ಘಟನಾವಳಿಗಳೆಲ್ಲ ಪ್ರೀತಿ ಮತ್ತು ತ್ಯಾಗಗಳಿಂದ ತುಂಬಿಹೋಗಿರುತ್ತದೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಶ್ರೀಗೌರಿಯ ತಂದೆಗೆ ಅದನ್ನು ಮುಚ್ಚಿಟ್ಟು ಮಗಳಿಗೊಂದು ಮದುವೆ ಮಾಡಿಸುವ ಆಸೆ ಇರುತ್ತದೆ[೪]. ಊರಿಗೆ ಉಪಕಾರಿ ಮನೆಗೆ ಮಾರಿಯಂತಿರುವ ಅದೇ ಊರಿನ ಹುಡುಗ ಅಪ್ಪುಗೆ ತಾಯಿಯೇ ಜೀವನವಾಗಿರುತ್ತದೆ.
ಪಾತ್ರವರ್ಗ
[ಬದಲಾಯಿಸಿ]ಮುಖ್ಯ ಪಾತ್ರಗಳು
[ಬದಲಾಯಿಸಿ]- ಅಮೂಲ್ಯಾ ಗೌಡ: ಕಥಾ ನಾಯಕಿ ಶ್ರೀಗೌರಿ ಪಾತ್ರದಲ್ಲಿ
- ಕಾರ್ತಿಕ್ ಅತ್ತಾವರ್: ಕಥಾ ನಾಯಕ ಅಪ್ಪು ಆಲಿಯಾಸ್ ಶಂಕರನ ಪಾತ್ರದಲ್ಲಿ
ಪೋಷಕ ಪಾತ್ರಗಳು
[ಬದಲಾಯಿಸಿ]- ನಂದಿನಿ ಗೌಡ: ಮಂಗಳಮ್ಮನ ಪಾತ್ರದಲ್ಲಿ.
- ಸುನೀಲ್ ಪುರಾಣಿಕ್: ರಘುರಾಮ್ ಹೆಗಡೆ ಪಾತ್ರದಲ್ಲಿ.
- ರಾಜೇಶ್ ಧ್ರುವ[೫]: ಶರಣನ ಪಾತ್ರದಲ್ಲಿ
- ಇಶಿತಾ ವರ್ಷ[೬]: ಸೋನಿಕಾ ಪಾತ್ರದಲ್ಲಿ.
- ಆರೋಹಿ ನೈನಾ:ಅರ್ಚನಾ ಪಾತ್ರದಲ್ಲಿ
- ಸಚಿನ್ ತಿಮ್ಮಯ್ಯ: ಮಾಣಿಕ್ಯ ಪಾತ್ರದಲ್ಲಿ
- ಗಾಯತ್ರಿ ಪ್ರಭಾಕರ್: ಭಾರತಿ ಪಾತ್ರದಲ್ಲಿ
ಉಲ್ಲೇಖಗಳು
[ಬದಲಾಯಿಸಿ]- ↑ "ವಿಭಿನ್ನ ಜಗತ್ತುಗಳಿಂದ ಬಂದ ಇಬ್ಬರ ಬದುಕು ಕರಾವಳಿಯಲ್ಲಿ ಸಂಧಿಸಿದ್ರೆ ಏನಾಗುವುದೋ ಅದೇ 'ಶ್ರೀ ಗೌರಿ'". ವಿಜಯ ಕರ್ನಾಟಕ. Retrieved 24 ಜನವರಿ 2024.
- ↑ "ಅಪ್ಪು ಕಾಲಿಗೆ ಬಿದ್ದು ಬೇಡಿಕೊಳ್ತಿದ್ದಾಳೆ ಗೌರಿ; ಮನೆಗೆ ಹೋಗದೇ ಇರಲು ಕಾರಣ ಏನು?". News18 Kannada. Retrieved 12 ಏಪ್ರಿಲ್ 2024.
- ↑ "ಹಲವು ಸಸ್ಪೆನ್ಸ್ ಹಾಗೇ ಬಿಟ್ಟು ಏಕಾಏಕಿ 'ಶ್ರೀಗೌರಿ' ಸೀರಿಯಲ್ ಅಂತ್ಯ! ಯಾಕ್ಹೀಗೆ?". ವಿಜಯ ಕರ್ನಾಟಕ. Retrieved 23 Dec 2024.
- ↑ "ಮಧ್ಯರಾತ್ರಿ ದಿಢೀರ್ ಅಂತ ಹೊರಟ ಗೌರಿ: ಪ್ರಾಣಕ್ಕೆ ಆಪತ್ತು?". ವಿಜಯ ಕರ್ನಾಟಕ. Retrieved 30 Jan 2024.
- ↑ "ಶ್ರೀಗೌರಿ' ಧಾರಾವಾಹಿಯ ಶರಣ ಈಗ 'ಪೀಟರ್'; ಹೊಸ ನ್ಯೂಸ್ ಹಂಚಿಕೊಂಡ ರಾಜೇಶ್ ಧ್ರುವ". ವಿಜಯ ಕರ್ನಾಟಕ. Retrieved 13 Sep 2024.
- ↑ "ಅಪ್ಪು-ಗೌರಿ ಮದುವೆಯಾದ್ಮೇಲೆ ಪ್ರೀತಿ ಕೊಂದ ಸೋನಿಕಾ ದಿಢೀರ್ ಪ್ರತ್ಯಕ್ಷ!". ವಿಜಯ ಕರ್ನಾಟಕ. Retrieved 23 Sep 2024.
ಬಾಹ್ಯಕೊಂಡಿಗಳು
[ಬದಲಾಯಿಸಿ]- ಶ್ರೀಗೌರಿ ಯನ್ನು @ ಜಿಯೋ ಸಿನಿಮಾದಲ್ಲಿ ವೀಕ್ಷಣೆ ಮಾಡಿ