ವಿಷಯಕ್ಕೆ ಹೋಗು

ಶ್ರೀರಂಗಂ ಶ್ರೀನಿವಾಸರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Srisri.jpg
Srirangam srinivasarao, a telugu poet and lyrist


ಶ್ರೀರಂಗಂ ಶ್ರೀನಿವಾಸರಾವ್
Nationalityಭಾರತೀಯರು
Other namesಶ್ರೀಶ್ರೀ
Occupationಚಲನಚಿತ್ರ ಹಾಡುಗಳ ರಚೆಯಿತರು
Spouse(s)ವೆಂಕಟ ರಮಣಮ್ಮ, ಸರೋಜ
Childrenಮಾಲಾ ಶ್ರೀನಿವಾಸರಾವ್, ಮಂಜುಲ ಶ್ರೀನಿವಾಸರಾವ್, ವೆಂಕಟ್ ಶ್ರೀನಿವಾಸರಾವ್, ಮಂಗಲ ಶ್ರೀನಿವಾಸರಾವ್
Parents
  • ಪೂಡಿಪೆದ್ದ ವೆಂಕಟರಮಣಯ್ಯ (father)
  • ಅಪ್ಪಲಕೊಂಡ (mother)

ಇಪ್ಪತ್ತನೇ ಶತಮಾನದಲ್ಲಿ ತೆಲುಗು ಸಾಹಿತ್ಯವನ್ನು ಆಳಿದ ಕವಿಗಳಲ್ಲಿ ಮಹಾ ಕವಿ ಶ್ರೀರಂಗಂ ಶ್ರೀನಿವಾಸರಾವ್ ರವರು ಒಬ್ಬರು. ಇವರ ಕಾವ್ಯನಾಮ ಶ್ರೀಶ್ರೀ. ಇವರು ಸಾಂಪ್ರದಾಯ ಕಾವ್ಯಗಳನ್ನು ಧಿಕ್ಕರಿಸಿ ಅಭ್ಯುದಯ ರಚಯಿತರ ಸಂಘದ ಅಧ್ಯಕ್ಷರಾಗಿ ಹಾಗೂ ಸಿನಿಮಾ ಹಾಡುಗಳ ರಚಯಿತರಾಗಿ ಪ್ರಸಿದ್ಧರಾಗಿದ್ದಾರೆ. ಇವರಿಗೆ ಹೆಸರು ನೀಡಿದ ಕಾವ್ಯ-"ಮಹಾಪ್ರಸ್ಥಾನ"'[].

ಪರಿಚಯ

[ಬದಲಾಯಿಸಿ]

ಶ್ರೀಶ್ರೀಯವರು ಪೂಡಿಪೆದ್ದ ವೆಂಕಟರಮಣಯ್ಯ, ಅಪ್ಪಲಕೊಂಡ ದಂಪತಿಗಳ ಮಗನಾಗಿ ೧೯೧೦ರಲ್ಲಿ ಜನಿಸಿದರು. ಇವರ ಜನನ ದಿನಾಂಕ ಬಹಳ ಅಸ್ಪಷ್ಟತೆಯನ್ನು ಹೊಂದಿದೆ. ೧ ಫೆಬ್ರವರಿ ೧೯೧೦ರಲ್ಲಿ ಹುಟ್ಟಿದರೆಂದು ಶ್ರೀಶ್ರೀಯವರು ನಂಬಿದ್ದರು, ಸಂಶೋಧನೆಯನ್ನು ಮಾಡಿದ ಕೆಲವರು ೧೯೧೦ ಏಪ್ರಿಲ್ ೧೫ ರಂದು ಜನಿಸಿದರು ಏಂದು ಹೇಳುವರು. ಆದರೆ ವಿಶಾಖಪಟ್ಟಣ ನಗರ ಪಾಲಿಕೆಯವರು ಏಪ್ರಿಲ್ ೩೦, ೧೯೧೦ ಎಂದು ತೀರ್ಮಾನಿಸಿದ್ದಾರೆ. ಶ್ರೀರಂಗಂ ಸೂರ್ಯನಾರಾಯಣರವರಿಗೆ ದತ್ತು ಪುತ್ರನಾದ್ದರಿಂದ ಇವರ ಮನೆ ಹೆಸರು "ಶ್ರೀರಂಗಂ" ಎಂದು ಬದಲಾಯಿತು.

ವಿದ್ಯಾಭ್ಯಾಸ

[ಬದಲಾಯಿಸಿ]

ಶ್ರೀಶ್ರೀಯವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ವಿಶಾಖಪಟ್ಟಣದಲ್ಲಿ ಮಾಡಿದರು. ೧೯೨೫ರಲ್ಲಿ ಎಸ್.ಎಸ್.ಎಲ್.ಸಿ ತೇರ್ಗಡೆಯಾದರು. ಅದೇ ವರ್ಷದಲ್ಲಿ ಇವರು ವೆಂಟರಮಣಮ್ಮರನ್ನು ಮದುವೆಯಾದರು. ೧೯೩೧ರಲ್ಲಿ ಮದ್ರಾಸು ವಿಶ್ವವಿದ್ಯಾಲಯದಿಂದ ಜೀವಶಾಸ್ತ್ರದಲ್ಲಿ ಬಿ.ಎ.ಪದವಿ ಪಡೆದರು.

ವೃತ್ತಿ

[ಬದಲಾಯಿಸಿ]

೧೯೩೫ರಲ್ಲಿ ವಿಶಾಖಪಟ್ಟಣ ನಗರದ ಎಂ.ವಿ.ಎಸ್ ಕಾಲೇಜಿನಲ್ಲಿ ಪ್ರದರ್ಶಕರಾಗಿ ಸೇರಿದರು. ಇದಲ್ಲದೆ ಕೆಲಕಾಲ ಆಕಾಶವಾಣಿಯಲ್ಲಿ, ಮಿಲಿಟರಿಯಲ್ಲಿ, ಆಂಧ್ರವಾಣಿ ಹಾಗೂ ಹೈದರಾಬಾದ್ ನಿಜಾಮ್ ರವರ ಬಳಿ ಕೆಲಸಮಾಡಿದರು. ೧೯೩೩ ರಿಂದ ೧೯೪೦ರವರೆಗೆ ಅವರು ಬರೆದಿರುವ ಮಹಾಪ್ರಸ್ಥಾನ, ಜಗನ್ನಾಥರಥ ಚಕ್ರಗಳು ಮತ್ತು ಇತರೆ ಕವಿತೆಗಳು ಸಂಕಲನೆ ಮಾಡಿ "ಮಹಾಪ್ರಸ್ಥಾನಂ" ಎಂಬ ಪುಸ್ತಕವನ್ನು ಪ್ರಕಟಿಸಿದರು. ಆದ್ದರಿಂದ ತೆಲುಗು ಸಾಹಿತ್ಯಕ್ಕೆ ಒಂದು ಅಮೂಲ್ಯ ಕಾಣಿಕೆಯನ್ನು ನೀಡಿದರು. ಸಂಭಾಷಣೆಗಳನ್ನು ಬರೆದರು.

ಕುಟುಂಬ

[ಬದಲಾಯಿಸಿ]

ಇವರಿಗೆ ಮಕ್ಕಳಿಲ್ಲದ ಕಾರಣದಿಂದ ೧೯೪೯ರಲ್ಲಿ ಒಬ್ಬ ಹೆಣ್ಣು ಮಗಳನ್ನು ದತ್ತು ತೆಗೆದುಕೊಂಡರು. ೧೯೫೬ರಲ್ಲಿ ಸರೋಜರನ್ನು ಎರಡನೆಯ ಮದುವೆಯಾದರು. ಇವರಿಬ್ಬರಿಗೆ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗು.

ರಾಜಕೀಯ ಜೀವನ

[ಬದಲಾಯಿಸಿ]

೧೯೫೫ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಕಮ್ಯೂನಿಸ್ಟ್ ಪಾರ್ಟಿಯ ಪರವಾಗಿ ಬಹಳ ಚುರುಕಾಗಿ ಪ್ರಚಾರವನ್ನು ಮಾಡಿದರು. ಹನುರ್ಮಾ ಜಂಕ್ಷನ್ನಿನಲ್ಲಿ ನಡೆಯುತ್ತಿದ್ದ ಪ್ರಚಾರ ಸಭೆಯಲ್ಲಿ ಅವರ ಆರೋಗ್ಯ ಕೆಟ್ಟುಹೋದ್ದರಿಂದ ಕೆಲವು ತಿಂಗಳು ಆಸ್ಪತ್ರೆಯಲ್ಲಿ ಸೇರಿಸಬೇಕಾಯಿತು.೧೯೬೯ರಲ್ಲಿ ಪ್ರತ್ಯೇಕ ತೆಲಂಗಾಣ ಉದ್ಯಮ ತೀವ್ರವಾಗಿರುವ ಸಮಯದಲ್ಲಿ ಇವರು ವಾವಿಲಾಲ ಗೋಪಾಲಕೃಷ್ಣಯ್ಯ[]ರೊಡನೆ ಸೇರಿ ಸಮೈಕ್ಯವಾದವನ್ನು ತಿಳಿಸುತ್ತಾ ಪ್ರದರ್ಶನೆ ಮಾಡಿದರು. ಉದ್ಯಮಕಾರರು ಈ ಪ್ರದರ್ಶನಕ್ಕೆ ಅಡ್ಡುಗೋಡೆಗಳನ್ನು ನಿರ್ಮಿಸಿದರು, ಅವುಗಳನ್ನು ಲೆಕ್ಕ ಮಾಡದೆ ತಮ್ಮ ಪ್ರದರ್ಶನೆಯನ್ನು ಮುಂದುವರೆಸಿದರು.

ಪ್ರಶಸ್ತಿಗಳು

[ಬದಲಾಯಿಸಿ]

ಇವರು ವಿವಿಧ ದೇಶಗಳನ್ನು ಅನೇಕ ಬಾರಿ ಭೇಟಿ ನೀಡಿದರು. ಅನೇಕ ಪ್ರಶಸ್ತಿಗಳನ್ನು ಪಡೆದರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ರಾಜಾಲಕ್ಷ್ಮಿ ಫೌಂಡೆಷನ್ ಅವಾರ್ಡ್, ನಂದಿ ಪ್ರಶಸ್ತಿ ಹಾಗೂ ಮುಂತಾದ ಪ್ರಶಸ್ತಿಗಳನ್ನು ಹೀಗೆಯೆ ಪಡೆದರು. ಇದಲ್ಲದೆ "ಅಭ್ಯುದಯ ರಚೆಯಿತರ ಸಂಘ"ಕ್ಕೆ ಅಧ್ಯಕ್ಷರಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ೧೯೭೦ರಲ್ಲಿ ಅವರಿಗೆ ಶಶ್ಟಿಪೂರ್ಥಿ ನಡೆಯಿತು. ಆ ಸಂದರ್ಭದಲ್ಲಿ "ಕ್ರಾಂತಿಕಾರಿ ಬರಹಗಾರರ ಸಂಘ"ದ ಅಧ್ಯಕ್ಷತೆಯನ್ನು ಸ್ವೀಕರಿಸಿದರು.

೧೯೮೩ ಜೂನ್ ೧೫ರಂದು ಕ್ಯಾನ್ಸರ್ ರೋಗದಿಂದ ಮೃತಪಟ್ಟರು. ವಿಶಾಖಪಟ್ಟಣದ ಬೀಚ್ ರೋಡಿನಲ್ಲಿ ಶ್ರೀಶ್ರೀಯವರ ವಿಗ್ರಹವನ್ನು ಸ್ಥಾಪನೆಮಾಡಲಾಗಿದೆ.

ಸಾಹಿತ್ಯ ವ್ಯಾಸಾಂಗ

[ಬದಲಾಯಿಸಿ]

ಶ್ರೀ ಶ್ರೀಯವರು ತಮ್ಮ ಬಾಲ್ಯದಲ್ಲೇ ಬರವಣಿಗೆಯನ್ನು ಆರಂಭಿಸಿದರು. ೧೮ನೇ ವಯಸ್ಸಿನಲ್ಲಿ "ಪ್ರಭಾವ" ಎಂಬ ಕಾವ್ಯ ಸಂಪುಟವನ್ನು ಪ್ರಕಟಿಸಿದರು. ಈ ಕೃತಿಯನ್ನು ಸಾಂಪ್ರದಾಯಿಕ ಗ್ರಂಥ ಶೈಲಿಯಲ್ಲಿ ರಚಿಸಿದ್ದಾರೆ. ಈ ಕೃತಿಯ ನಂತರ ಅವರು ಸಾಂಪ್ರದಾಯಿಕ ಗ್ರಂಥ ಶೈಲಿಯನ್ನು ಹಾಗೂ ಛಂದಸ್ಸು ಮುಂತಾದವುಗಳನ್ನು ತೊರೆದು ಎಲ್ಲರೂ ಬಳಸುವ ಆಡು ಭಾಷೆಯಲ್ಲಿ ಕೃತಿಗಳನ್ನು ರಚಿಸಲು ಆರಂಭಿಸಿದರು. ಈ ರೀತಿಯ ಶೈಲಿಯನ್ನು ಕಲಿತಿರುವುದು ಗುರುಜಾಡರಿಂದ ಎಂದು ಹೇಳುತ್ತಾರೆ. ೧೯೫೦ರಲ್ಲಿ "ಮಹಾಪ್ರಸ್ಥಾನಂ" ಕಾವ್ಯವು ಮೊದಲ ಬಾರಿಗೆ ಪ್ರಕಟಿತವಾಯಿತು. ಆ ಅಖಂಡ ಕಾವ್ಯದಲ್ಲಿ ಮಹಾಪ್ರಸ್ಥಾನಂ, ಜಗನ್ನಾಥ ರಥಚಕ್ರಾಲು, ಬಾಟಸಾರಿ, ಭಿಕ್ಷುವರ್ಷೀಯಸಿ ಮುಂತಾದ ಕಾವ್ಯಗಳಿವೆ. ಆಧುನಿಕ ತೆಲುಗು ಸಾಹಿತ್ಯದಲ್ಲಿ ಈ ಕಾವ್ಯವು ಅತಿ ದೊಡ್ಡ ಸ್ಥಾನದಲ್ಲಿ ನಿಂತು ಶ್ರೀಶ್ರೀಯವರಿಗೆ ಮಹಾಕವಿ ಎಂಬ ಬಿರುದು ನೀಡಿತು. ಅನಂತರ ಮಹಾಪ್ರಸ್ಥಾನಂ, ಖಡ್ಗಸೃಷ್ಟಿ ಎಂಬ ಕಾವ್ಯ ಸಂಕಲನಗಳು, ಚರಮರಾತ್ರಿ ಎಂಬ ಕಥಾಸಂಕಲನ ಹಾಗೂ ರೇಡಿಯೋ ನಾಟಕಗಳನ್ನು ರಚಿಸಿದರು. ೧೯೮೧ರಲ್ಲಿ ಮಹಾಪ್ರಸ್ಥಾನಂ ಕಾವ್ಯವನ್ನು ಲಂಡನ್ನಿನಲ್ಲಿ ಪ್ರಕಟಿಸಿದರು. ಶ್ರೀಶ್ರೀಯವರು ತೆಲುಗು ಚಲನಚಿತ್ರಗಳಿಗಾಗಿ ಹಲವಾರು ಹಾಡುಗಳನ್ನು ಬರೆದ್ದಿದ್ದಾರೆ. ಅಲ್ಲೂರಿ ಸೀತಾರಾಮರಾಜು[] ಎನ್ನುವ ಚಿತ್ರದಲ್ಲಿ ಅವರು ರಚಿಸಿದ "ತೆಲುಗು ವೀರ ಲೇವರ...." ಎಂಬ ಹಾಡು ಅವರ ರಚನಾಸಾಮರ್ಥ್ಯವನ್ನು ಸಾರಿ ಹೇಳುತ್ತದೆ. ಅವರ ಸಂಗಾತಿ ಸರೋಜರೊಂದಿಗೆ ಕೂಡಿ ಅನೇಕ ಚಲನಚಿತ್ರಗಳಿಗೆ ಮಾತುಗಳನ್ನು ಬರೆದ್ದಿದ್ದಾರೆ.

ಶ್ರೀಶ್ರೀಯವರ ಬರಹಗಳ ಪಟ್ಟಿ

[ಬದಲಾಯಿಸಿ]
  1. ಪ್ರಭಾವ--೧೯೨೮
  2. ವರಂ ವರಂ--೧೯೪೬
  3. ಸಂಪಂಗಿ ತೋಟ--೧೯೪೭
  4. ಮಹಾಪ್ರಸ್ಥಾನಂ--೧೯೫೦
  5. ಮಹಾಪ್ರಸ್ಥಾನಂ--೧೯೫೨-೧೯೮೪
  6. ಮಹಾಪ್ರಸ್ಥಾನಂ--೧೯೮೧(ಲಂಡನ್)
  7. ಅಮ್ಮ--೧೯೫೨-೧೯೬೭
  8. ಮೇಮೇ--೧೯೫೪
  9. ಮರೋ ಪ್ರಪಂಚಂ--೧೯೫೪
  10. ರೇಡಿಯೋ ನಾಟಕಗಳು--೧೯೫೬
  11. ತ್ರೀ ಚೀರ್ಸ್ ಫರ್ ಮಾನ್--೧೯೫೬
  12. ಚರಮ ರಾತ್ರಿ--೧೯೫೭
  13. ಮಾನವುಡಿ ಪಾಟ್ಲು--೧೯೫೮
  14. ಸೌದಾಮಿನಿ--೧೯೫೮
  15. ಗುರುಜಾಡ--೧೯೫೯
  16. ಮೂಡು ಯಾಭೈಲು--೧೯೬೪
  17. ೧+೧=೧--೧೯೬೪-೧೯೮೭
  18. ಖ‍ಡ್ಗಸೃಷ್ಟಿ--೧೯೬೬-೧೯೮೪
  19. ವ್ಯುಲು,ರಿವ್ಯುಲು--೧೯೬೯
  20. ಶ್ರೀಶ್ರೀ ಸಾಹಿತ್ಯಾಂ--೧೯೭೦
  21. ಲೆನಿನ್--೧೯೭೧
  22. ಶ್ರೀಶ್ರೀ ಮಿಸೆಲ್ಲೆಂಸಿ--೧೯೭೦
  23. ರೆಕ್ಕ ವಿಪ್ಪಿನ ರೆವಲ್ಯೂಷನ್--೧೯೭೧
  24. ವ್ಯಾಸಕ್ರೇಡಲು--೧೯೮೦
  25. ಮರೋ ಮೂಡು ಯಾಭೈಲು--೧೯೭೪
  26. ಚೀನಾಯಾನಂ--೧೯೮೦
  27. ಮರೋಪ್ರಸ್ಥಾನಂ--೧೯೮೦
  28. ಸಿಪ್ರಾಲಿ--೧೯೮೧
  29. ಪಾಡವೋಯಿ ಭಾರತೀಯುಡಾ(ಸಿನಿಮಾ ಪಾಟಲು)--೧೯೮೩
  30. ಶ್ರೀಶ್ರೀ ವ್ಯಾಸಾಲು--೧೯೮೬
  31. ನ್ಯೂ ಫ್ರಂಟಿಯ‌ರ್ಸ್--೧೯೮೬
  32. ಅನಂತಂ(ಆತ್ಮಕಥೆ)--೧೯೮೬
  33. ಪ್ರಜ--೧೯೯೦
  34. ತೆಲುಗುವೀರ ಲೇವರಾ(ಸಿನಿಮಾ ಪಾಟಲು)--೧೯೯೬
  35. ವಿಶಾಲಾಂಧ್ರಲೋ ಪ್ರಜಾರಾಜ್ಯಂ--೧೯೯೯
  36. ಉಕ್ಕು ಪಿಡಿಕಲು,ಅಗ್ನಿಜ್ವಾಲ--೨೦೦೧
  37. ಖಬರ್ದಾರ್ ಸಂಘ ಶತ್ರುವು ಲಾರಾ--೨೦೦೧

ಪ್ರಮುಖ ಸಿನಿಮಾ ಹಾಡುಗಳು

[ಬದಲಾಯಿಸಿ]
ವರ್ಷ ಚಲನಚಿತ್ರ ಹಾಡು
೧೯೫೬ ಇಲವೇಲ್ಪು ಚಲ್ಲನಿ ರಾಜಾ....ಓ ಚಂದಮಾಮಾ
೧೯೫೮ ಮಾಂಗಲ್ಯಬಲಂ ವಾಡಿನ ಪೂಲೇ ವಿಕಸಿಂಚೆನೇ
೧೯೫೯ ಜಯಬೇರಿ ನಂದುನಿ ಚರಿತಮು ವಿನುಮಾ
೧೯೫೯ ಸಭಾಶ್ ರಾಮುಡು ಜಯಮ್ಮು ನಿಶ್ಚಯಮ್ಮುರಾ
೧೯೬೧ ಭಾರ್ಯ ಭರ್ತಲು ಜೊರುಗಾ ಹುಶಾರುಗಾ
೧೯೬೧ ಇದ್ದರು ಮಿತ್ರುಲು ಪಡವೇಲ ರಾಧಿಕ...
೧೯೬೧ ವಾಗ್ದಾನಂ ಶ್ರೀ ನಗಜ ತನಯಂ
೧೯೬೧ ವೆಲುಗು ನೀಡಲು ಓ ರಂಗಯ್ಯೋ ಪೂಲ ರಂಗಯ್ಯೋ
೧೯೬೨ ಆರಾಧನ ನಾ ಹೃದಯಂಲೊ ನಿದುರಿಂಚೆ ಚಲೀ
೧೯೬೩ ನರ್ತನಶಾಲಾ ಎವರಿ ಕೋಸಂ ಈ ಮಂದಹಾಸಮ್
೧೯೬೩ ಪುನರ್ಜನ್ಮ ಎವರಿವೋ..ನೀವೆವರಿವೋ
೧೯೬೩ ಪರುವು ಪ್ರತಿಷ್ಠ ಆ ಮಬ್ಬು ತೆರಲ ಲೋನ ದಾಗುಂದಿ
೧೯೬೪ ಡಾ.ಚಕ್ರವರ್ತಿ ಮನುಸುನ ಮನಸೈ
೧೯೬೪ ಗುಡಿ ಗಂಟಲು ನೀಲೋನ ನನ್ನೆ ನಿಲಿಪೇವು ನೇಡೆ
೧೯೬೪ ಬೊಬ್ಬಿಲಿ ಯುದ್ಧಂ ಮುರಿಪಿಂಚೆ ಅಂದಾಲೆ
೧೯೬೪ ಮಂಚಿ ಮನಿಷಿ ರಾನನುಕುನ್ನಾವೆಮೋ
೧೯೬೪ ಸಭಾಷ್ ಸೂರಿ ದೆವುಡಿಕಿ ಎಮಿ
೧೯೬೫ ಪ್ರೇಮಿಂಚಿ ಚೂಡು ದೊರಿಕಾರು ದೊರಗಾರು
೧೯೬೬ ಆತ್ಮ ಗೌರವಂ ವಲಪುಲು ವಿರಿಸಿನ ಪುವ್ವುಲೇ
೧೯೬೯ ಆತ್ಮೀಯುಲು ಕಳ್ಳಲ್ಲೋ ಪೆಳ್ಳಿ ಪಂದಿರಿ
೧೯೬೯ ಮನುಶುಲು ಮರಳಿ ತುರುಪು ಸಿಂಧುರಪು
೧೯೭೨ ಕಾಲಮ್ ಮಾರಿಂದಿ ಮಾರ ಲೆದುಲೇ ಈ ಕಾಲಮ್
೧೯೭೩ ದೇವುಡು ಚೆಸಿನ ಮನುಷುಲು ದೇವುಡು ಚೆಸಿನ ಮನುಷುಲಾರಾ
೧೯೭೩ ದೇಶೋದ್ದಾರಕುಲು ಮಾದಿ ಮಾದಿ... ಸುಚಿ ಸುಚಿ
೧೯೭೪ ಅಲ್ಲೂರಿ ಸೀತಾರಾಮ ರಾಜು ತೆಲುಗು ವೀರ ಲೆವರಾ
೧೯೭೪ ಭೂಮಿ ಕೊಸಂ ಎವರೋ ವಸ್ತಾರನಿ
೧೯೭೫ ಬಲಿಪೀಟಂ ಕಲಸಿ ಪಾಡುದಾಂ
೧೯೭೫ ದೇವುಡು ಲಾಂಟಿ ಮನಿಷಿ ಕಂಡಲು
೧೯೭೬ ಕೊಲ್ಲೇಟಿ ಕಾಪುರಂ ಇದ್ದರಮೆ
೧೯೭೬ ಪಾಡಿ ಪಂಟಲು ಪನಿ ಚೇಸೆ ರೈತನ್ನ
೧೯೭೬ ರಾಮರಾಜ್ಯಂಲೊ ರಕ್ತಪಾಠಂ ಈವಾಳ ರಾಂದಿ
೧೯೭೭ ಪ್ರೇಮ ಲೇಖಲು ಈ ರೋಜು
೧೯೭೭ ಊರುಮ್ಮಡಿ ಬ್ರತುಕುಲು ಶ್ರಮೈಕ ಜೀವನ ಸೌಂದರ್ಯಾನಿಕಿ ಸಮಾನಮೈನದಿ ಲೇನೆಲೇದೋಯಿ
೧೯೭೭ ಯಮಗೋಲ[] ಸಮರಾನಿಕಿ ನೇಡೆ ಪ್ರಾರಂಭಂ
೧೯೭೮ ಕರುಣಾಮಯುಡು ದೇವುಡು ಲೇಡನಿ ಅನಕುಂಡ
೧೯೭೯ ಗೋರಿಂಟಾಕು[] ಇಲಾಗ ವಚ್ಚಿ
೧೯೭೯ ಕಲಿಯುಗ ಮಹಾಭಾರತಂ ಈ ಸಮರಂ
೧೯೮೦ ಅಮ್ಮಾಯಿಕಿ ಮೊಗುಡು ಮಾಮಕಿ ಯಮುಡು ಚೂಡರ...ತೆಲುಗು ಸೋದರಾ
೧೯೮೦ ಸರ್ದಾರ್ ಪಾಪಾರಾಯುಡು ಬುರ್ರಕಥ
೧೯೮೧ ಆಕಲಿ ರಾಜ್ಯಂ ಓ ಮಹಾತ್ಮ
೧೯೮೨ ಈನಾಡು ರಂಡಿ ಕದಲಿ ರಂಡಿ
೧೯೮೨ ಮಂಚು ಪಲ್ಲಕಿ ಮನಿಷೇ ಮಣಿದೀಪಂ
೧೯೮೨ ವಿಪ್ಲವ ಶಂಖಂ ಮೂಯಿಂಚಿನ ಒಕ ವೀರುನಿ ಕಥಂ, ಕೊಂತಮಂದಿ ಕುರ್ರವಾಳ್ಳು
೧೯೮೩ ನೇಟಿ ಭಾರತಂ ಅರ್ಧ ರಾತ್ರಿ ಸ್ವಾತಂತ್ರ್ಯಂ
೧೯೮೪ ಮಹಾಪ್ರಸ್ತಾನಂ ಮರೋ ಪ್ರಪಂಚಂ ಪಿಲಿಚಿಂದಿ

ವ್ಯಕ್ತಿತ್ವ

[ಬದಲಾಯಿಸಿ]

ಶ್ರೀಶ್ರೀಯವರು ವ್ಯಕ್ತಿತ್ವದಲ್ಲಿ ಎಷ್ಟೋ ವಿರುದ್ಧ ಭಾವನೆಗಳಲು, ವಿಚಿತ್ರ ಸಂಘರ್ಷಣೆಗಳು ಕಾಣಿಸುತ್ತವೆ. ಅವರು ಇರುಮುಖವುಳ್ಳವರು. ವಿಮರ್ಶೆಗಳಿಗೂ ಹಾಗೂ ಚಿಕ್ಕ ಮಕ್ಕಳಂತೆ ಮಾತನಾಡುವುದರಲ್ಲಿ ಇವರು ಪ್ರವೀಣರು. ತತ್ವಗಳ ಬಗ್ಗೆ ಹಾಗೂ ಸಮಕಾಲೀನ ಕವಿಗಳ ಬಗೆಗಿನ ಅಭಿಪ್ರಾಯಗಳನ್ನು ಅತಿ ವೇಗವಾಗಿ ಬದಲಿಸುತ್ತಿದ್ದರು. ಉದೋಗಗಳಲ್ಲಿ ಸ್ಥಿರಗೊಳ್ಳಲಾಗದಿರುವುದು, ಮೊದಲನೆಯ ವಿವಾಹದಲ್ಲಿ ಮಕ್ಕಳಾಗದಿರುವುದು.೫೦ ವರ್ಷದ ವಯಸ್ಸಿನಲ್ಲಿ ಮಕ್ಕಳಾಗುವುದು, ಸಿನಿಮಾಗಳಲ್ಲಿ ಸಂಪಾದನೆ ಮಾಡಿರುವುದೆಲ್ಲಾ ಕಳೆದುಕೊಂಡಿದ್ದು ಮುಂತಾದ ಕಷ್ಟಗಳು ಅವರ ಜೀವನದಲ್ಲಿ ನೆಲಗೊಂಡವು.ಶ್ರೀಶ್ರೀಯವರ ಬಗ್ಗೆ ಜೀವನ ಚರಿತ್ರಾಕಾರನಾದ ಬೂದರಾಜು ರಾಧಾಕೃಷ್ಣರವರು "ಶ್ರೀಶ್ರೀಯವರ ಜೊತೆ ಕೆಲಕಾಲ ಪರಿಚಯವಿರುವವರೂ ಸಹ ಹೇಳುವುದೆಂದರೆ ಶ್ರೀಶ್ರೀಯವರು ವಯಸ್ಸಿನಲ್ಲಿ ದೊಡ್ಡವರಾದರು ಮನಸ್ಸು ಇನ್ನೂ ಚಿಕ್ಕಮಕ್ಕಳ ಹಾಗೆಯೇ ಇರುವುದಾಗಿ, ತುಂಬಾ ಚುರುಕಾದರೂ ಅಮಾಯಕನೆಂದು, ಅಹಂಕಾರಿಯಾದರೂ ತಲೆಬಾಗಿಸುವವನು, ವಿಚಾರಣಶೀಲಿಯಾದರು ತಪ್ಪಿಸಿಕೊಂಡು ಹೋಗುವನೆಂದು, ಆಕರ್ರ್ಷಕನಾದರು ಅಳಿಸುತ್ತಾನೆ"ಎಂದು ಹೇಳಿದ್ದಾರೆ.

ಉಲ್ಲೇಖನಗಳು

[ಬದಲಾಯಿಸಿ]
  1. "ಆರ್ಕೈವ್ ನಕಲು". Archived from the original on 2016-09-07. Retrieved 2016-09-15.
  2. https://en.wikipedia.org/wiki/Vavilala_Gopalakrishnayya
  3. https://en.wikipedia.org/wiki/Alluri_Seetarama_Raju_(film)
  4. https://en.wikipedia.org/wiki/Yamagola
  5. https://en.wikipedia.org/wiki/Gorintaku_(1979_film)