ವಿಷಯಕ್ಕೆ ಹೋಗು

ಸಂತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹಿಂದೂ ಧರ್ಮ, ಜೈನ ಧರ್ಮ, ಮತ್ತು ಬೌದ್ಧ ಧರ್ಮದಲ್ಲಿ, ಸಂತ ಎಂದರೆ "ಆತ್ಮ, ಸತ್ಯ, ವಾಸ್ತವ"ದ ಬಗ್ಗೆ ಅವನ ಅಥವಾ ಅವಳ ಜ್ಞಾನಕ್ಕಾಗಿ ಮತ್ತು ಸತ್ಯದ ಆದರ್ಶವಾಗಿ ಗೌರವದಿಂದ ಕಾಣಲಾದ ಮನುಷ್ಯ. ಸಿಖ್ ಧರ್ಮದಲ್ಲಿ ಈ ಪದವನ್ನು ದೇವರೊಡನೆ ಸಂಯೋಗದ ಮೂಲಕ ಆಧ್ಯಾತ್ಮಿಕ ಜ್ಞಾನೋದಯ ಮತ್ತು ದೈವಿಕ ಜ್ಞಾನ ಹಾಗೂ ಶಕ್ತಿಯನ್ನು ಪಡೆದಿರುವ ಜೀವಿಯನ್ನು ವರ್ಣಿಸಲು ಬಳಸಲಾಗುತ್ತದೆ.[]

ವ್ಯುತ್ಪತ್ತಿ

[ಬದಲಾಯಿಸಿ]

ಸಂತ ಶಬ್ದವು ಸಂಸ್ಕೃತ ಮೂಲ ಸತ್ ಇಂದ ವ್ಯುತ್ಪನ್ನವಾಗಿದೆ. ಇದರರ್ಥ "ಸತ್ಯ, ವಾಸ್ತವ, ಸಾರ" ಎಂದಿರಬಹುದು.

ಈ ಶಬ್ದವನ್ನು ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ:

  • ಇಸ್ಲಾಮಿ ಆಳ್ವಿಕೆಯಡಿ ಹದಿನೈದನೇ ಮತ್ತು ಹದಿನಾರನೇ ಶತಮಾನದ ಭಾರತದಲ್ಲಿ, ಈ ಪದವನ್ನು ಸಾಮಾನ್ಯವಾಗಿ ಭಕ್ತಿ ಚಳುವಳಿಯೊಳಗೆ ದೇವ ದೇವಿಯರ ಕೊಂಡಾಟದಲ್ಲಿ ಭಕ್ತರು ಹಾಗೂ ಸಮುದಾಯಗಳ ನೇತೃತ್ವ ವಹಿಸಿದ ಶಿಕ್ಷಕರು ಮತ್ತು ಕವಿ-ವಿದ್ವಾಂಸರನ್ನು ವರ್ಣಿಸಲು ಬಳಸಲಾಗುತ್ತಿತ್ತು.
  • ಆಧುನಿಕ ಯುಗದಲ್ಲಿ, ಈ ಪದವು ಕೆಲವೊಮ್ಮೆ ಒಂದು ನಿರ್ದಿಷ್ಟ ರೂಪದ ಆಧ್ಯಾತ್ಮಿಕತೆಯನ್ನು ಪ್ರತಿಪಾದಿಸುವ ಯಾವುದೇ ಪವಿತ್ರ ಪುರುಷ ಅಥವಾ ಸ್ತ್ರೀಯನ್ನು ವರ್ಣಿಸುತ್ತದೆ.

ಉಲ್ಲೇಖಗಳು

[ಬದಲಾಯಿಸಿ]
  1. Khalsa, Sant Singh (2007). Sri Guru Granth Sahib: English Translation of Sri Guru Granth Sahib. Arizona: Hand Made Books (Mandeep Singh). pp. 12–263.


"https://kn.wikipedia.org/w/index.php?title=ಸಂತ&oldid=1252895" ಇಂದ ಪಡೆಯಲ್ಪಟ್ಟಿದೆ